Author: AIN Author

ಬೆಂಗಳೂರು:- ನಗರ ಸೇರಿ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಆರಂಭವಾಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಇಂದಿನಿಂದ ರಾಜ್ಯಾದ್ಯಂತ ವಾರ್ಷಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 2750 ಕೇಂದ್ರಗಳಲ್ಲಿ ಏಪ್ರಿಲ್ 6ರವರೆಗೆ ಪರೀಕ್ಷೆಗಳು ನಡೆಯಲಿವೆ. ರಾಜ್ಯದಲ್ಲಿ ಈ ಬಾರಿ ಪರೀಕ್ಷೆಗೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ಪೈಕಿ 4,41,910 ಬಾಲಕರು, 4,28,058 ಬಾಲಕಿಯರಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ 8.10 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು (ರೆಗ್ಯಲರ್), 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 54,254 ವಿಶೇಷ ಚೇತನ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿ/ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷೆ ಮಂಜುಶ್ರೀ ತಿಳಿಸಿದ್ದಾರೆ.ನಿಷೇಧಾಜ್ಞೆ:ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತ 200ಮೀ ಅಂತರದಲ್ಲಿನ…

Read More

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಎಲ್ಲಾರು ತಮ್ಮ ದಾಹವನ್ನೂ ತಣಿಸಲು ಪಾನೀಯಗಳ ಮೊರೆಹೋಗುತ್ತಿದ್ದಾರೆ. ಅದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೆಎಂಎಫ್​​ನ ನಂದಿನಿ ಮಜ್ಜಿಗೆಗೆ ಬೇಡಿಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿರುವುದು ತಿಳಿದುಬಂದಿದೆ. ಕರ್ನಾಟಕ ಹಾಲು ಒಕ್ಕೂಟದ ಅಂಕಿಅಂಶಗಳ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ದಿನಕ್ಕೆ ನಂದಿನಿ ಮಜ್ಜಿಗೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,243 ಲೀಟರ್ ಬೇಡಿಕೆ ಇತ್ತು. ಆದರೆ ಮಾರ್ಚ್‌ನಲ್ಲಿ ದಿನಕ್ಕೆ 4,615 ಲೀಟರ್​ಗೆ ಹೆಚ್ಚಾಗಿದೆ. ಇದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. https://ainlivenews.com/holi-festival-is-celebrated-all-over-the-country-do-you-know-the-importance/ ಸದ್ಯ 200 ಮಿ.ಲೀ. ಮಜ್ಜಿಗೆ ಪ್ಯಾಕೆಟ್‌ಗಳಿಗೆ ಭಾರಿ ಬೇಡಿಕೆ ಇದೆ. ಫೆಬ್ರವರಿಯಲ್ಲಿ ದಿನಕ್ಕೆ ಒಟ್ಟು 6,215 ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದವು. ಇದು ಮಾರ್ಚ್‌ನಲ್ಲಿ ದಿನಕ್ಕೆ 23,075 ಪ್ಯಾಕೆಟ್‌ಗಳಿಗೆ ಏರಿಕೆಯಾಗಿದೆ. ಕೆಎಂಎಫ್​ ಅಂಕಿಅಂಶಗಳ ಪ್ರಕಾರ, 2023 ರ ಮಾರ್ಚ್​ಗೆ ಹೋಲಿಸಿದರೆ ಮಾರ್ಚ್ 2024 ರಲ್ಲಿ ಮಜ್ಜಿಗೆ ಬೇಡಿಕೆಯು ಶೇ 200 ರ ವರೆಗೆ ಹೆಚ್ಚಾಗಿದೆ. 2023 ರ ಮಾರ್ಚ್​ನಲ್ಲಿ, ಮಜ್ಜಿಗೆಯ ಬೇಡಿಕೆಯು ದಿನಕ್ಕೆ 2,830 ಲೀಟರ್ ಆಗಿತ್ತು.

Read More

ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ರಾಯಚೂರು ಮೂಲದ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಬಂಧನಾಗಿದ್ದು, ಮಗುವನ್ನು ಸಹ ರೀಲ್ಸ್‌ನಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಬಂದ ಹಣವನ್ನು ಅವರ ಪೋಷಕರಿಗೆ ಕೊಡುವ ಹೇಳಿಕೆ ನೀಡಿದ್ದರು. ಇದು ಕೂಡ ಕಾನೂನು ಬಾಹಿರ, ಜೊತೆಗೆ ದತ್ತು ಪಡೆಯೋ ಸಂಬಂಧ ಯಾವುದೇ ಕಾನೂನು ಪಾಲನೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಒಂದು ವೇಳೆ ದತ್ತು ಪಡೆದರೂ ಆ ಮಗುವಿಗೆ ಸಂಬಂಧಿಸಿದ ಯಾವುದೇ ಗುರುತಿನ ದಾಖಲೆಗಳು ಮತ್ತು ಪೋಷಕರ ಗುರುತು ಬಿಟ್ಟುಕೊಡುವುದು ಕಾನೂನು ಬಾಹಿರ. ಸದ್ಯ 4 ದಿನ ಕಸ್ಟಡಿಗೆ ಪಡೆದ ಬ್ಯಾಡರಹಳ್ಳಿ ಪೊಲೀಸರು, https://ainlivenews.com/holi-festival-is-celebrated-all-over-the-country-do-you-know-the-importance/ ನಿನ್ನೆಯಷ್ಟೇ (ಭಾನುವಾರ) ರಾಯಚೂರಿಗೆ ಸೋನು ಶ್ರೀನಿವಾಸ್ ಗೌಡರನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿ, ಸ್ಥಳೀಯರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು. ಇಂದಿಗೆ (ಸೋಮವಾರ) ಸೋನು ಶ್ರೀನಿವಾಸ್ ಗೌಡರ ಪೊಲೀಸ್ ಕಸ್ಟಡಿ ಅಂತ್ಯ…

Read More

ಹುಬ್ಬಳ್ಳಿ: ನಗರದ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು, 8 ಜನರನ್ನು ಬಂಧಿಸಿದ್ದಾರೆ. ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಸಮೀತ ಕರನಾಚಿ, ಶಾನವಾಜ ಖಾನ್ ಸೇರಿ ಮೂವರನ್ನು ಬಂಧಿಸಿದ್ದು, 2,320 ರೂ. ಮೌಲ್ಯದ 232 ಗ್ರಾಂ ಗಾಂಜಾ ಜಪ್ತಿ ಮಾಡಿದೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಯ ವಿದ್ಯಾನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸಿದ್ದಾರ್ಥ ಅಥಣಿ ಎನ್ನುವಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಗಿದ್ದಾನೆ. ಬಂಧಿತನಿಂದ 9ಸಾವಿರ ರೂ. ಮೌಲ್ಯದ 180 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಯ ಮಂಟೂರ ರೋಡ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮಲ್ಲಿಕಜಾನ್ ಬಿಜಾಪುರ ಎಂಬಾತನನ್ನು ಬಂದಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಬಂಧಿತನಿಂದ 4,800 ರೂ. ಮೌಲ್ಯದ 160 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡದ ಪೆಪ್ಪಿ ಕಂಪನಿ ಹತ್ತಿರ…

Read More

ಹುಬ್ಬಳ್ಳಿ: ಯುವ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ ಹಂಜಗಿ ಅವರ ಹುಟ್ಟು ಹಬ್ಬವನ್ನ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ- 73 ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರೂ ಆಗಿರುವ ಮಹೇಶ ಹಂಜಗಿ ಅವರು ಇನ್ನಷ್ಟು ಜನಪರ ಕಾರ್ಯ ಮಾಡಲಿ ಬಡವರ ಹಿಂದುಳಿದ ಹಾಗೂ ಸಮಾಜದ ತುಳಿತಕ್ಕೆ‌‌ ಒಳಗಾದವರ ಏಳ್ಗೆಗೆ ಸದಾ ತನು ಮನ ಧನದಿಂದ ಶ್ರಮಿಸಲಿ ಎಂದು ಹಾರಿಸಲಾಯಿತು. ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ನಿರ್ಮಲಾ ಹಂಜಿಗಿ, ಇಂದಿರಾ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ ಹಂಜಗಿ, ಮುಖಂಡರಾದ ಸೋಮಣ್ಣ ಹಂಜಿಗಿ, ತಿರುಪಲ ಪಟೇಲ್, ವೀರೇಶ ಇಂದರಗಿ, ಸುರೇಶ ವಜ್ರವಣ್ಣವರ, ಮಹಾಂತೇಶ ಬಸವರಾಜ ಗವಳೇಕಾರ, ಕೃಷ್ಣ ಭಟ್ ನೂರಾರು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.

Read More

ಕಂಪ್ಲಿ: ಕುರುಗೋಡು ದೊಡ್ಡ ಬಸವೇಶ್ವರ ಜಾತ್ರೆ ಪ್ರಯುಕ್ತ ಕಂಪ್ಲಿ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕುರುಗೋಡು ದೊಡ್ಡ ಬಸವೇಶ್ವರ ಜಾತ್ರೆಗೆ ಮೂರನೇ ವರ್ಷ ಪಾದಯಾತ್ರೆಗೆ ಕಂಪ್ಲಿ ಶಾಸಕ ಜೆಎನ್ ಗಣೇಶ್ ಚಾಲನೆ ನೀಡಿದರು. ಕಂಪ್ಲಿ ಪೇಟೆ ಬಸವೇಶ್ವರ ದೇವಸ್ಥಾನದಿಂದ ಕುರುಗೋಡು ದೊಡ್ಡ ಬಸವೇಶ್ವರ ದೇವಸ್ಥಾನ ವರಿಗೆ ಪಾದಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ ಶಾಸಕರೂ ಭಾಗಿಯಾಗಿದ್ದರು. 100 ರಿಂದ 150 ಜನ ಪಾದಯಾತ್ರೆಯಲ್ಲಿ ಶಾಸಕರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಮಟ್ಟದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕುರುಗೋಡು ದೊಡ್ಡ ಬಸವೇಶ್ವರ ಜಾತ್ರೆ ಪ್ರಯುಕ್ತ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು

Read More

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-3 (Chandrayaan-3)ಮಿಷನ್‌ನ ವಿಕ್ರಂ ಲ್ಯಾಂಡರ್ (Vikram Lander) ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) ಅನುಮೋದನೆ ನೀಡಿದೆ. ಇದೀಗ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವ ಶಕ್ತಿ’ (Shiv Shakti) ಎಂಬ ಹೆಸರಿನಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆದಿದ್ದರು. ಇದಾದ 7 ತಿಂಗಳ ಬಳಿಕ ಈ ಸ್ಥಳಕ್ಕೆ ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಡಲು ಐಎಯು ಅನುಮೋದನೆ ನೀಡಿದೆ. https://ainlivenews.com/holi-festival-is-celebrated-all-over-the-country-do-you-know-the-importance/ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್‌ಗೆ ‘ಸ್ಪ್ಯಾಟಿಯೋ ಶಿವ ಶಕ್ತಿ’ ಎಂಬ ಹೆಸರನ್ನಿರಿಸುವಂತೆ ಪ್ಯಾರಿಸ್ ಮೂಲದ ಐಎಯು ಮಾರ್ಚ್ 19 ರಂದು ಅನುಮೋದನೆ ನೀಡಿದೆ. ಗ್ಯಾಜೆಟಿಯರ್ ಆಫ್ ಪ್ಲಾನೆಟರಿ ನಾಮಕರಣದ ಪ್ರಕಾರ ಖಗೋಳ ಸಂಸ್ಥೆಯು ಅನುಮೋದಿಸಿದ ಗ್ರಹಗಳ ಹೆಸರುಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಆಗಸ್ಟ್…

Read More

ಲಕ್ನೋ: ಹೋಳಿ ಸಂಭ್ರಮಾಚರಣೆ (Holi) ವೇಳೆ ಮುಸ್ಲಿಂ ಮಹಿಳೆಗೆ (Muslim Women) ಕಿರುಕುಳ ನೀಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ (Uttar Pradesh) ಬಿಜ್ನೋರ್‌ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮುಸ್ಲಿಂ ದಂಪತಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಥಳದಲ್ಲೇ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದ ಗುಂಪೊಂದು, ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದಿದ್ದಾರೆ. ಅಲ್ಲದೇ ಪೈಪ್‌ ಮೂಲಕ ಮಹಿಳೆ ಮೇಲೆ ನೀರು ಹಾರಿಸಿದ್ದಾರೆ. ಇದಕ್ಕೆ ಮಹಿಳೆ ವಿರೋಧಿಸಿದರೂ ಗುಂಪು ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಮುಸ್ಲಿಂ ಮಹಿಳೆ ಮುಖಕ್ಕೆ ಬಲವಂತವಾಗಿ ಬಣ್ಣ ಬಳಿದಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.  https://ainlivenews.com/holi-festival-is-celebrated-all-over-the-country-do-you-know-the-importance/ ಮಹಿಳೆ ಇದಕ್ಕೆ ವಿರೋಧಿಸಿದ್ದಕ್ಕೆ, ‘ಇದು 70 ವರ್ಷಗಳ ಹಿಂದಿನ ಸಂಪ್ರದಾಯ’ ಎಂದು ಗುಂಪು ಹೇಳಿದೆ. ಕೊನೆಗೆ ಗುಂಪಿನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ವ್ಯಕ್ತಿ ವೇಗವಾಗಿ ಬೈಕ್‌ ಚಲಾಯಿಸುತ್ತಾರೆ. ಅವರ ಮುಂದೆ ಹೋಗುತ್ತಿದ್ದಂತೆ, ಹುಡುಗರ ಗುಂಪು ಧಾರ್ಮಿಕ ಘೋಷಣೆ ಕೂಗಿರುವ ದೃಶ್ಯವೂ ವೀಡಿಯೋದಲ್ಲಿದೆ. ವಿಡಿಯೋ ವೈರಲ್ ಆದ ಕೂಡಲೇ ಬಿಜ್ನೋರ್…

Read More

ರಾಯಚೂರು: ತೀವ್ರ ಪೈಪೋಟಿ ನಡುವೆ ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಒಲಿದಿದೆ. ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಬಿ.ವಿ.ನಾಯಕ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ರಾಜಾ ಅಮರೇಶ್ವರ ನಾಯಕ್ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಬಿಜೆಪಿ ಹೈಕಮಾಂಡ್ ಕೊನೆಗೆ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಟಿಕೆಟ್ ಘೋಷಿಸಿದೆ. ಲಿಂಗಸುಗೂರಿನ ಗುಂತಗೋಳ ಸಂಸ್ಥಾನದ ರಾಜ ಮನೆತನದವರಾದ ರಾಜಾ ಅಮರೇಶ್ವರ ನಾಯಕ್ BA, LLB ಪದವೀಧರರಾಗಿದ್ದಾರೆ. ಎರಡು ಬಾರಿ ಶಾಸಕರಾಗಿದ್ದು, ಎರಡು ಬಾರಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.   1989ರಲ್ಲಿ ಬಂಗಾರಪ್ಪ ಸಿಎಂ ಆಗಿದ್ದ ವೇಳೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಧಾರ್ಮಿಕ ದತ್ತಿ ಸಚಿವರಾಗಿದ್ದರು. https://ainlivenews.com/holi-festival-is-celebrated-all-over-the-country-do-you-know-the-importance/ 1999 ರಲ್ಲಿ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಲ್ಮಲಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿಖಾನೆ ರಾಜ್ಯ ಸಚಿವರಾಗಿದ್ದರು. 2019ರಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿವಿ ನಾಯಕ್ ವಿರುದ್ಧ…

Read More

ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಇಂದಿನ ದರಗಳನ್ನು ಬಿಡುಗಡೆ ಮಾಡಿವೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017 ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಬಿಹಾರದಲ್ಲಿ ಪೆಟ್ರೋಲ್ ಬೆಲೆ 30 ಪೈಸೆ ಮತ್ತು ಡೀಸೆಲ್ ಬೆಲೆ 28 ಪೈಸೆ ಏರಿಕೆಯಾಗಿದೆ. ಛತ್ತೀಸ್‌ಗಢದಲ್ಲಿ ನಿನ್ನೆಗೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 54 ಪೈಸೆ ಹೆಚ್ಚಾಗಿದೆ. ಇದಲ್ಲದೇ ಗುಜರಾತ್, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ ಪೆಟ್ರೋಲ್ 10 ಪೈಸೆ ಮತ್ತು ಡೀಸೆಲ್ 12 ಪೈಸೆ ಕಡಿಮೆಯಾಗಿದೆ. ಹರ್ಯಾಣ ಮತ್ತು ಹಿಮಾಚಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದೆ. ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ ರೂ 94.72 ಮತ್ತು ಡೀಸೆಲ್ ಲೀಟರ್‌ಗೆ ರೂ 87.62 – ಮುಂಬೈನಲ್ಲಿ ಪೆಟ್ರೋಲ್ ರೂ 104.21 ಮತ್ತು ಡೀಸೆಲ್ ರೂ 92.15…

Read More