Author: AIN Author

ಬೆಂಗಳೂರು: ಗುರುವಾರ ಅತ್ತಿಗುಪ್ಪೆ ಗ್ರೀನ್ ಮೆಟ್ರೋ ಲೇನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಕೊನೆ ಕ್ಷಣದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟ್ರೈನ್ ಬರೋದನ್ನೆ ಕಾಯುತ್ತಿದ್ದ ಧೃವ್ ಥಕ್ಕರ್ ಸೀದಾ ಹಳೆ ಮೇಲೆ ಇಳಿದು ಹಳಿ ಮೇಲೆ ತಲೆ ಇಟ್ಟು ಮಕಗುತ್ತಾನೆ. ಎದರುಗಡೆಯಿಂದ ಒಬ್ಬ ವ್ಯಕ್ತಿ ನೋಡಿ ಕೂಗಿಕೊಳ್ಳುತ್ತಾನೆ. ಆದ್ರೆ ಟ್ರೈನ್ ಬಂದು ಸೀದಾ ಯುವಕ‌ ಕುತ್ತಿಗೆ ಮೇಲೆ ಹರಿದು ಬಿಡುತ್ತೆ. ಈ ಘೋರ ದೃಶ್ಯ ಮೆಟ್ರೋ ನಿಲ್ದಾಣ ಸಿಸಿಡಿವಿಯಲ್ಲಿ ಸೆರೆಯಾಗಿದೆ. ಹೊರಗಡೆ ಹೋಗಿ ಬರ್ತಿನಿ ಅಂತ ಸ್ನೇಹಿತನಿಗೆ ಹೇಳಿ ಬಂದಿದ್ದ ಧೃವ್ ಕಿನ್ನತೆಯಿಂದ ಈ ರೀತಿ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Read More

ಬೆಂಗಳೂರು:  ಕೋಲಾರ ಸೀಟು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಅಧಿಕೃತವಾಗಿ ರಾಧಾ ಮೋಹನ್ ದಾಸ್ ಅಗರವಾಲ್ ಘೋಷಣೆ ಮಾಡಿದ್ದಾರೆ. BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ! ಈ ಸಂಬಂಧ ಇಂದು ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ (Radha Mohandas Agarwal) ಘೋಷಣೆ ಮಾಡಿದ್ದಾರೆ. ಕೋಲಾರ ಸೀಟು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದೇವೆ. ಈ ಮೂಲಕ ಜೆಡಿಎಸ್‍ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಗಾಗಿ ಕೆಲಸ ಮಾಡಿ ನಿಮ್ಮ ವಯಕ್ತಿಕ ಮುನಿಸು ಏನೇ ಇದ್ರೂ ಬಿಟ್ಟುಬಿಡಿ.ಬಿಜೆಪಿಯ 25 ಅಭ್ಯರ್ಥಿಗಳ ಆಯ್ಕೆ ಮಾಡಿದೆ ಜೆಡಿಎಸ್‌ಗೆ ಮೂರು ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ. ಅಭ್ಯರ್ಥಿ ಯಾರಾಗಾಬೇಕು ಅಂತ ನಾವು ಹಸ್ತಕ್ಷೇಪ ಮಾಡಿಲ್ಲ ಆದ್ರೆ ಒಟ್ಟಾಗಿ ಎಲ್ಲಾರು ಕೆಲಸ ಮಾಡಿ ಎಂದು ಹೇಳಿದ್ದರು.

Read More

ಬೆಂಗಳೂರು: ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲಇದನ್ನು ಹೇಳಲು ಸಂಕೋಚವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. ಇದಕ್ಕೆ‌ ಮೋದಿ ಅವರ ಜನಪ್ರಿಯತೆ ಕಾರಣ.ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದ್ರೆ ಚುನಾವಣೆಗೆ ಸಚಿವರನ್ನೇ ಕಣಕ್ಕಿಳಿಸಲು ನಿರ್ಧರಿಸಿದರು. ಈ ಮೂಲಕ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಕನಸು ಇತ್ತು. ಆದ್ರೆ,  BJP ಅಲೆ ಇದೆ, ಸ್ಪರ್ಧಿಸಿದ್ರೆ ಸೋಲ್ತೇವೆಂದು ಸತ್ಯಾಂಶ ಗೊತ್ತಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ! ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಗಳನ್ನ ಗೆಲ್ಲಿಸ್ತೇವೆ.ಎಲ್ಲವೂ ಶಾಂತಿಯುತವಾಗಲಿದೆ. ಎಲ್ಲಾ ಸಮಸ್ಯೆ ಶಮನವಾಗಲಿದೆ, ತಿಳಿಯಾಗಲಿದೆ. ಎಲ್ಲಾ 28 ಕ್ಷೇತ್ರದಲ್ಲಿ ಮೋದಿ ಪರವಾದ ಅಲೆ ಇದೆ. ಕರ್ನಾಟಕದಲ್ಲಿ ಸುಭದ್ರವಾಗಿದೆ ಅಂತ ತಿಳಿಸಬೇಕಿದೆ. ನಮ್ಮ ಮುಂದೆ ಎರಡು ಗುರಿ ಇದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲೆಡೆ ವಿಜಯಪತಾಕೆ…

Read More

ಚೆನ್ನೈ: ನನ್ನ ಜೆರ್ಸಿ ಸಂಖ್ಯೆ 17 (Jersey No.17), ಇದು 17ನೇ ಆವೃತ್ತಿ. ಖಂಡಿತಾ ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್‌ (AB De Villiers) ಭವಿಷ್ಯ ನುಡಿದರು. ಐಪಿಎಲ್‌ (IPL 2024) ಉದ್ಘಾಟನೆ ವೇಳೆ ಪ್ರಿಡಿಕ್ಷನ್‌ ಬಾಕ್ಸ್‌ನಲ್ಲಿ ಮಾತನಾಡಿದ ಎಬಿಡಿ, ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದರು ಧೋನಿ ದೊಡ್ಡ ತಪ್ಪು ಮಾಡಿದ್ರು: ಮುಂದುವರಿದು ಮಾತನಾಡಿದ ಎಬಿಡಿ, ನಾನು ಪ್ರಾಮಾಣಿಕವಾಗಿ ಹೇಳ್ತೀನಿ, ಎಂ.ಎಸ್‌ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿದು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಎಚ್ಚರಿಸಿದರು. 2024ರ ಐಪಿಎಲ್‌ ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದು, ಋತುರಾಜ್‌ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದರು. 2019ರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿರುವ ಋತುರಾಜ್‌ ಗಾಯಕ್ವಾಡ್ 52‌ ಪಂದ್ಯಗಳು 51 ಇನ್ನಿಂಗ್ಸ್‌ಗಳಲ್ಲಿ 1,797 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು…

Read More

ಗದಗ: ಗದಗ ತಾಲೂಕಿನ ಹಂಗನಕಟ್ಟಿ ಗ್ರಾಮದಲ್ಲಿ ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸ್ಥಿತಿ ಕಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಹಂಗನಕಟ್ಟಿ ಗ್ರಾಮ ಒಂದರಲ್ಲೇ 4 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ತೀವ್ರ ಜ್ವರ, ವಾಂತಿಯಿಂದ 18ಕ್ಕೂ ಹೆಚ್ಚು ಮಕ್ಕಳು ಬಳಲುತ್ತಿದ್ದಾರೆ. ಜ್ವರದಿಂದ ಬಳಲುತ್ತಿರೋ ಮಕ್ಕಳ ಸಂಖ್ಯೆ ನಿತ್ಯವೂ ಏರುತ್ತಿದೆ. ಗದಗ ಜಿಮ್ಸ್ ಆಸ್ಪತ್ರೆಯ NICU ಸೇರಿದಂತೆ ನಗರದ ವಿವಿಧ ಖಾಸಗಿ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಂಗನಕಟ್ಟಿ ಗ್ರಾಮದಲ್ಲಿ ಡೆಂಗ್ಯೂ ಹೆಚ್ಚಾದರೂ ಆರೋಗ್ಯ ಇಲಾಖೆ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಏನೂ ತಿಳಿಯದಂತೆ ಕಣ್ಮುಚ್ಚಿ ಕುಳಿತಿದೆ. ಬಹುತೇಕ ಮನೆಗಳಲ್ಲಿ ಮಕ್ಕಳು ಜ್ವರದಿಂದ ಬಳಲುತ್ತಿರುವುದು ಕಂಡು ಬಂದಿದೆ. ಇಷ್ಟಾದ್ರೂ ಆರೋಗ್ಯ ಇಲಾಖೆ  ದಿವ್ಯ ನಿರ್ಲಕ್ಷ್ಯವಹಿಸಿದೆ. ಡೆಂಗ್ಯೂ ಹೆಚ್ಚಾಗುತ್ತಿರುವ ಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುವಂತೆ ಒತ್ತಾಯ ಕೇಳಿ…

Read More

ಬೆಂಗಳೂರು: ದೋಸ್ತಿಗಳಿಗೆ ಕಗ್ಗಂಟಾಗಿದ್ದ ಕೋಲಾರ ಕ್ಷೇತ್ರವನ್ನು (Kolar Constituency) ಕೊನೆಗೂ ಬಿಜೆಪಿಯು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಈ ಸಂಬಂಧ ಇಂದು ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ (Radha Mohandas Agarwal) ಘೋಷಣೆ ಮಾಡಿದ್ದಾರೆ. ಕೋಲಾರ ಸೀಟು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದೇವೆ. ಈ ಮೂಲಕ ಜೆಡಿಎಸ್‍ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ! ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡಿ. ಕೋಲಾರ, ಹಾಸನ, ಮಂಡ್ಯ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ. ನಿಮಗೆ ಕೈ ಮುಗಿದು ಕೇಳಿಕೊಳ್ತೀನಿ. ಪ್ರಧಾನಿ ಮೋದಿಗಾಗಿ (Narendra Modi) ಕೆಲಸ ಮಾಡಿ. ಮೂರು ಕ್ಷೇತ್ರದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ. ನಿಮ್ಮ ವೈಯಕ್ತಿಕ ಮುನಿಸು ಏನೇ ಇದ್ರೂ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಬಿಜೆಪಿ 25 ಅಭ್ಯರ್ಥಿಗಳ…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಬಸವೇಶ್ವರ ಶಿಕ್ಷಣ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ 32 ಶಿಕ್ಷಕರಿಗೆ ಆರತಿ ಬೆಳಗಿ ಪಾದಗಳಿಗೆ ನಮಸ್ಕಾರ ಮಾಡಿ ಹೂ ಹಾಕುವ ಮುಖಾಂತರ ಸಂಸ್ಥೆಯ ಕಾರ್ಯಾಧ್ಯಕ್ಷ ಬಸವರಾಜ ಕನಬೋಳ ರವರಿಂದ ಗೌರವ ಸಲ್ಲಿಸಿದ ಸನ್ನಿವೇಶ ನಡೆದಿದೆ. ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 1025 ವಿದ್ಯಾರ್ಥಿಗಳಿದ್ದು ಅದರಲ್ಲಿ 32 ಶಿಕ್ಷಕರು ಸುಮಾರು ಒಂದು ವರ್ಷದಿಂದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡುವುದರ ಮುಖಾಂತರ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ. ಹಾಗಾಗಿ ಶಿಕ್ಷಕರಿಗೆ ನಾವು ಗೌರವ ಕೊಡುವುದು ನಮ್ಮ ಜವಾಬ್ದಾರಿ ಹಾಗಾಗಿ ನಮ್ಮ 32 ಶಿಕ್ಷಕರಿಗೆ ಹೂ ಹಾಕುವುದರ ಮುಖಾಂತರ ಮತ್ತು ಆರತಿ ಬೆಳಗಿ ಪಾದಗಳಿಗೆ ನಮಸ್ಕಾರ ಮಾಡಿ ಅವರಿಗೆ ಗೌರವವನ್ನು ಸಲ್ಲಿಸಿದ್ದೇವೆ ಎಂದರು. ಪ್ರಕಾಶ ಕುಂಬಾರ  ಬಾಗಲಕೋಟೆ

Read More

ಗದಗ: ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವೆಂದೇ ಪ್ರಸಿದ್ಧ ಪಡೆದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೋಗನೂರು ಗ್ರಾಮಸ್ಥರು ಪ್ರಸ್ತುತ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ನ್ಯಾಯ ಸಿಕ್ಕಿಲ್ಲ ಮತ ಹಾಕಲ್ಲ, ಯಾವುದೇ ಸಂಧಾನಕ್ಕೆ ಅವಕಾಶ ಇಲ್ಲ, ನಮ್ಮ ಗ್ರಾಮದ ಅಭಿವೃಧ್ಧಿ ನಮ್ಮ ಹಕ್ಕು ಅಂತಾ ಪ್ರತಿಭಟನೆ ಮಾಡಿದ್ದಾರೆ. ಗ್ರಾಮದ ಸರ್ವೆ ನಂ. 1 ಮತ್ತು 2 ರ ಈ ಸ್ವತ್ತು ನಮೂನೆ 9 ಹಾಗೂ 11ಎ ಗ್ರಾಮಠಾಣಾವನ್ನಾಗಿ ಪರಿವರ್ತಿಸಿ ಹೊಸ ಗಾವಠಾಣಾ ಗುರುತಿಸಿ ಸಮಸ್ಯೆಯನ್ನು ಬಗೆಹರಿಸಲು ಆಗ್ರಹಿಸಿದ್ದಾರೆ. ಈ ಹಿಂದೆ ಹಲವಾರು ಬಾರಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಆದ್ರೆ ಪರಿಹಾರ ಮಾತ್ರ ಸಿಕ್ಕಿಲ್ಲ ಅಂತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಜೊತೆಗೆ ಗ್ರಾಮದ ಇತರೆ ಸಮಸ್ಯೆಗಳಾದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ರಿಪೇರಿ, ಸರಿಯಾದ ಸಾರಿಗೆ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿದ್ದಾರೆ. ಇಲ್ಲವಾದ್ರೆ ಗ್ರಾಮಸ್ಥರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ.

Read More

ಬೆಂಗಳೂರು: ಮಾ.24, 29 ಮತ್ತು ಏ.2 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ (IPL 2024) ಮ್ಯಾಚ್ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗಾಗಿ ಬಿಎಂಆರ್‌ಸಿಎಲ್ (BMRCL) ಮೆಟ್ರೋ‌ (NammaMetro) ಅವಧಿ ವಿಸ್ತರಣೆ ಮಾಡಿದೆ. ಎಲ್ಲಾ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11:30 ಕ್ಕೆ ವಿಸ್ತರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ! ಮೂರು ಪಂದ್ಯಗಳ ದಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‍ಗಳು 50 ರೂ.ಗೆ ಖರೀದಿಸಬಹುದು. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು, ರಾತ್ರಿ 8 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ. ಬದಲಾಗಿ ಎಂದಿನಂತೆ, ಕ್ಯೂಆರ್ ಕೋಡ್ ಟಿಕೆಟ್‍ಗಳು, ಸ್ಮಾರ್ಟ್ ಕಾರ್ಡ್‌ಗಳನ್ನು…

Read More

ಗಂಗಾವತಿ : ನಗರದ ಹೃದಯ ಭಾಗವಾದ ಗುಂಡಮ್ಮಕ್ಯಾಂಪ್ ನಲ್ಲಿ ಜನ ವಸತಿ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಖಾಸಗಿ ಗ್ಯಾಸ್ ಕಂಪನಿಯು ಗೋದಾಮು ಮಾಡಿಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಸಾವಿರಾರು ಸಿಲಿಂಡರ್ ಗಳನ್ನು ಅಕ್ರಮ ದಾಸ್ತಾನು ಮಾಡುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾದರು ಕ್ಯಾರೆ ಎನ್ನದ ಜಿಲ್ಲಾಡಳಿತ ಎಂದು ಅರೋಪ ಕೇಳಿ ಬಂದಿದೆ. ಈ ವಿಷಯಕ್ಕೆ ಸ್ಪಂದಿಸಿದ ನಗರಸಭೆ ಪೌರಾಯುಕ್ತರು ತಕ್ಷಣವೇ ಕ್ರಮ ಕೈಗೊಂಡು ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ತೆರವುಗೊಳಿಸಲು ಖಡಕ್ ಆದೇಶ ನೀಡಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ. ವಾಸ್ತವದಲ್ಲಿ ಜನವಸತಿ ಪ್ರದೇಶದಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ದಾಸ್ತಾನು ಮಾಡುವಂತಿಲ್ಲ. ಆಕಸ್ಮಿಕ ಏನಾದರೂ ಬೆಂಕಿ ಅವಘಡ ಸಂಭವಿಸಿದರೆ ಅಪಾರ ಪ್ರಮಾಣ ಸಾವು ನೋವು ಜೀವ ಹಾನಿಯುಂಟಾಗಲಿದೆ. ಸಂಬಂಧಿತ ಆಹಾರ ಮತ್ತು ಸರಬರಾಜು ಇಲಾಖೆಗೆ ಈ ವಿಷಯ ಗಮನಕ್ಕೆ ಬಂದರೂ ಅಧಿಕಾರಿಗಳು ಗ್ಯಾಸ್ ಕಂಪನಿಯವರ ಜೊತೆ ಶಾಮೀಲು ಆಗಿರುವ ಅನುಮಾನ ಗಳು ಎದ್ದು ಕಾಣುತ್ತಿವೆ. ಈ ಗೋದಾಮು ತೆರವುಗೊಳಿಸಲು ಸ್ಥಳೀಯರು ಹಾಗು ಬಿಜೆಪಿ ಮುಖಂಡ…

Read More