Author: AIN Author

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ (IPL) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 6:30ಕ್ಕೆ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಗಳು ಕಾದಾಡಲಿವೆ. ಈ ವೇಳೆ ಉಭಯ ತಡಗಳ ನಡುವಿನ ಮುಖಾಮುಖಿಯಲ್ಲಿ ಆಟಗಾರರ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿ ನೀಡಲಾಗಿದೆ. ಕೊಹ್ಲಿ ಮೈಲುಗಲ್ಲಿಗೆ ಒಂದು ರನ್‌ ಬಾಕಿ: ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪರಸ್ಪರ ಮುಖಾಮುಖಿಯಲ್ಲಿ ಅಧಿಕ ರನ್‌ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಲ್ಲಿದೆ. ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಬರೋಬ್ಬರಿ 999 ರನ್ ಗಳಿಸಿದ್ದಾರೆ. ಅವರು ಇನ್ನು 1 ರನ್ ಗಳಿಸಿದರೆ, ತಂಡವೊಂದರ ವಿರುದ್ಧ 1,000 ರನ್ ಪೂರೈಸಿದ ಆರ್‌ಸಿಬಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಸಿಎಸ್‌ಕೆ ತಂಡದ ಪ್ರಮುಖ…

Read More

ಕೊಡಗು:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ರವರು ಇಂದು ಭಾಗಮಂಡಲ ಹಾಗೂ ತಲಕಾವೇರಿಯ ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು . ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಈ ಸಂದರ್ಭ ಭಾಗಿಗಳಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಯದುವೀರ್ ಅವರ ಗೆಲುವಿಗಾಗಿ ಇದೇ ಸಂದರ್ಭ ಬಿಜೆಪಿ ಪದಾಧಿಕಾರಿಗಳು ಪ್ರಾರ್ಥನೆ ಸಲ್ಲಿಸದರು. ಮಡಿಕೇರಿ ಯಿಂದ ನೇರವಾಗಿ ಭಾಗಮಂಡಲಕ್ಕೆ ಬೆಳಿಗ್ಗೆ ಆಗಮಿಸಿದ ಯದುವೀರ್ ಬಗಂಡೇಶ್ವರ ಸನ್ನಿಧಿಯಲ್ಲಿ ಸಂಕಲ್ಪದೊಂದಿಗೆ ಪೂಜಿ ಸಲ್ಲಿಸಿದರು ನಂತರ ತಲಕಾವೇರಿಗೆ ತೆರಳಿ ಅಗಸ್ತ್ಯ,ಗಣಪತಿ ಗುಡಿಗಳಲ್ಲೂ ಕೂಡ ಪೂಜಿಸಲ್ಲಿಸಿದರು. ಭಾಗಮಂಡಲ ಹಾಗೂ ತಲಕಾವೇರಿಯ ಪ್ರದೇಶವನ್ನು ವೀಕ್ಷಿಸಿದ ಯದುವೀರ್ ರವರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಗೈರು ಹಾಜರಾಗಿದ್ದರು.

Read More

ತೆಲಂಗಾಣ:- ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಭೀಮಿನಿ ಮಂಡಲದ ಕೇಸ್ಲಾಪುರ ಗ್ರಾಮದಲ್ಲಿ ಮೂರನೇ ಮಗು ಕೂಡ ಹೆಣ್ಣಾದ ಹಿನ್ನೆಲೆ, ನೀಚ ತಾಯಿ ಹೊಲಕ್ಕೆ ಎಸೆದ ಧಾರುಣ ಘಟನೆ ಜರುಗಿದೆ. ಕೇಸ್ಲಾಪುರ ಗ್ರಾಮದ ಗಂಗಕ್ಕ ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹಿರಿಯ ಮಗಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಆದರೂ ಕೂಡ ಗಂಗಕ್ಕ ಗಂಡು ಮಗು ಜನಿಸುವ ನಿರೀಕ್ಷೆ ಹೊತ್ತು ಗರ್ಭೀಣಿಯಾಗಿದ್ದಳು. ಬುಧವಾರ ರಾತ್ರಿ ಹೆರಿಗೆ ನೋವಿನಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮೂರನೇ ಹೆರಿಗೆಯಲ್ಲಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಜೊತೆಗೆ ಇನ್ನೊಂದು ಕಡೆ ಮದುವೆಯಾಗಿ ಮಗಳಿದ್ದು, ಮತ್ತೆ ಗರ್ಭಿಣಿಯಾಗುವುದು ಅವಮಾನ ಎಂದುಕೊಂಡು. ಸದ್ದು ಮಾಡದೆ ಹಸುಗೂಸನ್ನು ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಿಸಾಕಿ ಬಂದಿದ್ದಾಳೆ. ಗುರುವಾರ ಬೆಳಗ್ಗೆ ಗ್ರಾಮದ ಬಳಿ ನಾಯಿಗಳು ಮಗುವಿನ ಶವವನ್ನು ಎಳೆದೊಯ್ದಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗಕ್ಕೆ ಮೇಲೆ ಅನುಮಾನ ಹೊಂದಿದ್ದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಎಸ್‌ಎಸ್‌ಐ ವಿಜಯ್‌ ಸ್ಥಳಕ್ಕೆ…

Read More

ಬೆಂಗಳೂರು:   ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್‌ ಲಾಭಿಗಳು ಎಷ್ಟು ಜೋರಾಗಿವೆ ಹಾಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ಸಂಖ್ಯೆ ಕೂಡ ಹೆಚ್ಚಾಗಿದ್ದು ಈಗ  ಮಂಡ್ಯದಲ್ಲಿ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಬಿಗ್ ಆಪರೇಷನ್ ನಡೆಸಿದ್ದು  ಜೆಡಿಎಸ್‌ ನಾಯಕರು ಕಾಂಗ್ರೆಸ್‌ʼಗೆ ಜಂಪ್‌ ಆಗಿದ್ದಾರೆ. https://youtube.com/live/_cL6JX0b4XA?feature=share ಹೌದು…  ಪರಿಷತ್ ಸದಸ್ಯ ಮರಿತಿಬ್ಬೇಗೌಡ್ರು,ಮಾಜಿ ಪರಿಷತ್ ಸದಸ್ಯ ಅಪ್ಪಾಜಿಗೌಡ,ಮಂಡ್ಯ ಮಾಜಿ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಅಳಿಯ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು  ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್,ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ,ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ ಗಣಿಗ,ಮಂಡ್ಯ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಮಂಡ್ಯ ಮಾಜಿ ಶಾಸಕ ಎಂ ಶ್ರೀನಿವಾಸ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಅನಾರೋಗ್ಯ ಹಿನ್ನಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲು ಆಗಿದ್ದಾರೆ ಇಲ್ಲಿಂದಲ್ಲೇ ಎಂ ಶ್ರೀನಿವಾಸ್ ಅವ್ರನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇನೆ ಆಸ್ಪತ್ರೆಗೆ ಹೋಗಿ ನಾನು ಭೇಟಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Read More

ದೆಹಲಿ:- ಮದ್ಯ ನೀತಿ ಹಗರಣ ಕೇಸ್ ಗೆ ಸಂಬಧಪಟ್ಟಂತೆ ಬಂಧನ ಪ್ರಶ್ನಿಸಿ ಸುಪ್ರೀಂ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದಾರೆ. ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಅವರನ್ನು ಗುರುವಾರ ಬಂಧಿಸಿತ್ತು. ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಅರವಿಂದ್ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಅರ್ಜಿಯನ್ನು ಹಿಂಪಡೆಯಲು ದೆಹಲಿ ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಈಗ ಕೆಳ ನ್ಯಾಯಾಲಯವನ್ನು ಸಂಪರ್ಕಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಗುರುವಾರ ಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಆಗ್ರಹವೂ ತೀವ್ರಗೊಂಡಿದೆ

Read More

ಬೆಂಗಳೂರು: ಇಂದಿನಿಂದ ಐಪಿಎಲ್ ಆರಂಭ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಇಂದಿನಿಂದ IPL ಆರಂಭವಾಗುತ್ತಿದ್ದು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಬೆಂಗಳೂರು ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ. ನಗರದ ಹೋಟೆಲ್ ಹಾಗೂ ಲಾಡ್ಜ್​​​ಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಈ ಬಾರಿಯ ಮಹಿಳಾ ಪ್ರೀಮಿಯರ್​ ಲೀಗ್​ನ ಫೈನಲ್​ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಮಹಿಳಾ ಆರ್​ಸಿಬಿ ತಂಡ ಕಪ್​ ಗೆದ್ದಿದೆ. Water Problem: ರಾಜ್ಯ ರಾಜಧಾನಿಯಲ್ಲಿ ಮುಗಿಯದ ಜಲಸಂಕಷ್ಟ: ನೀರಿಲ್ಲದೇ ಕಂಗಾಲಾದ ಬಾಪೂಜಿನಗರ ನಿವಾಸಿಗಳು! ಹೀಗಾಗಿ ಐಪಿಎಲ್ ಪದ್ಯಗಳ ಮೇಲಿನ ಗಮನ ಹೆಚ್ಚಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಬೆನ್ನಲ್ಲೇ ಎಲ್ಲಾ ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಕಮಿಷನರ್ ಸೂಚನೆ ನೀಡಿದ್ದಾರೆ. ನಗರದಾದ್ಯಂತ ಬುಕ್ಕಿಗಳ‌ ಮೇಲೆ ತೀವ್ರ ನಿಗಾ ವಹಿಸಬೇಕು. ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ…

Read More

ಬೆಂಗಳೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕ ಬೆಂಗಳೂರು ನಗರವಾಸಿಗಳಿಗೆ ಎದುರಾಗಿದೆ. ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರಕ್ಕೆ ಜಲಕ್ಷಾಮ ಉಂಟಾಗಿದ್ದು  ನೀರಿಲ್ಲದೇ ಕಂಗಾಲಾದ ಬಾಪೂಜಿನಗರ ನಿವಾಸಿಗಳು ವಾರಕ್ಕೊಮ್ಮೆ ಬರೋ ನೀರಿಗೆ ಕಾದು ಸುಸ್ತಾದ ಜನರು ನಲ್ಲಿಯಲ್ಲಿ ಬರೋ ನೀರು ಸರಿಯಾಗಿ ಸಿಗದೇ ಜನರು ಹೈರಾಣು ಅತ್ತ ಟ್ಯಾಂಕರ್ ಗಳು ಸಿಗದೇ ಕಂಗೆಟ್ಟ ನಿವಾಸಿಗಳು ಬೋರ್ ವೆಲ್ ನೀರು, ಕಾವೇರಿ ನೀರಿಗೂ ಹಾಹಾಕಾರ ರಾತ್ರಿ ವೇಳೆ ನೀರು ಬಿಡೋದರಿಂದ ನೀರು ಹಿಡಿಯಲು ಸಂಕಷ್ಟ ನಮಗೆ ನೀರು ಕೊಡಿ ಅಂತಾ ನಿವಾಸಿಗಳ ಅಳಲು ತೋಡಿಕೊಂಡಿದ್ದಾರೆ.

Read More

ಮಾಗಡಿ :- ತಾಲೂಕಿನ ಕುರಿಲಿಂಗಯ್ಯನದೊಡ್ಡಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲದೇ ದಿನನಿತ್ಯ ಗ್ರಾಮಕ್ಕೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದ್ದು ರಸ್ತೆ ಅಭಿವೃದ್ಧಿ ಮಾಡದಿದ್ದರೆ ಮತದಾನ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಮಾಗಡಿ ತಾಲೂಕಿನ ಅಜ್ಜಹಳ್ಳಿ ಗ್ರಾಮಪಂಚಾಯಿತಿಯ ಮತ್ತ ಗ್ರಾಮದಿಂದ ಕುರಿಲಿಂಗಯ್ಯನದೊಡ್ಡಿಗೆ ಹೋಗಲು ರಸ್ತೆ ಇದ್ದು ಆ ರಸ್ತೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಗ್ರಾಮಕ್ಕೆ ಓಡಾಡಲು ಜನರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ಸ್ಥಳೀಯ ಸರಕಾರದಿಂದ ಗ್ರಾಮದ ಒಳಗಿನ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಆದರೆ ಗ್ರಾಮಕ್ಕೆ ಸಂಪರ್ಕ ಸಲ್ಲಿಸುವ ಮುಖ್ಯ ರಸ್ತೆ ಅಭಿವೃದ್ಧಿ ಮಾಡಿಲ್ಲ, ಅನೇಕ ಬಾರಿ ಮನವಿ ಸಲ್ಲಿಸಿದರು ಮನವಿಗೆ ಅಧಿಕಾರಿಗಳು ಸ್ಪಂದನೆ ನೀಡದೆ ನಿರ್ಲಕ್ಷ್ಯ ಮಾಡಿದ್ದು ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ಹೋಗಲು, ಆಸ್ಪತ್ರೆಗೆ ಹೋಗಲು, ಕೃಷಿ ಮಾರುಕಟ್ಟೆಗಳಿಗೆ ಹೋಗಲು ಸಂಕಷ್ಟ ಎದುರಾಗಿದೆ. ಶೀಘ್ರದಲ್ಲಿ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ರಸ್ತೆ ಅಭಿವೃದ್ಧಿ ಮಾಡದಿದ್ದರೆ ನಮ್ಮ ಗ್ರಾಮದ ಜನರು ಮತದಾನ ಮಾಡದೇ ಸುಮ್ಮನಾಗುತ್ತೆವೆ, ನಮ್ಮ ಹಕ್ಕು ನೀಡಿ ನಮ್ಮ ಹಕ್ಕು…

Read More

ಬೆಳಗಾವಿ:- ಲೋಕಸಭಾ ಚುನಾವಣೆಯಲ್ಲಿ ಯುವಕರು ಈ ಬಾರಿ ಕಾಂಗ್ರೆಸ್ ಗೆ ಬೆಂಬಲಿಸಲಿದ್ದಾರೆ ಎಂದು ಚಿಕ್ಕೋಡಿ ಕಾಂಗ್ರೆಸ್‌ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರು ರಾಮ ಮಂದಿರ ಇಟ್ಟುಕೊಂಡು ಪ್ರಚಾರ ನಡೆಸಿದರೆ ನಾವು ಗ್ಯಾರಂಟಿ ಯೋಜನೆಯನ್ನು ಮುಂದೆ ಇಟ್ಟು ಪ್ರಚಾರ ನಡೆಸುತ್ತೇವೆ. ಚಿಕ್ಕೋಡಿ ಲೋಕಸಭಾದಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದರು.

Read More

ಬೆಂಗಳೂರು: ಯಾರದೋ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಪಾಲಾದ ವ್ಯಕ್ತಿ ಹಾ ಏನಂತೀರಾ ಬೆಂಗಳೂರಿನ ಬೈಕ್ ಸವಾರರು ನೋಡಲೇಬೇಕಾದ ಸ್ಟೋರಿ ಅಪಾಯ ಯಾವಾಗ ಬೇಕಾದ್ರು ನಿಮ್ಮ ಕಣ್ಮುಂದೆ ಬರಬಹುದು ಇಷ್ಟಕ್ಕೆಲ್ಲ ಕಾರಣ ಬೆಂಗಳೂರು ಬಿಬಿಎಂಪಿ ದಿವ್ಯ ನಿರ್ಲಕ್ಷ್ಯ ಏನದು ಅಂತೀರಾ ಇಲ್ಲಿದೆ ನೋಡಿ.. ಹೌದು…ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವ್ಯಕ್ತಿಯ ಜೀವನ್ಮರಣ ಹೋರಾಟ ನಡೆಸುತ್ತಿರುವ ವ್ಯಕ್ತಿ ಬೆಂಗಳೂರಿನಲ್ಲಿ ನಡೆಯಿತು ಘೋರ ದುರಂತ ಬೈಕ್ ಸವಾರನ ಮೇಲೆ ಬಿದ್ದ ಮರದ ಬೃಹತ್ ಕೊಂಬೆ ಮರದ ಕೊಂಬೆ ಬಿದ್ದು ಬೆನ್ನು ಮೂಳೆ ಮುರಿದುಕೊಂಡ ಬೈಕ್ ಸವಾರ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದ ಬೈಕ್ ಸವಾರ ನಾಗರಬಾವಿ ನಿವಾಸಿ ಚಂದನ್ ಗಾಯಗೊಂಡ ಬೈಕ್ ಸವಾರ ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಕಚೇರಿಗೆ ಹೋಗುತ್ತಿದ್ದ ಚಂದನ್ ಈ ವೇಳೆ ದಿಢೀರನೆ ಚಂದನ್ ಮೇಲೆ ಮುರಿದು ಬಿದ್ದ ಕೊಂಬೆ ಕೊಂಬೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಬೈಕ್ ಸವಾರ ಕುತ್ತಿಗೆ ಗಾಯ ಹಾಗೂ…

Read More