Author: AIN Author

ವಿಜಯಪುರ: ಒಂದು ವರ್ಷದ ಹಳೆಯ ಕೋಲ್ಡ್ ಬ್ಲಡ್ ಮರ್ಡರ್ ಕೇಸ್ ಅನ್ನು ಭೇದಿಸುವಲ್ಲಿ ವಿಜಯಪುರ ಪೊಲೀಸರು  ಯಶಸ್ವಿಯಾಗಿದ್ದಾರೆ. ಒಂದು ವರ್ಷದ ಹಿಂದೆ ನಡೆದಿದ್ದ ತಾಯಿ ಮಗನ ಡಬಲ್ ಮರ್ಡರ್ ಪ್ರಕರಣ ಬೇಧಿಸಿ, ಕೊಲೆಗೆ ಕಾರಣನಾದ ಆರೋಪಿಯನ್ನ (Accused) ಬಂಧಿಸಿದ್ದಾರೆ. ಏನಿದು ಕೇಸ್? ಮೈಸೂರು (Mysuru) ಮೂಲದ ಶೃತಿ ಹಾಗೂ ಆಕೆಯ 13 ವರ್ಷದ ಮಗ ರೋಹನ್ ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದರು. 2023ರ ಮಾರ್ಚ್ 13 ರಂದು ಕೊಲೆ ನಡೆದಿತ್ತು. ವಿಜಯಪುರದ ಸಾಗರ್ ನಾಯಕ್ ಎಂಬಾತನಿಂದ ಕೊಲೆ ನಡೆದಿತ್ತು. ಸಾಗರ್ ಇಬ್ಬರನ್ನೂ ಕ್ರೂರವಾಗಿ ಕೊಂದು ಎರಡೂ ಶವಗಳನ್ನ ಆಕೆಯದ್ದೇ ಲಗೇಜ್‌ ಬ್ಯಾಗ್‌ನಲ್ಲಿ ತುಂಬಿ ಮಹಾರಾಷ್ಟ್ರ ಗಡಿಯ ಸಿದ್ದಾಪುರ ಗ್ರಾಮದ ಹೊರವಲಯದ ಬಾವಿಗೆ ಬಿಸಾಡಿದ್ದ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಗೆಳತಿ: ಕೊಲೆ ಆರೋಪಿ ಸಾಗರ್ ಮೈಸೂರಿನಲ್ಲಿದ್ದಾಗ ಫೇಸ್‌ಬುಕ್ ಮೂಲಕ ಶೃತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು, 13 ವರ್ಷದ ಮಗ ಇರೋ ಆಂಟಿ ಬಲೆಗೆ ಬಿದ್ದಿದ್ದ ಸಾಗರ್. ಬಳಿಕ ಆಕೆಯ ನಡತೆ ಮೇಲೆ ಸಂಶಯಗೊಂಡು…

Read More

ಮಡಿಕೇರಿ: ಕಾವೇರಿ ತವರು ಕೊಡಗಿನ (Kodagu) ಐದು ಗ್ರಾಮ ಪಂಚಾಯತ್‌ಗಳ 15 ಉಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ (Harangi Reservoir) 400 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ. ಬಿರು ಬಿಸಿಲಿನ ಕಾರಣದಿಂದ ಕಾವೇರಿ ನದಿಯಲ್ಲಿ (Cauvery River) ನೀರಿನ ಹರಿವು ತೀರಾ ಕಡಿಮೆಯಾಗಿದ್ದು, ಹೆಬ್ಬಾಲೆ, ಶಿರಂಗಾಲ ಸೇರಿದಂತೆ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ 15 ಉಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೆಬ್ಬಾಲೆಯಲ್ಲಿರುವ ಗ್ರಾಮೀಣ ಕುಡಿಯುವ ನೀರಿನ ಘಟಕಕ್ಕೆ ಕಾವೇರಿ ನದಿಯಿಂದ ನೀರು ದೊರಕದ ಹಿನ್ನೆಲೆಯಲ್ಲಿ ಇದೀಗ ಹಾರಂಗಿಯಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಕೊಡಗು ಮತ್ತು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಗ್ರಾಮಗಳ ದನಕರುಗಳಿಗೆ ಮತ್ತು ಕುಡಿಯುವ ನೀರಿನ ಸರಬರಾಜಿಗೆ ಅನುಕೂಲವಾಗಲಿದೆ. https://ainlivenews.com/holi-festival-is-celebrated-all-over-the-country-do-you-know-the-importance/ ಅಣೆಕಟ್ಟೆಯಿಂದ ದಿನ 100 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಆದರೆ ಇದೀಗ ಕಾವೇರಿ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಜಲಚರಗಳಿಗೂ ನೀರು ಇಲ್ಲದಂತಾಗುವ…

Read More

ಬೀದರ್: ಎನ್‌ಡಿಆರ್‌ಎಫ್ ಪರಿಹಾರಕ್ಕಾಗಿ ಸರ್ಕಾರ ಸುಪ್ರೀಂನಲ್ಲಿ ಕೇಸ್ ಹಾಕಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಿದ್ದರಾಮಯ್ಯನವರ (Siddaramaiah) ಈ ನಡೆ ಒಳ್ಳೆಯದಲ್ಲ ಎಂದು ಬೀದರ್‌ನಲ್ಲಿ ಸಿಎಂ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಗುಡುಗಿದರು. ಸಿದ್ದರಾಮಯ್ಯ‌ ಕಾಮನ್‌ಸೆನ್ಸ್ ಇಲ್ಲದ ಸಿಎಂ. ಮೇ‌ ತಿಂಗಳಲ್ಲಿ ಬರಗಾಲ ಬಂದರೂ ಮೂರು ತಿಂಗಳು ಬಿಟ್ಟು ಘೋಷಿಸಿದ್ದು ಯಾಕೆ? ಮೂರು ತಿಂಗಳೇನು ಕತ್ತೆ ಕಾಯ್ತಿದ್ರಾ? 3 ತಿಂಗಳು ವಿಳಂಬ ಮಾಡದೇ ಇದ್ದಿದ್ರೆ ಕೇಂದ್ರ ಸರ್ಕಾರ ಪರಿಹಾರ ಹಣ ಪಡೆಯಬಹುದಿತ್ತಲ್ಲಾ ಎಂದು ಟಾಂಗ್‌ ಕೊಟ್ಟರು.  https://ainlivenews.com/holi-festival-is-celebrated-all-over-the-country-do-you-know-the-importance/ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಟ್ಟು ರಾಜ್ಯ ಸರ್ಕಾರ ದಿವಾಳಿಯಾಗಿದೆ. ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀದಿಗೆ ಬೀಳುತ್ತೆ. ಬೊಮ್ಮಾಯಿ 25 ಸಾವಿರ ಕೋಟಿ ರೂ‌. ಉಳಿತಾಯ ಬಜೆಟ್‌ನಿಂದ ಸರ್ಕಾರ ಬದುಕಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ಆರು ತಿಂಗಳ ಹಿಂದೆಯೇ ಬೀದಿಗೆ ಬರುತ್ತಿದ್ದರು ಎಂದು ಕಿಡಿಕಾರಿದರು. ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುತ್ತಾರೆ ಅಂತಾ ಹೇಳಿದ್ರು. ಆದರೆ ಅವರು ಸೋತರೆ ಮಂತ್ರಿ ಸ್ಥಾನ ಹೋಗಲಿದೆ ಎಂಬ ಟಾಸ್ಕ್ ಕೊಟ್ಟಿದ್ದರು.…

Read More

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ನಾವು ಅನ್ನದಿಂದ ಹಿಡಿದು, ವಿವಿಧ ರೀತಿಯ ತಿಂಡಿ, ತರಕಾರಿ, ಹಣ್ಣು ಹಂಪಲುಗಳನ್ನು ಫ್ರಿಡ್ಜ್ನಲ್ಲಿ ಇಟ್ಟು ಸೇವಿಸುತ್ಟೇವೆ, ಇನ್ನೂ ಬೇಯಿಸಿದ ಚಿಕನ್ ಆಗಿರಲಿ, ಹಸಿ ಚಿಕನ್ ಆಗಿರಲಿ ಹೆಚ್ಚು ಹೊತ್ತು ಹಾಳಾಗದೇ ಇರುವಂತೆ ಕಾಪಾಡುವುದು ದೊಡ್ಡ ಸವಾಲಿನ ಕೆಲಸ. ಸಾಮಾನ್ಯವಾಗಿ ಕೋಳಿ ಮಾಂಸ ತಂದ ತಕ್ಷಣ ಕೆಲವರು ಅಡುಗೆ ಮಾಡುತ್ತಾರೆ. ಮತ್ತೆ ಕೆಲವರು ಒಂದಷ್ಟು ಬಳಸಿ, ಇನ್ನೂ ಒಂದಷ್ಟನ್ನು ಫ್ರಿಜ್ನಲ್ಲಿ ಇಡುತ್ತಾರೆ. ಆದರೆ ಅಡುಗೆ ಮಾಡಿದ ಮಾಂಸವೇ ಆಗಿರಲಿ, ಹಸಿ ಚಿಕನ್ ಆಗಿರಲಿ ಅದನ್ನು ಫ್ರಿಜ್ನಲ್ಲಿಟ್ಟು ಇದ್ದಕ್ಕಿದ್ದಂತೆ ಬಾಗಿಲು ತೆರೆದಾಗ ಅದರಿಂದ ಕೆಲವೊಮ್ಮೆ ಬಲವಾದ ವಾಸನೆ ಬರುತ್ತದೆ. ಈ ರೀತಿ ವಾಸನೆಯು ನೀವು ಶೈತ್ಯೀಕರಿಸಿದ…

Read More

ಹುಬ್ಬಳ್ಳಿ: ನಾನು ಮೊದಲೇ ಹೇಳದಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ನಾನು ಮೊದಲೇ ಹೇಳಿದ್ದೇ ಯಾವುದೇ ಷಡ್ಯಂತ್ರ ಇಲ್ಲ ಯಾರು ವಿರೋಧ ಮಾಡಿಲ್ಲ ಆದ್ದರಿಂದ ಟಿಕೆಟ್ ನನಗೆ ಸಿಕ್ಕಿದೆ ಎಂದ ಅವರು, ನನಗೆ ಟಿಕೆಟ್ ನೀಡಿದ ಕೇಂದ್ರದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ರಾಜ್ಯದ ಪ್ರಮುಖರಿಗರ ಧನ್ಯವಾದಗಳನ್ನ ತಿಳಿಸುವೆ ಎಂದರು. ಇನ್ನು ಅಲ್ಲಿನ ಸ್ಥಳೀಯ ನಾಯಕರನ್ನ ಸಹ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಎಂದ ಅವರು ನನ್ನ ಸಂಬಂಧಿಕರಾದ ಮಾಜಿ ಸಚಿವ  ದಿವಂಗತ. ಸುರೇಶ ಅಂಗಡಿ, ಸಂಸದರಾದ ಮಂಗಳಾ ಅಂಗಡಿ ಸಾಕಷ್ಟು ಅಭಿವೃದ್ಧಿ ಪರ ಕಾರ್ಯ ಮಾಡಿದ್ದಾರೆ. ಅವರ ಕಾರ್ಯ ನನ್ನ ಗೆಲುವಿಗೆ ಶ್ರೀರಕ್ಷೇ ಆಗುತ್ತವೆ ಎಂದರು. https://ainlivenews.com/holi-festival-is-celebrated-all-over-the-country-do-you-know-the-importance/ ಶೀಘ್ರವೇ…

Read More

ಬೆಂಗಳೂರು: ವಿದ್ಯಾರ್ಥಿಗಳ ಪಾಲಿನ ಪ್ರಮುಖ ಘಟ್ಟಗಳಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯೂ ಒಂದು. ವಿದ್ಯಾರ್ಥಿ ಸಮೂಹಕ್ಕೆ ಮಾತ್ರವಲ್ಲ ಅವರ ಪೋಷಕರು ಹಾಗೂ ಶಿಕ್ಷಕರಿಗೂ ಇದು ಅಗ್ನಿಪರೀಕ್ಷೆಯೇ ಹೌದು. ಇಂದಿನಿಂದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬೋರ್ಡ್‌ ಪರೀಕ್ಷೆ ಆರಂಭವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆ ಸಹ ಸಜ್ಜಾಗಿದೆ. ಇದರ ಮಧ್ಯೆ ಖಾಸಗಿ ಶಾಲೆಗಳಿಂದ ಮತ್ತೊಂದು ಖ್ಯಾತೆ ಶುರುವಾಗಿದೆ.  ಈ ಕುರಿತ ಒಂದು ಕಂಪ್ಲೀಟ್‌ ರಿಪೋರ್ಟ್ ಇಲ್ಲಿದೆ. ರಾಜ್ಯದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ಬೆನ್ನಲ್ಲೇ ವಿದ್ಯಾರ್ಥಿಗಳ ಮತ್ತೊಂದು ಪ್ರಮುಖ ಘಟ್ಟ ಅಂತಲೇ ಬಿಂಬಿತವಾಗಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭವಾಗಲಿದೆ. ಇನ್ನು ಈ ಕುರಿತಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಹ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಯಾವುದೇ ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಆ ಕ್ರಮಗಳ ಬಗ್ಗೆ ನೋಡೋದಾದ್ರೆ.. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಗೆ ಕೌಂಟ್‌ಡೌನ್‌..! 25/03/2024ರಿಂದ 06/04/2024ವರಗೆ ನಡೆಯಲಿರುವ ಪರೀಕ್ಷೆಗಳು ಒಟ್ಟು 2,750 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 8.69 ಲಕ್ಷ ವಿಧ್ಯಾರ್ಥಿಗಳು ವಿದ್ಯಾರ್ಥಿಗಳು ಒಟ್ಟು…

Read More

ಬೆಂಗಳೂರು: ರಾಜ್ಯದ 3 ಪಕ್ಷಗಳ ಲೋಕಸಭಾ ಅಖಾಡ ಒಂದು ಹಂತಕ್ಕೆ ಬಂದು ನಿಂತಿದೆ, ಕಾಂಗ್ರೆಸ್ ನ 4 ಟಿಕೆಟ್ ಕಗ್ಗಂಟು ಕ್ಲಿಯರ್ ಆಗ್ತಿದ್ದು. ಬಿಜೆಪಿಯ 5 ಕ್ಷೇತ್ರಳ ಟೆನ್ಷನ್ ಇನ್ನು ಮುಗಿದಿಲ್ಲ, ದಳಪತಿಗಳಿಗೆ ಸಕ್ಕರೆ ನಾಡು ಮಂಡ್ಯವೇ ಕಹಿಯಾಗಿದೆ. ಮಂಡ್ಯದ ಗೌಡ್ತಿ ಸುಮಲತಾಗೆ ಟಿಕೆಟ್ ಕೈತಪ್ಪಿದ್ದು ಕನ್ಫರ್ಮ್ ಆಗ್ತಿದ್ದಂತೆ ಬಂಡಾಯದ ಬಾವುಟ ಹಾರಿಸಲು ರೆಡಿಯಾಗ್ತಿದ್ದಾರೆ ಇದು ಜೆಡಿಎಸ್ ನಾಯಕರಿಗೆ ತಲೆಬಿಸಿ ತಂದೊಡ್ಡಿದೆ. ಈ ಮಧ್ಯೆ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸಿ ಅಂತಾ ಒತ್ತಡ ಹೆಚ್ಚಾಗ್ತಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಇನ್ನು ಮುಗಿದಿಲ್ಲ. ಕಾಂಗ್ರೆಸ್ ತನ್ನ 24 ಅಭ್ಯರ್ಥಿಗಳನ್ನ ಘೋಷಿಸಿ 4ನ್ನು ಪೆಡ್ಡಿಂಗ್ ಇಟ್ಟಿದೆ. ಬಿಜೆಪಿ 25 ರಲ್ಲಿ 20 ಕ್ಷೇತ್ರ ಘೋಷಿಸಿ 5 ಕ್ಷೇತ್ರ ಪೆಂಡಿಂಗ್ ಇಟ್ಟಿದೆ. ಜೆಡಿಎಸ್ ತನಗೆ ಸಿಕ್ಕಿರೋ 3 ಕ್ಷೇತ್ರಗಳಲ್ಲಿ ಹಾಸನ. ಕೋಲಾರಕ್ಕೆ ಕ್ಯಾಂಡಿಡೇಟ್ ಗಳನ್ನು ಫೈನಲ್ ಮಾಡಿದ್ರೆ ಸಕ್ಕರೆಯ ನಾಡು ಮಂಡ್ಯವೇ ಕಗ್ಗಂಟಾಗಿದೆ.. ಕಾಂಗ್ರೆಸ್ ಪಕ್ಷ ತಾವು ಉಳಿಸಿಕೊಂಡಿರುವ 4…

Read More

ರೈತ ಅರಿಶಿನ ಬಿತ್ತನೆ ಖರೀದಿಸಿ, ಅದನ್ನು ನಾಟಿ ಮಾಡಿಸಿ, ನಂತರ ಉಪಚಾರ ಮಾಡಿ, ಕಟಾವು ಮಾಡುವುದು, ಬೇಯಿಸುವುದು, ಪಾಲಿಶ್‌ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸುವವರೆಗೆ ಆಗುವ ವೆಚ್ಚ ಕ್ವಿಂಟಾಲ್‌ವೊಂದಕ್ಕೆ 6 ಸಾವಿರ ರೂ. ಇದೀಗ ಅರಿಶಿನಕ್ಕೆ ಧಾರಣೆಯೇ ಕ್ವಿಂಟಾಲ್‌ಗೆ 5500ರಿಂದ 5800 ರೂ. ಮಾತ್ರ. ಇದಕ್ಕೆ ಕಾರಣ ಹೊರ ದೇಶಗಳಿಗೆ ಅರಿಶಿನ ರಫ್ತಾಗುತ್ತಿಲ್ಲ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡ ರಫ್ತು ಇನ್ನು ಆರಂಭಗೊಂಡಿಲ್ಲ. ಹೀಗಾಗಿ ಧಾರಣೆ ಮೇಲಕ್ಕೇರುತ್ತಿಲ್ಲ ಎನ್ನುತ್ತಾರೆ ಖರೀದಿದಾರರು. ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರಿಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್​ಗೆ ಬರೋಬ್ಬರಿ 41,101 ರೂಪಾಯಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಮೂರು ಎಕರೆ ಅರಿಶಿಣ ಬೆಳೆದ ರೈತ ಪ್ರತಿ ಎಕರೆಗೆ 25-28 ಕ್ವಿಂಟಲ್ ಅರಿಶಿನ ಇಳುವರಿ ಬಂದಿದ್ದು ಶ್ರಮಕ್ಕೆ ವರದಾನವಾಗಿದೆ. ರೈತನು ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಸಮರ್ಪಕ ನೀರು ಔಷಧೋಪಚಾರದೊಂದಿಗೆ ಉತ್ತಮ ಇಳುವರಿಗೆ ಕಂಡಿದ್ದಾರೆ. ಈಗಾಗಲೇ 18…

Read More

ಜೈಪುರ: ನಿಕೋಲಸ್‌ ಪೂರನ್‌, ಕೆ.ಎಲ್‌ ರಾಹುಲ್‌ (KL Rahul and Nicholas Pooran) ಅವರ ಅರ್ಧಶತಕಗಳ ಹೋರಾಟದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ ತಂಡ (Rajasthan Royals), ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 20 ರನ್‌ಗಳ ಅಮೋಘ ಜಯ ಸಾಧಿಸಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿತ್ತು. 194 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್‌ನಲ್ಲಿ ಲಕ್ನೋ ತಂಡದ ಗೆಲುವಿಗೆ 27 ರನ್‌ ಅಗತ್ಯವಿತ್ತು. ಬೌಲಿಂಗ್‌ನಲ್ಲಿದ್ದ ಅವೇಶ್‌ ಖಾನ್‌ ಮೊದಲೇ 2 ವೈಟ್‌ ಬಿಟ್ಟುಕೊಟ್ಟರು. ಉಳಿದ ನಾಲ್ಕು ಎಸೆತಗಳಲ್ಲಿ ಕ್ರೀಸ್‌ನಲ್ಲಿದ್ದ ಕೃನಾಲ್‌ ಪಾಂಡ್ಯ ಹಾಗೂ ನಿಕೋಲಸ್‌ ಪೂರನ್‌ ಕೇವಲ ಒಂದೊಂದು ರನ್‌ ಗಳಿಸುವಲ್ಲಿ ಸಮರ್ಥರಾದರು. ಇದರಿಂದ ಗೆಲುವು ರಾಜಸ್ಥಾನ್‌ ಪಾಲಾಯಿತು. ಬೃಹತ್‌…

Read More

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ. ಹೋಳಿಯ ಇತಿಹಾಸ? ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ…

Read More