Author: AIN Author

ಬೆಂಗಳೂರು: ಲೋಕಸಭಾ ಚುನಾವಣಾಗೆ ಭರ್ಜರಿಯ ತಯಾರಿ ನಡೆಯುತ್ತಿದೆ.. ಈಗಾಗ್ಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕೂಡ ಘೋಷಿಸಲಾಗಿದೆ.. ಆದ್ರೆ ಆ ಎರಡು ಕ್ಷೇತ್ರದ ಟಿಕೆಟ್ ವಿಚಾರ ಕಾಂಗ್ರೆಸ್ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.. ಟಿಕೆಟ್‌ಗಾಗಿ ನಡೆಯುತ್ತಿರುವ ತಿಕ್ಕಾಟ ಸರಿಪಡಿಸಲು ಸಭೆ ಮೇಲೆ ಸಭೆ ನಡೆಸ್ತಿದ್ದಾರೆ. ಚುನಾವಣೆ ಸಮಯದಲ್ಲಿ ಟಿಕೆಟ್‌ಗಾಗಿ ಫೈಟ್ ನಡೆಯೋದು ಸಹಜ.. ಆದ್ರೆ ಕೋಲಾರದಲ್ಲಿ ಟಿಕೆಟ್‌ಗಾಗಿ ನಡೆಯುತ್ತಿರುವ ಫೈಟ್ ಸ್ವಲ್ಪ ಜೋರಾಗಿಯೇ ಇದೆ.  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ನಡುವಿನ ತಿಕ್ಕಾಟ ಹೊಸದೇನಲ್ಲ.. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್ ಮುನಿಯಪ್ಪ ಅವರನ್ನು ರಮೇಶ್ ಕುಮಾರ್ ಬಣ ಸೋಲಿಸಿತ್ತು.. ಇದು ಎಲ್ಲಾರಿಗೂ ತಿಳಿದಿರುವ ವಿಚಾರವೆ.. ಆದಾದ ಬಳಿಕ ವಿರೋಧದಿಂದ ಬೇಸತ್ತ ಮುನಿಯಪ್ಪ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು.. ಇಷ್ಟೆಲ್ಲಾ ನಡೆದ್ರೂ ಕೂಡ ಅವರಿಬ್ಬರ ನಡುವಿನ ಮುನಿಸು ಮಾತ್ರ ಕಡಿಮೆಯೇ ಆಗಿಲ್ಲ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಇದೀಗ ಮತ್ತೆ ಟಿಕೆಟ್‌ಗಾಗಿ ಟೀವ್ರ ಫೈಪೋಟಿ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…

Read More

ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಹೃದಯದ ಶಸ್ತ್ರಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಇಂದು ವಿಶೇಷ ವಿಮಾನದ ಮೂಲಕ ಚೆನ್ನೈನಿಂದ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಇದೊಂದು ಪುನರ್ಜನ್ಮ ಎಂದೇ ಹೇಳಬಹುದು. ನಾಡಿನಾದ್ಯಂತ ಅಭಿಮಾನಿಗಳು ಪ್ರಾರ್ಥನೆಯನ್ನ ಸಲ್ಲಿಸಿದ್ರು. ಅಭಿಮಾನಿಗಳು, ಹಿತೈಷಿಗಳ ಪ್ರಾರ್ಥನೆ ಫಲ ಕೊಟ್ಟಿದೆ. ಸಾಯಿ ಬಾಬಾ ಬಂದು ಆಪರೇಷನ್​ ಮಾಡಿದ್ದಾರೆ ಅಂದ್ರು. ಸ್ವತಃ ವೈದ್ಯರೇ ಆ ಮಾತನ್ನು ಹೇಳಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಮಾಡುತ್ತೇನೆ ಎಂದು ಹೇಳಿದರು.

Read More

ಜೊಮೆಟೋ ಫುಡ್ ಡೆಲಿವರಿ ಆ್ಯಪ್ ಸಿಇಒ ದೀಪಿಂದರ್ ಗೋಯಲ್ 2ನೇ ಮದುವೆಯಾಗಿದ್ದಾರೆ. 41 ವರ್ಷದ ಗೊಯೆಲ್ ಮೆಕ್ಸಿಕೋ ಮಾಡೆಲ್, ಉದ್ಯಮಿ ಗ್ರೇಸಿಯಾ ಮುನೋಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಇತ್ತೀಚೆಗೆ ಸಸ್ಯಾರಿ ಫ್ಲೀಟ್ ಡೆಲಿವರಿ ಆರಂಭಿಸಿ ಭಾರಿ ಸಂಚಲನ ಸೃಷ್ಟಿಸಿದ ದೀಪಿಂದರ್ ಗೋಯಲ್ ಸೈಲೆಂಟ್ ಆಗಿ 2ನೇ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಈ ಮಾಹಿತಿ ಹೊರಬಂದಿದೆ. ದೀಪಿಂದರ್​ ಗೋಯಲ್​​ ಇದಕ್ಕೂ ಮೊದಲು ಕಂಚನಾ ಜೋಶಿ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೆಕ್ಸಿಕೊದ ರೂಪದರ್ಶಿಯನ್ನು ಎರಡನೇ ಮದುವೆಯಾಗಿದ್ದಾರೆ. ರಹಸ್ಯ ಮದುವೆ: ದೀಪಿಂದರ್​ ಐಐಟಿಯಲ್ಲಿ ಓದುವಾಗಲೇ ಕಂಚನಾ ಎಂಬುವರನ್ನು ಮದುವೆಯಾಗಿದ್ದು, ಪ್ರತ್ಯೇಕಗೊಂಡಿದ್ದರು. ಇದೀಗ ಎರಡನೇ ಮದುವೆಯನ್ನು ಗೌಪ್ಯವಾಗಿ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಿಂದ ಈ ಮಾಹಿತಿ ಬಹಿರಂಗವಾಗಿದೆ. ಯಾರು ಈ ಗ್ರೇಸಿಯಾ ​: ಅವರ ಸಾಮಾಜಿಕ ಜಾಲತಾಣದ ಬಯೋ ಅನುಸಾರ ಗ್ರೆಸಿಯಾ ಮೆಕ್ಸಿಕೊದಲ್ಲಿ ಹುಟ್ಟಿದ್ದಾರೆ. ರೂಪದರ್ಶಿಯಾಗಿರುವ ಅವರು, 2022ರ ಮೆಟ್ರೊಪಾಲಿಟನ್​ ಫ್ಯಾಷನ್​ ವೀಕ್​ನ ವಿನ್ನರ್​ ಆಗಿದ್ದಾರೆ. ಬಳಿಕ ಮಾಡೆಲಿಂಗ್​ ತೊರೆದು ಸ್ಟಾರ್ಟ್​ ಅಪ್​ ಆರಂಭಿಸಿದ್ದು,…

Read More

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಗ್ರಾಮದ  ಕೋಟೆ ತೋಟದ ಮಜಲು ಎಂಬಲ್ಲಿಗೆ ನಿನ್ನೆ ಸಂಜೆ ನಾಲ್ಕೈದು ಜನ ಅಪರಿಚಿತರು ಬಂದು ಹೋಗಿದ್ದು, ನಕ್ಸಲರಿರಬಹುದೇ ಎಂಬ ಗುಮಾನಿ ಈ ಪ್ರದೇಶದಲ್ಲಿ ಹಬ್ಬಿದೆ. ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಪರಿಚಿತರು ಸುಮಾರು ಒಂದು ಗಂಟೆಗಳ ಕಾಲ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಮೊಬೈಲ್ ಚಾರ್ಚ್ ಮಾಡಿಕೊಂಡು ತೆರಳಿದ್ಧಾರೆ ಎನ್ನಲಾಗಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿದ್ದರು. ತೋಟದಲ್ಲಿದ್ದ ಕೆಲಸದವರ ಶೆಡ್​ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್​​ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿನ ತೋಟದ ಮಾಲಿಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಿಂದ ಎರಡು ಕೆ.ಜಿಯಷ್ಟು ಅಕ್ಕಿ ಪಡೆದು ಬಳಿಕ ತಂಡ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಪ್ರಸ್ತುತ ಅವರು ಅರಣ್ಯ ಭಾಗದತ್ತ…

Read More

ಕಾಡಾನೆ ಧಾಳಿಯಿಂದ ಮೃತ ಪಟ್ಟ ಕಕ್ಕಬ್ಬೆ ನಾಲಡಿ ಗ್ರಾಮದ ಕಂಬೆಯಂಡ ಕುಟುಂಬದ ರಾಜ ದೇವಯ್ಯ ನವರ ಪಾರ್ಥಿವ ಶರೀರವನ್ನು ವೀಕ್ಷಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ತಕ್ಷಣವೇ ಪರಿಹಾರ ನೀಡುವ ಭರವಸೆಯನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನೀಡಿದ್ದಾರೆ.  ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ತುಲಾಭಾರ ಒಪ್ಪಿಸಲು ಪತ್ನಿ ಕಾಂಚನ್ ರೊಂದಿಗೆ ಆಗಮಿಸಿದ್ದ ಪೊನ್ನಣ್ಣ ನವರು ದೇವಾಲಯದಲ್ಲಿದ್ದಾಗ ವಿಷಯ ಅರಿತು ತುಲಾಭಾರ ಸೇವೆಸಲ್ಲಿಸಿದ ತಕ್ಷಣವೇ ಕಕ್ಕಬ್ಬೆಗೆ ತೆರಳಿ ಅಂಬುಲೆನ್ಸ್ ನಲ್ಲಿದ್ದ ಮೃತರ ಶರೀರ ವೀಕ್ಷಣೆ ಮಾಡಿದ್ದಾರೆ.ಕೂಡಲೇ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪ್ರಾಣ ಹಾನಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವ ಕುರಿತು ಈಗಾಗಲೇ ಅರಣ್ಯ ಸಚಿವರೊಂದಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದು ಆದಷ್ಟು ಬೇಗ ಆನೆ ಮತ್ತು ಮಾನವ ಸಂಘರ್ಷದ ಸಮಸ್ಯೆಯನ್ನು ಜಿಲ್ಲೆಯಲ್ಲಿ ಅಂತ್ಯಗೊಳಿಸಲು ಬದ್ದರಾಗಿದ್ದೇವೆ ಎಂದು ತಿಳಿಸಿದರು. ಕೆಡಿಪಿ…

Read More

ಕೋಲ್ಕತಾ: ಕೊನೆಯ ಎಸೆತದವರೆಗೂ ಅತ್ಯಂತ ರೋಚಕತೆಯಿಂದ ಕೂಡಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಎದುರು ಕೋಲ್ಕತಾ ನೈಟ್‌ ರೈಡರ್ಸ್‌ 4 ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಇಲ್ಲಿನ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ನೀಡಿದ್ದ 209 ರನ್‌ಗಳ ಬೃಹತ್‌ ಮೊತ್ತವನ್ನು ಗುರಿ ಹಿಂಬಾಲಿಸಿದ ಹೆನ್ರಿಕ್ ಕ್ಲಾಸೆನ್‌ ಸ್ಪೋಟಕ ಅರ್ಧಶತಕದ ಹೊರತಾಗಿಯೂ 20 ಒವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 204 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಹೈದರಾಬಾದ್‌ ತಂಡ ನಿರಾಶೆಗೆ ಜಾರಿತು. ಈ ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಫೋರ್ ಹಾಗೂ 7 ಸಿಕ್ಸ್​ನೊಂದಿಗೆ ಅಜೇಯ 64 ರನ್ ಬಾರಿಸಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 208 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಎಸ್​ಆರ್​ಹೆಚ್ ಪರ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಐದನೇ ಕ್ರಮಾಂಕದಲ್ಲಿ…

Read More

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ಟೆಂಪಲ್ ರನ್ ಮುಂದುವರಿಸಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಕುಟುಂಬ ಸಮೇತರಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ  ಭೇಟಿ ನೀಡಿದ್ದಾರೆ. ಇಂದು ಮುಂಜಾನೆಯಿಂದ ದೇವಾಲಯದಲ್ಲಿ ನಡೆಯುತ್ತಿರುವ ಚಂಡಿಕಾಯಾಗದಲ್ಲಿ ಅವರು ಭಾಗಿಯಾಗಿದ್ದಾರೆ. ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಶನಿವಾರ ರಾತ್ರಿ 9 ಗಂಟೆಗೆ ದೇವಾಲ ಯಕ್ಕೆ ಆಗಮಿಸಿ, ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದಲ್ಲೇ ತಂಗಿದ್ದು, ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಯಾಗದಲ್ಲಿ ಭಾಗಿಯಾಗಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಶನಿವಾರ ರಾತ್ರಿ ಬಿಎಸ್‍ವೈ ಕುಟುಂಬದ ವತಿಯಿಂದ ಹೊರನಾಡಲ್ಲಿ ರಥೋತ್ಸವ ಸೇವೆ ಸಹ ನಡೆಯಿತು. ಈ ವೇಳೆ ಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಯಡಿಯೂರಪ್ಪ, ವಿಜಯೇಂದ್ರ ಹಾಗೂ ರಾಘವೇಂದ್ರ ಅವರು ಎಳೆದರು. ರಥೋತ್ಸವ ಸೇವೆಯಲ್ಲಿ ಯಡಿಯೂರಪ್ಪ ಅವರ ಇಡೀ ಕುಟುಂಬ ಪಾಲ್ಗೊಂಡಿತ್ತು. 

Read More

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾನೇ ಮೈತ್ರಿ ಅಭ್ಯರ್ಥಿ ಎಂದೇಳಿಕೊಳ್ಳುತ್ತಿದ್ದ ಸಂಸದೆ ಸುಮಲತಾಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರೋ ಹೈ ಕಮಾಂಡ್ ಸುಮಲತಾರನ್ನ ಸುಮ್ಮನಿರುವಂತೆ ಸೂಚಿಸಿದೆ. ಇದರಿಂದಾಗಿ ಸುಮಲತಾರ ಮುಂದಿನ ನಡೆ ಏನು ? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಹಾಗಾದ್ರೆ ಸಂಸದೆ ಸುಮಲತಾ ತಟಸ್ಥರಾಗ್ತಾರಾ ? ಅಕಸ್ಮಾತ್ ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗ್ತಾರಾ ? ಈ ಸ್ಟೋರಿ ನೋಡಿ ಎಲ್ಲಾ ಗೊತ್ತಾಗುತ್ತೆ. ಹೌದು ಬಿಜೆಪಿ ಹೈಕಮಾಂಡ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ ಪ್ರಾಭಲ್ಯವಿರುವ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನೇ ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ. ವಿಪರ್ಯಾಸವೆಂದರೆ ಈವರೆಗೂ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಗೆ ಇದರಿಂದಾಗಿ ಬಿಗ್ ಶಾಕ್ ಆಗಿದೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಸಂಸದೆ ಸುಮಲತಾ ಬಿಜೆಪಿ ಟಿಕೆಟ್ ನನಗೇ ಸಿಗುತ್ತದೆ. ಕಮಲದ ಚಿಹ್ನೆ…

Read More

ಬಾಗಲಕೋಟೆ:- ನಗರದ ಕೆನಾಲನಲ್ಲಿ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಚಾಲಕನನ್ನು ಮಲ್ಲಪ್ಪ ಪರಮಾನಂದ ಜಕ್ಕನ್ನವರ ಎಂದು ಗುರುತಿಸಲಾಗಿದ್ದು ಮುಧೋಳ ತಾಲೂಕಿನ ಶಿರೋಳ ಗ್ರಾಮದವನಾಗಿದ್ದು ಸಿದ್ದಾಪುರು ಗ್ರಾಮದ ತಮ್ಮ ತೋಟಕ್ಕೆ ವ್ಯವಸಾಯ ಮಾಡಲು ತಮ್ಮ ಸ್ವಂತ ಟ್ರ್ಯಾಕ್ಟರ ಚಲಾಯಿಸಿ ಕೂಂಡು ಹೂಗುವ ಸಂಧರ್ಭದಲ್ಲಿ ಟ್ರ್ಯಾಕ್ಟರ್‌ ಕೆನಾಲನಲ್ಲಿ ಪಲ್ಟಿಯಾಗಿ ಚಾಲಕ ಮದ್ಯ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಜಮಖಂಡಿ ಗ್ರಾಮಿಣ ಪೋಲಿಸ ಠಾಣೆಯ ಪಿ.ಎಸ್.ಐ ಮಹೇಶ ಸಂಖ ಹಾಗೂ ಪೋಲಿಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಮಖಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲೆ ಮಾಡಲಾಗಿದೆ. ಜಮಖಂಡಿ ಗ್ರಾಮಿಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಮೈಸೂರು:- ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ ಬಿಗ್ ಶಾಕ್​​ ಎದುರಾಗಿದ್ದು, ಯಡಿಯೂರಪ್ಪ ಆಪ್ತ ಹೆಚ್​​ವಿ ರಾಜೀವ್​ ಕಾಂಗ್ರೆಸ್​ಗೆ ಸೇರಲಿದ್ದಾರೆ. ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ ರಾಜೀವ್​​ ಮಾರ್ಚ್​ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​​ ಪಕ್ಷ ಸೇರಲಿದ್ದಾರೆ. ಹೆಚ್​.ವಿ ರಾಜೀವ್ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹಾಗೂ ಶಾಸಕ ಎಸ್​ಟಿ ಸೋಮಶೇಖರ್​ ಆಪ್ತರಾಗಿದ್ದಾರೆ. ಹೆಚ್​.ವಿ ರಾಜೀವ್​ ಕೆ.ಆರ್​ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರು ಕೆಲವು ದಿನಗಳಿಂದ ತಮ್ಮ ಮೂಲ ಪಕ್ಷ ಚಟುವಟಿಕೆಗಳಿಂದ ದೂರ ಉಳಿದಿದ್ದು, ಕಾಂಗ್ರೆಸ್​ ಅಂಗಳದಲ್ಲಿ ನಿಂತಿದ್ದಾರೆ. ಅಲ್ಲದೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹೆಚ್​.ವಿ ರಾಜೀವ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಕೇವಲ ಒಂದೂವರೆ ವರ್ಷದಲ್ಲಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಶಾಸಕಾರಿಗಿದ್ದ ಎಸ್​.ಎ ರಾಮದಾಸ್​…

Read More