Author: AIN Author

ಬೆಂಗಳೂರು: ಕಾಂಗ್ರೆಸ್ ನವರಿಗೆ ಸುಳ್ಳೇ ಮನೆದೇವ್ರು, ತೆರಿಗೆ ವಂಚನೆ ಅನ್ನೋ ಆರೋಪ ಜನರನ್ನ ದಾರಿ ತಪ್ಪಿಸೊ ಅಜೆಂಡಾ ಹಾಗೆ ದಲಿತ ಸಚಿವ ರನ್ನು ಮುಂದಿಟ್ಟುಕೊಂಡು ಸುಳ್ಳು ಆರೋಪ ಮಾಡ್ತಿದ್ದಾರೆ ಅಷ್ಟೇ  ಎಂದು ಮಾಜಿ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ. https://ainlivenews.com/mandya-the-heart-of-jds-will-answer-the-arrogance-hd-kumaraswamy/ ಬೆಂಗಳೂರಿನಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ, ಹಳ್ಳಿಗಳಲ್ಲಿ ಇಲ್ಲ ಅಂತ ಸಚಿವ ಕೃಷ್ಣಾ ಬೈರೇಗೌಡ ಹೇಳಿಕೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಇರುವ ನೀರಿನ ಸಮಸ್ಯೆ ಬಗ್ಗೆ ಗೊತ್ತೆ ಆಗಿಲ್ಲ‌ ಅನಿಸ್ತಿದೆ. ಇದು ಅದಕ್ಷತೆಯೋ, ಅಸಮರ್ಥತೆಯೋ ಒಂದು ತಿಳಿಯುತ್ತಿಲ್ಲ ಎಂದು ಹೇಳಿದ್ದರು. ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವಾಗಿ ಮ್ಯಾನಿಫೆಸ್ಟ್ ಬಿಟ್ರು. ಅದನ್ನು ವಿರೋಧಿಸುವ ಕೆಲಸವೂ ಮಾಡಲಿಲ್ಲ.ನಾವು ನಿಮ್ಮ ಮೈತ್ರಿ ಕಳ್ಕೋತೀವಿ ಅಂತ ಹೇಳಲಿಲ್ಲ.ಹೋಳಿ ಆಟವಾಡಲು ನೀರು ಸಾಲದ ಕಾಲ ಬರುತ್ತೆ ಅಂತ ಅಂದುಕೊಂಡಿರಲಿಲ್ಲ.ದಲಿತ ಸಿಎಂ ಅನ್ನೋ ಅಸ್ತ್ರ ಬಿಟ್ಟು, ಹೇಳಿಕೆ ನೀಡುತ್ತಿದ್ದಾರೆ. ಖರ್ಗೆ, ಮಹದೇವಪ್ಪ, ಪರಮೇಶ್ವರ್ ಇವರನ್ನ ಆಸ್ತ್ರ ಮಾಡಿಕೊಂಡು ಹೇಳಿಕೆ ನೀಡ್ತಿದ್ದಾರೆ.ಜಗತ್ತಿನ ಜಿಡಿಪಿ ಕುಸಿದಾಗ, ಭಾರತದ ಜಿಡಿಪಿ…

Read More

ಬೆಂಗಳೂರು: ಪತಿಯು ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಗೀಳಿನಿಂದಾಗಿ 1 ಕೋಟಿ ರೂ. ಕಳೆದುಕೊಂಡಿದ್ದರಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ. ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ದರ್ಶನ್‌ ಬಾಬು ಪತ್ನಿ ರಂಜಿತಾ (24) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಐಪಿಎಲ್‌ಗಾಗಿ ಬೆಟ್ಟಿಂಗ್‌ (IPL Betting) ಗೀಳಿಗೆ ಸಿಲುಕಿದ್ದ ದರ್ಶನ್‌ ಬಾಬು 1.5 ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದ. ಸಾಲ ಕೊಟ್ಟವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಹಿಳೆ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. https://ainlivenews.com/mandya-the-heart-of-jds-will-answer-the-arrogance-hd-kumaraswamy/ ಹೊಳಲ್ಕೆರೆಯ ಮನೆಯ ಬೆಡ್‌ರೂಂ ನಲ್ಲಿ ಮಾ.19 ರಂದು ರಂಜಿತಾಳ ಮೃತದೇಹ ಪತ್ತೆಯಾಗಿದೆ. ತನ್ನ ಈ ನಿರ್ಧಾರಕ್ಕೆ ಸಾಲ ನೀಡಿದ ವ್ಯಕ್ತಿಯೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆಕೆ ಬರೆದಿದ್ದಾಳೆ. ಪ್ರಕರಣ ಸಂಬಂಧ ರಂಜಿತಾ ತಂದೆ ತನ್ನ ಅಳಿಯನಿಗೆ ಕಾನೂನುಬಾಹಿರವಾಗಿ ಸಾಲ ನೀಡಿರುವ 13 ಮಂದಿ ವಿರುದ್ಧ ದೂರು ನೀಡಿದ್ದಾರೆ. ದರ್ಶನ್‌ 2021 ರಿಂದ 2023 ರ ವರೆಗೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ಹಣ ಹಾಕಿ ಎಲ್ಲವನ್ನೂ ಕಳೆದುಕೊಂಡಿದ್ದ.…

Read More

ಬಾಗಲಕೋಟೆ: ಈ ಬಾರಿಯ ಹೋಳಿ ಹಬ್ಬವು ವಿನೂತನ ಹಾಗು ವಿಶೇಷತೆಯಿಂದ ಕೂಡಿ ಒಂದೇ ಸೂರಿನಲ್ಲಿ 10 ಸಾವಿರಕ್ಕೂ ಅಧಿಕ ಜನ ಬಣ್ಣದೋಕಳಿ ಆಡಿರುವದು ಇತಿಹಾಸ ನಿರ್ಮಿಸುವಲ್ಲಿ ಕಾರಣವಾಯಿತು. ಮಂಗಳವಾರ ಬೆಳ್ಳಂಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಸುತ್ತಲಿನ ಗ್ರಾಮಸ್ಥರು ಅದರಲ್ಲೂ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಸಾವಿರಾರು ಜನ ಬಾಗಲಕೋಟೆಯಲ್ಲಿ ಹರಿದು ಬರುತ್ತಿರುವದು ಸಹಜವಾಗಿತ್ತು.ಇಡೀ ನಗರವನ್ನು ಬಣ್ಣದಿಂದ ಮಿಂದೇಳುವಲ್ಲಿ ಕಾರಣವಾಯಿತು. ಮಾನವ ದೇಹದ ಫಿಟ್‌ನೆಸ್‌ನಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿದಿಷ್ಟ ಬಣ್ಣದಕೊರತೆಯು ರೋಗಕ್ಕೆ ಕಾರಣವಾಗಬಹುದು, ಆದರೆ ಆಹಾರ ಮತ್ತು ಔಷಧದ ಮೂಲಕ ಪೂಕರವಾಗಿದ್ದರೆ ಆ ಬಣ್ಣದ ಅಂಶವನ್ನು ಸರಿಪಡಿಸಬಹುದು. ಪ್ರಾಚೀಣ ಕಾಲದಿಂದಲೂ ಹೋಳಿ ಹಬ್ಬ ಆಚರಣೆಯಲ್ಲಿದೆ. ನೈಸರ್ಗಿಕ ಮೂಲಗಳಾದ ಅರಿಶಿನ, ಬೇವು, ತೇಸು ಇತ್ಯಾದಿಗಳಿಂದ ತಯಾರಿಸಲಾಗುತ್ತಿದೆ. ಇದು ಒಂದು ಆರೋಗ್ಯದ ಗುಟ್ಟು ಎಂದರು. ಬಣ್ಣದೋಕಳಿ ಸಾವಿರಾರು ಜನರ ಮಧ್ಯ ವಿಜೃಂಭಣೆಯಿಂದ ಜರುಗಿದ್ದು ವಿಶೇಷವೆನಿಸುತ್ತಿದೆ ಎಂದು ಬಣ್ಣಪ್ರಿಯರು ಹೇಳಿದರು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಮಂಡ್ಯ:  ಕಾವೇರಿ ನದಿಯಲ್ಲಿ ಈಜಲು‌ ಹೋದ ನಾಲ್ವರು ಸಾವನ್ನಪ್ಪಿರುವ ಘಟನೆ  ಮಳವಳ್ಳಿಯ ಮುತ್ತತ್ತಿಯ ಕಾವೇರಿ ನದಿ ಬಳಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿ‌ನ ಹಲಗೂರು ಸಮೀಪದ ಮುತ್ತತ್ತಿ ಪ್ರವಾಸಕ್ಕೆಂದು ಹೋದಾಗ ಒಬ್ಬ ಈಜಲು ಹೋದಾಗ ಇನ್ನುಳಿದವರು ರಕ್ಷಣೆಗೆ ಹೋದಾಗ ಮೈಸೂರು ಮೂಲದ ನಾಲ್ವರು ಸಾವನ್ನಪ್ಪಿದವರು. https://ainlivenews.com/minister-shivaraj-thangadagi-justified-the-provocative-statement/ ನಾಗೇಶ್(40), ಭರತ್(17), ಗುರು(32), ಮಹದೇವ್(16) ಸಾವನ್ನಪ್ಪಿದವರಾಗಿದ್ದು  ಮೈಸೂರಿನಿಂದ ಮುತ್ತತ್ತಿಗೆ ಬಂದಿದ್ದ ಈ‌ ನಾಲ್ವರು. ಕಾವೇರಿ ನದಿಯಲ್ಲಿ ಈಜಾಡುವ ವೇಳೆ ನೀರಿನಲ್ಲಿ ಮುಳುಗಿದ ಓರ್ವ ರಕ್ಷಣೆಗೆ ಹೋದ ಮೂವರು ಸೇರಿ ನಾಲ್ವರು ಸಾವು. ಹಲಗೂರು  ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು ಇಬ್ಬರ ಮೃತದೇಹ ಪತ್ತೆಯಾಗಿದ್ದು ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Read More

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Election) ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಇಂದು ಸಂಜೆ ಮಂಡ್ಯ ಭಾಗದ ಜೆಡಿಎಸ್‌ (JDS) ನಾಯಕರ ಸಭೆಯನ್ನು ಕರೆಯುತ್ತೇನೆ. ಈ ಸಭೆಯ ಬಳಿಕ ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಜೆಡಿಎಸ್‌ನ ಹೃದಯ ಭಾಗ ಮಂಡ್ಯ. ಕಳೆದ ಚುನಾವಣೆ ನಮಗೆ ನೈತಿಕ ಸೋಲು ಅಲ್ಲ. ಈ ಚುನಾವಣೆ ಮೂಲಕ ಜೆಡಿಎಸ್ ಮುಗಿಸುತ್ತೇವೆ ಎನ್ನುವ ದುರಹಂಕಾರದ ಮಾತಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದರು. https://ainlivenews.com/minister-shivaraj-thangadagi-justified-the-provocative-statement/ ಬದುಕಿರುವರೆಗೂ ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿ ಕೈ ಬಿಡುವುದಿಲ್ಲ. ರಾಮನಗರ, ಚನ್ನಪಟ್ಟಣ ಜನತೆಗೆ ಮನವಿ ಮಾಡುತ್ತೇನೆ. ಈ ಪಕ್ಷ ಉಳಿಸಲು 3 ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದುಳು ಚಿಕಿತ್ಸೆ ನಡೆದಿದೆ. ಇಷ್ಟು ಆದರೂ ಬದುಕಿದರೆ ನಾಡಿಗೆ ಏನೋ ಸೇವೆ ಬೇಕು ಅಂತ ದೇವರು ಬದುಕಿಸಿದ್ದಾನೆ. ಈ ಪಕ್ಷ…

Read More

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಸೋಲಿನ ಭಯದಿಂದ ಬರದ ರಾಜಕೀಯ ಮಾಡುತಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬರ ತಾಂಡವ ಆಡುತಿದ್ದು ಸರ್ಕಾರ ಸುಳ್ಳು ಹೇಳುವನ್ನ ವ್ಯವಸ್ಥಿತವಾಗಿ ಮಾಡತಾ ಇದೆ.ಈ ಹಿಂದೆ ಕೇಂದ್ರ ಸರ್ಕಾರದ ಯುಪಿಎ ಇದ್ದಾಗ ಎಷ್ಟು ಬಂತು ಈಗ ನಾವು ಎನ್ ಡಿಎ ಇದ್ದಾಗ ಎಷ್ಟು ಬಂತು ಅಂತಾ ಅಂಕಿ ಸಮೇತ ಕೊಟ್ಟಿದ್ದೇವೆ ಎಂದರು. ಇನ್ನು ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ ಅಂತಾ ಬಹಿರಂಗ ಸವಾಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಹಾಕಿದ್ದು ನೋಡದೆ ಆದರೆ ಈ ಹಿಂದೇನೆ ಹಣಕಾಸು ಸಚಿವೆ ನಿರ್ಮಲಾ ಸಿತಾಮಾಮನ್ ಅವರು ಅಂಕಿ‌ಸಂಖ್ಯೆ ಸಮೇತ ಕೊಟ್ಟಿದ್ದಾರೆ ಎಂದರು. ಯಾವುದೇ ಅನ್ಯಾಯ ಆಗಿಲ್ಲ.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸಾರ ಇಲ್ಲ ಇನ್ನೊಬ್ಬರು ಕೊಪ್ಪಕ್ಕಾಳಕ್ಕೆ ಹೊಡಿ ಅಂತಾರೆ. ಆದರೆ ಇದೊಂದು ಸುಸಂಸ್ಕರ ಲಕ್ಷಣ ಅಲ್ಲ.‌ಆದ್ದರದ ಈಗ ಅದು…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಅದ್ದೂರಿಯಾಗಿ ಕಾಮದಹನ ಮಾಡುವುದರ ಮುಖಾಂತರ ಪರಸ್ಪರ ಬಣ್ಣ ಹಚ್ಚಿ ಸಂಭ್ರಮ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ಕಾಮದಹನ ಮಾಡುವ ಸಂದರ್ಭದಲ್ಲಿ ಕಾಮಣ್ಣನ ಮೇಲಿರುವ ಸುಂದರವಾದ ಹಾಡುಗಳನ್ನು ಹಾಡಿ ಸೇರಿದ ಜನರಿಗೆ ಮನರಂಜನೆ ನೀಡುವಲ್ಲಿ ಕಾರಣವಾಯಿತು. ಪ್ರಕಾಶ ಕುಂಬಾರ ಬಾಗಲಕೋಟೆ

Read More

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಗ್‌ ಅಪ್‌ ಡೇಟ್‌ ಸಿಕ್ಕಿದ್ದು ಇದೀಗ ಬೆಂಗಳೂರು ಮೂಲದ ಇಬ್ಬರು ಅನುಮಾನಿತರನ್ನು ಎನ್‌ಐಎ ವಿಚಾರಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. https://ainlivenews.com/fed-up-with-wifes-illicit-relationship-tecchi-suicide-woman-escapes-with-children/ ಶಂಕಿತ ಬಾಂಬರ್ ಜೊತೆಗೆ ಸಂಪರ್ಕವನ್ನು ಹೊಂದಿದ್ದ ಶಂಕೆಯ ಮೇರೆಗೆ ಬೆಂಗಳೂರು ಮೂಲದ ಇಬ್ಬರು ಅನುಮಾನಿತರನ್ನ ಎನ್ ಐಎ ವಿಚಾರಣೆ ಮಾಡುತ್ತಿದೆ. ಶನಿವಾರ ಸಂಜೆ ಅನುಮಾನಿತರನ್ನು ಎನ್​​ಐಎ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರಿಂದ ಬಾಂಬರ್ ಕುರಿತು ಎನ್​ಐಎ ಅಧಿಕಾರಿಳು ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ಅನುಮಾನಿತರನ್ನು ಕೇವಲ ವಿಚಾರಣೆ ನಡೆಸುತ್ತಿದ್ದು, ಬಂಧಿಸಿಲ್ಲ ಎಂದು ಎನ್‌ಐಎ ಮೂಲಗಳು ಮಾಹಿತಿ ನೀಡಿವೆ. ಈ ಇಬ್ಬರು ಬಾಂಬರ್​ ಜೊತೆ ನೇರ ಸಂಪರ್ಕದಲ್ಲಿದ್ದರು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬೆಂಗಳೂರು ಮೂಲದ ಇಬ್ಬರನ್ನು ಶನಿವಾರ ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಗದಗ: ನೀರಿಗಾಗಿ ರಸ್ತೆ ತಡೆ ನಡೆಸಿ ನಾರಿಯರ ಪ್ರತಿಭಟನೆ ನಡೆಸಿದ ಘಟನೆ ಗದಗ ನಗರದ ಫೀಲ್ಡ್ ಮಾರ್ಶಲ್ ಕೆ ಎಮ್ ಕಾರ್ಯಪ್ಪ ವೃತ್ತದಲ್ಲಿ ನಡೆದಿದೆ. ಸಿಧ್ಧಾರ್ಥ ನಗರದ ಮಹಿಳೆಯರು ಹಾಗೂ ಯುವಕರಿಂದ ಏಕಾಏಕಿ ಪ್ರತಿಭಟನೆ ನಡೆಸಲಾಗಿದ್ದು, ತಮಟೆ ಬಾರಿಸೋ ಮೂಲಕ ಪ್ರತಿಭಟನೆ ಮಾಡಿದರು. ಪ್ರತಿಭಟನೆ ನಡುವೆ ರಸ್ತೆ ದಾಟಲು ಯತ್ನಿಸಿದ ವಾಹನ ಸವಾರರೊಂದಿಗೆ ವಾಗ್ವಾದ ನಡೆಸಿದ್ದಾರೆ.  ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರತಿಭಟನಾ ನಿರತರ ಮನ ಒಲಿಸಲು ಯತ್ನ ಮಾಡಿದ್ದಾರೆ. ಆದ್ರೆ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ನೀರು ಸಮರ್ಪಕವಾಗಿ ಸಿಗ್ತಾ ಇಲ್ಲ ಎಂದು ತಮಟೆ ನಾದಕ್ಕೆ ತಕ್ಕಂತೆ ಕೊಡ ಹಿಡಿದು ಕುಣಿದು ನೀರಿಗಾಗಿ ಪ್ರತಿಭಟಿಸಿದರು. ಫ್ಲೋರೈಡ್ ನೀರನ್ನೇ ಬಳಸಬೇಕಾದ ಪರಿಸ್ಥಿತಿ ಇದೆ. ಆ ನೀರನ್ನ ಕುಡಿದು ಆರೋಗ್ಯ ಹದಗೆಡ್ತಾ ಇದೆ ಅಂತಾ ಕಿಡಿ ಎಂದು ಕಿಡಿಕಾರಿದ್ದಾರೆ.

Read More

ತುಮಕೂರು : ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದು ಅರ್ಚಕ ಗಾಯಗೊಂಡಿರುವ ಘಟನೆ  ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ನಡೆದಿದೆ. ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿ‌ಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವರನ್ನ ಹೊತ್ತು ಕೊಂಡು ಕೆಂಡ ಹಾಯುವಾಗ ಅರ್ಚಕ ಮನು ಎಡವಿ ಬೆಂಕಿ ಕೆಂಡದೊಳಗೆ ಬಿದ್ದು ಗಾಯವಾಗಿದೆ. https://ainlivenews.com/mandya-to-enter-hdk-arena-fix-official-announcement-pending/ ಕೂಡಲೇ ಸ್ಥಳಿಯರು ಅರ್ಚಕ ಮನು ಅವರನ್ನು ರಕ್ಷಿಸಿದ್ದಾರೆ. ಸುಟ್ಟ ಗಾಯಗಳಾದ ಹಿನ್ನೆಲೆ ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದೇವತೆಗೆ ಕೆಂಡದ ನೈವೇದ್ಯವನ್ನೇ ಅರ್ಪಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಶಕ್ತಿ ದೇವತೆ ಸತ್ಯವತಿಯ ಕೆಂಡದ ಜಾತ್ರೆ ಆಚರಿಸಲಾಗುತ್ತದೆ. ಕೆಂಡದ ಪವಾಡ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ.

Read More