Author: AIN Author

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೈನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದು, ಈ ಮೂಲಕ ಲೀಗ್ ನಲ್ಲಿ ಸೋಲಿನ ಮೂಲಕ ಟೂರ್ನಿ ಆರಂಭಿಸಿದೆ. ಇದೀಗ ಎರಡನೇ ಪಂದ್ಯದ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ. ಹಾಗಾದರೆ, ಬೆಂಗಳೂರು ಮುಂದಿನ ಮ್ಯಾಚ್ ಯಾವಾಗ?, ಯಾರ ವಿರುದ್ಧ?, ಎಲ್ಲಿ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಬೆಂಗಳೂರು ಮತ್ತು ಪಂಜಾಬ್ ನಡುವಿನ 2024 ರ ಐಪಿಎಲ್ ಪಂದ್ಯ ಮಾರ್ಚ್ 25 ಸೋಮವಾರದಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ 7.30 ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.

Read More

ದುಬೈ: ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಸೇರಿದಂತೆ ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌ ಆಟಗಾರರ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆಯಿದೆ. 17ನೇ ಆವೃತ್ತಿಯಲ್ಲಿ 10 ತಂಡಗಳು ಕಣಕ್ಕಿಳಿಯುತ್ತಿದ್ದು, ಪ್ರತಿ ತಂಡಕ್ಕೂ ಎಂದಿನಂತೆ 14 ಲೀಗ್‌ ಪಂದ್ಯಗಳಿರಲಿವೆ. ಲೀಗ್‌ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ಪ್ಲೇ ಆಫ್‌ ತಲುಪಲಿವೆ. ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ದುಬಾರಿ ಬೆಲೆಗೆ ಹರಾಜಾದ ಟಾಪ್‌-5 ಆಟಗಾರರು ಯಾರು? * ಮಿಚೆಲ್‌ ಸ್ಟಾರ್ಕ್‌ – 24.75 ಕೋಟಿ ರೂ. (ಕೋಲ್ಕತ್ತಾ ನೈಟ್‌ರೈಡರ್ಸ್‌) * ಪ್ಯಾಟ್‌ ಕಮ್ಮಿನ್ಸ್‌…

Read More

ಹಸಿ ಮೆಣಸಿನಕಾಯಿ ಗಾಢ ಹಸಿರು ಬಣ್ಣ ಹಾಗೂ ರುಚಿಯಲ್ಲಿ ಖಾರದಿಂದ ಕೂಡಿರುತ್ತದೆ. ಆಹಾರ ಪದಾರ್ಥಗಳ ರುಚಿಯು ಖಾರದಿಂದ ಕೂಡಿರುತ್ತದೆ. ಖಾರದ ರುಚಿಗಾಗಿ ಬಳಸುವುದನ್ನು ಬಿಟ್ಟರೆ ಯಾವುದೇ ಪ್ರಮುಖ ಖಾದ್ಯವನ್ನಾಗಿ ತಯಾರಿಸುವುದಿಲ್ಲ. ರುಚಿಯಲ್ಲಿ ಖಾರವಾಗಿದ್ದರೂ ಸಮೃದ್ಧವಾದ ಜೀವಸತ್ವಗಳನ್ನು ಹಾಗೂ ಪೋಷಕಾಂಶಗಳನ್ನು ಒಳಗೊಂಡಿದೆ. ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳವ ಮೂಲಕ ಉರಿಯನ್ನು ನಿಯಂತ್ರಿಸಬಹುದು. ಈ ವಿಧಾನಗಳು ನಿಮ್ಮ ಕೈಯಲ್ಲಿನ ಸುಡುವ ಸಂವೇದನೆಯನ್ನು ತೊಡೆದು ಹಾಕುತ್ತದೆ. ಜೊತೆಗೆ ಮೆಣಸಿನಕಾಯಿಯನ್ನು ಕತ್ತರಿಸುವ ಸರಿಯಾದ ವಿಧಾನವನ್ನು ಸಹ ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲೋವೆರಾ ಜೆಲ್ ಅನ್ನು ಹಚ್ಚಿ: ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ನಿಮ್ಮ ಕೈಗಳ ಉರಿಯನ್ನು ಹೋಗಲಾಡಿಸಲು ನೀವು ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದಕ್ಕಾಗಿ ಒಂದು ಚಮಚ ಅಲೋವೆರಾ ಜೆಲ್ ಅನ್ನು ನಿಮ್ಮ ಅಂಗೈಗಳ ಮೇಲೆ ತೆಗೆದುಕೊಂಡು ನಾಲ್ಕೈದು ನಿಮಿಷಗಳ ಕಾಲ ನಿಮ್ಮ ಕೈಗಳನ್ನು ಮಸಾಜ್ ಮಾಡಿ. ಸ್ವಲ್ಪ ಸಮಯದಲ್ಲೇ ಸುಡುವ ಸಂವೇದನೆಯಿಂದ ಮುಕ್ತಿ ಪಡೆಯುತ್ತೀರಿ. ಹಿಟ್ಟನ್ನು ಬೆರೆಸಿಕೊಳ್ಳಿ: ಕೈಗಳಲ್ಲಿ ಮೆಣಸಿನಕಾಯಿಯಿಂದ ಉರಿಯುವ ಸಂವೇದನೆಯನ್ನು ತೆಗೆದುಹಾಕಲು…

Read More

ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಜೊತೆಗೆ ನನ್ನನ್ನು ಹೋಲಿಸುವುದು ಸರಿಯಾದ ಕ್ರಮವಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನಾ ಹೇಳಿದ್ದಾರೆ. ಎರಡನೇ ಸೀಸನ್‌ನ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಸಮರ ಗೆದ್ದ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. “ಟ್ರೋಫಿ ಗೆದ್ದಿರುವುದು ಒಂದು ಸಂಗತಿ ಅಷ್ಟೇ. ಆದರೆ 18 ನಂಬರ್ ಜೆರ್ಸಿ ಧರಿಸಿರುವ ಮತ್ತೊಬ್ಬ ಆಟಗಾರ (ವಿರಾಟ್ ಕೊಹ್ಲಿ) ಭಾರತಕ್ಕಾಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಆದ್ದರಿಂದ ನನ್ನ ಕ್ರಿಕೆಟ್ ವೃತ್ತಿ ಜೀವನದೊಂದಿಗೆ ಅವರನ್ನು ಹೋಲಿಸುವುದು ಸರಿಯಾದ ಕ್ರಮವಲ್ಲ. ವಿರಾಟ್ ಕೊಹ್ಲಿ ಈಗಾಗಲೇ ತಮ್ಮ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಬಲು ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ,” ಎಂದು ಆರ್‌ಸಿಬಿ ನಾಯಕಿ ತಿಳಿಸಿದ್ದಾರೆ. ಇನ್ನು WPL ನ ಅತ್ಯಂತ ದುಬಾರಿ ಆಟಗಾರ್ತಿಯಾಗಿ Smriti Mandhana ಗುರುತಿಸಿಕೊಂಡಿದ್ದಾರೆ. RCB ಕಪ್ ಗೆದ್ದ ಬೆನ್ನಲ್ಲೇ ಸ್ಮೃತಿ ಮಂಧಾನ ಅವರ ಆಸ್ತಿಯ ಬಗ್ಗೆ ಮಾಹಿತಿ ವೈರಲ್…

Read More

ನುಗ್ಗೆಕಾಯಿ ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ಕೇವಲ ನುಗ್ಗೆಕಾಯಿ ಮಾತ್ರವಲ್ಲದೆ ಅದರ ಸೊಪ್ಪು ಹಾಗೂ ತೊಗಟೆಯು ನಮಗೆ ಹಲವಾರು ರೀತಿಯಿಂದ ಆರೋಗ್ಯದಲ್ಲಿ ನೆರವಾಗುವುದು ಎಂದು ಹೇಳಲಾಗುತ್ತದೆ. ನುಗ್ಗೆಕಾಯಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಯಬಹುದು. ಸುಡು ಬಿಸಿಲಿಗೆ ಲೆಮನ್ ಜ್ಯೂಸ್ ಮೊರೆ ಹೋದ ಜನ – ನಿಂಬೆಹಣ್ಣಿಗೆ ಹೆಚ್ಚಾಯ್ತು ಡಿಮ್ಯಾಂಡ್! ರಕ್ತದಲ್ಲಿ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವುದು ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಇದ್ದು, ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಹೃದಯದ ಆರೋಗ್ಯ ಸುಧಾರಿಸುವುದು. ರಕ್ತವನ್ನು ದಪ್ಪವಾಗಿಸುವ ಮತ್ತು ಹೃದಯದ ಕಾರ್ಯವು ಸೂಕ್ತವಾಗಿ ಇರುವಂತೆ ನೋಡಿಕೊಳ್ಳುವುದು. ಮೂಳೆಗಳನ್ನು ಬಲಪಡಿಸುವುದು ನುಗ್ಗೆಕಾಯಿಯಲ್ಲಿ ಇರುವಂತಹ ಎರಡು ರೀತಿಯ ಪ್ರಮುಖ ಪೋಷಕಾಂಶಗಳಿಂದಾಗಿ ಇದು ಅಸ್ಥಿರಂಧ್ರತೆ ಮತ್ತು ಸಂಧಿವಾತವನ್ನು ದೂರವಿಟ್ಟು ಮೂಳೆಗಳನ್ನು ಬಲಪಡಿಸುವುದು. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವು ಅತೀ ಮುಖ್ಯವಾಗಿ ಬೇಕಾಗಿರುವುದು. ನುಗ್ಗೆಕಾಯಿಯನ್ನು…

Read More

ಕಾನೂನುಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪಕ್ಕೆ ನಟಿ ಸೋನು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ ಪೊಲೀಸ್ ವಾಹನದಲ್ಲಿ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಎದುರು ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. ಲೀಗಲ್ ಆಗಿ ತನಿಖೆ ನಡೆಯುತ್ತಿದೆ. ಏನೂ ತೊಂದರೆ ಇಲ್ಲ. ಒಂದು ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡು ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ ಎಂದು ಸೋನು ಗೌಡ ಹೇಳಿದ್ದಾರೆ. ಕೇಸ್‌ಗೆ ಸಂಬಂಧಪಟ್ಟಂತೆ ಅವರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ಮಾಡಲಿದ್ದಾರೆ. ಮಾರ್ಚ್ 25ರಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸಬೇಕಿದೆ. ನಿಯಮ ಪಾಲಿಸದೇ ಮಗು ದತ್ತು ಪಡೆದ ಆರೋಪದಲ್ಲಿ ಅವರು ಈಗ ಕಾನೂನು ಸಂಕಷ್ಟ ಎದುರಿಸಬೇಕಾಗಿದೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಸೋನು ಅನ್ನು ನಿನ್ನೆ ಬೆಳಗಿನ ಜಾವ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿತ್ತು.

Read More

ರಾಮನಗರ:- ಕಾಂಗ್ರೆಸ್ ಆಮಿಷಗಳನ್ನ ಒಡ್ಡಿ ಚುನಾವಣೆ ನಡೆಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಆಮಿಷಗಳನ್ನ ಒಡ್ಡಿ ಚುನಾವಣೆ ನಡೆಸುತ್ತಿದೆ. ಮೊನ್ನೆಯಷ್ಟೇ ಸೀರೆ, ತವಾಗಳನ್ನು ಕೂಡ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಯೋಚನೆ ಮಾಡಿ ಮತಹಾಕಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್​ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್​ನಿಂದ ಆಪರೇಷನ್ ಹಸ್ತ ವಿಚಾರ, ‘ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ವೀಕ್ ಮೈಂಡೆಡ್ ಅಲ್ಲ, ಒಂದಷ್ಟು ಜನ ನಮ್ಮ ಚುನಾವಣೆಯಲ್ಲಿ ಜೆಡಿಎಸ್ ಸವಲತ್ತು ಪಡೆದು ಅನ್ಯಾಯ ಮಾಡಿದರು. ಇದು ಚುನಾವಣೆಗಳಲ್ಲಿ ಸಹಜ, ಒಂದು ಐದತ್ತು ಪರ್ಸೆಂಟ್ ಜೊತೆಯಲ್ಲೇ ಇದ್ದು ಮೋಸ ಮಾಡುತ್ತಾರೆ. ಇವರು, ‘ನನ್ನ ಚುನಾವಣೆಯಲ್ಲೇ ಕಾಂಗ್ರೆಸ್​ಗೆ ಒಂದು ಹೆಜ್ಜೆ ಇಟ್ಟಿದ್ರು, ಇದೀಗ ಎರಡೂ ಕಾಲುಗಳನ್ನು ಕಾಂಗ್ರೆಸ್​ಗೆ ಇಟ್ಟಿದ್ದಾರೆ. ಆದರೆ, ಪಕ್ಷ ಕಟ್ಟಿ ಬೆಳೆಸಿರುವ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಜೊತೆಯಲ್ಲೇ ಇದ್ದಾರೆ. ಕಾಂಗ್ರೆಸ್ ಲಕ್ಷ ಲಕ್ಷ ಕೊಟ್ಟರೂ ಅವರು ಯಾವುದೇ ಕಾರಣಕ್ಕೂ…

Read More

17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡ ಅನುಜ್ ರಾವತ್ ಹಾಗೂ ದಿನೇಶ್ ಕಾರ್ತಿಕ್ ಅವರ ಅಮೋಘ ಜೊತೆಯಾಟದ ನೆರವಿನಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ ತಂಡ 18.4 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗೆಲುವಿನ ದಡ ಸೇರಿತು. ಆರ್​​ಸಿಬಿ ನೀಡಿದ 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಸರಾಸರಿ ಆರಂಭ ಪಡೆಯಿತು. ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್‌ಗೆ 38 ರನ್ ಸೇರಿಸಿದರು. ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಯಶ್ ದಯಾಳ್ ಈ ಜೊತೆಯಾಟವನ್ನು ಮುರಿದರು. ರುತುರಾಜ್ ಫಸ್ಟ್ ಸ್ಲಿಪ್​ನಲ್ಲಿ ನಿಂತಿದ್ದ ಕ್ಯಾಮರೂನ್ ಗ್ರೀನ್​ಗೆ ಕ್ಯಾಚಿತ್ತು ಔಟಾದರು.…

Read More

ಬೆಂಗಳೂರು:- ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಹಿನ್ನೆಲೆ ಪಕ್ಷದ ವರಿಷ್ಠರ ಕ್ರಮ ಪ್ರಶ್ನಿಸಿದ್ದ ಸಿಎಂ ಇಬ್ರಾಹಿಂ ದಾವೆ ವಜಾಗೊಂಡಿದೆ. ಉಚ್ಛಾಟಿನೆ ಬಳಿಕ ಸಿಎಂ ಇಬ್ರಾಹಿಂ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿದ ವರಿಷ್ಠರ ಕ್ರಮ ಪ್ರಶ್ನಿಸಿ ಇಬ್ರಾಹಿಂ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿ ಅವರನ್ನು ಪ್ರತಿವಾದಿಯಾಗಿಸಿದ್ದರು. ಜೆಡಿಎಸ್ ವರಿಷ್ಠರು ಯಾವುದೇ ಮುನ್ಸೂಚನೆ ನೀಡದೇ ತಮ್ಮನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ತಮ್ಮನ್ನು ಕಾನೂನು ಬಾಹಿರವಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ವಕೀಲ ಶತಬೀಷ್ ಹಾಗೂ ಶಿವಣ್ಣ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿ ಕೋರ್ಟ್​ನಲ್ಲಿ ವಿಚಾರಣೆ ಮಾಡಲಾಗಿದೆ. ನಮ್ಮದೇ ಒರಿಜಿನಲ್ ಜೆಡಿಎಸ್, ಬಿಜೆಪಿಗೆ ಬೆಂಬಲ ಇಲ್ಲ ಎಂದು ಸ್ವಪಪಕ್ಷದ ವರಿಷ್ಠರ ವಿರುದ್ಧವೇ ಗುಡುಗಿದ್ದ ಸಿ.ಎಂ ಇಬ್ರಾಹಿಂ ಅವರನ್ನು ಅಕ್ಟೋಬರ್ 19ರಂದು…

Read More

ಬೆಂಗಳೂರು:- ಮೇಕೆದಾಟು ಯೋಜನೆಯ ಜಾರಿಗೆ ಸ್ಟಾಲಿನ್‌ ಅನುಮತಿಗಾಗಿ ಕಾದು ಕುಳಿತಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಗೆ ಸಿಎಂ ಟಾಂಗ್​​ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆಯ ಜಾರಿಗೆ ನಾವು ಎಂ.ಕೆ ಸ್ಟಾಲಿನ್‌ ಅವರ ಅನುಮತಿಗಾಗಿ ಕಾದು ಕುಳಿತಿಲ್ಲ, ನಮಗೆ ಅನುಮತಿ ಬೇಕಿರುವುದು ಕೇಂದ್ರ ಸರ್ಕಾರದ್ದು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ ಎಂದು ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಬಿಜೆಪಿ ನನ್ನ ಭಾವಚಿತ್ರಕ್ಕೆ ಹಳದಿ ಬಣ್ಣದ ಜೆರ್ಸಿ ಹಾಕಿ ನನ್ನ ಬದ್ಧತೆಯನ್ನು ಅವಮಾನಿಸಬೇಡಿ, “ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್.ಸಿ.ಬಿಯ ಹೆಮ್ಮೆಯ ಅಭಿಮಾನಿಯೇ” ಎಂದು ತಿರುಗೇಟು ನೀಡಲಾಗಿದೆ

Read More