Author: AIN Author

ಬೆಂಗಳೂರು: ರಾಜ್ಯದಲ್ಲಿ ಜಲಕ್ಷಾಮ ಹೆಚ್ಚಾಗ್ತಾನೆ ಇದೆ.‌ ಕುಡಿಯಲು ಜನರಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. ಇನ್ನೂ ಕೆರೆಕುಂಟೆಗಳು ಒಣಗ್ತಿದ್ದು,  ಜನಾವಾರುಗಳಿಗೂ ನೀರು ಇಲ್ಲದಂತಹ ಸ್ಥಿತಿ ಸೃಷ್ಟಿಯಾಗಿದೆ..‌ಸಿಲಿಕಾನ್ ಸಿಟಿಯಲ್ಲೂ ಇದೇ ಪರಿಸ್ಥಿತಿ ಇದೆ.. ನೀರನ್ನ ಉಳಿಸೋದಕ್ಕೆ ಜಲಮಂಡಳಿ ಹೊಸದೊಂದ ಪ್ಲಾನ್ ಮಾಡಿಕೊಂಡಿದ್ದು ನಲ್ಲಿಗಳಿಗೆ ಏರಿಯೇಟರ್ ಹಾಕೋದಕ್ಕೆ ಆದೇಶಿಸಿದೆ.. ಯೆಸ್ ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿ ಜಲಮಂಡಳಿ ಆದೇಶ  ಮಾಡಿದ್ದು, ಏರಿಯೇಟರ್ ಅಳವಡಿಕೆಗೆ ಜಲ ಮಂಡಳಿಯಿಂದ ಮಾರ್ಚ್ 31ರ ಗಡವು ಸಹ ನೀಡಿದೆ.. ಇದನ್ನ ನಲ್ಲಿಗೆ ಹಾಕೋದ್ರಿಂದ ಶೇ ೬೦ ರಿಂದ ೮೫ ರಷ್ಟು ನೀರು ಉಳಿತಾಯ ಆಗಲಿದೆ ಅನ್ನೋದು ಜಲಮಂಡಳಿಯ  ಲೆಕ್ಕಚಾರವಾಗಿದೆ.‌.. ದೊಡ್ಡ ದೊಡ್ಡ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್‌ಗಳು, ಐಷಾರಾಮಿ  ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳು ಸೇರಿದಂತೆ ಎಲ್ಲಕಡೆ ನಲ್ಲಿಗೆ ಏರಿಯೇಟರ್ ಹಾಕುವಂತೆ ಜಲಮಂಡಳಿ ಖಡ್ಡಾಯವಾಗಿ ತಿಳಿಸಿದೆ.. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಏರಿಯೇಟರ್ ಹೇಗೆ ನೀರಿನ ಪ್ರಮಾಣವನ್ನ ಕಡಿಮೆ ಮಾಡುತ್ತೆ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ..ನೀರನ್ನು ಸಂರಕ್ಷಿಸುವ ಉದ್ದೇಶದಿಂದ…

Read More

ಚಿತ್ರದುರ್ಗ: ಕುಟುಂಬ ರಾಜಕಾರಣವನ್ನು ನಾನೂ ಸಹ ವಿರೋಧಿಸುತ್ತೇನೆ. ಬಿ ಎಸ್ ವೈ ಅವರು ಚುನಾವಣೆ ರಾಜಕೀಯದಿಂದ ನಿವೃತ್ತ ರಾಗಿದ್ದಾರೆ. ನಾನು ಎಬಿವಿಪಿಯಿಂದ ಬಂದು ಸಂಸದನಾಗಿದ್ದೇನೆ. ಯಾವುದೋ ಒತ್ತಡಕ್ಕಾಗಿ ನನಗೆ ಪಕ್ಷ ಟಿಕೆಟ್ ನೀಡಿಲ್ಲ. ಜನರ ವಿಶ್ವಾಸ ಗಳಿಸಿದ್ದೇನೆ, ಪ್ರಾಮಾಣಿಕ ಕೆಲಸ ಮಾಡಿದ್ದರಿಂದ ನನಗೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಹೇಳಿದರು. ಚಿತ್ರದುರ್ಗದಲ್ಲಿ ಬೋವಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಂಸದರು, ರಾಜ್ಯಾಧ್ಯಕ್ಷ ಸ್ಥಾನ ಸಂಘಟನೆಗೆ ಶಕ್ತಿ ತುಂಬುವ ಜವಾಬ್ದಾರಿಯನ್ನು ವಿಜಯೇಂದ್ರ ಅವರು ಮಾಡುತ್ತಿದ್ದಾರೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಿ, ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಗೀತಕ್ಕ, ರಾಘಣ್ಣ ಅವರ ಮಧ್ಯ ನಡೆಯುವ ಚುನಾವಣೆ ಅಲ್ಲ. ಎರಡು ಪಕ್ಷಗಳ ಸಿದ್ಧಾಂತದ ಮೇಲೆ ನಡೆಯುತ್ತಿರುವ ಚುನಾವಣೆ. ಎದುರಾಳಿ ಯಾರೆಂದು ನಾವು ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಸುಲಭವಾಗಿ ಎದುರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More

ಬೆಂಗಳೂರು: ಅಧಿಕಾರ, ಸ್ಥಾನಮಾನ ಮುಂದುವರಿಯಲು ಸಂಬಂತ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಲೀಡ್‌ ತಂದುಕೊಡುವಂತೆ ಸಚಿವರು, ನಿಗಮ -ಮಂಡಳಿ ಅಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ಟಾಸ್ಕ್‌ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮೊದಲ ಹಂತದಲ್ಲಿಲೋಕಸಭೆ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ವ್ಯಾಪ್ತಿಯ ಸಚಿವರು, ಶಾಸಕರು, ಮೇಲ್ಮನೆ ಸದಸ್ಯರು, ಮಾಜಿ ಶಾಸರು, ಜಿಲ್ಲಾಧ್ಯಕ್ಷರು ಮತ್ತಿತರ ಮುಖಂಡರ ಸಭೆಯಲ್ಲಿಈ ಸೂಚನೆ ನೀಡಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಸಂಬಂಧಪಟ್ಟ ಎಲ್ಲರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬದ್ಧತೆಯಿಂದ ಕೆಲಸ ಮಾಡಬೇಕು. ರಾಜ್ಯದಲ್ಲಿಪಕ್ಷ ಹೆಚ್ಚು ಸ್ಥಾನ ಗೆಲ್ಲಲೇಬೇಕಿದ್ದು, ಈ ಗುರಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ವೈಯಕ್ತಿಕ ಸಂಗತಿಗಳು ಪಕ್ಷದ ಕೆಲಸಕ್ಕೆ ಅಡ್ಡಿಯಾಗಬಾರದು. ವಿಶೇಷವಾಗಿ, ಸಚಿವರು ಮತ್ತು ನಿಗಮ -ಮಂಡಳಿಗಳ ಅಧ್ಯಕ್ಷಗಾದಿ ಹಿಡಿದವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಚುನಾವಣೆ ಬಳಿಕ ಮೌಲ್ಯಮಾಪನ ನಡೆಯಲಿದ್ದು, ಸಂಬಂಧಪಟ್ಟ ಕ್ಷೇತ್ರದಲ್ಲಿಪಕ್ಷಕ್ಕೆ ಲೀಡ್‌ ತಂದುಕೊಡದವರನ್ನು ಯಾವ ಮುಲಾಜೂ ಇಲ್ಲದೆ ಕುರ್ಚಿಯಿಂದ ಕೆಳಗೆ ಇಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Read More

ನವದೆಹಲಿ: ಅಬಕಾರಿ ಹಗರಣ ಸಂಬಂಧ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ ಬಳಿಕ ‘ಮುಂದಿನ ಸಿಎಂ’ ಯಾರಾಗುತ್ತಾರೆ ಎಂಬ ಪ್ರಶ್ನೆ ಆಪ್‌ ಪಕ್ಷದ ವಲಯದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ಉನ್ನತ ಮೂಲಗಳ ಪ್ರಕಾರ ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಅವರು ಸರಕಾರದ ಸಾರಥ್ಯ ವಹಿಸಿಕೊಳ್ಳಬಹುದು ಎನ್ನಲಾಗಿದೆ. ಜೈಲಿನಿಂದಲೇ ಸರಕಾರ ನಡೆಸುವುದಾಗಿ ಕೇಜ್ರಿವಾಲ್‌ ಘೋಷಣೆ ಮಾಡಿದ್ದರೂ, ಕಾನೂನು ಪಂಡಿತರ ಪ್ರಕಾರ ಕಾರಾಗೃಹದಲ್ಲಿದ್ದುಕೊಂಡು ಆಡಳಿತ ನಡೆಸುವುದು ಚುನಾವಣೆ ಸಂದರ್ಭದಲ್ಲಿ ಸುಲಭವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನು ಅರಿತ ಕೇಜ್ರಿವಾಲ್‌ ಇಡಿ ಕ್ರಮ ರದ್ದುಗೊಳಿಸಿ, ಬಿಡುಗಡೆ ಮಾಡುವಂತೆ  ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಬೇಸಿಗೆ ಸಮೀಪಿಸುತ್ತಿದ್ದಂತೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಟ್ಯಾಂಕರ್‌ಗಳನ್ನು ನಿಯೋಜಿಸುವಂತೆ ಕೇಜ್ರಿವಾಲ್ ನಿರ್ದೇಶನ ನೀಡಿದರು. ಮುಖ್ಯ ಕಾರ್ಯದರ್ಶಿಯನ್ನು ಒಳಗೊಳ್ಳಲು ಮತ್ತು ಅಗತ್ಯವಿದ್ದರೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಸಹಾಯವನ್ನು ಪಡೆಯಲು ಕೇಜ್ರಿವಾಲ್ ಅವರ ನಿರ್ದೇಶನಗಳನ್ನು ಅತಿಶಿ ಉಲ್ಲೇಖಿಸಿದ್ದಾರೆ. ಜೈಲು ಪಾಲಾಗಿರುವ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ ಇಲ್ಲಿ…

Read More

ಕೋಲ್ಕತ್ತಾ: ತೈಮೂರ್‌, ಬಾಬರ್‌ನಂತಹ ರಾಜರು ನಮ್ಮ ದೇಶವನ್ನು ಆಳಯವಾಗ ಇಲ್ಲಿ ಹಿಂದೂಗಳೇ (Hindu) ಇರಲಿಲ್ಲ ಎಂದು ಟಿಎಂಸಿಯ (TMC) ಹೌರ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಪ್ರಸೂನ್‌ ಬ್ಯಾನರ್ಜಿ (Prasun Banerjee) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಈ ತಥಾಕಥಿತ ಹಿಂದೂಗಳು ಎಂದರೇ ಯಾರು? ಮುಸ್ಲಿಮರು 800 ವರ್ಷಗಳ ಹಿಂದೆಯೇ ಬಂದಿದ್ದರು. ಆಗ ಭಾರತದಲ್ಲಿ ಹಿಂದೂಗಳೇ ಇರಲಿಲ್ಲ. ಹಿಂದುತ್ವ ಎನ್ನುವುದು 300-400 ವರ್ಷಗಳ ಹಿಂದೆ ಉಗಮವಾಗಿದೆ ಎಂದು ಹೇಳಿದರು. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಈ ಹೇಳಿಕೆಗೆ ಬಿಜೆಪಿ ಕಿಡಿಕಾರಿದ್ದು, ಪ್ರಸೂನ್‌ ಬ್ಯಾನರ್ಜಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಹೇಳಿಕೆ ಭಾರತದ ಇತಿಹಾಸಕ್ಕೆ ಮಾಡಿದ ಅವಮಾನ. ಎರಡು ಕೋಮುಗಳ ಮಧ್ಯೆ ದ್ವೇಷ ಕಿಡಿ ಹಬ್ಬಿಸುವ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. 2013ರ ಉಪಚುನಾವಣೆಯ ಗೆಲುವಿನೊಂದಿಗೆ ಪ್ರಸೂನ್‌ ಬ್ಯಾನರ್ಜಿ 2014, 2019 ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. 2019ರ ಚುನಾವಣೆಯಲ್ಲಿ ಬ್ಯಾನರ್ಜಿ 1,03,695 ಮತಗಳ ಅಂತರದಿಂದ ಗೆದ್ದಿದ್ದರು. ಪ್ರಸೂನ್‌ ಬ್ಯಾನರ್ಜಿಗೆ 5,76,711…

Read More

ಚಿತ್ರದುರ್ಗ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಂಪೂರ್ಣ ಮನೆ ಧ್ವಂಸಗೊಂಡು ಸುಟ್ಟು ಕರಕಲಾದ ಘಟನೆ ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಧರ್ಮರಾಜ ಎಂಬವರಿಗೆ ಸೇರಿದ ಮನೆಯಾಗಿದ್ದು, ಮನೆಯವರೆಲ್ಲ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಸಭವಿಸಿದೆ. ಸಿಲಿಂಡರ್ ಸ್ಫೋಟದ ತೀವೃತೆಗೆ ಸಂಪೂರ್ಣನೆ ಛಿದ್ರವಾಗಿದೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಇನ್ನು ಮನೆಯಲ್ಲಿದ್ದ ಬಟ್ಟೆ, ಬರೆ, ಧವಸ,ಧಾನ್ಯ ಸೇರಿದಂತೆ ಮನೆಯಲ್ಲಿದ್ದ ಸಂಪೂರ್ಣ ವಸ್ತುಗಳು ಸುಟ್ಟು ಕರಕಲಾಗಿವೆ.  ಇನ್ನು ಮನೆಯಲ್ಲಿ ಯಾರೂ ಇಲ್ಲದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಗ್ರಾಮಸ್ಥರೂ ಕೂಡ ಸಹಾಯ ಮಾಡಿದ್ದಾರೆ.

Read More

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ರಾಜಕೀಯ ಪ್ರೇರಿತವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದರೆ ತಪ್ಪಾಗಲಾರದು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಕೈಲಾಗದವನು ಮೈಪರಚಿಕೊಂಡ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುವುದೇ ತಮ್ಮ ಏಕೈಕ ಕೆಲಸ ಎಂದು ಭಾವಿಸಿದಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಬರ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪ ಎದುರಾದಾಗ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದ ಹಣದಿಂದಲೇ ಪರಿಹಾರ ನೀಡಿತ್ತು. ಆದರೆ ರೈತರ ಮೇಲೆ ಕಿಂಚಿತ್ತು ಕಾಳಜಿ ಇಲ್ಲದ ಸಿಎಂ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರದಲ್ಲೂ ರಾಜಕೀಯ ಮಾಡಿ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ 2019ರಲ್ಲಿ 9,72,517 ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು.…

Read More

ಬೆಂಗಳೂರು: ಕಾವೇರಿ ನೀರಿನಿಂದ (Cauvery Water) ಕಾರನ್ನು ಸ್ವಚ್ಛಗೊಳಿಸಿದ ಮೂವರಿಗೆ ಬೆಂಗಳೂರು ಜಲಮಂಡಳಿ (BWSSB) 5 ಸಾವಿರ ರೂ. ದಂಡ (Fine) ವಿಧಿಸಿದೆ. ಸದಾಶಿವನಗರದಲ್ಲಿ ಕಾರನ್ನು ಸ್ವಚ್ಛಗೊಳಿಸಿದ ಮಹಿಳೆಗೆ ಸ್ಥಳದಲ್ಲೇ 5 ಸಾವಿರ ದಂಡ ವಿಧಿಸಿದೆ. ಅದೇ ರೀತಿಯಲ್ಲಿ ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಇಬ್ಬರಿಗೆ ದಂಡ ವಿಧಿಸಲಾಗಿದೆ. https://ainlivenews.com/good-news-for-cancer-patients-72-lakhs-rs-cancer-medicine-will-now-be-available-for-3-lakhs/ ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಈಗಾಗಲೇ ಜಲಮಂಡಳಿ ಈಗಾಗಲೇ ಸೂಚನೆ ನೀಡಿದೆ. ಸೂಚನೆ ಹೊರತಾಗಿಯೂ ಕಾರನ್ನು (Car) ಸ್ವಚ್ಛ ಮಾಡಿದ್ದಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ವಾಹನ ತೊಳೆಯಲು, ತೋಟಗಾರಿಕೆ, ಫ್ಲಶ್ ಮಾಡಲು, ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಇತ್ಯಾದಿ ಬಳಕೆಗೆ ಕುಡಿಯುವ ನೀರನ್ನು ಬಳಸದಂತೆ ಸಾರ್ವಜನಿಕ ಹಿತಾಸಕ್ತಿಯಿಂದ ಜಲಮಂಡಳಿ ಪ್ರಕಟಣೆಯ ಮೂಲಕ ನಿಷೇಧ ಈಗಾಗಲೇ ಆದೇಶವನ್ನು ಜಾರಿ ಮಾಡಿದೆ.

Read More

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸಭೆಯಲ್ಲಿ ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಮಾತನಾಡಿ. ಬಾಗಲಕೋಟೆ ಜಿಲ್ಲೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಜ್ಞಾವಂತ ಮತದಾರರು ಇದ್ದಾರೆ ಈ ಬಾರಿ ಯಾವುದೇ ಕಾರಣಕ್ಕೂ ಮೋಸ ಹೋಗೋದಿಲ್ಲ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಕೊಟ್ಟು ಲೋಕಸಭೆಗೆ ಆಯ್ಕೆ ಮಾಡುತ್ತಾರೆ ಎಂದು ಆತ್ಮವಿಶ್ವಾಸ ನನಗಿದೆ. ಎಂಎಲ್ಎ ಎಂ ಪಿ ಫಂಡ ತಂದು ಬಾಗಲಕೋಟೆ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ನನ್ನ ಮೊದಲ ಸಂಕಲ್ಪವಾಗಿದೆ.ನಾನು ಇರೋದು ಪಕ್ಷದಲ್ಲಿ ಇದ್ದರೂ ಅಷ್ಟೇ ಆಡಳಿತ ಪಕ್ಷದಲ್ಲಿ ಇದ್ದರೂ ಅಷ್ಟೇ ಈ ಜಿಲ್ಲೆಗೆ ಹಗಲಿರುಳು ಶ್ರಮಿಸುತ್ತೇನೆ. ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿ ಗಳನ್ನ ನೀಡಿ ನುಡಿದಂತೆ ನಡೆದ ಸರ್ಕಾರ ಮತ್ತು ನಮ್ ಬಾಗಲಕೋಟೆ ಜಿಲ್ಲೆಯ ಐದು ಕಾಂಗ್ರೆಸ್ ಶಾಸಕರು ಮಾಡಿರುವಂತ ಅಭಿವೃದ್ಧಿ ಕೆಲಸ ಮತ್ತು ವಿಶೇಷವಾಗಿ ರೈತರಿಗೆ ನೇಕಾರರಿಗೆ ಕೂಲಿಕಾರ್ಮಿಕರಿಗೆ…

Read More

ಕಲಬುರಗಿ: ಈ ಬಾರಿಯೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತ ಸನ್ನತಿಯ ಶಕ್ತಿಪೀಠದಲ್ಲಿ ಸಂಸದ ಡಾ.ಉಮೇಶ್ ಜಾಧವ್ ಸಂಕಲ್ಪ ಮಾಡಿದ್ದಾರೆ.. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಶಕ್ತಿಪೀಠದಲ್ಲಿ ಉಮೇಶ್ ಜಾಧವ್ ಸಂಕಲ್ಪ ಮಾಡಿದ್ದು, ಶ್ರೀ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಕುಳಿತು ಕುಂಕುಮಾರ್ಚನೆ ಸಲ್ಲಿಸಿ ಈ ಬಾರಿಯೂ ಗೆಲ್ಲಿಸುವಂತೆ ಪ್ರಾರ್ಥನೆ ಮಾಡಿದ್ದಾರೆ.. ದೇಶದ ಸಂರಕ್ಷಣೆ ಆಗಬೇಕು ಅಂದರೆ ಮೋದಿ ಪ್ರಧಾನಿ ಆಗಲೇಬೇಕು ಹೀಗಾಗಿ ತಮ್ಮನ್ನೂ ಮತ್ತೊಮ್ಮೆ ಗೆಲ್ಲಿಸಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಲು ಹರಸುವಂತೆ ದೇವಿಯಲ್ಲಿ ಬೇಡಿಕೊಂಡರು.

Read More