Author: AIN Author

ಕಲಬುರ್ಗಿ:- ಅಂದಾಜು 35 ಲಕ್ಷಕ್ಕೂ ಅಧಿಕ ಮೌಲ್ಯದ ಪಾನ್ ಮಸಾಲಾ ಜಪ್ತಿ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಚಕ್ ಪೋಸ್ಟ್ ಬಳಿ ಲಾರಿ ವಶಪಡಿಸಿಕೊಳ್ಳಲಾಗಿದ್ದು ತುಮಕೂರಿನಿಂದ ಬೀದರ್ ಕಡೆ ಹೊರಟಿದ್ದ ಲಾರಿ ಮೇಲೆ ದಾಳಿ ಮಾಡಿದಾಗ ಪಾನ್ ಮಸಾಲಾ ಪತ್ತೆಯಾಗಿದೆ. ಗ್ರಾಮೀಣ dysp ನೇತ್ರತ್ವದಲ್ಲಿ ಜೇವರ್ಗಿ ಪೋಲೀಸರು ನಡೆಸಿದ ಕಾರ್ಯಾಚರಣೆ ವೇಳೆ ವಿಷ್ಯ ಬೆಳಕಿಗೆ ಬಂದಿದೆ.

Read More

ದೆಹಲಿ:- ಬಿಆರ್‌ಎಸ್ಎಂ ಎಲ್‌ಸಿ ಕೆ ಕವಿತಾ ಜಾಮೀನು ಅರ್ಜಿ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 2021-22ರ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂಎಂ ಸುಂದ್ರೇಶ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ವಿಚಾರಣಾ ನ್ಯಾಯಾಲಯವು ಯಾವುದೇ ಜಾಮೀನು ಅರ್ಜಿಯನ್ನು ಮೊದಲು ಆಲಿಸಬೇಕು ಎಂದು ಒತ್ತಿಹೇಳಿದ್ದು, ನ್ಯಾಯಾಂಗ ಶ್ರೇಣಿಯ ಮೊದಲ ಹಂತದಿಂದಲೇ ಪರಿಹಾರವನ್ನು ಪಡೆಯಲು ಕವಿತಾಗೆ ಸೂಚಿಸಿತು. ಯಾರಾದರೂ ರಾಜಕೀಯ ವ್ಯಕ್ತಿಯಾಗಿರುವುದರಿಂದ ಅಥವಾ ಅವನು ಅಥವಾ ಅವಳು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬರಬಹುದು ಎಂದು ನಾವು ಕಾರ್ಯವಿಧಾನವನ್ನು ಬದಲಿಸಲುವುದಿಲ್ಲ. ನಮ್ಮ ಪ್ರಕ್ರಿಯೆಗಳು ಏಕರೂಪವಾಗಿರಬೇಕು. ಪ್ರತಿಯೊಬ್ಬರೂ ಮೊದಲು ವಿಚಾರಣಾ ನ್ಯಾಯಾಲಯದ ಮೂಲಕ ಹೋಗಬೇಕು, ಎಂದು ಪೀಠವು ಬಿಆರ್‌ಎಸ್ ನಾಯಕನನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ತಿಳಿಸಿದೆ. ಹಲವಾರು ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿರುವುದರಿಂದ ನ್ಯಾಯಾಲಯದ ತುರ್ತು ಹಸ್ತಕ್ಷೇಪವನ್ನು ಕೋರಿ ಸಿಬಲ್ ತಮ್ಮ ವಾದವನ್ನು…

Read More

ರಾಯಬಾಗ:- ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನೀನ್ನೆ ತಡ ರಾತ್ರಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಕೀರಾಣಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ನೀನೇ ರಾತ್ರಿ ಎರಡು ಘಂಟೆ ಸೂಮಾರಗೆ ಅಂಗಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ ತಗೂಲಿ ಅಂಗಡಿಯಲ್ಲಿದ್ದ 8 ರಿಂದ 9 ಲಕ್ಷ ಬೇಲೆ ಬಾಳುವ ದಿನಸಿ ಮತ್ತು ಸ್ಟೇಶನರಿ ವಸ್ತಗಳು ಬೆಂಕಿಯಲ್ಲಿ ಸುಟ್ಟು ಕರಲಾಗಿವೆ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ನಿಡಗುಂದಿ ಗ್ರಾಮದ ಸಿದ್ದರಾಮ್ ಟೋಮರೆ ರವರಿಗೆ ಸೇರಿದ ಕೀರಾಣಿ ಅಂಗಡಿ, ಸ್ಥಳಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿ ಪಂಚಾಯತಿ ಅದ್ಯಕ್ಷ ಬೇಟಿ ನೀಡಿ ಸ್ಥಳ ಪರಿಶಿಲನೆ, ರಾಯಬಾಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..

Read More

ದಾವಣಗೆರೆ:- ಪ್ರಜ್ಞಾವಂತ ಮತದಾರರು ಆಲೋಚನೆ ಮಾಡಿ ಮತ ನೀಡಿ ಎಂದು ದಾವಣಗೆರೆಯ ಲೋಕಸಭಾ ಕೈ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ. ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವೇನು ಟೀಕೆಟ್ ನಮಗೆ ಬೇಕು ಅಂತ ಕೇಳಿಲ್ಲ. ಶಾಸಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಕೊಟ್ಟಿದ್ದಾರೆ. ಮೇಲಾಗಿ ಯಾವತ್ತು ನಾನೇ ಕ್ಯಾಂಡಿಡೇಟ್ ಅಂತ ಹೇಳಿಲ್ಲ. ಪೋಲಿಂಗ್ ಮಾಡಿದ್ದರ ಮೇಲೆ ಸ್ಟ್ರಾಂಗ್ ಕ್ಯಾಂಡಿಡೇಟ್ ನೋಡಿ ಕೊಟ್ಟಿದ್ದಾರೆ ಎಂದರು. ಯಾರೇ ಇದ್ದರೂ ಕಾಂಪಿಟೇಷನ್ ಇದ್ದೆ ಇರತ್ತೆ. ಹಳಬರೆ ಇರಲಿ, ಹೊಸಬರೇ ಇರಲಿ. ನಾವು ಅಭಿವೃದ್ಧಿ ಮೇಲೆ ಓಟ್ ಕೇಳುತ್ತೇವೆ. ಪ್ರಜ್ಞಾವಂತ ಮತದಾರರು ಆಲೋಚನೆ ಮಾಡಿ ಮತ ನೀಡಬೇಕು. ಜಿಲ್ಲೆಯಲ್ಲಿ ಏಳು ಕಾಂಗ್ರೆಸ್ ಶಾಸಕರಿದ್ದಾರೆ. ಸದ್ಯದಲ್ಲಿಯೇ ಶಾಸಕರ ಸಭೆ ಕರೆದು ಸ್ಟ್ರಾಟಜಿ ರೂಪಿಸುತ್ತೇವೆ. ನಾವು ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡುತ್ತೇವೆ. ಜನರಿಗೆ ಹೆಚ್ಚಿನ ಸಮಯ ನೀಡಿ ಜನರ ಅಹವಾಲು ಆಲಿಸುತ್ತೇವೆ. ಇದರಲ್ಲಿ ಒಂದೇ ಫ್ಯಾಮಿಲಿಗೆ ಟಿಕೆಟ್ ನೀಡಿರುವ ಪ್ರಶ್ನೆ ಇಲ್ಲ ಎಂದು ದಾವಣಗೆರೆಯಲ್ಲಿ ಕೈ ಅಭ್ಯರ್ಥಿ ಪ್ರಭಾ…

Read More

ಧಾರವಾಡ:- ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವೀರಶೈವ ಲಿಂಗಾಯತ ಸಮುದಾಯದ ಶಿರಹಟ್ಟಿ ಮಠದ ಪೀಠಾಧಿಪತಿ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಲಿಂಗಾಯತ ಸಮುದಾಯದ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಗದಗ ಜಿಲ್ಲೆಯ ಶಿರಹಟ್ಟಿ ಮಠದ ಪೀಠಾಧಿಪತಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಧಾರವಾಡ ಜಿಲ್ಲೆಯ ವಿವಿಧ ಗ್ರಾಮದ ಭಕ್ತರು ಒತ್ತಾಯಿಸಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐದು ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಇದೇ ಕಾರಣಕ್ಕೆ ಸ್ಪರ್ಧೆ ಮಾಡುವಂತೆ ಸ್ವಾಮೀಜಿಗೆ ವಿವಿದ ಲಿಂಗಾಯತ ಮುಖಂಡರು ಹಾಗೂ ಭಕ್ತರು ಒತ್ತಾಯಿಸುತ್ತಿದ್ದಾರೆ. ಕಳೆದ ತಿಂಗಳು ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಶಿರಹಟ್ಟಿ ಮಠದ ಪಕ್ಕೀರ ಸ್ವಾಮೀಜಿಗಳ 5555 ನಾಣ್ಯಗಳ ತುಲಾಭಾರ ಮಾಡಿದ್ದರು. ಇದಲ್ಲದೆ ಹುಬ್ಬಳ್ಳಿ ಸೇರಿ ವಿವಿಧ ಕಡೆ ಭಾವೈಕ್ಯತಾ ರಥಯಾತ್ರೆ ಮಾಡಿದ್ದರು. ಚುನಾವಣಾ ದೃಷ್ಟಿಯಿಂದಲೇ ದಿಂಗಾಲೇಶ್ವರ ಸ್ವಾಮೀಜಿ ಅವರು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ‌ ಮಾಡಿದರಾ ಅನ್ನೋ ಅನುಮಾನ ಹುಟ್ಟುಹಾಕಿದೆ.

Read More

ಬೆಂಗಳೂರು: ಮಗುವನ್ನು ದತ್ತು ಪಡೆಯುವಾಗ ಪಾಲಿಸಬೇಕಾದ ನಿಯಮಗಳ ಪಾಲನೆ ಉಲ್ಲಂಘನೆ (Adoption Procedure) ಮಾಡಿದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಅವರನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. BIGG BREAKING: 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ಅಸ್ತು: ಹೈಕೋರ್ಟ್’ನಿಂದ ಮಹತ್ವದ ತೀರ್ಪು ಈ ರೀತಿ ದತ್ತು ಪಡೆಯಲು ಅದರದ್ದೇ ಆದ ನಿಯಮಗಳು ಇರುತ್ತವೆ. ಆದರೆ, ಇದನ್ನು ಸೋನು ಶ್ರೀನಿವಾಸ ಗೌಡ ಗಾಳಿಗೆ ತೂರಿದ್ದಾರೆ. ಮತ್ತೊಂದೆಡೆ ಅವಳ ಜೊತೆ ಕಂಟೆಂಟ್​ಗಳನ್ನು ಮಾಡಿ ಯೂಟ್ಯೂಬ್​ಗೆ ವಿಡಿಯೋಗಳನ್ನು ಸೋನು ಹಾಕುತ್ತಿದ್ದರು. ಇದು ಕಾನೂನು ಬಾಹಿರ ಎಂದು ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಹೇಳಿದ್ದಾರೆ. ‘ಮಗು ಅಂದ್ರೆ ದುಡ್ಡು ಮಾಡೋ ವಸ್ತು ಅಲ್ಲ’ ಎಂದು ಅವರು ತಿಳಿಸಿದ್ದಾರೆ.

Read More

ಬೆಂಗಳೂರು: ಮಗುವನ್ನು ದತ್ತು ಪಡೆಯುವಾಗ ಪಾಲಿಸಬೇಕಾದ ನಿಯಮಗಳ ಪಾಲನೆ ಉಲ್ಲಂಘನೆ (Adoption Procedure) ಮಾಡಿದ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಅವರನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಕಾನೂನು ಪರಿವೀಕ್ಷಣಾಧಿಕಾರಿ ಗೀತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸೋನು ಶ್ರೀನಿವಾಸ ಗೌಡ ಒಂದು ಮಗುವನ್ನು ದತ್ತು ಪಡೆದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆದರೆ ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. BIGG BREAKING: 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ಅಸ್ತು: ಹೈಕೋರ್ಟ್’ನಿಂದ ಮಹತ್ವದ ತೀರ್ಪು ಯಾವೆಲ್ಲ ನಿಯಮ ಉಲ್ಲಂಘನೆ? ನಿಯಮಗಳ ಪ್ರಕಾರ ಮಗುವನ್ನು (Child) ದತ್ತು ಪಡೆಯುವಾಗ ಅರ್ಜಿ ಸಲ್ಲಿಸಬೇಕು. ಆದರೆ ಸೋನುಗೌಡ ಅರ್ಜಿ ಸಲ್ಲಿಸಿರಲಿಲ್ಲ. ಮಗುವನ್ನು ಹೊರಗಡೆ ತೋರಿಸುವಂತಿಲ್ಲ ಮತ್ತು ಕುಟುಂಬದವರ…

Read More

ಶಿವಮೊಗ್ಗ:- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದ ಹಿನ್ನಲೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಈ ಸಂಬಂಧ ಇಂದು ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಅಯನೂರ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿನ್ನೆ ಸಂಜೆ ರಾಜ್ಯದ ನಾಯಕರು ಹಾಗೂ ಅಖಿಲ ಭಾರತದ ಕಾಂಗ್ರೆಸ್ ಆಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನನ್ನನ್ನು ನೈರುತ್ಯ ಪದವೀದರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. 5 ಜಿಲ್ಲೆಯ ಉಸ್ತುವಾರಿ ಸಚಿವರ ಅಭಿಪ್ರಾಯ ಪಡೆದ ನಂತರ ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ ಅವರಿಗೆಲ್ಲ ಅಭಿನಂದನೆಗಳು. ನೈರುತ್ಯ ಪದವೀದರರ ಸೋಲಿಲ್ಲದ ಕ್ಷೇತ್ರದಲ್ಲಿ 42 ವರ್ಷ ಸೋಲಿಲ್ಲದೆ ಮೆರೆಯುತ್ತಿರುವ ಬಿಜೆಪಿಯನ್ನು ನಾವು ಈ ಬಾರಿ ಸೋಲಿಸಿ ಆ ಸ್ಥಾನವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ನನ್ನ ಬದಲು ಬೇರೆಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರೂ ಇದೆ ನನ್ನ ಅಭಿಪ್ರಾಯ ವಾಗಿರುತ್ತಿತ್ತು. ಮೊನ್ನೆ ಶಿವಮೊಗ್ಗ ಕ್ಕೆ ಬಂದ ಗೀತಾ ಶಿವರಾಜ್…

Read More

ಚಿತ್ರದುರ್ಗ:- ಸರ್ಕಾರಗಳು ಸಮಾ ಸಮಾಜದ ಬಗ್ಗೆ ಮಾತಾಡುವುದು ಕೇವಲ ತೋರಿಕೆಯಾಗಿದೆ. ಭೋವಿ ಸಮುದಾಯವನ್ನು ಗುರುತಿಸವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮಲತಾಯಿ ಧೋರಣೆ ತೋರುತ್ತಿವೆ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಬಿಜೆಪಿ 2008 ರಲ್ಲಿ ದಕ್ಷಿಣ ಭಾರತದಲ್ಲಿ ಸ್ವತಂತ್ರ್ಯ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದ್ದರು.ಆದರೆ ಮೂರು ಜನ ಭೋವಿ ಸಮುದಾಯದ ಜನಪ್ರತಿನಿಧಿಗಳು ಕಾರಣರಾಗಿದ್ದಾರೆಂಬುದನ್ನು ಅವರು ಮರೆಯಬಾರದು, ಒಂದು ಬಾರೀ ಜನಾರ್ಧನ ಸ್ವಾಮಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಎರಡನೇ ಬಾರಿಗೆ ಅವಕಾಶ ಸಿಕ್ಕರೂ ಯಶಸ್ಸು ಸಿಗಲಿಲ್ಲ. ಇದರಿಂದ ಐದು ಕ್ಷೇತ್ರಗಳಲ್ಲಿ ಭೋವಿ ಸಮುದಾಯವನ್ನು ಈ ಬಾರಿ ಅಲಕ್ಷ ಮಾಡಬಾರದು ಎಂದು ಎಚ್ಚರಿಕೆಯನ್ನು ಬಿಜೆಪಿಗೆ ನೀಡಿದರು. ಈ ಬಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಭೋವಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ತುಂಬಬೇಕಿತ್ತು. ಆದರೆ ಅವರು ಕೂಡ ಎರಡು ಸಮುದಾಯಗಳಿಗೆ ಮಾತ್ರ ನೀಡಿದೆ. ಎರಡು ಪಕ್ಷಗಳ ರಾಷ್ಟ್ರೀಯ…

Read More

ದಾವಣಗೆರೆ:- ಬಿಜೆಪಿಯವರಿಗೆ ತಾಕತ್ ಇದ್ರೆ ಒಗ್ಗಟ್ಟಾಗಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ. ಒಂದು ಪಕ್ಷ ಗೆದ್ದು ಬಂದರೆ ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳುವ ಮೂಲಕ ಚನ್ನಗಿರಿ ಕೈ ಶಾಸಕ ಶಿವಗಂಗ ಬಸವರಾಜ್ ಸವಾಲ್ ಹಾಕಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ ಬಿಜೆಪಿ ಟಿಕೆಟ್ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿಗೆ ನೀಡಿದ್ದಾರೆ. ಅದರ ವಿರುದ್ಧ ರೇಣುಕಾಚಾರ್ಯ ಟೀಂ ಬಂಡಾಯವೆದ್ದಿದೆ. ಇಬ್ಬರು ಒಗ್ಗಟ್ಟಾಗಿ ತಾಕತ್ ಇದ್ರೆ ಈ ಭಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ. ಬಿಜೆಪಿಯ ಎರಡು ಟೀಂಗೆ ಕಾಂಗ್ರೆಸ್‌ ಶಾಸಕ ಸವಾಲ್ ಹಾಕಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಒಂದು ಕತ್ತೆ ನಿಂತ್ರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುತ್ತೇವೆ. ಬಿಜೆಪಿಯವರು ಬೇಕು ಅಂತಲೇ ಈ ರೀತಿ ಟೀಂ ಮಾಡಿಕೊಂಡಿದ್ದಾರೆ. ಬಿಜೆಪಿ ಸೋತರೆ ಒಗ್ಗಟ್ಟಿಲ್ಲದ್ದರಿಂದ ಸೋಲಾಯಿತು ಅಂತ ಹೇಳೋಕೆ ಕಾರಣ ಬೇಕು. ಅದಕ್ಕಾಗಿ ಹೀಗೆ ಟೀಂ ಮಾಡಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ತಾಕತ್ ಇದ್ರೆ ಬಿಜೆಪಿ ಅಭ್ಯರ್ಥಿ…

Read More