Author: AIN Author

ಬೆಂಗಳೂರು:- 2012 ರಲ್ಲಿ ನಡೆದ ಘಟನೆಯನ್ನು ವ್ಯಕ್ತಿಯೊಬ್ಬರು ಇತ್ತೀಚೆಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಶಿಶ್ ಬನ್ಸಾಲ್ ಎನ್ನುವವರು ಪೋಸ್ಟ್ ಹಂಚಿಕೊಂಡಿದ್ದು, ಟ್ರಾಫಿಕ್ ಪೊಲೀಸ್ ಜೊತೆ ಭೇಟಿಯಾಗಿದ್ದು ವೃತ್ತಿಪರ ವಿಚಾರಗಳ ವಿನಿಮಯದಲ್ಲಿ ಹೇಗೆ ಕೊನೆಗೊಂಡಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ?ಬನ್ಸಾಲ್ ಅವರು ತಮ್ಮ ಸ್ನೇಹಿತರು ದಂಡವನ್ನು ಪಾವತಿಸಲು ಹಣವನ್ನು ಹಿಂಪಡೆಯಲು ಹತ್ತಿರದ ಎಟಿಎಂಗೆ ಧಾವಿಸಿದ ಸಮಯವನ್ನು ನೆನಪಿಸಿಕೊಂಡರು ಮತ್ತು ಸ್ಥಳಕ್ಕೆ ಹಿಂತಿರುಗಿದಾಗ, ಜಾಹೀರಾತು ಏಜೆನ್ಸಿಯನ್ನು ನಡೆಸುತ್ತಿದ್ದ ಟ್ರಾಫಿಕ್ ಪೋಲೀಸ್‌ನಲ್ಲಿ ಒಬ್ಬರೊಂದಿಗೆ ವ್ಯಾಪಾರ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನೋಡಿದರು. ಅವರು 2010 ರಲ್ಲಿ ಸೇರಿಕೊಂಡ ಜಾಹೀರಾತು ಉದ್ಯಮದ ಬಗ್ಗೆ ಚರ್ಚಿಸಲು ದೃಶ್ಯವು ಹೇಗೆ ಅವಕಾಶವಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ.ಸುದೀರ್ಘ ಪೋಸ್ಟ್‌ನಲ್ಲಿ, “ಇಬ್ಬರು ಸ್ನೇಹಿತರು ಆಸ್ಟ್ರೇಲಿಯಾದಿಂದ ಬಂದಿದ್ದರು, ರಾತ್ರಿಯ ವಿಹಾರಕ್ಕಾಗಿ ನಾವು 13 ನೇ ಮಹಡಿಯಲ್ಲಿದ್ದೆವು. ಅದು ಬೆಂಗಳೂರಿಗೆ ಮೈಕ್ರೋಬ್ರೂವರೀಸ್‌ ಪರಿಚಯವಾಗದ ದಿನಗಳು ಮತ್ತು ಐಆರ್‌ಆರ್ ವಲಯದಲ್ಲಿ ರಾತ್ರಿ 10 ಗಂಟೆಯ ನಂತರ ಟ್ರಾಫಿಕ್ ಸಮಸ್ಯೆ ಇರಲಿಲ್ಲ. ನಾವು ನಾಲ್ವರಲ್ಲಿ ಒಬ್ಬ ಕಾರು ಚಾಲನೆ ಮಾಡುತ್ತಿದ್ದ…

Read More

ಚೆನ್ನೈ:- ಇನ್ನು ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ PM ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವು ತೆರಿಗೆಯಾಗಿ ಪಾವತಿಸುವ ಪ್ರತಿ ರೂಪಾಯಿಗೆ ಕೇವಲ 28 ಪೈಸೆಗಳನ್ನು ಮಾತ್ರ ಕೇಂದ್ರ ರಾಜ್ಯಕ್ಕೆ ಪಾವತಿಸಿದೆ. ಬಿಜೆಪಿ ಆಡಳಿತದ ರಾಜ್ಯಗಳು ಇದಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತವೆ ಎಂದು ಆರೋಪಿಸಿದ್ದಾರೆ. “ಇನ್ನು ಮುಂದೆ ನಾವು ಪ್ರಧಾನಿಯನ್ನು 28 ಪೈಸೆ ಪಿಎಂ ಎಂದು ಕರೆಯಬೇಕು” ಎಂದು ಸ್ಟಾಲಿನ್‌ ವ್ಯಂಗ್ಯವಾಡಿದರು. ತಮಿಳುನಾಡಿನಲ್ಲಿ ಮಕ್ಕಳ ಭವಿಷ್ಯವನ್ನು ನಾಶಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಂದಿದ್ದಾರೆ. ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯದಲ್ಲಿ ನೀಟ್‌ ಅನ್ನು ನಿಷೇಧಿಸುವ ವಿಷಯದಲ್ಲಿ ತಮಿಳುನಾಡು ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದರು. ಚುನಾವಣೆ ಹತ್ತಿರವಿರುವಾಗ ಮಾತ್ರ ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

Read More

ಚಾಮರಾಜನಗರ: ದಿವಂಗತ ರಾಜಶೇಖರ್ ಮೂರ್ತಿರವರು ನನ್ನ ರಾಜಕೀಯ ಗುರುಗಳು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಹೇಳಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಮೋದಿಯವರು ಅನಿವಾರ್ಯ ಎಂಬುದು ಕಟ್ಟೆಕಡೆಯ ಗ್ರಾಮದ ವ್ಯಕ್ತಿಗೆ ಅರಿವಿದೆ. ಸೋಲಿಗ ಜನಾಂಗದ ವ್ಯಕ್ತಿ ಮೋದಿಯವರನ್ನು ನೆನೆಸಿಕೊಳ್ಳುತ್ತಾರೆ. ನಾನು ಯಾವುದೇ ಊರಿಗೆ ಹೋದರು ಅಲ್ಲಿನ ಜನರು ಮೋದಿ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮೋದಿಯವರ ವರ್ಚಸ್ಸು ನಮ್ಮ ಗೆಲುವನ್ನು ಸುಲಭ ಮಾಡಿಕೊಟ್ಟಿದೆ ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಸಂಘಟನೆ ಅತ್ಯುತ್ತಮವಾಗಿದೆ. ರಾಜಕೀಯಕ್ಕೆ ಬಂದಿದ್ದೇ ನಾನು ರಾಜಶೇಖರಮೂರ್ತಿ ಅವರ ಗರಡಿಯಿಂದ ಎಂದು ಹೇಳುವ ಮೂಲಕ ಮಾಜಿ ಕೇಂದ್ರ ಸಚಿವ ದಿ‌.ರಾಜಶೇಖರಮೂರ್ತಿ ನೆನಪು ಮೆಲಕು ಹಾಕಿದ್ದಾರೆ. ನನ್ನಲ್ಲಿ ಶಾಸಕನಾಗುವ ಅರ್ಹತೆ ಇದೆ ಎಂದು ಗುರುತಿಸಿದ್ದು ರಾಜಶೇಖರಮೂರ್ತಿ ಅವರು. ಚುನಾವಣೆ ಖರ್ಚನ್ನು ಕೂಡ ಕೊಟ್ಟವರು ರಾಜಶೇಖರಮೂರ್ತಿ. ಅವರ ಮೂಲಕ ನನಗೆ ಯಡಿಯೂರಪ್ಪ ಪರಿಚಯ ಆದರು. ಬಿಎಸ್ ವೈ ಅವರು ನನಗೆ ಮೊದಲ ಬಾರಿಗೆ ಬಿಜೆಪಿ ಟಿಕೆಟ್…

Read More

ಕೆಲವೊಂದು ಅಭ್ಯಾಸ ಹೊಂದಿರುವ ಜನರು ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೊಂದಿರುತ್ತಾರೆ. ಇದು ಅಪಾಯ ತಂದೊಡ್ಡುತ್ತವೆ. ನಾವು ಹೇಳುವ ಅಭ್ಯಾಸಗಳು, ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು. ಇವುಗಳನ್ನು ತಕ್ಷಣವೇ ತಪ್ಪಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಯಾವಾಗಲೂ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಧೂಮಪಾನದಂತಹ ದುಃಶ್ಚಟಗಳು ತುಂಬಾ ಅಪಾಯಕಾರಿ. ಧೂಮಪಾನಿಗಳು ಯಾವಾಗಲೂ ಈ ರೋಗಕ್ಕೆ ಗುರಿಯಾಗುತ್ತಾರೆ. ಅನಿಯಂತ್ರಿತ ಮದ್ಯಪಾನವು ಧೂಮಪಾನದಷ್ಟೇ ಅಪಾಯಕಾರಿ. ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದವರಿಗೆ ಅಂದರೆ ದೈಹಿಕ ಚಲನವಲನ ಇಲ್ಲದೆ ಮಲಗಿ ಸಮಯ ಕಳೆಯುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಯಾವಾಗಲೂ ಒತ್ತಡದಲ್ಲಿರುವವರು ಮತ್ತು ಆಗಾಗ್ಗೆ ಚಿಂತೆ ಮಾಡುವವರು ಬ್ರೈನ್ ಸ್ಟ್ರೋಕ್‌ಗೆ ಗುರಿಯಾಗುತ್ತಾರೆ. ಮಧುಮೇಹ ನಿಯಂತ್ರಣದಲ್ಲಿಲ್ಲದವರೂ ಈ ಕಾಯಿಲೆಗೆ ತುತ್ತಾಗುತ್ತಾರೆ. ರಕ್ತದಲ್ಲಿ ಸಕ್ಕರೆ ಅಂಶ…

Read More

ದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ಪತ್ನಿಗೆ ಸೇರಿದ್ದ ಕಾರು ಕಳ್ಳತನವಾಗಿರುವ ಘಟನೆ ರಾಷ್ಟ್ರರಾಜಧಾನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಗ್ನೇಯ ದೆಹಲಿಯ (South East Delhi) ಗೋವಿಂದಪುರಿ ಪ್ರದೇಶದಿಂದ ಟೊಯೊಟಾ ಫಾರ್ಚೂನರ್ (Toyota Fortuner) ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್​ 19ರಂದು ಕಾರು ಕಳ್ಳತನವಾಗಿದೆ. ಫಾರ್ಚೂನರ್​ ಕಾರು ಕಳ್ಳತನ ಬಗ್ಗೆ ಡ್ರೈವರ್​ ಜೋಗಿಂದರ್​ ಸಿಂಗ್​ ಅದೇ ದಿನ ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದರು. ಸದ್ಯ ಕಾರು ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಮಾಹಿತಿ ಪ್ರಕಾರ, ಚಾಲಕ ಜೋಗಿಂದರ್ ಅವರು ಟೊಯೊಟಾ ಫಾರ್ಚುನರ್ ಕಾರನ್ನು ಸರ್ವಿಸ್ ಮಾಡಿದ ನಂತರ ಗೋವಿಂದಪುರಿಗೆ ತಂದು ತಮ್ಮ ಮನೆಯಲ್ಲಿ ನೀಲಿಸಿದ್ದರು. ಊಟ ಮಾಡಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕದ್ದ ಕಾರು ಗುರುಗ್ರಾಮ್ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ, ಪ್ರಯತ್ನಗಳ ಹೊರತಾಗಿಯೂ, ವಾಹನದ ಯಾವುದೇ ಕುರುಹು ಇನ್ನೂ ಕಂಡುಬಂದಿಲ್ಲ ಎಂದು ಮೂಲಗಳು…

Read More

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಬಿಜೆಪಿ ಸೇರ್ಪಡೆಯನ್ನ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಸ್ವಾಗತ ಮಾಡಿದ್ದಾರೆ. ಇದೇ ವೇಳೆ ಹಾಸನದಲ್ಲಿ (Hassan) ಯಾವುದೇ ಬಂಡಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ ನಾಯಕತ್ವ ಒಪ್ಪಿ ಹೊಸಬರು, ಹಿಂದೆ ಪಕ್ಷ ಬಿಟ್ಟು ಹೋದವರು ಬರ್ತಿದ್ದಾರೆ. ಒಂದು ಕುಟುಂಬದಲ್ಲಿ ಹೊಸದಾಗಿ ಸದಸ್ಯರು ಸೇರ್ಪಡೆಯಾದಾಗ ಮತ್ತು ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ. ಕಾಂಗ್ರೆಸ್ (Congress) ಬಿಟ್ಟು ಅನೇಕ ಜನ ಬಿಜೆಪಿ ಸೇರ್ಪಡೆ ಆಗ್ತಿದ್ದಾರೆ. ನಿನ್ನೆ ನವೀನ್ ಜಿಂದಾಲ್ ಕೂಡಾ ಬಿಜೆಪಿಗೆ (BJP) ಸೇರ್ಪಡೆಯಾಗಿದ್ದಾರೆ. ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಿಂದ ಪಕ್ಷವೂ ಬಲವಾಗುತ್ತದೆ. ನಮ್ಮ ಪಕ್ಷಕ್ಕೆ ಯಾರೇ ಬಂದರು ನಾವು ಸ್ವೀಕಾರ ಮಾಡ್ತೀವಿ ಎಂದು ಜನಾರ್ದನ ರೆಡ್ಡಿ ಅವರ ಸೇರ್ಪಡೆಯನ್ನು ಸ್ವಾಗತಿಸಿದರು. ಹಾಸನ…

Read More

ರಾಮನಗರ :- ಮಂಜುನಾಥ್ ಬಿಟ್ಟು ಬೇರೆಯವರಿಗೆ ಮತ ಹಾಕಿದ್ರೆ ಸ್ವಾರ್ಥಕ್ಕೆ ಹಾಕಿದಂತೆ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ. ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ, ಬಿಜೆಪಿ ಅಭ್ಯರ್ಥಿ ಮಂಜುನಾಥ್ ಪರ ಬ್ಯಾಟ್ ಬೀಸಿದ್ದಾರೆ. ಮಂಜುನಾಥ್ ಪರ ಮತ ಚಲಾಯಿಸುವಂತೆ ಮನವಿ ಮಾಡಿದ ಅವರು, ಬೇರೆಯವರಿಗೆ ಮತ ಹಾಕಿದರೆ ಸ್ವಾರ್ಥಕ್ಕೆ ಹಾಕಿದಂತೆ ಎಂದು ಸುರೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಡಾ. ಸಿಎನ್ ಮಂಜುನಾಥ್ ರಾಜಕಾರಣಕ್ಕೆ ಬಂದಿದ್ದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ವೋಟ್ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತದೆ. ದೇಶದ 140 ಕೋಟಿ ಜನರಿಗೂ ಡಾ. ಮಂಜುನಾಥ್​ ಸೇವೆ ಬೇಕು. ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದಲ್ಲಿ ಮೈತ್ರಿಯಿಂದ ಸಚಿವರು ಎಂದು ಯಾರಾದರೂ ಆದರೆ ಅದು ಡಾ. ಮಂಜುನಾಥ್ ಎಂದು ಮುನಿರತ್ನ ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಸಚಿವ ಸಂಪುಟದಲ್ಲಿ ಡಾ. ಮಂಜುನಾಥ್​​ ಸಚಿವರಾಗುವುದು ಸತ್ಯ. ಸ್ವರ್ಗಕ್ಕೆ ಹೋಗಬೇಕೆಂಬ ಆಸೆ ಇದ್ದರೆ ಮಂಜುನಾಥ್​ಗೆ ಮತ ನೀಡಿ. ಒಂದು ತಪ್ಪು…

Read More

ಬೆಂಗಳೂರು: ಈ ವರ್ಷ ಎರಡು ಚಂದ್ರಗ್ರಹಣಗಳು ಸಂಭವಿಸಲಿದೆ. ಅದರಲ್ಲಿ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 25 ರಂದು ಸಂಭವಿಸಲಿದೆ, ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18, 2024 ರಂದು ಗೋಚರಿಸಲಿದೆ. ಮಾರ್ಚ್ 25, 2024 ರಂದು ಸಂಭವಿಸಲಿರುವ ಗ್ರಹಣವು ಪೆನಂಬ್ರಲ್ (ತೀವ್ರವಲ್ಲದ ಅಥವಾ ಭಾಗಶಃ) ಚಂದ್ರಗ್ರಹಣವಾಗಿರುತ್ತದೆ, ಇಲ್ಲಿ ಚಂದ್ರನು ಭೂಮಿಯ ಪೆನಂಬ್ರಾಲ್ ನೆರಳಿನ ಮೂಲಕ ಹಾದುಹೋಗುತ್ತದೆ. ಈ ಗ್ರಹಣವು ಪೆನಂಬ್ರಲ್ ಆಗಿರುವುದರಂದ ಅದು ಚಂದ್ರನ ಅತ್ಯಂತ ಸೂಕ್ಷ್ಮವಾದ ನೆರಳು ಮತ್ತು ಬರಿಗಣ್ಣಿಗೆ ಗೋಚರಿಸದಿರಬಹುದು. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳಲಿದೆ. ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿದಂತೆ, 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಎರಡನೇ ಚಂದ್ರಗ್ರಹಣ…

Read More

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ  ಅಭ್ಯರ್ಥಿ, ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ ಅವರ ಬಹಿರಂಗ ಪ್ರಚಾರ ಮತ್ತು ಭಾಷಣಗಳಿಗೆ ನಿರ್ಭಂದಿಸುವಂತೆ ರಾಜ್ಯ ಕಾಂಗ್ರೆಸ್  ಮುಖಂಡ ಕುಶಾಲ್​ ಹರುವೇಗೌಡ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 2656 ಪೋಲಿಂಗ್ ಬೂನ್ಸ್ ಒಳಪಡುವ ಸುಮಾರು 28-30 ಲಕ್ಷ ಜನ ಮತದಾರರು ಇದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಹಿಂದೂ- ಮುಸ್ಲಿಂ-ಕ್ರೈಸ್ತರು ಎಂಬ ಬೇಧ-ಭಾವವಿಲ್ಲದೆ, ಜಾತಿ-ಮತ-ಪಂಥಗಳನ್ನು ಮೀರಿ ಜನರು ಸಹೋದರತ್ವದಿಂದ ವಾಸಿಸುತ್ತಿದ್ದಾರೆ.

Read More

ಹಾಸನ: ಆಲೂರು ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯು ಆಲೂರು ಪಟ್ಟಣದ  ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು ಮತ್ತು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಆದ ಶಿವಲಿಂಗೇಗೌಡ ರವರು ಮತ್ತು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ  ಶ್ರೇಯಸ್ ಪಟೇಲ್ ರವರು ಹಾಗೂ ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದಂತಹ ಈ ಎಚ್ ಲಕ್ಷ್ಮಣ್ ರವರು ಮಾಜಿ ಶಾಸಕರಾದ ಪುಟ್ಟೇ ಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಲೂರು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಹಾಗೂ  ಪುರಸಭೆಯಿಂದ ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರುಗಳು ಪ್ರತಿಯೊಂದು ಬೂತ್ ಮಟ್ಟದ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ನಂತರ  ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರುಗಳು ಕಾರ್ಯಕರ್ತರುಗಳು ಆಗಮಿಸಿದ್ದರು. ಇದರ ಅಧ್ಯಕ್ಷತೆಯನ್ನು ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿಯವರು ವಹಿಸಿದರು. ಕಾಂಗ್ರೆಸ್ ಅಭ್ಯರ್ಥಿ ಶ್ರೀಯುತ…

Read More