Author: AIN Author

ಬೆಂಗಳೂರು: ಮಗು ದತ್ತು ಪಡೆದ ಕೇಸ್ನಲ್ಲಿ ರೀಲ್ಸ್ ರಾಣಿ ಸೋನು ಗೌಡ ಜೈಲು ಸೇರಿದ್ದಾಳೆ.. 4 ದಿನದ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಅಕ್ರಮವಾಗಿ ಮಗುದತ್ತು ಪಡೆದಿರೋ ಆರೋಪ ಎದುರಿಸ್ತಿರೋ ಸೋನು ಶ್ರೀನಿವಾಸ್ ಗೌಡಗೆ ಕಾನೂನು ಮತ್ತಷ್ಟು ಬಿಗಿಯಾಗಿದೆ. ಪ್ರಕರಣ ಸಂಬಂಧ 4 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಸೋನುಗೌಡಗೆ ಈಗ 14 ದಿನ ನ್ಯಾಯಾಂಗ ಬಂಧನ ಎದುರಾಗಿದೆ. ಇದ್ರಿಂದ ಸೋನು ಶ್ರೀನಿವಾಸ್ ಗೌಡ ಜೈಲು ಸೇರಿದ್ದಾಳೆ. https://ainlivenews.com/opportunity-to-apply-for-new-ration-card-from-april-1/ ರಾಯಚೂರು ಮೂಲದ ಮಗುವನ್ನ ಅಕ್ರಮವಾಗಿ ದತ್ತು ಪಡೆದಿರೋ ಆರೋಪದ ಮೇಲೆ ಕಳೆದ ಶುಕ್ರವಾರ ಸೋನುಗೌಡ ಅರೆಸ್ಟ್ ಆಗಿದ್ಲು.. ಬಳಿಕ ವಿಚಾರಣೆ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನ 4 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ರು. ಸದ್ಯ ಸೋನುಗೌಡ ಹಾಗು ಮಗುವಿನ ತಂದೆ ತಾಯಿಯ ಸ್ಟೇಟ್ ಮೆಂಟ್ ಪಡೆದಿರೋ ಪೊಲೀಸರು ರಾಯಚೂರಿಗೂ ತೆರಳಿ ಮಗುವಿನ ಮನೆಯಲ್ಲಿ ಸ್ಪಾಟ್ ಮಹಜರ್ ಮಾಡಿ…

Read More

ಕೊಪ್ಪಳ:- ಮೋದಿ ಮೋದಿ ಘೋಷಣೆ ಕೂಗುವ ಯುವಕರು, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿತ್ತು. ಆದರೆ, ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ ಮೋದಿ. ಹತ್ತು ವರ್ಷದಲ್ಲಿ ಇಪ್ಪತ್ತು ಕೋಟಿ ಯುವಕರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಮೋದಿ ಸರ್ಕಾರ ಭರವಸೆ ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿ ಮಾಡದ ಕಾರಣ ಇನ್ನು ವಿದ್ಯಾರ್ಥಿಗಳು ಮತ್ತು ಯುವಕರು ‘ಮೋದಿ ಮೋದಿ’ ಎಂದು ಕೂಗಿದರೆ ಅವರ ಕಪಾಳಕ್ಕೆ ಹೊಡೆಬೇಕು ಎಂದು ಸಚಿವರು ಹೇಳಿದ್ದಾರೆ. ಇನ್ನೂ ಲೋಕಸಭೆ ಚುನಾವಣೆ ಬಂದಿದೆ. ಮತ್ತೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ಮತ ಕೇಳಲು ನಾಚಿಕೆ ಆಗಬೇಕು. ನಮ್ಮ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದರೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿ, ಯುವಕರಿಗೆ ಉದ್ಯೋಗ ನೀಡುವುದಾಗಿ…

Read More

ದೊಡ್ಡಬಳ್ಳಾಪುರ: ತಾಲೂಕಿನ‌ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 53,54,401 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ. ಮಾ.25 ಸೋಮವಾರ ನಡೆದ‌ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ‌ ಮಾಡಲಾಯಿತು. ಹುಂಡಿ‌ ಹಣ ಎಣಿಕೆಯಲ್ಲಿ 53,54401 ಲಕ್ಷ ನಗದು, 1ಗ್ರಾಂ. 300 ಮಿಲಿ ಚಿನ್ನ, 1ಕೆ.ಜಿ.540ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ‌. ಹುಂಡಿ ಹಣ ಎಣಿಕೆ‌ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ‌ ಅಧಿಕಾರಿ ನಾಗರಾಜು, ಮುಜರಾಯಿ ಇಲಾಖೆ ತಹಶೀಲ್ದಾರ್ ಜೆ.ಜೆ.ಹೇಮಾವತಿ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯದ‌ ಸಿಬ್ಬಂದಿ ಭಾಗವಹಿಸಿದ್ದರು.

Read More

ನವದೆಹಲಿ:- ಪ್ರಸ್ತುತ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವಾಸವಾಗಿರುವ ತೋಶಿಕೋ ಇಟೋ ಎನ್ನುವ ಮಹಿಳೆಗೆ ಈಗ ಸರಿಯಾಗಿ 80 ವರ್ಷ. ಆದರೆ, ಅವರನ್ನು ನೋಡಿದರೆ, ಯಾರೂ ಕೂಡ 80 ವರ್ಷ ಎಂದು ಹೇಳಲು ಸಾಧ್ಯವೇ ಇಲ್ಲ. ಇಳಿ ವಯಸ್ಸಿನವರಾದರೂ ಅವರ ಮುಖದಲ್ಲಿ ಒಂದೇ ಒಂದು ಸುಕ್ಕು ಕಾಣಿಸಿಕೊಂಡಿಲ್ಲ ಅದಲ್ಲದೆ, ಮುಖದಲ್ಲಿ ವಯಸ್ಸಾಗುತ್ತಿದೆ ಎನ್ನುವ ಯಾವ ಲಕ್ಷಣ ಕೂಡ ಕಂಡಿಲ್ಲ. ಆಕೆಯ 36 ವರ್ಷದ ಮೊಮ್ಮಗಳು ಯುರಿ ಲೀ ಪ್ರಖ್ಯಾತ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌, ಈಕೆ ಹೇಳುವ ಪ್ರಕಾರ ಅವರ ಅಜ್ಜಿ ತೋಶಿಕೋ ಇಟೋ ಇಲ್ಲಿಯವರೆಗೂ ತಮ್ಮ ಚರ್ಮಕ್ಕೆ ಬೋಟೆಕ್ಸ್‌ ಅಥವಾ ಫಿಲ್ಲರ್ಸ್‌ಗಳನ್ನು ಬಳಕೆ ಮಾಡಿಯೇ ಇಲ್ಲ ಎನ್ನುತ್ತಾರೆ. ಈ ವಯಸ್ಸಿನಲ್ಲೂ ಅವರ ಚರ್ಮ ಹೊಳಪು ಉಳಿಸಿಕೊಂಡಿರಲು ಇದೇ ಕಾರಣವಿರಬಹುದು ಎಂದೂ ಹೇಳುತ್ತಾರೆ. ತಮ್ಮ 20ನೇ ವರ್ಷದಿಂದಲೂ ಅಜ್ಜಿ ಚರ್ಮದ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದರು ಎಂದು ಯೂರಿ ಹೇಳಿದ್ದಾರೆ. ಅವರು ತಮ್ಮ ಚರ್ಮಕ್ಕೆ ವಿಟಮಿನ್‌ ಸಿ ಹೇರಳವಾಗಿ ಹೊಂದಿರುವ ಲೋಷನ್‌ಅನ್ನು ಪ್ರತಿನಿತ್ಯ ಹಚ್ಚುತ್ತಾರೆ.…

Read More

ಬೆಂಗಳೂರು: ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ SSLC ಪರೀಕ್ಷೆ – 1 ಇಂದಿನಿಂದ ರಾಜ್ಯದಾದ್ಯಂತ ಆರಂಭಗೊಂಡಿದ್ದು ವಿದ್ಯಾರ್ಥಿಗಳೆಲ್ಲರೂ ಮೊದಲ ದಿನದ ಪರೀಕ್ಷೆ ಹೇಗೆ ಬರೆದ್ರು, ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಫೀವರ್ ಹೇಗಿತ್ತು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.. ವಿದ್ಯಾರ್ಥಿ ಜೀವನದ ಬಹು ಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಒಂದೆಡೆ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸ್ವಲ್ಪ ಆತಂಕವಾಗಿ ಪರೀಕ್ಷೆ ಕೇಂದ್ರ ಬಳಿ ನಿಂತಿದ್ರೆ, ಇನ್ನೊಂದೆಡೆ ಪರೀಕ್ಷೆ ಬರೆಯಲು ಕೊನೆ ಹಂತದ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಡೌಟ್ ಕ್ಲಿಯರ್ ‌ಮಾಡುತ್ತಿದ್ದ ಟೀಚರ್ಸ್ ಇವೆಲ್ಲಾ ಕಂಡುಬಂದಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಮುಂದೆ. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಹೌದು… ರಾಜಾದ್ಯಂತ ಇಂದು ಪರೀಕ್ಷೆ ಫೀವರ್ ಜೋರಾಗಿತ್ತು‌. ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಆಗಮಿಸಿ ಪರೀಕ್ಷೆ ಬರೆಯಲು ಕೊನೆಯ…

Read More

ರಾಜಸ್ಥಾನ:- ತನ್ನ ಮಡದಿ ಆಸೆಯನ್ನು ಈಡೇರಿಸುವ ಮೂಲಕ ಆಕೆಯ ಮುಖದಲ್ಲಿ ನಗು ತರಿಸುವುದನ್ನು ಕೆಲಸವನ್ನು ಪತಿಯಾದವನು ಮಾಡುತ್ತಾನೆ. ಕೆಲವೊಮ್ಮೆ ಪತ್ನಿಯ ಬೇಡಿಕೆಯನ್ನು ಪತಿಗೆ ಈಡೇರಿಸಲು ಸಾಧ್ಯವಾಗದೇ ಹೋಗಬಹುದು. ಆದರೆ ಇದೀಗ ರಾಜಸ್ಥಾನದ ಬನ್ಸ್ವಾರಾದಲ್ಲಿ ಪತ್ನಿಯ ವಿಚಿತ್ರ ಬೇಡಿಕೆಯಿಂದ ಚಿರಾಗ್ ಎಂಬ ವ್ಯಕ್ತಿಯು ಪತ್ನಿಯ ವಿರುದ್ಧ ದೂರು ದಾಖಲಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.. ಹೌದು, ಆಲ್ಕೋಹಾಲ್ ಮತ್ತು ನಾನ್ ವೆಜ್ ಬೇಡಿಕೆಗಳನ್ನು ಈಡೇರಿಸದ ಕಾರಣ ನೇಹಾಳು ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2023ರ ಜೂನ್‌ನಲ್ಲಿ ಗುರು ಹಿರಿಯರ ನಿಶ್ಚಯದ ಮೇರೆಗೆ ಈ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಮಾತುಕತೆಯ ವೇಳೆ ಎರಡು ಲಕ್ಷ ರೂಪಾಯಿ ನೀಡಬೇಕೆಂದು ನೇಹಾ ಮನೆಯವರು ಬೇಡಿಕೆಯಿಟ್ಟಿದ್ದಾರೆ. ಅದರಂತೆ ಚಿರಾಗ್ ಮನೆಯವರು ನೇಹಾ ಮನೆಯವರಿಗೆ 2 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದಾರೆ. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನೇಹಾ ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿದೆ. ಪ್ರತಿ ದಿನ ಗಂಟೆಗಟ್ಟಲೇ ಫೋನ್ ನಲ್ಲಿ ಮಾತನಾಡುತ್ತಿರುವುದಲ್ಲದೇ, ಮನೆಯಲ್ಲಿಯೇ…

Read More

ಬೆಂಗಳೂರು: ಪ್ರತಿ ವರ್ಷ ಹೋಳಿ ಬಂತೆಂದರೆ ಸಾಕು, ಗುಲಾಲ್ , ನೀರು ತುಂಬಿದ ಬಲೂನ್, ಬಿಂದಿಗೆ ಹಿಡಿದು ಬೀದಿಗಿಳಿಯುತ್ತಿದ್ದ ಸ್ನೇಹಿತರು, ಕುಟುಂಬಗಳು ಮತ್ತು ಅಪರಿಚಿತರು ಪರಸ್ಪರ ಬಣ್ಣ ಎರಚಿ ಶುಭಾಶಯ ಕೋರುತ್ತಿದ್ದರು. ಆದರೆ, ಈ ವರ್ಷ, ಬೆಂಗಳೂರಿನ ಕೆಲವು ಭಾಗಗಳು ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯಿಂದಾಗಿ ಹಬ್ಬದ ಉತ್ಸಾಹ ಕಡಿಮೆಯಾಗಿದೆ. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಬಣ್ಣಗಳ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಕೆಲವರು ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಆನಂದಿಸಿದರೆ, ಯುವ ಜನತೆಯು ನೀರಿಗೆ ಬಣ್ಣ ಹಾಕಿ, ವಾಟರ್‌ ಶೂಟರ್‌ಗನ್‌ಗಳಿಂದ ಅಥವಾ ಮಗ್‌ಗಳ ಮೂಲಕ ಬಣ್ಣದ ನೀರನ್ನು ಎರಚಿಕೊಳ್ಳುತ್ತಾ ಸಂಭ್ರಮಿಸುತ್ತಾರೆ. ಆದರೇ ಈ ಬಾರಿ ಹಾಗಿಲ್ಲ. ನೀರಿನ ಸಮಸ್ಯೆ ಇರುವ ಕಾರಣ ಬೆಂಗಳೂರಿನಲ್ಲಿ ಎಲ್ಲೆಡೆ ಡ್ರೈ ಹೋಲಿ ಸೆಲೆಬ್ರೇಷನ್ ಗೆ ಜನರು ಮುಂದಾಗಿದ್ರು… ನಗರದ ಪಂಚತಾರಾ…

Read More

ಬೆಂಗಳೂರು: ಪ್ರದೀಪ್ ಈಶ್ವರ್‌ಗೆ ಕೌಂಟರ್ ನೀಡಿದ ಸುಧಾಕರ್ ನಾನು ಇಂದು ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿ ಬಂದಿದ್ದೇನೆ. ಅಂತವರ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಸುಧಾಕರ್ ಹೇಳಿದರು. ಸುಧಾಕರ್ ಯಾವುದೇ ಹಗರಣ ಮಾಡಿಲ್ಲವೆಂದು ಪ್ರಮಾಣ ಮಾಡಲು ರೆಡಿ ಇದ್ದಾರಾ?: ಪ್ರದೀಪ್ ಈಶ್ವರ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಸುದ್ದಿಗೋಷ್ಠಿ ನಡೆಸಿದ ಅವರು, ಡಾ.ಕೆ ಸುಧಾಕರ್ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ ಕೊಡ್ತಾರೆ ನಾಳೆ ನಂದಿ ಭೋಗ ನಂದೀಶ್ವರ ದೇವಸ್ಥಾನದಲ್ಲಿ ಯಾವುದೇ ಹಗರಣ ಮಾಡಿಲ್ಲ ಅಂತ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ ಸುಧಾಕರ್ ಯಾವುದೇ ಹಗರಣ ಮಾಡಿಲ್ಲ ಅಂತ ದೇವಸ್ಥಾನದಲ್ಲಿ ಪ್ರಮಾಣ ಮಾಡುವುದಕ್ಕೆ ರೆಡಿ ಇದ್ದಾರಾ? ಎಂದು ಪ್ರಶ್ನೆ ಮಾಡಿದ್ದರು. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಶಾಸಕ ಎಸ್.ಆರ್ ವಿಶ್ವನಾಥ್ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ವಿಶ್ವನಾಥ್…

Read More

ಬೆಂಗಳೂರು: ಜನಾರ್ದನ ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೆಡ್ಡಿ ಅವರು ಬಿಜೆಪಿ ಜೊತೆ ತಮ್ಮ ಪಕ್ಷವನ್ನು ವಿಲೀನ ಮಾಡಿದ್ದಾರೆ. ಜನಾರ್ದನ ರೆಡ್ಡಿಯವರ ಪತ್ನಿ ಅರುಣ ಲಕ್ಷ್ಮಿ, ಮಾಜಿ ಸಚಿವ ಟಿ.ಜಾನ್ ಅವರ ಪುತ್ರ ಡಾ.ಥಾಮಸ್ ಜಾನ್ ಅವರೂ ಬಿಜೆಪಿ ಸೇರಿಸುವುದು ಸಂತಸ ತಂದಿದೆ ಎಂದರು. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಜನಾರ್ದನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ…

Read More

ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲುಕಂಡಿರುವ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ನೀಡಲಾಗಿದೆ.  ರಾಜಕೀಯ ಎದುರಾಳಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. Ration Card News Update: ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,   ಸುಧಾಕರ್ ಟಾರ್ಚರ್ ನಿಂದಲೇ ನಾನು ಶಾಸಕನಾಗಿದ್ದೇನೆ ಸುಧಾಕರ್ ಕಾಂಗ್ರೆಸ್ ಗೆ ಥ್ರೆಟ್ ಅಲ್ಲ. ಬಿಜೆಪಿಗೆ ಥ್ರೆಟ್ ಕೋವಿಡ್ ಹಗರಣದ ಎಲ್ಲ ತನಿಖೆ ಆಳವಾಗಿ ನಡೆಯುತ್ತಿದೆ ಒಂದು ಮಾಸ್ಕ್ 450 ರೂ.ಗೆ ಖರೀದಿ ಮಾಡಿ ಹಗರಣ ಮಾಡಿದ್ದಾರೆ ಅವರದೇ ಶಾಸಕ ವಿಶ್ವನಾಥ್ ಸುಧಾಕರ್ ಪರ ಕೆಲಸ ಮಾಡಲ್ಲ ಅಂದಿದ್ದಾರೆ ಐಟಿ ಈಡಿ ಬಿಟ್ಟು ಕಾಟ ಕೊಡ್ತೀರಾ ಸುಧಾಕರ್ ಅವರೇ ನಾನು ರೆಡಿ ಇದ್ದೀನಿ ಡಾ.ಕೆ ಸುಧಾಕರ್ ಮತ ಹಾಕಿದರೆ ಪ್ರಜಾಪ್ರಭುತ್ವಕ್ಕೆ ಮಾರಕ ಸಾಮಾನ್ಯ ಜನರಿಗೆ ಸುಧಾಕರ್ ತೊಂದರೆ…

Read More