Author: AIN Author

ಹುಬ್ಬಳ್ಳಿ : ರಾಜ್ಯಕ್ಕೆ ಕೇಂದ್ರದಿಂದ ಯುಪಿಎ ಕಾಲದಲ್ಲಿ ಎಷ್ಟು ಹಾಗೂ ಎನ್‌ಡಿಎ ಕಾಲದಲ್ಲಿ ಎಷ್ಟು ಎನ್‌ಡಿಆರ್ ಎಫ್ ಹಣ ಬಂದಿದೆ ಅನ್ನುವುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, https://ainlivenews.com/this-work-is-mandatory-before-march-31-no-penalty-guarantee/ ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಹೋಗಿರುವುದು ರಾಜಕೀಯ ತಂತ್ರಗಾರಿಕೆ. ರಾಜ್ಯ ಸರ್ಕಾರ ಕೇಂದ್ರದಿಂದ ಹಣ ಬಂದಿಲ್ಲ ಎಂದು ಹೇಳುವುದನ್ನು ಬಿಟ್ಟು, ಯುಪಿಎ ಅವಧಿಯಲ್ಲಿ ಹಾಗೂ ಎನ್ ಡಿಎ ಅವಧಿಯಲ್ಲಿ ಎನ್ ಡಿ ಆರ್ ಎಫ್ ನಿಧಿಯಿಂದ ಎಷ್ಟು ಹಣ ಬಂದಿದೆ ಎಂದು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಇದೇ ವೇಳೆ ಮೋದಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಸಚಿವ ಶಿವರಾಜ್ ತಂಗಡಗಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇನ್ನು ಸ್ವಲ್ಪ ದಿನ ತಾಳಿ, ಮತಗಳ ಮೂಲಕ ಜನ ಪರೋಕ್ಷವಾಗಿ ಕಾಂಗ್ರೆಸ್ ಗೆ ಕಪಾಳಕ್ಕೆ ಹೊಡೆಯುತ್ತಾರೆ…

Read More

ಬೆಂಗಳೂರು:  ನಗರದಲ್ಲಿ ತೀವ್ರ ನೀರಿನ ಸಮಸ್ಯೆಯಿಂದ ಬೆಂಗಳೂರಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದು,  ಈ ನಡುವೆ  15 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಿಗಳು (IT Employees) ಮನೆಯಿಂದಲೇ ಕೆಲಸ (Work From Home) ಮಾಡಲು ಅವಕಾಶ ನೀಡುವಂತೆ ಕಂಪನಿಗಳನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ ಅಂಕಿಅಂಶಗಳ ಪ್ರಕಾರ, ನಗರಕ್ಕೆ ಪ್ರತಿ ದಿನ 2,600 ಎಂಎಲ್​ಡಿ  ನೀರಿನ ಅವಶ್ಯಕತೆ ಇದೆ. ಸದ್ಯ ಬೆಂಗಳೂರು ನಗರವು ದಿನಕ್ಕೆ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯನ್ನು ಎದುರಿಸುತ್ತಿದೆ. https://ainlivenews.com/illegal-borewells-in-bangalore-what-has-jalmandali-done/ ನೀರಿನ ಬಿಕ್ಕಟ್ಟು ಹಲವಾರು ವಾರಗಳಿಂದ ಮುಂದುವರಿದಿರುವುದರಿಂದ ಕರ್ನಾಟಕ ಸರ್ಕಾರವು ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿರುವ ಸುಮಾರು 15 ಲಕ್ಷ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಒದಗಿಸುವುದರಿಂದ ಅಲ್ಪಾವಧಿಯ ಪರಿಹಾರ ದೊರೆಯಲಿದೆ ಎಂದು ಕರ್ನಾಟಕ ಮತ್ತು ಅಸ್ಸಾಂನ ಹೈಕೋರ್ಟ್‌ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ ಶ್ರೀಧರ್ ರಾವ್ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ…

Read More

ಚಿಕ್ಕೋಡಿ: ಪಕ್ಷದ ಹೈಕಮಾಂಡ್ ಇದುವರೆಗೆ ಯಾರಿಗೂ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಟ್ಟಿಲ್ಲ ಎಂದು ಲಕ್ಷ್ಮಣ ಸವದಿ  ಹೇಳಿದರು. ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಇನ್ನೂ ಚುನಾವಣಾ ಪ್ರಚಾರ ಆರಂಭವಾಗಿಲ್ಲ, ಈಗಷ್ಟೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ, ನಾಮಪತ್ರಗಳ ಸಲ್ಲಿಕೆಯಾದ ಬಳಿಕ ಚುನಾವಣಾ ಸಮಿತಿಗಳನ್ನು ರಚಿಸಿ ಪ್ರಚಾರ ಆರಂಭಿಸಲಾಗುತ್ತದೆ. ಪಕ್ಷದ ಹೈಕಮಾಂಡ್ ಇದುವರೆಗೆ ಯಾರಿಗೂ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಟ್ಟಿಲ್ಲ, https://ainlivenews.com/this-work-is-mandatory-before-march-31-no-penalty-guarantee/ ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮೀಕ್ಷೆಗಳನ್ನು ನೀಡುವ ಕೆಲಸವಹಿಸಿ ಕೊಡಲಾಗಿತ್ತು, ಪ್ರಚಾರ ಕಾರ್ಯದಲ್ಲಿ ಯಾರನ್ನು ಕಡೆಗಣಿಸಿದ್ದಾರೆ ಯಾರನ್ನು ಪರಾಂಬರಿಸಿದ್ದಾರೆ ಅಂತ ಪ್ರಶ್ನೆ ಉದ್ಭವಿಸಲ್ಲ ಎಂದು ಸವದಿ ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ಜವಾಬ್ದಾರಿ ನೀಡಿದರೆ ಮಾತ್ರ ಕೆಲಸ ಮಾಡಬೇಕು ಅಂತಿರಲ್ಲ, ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗುತ್ತದೆ ಎಂದು ಲಕ್ಷ್ಮಣ ಸವದಿ ಹೇಳಿದರು.

Read More

ಬೆಂಗಳೂರು:   ಜಾತ್ರೆ, ಉತ್ಸವ ಶುಭ ಸಮಾರಂಭಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರೂ ಮಹಿಳೆಯರನ್ನ ಪೊಲೀಸರು ಬಂಧಿಸಿದ್ದಾರೆ. ಹಾಗೆ  ಬಂಧಿತರಿಂದ 14.9 ಲಕ್ಷ ಮೌಲ್ಯದ 233 ಗ್ರಾ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದಲ್ಲಿ ಶಿವರಾತ್ರಿ ಹಬ್ಬದ ದಿನ ಸುಬ್ರಮಣ್ಯ ಸ್ವಾಮಿ ದೇವಸ್ಥನಾಕ್ಕೆ ಹೋದಾಗ ಕಳ್ಳತನ ಮಾಡಿದ್ದು ಆ ನಂತರ  ಮಹಿಳೆ ರಾಜಾಜಿನಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು  ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲನೆ ವೇಳೆ ಇಬ್ಬರು ಮಹಿಳೆಯರಿಂದ ಕೃತ್ಯವೆಸಗಿದ್ದು ಬಯಲಿಗೆ ಬಂದಿದೆ. https://ainlivenews.com/illegal-borewells-in-bangalore-what-has-jalmandali-done/ ಜಾತ್ರೆ ದೇವರ ಉತ್ಸವ ಶುಭ ಸಮಾರಂಗಳಿಗೆ ವಯಸ್ಸಾದ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮಹಿಳೆಯರು ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದ ಮಹಿಳೆಯರು ಈ ಬಗ್ಗೆ  ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು.

Read More

ಬೆಂಗಳೂರು: ಅನುಮತಿ ಇಲ್ಲದೇ ಬೋರ್‌ವೆಲ್‌ ಕೊರೆಯಬಾರದು ಎಂದು ಜಲಮಂಡಳಿ ಆದೇಶ ಮಾಡಿದ್ದರೂ ಸಹ ನಗರದಲ್ಲಿ ಅನುಮತಿ ಪಡೆಯದೇ ಬೋರ್‍ವೆಲ್ ಕೊರೆಯುತ್ತಿರುವುದು ಪತ್ತೆಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 20 ಅಕ್ರಮ ಬೋರ್‍ವೆಲ್‍ಗಳ ಪತ್ತೆಯಾಗಿದೆ. ಅಕ್ರಮವಾಗಿ ಬೋರ್‌ವೆಲ್‌ (Illegal Borewells) ಕೊರೆಸಿದ 20 ಜನರ ವಿರುದ್ಧ ಜಲಮಂಡಳಿ ದೂರು ದಾಖಲಿಸಿದೆ. https://ainlivenews.com/sumalatha-lost-ticket-in-mandya-what-did-bjp-state-president-say/ ಬೆಂಗಳೂರಿನಲ್ಲಿ (Bengaluru) ನೀರಿನ ಅಭಾವ ಇರುವ ಹಿನ್ನೆಲೆ ಜಲಮಂಡಳಿ ನಾನಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಇದರ ಮಧ್ಯೆದಲ್ಲಿ ಅನಧಿಕೃತವಾಗಿ ಬೋರ್‌ವೆಲ್‌ ಕೊರೆಯಬಾರದು ಎಂದು ಆದೇಶ ಸಹ ಮಾಡಿದೆ. ಆದೇಶವನ್ನೂ ಲೆಕ್ಕಿಸದೆ ಬೆಂಗಳೂರಿನ ದಕ್ಷಿಣ ವಲಯ, ಪೂರ್ವ ವಲಯ ಕೆಆರ್‍ಪುರಂ ಮತ್ತು ಮಹಾದೇವಪುರ ವಲಯದಲ್ಲಿ 20 ಬೋರವೆಲ್‍ಗಳನ್ನು ಅನಧಿಕೃತವಾಗಿ ಕೊರೆದಿರುವುದು ಪತ್ತೆಯಾಗಿದೆ. ಕೆಆರ್ ಪುರಂನ ವಿಭೂತಿಪುರದಲ್ಲಿ ಅನಧಿಕೃವಾಗಿ ಬೋರ್‌ವೆಲ್‌ ಕೊರೆಯುತ್ತಿದ್ದು, ಈ ಬಗ್ಗೆ ಪೊಲೀಸ್ (Police) ಠಾಣೆಗೆ ದೂರು ನೀಡಲಾಗಿದೆ. ಸುಮಾರು 20 ಅಕ್ರಮ ಬೋರ್‍ವೆಲ್ ಪತ್ತೆಯಾಗಿದ್ದು, ಕೊರೆಸಿದವರ ವಿರುದ್ಧ ಜಲಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ. ನಗರದಲ್ಲಿ ಅನಧಿಕೃತವಾಗಿ ಬೋರ್‌ವೆಲ್‌ ಕೊರೆದಿರೋದು ಕಂಡು ಬಂದರೆ…

Read More

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ್ ತಂಗಡಗಿ   ವಿಜಯೇಂದ್ರ ಕಿಡಿಕಾರಿದ್ದಾರೆ https://ainlivenews.com/mandya-kolar-candidate-announcement-issue-high-voltage-meeting-at-dalpatis-residence/ ನಗರದಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಲೆ ತಿರುಗುತ್ತಿದೆ. ಮೋದಿ ಅವರ ಜನಪ್ರಿಯತೆ ತಡೆಯಲಾಗದೆ ಹತಾಶೆ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ15-20 ಸೀಟು ಗೆಲ್ತೀವಿ ಅನ್ನೋ ಚಿಂತನೆಯಲ್ಲಿದ್ರು. ಆದ್ರೆ ಯಾವ ಸಚಿವರೂ ಚುನಾವಣೆಗೆ ನಿಲ್ಲಲಿಲ್ಲ. ಮತದಾನ ಆದ ಬಳಿಕ ಅವರಿಗೆ ಕಪಾಳಮೋಕ್ಷ ಆಗಲಿದೆ ಎಂದು ತಿಳಿಸಿದರು. ಮಂಡ್ಯ ಸಭೆಗೆ ಸುಮಲತಾಗೆ ಆಹ್ವಾನ ವಿಚಾರ ಬಗ್ಗೆಯೂ ಮಾತನಾಡಿ  ಮಂಡ್ಯ ಕ್ಷೇತ್ರ ಜೆಡಿಎಸ್‌‌ಗೆ ಬಿಟ್ಟುಕೊಟ್ಟ ಸಂಧರ್ಭದಲ್ಲಿ. ಎನ್‌ಡಿಎ ಮಿತ್ರಕೂಟ ಒಟ್ಟಿಗೆ ಚುನಾವಣೆ ಎದುರಿಸಬೇಕಿದೆ. ಮಂಡ್ಯ ಬಿಜೆಪಿ ಮುಖಂಡರ ಸಭೆ ಕರೆಯಲಾಗಿದೆ. ಸುಮಲತಾ ಅವರನ್ನೂ ಭೇಟಿಯಾಗ್ತೀನಿ. ಅವರನ್ನೂ ವಿಶ್ವಸಕ್ಕೆ‌ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

Read More

ಬಳ್ಳಾರಿ: ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೆ ಮತದಾರರಿಗೆ ಆಮಿಷ, ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ, ಮತದಾರರನ್ನ ಸೆಳೆಯಲು ಕಸರತ್ತು ಶುರುವಾಗಿದೆ‌. ಉಡುಗೊರೆ ಹಂಚುವುದು, ಆಮಿಷ ತೋರುವ ಪ್ರಕರಣಗಳು ಹೆಚ್ಚಾಗಿದೆ. ಪೊಲೀಸರು ಇಂತಹ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಮಾರ್ಚ್ 28ರಂದು ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ. ಪಾಲಿಕೆಯ ಗದ್ದುಗೆ ಏರಲು ಆಕಾಂಕ್ಷಿಗಳು ಬರಪೂರ ಉಡುಗೊರೆಗಳನ್ನು ಹಂಚುತ್ತಿದ್ದಾರೆ.ಮುಲ್ಲಂಗಿ ನಂದೀಶ್, ಗಾದೆಪ್ಪ, ಪೇರಂ ವಿವೇಕ್ ಮತ್ತು ಪಕ್ಷೇತರ ಸದಸ್ಯ ಪ್ರಭಂಜನ್, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಮತ್ತು ಉಪಮೇಯರ್ ಆಕಾಂಕ್ಷಿಗಳಾಗಿದ್ದಾರೆ. https://ainlivenews.com/this-work-is-mandatory-before-march-31-no-penalty-guarantee/ ಮೂವರು ಪಾಲೆಕೆ ಸದಸ್ಯರ ಮನೆ – ಮನೆಗೆ ಹೋಗಿ ಊಡೂಗೊರೆ ಕೊಟ್ಟು ಬರುತ್ತಿದ್ದಾರೆ.ಮುಲ್ಲಂಗಿ ನಂದೀಶ್ ಪಾಲಿಕೆ ಸದಸ್ಯರಿಗೆ ಬೆಳ್ಳಿ ತಟ್ಟೆ ಮತ್ತು ಕಾಂಗ್ರೆಸ್ ಚಿಹ್ನೆ ಇರುವ ಬಂಗಾರದ ಚಿಕ್ಕ ಆಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಕ್ಷೇತರ ಸದಸ್ಯ ಪ್ರಭಂಜನ್ ರೇಷ್ಮೆ ಪಂಚೆ, ಸೀರೆ ಮತ್ತು ಇನ್ನಿಬ್ಬರುಡ್ರೈಪ್ರೂಟ್ಸ್ ಬಾಕ್ಸ್ ನೀಡಿ ಸನ್ಮಾನ ಮಾಡುತ್ತಿದ್ದಾರೆ.

Read More

ಬೆಂಗಳೂರು: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂವ ಕೌತುಕ ರಾಜಕೀಯ ವಲಯದಲ್ಲಿ ಮೂಡಿತ್ತು. ಇಂದು (ಮಂಗಳವಾರ) ಈ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ. ಹೌದು.. ಮಾಜಿ ಸಿಎಂ ಕುಮಾರಸ್ವಾಮಿಯವರ ಜೆಪಿ ನಗರದಲ್ಲಿರುವ ನಿವಾಸದಲ್ಲಿ ನಡೆಯುತ್ತಿರುವ ಸಭೆಯಾಗಿದ್ದು ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಮಾಜಿ ಶಾಸಕ ವೆಂಕಟರಮಣ ನಾಡಗೌಡ, ಎಂಎಲ್ ಸಿ ಶರವಣ, ಶಾಸಕ ಸಮೃದ್ದಿ ಮಂಜುನಾಥ್ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಭಾಗಿಯಾಗಿದ್ದಾರೆ. https://ainlivenews.com/tadagis-statement-against-prime-minister-modi-bjp-sparks-against-the-minister/ ಅದೇ ರೀತಿ ಇಂದು  ಕೋಲಾರ ಜೆಡಿಎಸ್ ಅಭ್ಯರ್ಥಿ ಘೋಷಣೆ ಹಿನ್ನೆಲೆಯಲ್ಲಿ  ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ ಕೋಲಾರ ಸಂಸದ ಮುನಿಸ್ವಾಮಿ ಕೋಲಾರದಲ್ಲಿ ಯಾರನ್ನು ಅಭ್ಯರ್ಥಿಯಾಗಿ ಮಾಡಿದ್ರೆ ಗೆಲುವು ಸಾಧಿಸಬಹುದು ಕೋಲಾರ ಅಭ್ಯರ್ಥಿ ಕುರಿತು ಚರ್ಚೆ  ನಡೆಯುತ್ತಿದೆ.

Read More

ಮೈಸೂರು: ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ (S.T.Somshekar) ಭಾವಚಿತ್ರ ಇರುವುದು ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರಾಗಿದ್ದ ಹೆಚ್‌.ವಿ.ರಾಜೀವ್‌ ಬುಧವಾರ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ಈ ಸಂಬಂಧ ಜಾಹೀರಾತು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ಎಸ್‌.ಟಿ.ಸೋಮಶೇಖರ್‌ ಅವರ ಭಾವಚಿತ್ರವೂ ಇದೆ. https://ainlivenews.com/this-work-is-mandatory-before-march-31-no-penalty-guarantee/ ಬಿಜೆಪಿ ಆಡಳಿತದಲ್ಲಿ ಎಸ್‌.ಟಿ.ಸೋಮಶೇಖರ್‌ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಸೋಮಶೇಖರ್‌ ಜೊತೆ ರಾಜೀವ್‌ ಆಪ್ತರಾಗಿದ್ದರು. ಈಗಾಗಲೇ ಕಾಂಗ್ರೆಸ್‌ ನಾಯಕರ ಜೊತೆ ಎಸ್‌.ಟಿ. ಸೋಮಶೇಖರ್‌ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯಸಭಾ ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದ್ದರು. ಈಗ ಎಸ್‌ಟಿಎಸ್‌ ನೇತೃತ್ವದಲ್ಲಿ ಆಪ್ತ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವುದು ಚರ್ಚೆ ಹುಟ್ಟುಹಾಕಿದೆ. 

Read More

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಕ್ರೀಸ್​ಗೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಕ್ರೀಡಾಂಗಣದ ಗ್ರಿಲ್ ಹಾರಿ ಕ್ರೀಸ್​ ಬಳಿ ಬಂದು ಕೊಹ್ಲಿಯ ಕಾಲು ಹಿಡಿದಿದ್ದ! ತಕ್ಷಣ ಆತನನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಆ ವ್ಯಕ್ತಿ ಯಾರು? ಆತ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದಿದ್ದು ಹೇಗೆ, ಆತನ ಉದ್ದೇಶ ಏನಿತ್ತು ಎಂಬ ಎಲ್ಲ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಲ್ಲದೆ, ಆತನ ವಿರುದ್ಧ FIR ದಾಖಲಿಸಿದ್ದಾರೆ. https://ainlivenews.com/chennai-super-kings-gujarat-titans-clash-today/ ಸ್ಟೇಡಿಯಂ ನಲ್ಲಿ ವ್ಯಕ್ತಿ‌ ನುಗ್ಗಿದ್ದ ವಿಚಾರ ಸಂಬಂದಿಸಿದಂತೆ  ಸ್ಕ್ರೀಜ್ ಗೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದಿದ್ದವನ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ರಾಯಚೂರು ಮೂಲದ ಕುರುಮಪ್ಪ @ ಚಿನ್ನ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ ಈತ ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಎಂಬುದು ತಿಳಿದುಬಂದಿದೆ. ರೈಲಿನಲ್ಲಿ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತ, 3000 ರೂಪಾಯಿ ಕೊಟ್ಟು ಡಿ ಬ್ಲಾಕ್…

Read More