Author: AIN Author

ಬೆಂಗಳೂರು: 5, 8, 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್‌ 25 ರಿಂದ 28 ರ ವರೆಗೆ ಪರೀಕ್ಷೆ ನಡೆಯಲಿದೆ. ಗೃಹಜ್ಯೋತಿ ಬಳಕೆದಾರರಿಗೆ ಶಾಕ್ – 200 ಯೂನಿಟ್‌‌ಗಿಂತ ಜಾಸ್ತಿ ಬಳಸಿದ್ರೆ ಕಟ್ಬೇಕು ಫುಲ್ ಬಿಲ್! 5ನೇತರಗತಿವೇಳಾಪಟ್ಟಿ 25-03-2024- ಪರಿಸರ ಅಧ್ಯಯನ 26-03-2024- ಗಣಿತ 8ನೇತರಗತಿವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ 9ನೇತರಗತಿವೇಳಾಪಟ್ಟಿ 25-03-2024- ತೃತೀಯ ಭಾಷೆ 26-03-2024- ಗಣಿತ 27-03-2024- ವಿಜ್ಞಾನ 28-03-2024- ಸಮಾಜ ವಿಜ್ಞಾನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10ಗಂಟೆಗೆ ಪರೀಕ್ಷೆ

Read More

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಏಳು ದಿನಗಳ ಕಾಲ (ಮಾರ್ಚ್ 28 ವರೆಗೆ) ಜಾರಿ ನಿರ್ದೇಶನಾಲಯದ (ED) ವಶಕ್ಕೆ ನೀಡಲಾಗಿದೆ. ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಅರವಿಂದ್‌ ಕೇಜ್ರಿವಾಲ್‌ ಹಿಂಪಡೆದಿದ್ದರು. ಅದಾದ ಬಳಿಕ ದೆಹಲಿಯ ರೂಸ್ ಅವೆನ್ಯೂ ಕೋರ್ಟ್, ಇ.ಡಿ ವಶಕ್ಕೆ ವಹಿಸಿ ಆದೇಶ ಹೊರಡಿಸಿದೆ. ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಂದ್ರೀಯ ಸಂಸ್ಥೆ ಕೋರಿತ್ತು. https://ainlivenews.com/good-news-for-women-you-will-get-3-lakh-rupees-to-start-your-own-business-apply-today/ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಮತ್ತು ಆಮ್ ಆದ್ಮಿ ಪಕ್ಷದ ನಾಯಕನನ್ನು ಪ್ರಕರಣದಲ್ಲಿ ಬಂಧಿತ ಆರೋಪಿಗಳೊಂದಿಗೆ ವಿಚಾರಣೆಗೆ ಸಮಯ ಬೇಕಾಗುತ್ತದೆ ಎಂದು ಹೇಳಿತ್ತು. ಶುಕ್ರವಾರದ ವಿಚಾರಣೆಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಕರಣದ ಕಿಂಗ್‌ಪಿನ್‌ ಎಂದು ಇ.ಡಿ ಕರೆದಿದೆ. ಆಪಾದಿತ ಹಗರಣದ ಒಟ್ಟು ಆದಾಯವು 600 ಕೋಟಿ ಮೀರಿದೆ. ಇದರಲ್ಲಿ ‘ಸೌತ್ ಗ್ರೂಪ್’ ಪಾವತಿಸಿದ 100 ಕೋಟಿಯೂ ಸೇರಿದೆ ಎಂದು ಇ.ಡಿ ತಿಳಿಸಿದೆ.

Read More

ನೆಲಮಂಗಲ:- ಬ್ರಾಂಡೆಡ್ ಪದಾರ್ಥಗಳಿಗೆ ಅಗ್ಗದ ನಕಲಿ ರಾಸಾಯನಿಕಗಳನ್ನು ಕಲಬೆರಕೆ ಮಾಡಿ ಸುಲಭವಾಗಿ ಹಣ ಮಾಡುವ ದೊಡ್ಡ ಜಾಲವೊಂದು ಪೂಲೀಸ್ ಬಲೆಗೆ ಸಿಕ್ಕಿ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿರುವ ಅಕ್ರಮವಾದ ಗೋಡಾನ್ ನಲ್ಲಿ ಈ ಅಡ್ಡೆ ನಡೆಯುತ್ತಿತ್ತು. ಪೊಲೀಸ್ ಹಾಗೂ ಐಪಿ ಇನ್ವೆಸ್ಟಿಗೇಷನ್ ಡಿಟೆಕ್ಟಿವ್ ಸೆರ್ವಿಸ್ ಜಂಟಿ ಕಾರ್ಯಚರಣೆ ನಡೆಸಿದಾಗ ಅಕ್ರಮ ಜಾಲ ಕಂಡು ಶಾಕ್​ ಆಗಿದೆ. ಬ್ರಾಂಡೆಡ್ ಡಿಟರ್ಜೆಂಟ್ ವಸ್ತುಗಳನ್ನ ನಕಲು ಮಾಡುತ್ತಿದ್ದ ಗೋಡಾನ್ ಮೇಲೆ ದಾಳಿ ನಡೆಸಿ ಮಹೇಶ್ ಗಾಂಧಿ, ಅಶ್ವಿನ್, ನಿರ್ಮಲ್ ಎಂಬ ಮೊವರನ್ನ ದಾಳಿಯ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಬಳಿಯ ಅವಲಹಳ್ಳಿಯ ತಯಾರಕ ಘಟಕದಿಂದ ಲೋಡ್‌ಗಟ್ಟಲೇ ನಕಲಿ ಡಿಟರ್ಜೆಂಟ್ ಕೆಮಿಕಲ್ ಖರೀದಿ ಮಾಡಿ ಬ್ರಾಂಡೆಡ್ ಬಾಕ್ಸ್ ನಲ್ಲಿ ಪ್ಯಾಕ್‌ ಮಾಡುತ್ತಿದ್ದರು ಮುಂದೆ, ನಕಲಿಯಾಗಿ ಪ್ರಿಂಟ್ ಮಾಡಿದ ಬ್ರಾಂಡೆಡ್ ಲೇಬಲ್ ಬಳಸಿ ಡಿಟರ್ಜೆಂಟ್ ಬಾಟಲ್ ಗಳಲ್ಲಿ ತುಂಬಿ ನಕಲಿ ಬ್ರಾಂಡ್‌ಗಳನ್ನು ಅಸಲಿ ಬ್ರಾಂಡ್ ಆಗಿ ಕನ್ವರ್ಟ್ ಮಾಡಿ ಬೆಂಗಳೂರು ನಗರ ಸೇರಿದಂತೆ…

Read More

ಬೆಂಗಳೂರು:- ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಠಾಣೆಯಲ್ಲಿ UDR ದಾಖಲಾಗಿದೆ. ನ್ಯಾಷನಲ್ ಲಾ ಕಾಲೇಜ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿಯಿಂದ ದೂರು ದಾಖಲಾಗಿದೆ. ಹಾಸ್ಟೆಲ್ ನಿಂದ ಕ್ಲಾಸ್ ಮೇಟ್ ಗೆ ಹೇಳಿ ಧ್ರುವ ಹೊರಗೆ ಬಂದಿದ್ದಾರೆ. ಹಾಸ್ಟೆಲ್ ನಿಂದ ಹೊರಟ ಬಳಿಕ ಮುಕ್ಕಾಲು ಘಂಟೆಗೆ ಘಟನೆ ಜರುಗಿದೆ. ಇದೇ ತಿಂಗಳ ಮಾರ್ಚ್ 10 ರಂದು ಮುಂಬೈನಿಂದ ಧ್ರುವ ವಾಪಸ್ ಆಗಿದ್ದು, ಇದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ವಿದ್ಯಾರ್ಥಿ ಸ್ವಂತಃಹ ಮೆಟ್ರೋ ಹಳಿಗೆ ಬಂದು ತಲೆ ಕೊಡೋ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮೆಟ್ರೋ ಬರೋ ಸಮಯದಲ್ಲಿ ಹಳಿಗೆ ವಿದ್ಯಾರ್ಥಿ ಬಿದ್ದಿದ್ದಾನೆ. ರುಂಡಮುಂಡ ಬೇರ್ಪಟ್ಟು ಕ್ಷಣ ಮಾತ್ರದಲ್ಲಿ ವಿದ್ಯಾರ್ಥಿ ದೇಹ ಛಿದ್ರ ಛಿದ್ರವಾಗಿದೆ.

Read More

ಗದಗ:- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆ ಇಲ್ದೆ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್ ಮಾಡಿದ್ದಾರೆ. ಸಾರಿಗೆ ಬಸ್ ನಲ್ಲಿ ಮೂರು ಲಕ್ಷ ಹಣ ತಗೆದುಕೊಂಡು ವೀರಯ್ಯ ಹೊರಟಿದ್ದರು. ಆದರೆ ಸೂಕ್ತ ದಾಖಲೆ ಇಲ್ದೆ ಇಲ್ಲದ ಕಾರಣ ಹಣ ಸೀಜ್ ಮಾಡಲಾಗಿದೆ. ಪೊಲೀಸರು ಅಧಿಕಾರಿಗಳಿಂದ ಬಸ್ ಪರಿಶೀಲನೆ‌ ವೇಳೆ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ಅಮೀಷವೊಡ್ಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತದೆ. ಅಕ್ರಮದ ಮೂಲಕ ಸಂಪತ್ತು ಗಳಿಸಿದ ಶ್ರೀಮಂತರು ವಿರೋಧ ಪಕ್ಷಗಳಲ್ಲಿ ಮಾತ್ರ ಇದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಬಿಜೆಪಿ ಅವರೇ ಭ್ರಷ್ಟಾಚಾರದ ಮೂಲ ಪಿತಾಮಹರು ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಇಂದಿಗೂ ಅವರು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ 50 ಕೋಟಿ ರೂ. ಅಮಿಷವೊಡ್ಡತ್ತಿದ್ದಾರೆ. ನಿಮ್ಮ ಚುನಾವಣಾ ವೆಚ್ಚಕ್ಕೂ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಹಣದ ಭರವಸೆ ನೀಡುತ್ತಿದ್ದಾರೆ? ಅದು ಕಪ್ಪು ಹಣ ಅಲ್ಲವೇ? ಅದು ಭ್ರಷ್ಟಾಚಾರದ ಹಣವಲ್ಲವೇ? ಎಂದು ಸಿಎಂ ಕೆಂಡಕಾರಿದರು.

Read More

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ MS ಧೋನಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಅದ್ಭುತ ಫೀಲ್ಡಿಂಗ್ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಸಿಎಸ್​ಕೆ ಬೌಲರ್​ಗಳು ಆರ್​ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಕರಾರುವಾಕ್ ದಾಳಿ ಸಂಘಟಿಸಿದ ಮುಸ್ತಫಿಜುರ್ ರೆಹಮಾನ್ 4 ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ 2 ವಿಕೆಟ್​ಗಳು ವಿಕೆಟ್ ಕೀಪರ್​ ಮಹೇಂದ್ರ ಸಿಂಗ್ ಧೋನಿ ಹಿಡಿದ ಕ್ಯಾಚ್​ನಿಂದ ಮೂಡಿಬಂದಿದ್ದವು. ಇನ್ನು ಆರ್​ಸಿಬಿ ತಂಡದ ಇನಿಂಗ್ಸ್​ನ ಕೊನೆಯ ಎಸೆತದಲ್ಲಿ ಅನೂಜ್ ರಾವತ್ ಅವರನ್ನು ಮಹೇಂದ್ರ ಸಿಂಗ್ ಧೋನಿ ರನೌಟ್ ಮಾಡಿದ್ದರು. ಈ ರನೌಟ್​ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನೌಟ್ ಮಾಡಿದ ಆಟಗಾರ ಎಂಬ ದಾಖಲೆ ಧೋನಿ ಪಾಲಾಗಿದೆ ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿತ್ತು.

Read More

ಉಡುಪಿ:- ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ ಗೆಲ್ಲಿಸಬೇಡಿ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂಸದರಾದವರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್‌ ಬರದೇ ಲೋಕಸಭೆಯಲ್ಲಿ ವ್ಯವಹಾರ ಕಷ್ಟ ಸಾಧ್ಯ. ಕಚೇರಿ ವ್ಯವಹಾರಗಳಲ್ಲಿ ಸಮಸ್ಯೆಯಾಗುತ್ತದೆ. ಭಾಷಾಂತರಕಾರರಿಗೆ ಅವಕಾಶ ಇರಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೇ ಹಿಂದಿ ಅಥವಾ ಇಂಗ್ಲೀಷ್ ಬರುವುದಿಲ್ಲ. ಈ ಹಿನ್ನೆಲೆ ಯಲ್ಲಿ ಹೆಗ್ಡೆ ಅವರು ಬ್ರಹ್ಮಾವರದ ಚುನಾವಣಾ ಸಭೆಯಲ್ಲಿ ಮಾತನಾಡಿ, ಕೋಟ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ, ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲ ಎಂದು ಹೇಳಿರುವ ವೀಡಿಯೋ ವೈರಲ್ ಆಗಿದೆ. ಲೋಕಸಭೆಯಲ್ಲಿ ಈ ಹಿಂದೆ ನಾನು ಕನ್ನಡದಲ್ಲಿ ಭಾಷಣ ಮಾಡುತ್ತೇನೆ ಎಂದು ಹೇಳಿದೆ, ಆಗ ಯಾರು ನಿಮ್ಮ ಕನ್ನಡ ಭಾಷಣವನ್ನು ಕೇಳುವುದಿಲ್ಲ, ಹಿಂದಿ ಅಥವಾ ಇಂಗ್ಲಿಷಿನಲ್ಲಿ ಮಾತನಾಡಿದರೆ ಸಂಸದರು ಕೇಳುತ್ತಾರೆ ಎಂದು…

Read More

ತುಮಕೂರು:- ಮಾಧುಸ್ವಾಮಿ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾಧುಸ್ವಾಮಿ ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ, ಸೋಮಣ್ಣ ಪರ ಕೆಲಸ ಮಾಡೋದು ಮಾಧುಸ್ವಾಮಿಗೆ ಬಿಟ್ಟಿರೋದು, ಲೋಕಸಭಾ ಚುನಾವಣೆಯ ಪ್ರಚಾರದ ಬಗ್ಗೆ ಚರ್ಚೆಯಾಗಿಲ್ಲ ಎಂದಿದ್ದಾರೆ. ಇನ್ನೂ ಲೋಕಸಭಾ ಚುನಾವಣೆಗೆ ತುಮಕೂರಿನಿಂದ ಬಿಜೆಪಿ ಟಿಕೆಟ್​ ಆಕಾಂಕ್ಷಿ ಆಗಿದ್ದ ಮಾಧುಸ್ವಾಮಿಗೆ ನೀಡದೇ ವಿ.ಸೋಮಣ್ಣ ಅವರಿಗೆ ಟಿಕೆಟ್​ ನೀಡಿರುವುದರಿಂದ ಮಾಧುಸ್ವಾಮಿ, ಸೋಮಣ್ಣ ಮೇಲೆ ಮುನಿಸಿಕೊಂಡಿದ್ದಾರೆ. ಈ ಹಿನ್ನಲೆ ಇದನ್ನು ಇವರಿಬ್ಬರ ನಡುವಿನ ಅಸಮಧಾನ ತಣ್ಣಗಾಗಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬಂದು ಮಾತುಕತೆ ನಡೆಸಿದ್ದಾರೆ

Read More

ಚಿನ್ನದ ಬೆಲೆ ಈಗ ಬಡವರಿಗೆ ನಿಲುಕದ ನಕ್ಷತ್ರವಾಗಿದೆ. ಗ್ರಾಂಗೆ 6 ಸಾವಿರಕ್ಕೂ ಹೆಚ್ಚು ಬೆಲೆ ಆಗಿದೆ. ಮಾರ್ಚ್‌ 20 ರಂದು ಏರಿಕೆ ಆಗಿದ್ದ ಚಿನ್ನ, ಮಾರ್ಚ್‌ 21ರಂದು ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಮಾರ್ಚ್‌ 22 ರಂದು ಮತ್ತೆ ಏರಿಕೆ ಆಗಿತ್ತು. ಇಂದು ಚಿನ್ನದ ಬೆಳೆ ಇಳಿದಿದ್ದರೂ ಆಭರಣಪ್ರಿಯರಿಗೆ ಭಾರೀ ನಿರಾಸೆಯುಂಟು ಮಾಡಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ ಚಿನ್ನದ ಬೆಲೆ ನಿನ್ನೆಗಿಂತ ಇಂದು 1 ರೂ. ಮಾತ್ರ ಇಳಿದಿದೆ. ಅದರ ಪ್ರಕಾರ ಇಂದು 1 ಗ್ರಾಂ ಚಿನ್ನದ ಬೆಲೆ 6,134 ರೂ ಆಗಿದೆ. ನಿನ್ನೆ ಇದರ ಬೆಲೆ 6,135 ರೂ ಇತ್ತು. 8 ಗ್ರಾಮ ಚಿನ್ನಕ್ಕೆ ಇಂದು 49,072 ರೂ. 10 ಗ್ರಾಂ ಚಿನ್ನಕ್ಕೆ 61,340 ರೂ. 100 ಗ್ರಾಂ ಚಿನ್ನಕ್ಕೆ 6,13,400 ರೂ ಬೆಲೆ ಇದೆ. 24 ಕ್ಯಾರೆಟ್‌ ಚಿನ್ನದ ಬೆಲೆ 24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,692 ರೂ. 8 ಗ್ರಾಂಗೆ 53,536 ರೂ. 10…

Read More