Author: AIN Author

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡುವೆ ಎಂದು ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರಾದ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಂಟಿಬಿ ನಾಗರಾಜ್ ಮತ್ತು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಟಿಕೆಟ್ ಘೋಷಣೆಯಾಗುವ ಮೊದಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ ಎಂದು ಹೇಳಿದ ಸುಧಾಕರ್, ದೇಶ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕಾಲಘಟ್ಟದಲ್ಲಿದೆ, ಇಂಥ ಕಾಲಘಟ್ಟದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದು ಅದೃಷ್ಟವಲ್ಲದೆ ಬೇರೇನೂ ಅಲ್ಲ ಎಂದರು. ವಿಧಾನಸಭಾ ಸದಸ್ಯನಾಗಿ ತಾನು ಚಿಕ್ಕಬಳ್ಳಾಪುರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಜನರಿಗೆ ಗೊತ್ತಿವೆ, ಅದೇ ಪ್ರೀತಿ ವಿಶ್ವಾಸ ಜನ ಮುಂದುವರಿಸಿದರೆ, ಅಭಿವೃದ್ಧಿಯನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೂ ವಿಸ್ತರಿಸಿ ಅದನ್ನು ಮಾದರಿ ಲೋಕಸಭಾ…

Read More

ದೆಹಲಿ: ಅಯೋಧ್ಯೆ (Ayodhya) ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಸುಂದರ ರಾಮಲಲ್ಲಾ ವಿಗ್ರಹವನ್ನು (Ram Lalla Idol) ಕೆತ್ತನೆ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಮತ್ತೆ ಸುದ್ದಿಯಲ್ಲಿದ್ದಾರೆ. https://x.com/yogiraj_arun/status/1771489213122290035?s=20 ಗರ್ಭಗುಡಿಯಲ್ಲಿರುವ ರಾಮಲಲ್ಲಾ ವಿಗ್ರಹದಂತೆಯೇ ಮತ್ತೊಂದು ಪುಟ್ಟ ವಿಗ್ರಹಕ್ಕೆ ಶಿಲ್ಪಿ ರೂಪ ನೀಡಿದ್ದಾರೆ. ರಾಮಲಲ್ಲಾನ ಚಿಕಣಿ ರೂಪವನ್ನು ಕೆತ್ತನೆ ಮಾಡಿ ಭಕ್ತರ ಮನಗೆದ್ದಿದ್ದಾರೆ. ರಾಮಲಲ್ಲಾನ ಮತ್ತೊಂದು ಪುಟ್ಟ ವಿಗ್ರಹ ಹಿಡಿದುಕೊಂಡಿರುವ ಫೋಟೊ ಈಗ ಎಲ್ಲೆಡೆ ವೈರಲ್‌ ಆಗಿದೆ ರಾಮಮಂದಿರ ಗರ್ಭಗುಡಿಗೆ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ, ನಾನು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ಮತ್ತೊಂದು ಪುಟ್ಟ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದೆ ಎಂದು ಎಕ್ಸ್‌ನಲ್ಲಿ ಅರುಣ್‌ ಯೋಗಿರಾಜ್‌ ಬರೆದುಕೊಂಡಿದ್ದಾರೆ. ಸಾಲುಗಳ ಜೊತೆ ಪುಟ್ಟ ವಿಗ್ರಹದ ಫೋಟೊವನ್ನು ಹಂಚಿಕೊಂಡಿದ್ದಾರೆ

Read More

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ (NDA) ಮೈತ್ರಿಕೂಟದ ಅಭ್ಯರ್ಥಿಯಾದ ಡಾ.ಕೆ.ಸುಧಾಕರ್ ಡಾ.ಕೆ.ಸುಧಾಕರ್‌ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ  HD ಕುಮಾರಸ್ವಾಮಿ ಅವರನ್ನು ಸೌಹಾರ್ಧ ಭೇಟಿಯಾದರು. ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.

Read More

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ ಟಿಕೆಟ್ ವಂಚಿತ ಕರಡಿ ಸಂಗಣ್ಣ ಆರ್ ಟಿ‌ ನಗರದ ನಿವಾಸದಲ್ಲಿ ಭೇಟಿಯಾಗಿ ಸಂಗಣ್ಣ ಚರ್ಚೆ ತಮ್ಮ ಬೆಂಬಲಿಗರ ಜೊತೆಗೂಡಿ ಬೊಮ್ಮಾಯಿ ಭೇಟಿ ಮಾಡಿದ ಸಂಗಣ್ಣ ಕರಡಿ ಬೆಳಿಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದ ಸಂಗಣ್ಣ ಕರಡಿ

Read More

ಶಿವಮೊಗ್ಗ:- ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಪರೀಕ್ಷಾ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. 16 ವರ್ಷದ ಪರಶುರಾಮ್ ಬಾಬು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎನ್ನಲಾಗಿದೆ. ಆನಂದಪುರದ KPSC ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಚೆನ್ನಾಗಿಯೇ ಓದುತ್ತಿದ್ದ. ಪರೀಕ್ಷೆಗೆ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದ. ಆದ್ರೆ ಕೊನೇ ಕ್ಷಣದಲ್ಲಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಾಮರಾಜನಗರ:- ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಹಣ ಪಡೆಯುತ್ತಿರುವ ದೃಶ್ಯವನ್ನು ಆಶಾ ಕಾರ್ಯಕರ್ತೆ ರಾಣಿ ಎಂಬುವರು ಸೆರೆ ಹಿಡಿಯುವ ಮೂಲಕ ಆರೋಗ್ಯ ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ. ಸಂತೆಮರಳ್ಳಿ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಒಂದೊಂದು ಚಿಕಿತ್ಸೆಗೆ ಇಲ್ಲಿ ಒಂದೊಂದು ರೇಟ್ ಫಿಕ್ಸ್ ಆಗಿದ್ದು ನಾರ್ಮಲ್ ಡೆಲವರಿ ಆದ್ರೆ 3 ಸಾವಿರ, ಸೀಜೆರಿಯನ್ ಆದ್ರೆ 20 ಸಾವಿರ, ಸಂತಾನಹರಣ ಶಸ್ತ್ರ ಚಿಕಿತ್ಸೆಗೆ 3 ರಿಂದ 8 ಸಾವಿರ ಗರ್ಭಕೋಶದ ಆಪರೇಷನ್ ಗೆ ಇಲ್ಲಿ 35 ಸಾವಿರ ಕೊಡಬೇಕಿದೆ ಎಂಬ ಅರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸಂತೇಮರಳ್ಳಿ ಆಸ್ಪತ್ರೆಯ ಕರ್ಮಕಾಂಡದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಡಿಎಚ್ಒ‌ ಡಾ.ಚಿದಂಬರ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಹುಬ್ಬಳ್ಳಿ; ನಗರದ ಗುಜರಾತಿ ಮಹಿಳಾ ಮಂಡಳ ವತಿಯಿಂದ ಮಾರ್ಚ್ 31 ರಂದು ವಿಶೇಷಚೇತನ ಮಕ್ಕಳ ಜೊತೆಗೆ ವಿನೂತನ ಹಾಗೂ ವಿಭಿನ್ನವಾಗಿ ಮಹಿಳಾ ದಿನಾಚರಣೆ ಮಾಡಲಾಗುವುದು ಎಂದು ಗುಜರಾತಿ ಮಹಿಳಾ ಮಂಡಳ ಅಧ್ಯಕ್ಷೆ ಭಕ್ತಿ ಠಕ್ಕರ್ ಹೇಳಿದರು. ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಬನ್ನೇರುಘಟ್ಟ ಹೋಳಿ ಹಬ್ಬದ ಪ್ರಯುಕ್ತ ಗುಜರಾತ್ ಭವನದ ಆವರಣದಲ್ಲಿ ವಿಶೇಷವಾಗಿ ಕಾಮಣ್ಣನ ದಹನ ಮಾಡುವ ಮೂಲಕ ಪೂಜೆ ಪುನಸ್ಕಾರ ಸಲ್ಲಿಸಿದ ನಂತರ ಮಾಹಿತಿ ನೀಡಿದರು‌. ಮಾನಸಿಕ ಅಸ್ವಸ್ಥ ಮಕ್ಕಳು, ಅಂಗವೈಕಲ್ಯ ಮಕ್ಕಳು ಅವರು ಉತ್ಪಾದನೆ ಮಾಡಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಸಹ ಹಮ್ಮಿಕೊಳ್ಳಲಾಗಿದೆ. ‌ಇದರ ಬೆಂಬಲ ನೀಡಿ ಪ್ರೋತ್ಸಾಹಿಸಲು ಮನವಿ ಮಾಡಿದರು ‌ ಶ್ರೀಮತಿ ಸುಧಾ ಆರ್‌ಎನ್ ಶೆಟ್ಟಿ ರೋಟರಿ ಶಾಲೆ ಮತ್ತು ಅಸಾಧಾರಣ ಮಕ್ಕಳಿಗಾಗಿ ಉಷಾಸ್ ಕೇಂದ್ರ ಸಹ ಸಹಯೋಗದಿಂದಿಗೆ ನಡೆಸಲಾಗುವುದು ‌ ಅಂದು ಸಂಜೆ 4.30 ರಿಂದ 8 ಗಂಟೆ ವರೆಗೂ ಗುಜರಾತ್ ಭವನದಲ್ಲಿ ನೆರವೇರಿಸಲಿದ್ದು ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಮೂಲಕ ವಿಶೇಷ ಮಕ್ಕಳನ್ನು…

Read More

ತುಮಕೂರು:-ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದ ಶ್ರೀ ದಂಡಿನ ಮಾರಮ್ಮ ದೇವಿ ಜಾತ್ರಾ ಪ್ರಯುಕ್ತ ನಡೆದ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮದಲ್ಲಿ ಬೆಂಕಿ‌ಕೊಂಡದಲ್ಲಿ ಬಿದ್ದ ಅರ್ಚಕ ಮತ್ತು ಮಗ ಸಾವನ್ನಪ್ಪಿರುವ ಘಟನೆ ಜರುಗಿದೆ. ಅರ್ಚಕ ವೆಂಕಟಪ್ಪ ಹಾಗೂ ಮಗ ಕೃಷ್ಣ ಮೂರ್ತಿಗೆ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ದೇವರನ್ನ ಹೊತ್ತು ಸಾಗುವಾಗ ಬೆಂಕಿಕೊಂಡದಲ್ಲಿ ಕಾಲು ಜಾರಿ ಅರ್ಚಕ ಹಾಗೂ ಮಗ ಬಿದ್ದು ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ರಕ್ಷಣೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಆ ಬಳಿಕ ತೀವ್ರ ಸುಟ್ಟಗಾಯಗಳಾದ ಹಿನ್ನೆಲೆ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕ ಹಾಗೂ ಅವರ ಪುತ್ರ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು: ಈ ವರ್ಷ ಎರಡು ಚಂದ್ರಗ್ರಹಣಗಳು ಸಂಭವಿಸಲಿದೆ. ಅದರಲ್ಲಿ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 25 ರಂದು ಸಂಭವಿಸಲಿದೆ, ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18, 2024 ರಂದು ಗೋಚರಿಸಲಿದೆ. ಮಾರ್ಚ್ 25, 2024 ರಂದು ಸಂಭವಿಸಲಿರುವ ಗ್ರಹಣವು ಪೆನಂಬ್ರಲ್ (ತೀವ್ರವಲ್ಲದ ಅಥವಾ ಭಾಗಶಃ) ಚಂದ್ರಗ್ರಹಣವಾಗಿರುತ್ತದೆ, ಇಲ್ಲಿ ಚಂದ್ರನು ಭೂಮಿಯ ಪೆನಂಬ್ರಾಲ್ ನೆರಳಿನ ಮೂಲಕ ಹಾದುಹೋಗುತ್ತದೆ. ಈ ಗ್ರಹಣವು ಪೆನಂಬ್ರಲ್ ಆಗಿರುವುದರಂದ ಅದು ಚಂದ್ರನ ಅತ್ಯಂತ ಸೂಕ್ಷ್ಮವಾದ ನೆರಳು ಮತ್ತು ಬರಿಗಣ್ಣಿಗೆ ಗೋಚರಿಸದಿರಬಹುದು. ಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳಲಿದೆ. ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿದಂತೆ, 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರ ಬುಧವಾರ ಸಂಭವಿಸಲಿದ್ದು, ಮೊದಲ ಸೂರ್ಯಗ್ರಹಣವು ಏಪ್ರಿಲ್ 8 ರ ಸೋಮವಾರ ಸಂಭವಿಸಲಿದ್ದು, ಎರಡನೇ…

Read More

ತುಮಕೂರು‌:- ಅಪಾಯಕಾರಿ ವೀಲ್ಹಿಂಗ್ ಮಾಡಿದ್ದ 7 ಮಂದಿ ಪುಂಡರನ್ನು ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊರಟಗೆರೆ-ತುಮಕೂರು ರಸ್ತೆಯ ಅಜ್ಜಿಹಳ್ಳಿ ಬಳಿ ಪುಂಡರು ಬೈಕ್ ವೀಲಿಂಗ್ ಮಾಡುತ್ತಿದ್ದರು. ಸಾರ್ವಜನಿಕರ ಮೊಬೈಲ್ ನಲ್ಲಿ ಬೈಕ್ ವೀಲಿಂಗ್ ಪುಂಡರ ವಿಡಿಯೋ ಸೆರೆಯಾಗಿತ್ತು. ವಿಡಿಯೋ ಆಧರಿಸಿ ವೀಲ್ಹಿಂಗ್ ಮಾಡಿದ್ದವರನ್ನ ಕೊರಟಗೆರೆ ಪಿಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ. ಪುಂಡರ ವಿರುದ್ದ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ರಿತ್ಯಾ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತುಮಕೂರು ತಾಲೂಕಿನ ಗೇರಹಳ್ಳಿಯ ಶಾಯಿದ್ (19) ಸಲ್ಮಾನ್ (20), ಸಾದತ್ (20) ನಸೀಬ್‌ಉಲ್ಲಾ ( 19), ಸಾದಿಕ್‌ ಪಾಷ (19), ಫದ್ದೀನ್ ಖಾನ್ ( 21), ಸೀತಕಲ್ಲು ಪಾಳ್ಯದ ಇಸ್ಮಾಯಿಲ್ ಬಿನ್ ನಾಸೀರ್ ( 20) ಬಂಧಿತರು ಎನ್ನಲಾಗಿದೆ.

Read More