Author: AIN Author

ಬೆಂಗಳೂರು : ನಮಗೆ ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶವಿದೆ. ಹೀಗಾಗಿ ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ನಾವು 136 ಸ್ಥಾನ ಗೆಲ್ಲುತ್ತೀವಿ ಎಂದು ಯಾರೂ ಹೇಳಿರಲಿಲ್ಲ. ಆದರೆ ನನಗೆ ವೈಯುಕ್ತಿಕವಾಗಿ ಜನರ ಭಾವನೆ ಗೊತ್ತಿತ್ತು. ಹೀಗಾಗಿ 135 ಗೆದ್ದೇ ಗೆಲ್ತೀವಿ ಎಂದು ನಾವು ಧೈರ್ಯವಾಗಿ ಚುನಾವಣೆಗೆ ಮೊದಲೇ ಹೇಳಿದ್ದೆವು. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ ಎಂದು ಖಚಿತವಾಗಿ ನುಡಿದರು. ರಾಜ್ಯದಲ್ಲಿ ಮಾತ್ರವಲ್ಲ, ದೇಶದ ನಾನಾ ಕಡೆಗಳಲ್ಲಿ ಬಿಜೆಪಿ ವಿರುದ್ಧವಾದ ಅಲೆ ತೀವ್ರವಾಗಿದೆ. ದೇಶದ ಭವಿಷ್ಯಕ್ಕೆ ಈ ಸರ್ಕಾರ ಬದಲಾಗಲೇಬೇಕಿದೆ…

Read More

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ (IPL 2024) ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇಂದು ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.‌ ಇಂದು  ಉದ್ಘಾಟನೆಯಾಗಲಿದ್ದು ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು (RCB) ಮುಖಾಮುಖಿಯಾಗಲಿವೆ. ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ. ಧೋನಿಗೆ ಇದು ಕೊನೇ ಐಪಿಎಲ್‌? 2023ರ ಟೂರ್ನಿ ಆರಂಭದಿಂದಲ್ಲೇ ನಿವೃತ್ತಿಯ ಸುಳಿವು ನೀಡಿದ್ದ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ (MS Dhoni) ಅವರಿಗೆ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಹಿ ಆಪ್ತರು…

Read More

ಏಪ್ರಿಲ್ ತಿಂಗಳು ಆರಂಭವಾಗುವ ಸಮಯ ಬಂದಿದೆ. ಬೇಸಿಗೆ ಆರಂಭವಾಗಿದೆ, ಶಾಲಾ ಕಾಲೇಜುಗಳಿಗೆ ರಜೆ ಸಿಗುತ್ತಿದೆ. ಇದರ ಜೊತೆಯಲ್ಲೇ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಿಕ್ಕಾಪಟ್ಟೆ ರಜೆಗಳಿವೆ. ಹೌದು, ಆರ್.ಬಿ.ಐ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಬರೋಬ್ಬರಿ 11 ರಜೆ ಸಿಗುತ್ತದೆ. 30 ದಿನಗಳಲ್ಲಿ 11 ರಜೆ ಕಳೆದರೆ, 19 ದಿನ ಮಾತ್ರ ಬ್ಯಾಂಕ್ ಕೆಲಸಗಳು ನಡೆಯಲಿವೆ. ಉದ್ಯಮಿಗಳು ಹಾಗೂ ಸಾರ್ವಜನಿಕರು ಬ್ಯಾಂಕ್ ಸಂಬಂಧಿಸಿದ ಕೆಲಸಗಳು ಆದಷ್ಟು ಬೇಗ ಮುಗಿಸಿಕೊಳ್ಳುವುದು ಸೂಕ್ತ. ಇನ್ನೂ, ಹಲವು ಶಾಲೆಗಳಿಗೆ ಈ ವೇಳೆಗೆ ರಜೆ ಸಿಗಲಿದ್ದು, ಈ ರಜೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳೊಂದಿಗೆ ಫ್ಯಾಮಿಲಿ ಟ್ರಿಪ್ ಕೈಗೊಳ್ಳಲು ಪೋಷಕರು ಯೋಜನೆ ರೂಪಿಸಬಹುದು. ಹೀಗಿದೆ ರಜೆಗಳ ದಿನಾಂಕ ಏಪ್ರಿಲ್ 1 – ಈಯರ್ ಲೀ ಕ್ಲೋಸಿಂಗ್ ಡೇ ಏಪ್ರಿಲ್ 2 – ಭಾನುವಾರ ಏಪ್ರಿಲ್ 4 – ಮಹಾವೀರ ಜಯಂತಿ ಏಪ್ರಿಲ್ 7 – ಗುಡ್ ಫ್ರೈ ಡೇ ಏಪ್ರಿಲ್ 8 –…

Read More

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಗುರುವಾರ ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಇ.ಡಿ ಅಧಿಕಾರಿಗಳ ತಂಡವು ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸಿದವು. 12 ಅಧಿಕಾರಿಗಳ ತಂಡವು ಸರ್ಚ್ ವಾರಂಟ್ನೊಂದಿಗೆ ದೆಹಲಿ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದವು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಬಳಿಕ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ ಎಂಟು ಸಮನ್ಸ್ಗಳಿಗೂ ಸ್ಪಂದಿಸಿಲ್ಲ. https://ainlivenews.com/you-will-be-shocked-to-know-the-benefits-of-its-consumption/ ದೆಹಲಿ ಜಲ ಮಂಡಳಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಒಂದು ಸಮನ್ಸ್ಗೂ ಕೂಡ ಪ್ರತಿಕ್ರಿಯಿಸಿಲ್ಲ.ಒಂಬತ್ತು ಬಾರಿ ಇ.ಡಿ ಸಮನ್ಸ್ ನೀಡಿದೆ. ಮಧ್ಯಂತರ ರಕ್ಷಣೆ ಕೋರಿ ಕೇಜ್ರಿವಾಲ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಬಂಧನದಿಂದ ರಕ್ಷಣೆ…

Read More

 ಐಪಿಎಲ್​ 2024 ರ ಕ್ರಿಕೆಟ್​ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಆಟಗಾರರು ಈಗಾಗಲೇ ತಮ್ಮ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ  ತಂಡದ ಅನುಭವಿ ಸ್ಪಿನ್ನರ್ ಕೇಶವ್ ಮಹಾರಾಜ್ ಐಪಿಎಲ್ ಆರಂಭಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಅವರು ಅಯೋಧ್ಯೆಯ ರಾಮಮಂದಿರಕ್ಕೂ ಭೇಟಿ ನೀಡಿರುವ ಮಹಾರಾಜ್ ಶ್ರೀರಾಮನ ದರ್ಶನ ಪಡೆದುಕೊಂಡಿದ್ದಾರೆ. ಸೌತ್ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಕೇಶವ್ ಮಹಾರಾಜ್ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಮಾರ್ಚ್ 17 ರಂದು ಭಾರತಕ್ಕೆ ಆಗಮಿಸಿದ್ದ ಮಹಾರಾಜ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಡುವು ಮಾಡಿಕೊಂಡು ಅಯೋಧ್ಯಗೆ ತೆರಳಿ ಬಾಲರಾಮನ ದರ್ಶನ ಪಡೆದುಕೊಂಡಿದ್ದಾರೆ. ಈ ಸಂತಸವನ್ನು ಕೇಶವ್ ಮಹಾರಾಜ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆಯೇ ಕೇಶವ್ ಮಹಾರಾಜ್ ಭಾರತೀಯ ಮೂಲದ ಸೌತ್ ಆಫ್ರಿಕಾ ಕ್ರಿಕೆಟಿಗ. ಸೌತ್ ಆಫ್ರಿಕಾ ಪರ 127 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅವರು ಒಟ್ಟು 237…

Read More

ನವದೆಹಲಿ: ಭಾರತದ ವಿರುದ್ಧ ತಿರುಗಿಬಿದ್ದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಐಸ್​ಲ್ಯಾಂಡ್​ಗೆ ತೆರಳುತ್ತಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತವಾಗಿದೆ.  ಭಾರತೀಯ ಸೇನೆಯ ಮೊದಲ ಬ್ಯಾಚು ಮಾಲ್ಡೀವ್ಸ್​ನಿಂದ ಕಾಲ್ತೆಗೆಯುತ್ತಿರುವ ಹೊತ್ತಿನಲ್ಲೇ ಭಾರತೀಯ ಪ್ರವಾಸಿಗರ ಸಂಖ್ಯೆ ಮಾಲ್ಡೀವ್ಸ್​ನಲ್ಲಿ ಇಳಿಮುಖವಾಗುತ್ತಿದೆ. ಪ್ರತೀ ವರ್ಷ ಅತಿಹೆಚ್ಚು ಭಾರತೀಯ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದ್ದ ಮಾಲ್ಡೀವ್ಸ್ ದೇಶಕ್ಕೆ ಈಗ ಭಾರತೀಯರ ಅನುಪಸ್ಥಿತಿ ಕಾಡುತ್ತಿದೆ. ಭಾರತದಿಂದ ಮಾಲ್ಡೀವ್ಸ್​ಗೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಬಹಳ ಕಡಿಮೆ ಆಗಿದೆ. 2023ರಲ್ಲಿ ಮಾಲ್ಡೀವ್ಸ್​ಗೆ ಹೋದ ಪ್ರವಾಸಿಗರಲ್ಲಿ ಭಾರತೀಯರು ಟಾಪ್ ಆಗಿದ್ದರು. 2024ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿರುವ ಮಾಲ್ಡೀವ್ಸ್​ಗೆ ಇದು ಆತಂಕದ ಮತ್ತು ಸವಾಲಿನ ವಿಚಾರವಾಗಿದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರಲ್ಲಿ 17 ಲಕ್ಷ ಪ್ರವಾಸಿಗರು ಆ ದೇಶಕ್ಕೆ ಭೇಟಿ ನೀಡಿದ್ದರು. https://ainlivenews.com/those-with-these-health-problems-should-not-eat-eggplant/ ಈ ಪೈಕಿ 2.09 ಲಕ್ಷ ಜನರು ಭಾರತೀಯರೇ ಆಗಿದ್ದರು. ರಷ್ಯಾ ಮತ್ತು ಚೀನಾದ ಪ್ರವಾಸಿಗರು ನಂತರದ ಸ್ಥಾನ ಹೊಂದಿದ್ದರು.…

Read More

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್​ ಕಿಂಗ್ಸ್​ ನಾಯಕತ್ವಕ್ಕೆ ಗುಡ್​ಬೈ ಹೇಳಿದ್ದಾರೆ. ನಾಳೆಯಿಂದಲೇ ಐಪಿಎಲ್-2024 ಟೂರ್ನಿ ಆರಂಭವಾಗಲಿದ್ದು, CSK ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಚೆನ್ನೈ ತಂಡ ಎಕ್ಸ್​ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಧೋನಿ ಬದಲಿಗೆ ಚೆನ್ನೈ ತಂಡ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಸದ್ಯ ಐಪಿಎಲ್ ಟ್ರೋಫಿಯೊಂದಿಗೆ 10 ತಂಡಗಳ ನಾಯಕರು ನೀಡಿದ ಫೋಟೋ ಶೂಟ್​ನಲ್ಲಿ ಧೋನಿ ಬದಲು ಋತುರಾಜ್ ಗಾಯಕ್ವಾಡ್ ಕಾಣಿಸಿಕೊಂಡಿದ್ದಾರೆ. ಮೊದಲೇ ಸುಳಿವು ನೀಡಿದ್ದ ಧೋನಿ ಐಪಿಎಲ್-2024​ಗೂ ಮುನ್ನವೇ ಎಂ.ಎಸ್. ಧೋನಿ ನಾಯಕತ್ವ ತ್ಯಜಿಸುವ ಬಗ್ಗೆ ಸುಳಿವು ನೀಡಿದ್ದರು. ಸ್ವತಃ ಧೋನಿಯೇ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. Can’t wait for the new season and the new ‘role’. Stay tuned!. ‘ಹೊಸ ಸೀಸನ್​ನಲ್ಲಿ, ಹೊಸ ರೋಲ್​ನಲ್ಲಿ ಕಾಣಿಸಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಧೋನಿ ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಹೊಸ ರೋಲ್​ನಲ್ಲಿ ಧೋನಿ…

Read More

ಸಾಮಾನ್ಯವಾಗಿ ನಿನ್ನೆ ಉಳಿದಿರುವ ಆಹಾರವೆಂದರೆ ಅಸಡ್ಡೆ ಪಡುವವರೇ ಜಾಸ್ತಿ. ಆದರೆ ನಿನ್ನೆ ರಾತ್ರಿ ಉಳಿದಿರುವ ಅನ್ನದಿಂದ ಎಷ್ಟು ಪ್ರಯೋಜನವಿದೆ ಎಂದು ತಿಳಿದುಕೊಳ್ಳಿ. ವಿಶೇಷವಾಗಿ ಬೇಸಿಗೆ  ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆಳಗ್ಗೆ ತಂಗಳನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ. ತಂಗಳನ್ನದ ಪ್ರಯೋಜನಗಳನ್ನು ಕುರಿತು ಮಾಹಿತಿ ನೀಡಿದ್ದಾರೆ.  ತಂಗಳನ್ನ ಏಕೆ ಆರೋಗ್ಯಕರ?​ ಇಡೀ ಪ್ರಕ್ರಿಯೆಯಲ್ಲಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಮೆಗ್ನೀಸಿಯಮ್‌ನಂತಹ ಹಲವಾರು ಪೋಷಕಾಂಶಗಳ ಲಭ್ಯತೆ ಹೆಚ್ಚಾಗುತ್ತದೆ. ರಾತ್ರಿಯಲ್ಲಿ 12 ಗಂಟೆಗಳ ಕಾಲ ಅನ್ನವನ್ನು ನೀರಿನಲ್ಲಿ ಹುದುಗಿಸುವುದು ಸಾಮಾನ್ಯ ಬೇಯಿಸಿದ ಅನ್ನಕ್ಕೆ ಹೋಲಿಸಿದರೆ ಅದರ ಕಬ್ಬಿಣಾಂಶವು ದುಪ್ಪಟ್ಟಾಗುತ್ತದೆ. ಹಾಗಾಗಿ ರಾತ್ರಿ ಉಳಿದ ಅನ್ನವನ್ನು ನೀರಿನಲ್ಲಿ ಹುದುಗಿಸಿಡುವುದು ಉಳಿದವುಗಳಿಗಿಂತ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ತಂಗಳನ್ನ ತಿನ್ನುವುದರಿಂದಾಗುವ ಪ್ರಯೋಜನ ಇಲ್ಲಿವೆ ರಾತ್ರಿ ಉಳಿದ ಅನ್ನವನ್ನು ಸಂಪೂರ್ಣವಾಗಿ ನೀರಿನಲ್ಲಿ ನೆನೆಸಿ ಮಣ್ಣಿನ ಪಾತ್ರೆಯಲ್ಲಿ ರಾತ್ರಿಯಿಡೀ ಸಂಗ್ರಹಿಸಿದರೆ ಮರುದಿನ ಬೆಳಿಗ್ಗೆ ಹುದುಗುತ್ತದೆ. ಈ ಅನ್ನವು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ: ಬೇಸಿಗೆಯಲ್ಲಿ…

Read More

ಸೂರ್ಯೋದಯ: 06:22, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ, ಶುಕ್ಲ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ತ್ರಯೋದಶಿ, ನಕ್ಷತ್ರ: ಮಖಾ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: రా.1:45 ನಿಂದ రా.3:34 ತನಕ ಅಭಿಜಿತ್ ಮುಹುರ್ತ: ಬೆ.11:58 ನಿಂದ ಮ.12:46 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಮದುವೆ ನಿಶ್ಚಿತಾರ್ಥ ಆಗುವ ಮುನ್ನ ಯೋಚಿಸಿ, ಉದ್ಯೋಗ ಕ್ಷೇತ್ರದಲ್ಲಿ ಯಾರೋ ಮಾಡಿದ ತಪ್ಪಿಗೆ ತಾವು ಬಲಿಪಶು ಆಗೋ ಸಾಧ್ಯತೆ,ಅತಿ ವೇಗದಲ್ಲಿ ಧನಸಂಪಾದನೆ, ಇನ್ನೊಬ್ಬರಿಗೆ ಸಾಲ ಕೊಡುವಾಗ ಸರಿಯಾಗಿ ಯೋಚಿಸಿ, ಮನೆ ಕಟ್ಟಡ ಪೂರ್ಣಗೊಳ್ಳಲಿದೆ ವಾಹನ ಖರೀದಿಸುವ ಪ್ರಯತ್ನ ಯಶಸ್ಸು, ಸಿದ್ದ ಉಡುಪು,…

Read More

ನಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ. ಬಿಸಿಗಾಳಿಯಿಂದ ದೇಹವನ್ನು ತಂಪಾಗಿಡಲು ಪರದಾಡುತ್ತಿದ್ದಾರೆ. ಸುಲಭವಾಗಿ ನಿಂಬೆ ಹಣ್ಣಿನ ಪಾನಕ, ಜ್ಯೂಸ್​ಗಳಿಂದ ದೇಹವನ್ನು ತಂಪಾಗಿ ಮಾಡಿಕೊಳ್ಳಬಹುದು, ಇದರಿಂದ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಗಾಳಿ ಹಾಗೂ ಉಷ್ಣದಿಂದ ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳು ತುಂಬಾ ಹುಷಾರ್​ ಆಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಜ್ಯೂಸ್ ಅಂಗಡಿಗಳಿಗೆ ಬರುವ ಗ್ರಾಹಕರು, ನಿಂಬೆ ಹಣ್ಣಿನ ಜ್ಯೂಸ್​ಗಳನ್ನೆ ಕೇಳುತ್ತಿದ್ದಾರೆ. ಆದ್ರೆ, ಒಂದು ನಿಂಬೆ ಹಣ್ಣಿನ ಬೆಲೆ 7 ರಿಂದ 8 ರೂಪಾಯಿ ಇದೆ. ಈ ಹಿನ್ನಲೆ ಜ್ಯೂಸ್ ಅಂಗಡಿಯವರು ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ನಿಂಬೆ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ನಿಂಬೆ ಹಣ್ಣಿಗಂತೂ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣುಗಳು ಆ್ಯಪಲ್ ಬೆಲೆಯನ್ನೆ ಮಿರಿಸಿದೆ. ಇನ್ನು ಯುಗಾದಿ, ರಾಮನವಮಿ ವೇಳೆಗೆ ನಿಂಬೆ ಹಣ್ಣು ಖರೀದಿ ಮತ್ತಷ್ಟು ದುಬಾರಿಯಾಗಲಿದ್ದು, ಬೇಸಿಗೆಯ ಬಯಲು ಪ್ರದೇಶಗಳಾದ ಆಂಧ್ರ, ತಮಿಳುನಾಡಿನಲ್ಲಿಯೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಇದೆಲ್ಲದರ ಆಚೆಗೆ ನೋಡುವುದಾದರೆ ತಮಿಳುನಾಡಿನ ಗ್ರಾಮವೊಂದರಲ್ಲಿ…

Read More