Author: AIN Author

ನೆಲಮಂಗಲ: ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ 10.5 ಗಾಂಜಾ ವಶಪಡಿಸಿಕೊಂಡ ಘಟನೆ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ಜರುಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆಓಡಿಸ್ಸಾ ಸೋಮನಾಥ್, ಬೀರದಾಂಡ ಮೂಲದ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಬಸ್ ಮೂಲಕ‌ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆದಿದೆ. ಇನ್ನೂ ನೆಲಮಂಗಲ ತಾಲೂಕಿನ ಬಿನ್ನಮಂಗಲ ಬಳಿ ಮದ್ಯ ವಶಕ್ಕೆ ಪಡೆಯಲಾಗಿದೆ. ಅಂಗಡಿಯಲ್ಲಿ ಮಾರಾಟ ಮಾಡುವ ವೇಳೆ 11 ಸಾವಿರ ಮೌಲ್ಯದ 21 ಲೀಟರ್ ಮಧ್ಯ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.

Read More

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ನಿಂದ ಅಧಿಕೃತ ಅಭ್ಯರ್ಥಿಗಳ ಘೋಷಣೆ ಬಾಕಿ ಇದ್ದರು ಮಾಜಿ ಸಚಿವ ಡಾ.ಸುಧಾಕರ್​ ಅವರ ಬೆಂಬಲಿಗರು ಕ್ಷೇತ್ರದ ಜನತೆಯಲ್ಲಿ ಸುಧಾಕರ್​ ಅವರಿಗೆ ಟಿಕೆಟ್​ ಘೋಷಣೆಯಾಗಿದೆ, ಮುಂದಿನ ಕೇಂದ್ರ ಆರೋಗ್ಯ ಸಚಿವರಿಗೆ ಶುಭಾಶಯಗಳು ಎನ್ನುವ ರೀತಿಯಲ್ಲಿ ಪೋಸ್ಟರ್​ಗಳನ್ನ ಹಾಕುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಸುಧಾಕರ್​ ವಿರುದ್ದ ಶಾಸಕ ಎಸ್​.ಆರ್​ ವಿಶ್ವನಾಥ್​ ಕಿಡಿ ಕಾರಿದರು. ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನೆನ್ನೆ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನತೆಯಲ್ಲಿ ಹೈಕಮಾಂಡ್​ ನಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗದಿದ್ದರೂ ಸುಧಾಕರ್​ ಬೆಂಬಲಿಗರು ಟಿಕೆಟ್​ ಘೋಷಣೆಯಾಗಿದೆ ಎಂದು ಕ್ಷೇತ್ರದ ಜನತೆಯಲ್ಲಿ ಗೊಂದಲ ಉಂಟು ಮಾಡುತ್ತಿರುವ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಅಷ್ಟೆ ಅಲ್ಲದೇ ಅಲೋಕ್​ ವಿಶ್ವನಾಥ್​ ಪತ್ರಿಕಾಗೋಷ್ಟಿಗಳಿಗೆ ಹಾಜರಾಗದಂತೆ ಕ್ಷೇತ್ರದ ಮುಖಂಡರಿಗೆ ಮಾಜಿ ಸಚಿವರು ದಮ್ಕಿ ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಇದು ಒಳ್ಳೆಯ ಬೆಳವಣಿಗೆಗಳಲ್ಲ ಎಂದರು.

Read More

ಬಾಗಲಕೋಟೆ:- ವೈಯಕ್ತಿಕವಾಗಿ ಬಂದರೆ ಯಾವ‌ ಮಗನಿಗೂ ನಾನು ಬಗ್ಗಲ್ಲ ಎಂದು ವಿಜಯಾನಂದ‌ ಕಾಶಪ್ಪನವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪ್ರಸಂಗ ಬಂದರೆ ರಾಜಕೀಯದಲ್ಲಿ ಯಾರು ಏನಾಗುತ್ತಾರೆ, ಯಾರಿಗೆ ಗೊತ್ತಿದೆ. 50 ವರ್ಷ ಕಾಂಗ್ರೆಸ್​ ಪಕ್ಷದಲ್ಲಿ ಇದ್ದವರಿಗೆ ತಾಕತ್ ಪ್ರಶ್ನೆ ಮಾಡ್ತೀರಿ. ನಮ್ಮ ಕಾರ್ಯಕರ್ತರಿಗೆ ಸಭೆಗೆ ಹೋಗಬೇಡಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಸಚಿವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ತುಮ್ಹಾರೇ ಧಮ್ಕಿ ನಹೀ ಚಲೇಗಾ ಬಚ್ಚಾ ಎಂದ ಶಿವಾನಂದ‌ ಪಾಟೀಲ್​ಗೆ‌ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿದವರಿಗೆ ಅವಕಾಶ ಕೊಡಬೇಕು. ನನ್ನ ಪತ್ನಿ ವೀಣಾ ಕಾಶಪ್ಪನವರ್​ ಕಾಂಗ್ರೆಸ್ ಪಕ್ಷಕ್ಕಾಗಿ ‌ದುಡಿದಿದ್ದಾರೆ. ಆಕೆ ಜಿ.ಪಂ. ಅಧ್ಯಕ್ಷೆಯಾಗುವಾಗಲೂ ನಾನೊಬ್ಬನೇ ಗಂಡು ನಿಂತವನು. 2019ರಲ್ಲಿ ಯಾರೂ ಎಂಪಿ ಎಲೆಕ್ಷನ್​ಗೆ ನಿಲ್ಲೋಕೆ ಮುಂದೆ ಬರಲಿಲ್ಲ. ಮೋದಿ ಅಲೆ ಅಂದರು, ನಮ್ಮ ಮುಂದೆ ಯಾವ ಅಲೆ ಕೂಡ ನಡೆಯಲ್ಲ ಎಂದು ಕಿಡಿಕಾರಿದ್ದಾರೆ. ಜಾತ್ಯಾತೀತ ನಿಲುವಿನ ಮೇಲೆ‌ ನಿಂತಿರುವ ಪಕ್ಷ ಕಾಂಗ್ರೆಸ್. ಇವತ್ತು ನಮಗೆ ‌ನಿಮಗೆ…

Read More

ಮೈಸೂರು:- ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರು ಟಿಕೆಟ್ ಘೋಷಣೆ ಬಳಿಕ ಇಂದು ಮೊದಲ ಸುದ್ದಿಗೋಷ್ಠಿ ನಡೆಸಿದರು. ಪ್ರತಾಪ್ ಸಿಂಹ 10 ವರ್ಷ ಸಂಸದರಾಗಿದ್ದರು. ಅವರಿಗೇ ಟಿಕೆಟ್ ಸಿಗುತ್ತೆ ಅಂತ ನಾನು ಅಂದುಕೊಂಡಿದ್ದೆ. ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಬೇಕು ಅಂತ ಪಟ್ಟು ಹಿಡಿದು ಟಿಕೆಟ್ ತೆಗೆದುಕೊಂಡು ಬಂದೆ. ಆದ್ರೆ ಪ್ರತಾಪ್ ಸಿಂಹ ಅವರಾಗಿ ಅವರೇ ಔಟ್ ಆಗಿಬಿಟ್ರು. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದು ಯಾಕೆ? ಕಾರಣ ಏನು ಅಂತ ಬಿಜೆಪಿಯವರು ಹೇಳಬೇಕು. ಪ್ರತಾಪ್ ಸಿಂಹ ವಿರುದ್ಧ ಆಡಿಯೋ, ವಿಡಿಯೋ ಇತ್ತಾ? ಏನಾದರೂ ದಾಖಲೆಗಳಿದ್ದವೇ ಅಥವಾ ವರಿಷ್ಠರು ಕರೆದು ಹೇಳಿದ್ರ? ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು ಕಾರಣ ಏನು ಅಂತ ಇನ್ನೂ ಗೊತ್ತಾಗಿಲ್ಲ ಎಂದರು. ನಾಲ್ಕು ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಈ ಹಿಂದೆ ಮತದಾರರು ನನ್ನನ್ನು‌ ಕೈ ಹಿಡಿಯಲಿಲ್ಲ. ನಾನೇ ಸೂಕ್ತ ಅಭ್ಯರ್ಥಿ ಎಂದು ಪಕ್ಷ ನನಗೆ ಟಿಕೆಟ್ ಕೊಟ್ಟಿದೆ.…

Read More

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಚಿತ್ರಗಳ ಬಳಿಕ ಚೇಷ್ಠೆಗೆ ಫುಲ್ಸ್ಟಾಪ್ ಇಟ್ಟಿರೋ ವಿಜಯ್ ಪ್ರಸಾದ್, ಸಿದ್ಲಿಂಗು ಸೀಕ್ವೆಲ್ ಸಿನಿಮಾನ ಕೈಗೆತ್ತಿಕೊಂಡಿದ್ದಾರೆ. ಲೂಸ್ಮಾದ ಯೋಗಿ ಜೊತೆಗೇನೇ ಸಿನಿಮಾ ಶುರು ಮಾಡ್ತಿರೋ ಪ್ರಸಾದ್, ಅಧಿಕೃತವಾಗಿ ನಿರ್ಮಾಪಕರ ಮನೆದೇವರ ಆಲಯದಲ್ಲಿ ಮುಹೂರ್ತ ಕೂಡ ನೆರವೇರಿಸಿದ್ರು. ಮೋಹಕತಾರೆ ರಮ್ಯಾ & ಆಂಡಾಳಮ್ಮ ಇರ್ತಾರಾ..? ಡಬಲ್ ಮೀನಿಂಗ್ ಇರುತ್ತಾ ಇರಲ್ವಾ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ಒಮ್ಮೆ ಓದಿ. ಸಿದ್ಲಿಂಗು.. ಈ ಸಿನಿಮಾ ಬಂದು ಬರೋಬ್ಬರಿ 12 ವರ್ಷಗಳಾಯ್ತು. ಇಂದಿಗೂ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಒಂದೊಳ್ಳೆ ಕಥೆ, ಸಂಬಂಧಗಳ ಮೌಲ್ಯಗಳು, ಕಾಮಿಡಿ, ಪ್ರೀತಿ, ಡೈಲಾಗ್ಸ್, ಸಾಹಿತ್ಯ, ಸಂಗೀತ ಹಾಗೂ ಮೇಕಿಂಗ್. ಹೌದು.. ಎಲ್ಲಾ ಌಂಗಲ್ನಿಂದ ಸಿದ್ಲಿಂಗು ವ್ಹಾವ್ ಫೀಲ್ ತರಿಸಿದ ಸಿನಿಮಾ ಆಗಿತ್ತು. ಇದೀಗ ಅದ್ರ ಸೀಕ್ವೆಲ್ ಸಿದ್ಲಿಂಗು-2 ಸೆಟ್ಟೇರಿದೆ. ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಅವ್ರು ತಮ್ಮ ನಿಹಾರಿಕಾ ಫಿಲಂಸ್ ಬ್ಯಾನರ್ನಡಿ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ವಿಜಯ್ ಪ್ರಸಾದ್ ಅವರೇ ಆ್ಯಕ್ಷನ್ ಕಟ್…

Read More

ಕಲಬುರ್ಗಿ:- ಕಲಬುರ್ಗಿಯಲ್ಲಿ ಅಮಾನವೀಯ ಘಟನೆ ಜರುಗಿದ್ದು, ಬಡ್ಡಿ ಹಣಕ್ಕಾಗಿ ಆ್ಯಸಿಡ್ ದಾಳಿ ನಡೆದಿದ್ದು, ಗಾಯಗೊಂಡ ಗಾಯಾಳು ಗಂಭೀರವಾದ ಘಟನೆ ಜರುಗಿದೆ. ಜುಬೇರ್ ಬಲಗೈ ಹಾಗೂ ಕಾಲಿನ ಮೇಲೆ ಆ್ಯಸಿಡ್ ಬಿದ್ದಿದ್ದು ಸಂಪೂರ್ಣ ಸುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುವಿಗೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವ್ಯಾಪರಕ್ಕಾಗಿ ಅರ್ಷದ್, ಪರ್ವೇಜ್ ಬಳಿ ಜುಬೇರ್ 35 ಲಕ್ಷ ಹಣ ಪಡೆದುಕೊಂಡಿದ್ದ. ಅದಕ್ಕೆ ಬಡ್ಡಿ, ಚಕ್ರಬಡ್ಡಿ ಹಚ್ಚಿ 90 ಲಕ್ಷ ಹಣ ಕೊಡುವಂತೆ ಅರ್ಷದ್ ಗ್ಯಾಂಗ್ ಪೀಡಿಸುತ್ತಿತ್ತು. ಇತ್ತೀಚೆಗೆ ಜುಬೇರ್​ನನ್ನು ಕರೆಸಿ ರೂಂ ನಲ್ಲಿ ಕೂಡಿ ಹಾಕಿ ಹಣ ನೀಡುವಂತೆ ಈ ಗ್ಯಾಂಗ್ ಪೀಡಿಸಿತ್ತು. ಬಳಿಕ ಇಮ್ರಾನ್ ಖಾನ್ ಎಂಬ ವ್ಯಕ್ತಿಯಿಂದ ಆ್ಯಸಿಡ್ ದಾಳಿ ನಡೆದಿದೆ. ಕಲಬುರಗಿ ಖರ್ಗೆ ಪೆಟ್ರೋಲ್ ಬಂಕ್ ಬಳಿ ಆ್ಯಸಿಡ್ ದಾಳಿ ನಡೆದಿದೆ. ಈಗಾಗಲೇ ಇಮ್ರಾನ್‌ ಖಾನ್ ಮೇಲೆ ವಿವಿಧ ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. ಬಡ್ಡಿ ಹಣ ನೀಡಲು ಒಪ್ಪದೇ ಇದ್ದಾಗ ಆ್ಯಸಿಡ್ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಕಲಬುರಗಿಯ…

Read More

ಬೆಂಗಳೂರು : ಸೋನು ಶ್ರೀನಿವಾಸ್​ ಗೌಡ ಅವರನ್ನು ಮಹಿಳಾ ಹಾಗು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಬಂಧನ ಮಾಡಲಾಗಿದೆ ಎಂದು ಪಶ್ಷಿಮ ವಿಭಾಗದ ಡಿಸಿಪಿ ಗಿರೀಶ್ ಅವರು ತಿಳಿಸಿದರು. BIGG BREAKING: 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ಅಸ್ತು: ಹೈಕೋರ್ಟ್’ನಿಂದ ಮಹತ್ವದ ತೀರ್ಪು ನಗರದಲ್ಲಿ ಮಾದ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ರಾಯಚೂರು ಮೂಲದ ದಂಪತಿಗಳ ಒಂದು ಹೆಣ್ಣುಮಗುವನ್ನು ದತ್ತು ಪಡೆದಿದ್ದೇನೆ ಎಂದು ಹೇಳಿಕೊಂಡು ಸೋನು ಶ್ರೀನಿವಾಸ್ ಗೌಡ ಎಂಬ ಯುವತಿ ಯಾವುದೇ ಕಾನೂನು ರೀತ್ಯ ದತ್ತು ಪಡೆಯದೇ ಕೇವಲ ಹೆಣ್ಣು ಮಗುವನ್ನು ತಮ್ಮ ರೀಲ್ಸ್​ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಈ ದೂರಿನ ಆಧಾರ ಮೇಲೆ ಸೋನು ಶ್ರೀನಿವಾಸ್​ ಗೌಡ ಮೇಲೆ ಜುವೆನಲ್​ ಜಸ್ಟೀಸ್​ ಆ್ಯಕ್ಟ್​ ಪ್ರಕಾರ ಬಂಧನ ಮಾಡಲಾಗಿದ್ದು ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

Read More

ಥಿಂಪು:- ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್ ನ ಅತ್ಯುತ್ತಮ ನಾಗರಿಕ ಪ್ರಶಸ್ತಿ ಲಭಿಸಿದೆ. PM ಮೋದಿ ಅವರು ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಸ್ವೀಕರಿಸಿದ್ದಾರೆ. ಈ ಗೌರವವನ್ನು ಪಡೆದ ಮೊದಲ ಭೂತನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭೂತಾನ್‌ನ ದೊರೆ ಜಿಗ್ಮೆ ಖೇಸರ್ ನಾಮ್‌ಗ್ಯೆಲ್ ವಾಂಗ್‌ಚುಕ್ ಅವರನ್ನು ಥಿಂಪುವಿನಲ್ಲಿ ಅವರು ತಮ್ಮ ಎರಡು ದಿನಗಳ ರಾಜ್ಯ ಭೇಟಿಯ ಮೊದಲ ದಿನ ಭೇಟಿಯಲ್ಲಿ ಮೋದಿಯರನ್ನು ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಉಭಯ ನಾಯಕರು ರಾಜಧಾನಿಯಲ್ಲಿ ಭೇಟಿಯಾದ ನಂತರ ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಾಗರಭಾವಿಯ ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿ ಧ್ರುವ್ ಕಕ್ಕರ್ ಎಂಬಾತ ಆತ್ಮಹತ್ಯೆ ಶರಣಾಗಿರುವ ಘಟನೆ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.. ನಿನ್ನೆಯಷ್ಟೇ ವಿದ್ಯಾರ್ಥಿಯೊಬ್ಬಮೆಟ್ರೋ ಟ್ರ್ಯಾಕ್‌ ಮೇಲೆ ಜಿಗಿದು ಸೂಸೈಡ್‌ ಮಾಡಿಕೊಂಡಿರುವ ಘಟನೆ ಎಲ್ಲರಿಗೂ ತಿಳಿದಿದ್ದೆ ಆದರೆ ಮೆಟ್ರೋ ಟ್ರ್ಯಾಕ್​ಗೆ ಪ್ರಯಾಣಿಕರು ಜಿಗಿಯುವುದು, ಮೆಟ್ರೋ ಹಳಿಯಲ್ಲಿ ಕಾಣಿಸಿಕೊಳ್ಳುವುದು ಈ ಹಿಂದೆ ಅನೇಕ ಘಟನೆಗಳು ನಡೆದಿವೆ.ಹೌದು.. ಸೂಸೈಡ್ ಸ್ಪಾಟ್ ಆಗುತ್ತಿದೆಯಾ ನಮ್ಮ ಮೆಟ್ರೋ ಟ್ರ್ಯಾಕ್ ರೈಲ್ವೆ ಟ್ರ್ಯಾಕ್ ಗಳಂತೆ ಮೆಟ್ರೋ ಟ್ರ್ಯಾಕ್ ಗಳಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವುದು ಪ್ರಮುಖ ಮೆಟ್ರೋ ಸ್ಟೇಷನ್ ಗಳ ಸೂಸೈಡ್ ಹಾಟ್ ಸ್ಪಾಟ್ ಆಗಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದೆ. BIGG BREAKING: 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ಅಸ್ತು: ಹೈಕೋರ್ಟ್’ನಿಂದ ಮಹತ್ವದ ತೀರ್ಪು ನಿನ್ನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆ ಚಲಿಸುತ್ತಿದ್ದ ಮೆಟ್ರೋ ಗೆ ಸಿಲುಕಿ ಯುವಕ ಸಾವು ಈ…

Read More

ದೆಹಲಿ:- ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಆಗಿದೆ. ತಮಿಳುನಾಡಿಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಇಲ್ಲಿದೆ:- 1.ತಿರುವಳ್ಳೂರ್ (SC)- ಪೊನ್. ವಿ.ಬಾಲಗಣಪತಿ 2. ಚೆನ್ನೈ ಉತ್ತರ- ಆರ್ ಸಿ ಪಾಲ್ ಕನಕರಾಜ್ 3.ಪದುಚೆರಿ- ಎ ನಮಶಿವಾಯಂ 4. ತಿರುವಣ್ಣಾಮಲೈ-ಎ. ಅಶ್ವಥಾಮನ್ 5. ನಾಮಕ್ಕಲ್-ಕೆ.ಪಿ. ರಾಮಲಿಂಗಂ 6. ತಿರುಪ್ಪೂರ್- ಎ.ಪಿ. ಮುರುಗಾನಂದಂ 7.ಪೊಲ್ಲಾಚಿ- ಕೆ ವಸಂತರಾಜನ್ 8.ಕರೂರ್- ವಿ.ವಿ. ಸೆಂಥಿಲನಾಥನ್ 9.ನಾಗಪಟ್ಟಿನಂ (SC) ಪಿ. ಕಾರ್ತಿಯಾನಿ 10.ನಾಗಪಟ್ಟಣಂ (SC)-ಎಸ್ಜಿಎಂ ರಮೇಶ್ 11.ತಂಜಾವೂರು-ಎಂ. ಮುರುಗಾನಂದಂ 12.ಶಿವಗಂಗಾ-ಡಾ. ದೇವನಾಥನ್ ಯಾದವ್ 13.ಮಧುರೈ- ಫ್ರೋ. ರಾಮಾ ಶ್ರೀನಿವಾಸನ್ 14.ವಿರುದುನಗರ- ಶ್ರೀಮತಿ. ರಾಧಿಕಾ ಶರತ್‌ಕುಮಾರ್ 15. ಟಂಕಸಿ(SC) ಬಿ. ಜಾನ್ ಪಾಂಡಿಯನ್ ಪುದುಚೇರಿ ಮತ್ತು ತಮಿಳುನಾಡು ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮುಂಬರುವ ಲೋಕಸಭೆ ಚುನಾವಣೆಗೆ (Lok sabha Election) ಬಿಜೆಪಿ (BJP) ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 15 ಅಭ್ಯರ್ಥಿಗಳ ಪಟ್ಟಿಯಲ್ಲಿ 2017 ರಲ್ಲಿ ಬಿಜೆಪಿಗೆ ಸೇರಿದ್ದ ಎಐಎಡಿಎಂಕೆಯ ಮಾಜಿ ಪ್ರಮುಖ…

Read More