Author: AIN Author

ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 178 ರನ್‌ ಹೊಡೆದು ಮೊದಲ ಜಯ ದಾಖಲಿಸಿತು. https://youtube.com/shorts/sNhXP3Av2CM?feature=share ಕೊನೆಯ 30 ಎಸೆತಗಳಲ್ಲಿ 59 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 12 ರನ್‌ ಬಂದರೂ ಕೊಹ್ಲಿ 77 ರನ್‌(49 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದ ಕಾರಣ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. 16.2 ನೇ ಓವರ್‌ನಲ್ಲಿ ಅನುಜ್‌ ರಾವತ್‌ ಎಲ್‌ಬಿ ಔಟಾಗಿದ್ದರಿಂದ ಪಂದ್ಯ ಪಂಜಾಬ್‌ ಕಡೆಗೆ ವಾಲಿತ್ತು ಈ ವೇಳೆ…

Read More

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯನ್ನು ಗೆದ್ರೆ ಕನ್ನಡದಲ್ಲಿ ಪ್ರಮಾಣ ವಚನ ಪಡೆಯುತ್ತೇನೆ. 6 ತಿಂಗಳಲ್ಲೇ ಹಿಂದಿ ಕಲಿಯುವೆ. ರಾಜ್ಯದ ಪರವಾಗಿ ಭಾಷಣ ಮಾಡುವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬಳಿಕ ‘ಕೋಟ ಶ್ರೀನಿವಾಸ ಪೂಜಾರಿಗೆ ಹಿಂದಿ ಬರೊಲ್ಲ’ ಎಂಬ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಮಾತನಾಡಿದ ಕೋಟ ಅವರು, ” ಜಯಪ್ರಕಾಶ್‌ ಹೆಗ್ಡೆಯವರಿಗೆ ನನ್ನ ಮೇಲಿನ ಅಭಿಮಾನ, ಪ್ರೀತಿ ಇದೆ. ಅದಕ್ಕೆ ಮುಂದೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ಹಾಗೆ ಹೇಳಿದ್ದಾರೆ ” ಎಂದರು. ಜಯಪ್ರಕಾಶ್‌ ಹೆಗ್ಡೆಯವರಿಗೆ ನನ್ನ ಮೇಲಿನ ಪ್ರೀತಿ ಅರ್ಥವಾಗಿದೆ. ನಾನು ಪ್ರಮಾಣ ವಚನವನ್ನು ಕನ್ನಡದಲ್ಲೆ ತೆಗೆದುಕೊಳ್ಳುತ್ತೇನೆ. ಸದನಕ್ಕೆ ಪ್ರವೇಶ ಮಾಡಿದ ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ. ಹೆಗ್ಡೆಯವರಿಗೆ ಸಮಾಧಾನ ಆಗುವಷ್ಟು ಹಿಂದಿಯಲ್ಲಿ ಭಾಷಣ ಮಾಡಿ ಬರುತ್ತೇನೆ ” ಎಂದು ಸವಾಲು ಹಾಕಿದರು. https://ainlivenews.com/this-work-is-mandatory-before-march-31-no-penalty-guarantee/ ರಾಷ್ಟ್ರ ಭಕ್ತರ ಗೆಲುವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಕೇಳಿಕೊಂಡರು. ಲೋಕಸಭೆ ಚುನಾವಣೆಯು…

Read More

ಬೆಂಗಳೂರು: ವಿರಾಟ್‌ ಕೊಹ್ಲಿ (Virat kohli) ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್‌ (Dinesh Karthik), ಮಹಿಪಾಲ್‌ (Mahipal Lomror) ಅವರ ಸಿಕ್ಸರ್‌ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಕೊಹ್ಲಿ ಅವರು ಮೈದಾನದಿಂದಲೇ ಪತ್ನಿ ಅನುಷ್ಕಾ ಶರ್ಮ ಅವರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಇದರ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ ಹಾಗೆ   ಕೊಹ್ಲಿ ಅವರು ಪಂದ್ಯ ಮುಕ್ತಾಯದ ಬಳಿಕ ವಿಡಿಯೊ ಕರೆ ಮಾಡಿ ಪಂದ್ಯದಲ್ಲಿ ನಡೆದ ಸಂಗತಿಗಳನ್ನು ಪತ್ನಿಗೆ  ವಿವರಿಸಿದ್ದಾರೆ. https://youtube.com/shorts/sNhXP3Av2CM?feature=share ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿದ ಕಿಂಗ್​ ಕೊಹ್ಲಿ ಪ್ಲೈನ್​ ಕಿಸ್​ ಕೊಡುವ ದೃಶ್ಯ ಕೂಡ ಅಭಿಮಾನಿಗಳ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಮಗಳೊಂದಿಗೆ ಕೊಹ್ಲಿ ವಿಡಿಯೋ ಕರೆಯಲ್ಲಿ ಮಾತನಾಡಿದಂತೆ ಘೋಚರಿಸಿದೆ. ಇವರ ಈ ಪ್ರೀತಿಗೆ ನೆಟ್ಟಿಗರು ಪ್ರೀತಿ…

Read More

ಬೆಂಗಳೂರು: ಬ್ಯಾಟಿಂಗ್‌ನಲ್ಲಿ ಹಲವು ವಿಶೇಷ ದಾಖಲೆಗಳನ್ನು ಬರೆದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇದೀಗ ಫೀಲ್ಡಿಂಗ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆಯುವ ಮೂಲಕ ಕೊಹ್ಲಿ, ಮಾಜಿ ಆಟಗಾರ ಸುರೇಶ್‌ ರೈನಾ ಅವರನ್ನು ಹಿಂದಿಕ್ಕಿದ್ದಾರೆ. ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್ ನಡುವಣ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯ ಆರನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ದಾಖಲೆಯನ್ನು ಬರೆದಿದ್ದಾರೆ. https://ainlivenews.com/porel-who-scored-32-runs-in-just-10-balls-against-punjab-kings-who/ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ವೆಸ್ಟ್ ಇಂಡೀಸ್‌ ಮಾಜಿ ನಾಯಕ ಕೈರೊನ್ ಪೊಲಾರ್ಡ್‌ ಅವರು 362 ಕ್ಯಾಚ್‌ಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. 290 ಕ್ಯಾಚ್‌ಗಳ ಮೂಲಕ ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್‌ ಮಿಲ್ಲರ್‌ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ ಮಾಜಿ ಆಲ್‌ರೌಂಡರ್ ಡ್ವೇನ್‌ ಬ್ರಾವೊ ಅವರು 271…

Read More

ನವದೆಹಲಿ: ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಖಲಿಸ್ತಾನಿ (Khalistani) ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರೂ.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ ಬೇಕಾಗಿರುವ ಖಾಲಿಸ್ತಾನಿ ಉಗ್ರ ಗುರ್ಪತ್‌ವಂತ್ ಸಿಂಗ್ ಪನ್ನುನ್ (Gurpatwant Pannun) ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ವಿಡಿಯೋದಲ್ಲಿ ಆತ ಆಪ್‌ ಪಕ್ಷಕ್ಕೆ 2014 ಮತ್ತು 2022 ರ ನಡುವೆ ಹಣ ಸಂದಾಯವಾಗಿದೆ ಎಂದು ಹೇಳಿದ್ದಾನೆ. 1993ರ ದೆಹಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಖಲಿಸ್ತಾನಿ ಉಗ್ರ ದೇವೇಂದರ್ ಪಾಲ್ ಸಿಂಗ್ ಭುಲ್ಲಾರ್‌ನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿ ನಮ್ಮಿಂದ ಕೇಜ್ರಿವಾಲ್‌ ಹಣ ಪಡೆದಿದ್ದಾರೆ ಎಂದು ಪನ್ನು ಆರೋಪಿಸಿದ್ಧಾನೆ. 1993ರ ದೆಹಲಿ ಬಾಂಬ್ ಸ್ಫೋಟದಲ್ಲಿ 9 ಮಂದಿ ಮೃತಪಟ್ಟು 31 ಮಂದಿ ಗಾಯಗೊಂಡಿದ್ದರು. 2014ರಲ್ಲಿ ನ್ಯೂಯಾರ್ಕ್‌ನಲ್ಲಿರುವ ಗುರುದ್ವಾರದಲ್ಲಿ ಕೇಜ್ರಿವಾಲ್‌ ಅವರನ್ನು ನಾನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಈ ವೇಳೆ…

Read More

ಲೋಕಸಭಾ ಚುನಾವಣೆಗೆ ಕಟ್ಟುನಿಟ್ಟಿನ ರೂಲ್ಸ್ ಜಾರಿ ಹಿನ್ನಲೆ ಕಲಬುರಗಿ DC ಫೌಜಿಯಾ ತರುನಮ್ ಕಾರ್ ಸಹ ತಪಾಸಣೆ ಮಾಡಿದ ಎಲೆಕ್ಷನ್ ಟೀಂ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.. ಜಿಲ್ಲಾಧಿಕಾರಿ & ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಫೌಜಿಯಾ ತರನಮ್ ಹೀರಾಪುರ್ ಕ್ರಾಸ್ ಚೆಕ್ ಪೋಸ್ಟ್ ಗೆ ಭೇಟಿ. ನೀಡಿದ ವೇಳೆ ನನ್ನ ಕಾರ್ ಸಹ ತಪಾಸಣೆ ಮಾಡಿ ಅಂತ ಖುದ್ದು DC ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ರು..DC ಸೂಚನೆ ಮೇರೆಗೆ ಕಾರ್ ತಪಾಸಣೆ ಮಾಡಲಾಯಿತು. ಈ ಮೂಲಕ ಚುನಾವಣಾ ಅಕ್ರಮದಲ್ಲಿ ಅಧಿಕಾರಿಗಳು ಭಾಗಿ ಆಗದಂತೆ ಎಲ್ಲರಿಗೂ DC ಸಂದೇಶ ರವಾನಿಸಿದ್ರು.

Read More

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ (Shivraj Tangadagi) ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ https://ainlivenews.com/mandya-is-likely-to-open-to-ranakans-curiosity-hdk-will-announce-the-alliance-candidate/ ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ (Congress) ಅಭ್ಯರ್ಥಿ ರಾಜಶೇಖರ್ ಹಿಟ್ನಾಳ (Rajashekar Hitnal) ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಯುವಕರು ಏನಾದರೂ ಮೋದಿ ಮೋದಿ ಅಂದರೆ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಕರೆ ನೀಡಿದ್ದಾರೆ. ಮೋದಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಯುವ ಜನರು ಉದ್ಯೋಗ ಕೇಳಿದರೆ ಪಕೋಡಾ ಮಾರಲು ಹೋಗಿ ಎನ್ನುತ್ತಾರೆ. ಈಗ ಮತ್ತೆ ಚುನಾವಣೆ ಬಂತು ಅಂತ ಬರುತ್ತಾರೆ. ಯುವಕರು ಮೋದಿ ಮೋದಿ ಅಂದರೆ ಅವರ ಕಪಾಳಕ್ಕೆ ಬಡಿಯಬೇಕು ಎಂದು ಹೇಳಿದ್ದಾರೆ

Read More

ಮಂಡ್ಯ: ಚನ್ನಪಟ್ಟಣದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಂಡ್ಯದಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಜೆಡಿಎಸ್ ಕೋರ್ ಕಮಿಟಿ ಸಭೆ ಕರೆದಿರುವ ಅವರು, ಸಂಜೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್​ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. https://ainlivenews.com/this-work-is-mandatory-before-march-31-no-penalty-guarantee/ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿದರೆ ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗ ಬಹುದು. ಪರಿಣಾಮವಾಗಿ ರಾಮನಗರದ ಮೇಲಿನ ಹಿಡಿತ ಕಳೆದುಕೊಳ್ಳಬೇಕಾಗಬಹುದು ಎಂಬ ಆತಂಕ ಜೆಡಿಎಸ್​ಗಿದೆ. ಆದಾಗ್ಯೂ, ಮಂಡ್ಯದಲ್ಲಿ ನಿಖಿಲ್​ರನ್ನು ಕಣಕ್ಕಿಳಿಸಿದರೆ ಕುಮಾರಸ್ವಾಮಿಯಷ್ಟು ಪ್ರಭಾವ ಬೀರುವುದು ಕಷ್ಟ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಅಳೆದೂ ತೂಗಿ ಅಂತಿಮವಾಗಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ.

Read More

ಬೆಂಗಳೂರು: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂವ ಕೌತುಕ ರಾಜಕೀಯ ವಲಯದಲ್ಲಿ ಮೂಡಿತ್ತು. ಇಂದು (ಮಂಗಳವಾರ) ಈ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ. https://ainlivenews.com/bbmp-chief-commissioner-instructs-officials-to-create-awareness-for-more-voting/ ಇಷ್ಟು ದಿನಗಳ ಕಾಲ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ (H.D.Kumaraswamy) ಆಗ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿ ಆಗುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಮಂಡ್ಯ ಜಿಲ್ಲೆಯ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಏರಿದಾಗಲೇ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ರು. ಆದರೆ ರಾಮನಗರ ಜಿಲ್ಲೆಯ ಮುಖಂಡರು‌ ಹಾಗೂ ಕಾರ್ಯಕರ್ತರು ಮಂಡ್ಯ ಸ್ಪರ್ಧೆ ಬೇಡಾ. ರಾಮನಗರದಲ್ಲಿಯೇ ಕುಮಾರಸ್ವಾಮಿ ಇರಬೇಕು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಹೇಳಿದ್ರು. ಹೀಗಾಗಿ ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ವಿಚಾರದಲ್ಲಿ…

Read More

ಬೆಂಗಳೂರು: ಮೇಕೆದಾಟು (Mekedatu) ಯೋಜನೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಮತ್ತೆ ಕಲಾವಿದರನ್ನು ಎಳೆತಂದಿದ್ದಾರೆ. ಮೇಕೆದಾಟು ಪರವಾಗಿ ನಡೆದ ಹೋರಾಟದಲ್ಲಿ ಮಾತನಾಡಿರುವ ವಾಟಾಳ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೇಕೆದಾಟು ಯೋಜನೆ ವಿರೋಧಿಸಿ ಮಾತನಾಡಿದ್ದಾರೆ. ಪ್ರಣಾಳಿಕೆಯಲ್ಲಿ ಯೋಜನೆಗೆ ಅಡೆತಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ವಿರೋಧಿಸುತ್ತೇನೆ ಎಂದಿದ್ದಾರೆ ವಾಟಾಳ್ https://ainlivenews.com/free-water-sale-complaint-against-tanker-driver/ ಈ ಕುರಿತಂತೆ ಕನ್ನಡದ ನಟರೂ ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ಸ್ಟಾಲಿನ್ ಅವರನ್ನು ರಜನಿಕಾಂತ್ (Rajinikanth), ಕಮಲ್ ಹಾಸನ್ (Kamal Haasan) ಭೇಟಿ ಮಾಡಿ ಮೇಕೆದಾಟು ಯೋಜನೆಗೆ ತಡೆ ನೀಡಬಾರದು ಎಂದು ಮನವಿ ಮಾಡುವಂತೆ ಕೇಳಿದ್ದಾರೆ. ಹಾಗೆ ಮಾಡದೇ ಹೋದರೆ, ಇಬ್ಬರೂ ಕರ್ನಾಟಕಕ್ಕೆ ಬರಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕನ್ನಡಪರ ಹೋರಾಟಗಳ ವಿಚಾರದಲ್ಲಿ ಹೆಚ್ಚೆಚ್ಚು ರಜನಿಕಾಂತ್ ಅವರನ್ನು ಎಳೆತರಲಾಗುತ್ತದೆ. ಈ ಬಾರಿ ಕಮಲ್ ಹಾಸನ್ ಜೊತೆಯಾಗಿದ್ದಾರೆ. ಈ ಹಿಂದೆಯೇ ಕನ್ನಡದ ವಿಚಾರದಲ್ಲಿ ರಜನಿಕಾಂತ್ ಅವರ ಚಿತ್ರಗಳನ್ನು ತಡೆಹಿಡಿಯಲಾಗಿದೆ. ಹಾಗಾಗಿ ರಜನಿ…

Read More