Author: AIN Author

ಬೆಂಗಳೂರು:- ಮುಂದಿನ ಎರಡು ದಿನಗಳ ಕಾಲ ರಾಜ್ಯದ 7 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ಬೀದರ್, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಣಹವೆ ಮುಂದುವರೆಯಲಿದೆ. ದಕ್ಷಿಣ ಕನ್ನಡದ ಪಣಂಬೂರಿನಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ 38.8 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ವಿಜಯಪುರದಲ್ಲಿ 20.1 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ, ಎಚ್​ಎಎಲ್​ನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ,…

Read More

ಚಾಮರಾಜನಗರ:- ಜಿಲ್ಲೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕೆಂಕೆರೆ ಕೆರೆ ಸಮೀಪ ಹೆಣ್ಣಾನೆ ಮೃತಪಟ್ಟಿದೆ. ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತ ಅರಣ್ಯದಲ್ಲಿ ಕಾಡಾನೆ ಮೃತಪಟ್ಟಿದೆ. ಸಾವಿನ ಸುತ್ತ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯಲ್ಲಿ ಸಹಜವಾಗಿ ಮೃತಪಟ್ಟಿದೆ ಎಂದು ದೃಢಪಟ್ಟಿದೆ.

Read More

ಬೆಂಗಳೂರು:- ಸುಳ್ಳು ಹೇಳುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಜೆಡಿಎಸ್‌ ನಾಯಕರ ಮನೆಗೆ ಹೋಗುವುದು, ಪಕ್ಷಕ್ಕೆ ಅವರನ್ನು ಸೆಳೆಯುವುದು, ಬೆದರಿಕೆ ಹಾಕುವ ಅಭ್ಯಾಸ ಡಿ.ಕೆ.ಶಿವಕುಮಾರ್‌ಗಾಗಲಿ ಅಥವಾ ಡಿ.ಕೆ.ಸುರೇಶ್‌ಗಾಗಲಿ ಇಲ್ಲ. ಆರೋಪ ಮಾಡುವುದು ರಾಜಕೀಯದ ಹುಟ್ಟು ಗುಣ. ಹೆಚ್‌.ಡಿ.ಕುಮಾರಸ್ವಾಮಿ ಅವರು ವೈದ್ಯಕೀಯ ಸೇವೆಯಲ್ಲಿದ್ದಾರೆ. ಆರೋಗ್ಯ ಸರಿಯಿಲ್ಲ. ಅವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಭಯ ಅನ್ನೋದು ಭಗವಂತನ ಸೃಷ್ಟಿ. ಜನ ನನ್ನ ಹಿಂದೆ ಇರೋವರೆಗೂ ಯಾರಿಗೂ ಹೆದರುವ ಪ್ರಶ್ನೆ ಇಲ್ಲ ಎಂದರು. ಕುಕ್ಕರ್‌, ಸೀರೆ ಹಂಚುವ ಆರೋಪ ಕುರಿತು ಮಾತನಾಡಿ, ಅದನ್ನು ಯಾರು ಹಂಚಿದ್ದಾರೆ ಎಂಬುದನ್ನು ನೀವೇ ಕೇಳಿಕೊಳ್ಳಬೇಕು. ಕೆಲವರು ಹಂಚುತ್ತಿರುತ್ತಾರೆ. ಕೆಲವರು ಒಳಗೊಳಗೆ ಏನೇನೊ ಮಾಡ್ತಿರುತ್ತಾರೆ. ಕುಮಾರಸ್ವಾಮಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದೇ ಅವರ ಉದ್ಯೋಗ ಎಂದು ತಿರುಗೇಟು ನೀಡಿದರು. ಈಗ ರಂಜಾನ್‌ ಹಬ್ಬ ಇದೆ. ಷರಿಯತ್‌ ಗೋಸ್ಕರ ಆ ಕ್ಷೇತ್ರದ…

Read More

ಬೆಂಗಳೂರು:- ನಾವು ಗಂಡಸರನ್ನ ನಂಬಲ್ಲ, ಹಾಗಾಗಿ ಹೆಣ್ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದ್ದೀವಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ 2,000 ರೂ. ಕೊಡುತ್ತೇವೆ. ಅವರು ಆ ದುಡ್ಡಲ್ಲಿ ಮನೆ ನಡೆಸುತ್ತಾರೆ. ನೀವಾಗಿದ್ದರೆ ಎಣ್ಣೆ ಅಂಗಡಿಗೆ ಹೋಗ್ತಿದ್ರಿ, ಅದಕ್ಕೆ ಹೆಣ್ಣುಮಕ್ಕಳಿಗೆ ಹಣ ಕೊಡುತ್ತಿದ್ದೇವೆ. ನಾವು ಐದು ಗ್ಯಾರಂಟಿಗಳನ್ನು ತಂದಿದ್ದೇವೆ. ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇವೆ. ತಮಿಳುನಾಡು ನೋಡಿ ಶಕ್ತಿ ಯೋಜನೆ ತಂದೆವು. 4,000 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆ ಕೊಟ್ಟಿದ್ದೇವೆ ಎಂದರು ಶಿವಮೊಗ್ಗ ಕಾರ್ಯಕ್ರಮ ನೋಡಿದ್ರೆ ಸೋಲು ಖಚಿತ. ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲಲ್ಲ. ಈಗ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ತಲುಪದಿದ್ದರೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಐವರನ್ನ ನೇಮಿಸಿದ್ದೇವೆ. 50,000 ವೇತನವನ್ನೂ ಕೊಡುತ್ತೇವೆ. ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಲಿವೆ. ತಾಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. 15,000 ಸದಸ್ಯರನ್ನು ನೇಮಿಸಿದ್ದೇವೆ. ಕಾರ್ಡ್ ಇಟ್ಟುಕೊಂಡು ವಿಧಾನಸೌಧಕ್ಕೆ ಬರಬಹುದು.…

Read More

ರಾಮನಗರ:- ಮತದಾರರನ್ನ ಯಾವುದೇ ರೀತಿಯ ಅಡ್ಡ ದಾರಿಗೆ ಎಳೆಯಬಾರದು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್‌ ಮಂಜುನಾಥ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಟುಂಬ ರಾಜಕಾರಣ ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಮಗ-ಮಗಳು, ಸೊಸೆ-ಅಳಿಯ, ಅಣ್ಣ ಎಲ್ಲರೂ ಇದ್ದಾರೆ. ಅವರ ಟೀಕೆಗಳ ಬಗ್ಗೆ ಚರ್ಚೆ ಈಗ ಅಪ್ರಸ್ತುತ ಎಂದು ತಿರುಗೇಟು ನೀಡಿದ್ದಾರೆ. ಕಳೆದ 10 ದಿನಗಳಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡ್ತಿದ್ದಾರೆ. ನಿನ್ನೆ ಬೆಂಗಳೂರು ದಕ್ಷಿಣ, ಆರ್‌.ಆರ್‌ ನಗರ, ಕುಣಿಗಲ್‌ಗೆ ಹೋಗಿದ್ದೆ. ಬಹುಮುಖ್ಯವಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ‌. ಇದನ್ನೆಲ್ಲ ನೋಡ್ತಿದ್ರೆ ನಮ್ಮ ಗೆಲುವು 100% ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಧರ್ಮ ಮತ್ತು ಅಧರ್ಮ ನಡುವೆ ಈ ಚುನಾವಣೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರ…

Read More

ಇಂಡಿಯನ್ ಪ್ರೀಮಿಯರ್ ಲೀಗ್ ನ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಐಪಿಎಲ್ 2024 ಪಾಯಿಂಟ್ಸ್ ಟೇಬಲ್ ಇಲ್ಲಿದೆ ನೋಡಿ ಟೂರ್ನಿ ಆರಂಭವಾಗಿ ಎರಡು ದಿನಗಳು ಕಳಿದಿದ್ದು, ಈವರೆಗೆ ಒಟ್ಟು ಮೂರು ಪಂದ್ಯಗಳು ನಡೆದಿವೆ. ಶನಿವಾರ ಮೊದಲ ಡಬಲ್ ಹೆಡ್ಡರ್ ಆಯೋಜಿಸಲಾಗಿತ್ತು. ಮಧ್ಯಾಹ್ನ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದರೆ, ನಂತರದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಜಯ ಕಂಡಿತು. ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಎರಡು ಅಂಕ ಪಡೆದು +0.779 ರನ್​ರೇಟ್ ಹೊಂದಿದೆ. ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ 2 ಪಾಯಿಂಟ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ. ಇವರ ನೆಟ್​ ರನ್​ರೇಟ್ +0.455 ಆಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಆಡಿದ ಒಂದು ಪಂದ್ಯದಲ್ಲಿ ಜಯ ಸಾಧಿಸಿ…

Read More

ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಮೂಲಕ ಶಿಖರ್ ಧವನ್ ಹೊಸ ಮೈಲುಗಲ್ಲು ದಾಟಿದ್ದಾರೆ. ಐಪಿಎಲ್​ನ 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಹೊಸ ಮೈಲ್ಲುಗಲ್ಲು ದಾಟಿದ್ದಾರೆ. ಅದು ಕೂಡ ಬೌಂಡರಿಗಳ ಮೂಲಕ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಬ್ಯಾಟ್ಸ್​ಮನ್ ಎಂಬ ಹಿರಿಮೆಗೆ ಧವನ್ ಪಾತ್ರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ 16 ಎಸೆತಗಳಲ್ಲಿ 4 ಫೋರ್​ಗಳೊಂದಿಗೆ 22 ರನ್ ಬಾರಿಸಿದ್ದಾರೆ. ಈ ನಾಲ್ಕು ಫೋರ್​ಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ 900 ಬೌಂಡರಿಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಶಿಖರ್ ಧವನ್ ತಮ್ಮದಾಗಿಸಿಕೊಂಡಿದ್ದಾರೆ. ಗಬ್ಬರ್ ಖ್ಯಾತಿಯ ಶಿಖರ್ ಧವನ್ 217 ಐಪಿಎಲ್​ ಇನಿಂಗ್ಸ್​ಗಳಲ್ಲಿ 754 ಫೋರ್​ಗಳು ಮತ್ತು 148 ಸಿಕ್ಸ್​ಗಳನ್ನು ಬಾರಿಸುವ ಮೂಲಕ 902 ಬೌಂಡರಿಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 900 ಬೌಂಡರಿಗಳ ಗಡಿದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.…

Read More

ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿಯು ತುಂಬಾ ಕಡಿಮೆಯಾಗಿದೆ. ಇದಕ್ಕೆ ಮಲಗೋ ಸಮಯ ಸಹ ಕಾರಣವಾಗ್ತಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ತಡವಾಗಿ ಮಲಗುವ ಜನರು ಅನಾರೋಗ್ಯಕರ ಅಭ್ಯಾಸಗಳಿಂದ ಮೊದಲೇ ಸಾಯುತ್ತಾರೆ ಎಂದು ಅಧ್ಯಯನವು ಹೇಳುತ್ತದೆ. ರಾತ್ರಿ ತಡವಾಗಿ ಮಲಗುವವರು ಅನಾರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹೊಸ ಅಧ್ಯಯನದ ಪ್ರಕಾರ, ಬೇಗ ಏಳುವವರಿಗಿಂತ, ತಡವಾಗಿ ಮಲಗುವವರೇ ಮುಂಚೆ ಸಾಯಬಹುದು ಎಂದು ತಿಳಿಸಿದೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ರಾತ್ರಿ ಸಮಯಲ್ಲಿ ಸರಿಯಾಗಿ ನಿದ್ದೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅನಾರೋಗ್ಯಕಾರಿ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆಯಂತೆ.  ಉದಾಹರಣೆಗೆ ಹೇಳುವುದಾದರೆ, ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುವುದು, ರಕ್ತದ ಒತ್ತಡದಲ್ಲಿ ಏರುಪೇರಾಗುವುದು, ಸಕ್ಕರೆಕಾಯಿಲೆ ನಿಯಂತ್ರಣ ತಪ್ಪುವುದು ಇಂತಹ ಸಮಸ್ಯೆಗಳು ಬರುವ ಅಪಾಯ ಹೆಚ್ಚಿರುತ್ತದೆಯಂತೆ. ಬನ್ನಿ ಇಂದಿನ ಲೇಖನದಲ್ಲಿ ಪುರುಷರು ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳನ್ನು ಕಂಡು ಬರುವ ಸಾಧ್ಯತೆ ಇರುತ್ತದೆ…

Read More

ದೇಶದ ಅತಿದೊಡ್ಡ ಎಫ್‌ಎಂಸಿಜಿ ಕಂಪನಿ ಯೂನಿಲಿವರ್, ತನ್ನ ನೌಕರರಿಗೆ ಅತಿ ದೊಡ್ಡ ಶಾಕ್ ನೀಡಿದೆ..! ಹೌದು ತನ್ನ ಐಸ್ ಕ್ರೀಮ್ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯಾಗಿ ಮಾಡಲು ಯೋಜಿಸಿದೆ. ವೆಚ್ಚ ಉಳಿಸುವ ಅಮೂಲಾಗ್ರ ಯೋಜನೆಯ ಭಾಗವಾಗಿ ಈ ಪ್ಲಾನ್ ಮಾಡಲಾಗಿದೆ. ಅದರಂತೆ 7,500 ಮಂದಿ ಕೆಲಸ ಕಳೆದುಕೊಳ್ಳುವ (job cuts) ಸಾಧ್ಯತೆಯೂ ಇದೆ. ವರದಿಗಳ ಪ್ರಕಾರ ಐಸ್ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ತತ್ಕ್ಷಣದಿಂದಲೇ ಆರಂಭವಾಗಲಿದ್ದು, 2025ರ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದು. ಯೂನಿಲಿವರ್ನಲ್ಲಿ ಬೆನ್ ಅಂಡ್ ಜೆರ್ರೀಸ್, ಮ್ಯಾಗ್ನಸ್ ಮೊದಲಾದ ಬ್ರ್ಯಾಂಡ್ನ ಐಸ್ಕ್ರೀಮ್ ಬಿಸಿನೆಸ್ಗಳಿವೆ. ಅವೆಲ್ಲವೂ ಸೇರಿ ಪ್ರತ್ಯೇಕ ಸಂಸ್ಥೆಯಾಗಿ ಹೊರಬರ ಬಹುದು. https://ainlivenews.com/good-news-for-women-you-will-get-3-lakh-rupees-to-start-your-own-business-apply-today/ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವುದರಿಂದ ಯೂನಿಲಿವರ್ಗೆ ಹೆಚ್ಚು ಅನುಕೂಲವಾಗಬಹುದು. ಸಂಸ್ಥೆಯ ಗಮನ ನಿರ್ದಿಷ್ಟಗೊಳಿಸಲು ಮತ್ತು ವ್ಯವಹಾರ ಸರಳಗೊಳಿಸಲು ಸಹಾಯವಾಗಲಿದೆ. ಹಾಗೆಯೇ, ವಿಶ್ವದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಬಿಸಿನೆಸ್ ಸೃಷ್ಟಿ ಕೂಡ ಸಾಧ್ಯವಾಗುತ್ತದೆ. ಇದರಿಂದ ಐಸ್ ಕ್ರೀಮ್ ಬಿಸಿನೆಸ್ ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಯೂನಿಲಿವರ್ನ ಮುಖ್ಯಸ್ಥರಾದ ಇಯಾನ್ ಮೀಕಿನ್ಸ್ ಹೇಳಿದ್ದಾರೆ.…

Read More

ನವದೆಹಲಿ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ನಿನ್ನೆ ರಿಲೀಸ್ ಆಗಿದೆ! 13 ರಾಜ್ಯಗಳಿಂದ ಕಣಕ್ಕಿಳಿಯುವ 46 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅಜಯ್ ರೈಅವರು ಸ್ಪರ್ಧಿಸಲಿದ್ದಾರೆ ಉತ್ತರಪ್ರದೇಶ, ಮಹಾರಾಷ್ಟ್ರ, ಛತ್ತೀಸ್​ಗಢ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಣಿಪುರ, ಜಮ್ಮು-ಕಾಶ್ಮೀರ, ಅಸ್ಸಾಂ, ಅಂಡಮಾನ್​​-ನಿಕೋಬಾರ್, ಮಿಜೋರಾಂನ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ. ಮಧ್ಯಪ್ರದೇಶದ ರಾಜ್ ಗಡ್​ನಲ್ಲಿ ದಿಗ್ವಿಜಯ್ ಸಿಂಗ್ ಸ್ಪರ್ಧೆ ಮಾಡಲಿದ್ದಾರೆ. 2018 – 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್​​ ಸೇಂಥಿಲ್​ ಅವರಿಗೆ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅಸ್ಸಾಂನ ಲಿಖಿಂಪುರ ಕ್ಷೇತ್ರದ ಟಿಕೆಟ್ ಉದಯ್ ಶಂಕರ್ ಹಜರಿಕ ಅವರಿಗೆ ಘೋಷಣೆಯಾದರೆ, ಅಂಡಮಾನ್-ನಿಕೋಬರ್ ಐಸ್​ಲ್ಯಾಂಡ್ ಕ್ಷೇತ್ರದ ಟಿಕೆಟ್ ಕುಲದೀಪ್ ರೈ ಶರ್ಮ, ಬಸ್ತರ್ (ಎಸ್​ಟಿ) ಕ್ಷೇತ್ರದ ಟಿಕೆಟ್ ಕವಾಸಿ ಕಖ್ಮ, ಉದಮ್​ಪುರ ಕ್ಷೇತ್ರದ ಟಿಕೆಟ್ ಲಾಲ್ ಸಿಂಗ್, ಜಮ್ಮು ಕ್ಷೇತ್ರದ…

Read More