Author: AIN Author

ನಿತ್ಯ ಸೌತೆಕಾಯಿ ಜ್ಯೂಸ್ ಸೇವಿಸುತ್ತಾ ಬಂದರೆ ದೇಹಕ್ಕೆ ಹಲವು ಪ್ರಯೋಜನ ಸಿಗಲಿದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟಲು ಮತ್ತು ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಎ ದೃಷ್ಟಿ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿಗೆ ಸಹಾಯ ಮಾಡುವಂತಹ ಅನೇಕ ಕೆಲಸಗಳನ್ನು ಮಾಡುತ್ತದೆ. ಇದು ನಿಮ್ಮ ಹೃದಯ, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳಂತಹ ಅಂಗಗಳ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಲಿಗ್ನಾನ್ಸ್ ಆಸ್ಟಿಯೊಪೊರೋಸಿಸ್, ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್​ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ನಿಮ್ಮ ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಜೋಡಿಯಾಗದ ಎಲೆಕ್ಟ್ರಾನ್‌ಗಳು ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ರೋಗಕ್ಕೆ ಕಾರಣವಾಗಬಹುದು. ಪ್ರತಿದಿನ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದಾಗುವ 5 ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಜಲಸಂಚಯನ: ಸೌತೆಕಾಯಿ ಜ್ಯೂಸ್ ಕುಡಿಯುವುದು ದಿನವಿಡೀ ಹೈಡ್ರೇಟೆಡ್ ಆಗಿರಲು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ನೀರಿನ ಅಂಶದಿಂದಾಗಿ ಇದು ದೇಹದ ದ್ರವ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.…

Read More

ಬೆಂಗಳೂರು:- ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅರವಿಂದ್ ಬೆಲ್ಲದ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ಮ ಅಬಕಾರಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಆದರೂ ಈ ವರ್ಷ 18 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಆಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಬೋರ್​​ವೆಲ್ ಕೊರೆಸಲು ಇವರ ಬಳಿ ಹಣವಿಲ್ಲ. ಈಗ ನೀರಿಲ್ಲ ಹೀಗಾಗಿ ಈ ಎಲ್ಲಾ ನಾಟಕ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ಬಿಟ್ಟು ಸರಿಯಾಗಿ ಆಡಳಿತ ಮಾಡಲಿ. ಈ ಎಲ್ಲಾ ನಾಟಕ ಬೇಡ ಎಂದು ಕಿಡಿಕಾರಿದ್ದಾರೆ.

Read More

ಶಿವಮೊಗ್ಗ:- ನಗರದ ಕೆಎಸ್​​​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕರ್ತವ್ಯ ನಿರತ ಚಾಲಕ-ಕಂ-ನಿರ್ವಾಹಕ ಬಸ್ಸಿನಲ್ಲಿಯೇ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಬಸವರಾಜು ಟಿ.ವಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಎನ್ನಲಾಗಿದೆ. ಬಸವರಾಜು ಟಿ.ವಿ ಶಿವಮೊಗ್ಗ ವಿಭಾಗದ ಹೊನ್ನಾಳಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಘಟಕದಲ್ಲಿ ಕೆ.ರೇಣುಕಾ ಎಂಬುವರು ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವಿಚಾರ ಮೇಲಿನ ಅಧಿಕಾರಿಗಳಿಗೂ ತಿಳಿದಿದೆ. ಮೇಲಿನ ಅಧಿಕಾರಿಗಳ ಬೆಂಬಲದೊಂದಿಗೆ ಕೆ. ರೇಣುಕಾ ಅವರು ಬಸವರಾಜು ಟಿ.ವಿ ಮತ್ತು ಮತ್ತೋರ್ವ ಚಾಲಕ ಸಿ. ಮಹೇಶ್ವರ ವಿರುದ್ಧ ಹೊನ್ನಾಳಿ ಪೋಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ಎಫ್​ಐಆರ್​​ ದಾಖಲಾಗುತ್ತಿದ್ದಂತೆ ಬಸವರಾಜು ಟಿ.ವಿ ​ಶಿವಮೊಗ್ಗ ವಿಭಾಗೀಯ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಶಿವಮೊಗ್ಗ ವಿಭಾಗದ ಅಧಿಕಾರಿಗಳು ಚಾಲಕ ಬಸವರಾಜು ಅವರಿಗೆ ಸ್ಪಂದಿಸಿಲ್ಲ. ಇದರಿಂದ ನೊಂದ ಬಸವರಾಜು ಟಿ.ವಿ…

Read More

ಬೆಂಗಳೂರು:-ಸೋನಿಯಾ ಗಾಂಧಿಯ ತೇಜೋವಧೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿಬಿಜೆಪಿ ಐಟಿ ಸೆಲ್ ಮುಖಂಡ ಜಯಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ ಕಲಾಸಿಪಾಳ್ಯ ವಿನೋಬನಗರ ನಿವಾಸಿಯಾಗಿರುವ ಜಯಕಾಂತ ಶೆಟ್ಟಿ ಎಂಬುವರು, ಕಾಂಗ್ರೇಸ್‌ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾದ್ದು, ಮತ್ತು ಮುಸಲ್ಮಾನರು ನಮ್ಮ ದೇಶದವರಲ್ಲ, ಸೋನಿಯಾ ಗಾಂಧಿಯವರಿಂದಲೇ ಶ್ರೀಲಂಕದಲ್ಲಿ ಎರಡು ಕೋಟಿ ಜನ ಮರಣ ಹೊಂದಿದ್ದಾರೆ ಎಂದು ಮಾತನಾಡಿದ್ದಾರೆ. ಹಿಂದೂ ಮುಸ್ಲಿಮರಲ್ಲಿ ಘರ್ಷಣೆ ಉಂಟು ಮಾಡಲು ಪ್ರಯತ್ನಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೆ, ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿ ಮತ್ತು ಚುನಾವಣೆಯ ಲಾಭ ಪಡೆದುಕೊಳ್ಳುವ ಸಲುವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಜಯಕಾಂತ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್​ ಕಾರ್ಯಕರ್ತರು ದೂರು ನೀಡಿದ್ದಾರೆ.

Read More

ಅಥಣಿ : ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಂತೆ ಇರುವ ನಾಲೈದು ಅಂಗಡಿಗಳಲ್ಲಿ ರಾತ್ರಿ ವೇಳೆ ಕಳ್ಳನೊಬ್ಬ ಕಳ್ಳತನದ ಕಲೆ ಪ್ರದರ್ಶಿಸಿ ಲಕ್ಷಾಂತರ ರೂಪಾಯಿ ದೋಚಿರುವ ಪ್ರಸಂಗ ಜರುಗಿದೆ. ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡ ಬ್ರಹ್ಮಾ ಎಂಟ‌ರ್ ಪೈಸಸ್, ಪಕ್ಕದ ಆಟೋ ಮೊಬೈಲ್ ಅಂಗಡಿ, ಕಿರಾಣಿ ಅಂಗಡಿ ಸೇರಿ ಇತರೆಡೆ ಅಂಗಡಿಗಳ ಪತ್ರಾಸು ಮುರಿದು ಒಳ ಪ್ರವೇಶಿಸಿ ಹಣ ಕದಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಅಂಗಡಿಕಾರರು ಅಥಣಿ ಪೊಲೀಸರ ಗಮನಕ್ಕೆ ತಂದರೂ ಕೂಡ ಪೊಲೀಸ್ ಇಲಾಖೆಯವರು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಓರ್ವ ಅಂಗಡಿಕಾರ ಅಸಮಾಧಾನ ಹೊರಹಾಕಿದ್ದಾನೆ. ಕೂಡಲೇ ಪೊಲೀಸರು ಕಳ್ಳನನ್ನ ಪತ್ತೆ ಹಚ್ಚಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Read More

ನೆಲಮಂಗಲ: ಆ ಊರಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ , ಅ ಜಾತ್ರೆಯ ಶನಿಮಹಾತ್ಮ ಜಾತ್ರೆಯಾಗಿದ್ದು ಅಲ್ಲಿನ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಲ್ಲಿ ಅಂತಿರಾ ಅ ದೇವಸ್ಥಾನ ಈ ಸ್ಟೋರಿ ನೋಡಿ . ದೇವಾಲಯದಲ್ಲಿ ಬಗೆ ಬಗೆಯ ಹೂಗಳಿಂದ ಅಲಂಕಾರ, ಕಂಗೊಳಿಸುತ್ತಿರುವ ಶನಿಮಹಾತ್ಮ ವಿಗ್ರಹ, ಆರತಿ ಹೊತ್ತು ಸಾಗುತ್ತಿರುವ ಮಹಿಳೆಯರು, ಭಕ್ತಿಯ ಪರಾಕರ್ಶೆಯಲ್ಲಿ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಿರಿವ ಭಕ್ತರು, ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಉತ್ತರ ತಾಲೂಕು ಕೆಂಗನಹಳ್ಳಿ ಗ್ರಾಮದಲ್ಲಿ. ಹೌದು ಕೆಂಗನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಶಕೊಮ್ಮೆ ಶನಿದೇವರ ಜಾತ್ರೆಯನ್ನು ಮಾಡುತ್ತಾರೆ . ದೇವಸ್ಥಾನಕ್ಕೆ ದೀಪಾಲಂಕಾರ ಮಾಡಿ ಜಾತ್ರೆಗೆ ಮೆರಗು ತಂದಿದ್ದರು. ಹೌದು ಕೆಂಗನಹಳ್ಳಿಯಲ್ಲಿ ಆದಿ ಶಕ್ತಿ ಮಾರಮ್ಮ, ಚನ್ನಕೇಶವ, ಅಂಚನೇಯ ಸ್ವಾಮಿ ದೇವರ ಅದ್ದೂರಿ ಜಾತ್ರೆ ನಡೆಯುತ್ತದೆ ಅದರಲ್ಲಿ ವಿಶೇಷವಾಗಿ ಪ್ರತಿ ವರ್ಷ ಶನಿಮಹಾತ್ಮ ದೇವರ ಜಾತ್ರ ಮಹೋತ್ಸವ ಜರುಗಿತು. ವಿಶೇಷವಾಗಿ ಶನಿಮಹಾತ್ಮ ದೇವರ ಅತ್ತಿರ ಬಂದು ಇಲ್ಲಿ ಬೇಡಿಕೊಂಡರೆ ಸಂತಾನ‌ ಭಾಗ್ಯ ಕರುಣಿಸೋ…

Read More

ನವದೆಹಲಿ: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಹಾಲಿ ಸಂಸದ ಎಸ್ ಮುನಿಸ್ವಾಮಿ  ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಹೈಕಮಾಂಡ್ ನಾಯಕರ ನಿರ್ಧಾರವನ್ನು ನಾನು ಒಪ್ಪಲೇಬೇಕಿದೆ. ಅನೇಕ ನಾಯಕರು ಪಕ್ಷಕ್ಕೆ ತ್ಯಾಗ ಮಾಡಿದ್ದಾರೆ. https://ainlivenews.com/good-news-for-women-you-will-get-3-lakh-rupees-to-start-your-own-business-apply-today/  ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕು. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿದೆ. ನನ್ನನ್ನು ಏನು ಮಾಡಬೇಕೆಂದು ಪಕ್ಷ ನಿರ್ಧಾರ ಮಾಡಲಿದೆ. ಕೋಲಾರದ ಸದ್ಯದ ಪರಿಸ್ಥಿತಿಯನ್ನು ದೇವೇಗೌಡರಿಗೆ ವಿವರಿಸಿದ್ದೇನೆ. ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚು ಪ್ರಚಾರ ನಾನು ಮಾಡುತ್ತೇನೆ ಎಂದುಮುನಿಸ್ವಾಮಿ ತಿಳಿಸಿದ್ದಾರೆ.

Read More

ಅದೆಷ್ಟೋ ಯುವಕ ಯುವತಿಯರು ಹತ್ತನೇ ತರಗತಿ ಫೇಲಾದರೆ ಸಾಕು. ಪುನಃ ಹತ್ತನೇ ತರಗತಿ ಪರೀಕ್ಷೆ ಬರೆದು ಪಾಸಾಗುವ ಹಂಬಲ ಅವರಲ್ಲಿ ಕುಗ್ಗಿ ಹೋಗಿರುತ್ತೆ. ಇಂತಹ ಸಂದರ್ಭದಲ್ಲಿ ಕಲಿಕೆಗೆ ವಯಸ್ಸಿಲ್ಲ ಎಂಬುದನ್ನು ಸಾಬೀತು ಪಡಿಸಲು ಸಜ್ಜಾಗಿರುವ ಮಹಿಳೆ ಪ್ರಸಕ್ತ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯನ್ನ ಮಗನ ಜೊತೆ ಬರೆಯಲು ಸಜ್ಜಾಗಿರುವುದು ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಅಷ್ಟಕ್ಕೂ ಆ ತಾಯಿ ಮಗ ಯಾವ ಊರಿನವರು ಅಂತೀರಾ ಈ ಸ್ಟೋರಿ ನೋಡಿ.. ಹೌದು ಕಲಿಕೆಗೆ ಅಡ್ಡಿಯಾದ ಬಡತನ  ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಾಲತೇಶ ಸೋಮಪ್ಪ ಹೊನ್ನತ್ತಿ ಈತ ಈಗ ಸದ್ಯ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜಾಗಿದ್ದಾನೆ. ಈತನ ತಾಯಿ ಪುಷ್ಪಾವತಿ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ 1999 ನೇ ಇಸ್ವಿಯಲ್ಲಿ ಪಾಸಾಗಿದ್ದಳು. ಆದರೆ ಮನೆಯಲ್ಲಿ ಬಡತನ ಇದ್ದಕಾರಣ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಲಿಲ್ಲ. 2007…

Read More

ರಾಮನಗರ: ರಾಜಕೀಯಕ್ಕೆ ಬರುತ್ತೇನೆ ಎಂದು ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಹೇಳಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯಕ್ಕೆ ಬರುತ್ತೇನೆ ಎಂದು ಕನಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ. ಜೆಡಿಎಸ್ ಸಂವಾದ ನೋಡಿದರೆ ನಾನೂ ಕೂಡ ಕಾರ್ಯಕರ್ತನಾಗಿರಬೇಕು ಎನಿಸುತ್ತಿದೆ. ನಿಮ್ಮ ಸ್ವಾಭಿಮಾನಕ್ಕೆ ದೊಡ್ಡ ಸಲಾಂ. ಮನಸ್ಸು ನಿರ್ಮಲವಾಗಿದ್ದರೆ, ಮಾತು ಮೃದವಾಗಿದ್ದರೇ ಚಮತ್ಕಾರ. ನಾವು ಏನು ಬಟ್ಟೆ ಹಾಕುತ್ತೇವೆ ಎಂಬುದು ಮುಖ್ಯ ಅಲ್ಲ. ಉಡುಗೆ ತೊಡುಗೆಯಲ್ಲಿ ಯಾರನ್ನೂ ಅಳೆಯ ಲಾಗದು. ಒಳ್ಳೆ ಬಟ್ಟೆ ಹಾಕಿಕೊಂಡಿದ್ದರೂ ಮನಸ್ಸು ಕೆಟ್ಟದಿರಬಹುದು ಎಂದು ಅವರು ಅಭಿಪ್ರಾಯ ಪಟ್ಟರು. ಇನ್ನೂ ನಿಮ್ಮಲ್ಲಿರುವ ಹುರುಪು ಮತ್ತು ಉತ್ಸಾಹ ನೋಡಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮಗೆ ಗೆಲುವು ಖಚಿತ ಎಂದೆನಿಸುತ್ತಿದೆ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್  ಭರವಸೆ ವ್ಯಕ್ತಪಡಿಸಿದರು. ಕೂಟಗಲ್ ಗ್ರಾಮ ಪಂಚಾಯಿತಿ ಜೆಡಿಎಸ್ ಭದ್ರಕೋಟೆಯಾಗಿದೆ. ಬಿಜೆಪಿ  ಸೇರಿದ ಪರಿಣಾಮ ಇಡೀ ಕ್ಷೇತ್ರವೇ ಸುಭದ್ರ ಕೋಟೆಯಾಗಿದೆ ಎಂದು ಹೇಳಿದರು. https://youtu.be/-FPUV7y4esM ಆರೋಗ್ಯ ಕ್ಷೇತ್ರದಲ್ಲಿ 35…

Read More

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲದೇ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ ಅವರು, ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಪರ ಪ್ರಚಾರದ ಭಾಷಣದ ವೇಳೆ ಸಿ.ಎಂ.ರಾಜಿನಾಮೆ ವಿಷಯ ಪ್ರಸ್ತಾಪ ಮಾಡಿದರು. https://ainlivenews.com/good-news-for-women-you-will-get-3-lakh-rupees-to-start-your-own-business-apply-today/ ರಾಜ್ಯದಲ್ಲಿ ಇವತ್ತು ನಮ್ಮ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಅಂದ್ರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತೆ ಎಂದು ಹೇಳಿದ್ದಾರೆ. ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯರನ್ನು ನಾವು ಉಳಿಸಿಕೊಳ್ಳಬೇಕು. ಹಾಗಾಗಿ ಸಿದ್ದರಾಮಯ್ಯರನ್ನು ಉಳಿಸುವ ಕೆಲಸ ನಾವೆಲ್ಲ ಮಾಡಬೇಕು ಎಂದು ಶ್ರೀನಿವಾಸ್ ತಿಳಿಸಿದ್ದಾರೆ. 

Read More