Author: AIN Author

ಹೈದರಾಬಾದ್: ತೆಲಂಗಾಣ ಇಂಟಲಿಜೆನ್ಸ್ ಬ್ಯೂರೋದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಅವರನ್ನು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ (Phone Tapping Row) ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ಕೆ.ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಫೋನ್‌ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡುವ ಮೂಲಕ ಎಲೆಕ್ಟ್ರಾನಿಕ್ ಡೇಟಾದ ರೀಮ್‌ಗಳನ್ನು ಸಂಗ್ರಹಿಸಿದ್ದ ಆರೋಪವನ್ನು ಪ್ರಭಾಕರ್‌ ರಾವ್‌ ಹೊತ್ತಿದ್ದಾರೆ. ಅವರೀಗ ಅಮೆರಿಕದಲ್ಲಿದ್ದಾರೆ ಎಂದು ವರದಿಯಾಗಿದೆ. ಅವರ ಹೆಸರಿನಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. https://ainlivenews.com/this-work-is-mandatory-before-march-31-no-penalty-guarantee/ ಹೈದರಾಬಾದ್‌ನಲ್ಲಿರುವ ರಾವ್ ಅವರ ಮನೆ, ‘ಐ ನ್ಯೂಸ್’ ಎಂಬ ತೆಲುಗು ಟಿವಿ ಚಾನೆಲ್ ನಡೆಸುತ್ತಿರುವ ಶ್ರವಣ್ ರಾವ್ ಅವರ ನಿವಾಸ ಸೇರಿದಂತೆ ಸುಮಾರು ಹನ್ನೆರಡು ಇತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಟಿ ಟಾಸ್ಕ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮತ್ತೊಬ್ಬ ಪೊಲೀಸ್ ರಾಧಾ ಕಿಶನ್ ರಾವ್ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದ್ದು, ಅವರಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತೆಲಂಗಾಣ…

Read More

ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕ್ಯಾಚೊಂದನ್ನು ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಆರಂಭಿಕ ಆಟಗಾರ ಜಾನಿ ಬೇರ್​ಸ್ಟೋ ಅವರ ಕ್ಯಾಚ್​ ಪಡೆಯುವ ಮೂಲಕ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 173 ನೇ ಕ್ಯಾಚ್ ಪೂರ್ಣಗೊಳಿಸಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತದ ಆಟಗಾರರ ಪೈಕಿ ಮೊದಲ ಸ್ಥಾನಕ್ಕೇರಿದರು. ಈ ಹಿಂದೆ ಈ ದಾಖಲೆ ಮಾಜಿ ಆಟಗಾರ ಸುರೇಶ್​ ರೈನಾ ಹೆಸರಿನಲ್ಲಿತ್ತು. ರೈನಾ ಅವರು 72 ಕ್ಯಾಚ್‌ಗಳನ್ನು ಪಡೆದಿದ್ದರು. ಮುಂಬೈ ಇಂಡಿಯನ್ಸ್​ ಪರ ಆಡುವ ರೋಹಿತ್​ ಶರ್ಮ ಅವರು ಸದ್ಯ 167 ಕ್ಯಾಚ್ ಹಿಡಿದು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 146 ಕ್ಯಾಚ್​ ಪಡೆದ ಮನೀಷ್​ ಪಾಂಡೆ ನಾಲ್ಕನೇ ಸ್ಥಾನ, 136 ಕ್ಯಾಚ್​ ಪಡೆದ ಸೂರ್ಯಕುಮಾರ್​ ಯಾದವ್​ 5ನೇ ಸ್ಥಾನದಲ್ಲಿದ್ದಾರೆ. https://ainlivenews.com/if-you-get-one-vote-wrong-yama-will-appear-muniratna-tong-to-dk-suresh/ ಐಪಿಎಲ್​ನಲ್ಲಿ…

Read More

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. https://ainlivenews.com/this-work-is-mandatory-before-march-31-no-penalty-guarantee/ ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌ (Petrol rate), ಡೀಸೆಲ್‌ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ‘ಇಂದು ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮಾರ್ಚ್ 26…

Read More

ರಾಮನಗರ:- ಒಂದು ತಪ್ಪು ಮತ ಹಾಕಿದ್ರೆ ನಿಮಗೆ ಯಮ ಕಾಣಿಸ್ತಾನೆ ಎಂದು ಹೇಳುವ ಮೂಲಕ ಡಿಕೆ ಸುರೇಶ್ ಗೆ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ರಾಜಕಾರಣಕ್ಕೆ ಬಂದರೆ ಜನಸೇವೆ ಮಾಡಬೇಕು. ಡಾ.ಮಂಜುನಾಥ್ ಬಂದಿರೋದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ಮತ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತೆ. ಡಾ.ಮಂಜುನಾಥ್ ಅವರ ಸೇವೆ 140 ಕೋಟಿ ಜನತೆಗೆ ಬೇಕು. ಇದನ್ನು ಬರೆದಿಟ್ಟುಕೊಳ್ಳಿ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು ಅಷ್ಟೇ ಸತ್ಯ. ಡಾ.ಮಂಜುನಾಥ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು. ನರಕ್ಕೆ ಯಾಕೆ ಹೋಗುತ್ತೀರಾ. ನಾನೇ ಕಠಾರಿವೀರ ಅಂತ ಒಂದು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸ್ವರ್ಗ, ನರಕ ಹೇಗಿರುತ್ತೆ ಅಂತ ನೋಡಿ. ಈ ಚುನಾವಣೆ ರಾಮ-ರಾವಣರ ಯುದ್ಧ. ನಿಮಗೆ ರಾಮಬೇಕಾ? ರಾವಣ ಬೇಕಾ? ನಾವು ಈ ರಾಮನನ್ನು ಪಾರ್ಲಿಮೆಂಟ್‌ಗೆ ಕಳುಹಿಸಬೇಕು. ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಮತ…

Read More

ಮಂಡ್ಯ: ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆಗಾಗಿ ಗಂಡನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ.  ಪ್ರೇಮಕುಮಾರಿ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಎರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ರಾಘವೇಂದ್ರ ಎಂಬಾತನ ಜೊತೆಗೆ ಪ್ರೇಮಕುಮಾರಿ ಮದುವೆ ಮಾಡಿಕೊಟ್ಟಿದ್ದ ಪೋಷಕರು.  ಮದುವೆಯಲ್ಲೇ ವರದಕ್ಷಿಣೆಯಾಗಿ 5 ಲಕ್ಷ ನಗದು, 150 ಗ್ರಾಂ ಚಿನ್ನ ಪಡೆದಿದ್ದ ಆರೋಪಿ ರಾಘವೇಂದ್ರ. ಮದುವೆಯಾದ 6 ತಿಂಗಳು ಅನ್ಯೋನ್ಯವಾಗಿದ್ದ ದಂಪತಿಗಳು. ಅನಂತರ ಮತ್ತೆ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಪೀಡಿಸಿದ್ದ ಪತಿ ರಾಘವೇಂದ್ರ. ಮದುವೆಯಲ್ಲೆ 5ಲಕ್ಷ ವರದಕ್ಷಿಣೆ, ಚಿನ್ನ ಕೊಟ್ಟಿರುವುದಾಗಿ ತಿಳಿಹೇಳಿ ಮತ್ತೆ ವರದಕ್ಷಿಣೆಗೆ ನಿರಾಕರಿಸಿದ್ದ ಪ್ರೇಮಕುಮಾರಿ. ಇದೇ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಜಗಳ ಶುರುವಾಗಿ ಹಲವಾರು ಬಾರಿ ಠಾಣೆ ಮೆಟ್ಟಿಲೇರಿದ್ದ ಪ್ರಕರಣ. ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎಲ್‌ಎಲ್‌ಬಿ ಸೇರ್ಪಡೆ ಆಗಿದ್ದಳು. https://ainlivenews.com/this-work-is-mandatory-before-march-31-no-penalty-guarantee/ ಆದರೆ ಪ್ರೇಮಾ ಓದುತ್ತಿದ್ದ ಕಾಲೇಜ್ ಬಳಿಯೂ ಬಂದು ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿ ಕೊಲೆ ಬೆದರಿಕೆಯೂ…

Read More

ಬೆಂಗಳೂರು:- ಉಚಿತ ನೀರನ್ನು ಮಾರಾಟ ಮಾಡಿದ ಖಾಸಗಿ ಟ್ಯಾಂಕರ್ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಪ್ರದೇಶಗಳಿಗೆ ಉಚಿತವಾಗಿ ನೀರು ಪೂರೈಸುವುದಕ್ಕಾಗಿ ಮಂಡಳಿಯು ಖಾಸಗಿ ಟ್ಯಾಂಕರ್ ಅನ್ನು ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಅದರಂತೆ ನೀರು ಪೂರೈಸಲು ಚಾಲಕನಿಗೆ ಸೂಚಿಸಲಾಗಿತ್ತು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ. https://ainlivenews.com/a-young-man-who-went-to-the-river-to-bathe-on-holi-died/ ವಾರ್ಡ್​ ಸಂಖ್ಯೆ 130ರಲ್ಲಿ ನೀರಿನ ತೀವ್ರ ಅಭಾವ ಇರುವುದು ಗೊತ್ತಾಗಿತ್ತು. ಆ ವಾರ್ಡ್‌ಗೆ ಚಾಲಕ ನೀರು ಸರಬರಾಜು ಮಾಡಬೇಕಾಗಿತ್ತು. ಸೂಚನೆಯನ್ನು ಪಾಲಿಸುವ ಬದಲು ಚಾಲಕ ವಾಣಿಜ್ಯ ಉದ್ದೇಶಕ್ಕಾಗಿ ವಾರ್ಡ್ ಸಂಖ್ಯೆ 14 ರಲ್ಲಿನ ಸಂಸ್ಥೆಗೆ ನೀರನ್ನು ಮಾರಾಟ ಮಾಡಿದ್ದಾರೆ. ಆದ್ದರಿಂದ, ನಾವು ಅವರ ವಿರುದ್ಧ ದೂರು ನೀಡಿದ್ದೇವೆ ಎಂದು ಮಂಡಳಿ ತಿಳಿಸಿದೆ. ನಗರದಲ್ಲಿನ ನೀರಿನ ಕೊರತೆ ನೀಗಿಸಲು ಹಲವು ಖಾಸಗಿ ಟ್ಯಾಂಕರ್‌ಗಳನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ಖಾಸಗಿ ಟ್ಯಾಂಕರ್​​ಗಳು ನೀರಿನ ದುರ್ಬಳಕೆಯನ್ನು ಮಾಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನೀರಿನ ದುರುಪಯೋಗದ ವಿರುದ್ಧ ಎಲ್ಲಾ…

Read More

ನವದೆಹಲಿ: ಲೋಕಸಭಾ ಚುನಾವಣೆ (Lok Sabha Polls) ಹಿನ್ನೆಲೆ 17 ರಾಜ್ಯಗಳ 111 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕರು, ಕೋರ್ಟ್‌ ಮಾಜಿ ನ್ಯಾಯಾಧೀಶರು, ಸಿನಿಮಾ ರಂಗದ ತಾರೆಯರು ಹಾಗೂ ಖ್ಯಾತ ಉದ್ಯಮಿಗಳಿಗೂ ಪಕ್ಷ ಟಿಕೆಟ್‌ ನೀಡಿದೆ. ಈ ಪೈಕಿ ಗೋವಾದಿಂದ ಡೆಂಪೊ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ (Pallavi Dempo) ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಗೋವಾ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ. ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊ ಯಾರು? ಗೋವಾದ ವಾಣಿಜ್ಯೋದ್ಯಮಿ ಹಾಗೂ ಶಿಕ್ಷಣತಜ್ಞೆಯೂ ಆಗಿರುವ ಪಲ್ಲವಿ ಡೆಂಪೊ ಅವರು ಪುಣೆಯ ಎಂಐಟಿಯಿಂದ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ವ್ಯವಹಾರ ನಿರ್ವಹಣೆಯಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ 49 ವರ್ಷ ವಯಸ್ಸಿನ ಪಲ್ಲವಿ ಅವರು, ಡೆಂಪೊ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ವಿಭಾಗವನ್ನು ನಿರ್ವಹಣೆ ಮಾಡುತ್ತಿದ್ದಾರೆ. https://ainlivenews.com/this-work-is-mandatory-before-march-31-no-penalty-guarantee/ ಇಂಡೋ-ಜರ್ಮನ್ ಎಜುಕೇಶನಲ್ ಅಂಡ್ ಕಲ್ಚರಲ್…

Read More

ಗದಗ:- ಬಣ್ಣದಾಟ ಆಡಿ ನದಿಗೆ ಸ್ನಾನ‌ ಮಾಡಲು ತೆರಳಿದ್ದ ಯುವಕ‌ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜ್‌ನಲ್ಲಿ ಜರುಗಿದೆ. https://ainlivenews.com/police-stations-are-becoming-business-centers-lokayukta-court/ 23 ವರ್ಷದ ಯುವರಾಜ ವಿಶ್ವನಾಥ ಕೊಂಪಿ ಮೃತ ದುರ್ದೈವಿ ಎನ್ನಲಾಗಿದ್ದು, ವಿಜಯನಗರ ಜಿಲ್ಲೆ ಹಿರೇಹಡಗಲಿ‌ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಹೋಳಿ ಹಬ್ಬ ಮುಗಿಸಿಕೊಂಡು ಸ್ನಾನಕ್ಕೆ ಎಂದು ಸ್ನೇಹಿತರು ನದಿಗೆ ಬಂದಿದ್ದರು. ಶಿಂಗಟಾಲೂರು ಏತ ‌ನೀರಾವರಿಯ ಬ್ಯಾರೇಜ್ ನಲ್ಲಿ ಈಜಲು ತೆರಳಿದ್ದರು. ಸ್ನಾನ ಮಾಡಲು ತೆರಳಿದಾಗ ವಿಶ್ವನಾಥ ನೀರಿನಲ್ಲಿ ಮುಳಗಿ‌ ಸಾವನ್ನಪ್ಪಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರು ಮಾರ್ಚ್ 27ರಂದು ಮಡಿಕೇರಿಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ವಾಕ್ತರ ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ. ಮಡಿಕೇರಿಯ ಕ್ರಿಸ್ತಲ್ ಕೋರ್ಟ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು, https://ainlivenews.com/this-work-is-mandatory-before-march-31-no-penalty-guarantee/ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ. ಬಿ.ವೈ ವಿಜಯೇಂದ್ರರವರು ರಾಜ್ಯದ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸಹಸ್ರಾರು ಸಂಖ್ಯೆ ಕಾರ್ಯಕರ್ತರು ಕುಶಾಲ್ನಗರದ ಕೊಪ್ಪ ಗೇಟು ಬಳಿ ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ನೂರಾರು ಕಾರ್ಯಕರ್ತರು ಕುಶಾಲನಗರಕ್ಕೆ ತೆರಳಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Read More

ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಫಾಫ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 176 ರನ್ ಕಲೆಹಾಕಿತು. ಪ್ರತ್ಯುತ್ತರವಾಗಿ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ  ಅರ್ಧಶತಕ ಬಾರಿಸಿದರೆ, ಅಂತಿಮವಾಗಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಮತ್ತು ಮಹಿಪಾಲ್ ಲ್ಯಾಮ್ರೋರ್ 8 ಎಸೆತಗಳಲ್ಲಿ 17 ರನ್ ಗಳಿಸಿ ಇನ್ನು 4 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು. https://twitter.com/CricCrazyJohns/status/1772334112256467122?ref_src=twsrc%5Etfw%7Ctwcamp%5Etweetembed%7Ctwterm%5E1772334112256467122%7Ctwgr%5E4aba25883caf59e072ac22d604e6e2bc76b273d0%7Ctwcon%5Es1_&ref_url=https%3A%2F%2Fnewsfirstlive.com%2Fvirat-kohli-celebrated-by-making-a-video-call-to-his-wife-anushka-sharma-from-the-field%2F ಜಯದ ಬಳಿಕ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮ ಅವರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೊಹ್ಲಿ ಅವರು ಪಂದ್ಯ ಮುಕ್ತಾಯದ ಬಳಿಕ ವಿಡಿಯೊ ಕರೆ ಮಾಡಿ ಪಂದ್ಯದಲ್ಲಿ…

Read More