Author: AIN Author

ಬೆಂಗಳೂರು: ಆರ್‌ಸಿಬಿ ಅಭಿಮಾನಿಯೊಬ್ಬ ಐಪಿಎಲ್ (IPL 2024) ಪಂದ್ಯದ ವೇಳೆ ಕ್ರೀಸ್‌ಗೆ ನುಗ್ಗಿ ಕೊಹ್ಲಿ (Virat Kohli) ಕಾಲು ಹಿಡಿದ ಘಟನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದೆ. ಇಂದು ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ರೋಚಕ ಐಪಿಎಲ್ ಪಂದ್ಯ ನಡೆಯುತ್ತಿದೆ. https://twitter.com/VathanBallal/status/1772292196441444369?ref_src=twsrc%5Etfw%7Ctwcamp%5Etweetembed%7Ctwterm%5E1772292196441444369%7Ctwgr%5E3869c38484861e6a0e25f68f57b5362ae53997bb%7Ctwcon%5Es1_&ref_url=https%3A%2F%2Ftimesofindia.indiatimes.com%2Fsports%2Fcricket%2Fipl%2Ftop-stories%2Fwatch-fan-breaches-security-to-hug-virat-kohli-and-touch-his-feet%2Farticleshow%2F108770743.cms ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದಾನೆ.  ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್‌ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾನೆ. ಘಟನೆ ನಡೆದ ಕೂಡಲೇ ಒಳನುಗ್ಗಿದ ಅಭಿಮಾನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Read More

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿ ಸಾವನ್ನಪ್ಪಿ ರುವ ಘಟನೆ ನಡೆದಿದೆ. ತುಮಕೂರಿನ ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೋಹನ್ ಕುಮಾರ್ ಸಿ.ಎಸ್ (16) ಸಾವನ್ನಪ್ಪಿದ ವಿದ್ಯಾರ್ಥಿ.  ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಸರಸ್ವತಿ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

Read More

ಗದಗ: ನರಿ ಸರಣಿ ದಾಳಿ ಹಲವು ಜನರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಬಳಿ ನಡೆದಿದೆ. ನರಿಗೆ ಹುಚ್ಚು ಹಿಡಿದಿರೋ ಶಂಕೆಯಾಗಿದ್ದು, ಸಮೀರ್ ಹೆಸರೂರು, ಬೀಬಿಜಾನ್ ಬಟ್ಟೂರ, ಸಂತೋಷ ಲಮಾಣಿಗೆ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಕಿರಣ್ ಅವರಿಂದ ಚಿಕಿತ್ಸೆ ಕೊಡಲಾಗುತ್ತಿದೆ. ಕಾಲು, ಕೈ ಬೆರಳು ಸೇರಿದಂತೆ ವಿವಿದೆಡೆ ಕಚ್ಚಿದ್ದು, ಅರಣ್ಯ ಇಲಾಖೆಯವರು ನರಿ ಸೆರೆಹಿಡಿಯುವಂತೆ ಸ್ಥಳೀಯರ ಆಗ್ರಹ ಮಾಡಿದ್ದಾರೆ.

Read More

ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋ ಹಾಗು ವಿಡಿಯೋ ಗ್ರಾಫರ್ ಅಸೋಸಿಯೇಷನ್ ಇವರ ವತಿಯಿಂದ ಕ್ರಿಕೆಟ್ ಫೆಸ್ಟ್ ಸ್ವರ್ಣ ಕಪ್ ಅಂತರ್ ವಲಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಇದೇ ದಿನಾಂಕ 26 ಹಾಗೂ 27 ಮಾರ್ಚ್ ರಂದು ನೆಹರು ಕ್ರೀಡಾಂಗಣದಲ್ಲಿ ಅಂತರ್ ವಲಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಂಡಿದ್ದು ದಿನಾಂಕ 26ರಂದು ಮುಂಜಾನೆ ಕ್ರಿಕೆಟ್ ಪಂದ್ಯಾವಳಿಯನ್ನು ಸ್ವರ್ಣ ಕಂಪನಿಯ ಚೇರ್ಮನ್ ರಾದ ವಿ ಎಸ್ ವಿ ಪ್ರಸಾದ ಇವರು ಉದ್ಘಾಟನೆಯನ್ನು ಮಾಡುವರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಇವರಾದ ರೇಣುಕಾ ಸುಕುಮಾರ ಹಾಗೂ ವಿಶೇಷ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀಯುತ ವೆಂಕಟೇಶ್ ಕಾಟ್ವೆ ಇವರು ಇವರು ಆಗಮಿಸುವರು ಹಾಗೂ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆ ವಹಿಸುವರು ಅಲ್ಲದೆ ದಿನಾಂಕ 27ರಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಬಹುಮಾನ ವಿತರಣೆಯನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಇವರು ಭಾಗವಹಿಸುವರು…

Read More

ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರ ಸಹಯೋಗದೊಂದಿಗೆ ಶ್ರೀ ಯೋಗಿನಾರಾಯಣ ಯಾತಿಂದ್ರರ ಜಯಂತೋತ್ಸವ  ಕಾರ್ಯಕ್ರಮವನ್ನು ನಗರದ ಟಿ ಚನ್ನಯ್ಯ ‌ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ವಕೀಲ ಶ್ರೀನಿವಾಸ್ ಮಾತನಾಡಿ  ಶ್ರೀ ಕೈವಾರ ನಾರಾಯಣ ತಾತಯ್ಯನವರ ಜಯಂತಿಗೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಕಾರಣದ ಹಿನ್ನೆಲೆ ಸರಳ ರೀತಿಯ ಆಚರಣೆ ಮಾಡಲಾಗುತ್ತಿದೆ ಎಂದರು. ಇನ್ನು ಮುಂದಿನ ವರ್ಷದಲ್ಲಿ ಹೆಚ್ಚಿನ ಜನಸಂಖ್ಯೆ ಸೇರಿಸಿ ಕಾರ್ಯಕ್ರಮ ಮಾಡಲಾಗುವುದು ಸಮುದಾಯದ ಉಪ ಜಾತಿಗಳನ್ನು ಜನಾಂಗದ ವ್ಯಕ್ತಿಗಳು ಹೇಳುವ ಬದಲಿಗೆ ಮೂಲ ಬಲಿಜ ಎಂದು ನಮೂದಿಸಲು ಕಾರ್ಯವನ್ನು ಬೆಳಸಿಕೊಳ್ಳಬೇಕೆಂದು  ಕಿವಿ ಮಾತು ಹೇಳಿದರು, ಸಮಾಜದಲ್ಲಿ ಕೈವಾರ ತಾತಯ್ಯನವರ ಬಲಿಜ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಅವರು ದೇಶಕ್ಕೆ ಮಾದರಿಯಾಗಿದ್ದಾರೆ. ಆದ್ದರಿಂದ ಜನರು ಜೀವನದಲ್ಲಿ ಕೈವಾರ ತಾತಯ್ಯನವರ  ಕೀರ್ತನೆಗಳನ್ನು ಅಳವಡಿಕೊಂಡು ಉತ್ತಮ ಸಮಾಜದ ಕಡೆ ಸಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು ರಘು (ಚಿಟ್ಟಿ ), ಕೆ ಎಸ್ ಆರ್ ಟಿ ಸಿ ಪ್ರಸಾದ್, ಸುರೇಶ…

Read More

ಕಂಪ್ಲಿ.ಮಾ.25:ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ಪರೀಕ್ಷೆಗಳು ಸೋಮವಾರ ಆರಂಭವಾಗಿದ್ದು, ತಾಲ್ಲೂಕಿನ 6 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆ ಸಿಸಿ ವೆಬ್ ಕ್ಯಾಮೆರದ ಹದ್ದಿನ ಕಣ್ಣಿನಲ್ಲಿ ಪರೀಕ್ಷೆ ಸುಸೂತ್ರವಾಗಿ ಜರುಗಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದ್ದು, ತಾಲ್ಲೂಕಿನ ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ತಾಲ್ಲೂಕಿನ ಕಂಪ್ಲಿ ಪಟ್ಟಣದಲ್ಲಿ ನಾಲ್ಕು,ರಾಮಸಾಗರ ಮತ್ತು ಎಮ್ಮಿಗನೂರು ಗ್ರಾಮಗಳಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರವನ್ನು ರೂಪಿಸಲಾಗಿತ್ತು. ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 248 ವಿದ್ಯಾರ್ಥಿಗಳಲ್ಲಿ 246 ವಿದ್ಯಾರ್ಥಿಗಳು ಹಾಜರಾಗಿದ್ದು 02 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಎ.ಎಂ.ಬಸವರಾಜ ತಿಳಿಸಿದರು. ಪಟ್ಟಣದ ಷಾಮಿಯಾಚಂದ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 284 ವಿದ್ಯಾರ್ಥಿಗಳ ಪೈಕಿ 281 ವಿದ್ಯಾರ್ಥಿಗಳು ಹಾಜರಾಗಿದ್ದು, 03 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಸುಜಾತ ತಿಳಿಸಿದರು. ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 321ವಿದ್ಯಾರ್ಥಿಗಳಲ್ಲಿ 319 ವಿದ್ಯಾರ್ಥಿಗಳು ಹಾಜರಾಗಿದ್ದು. 02 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ…

Read More

ಹುಬ್ಬಳ್ಳಿ; ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಇದನ್ನ ಮರೆಮಾಚಲು ಮತ್ತೇ ಹಾಲಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ತಮ್ಮ ವಿರುದ್ಧ ಅಸಮರ್ಥ ಅಭ್ಯರ್ಥಿ ಹಾಕಿಕೊಂಡು ಒಳ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಯುವ ಮುಖಂಡ ರಾಜು ಸಾ ನಾಯಕವಾಡಿ ಆರೋಪಿಸಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಏನು ಅಭಿವೃದ್ಧಿ ಮಾಡಿದ್ದಾರೆ 20 ವರ್ಷಗಳ ಅಧಿಕಾರದಲ್ಲಿ ಇದ್ದವರು ಸಾಕಷ್ಟು ಜನಪ್ರಿಯತೆ ಹೊಂದಿದವರು ಕಾರಣ ಈ ಅವಧಿಯಲ್ಲಿ ತಾವು ಪ್ರಚಾರ ಮಾಡಬಾರದು ತಮ್ಮ ಕೆಲಸ ಪ್ರಚಾರಕ್ಕೆ ಬರಬೇಕಿತ್ತು ಆದರೆ ಎಲ್ಲಿ ಅಭಿವೃದ್ಧಿ ಕಾಮಗಾರಿಗಳು. ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 1500 ಕೋಟಿ ಅನುದಾನ ಬಂದಿದ್ದು ಇನ್ನು ನಗರಗಳು ಧೂಳು ಮುಕ್ತ ಆಗಿಲ್ಲ ಯಾಕೆ ಈ ಬಗ್ಗೆ ಮೊದಲು…

Read More

ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದೇ ತಡ ಅವರ ಮನೆಯೀಗ ದೋಸ್ತಿ ಪಕ್ಷಗಳ (BJP_JDS) ಪವರ್‌ಸೆಂಟರ್ ಆಗಿ ಬದಲಾಗಿದೆ. ಆರೋಗ್ಯ ವಿಚಾರಿಸುವ ಜೊತೆ ಜೊತೆಗೆ ನಮ್ಮ ಗೆಲುವಿಗೆ ನಿಮ್ಮ ಸಹಕಾರ ಬೇಕು ಎನ್ನುತ್ತಾ ಬಿಜೆಪಿ ನಾಯಕರು ಇಂದು ಕುಮಾರಸ್ವಾಮಿ ಭೇಟಿಗೆ ಸಾಲುಗಟ್ಟಿದ್ದರು.  https://ainlivenews.com/cancer-and-eye-problems-are-guaranteed-by-using-colors-like-this-for-holi-festival/ ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ (Tejaswi Surya), ಚಿಕ್ಕಬಳ್ಳಾಪುರ ಅಭ್ಯರ್ಥಿ ಕೆ ಸುಧಾಕರ್ (K Sudhakar), ಬಳ್ಳಾರಿ ಅಭ್ಯರ್ಥಿ ಶ್ರೀರಾಮುಲು (Sriramulu) ಭೇಟಿ ನೀಡಿ ದಳಪತಿಗಳ ಸಹಕಾರ ಕೋರಿದರು.ಮಾಜಿ ಮಂತ್ರಿ ಗೋವಿಂದ ಕಾರಜೋಳ ಕೂಡ ಕುಮಾರಸ್ವಾಮಿ ನಿವಾಸದಲ್ಲಿ ಕಾಣಿಸಿಕೊಂಡರು. ಟಿಕೆಟ್ ವಂಚಿತ ಸಂಸದ ಕೊಪ್ಪಳದ ಸಂಗಣ್ಣ ಕರಡಿ ಸಹ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಕುಶಲ ವಿಚಾರಿಸಲು ಬಂದಿದ್ದೇ ಅಷ್ಟೇ.. ನಾನೇನು ಜೆಡಿಎಸ್ ಸೇರಲ್ಲ ಎಂದು ಸಮಜಾಯಿಷಿ ನೀಡಿದರು.

Read More

ಐಪಿಎಲ್ ಟೂರ್ನಿ 2024ರ ಮೊದಲ ಬೆಂಗಳೂರು ಪಂದ್ಯ ರೋಚಕತೆ ಹೆಚ್ಚಿಸಿದೆ. ಅಬ್ಬರಿಸಲು ಮುಂದಾದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ರೇಕ್ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ರನ್ ಟಾರ್ಗೆಟ್ ಪಡೆದಿದೆ. ನಾಯಕ ಶಿಖರ್ ಧವನ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಸ್ಯಾಮ್ ಕುರನ್ ಸೇರಿದಂತೆ ಪಂಜಾಬ್ ಬ್ಯಾಟರ್ ಅಬ್ಬರಿಸುವ ಪ್ರಯತ್ನ ಮಾಡಿದರು. ಆದರೆ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಆರ್‌ಸಿಬಿ ಅಂತಿಮ ಹಂತದಲ್ಲಿ ರನ್ ಬಿಟ್ಟುಕೊಟ್ಟಿತು. ಈ ಮೂಲಕ ಪಂಜಾಬ್ 176 ರನ್ ಸಿಡಿಸಿತು. ತವರಿನಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್‌ಗೆ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. 2 ಬೌಂಂಡರಿ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ ಜಾನಿ ಬೈರ್‌ಸ್ಟೋ 8 ರನ್ ಸಿಡಿಸಿ ನಿರ್ಗಮಿಸಿದರು. ಆರ್‌ಸಿಬಿ ಮೊದಲ ವಿಕೆಟ್ ಸಂಭ್ರಮದ ಬಳಿಕ ಬೌಲಿಂಗ್ ಕೊಂಚ ಸಡಿಲಗೊಂಡಿತು. ಹೀಗಾಗಿ ಶಿಖರ್ ಧವನ್ ಹಾಗೂ ಪ್ರಭಸಿಮ್ರನ್ ಸಿಂಗ್ ಜೊತೆಯಾಟದಿಂದ ರನ್ ರೇಟ್ ಹೆಚ್ಚಾಯಿತು. https://ainlivenews.com/cancer-and-eye-problems-are-guaranteed-by-using-colors-like-this-for-holi-festival/…

Read More

ಶಿವಮೊಗ್ಗ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,  ಪುತ್ರ ಕೆಈ ಕಾಂತೇಶ್​ಗೆ ಹಾವೇರಿ ಟಿಕೆಟ್ ಕೈತಪ್ಪಿದ ನಂತರ ದಿನಂಪ್ರತಿ ಬಿಎಸ್​ವೈ ಮತ್ತು ಮಕ್ಕಳ ವಿರುದ್ಧ ಗುಡುಗುತ್ತಿದ್ದಾರೆ. ಇದೀಗ ವಿಜಯೇಂದ್ರ ಕ್ಷೇತ್ರ ಶಿಕಾರಿಪುರದಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವರು ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. https://ainlivenews.com/cancer-and-eye-problems-are-guaranteed-by-using-colors-like-this-for-holi-festival/ ಯುವಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಯಡಿಯೂರಪ್ಪ ಅವರೇ ನನಗೆ ಏಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನರನ್ನು ಕುರಿಗಳ ರೀತಿ ಅಂದುಕೊಂಡಿದ್ದಾರೆ. ಅಪ್ಪ-ಮಕ್ಕಳು ಬೇಡವೆಂದು ಶಿಕಾರಿಪುರದ ಜ‌ನ ತೀರ್ಮಾನಿಸಿದ್ದಾರೆ. ರಾಘವೇಂದ್ರ ಸೋಲಿಸುವ ಮೂಲಕ ಅವರಿಗೆ ಬುದ್ಧಿ ಕಲಿಸಬೇಕು. ಸೋಲಿನ ರುಚಿ‌ ಏನು ಅಂತಾ ಯಡಿಯೂರಪ್ಪಗೆ ತೋರಿಸಬೇಕು ಎಂದರು.

Read More