Author: AIN Author

ಬೆಂಗಳೂರು’g ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು. ಆಪರೇಷನ್ ಕಮಲ ಶುರುಮಾಡಿದವರು. ಒಬ್ಬೊಬ್ಬ ಎಂಎಲ್‍ಎಗೆ 50 ಕೋಟಿ ಆಫರ್ ಮಾಡ್ತಾರೆ. ನಾವೇ ಎಲೆಕ್ಷನ್ ಮಾಡಿಕೊಳ್ಳುತ್ತೇವೆ ಬನ್ನಿ ಅಂತಾರೆ. ಯಾವ ಹಣ ಇದು, ಬ್ಲಾಕ್ ಮನಿ ಅಲ್ವ ಇದು ಎಂದು ಸಿಎಂ ಪ್ರಶ್ನಿಸಿದರು. ರಾಜಕೀಯ ಪಕ್ಷಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ, ಜನಾಭಿಪ್ರಾಯ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಹೇಗೆ…?, ಬಿಜೆಪಿಯವ್ರಿಗೆ ಸೋಲಿನ ಭೀತಿ ಶುರುವಾಗಿದೆ, ಭೀತಿಯಿಂದ ರಾಜಕೀಯ ಪಕ್ಷಗಳ ನಿಷ್ಕ್ರೀಯಗೊಳಿಸುವ ಕೆಲಸ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ, ಅವರ ಖಾತೆಯನ್ನೂ ಸೀಜ್ ಮಾಡಬೇಕಲ್ವ. ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೇ ಇದ್ದಾರಾ, ಬಿಜೆಪಿಯಲ್ಲಿ ಯಾರೂ ಇಲ್ವ ಎಂದು ಮರುಪ್ರಶ್ನೆ ಹಾಕಿದರು. ಜನತೆಯ ಅಭಿಪ್ರಾಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಅವರಿಗೆ ಸೋಲುವ ಭೀತಿ ಶುರುವಾಗಿದೆ. ಸೋಲಿನ ಭೀತಿಯಿಂದ…

Read More

ಬೆಂಗಳೂರು:-ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ಎದುರಾಗಿದ್ದು, ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ ಗ್ರಾಹಕರು, 200 ಯೂನಿಟ್‌‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ. ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಚೀಫ್ ಇಂಜಿನಿಯರ್ ಕಳೆದ ವರ್ಷದ 12 ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 37,111 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನ ಜನರು ಬಳಕೆ ಮಾಡಿದ್ರೆ ಇನ್ನೂ ಈ ವರ್ಷ ಒಂದು ತಿಂಗಳು ಬಾಕಿ ಇರುವಾಗಲೇ 40 ಸಾವಿರ 607 ಮಿಲಿಯನ್ ಯೂನಿಟ್ ಬಳಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ವಿದ್ಯುತ್ ಬಳಕೆ ಯಾಗಿದೆ. ಈ ವರ್ಷ ಹತ್ತು ಸಾವಿರ ಮಿಲಿಯನ್ ಯೂನಿಟ್ ಹೆಚ್ಚು ಬಳಕೆ ಆಗುವ ಸಾಧ್ಯತೆಯಿದೆ ಎಂದರು. ಇನ್ನೂ ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್…

Read More

ಐಪಿಎಲ್ 2024ರ ಮೊದಲ ಪಂದ್ಯದಲ್ಲೇ ಸಿಎಸ್​ಕೆ ವಿರುದ್ಧ ಸೋಲು ಕಂಡ ಬಳಿಕ ಆ ಸೋಲಿಗೆ ಕಾರಣ ಏನೆಂಬುವುದನ್ನು RCB ನಾಯಕ ಫಾಪ್ ಡುಪ್ಲೆಸ್ಸಿ ಸ್ಪಷ್ಟಪಡಿಸಿದರು. ಆರ್​ಸಿಬಿಗೆ ಮತ್ತೊಮ್ಮೆ ಕಂಟಕವಾಗಿದ್ದು ಬೌಲರ್​ಗಳು. ಬ್ಯಾಟಿಂಗ್​ನಲ್ಲಿ ಡೆಪ್ತ್ ಇದ್ದರೂ ಆರ್​ಸಿಬಿ ಬೌಲಿಂಗ್ ದುರ್ಬಲ ಎಂಬುದು ಸಾಭೀತಾಯಿತು. ಹೇಳಿಕೊಳ್ಳುವಂತಹ ಸ್ಟಾರ್ ಬೌಲರ್ ತಂಡದಲ್ಲಿ ಇಲ್ಲ. ಆದರೆ, ತನ್ನ ಆಟಗಾರರನ್ನು ನಾಯಕ ಬಿಟ್ಟು ಕೊಡಲಿಲ್ಲ. ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ದಾರೆ ನೋಡಿ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನೀವು ಯಾವಾಗಲೂ ಆಡುವಾಗ, ಆರು ಓವರ್‌ಗಳ ನಂತರ ಸ್ವಲ್ಪ ಡಿಪ್ ಪಡೆಯುತ್ತೀರಿ. ಈ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಚೆನ್ನೈ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಅವರು ತಮ್ಮ ಸ್ಪಿನ್ನರ್‌ಗಳಿಂದ ಹಿಡಿತ ಸಾಧಿಸಿದರು ಎಂದು ಹೇಳಿದ್ದಾರೆ. ಬಹುಶಃ ನಾವು ಸುಮಾರು 15 ರಿಂದ 20 ರನ್ ಕಡಿಮೆ ಹೊಡೆದೆವು, ಇದು ಸೋಲಿಗೆ ಕಾರಣವಾಯಿತು. ಪಿಚ್ ನಾವು ಮೊದಲ 10 ಓವರ್‌ಗಳಲ್ಲಿ ಆಡಿದಷ್ಟು ಕೆಟ್ಟದಾಗಿರಲಿಲ್ಲ.…

Read More

ಆರ್​ಸಿಬಿ ಹಾಗೂ ವಿರಾಟ್ ಕೊಹ್ಲಿ ಚಿಯರ್​ಅಪ್ ಮಾಡಲು ಅನುಷ್ಕಾ ಶರ್ಮಾ ಸ್ಟೇಡಿಯಂ ಗೆ ಬರುವ ಸುದ್ದಿ ಬಗ್ಗೆ ವರದಿ ಆಗಿದೆ. ಇತ್ತೀಚೆಗೆ ಅನುಷ್ಕಾ ಶರ್ಮಾ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಮಗು ಜನಿಸುವುದಕ್ಕೂ ಮೊದಲೇ ಅನುಷ್ಕಾ ಹಾಗೂ ಅವರ ಪತಿ, ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಲಂಡನ್​ಗೆ ತೆರಳಿದ್ದರು. ಅಲ್ಲಿಯೇ ಅವರು ಮಗುವಿಗೆ ಜನ್ಮ ನೀಡಿದ್ದರು. ಐಪಿಎಲ್ ಕಾರಣಕ್ಕೆ ವಿರಾಟ್ ಅವರು ಭಾರತಕ್ಕೆ ಮರಳಿದ್ದಾರೆ. ಅನುಷ್ಕಾ ಶರ್ಮಾ ಇನ್ನೂ ವಿದೇಶದಲ್ಲೇ ಇದ್ದಾರೆ. ಅವರು ಶೀಘ್ರವೇ ಭಾರತಕ್ಕೆ ಮರಳಲಿದ್ದಾರೆ. ಅಷ್ಟೇ ಅಲ್ಲ ಆರ್​ಸಿಬಿ ಹಾಗೂ ವಿರಾಟ್ ಕೊಹ್ಲಿ ಚಿಯರ್​ಅಪ್ ಮಾಡಲು ಸ್ಟೇಡಿಯಂಗೂ ಬರಲಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇವರು ಮದುವೆ ಆಗಿ ಆರು ವರ್ಷಗಳು ಕಳೆಯುತ್ತಾ ಬಂದಿದೆ. ಈ ಅವಧಿಯಲ್ಲಿ ಅನೇಕ ಬಾರಿ ಪತಿಗೆ ಚಿಯರ್​​ಅಪ್ ಮಾಡಲು ಸ್ಟೇಡಿಯಂಗೆ ಅವರು ಬಂದಿದ್ದು ಇದೆ. ಮತ್ತೊಂದು ವಿಶೇಷ ಎಂದರೆ ಅನುಷ್ಕಾ ಶರ್ಮಾ ಶಿಕ್ಷಣ ಪಡೆದಿದ್ದು…

Read More

ಇಂಡಿಯಲ್ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಆದರೆ ಪಂದ್ಯ ಸೋತರು ವಿರಾಟ್ ಕೊಹ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಇನಿಂಗ್ಸ್ ಆರಂಭಿಸಿದ್ದರು. ಆರಂಭಿಕನಾಗಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 21 ರನ್ ಬಾರಿಸಿ ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ 21 ರನ್​ಗಳೊಂದಿಗೆ ಕಿಂಗ್ ಕೊಹ್ಲಿ 2 ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ… ಐಪಿಎಲ್​ ಇತಿಹಾಸದಲ್ಲೇ 2 ತಂಡಗಳ ವಿರುದ್ಧ 1 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟರ್​ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ 15 ರನ್​ಗಳಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1000 ರನ್​ ಕಲೆಹಾಕಿದ ವಿಶೇಷ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಡೆಲ್ಲಿ…

Read More

ಗೂಗಲ್ (Google) ಕಂಪನಿಯೂ ತನ್ನ ಪಿಕ್ಸೆಲ್ (Pixel) ಸ್ಮಾರ್ಟ್‌ಫೋನ್‌ಗಳನ್ನು (Smartphone) ಮುಂದಿನ ತ್ರೈಮಾಸಿಕದಿಂದ ಭಾರತದಲ್ಲಿ (India) ತಯಾರಿಸಲಿದೆ ಎಂದು ವರದಿಯಾಗಿದೆ. ಭಾರತದಲ್ಲಿ ದುಬಾರಿ ಫೋನುಗಳ ಮಾರಾಟ ಏರಿಕೆಯಾಗುತ್ತಿರುವ ಬೆನ್ನಲ್ಲೇ ಈಗ ಗೂಗಲ್‌ ಪಿಕ್ಸೆಲ್‌ ಫೋನ್‌ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ ಕಳೆದ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಭಾರತದಲ್ಲಿ ಫೋನ್‌ ಉತ್ಪಾದನೆ ಮಾಡುವ ಯೋಜನೆ ಪ್ರಕಟಿಸಿತ್ತು. ವರದಿ ಪ್ರಕಾರ ಪಿಕ್ಸೆಲ್‌ ಮಾದರಿಯಲ್ಲಿ ಹೈ ಎಂಡ್‌ ಫೋನ್‌ ಆಗಿರುವ ಪಿಕ್ಸೆಲ್‌ 8 ಪ್ರೊ ಭಾರತದಲ್ಲಿ ಉತ್ಪಾದನೆಯಾಗುವ ಮೊದಲ ಫೋನ್‌ ಎನ್ನಲಾಗುತ್ತಿದೆ ಗೂಗಲ್‌ನ ಇಂಡಿಯಾದ ಪಿಕ್ಸೆಲ್ ಫೋನ್‌ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಈ ಮೊದಲು ಚೀನಾದಲ್ಲಿ ಪಿಕ್ಸೆಲ್‌ ಫೋನ್‌ ತಯಾರಾಗುತ್ತಿತ್ತು. ಅಮೆರಿಕ (USA) ಮತ್ತು ಚೀನಾ (China) ನಡುವೆ ನಡೆಯುತ್ತಿರುವ ತಾಂತ್ರಿಕ ಯುದ್ಧದ ನಂತರ ಗೂಗಲ್‌ ವಿಯೆಟ್ನಾಂನಲ್ಲಿ ಫೋನ್‌ ತಯಾರಿಸುತ್ತಿತ್ತು. ಭಾರತದಲ್ಲಿ ತಯಾರಾಗಲಿರುವ ಫೋನುಗಳನ್ನು ದೇಶದ ಒಳಗಡೆ ಮಾರಾಟ ಮಾಡುತ್ತದೋ ಅಥವಾ ವಿದೇಶಕ್ಕೆ ರಫ್ತು ಮಾಡುತ್ತದೋ…

Read More

ಒಂದು ಕಾಲದಲ್ಲಿ ರೈತರು ಸಾವಯವ ಬೆಳೆಗಳನ್ನೇ ಬೆಳೆಯುತ್ತಿದ್ದರು. ಆದರೆ ಈಗ ಈ ಕೃಷಿ ಸಂಪೂರ್ಣ ಕಣ್ಮರೆಯಾಗಿದೆ. ಕೆಲವೆಡೆ ಮಾತ್ರ ಸಾವಯವ ಪದ್ಧತಿಯಲ್ಲಿ ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ರಾಸಾಯನಿಕಗಳನ್ನು ಬಳಸುತ್ತಿರುವ ಅನೇಕ ರೈತರು ಈ ಸಾವಯವ ಕೃಷಿಯತ್ತ ಒಲವು ತೋರುತ್ತಿಲ್ಲ. ಆದರೆ ರಾಸಾಯನಿಕಗಳಿಂದ ಬೆಳೆದ ಬೆಳೆಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ತಿನ್ನುವುದರಿಂದ ನೂರು ವರ್ಷ ಬದುಕಬೇಕಾಗಿದ್ದವನು ಐವತ್ತು ನಲವತ್ತು ವರ್ಷಗಳಲ್ಲಿ ನಾನಾ ರೋಗಗಳಿಂದ ಸಾಯುತ್ತಾನೆ. ಅದಕ್ಕಾಗಿಯೇ ಸರ್ಕಾರಗಳು ರೈತರನ್ನು ಸಾವಯವ ಕೃಷಿಯತ್ತ ಗಮನಹರಿಸುವಂತೆ ಮಾಡುವ ಯೋಜನೆಗಳನ್ನು ಕೈಗೊಳ್ಳುತ್ತಿವೆ. ಸಾವಯವ ಕೃಷಿಯಲ್ಲಿ ಯಾವುದೇ ಅಪಾಯವಿಲ್ಲ. ಬೆಳೆ ಇಳುವರಿ ಕಡಿಮೆಯಾದರೂ.. ಇದರಿಂದ ಅನೇಕ ಪ್ರಯೋಜನಗಳಿವೆ. ಹಾಗಾಗಿಯೇ ಈಗ ಮತ್ತೆ ಹಲವು ರೈತರು ಸಾವಯವ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ನಿಮಗೆ ಗೊತ್ತಾ.. ನಾವು ಖರೀದಿಸುವ ತರಕಾರಿಗಳಲ್ಲಿ ಶೇಕಡಾ 90 ರಷ್ಟು ರಾಸಾಯನಿಕಗಳು ತುಂಬಿರುತ್ತವೆ. ಇದರಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಭೂಮಿಯ ಮಣ್ಣು ಹಾನಿಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ ಈಗಿನ…

Read More

ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಪ್ರಕಟವಾದ ತಕ್ಷಣ ಹಲವು ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ ಯುಪಿಎಸ್ ಸಿ  ಪರೀಕ್ಷೆ ಕೂಡ ಒಂದು. ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯು 26 ಮೇ 2024 ರಂದು ನಡೆಯಬೇಕಿತ್ತು. ಆದರೆ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗ  ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಯು ಜೂನ್ 16, 2024 ರಂದು ನಡೆಯಲಿದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಯ ವಿವರಗಳನ್ನು upsc.gov.in ನಲ್ಲಿ ಪರಿಶೀಲಿಸಬಹುದು. ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ದೇಶದ ಅತಿದೊಡ್ಡ ಸರ್ಕಾರಿ ಉದ್ಯೋಗವನ್ನು ಸಾಧಿಸಬಹುದು. ಅದಕ್ಕಾಗಿಯೇ ಪ್ರತಿ ವರ್ಷ ಲಕ್ಷಾಂತರ ಯುವಕರು ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಯಾವುದೇ ಇತರ ಸ್ಪರ್ಧಾತ್ಮಕ ಪರೀಕ್ಷೆಯಂತೆ,  ಯುಪಿಎಸ್ ಸಿ  ಪರೀಕ್ಷೆಯ ಪರಿಷ್ಕರಣೆಯನ್ನು ಪ್ರಾರಂಭಿಸುವ ಮೊದಲು ಅದರ ಪರೀಕ್ಷೆಯ ಮಾದರಿ ಮತ್ತು ಮಾರ್ಕಿಂಗ್ ಸ್ಕೀಮ್ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ…

Read More

ಬೆಂಗಳೂರು:- ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಶಂಕಿತನ ಜಾಡು ಹಿಡಿದ ಎನ್​ಐಎ(NIA)ಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಇನ್ನೂ ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ. ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್​ಐಎಗೆ ಇದನ್ನು ತಮಿಳುನಾಡಿನ ಮಾಲ್​ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್​​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್​​ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್​ಐಎ ಅಧಿಕಾರಿಗಳು ಡಿಎನ್​​ಎ ಟೆಸ್ಟ್​ಗೆ ನೀಡಿದ್ದಾರೆ. ಇನ್ನು ಎನ್ಐಎ ತನಿಖೆ ವೇಳೆ ಆ ಇಬ್ಬರು ಕರ್ನಾಟಕದವರೆಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅವರು ಶಿವಮೊಗ್ಗೆ ಜಿಲ್ಲೆಯ ಮುಸಾವೀರ್ ಮತ್ತು ಹುಸೇನ್ ಶಬೀದ್ ಎಂಬ ಕುರಿತು ಸುಳಿವು ದೊರೆತಿದೆ. ಇವರು ಎರಡು ತಿಂಗಳು ತಮಿಳುನಾಡಿನ ಲಾಡ್ಜ್​​ನಲ್ಲಿ ಉಳಿದುಕೊಂಡಿರುವುದು ಕೂಡ ಪತ್ತೆಯಾಗಿದೆ. ಹಾಗಾದರೆ ಶಂಕಿತರಿಗೂ ತಮಿಳುನಾಡಿಗೂ ಏನು…

Read More

ಅಹಮದಾಬಾದ್‌: 16ನೇ ಐಪಿಎಲ್‌ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಪದಾರ್ಪಣೆ ಆವೃತ್ತಿಯಲ್ಲಿ (2022) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಗುಜರಾತ್‌ ಟೈಟಾನ್ಸ್‌ ತಂಡ 2023ರಲ್ಲಿ ಚೆನ್ನೈ ವಿರುದ್ಧ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. 2023ರ ಐಪಿಎಲ್‌ ಆವೃತ್ತಿಯನ್ನ ಸಮರ್ಪಕವಾಗಿ ಬಳಸಿಕೊಂಡ ಆಟಗಾರರು ಉದಯೋನ್ಮುಖ ಪ್ರತಿಭೆಗಳಾಗಿ ಬೆಳಕಿಗೆ ಬಂದರು. ಆಟಗಾರರ ಸ್ಫೋಟಕ ಪ್ರದರ್ಶನದಿಂದ ಅತಿಹೆಚ್ಚು ಬಾತಿ ತಂಡಗಳು ಇನ್ನಿಂಗ್ಸ್‌ವೊಂದರಲ್ಲಿ 200 ರನ್‌ಗಳ ಗಡಿ ದಾಟಿದ ದಾಖಲೆಯ ಆವೃತ್ತಿ ಅದಾಗಿತ್ತು. ಉತ್ತಮ ಪ್ರದರ್ಶನ ನೀಡಿದ ಆಟಗಾರರು ಲಕ್ಷ ಲಕ್ಷ ಬಾಚಿಕೊಂಡರು. ಈ ಐಪಿಎಲ್‌ ಬಳಿಕ ಯಶಸ್ವಿ ಜೈಸ್ವಾಲ್‌, ಧ್ರುವ್‌ ಜುರೆಲ್‌, ಜಿತೇಶ್‌ ಶರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸರ್ಫರಾಜ್‌ ಖಾನ್‌ ಮೊದಲಾದ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟರು. ಅಲ್ಲದೇ 2023ರ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 257 ರನ್‌ ಗಳಿಸಿ ಅತಿಹೆಚ್ಚು ರನ್‌ ಗಳಿಸಿ ಐಪಿಎಲ್‌ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಹೆಚ್ಚು ರನ್‌ ಗಳಿಸಿದ…

Read More