Author: AIN Author

ಬೆಂಗಳೂರು: ಒಂದೆಡೆ ಬಿರು ಬೇಸಿಗೆ, ಇನ್ನೊಂದೆಡೆ ಕುಡಿಯುವ ನೀರಿಗೆ ತತ್ವಾರ. ಇದೆಲ್ಲದರ ಮಧ್ಯೆ ಚುನಾವಣೆಯ ಬಿಸಿ. ಹೀಗಿರುವಾಗಲೇ ಜನರು ನೆಮ್ಮದಿಯಾಗಿ ಬದುಕೋಕೆ ಅಂತ ಎಸಿ,ಫ್ಯಾನ್.ಕೂಲರ್ ಅಂತ ತಮ್ಮ ಅನುಕೂಲ ತಾವು ಹುಡುಕುತ್ತಿದ್ದಾರೆ. ಆದರೆ ಪ್ರಾಣಿ , ಪಕ್ಷಿಗಳು ಮಾತ್ರ ಕುಡಿಯೋಕೆ ಹನಿ ನೀರು, ತಿನ್ನೋಕೆ ಕಾಳು ಸಿಕ್ಕರೇ ಸಾಕು ಅಂತ ಪರದಾಡುತ್ತಿವೆ.ಹೀಗಿರುವಾಗಲೇ ಬಿಬಿಎಂಪಿ ಗುಬ್ಬಿ ಮೇಲೆ ಬ್ರಹ್ಮಾಸ್ತ ಎಂಬಂತೆ ಅಲ್ಲಿ ಇಲ್ಲಿ ಕಾಳು ತಿಂದು ಬದುಕೋ ಹಕ್ಕಿಗಳ ಹೊಟ್ಟೆ ಮೇಲೆ ಬರೆ ಎಳೆಯಲು ಮುಂದಾಗಿದೆ.. ಹೌದು ಬಿಬಿಎಂಪಿ ಎಲ್ಲ ನಿಯಮ ಮುಗಿಸಿ ಈಗ ಹಕ್ಕಿಗಳಿಗೆ ಕಾಳು ಹಾಕೋರ ಮೇಲೆ ಕಣ್ಣಾಕಿದ್ದು, ಅಲ್ಲೂ ದಂಡ ವಸೂಲಿಗೆ ಮುಂದಾಗಿದೆ. ಸಿಲಿಕಾನ್ ಸಿಟಿ, ಬೆಂದಕಾಳೂರು, ಉದ್ಯಾನನಗರಿ ಅಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರಿನಲ್ಲಿ ಮಾನವೀಯತೆಯೇ ಮರೆಯಾಗಿದೆ ಅನ್ನೋ ಮಾತಿದೆ. ಆದರೂ ಇಲ್ಲೊಂದಿಷ್ಟು ಪಕ್ಷಿಪ್ರಿಯ ಮನಸ್ಸುಗಳಿಗೆ ಪೆಟ್ಟುಬಿದ್ದಂತಾಗಿದೆ.. https://ainlivenews.com/taking-bp-tablet-without-doctors-advice/ ನಗರದ ಹಲವೆಡೆ ಪಾರಿವಾಳ ಸೇರಿದಂತೆ ಹಲವು ಜಾತಿಯ ಪಕ್ಷಿಗಳಿಗೆ ಕಾಳು ಹಾಗೂ ನೀರು ಹಾಕೋ ಪರಿಪಾಠವಿದೆ. ನಗರದ ರೇಸಕೋರ್ಸ್, ಜಿ.ಎಂ.ಪಾಳ್ಯ…

Read More

ಆ್ಯಪಲ್ ಹೊಚ್ಚ ಹೊಸ  iPhone 14 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಆ್ಯಪಲ್ ಪ್ರಕಾರ ಐಫೋನ್ 14 ಸಿರೀಸ್ ಅತ್ಯುತ್ತಮ ಸ್ಮಾರ್ಟ್‌ಫೋನ್. ಮ್ಯಾಕ್ಸ್ ವೇರಿಯೆಂಟ್ ಫೋನ್‌ನಲ್ಲಿ ಅತೀ ದೊಡ್ಡ ಡಿಸ್‌ಪ್ಲೆ ಹಾಗೂ ಬ್ಯಾಟರಿ ಲೈಫ್ ನೀಡಲಾಗಿದೆ ಐಫೋನ್ 14 ಪ್ಲಸ್ ಕೂಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಬ್ಯಾಂಕ್ ಕಾರ್ಡ್‌ಗಳು ಮತ್ತು EMI ಆಯ್ಕೆಗಳ ಮೂಲಕ ಹೆಚ್ಚುವರಿ ಕೊಡುಗೆಗಳನ್ನು ಕೂಡ ಒದಗಿಸುತ್ತಿದೆ. ನೀವು ಐಫೋನ್ ಖರೀದಿಸಬೇಕು ಎಂಬ ಆಸೆಯಲ್ಲಿದ್ದರೆ ಇದಕ್ಕಿಂತ ಒಳ್ಳೆಯ ಆಫರ್ ಬಂದಿದೆ. ಐಫೋನ್ 14 ಪ್ಲಸ್ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ವಿಶೇಷಣಗಳ ವಿಷಯದಲ್ಲಿ iPhone 14 ಗೆ ಹೋಲುತ್ತದೆ, ಅಂದರೆ ಇದು iPhone 13 ನಂತೆಯೇ ಸರಿಸುಮಾರು ಅದೇ ಸಾಮರ್ಥ್ಯಗಳನ್ನು ಹೊಂದಿದೆ. ಇದು ದೊಡ್ಡ ಪರದೆ ಮತ್ತು ಬ್ಯಾಟರಿಯನ್ನು ಹೊಂದಿದೆ, ಆದ್ದರಿಂದ ನೀವು Pro ನ ಕೆಲವು ಪ್ರಯೋಜನಗಳನ್ನು ಪಡೆಯುತ್ತೀರಿ. ಗರಿಷ್ಠ ಮಾದರಿಗಳು ಆದರೆ ತುಲನಾತ್ಮಕವಾಗಿ ಸಮಂಜಸವಾದ ಬೆಲೆಯಲ್ಲಿ. https://ainlivenews.com/do-you-have-a-habit-of-charging-your-phone-at-night-then-you-must-read-this-story/ ನೀವು ದೊಡ್ಡ ಪರದೆಯನ್ನು ಬಯಸಿದರೆ…

Read More

ಹೀರೇಕಾಯಿಯನ್ನು ಹಲವು ರೀತಿಯಲ್ಲಿ ಬೇಯಿಸಿ ತಿನ್ನಲಾಗುತ್ತದೆ. ಅನೇಕ ಜನರು ಹಸಿ ಹೀರೇಕಾಯಿಯನ್ನೇ ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ನೀರಿನಂಶವಿರುವ ಹೀರೇಕಾಯಿಯನ್ನು ತಿಂದರೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹೀರೇಕಾಯಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ಈಗ ತಿಳಿಯಿರಿ. https://ainlivenews.com/chennai-who-shined-again-at-home-a-crushing-defeat-for-gujarat/ ಹೀರೇಕಾಯಿ -ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ ಹೀರೇಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಇದು ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಇವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ಹೀರೇಕಾಯಿ -ತೂಕವನ್ನು ನಿಯಂತ್ರಿಸುತ್ತದೆ ಹೀರೇಕಾಯಿ ವಿಶೇಷವಾಗಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಇದು ಹೆಚ್ಚಿನ ಪ್ರಮಾಣದ ನೀರು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಆಹಾರವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಹೀರೇಕಾಯಿ ತರಕಾರಿಯನ್ನು ತೂಕ ನಿಯಂತ್ರಣಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.…

Read More

ಇಂಡಿಯರ್ ಪ್ರೀಮಿಯರ್ ಲೀಗ್ ನಲ್ಲಿ 2024 ರಲ್ಲಿ ತನ್ನ ಎರಡನೇ ಪಂದ್ಯ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುಜರಾತ್ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡಕ್ಕೆ ರಚಿನ್ ರವೀಂದ್ರ ಹಾಗೂ ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 62 ರನ್ ಪೇರಿಸಿದ ಬಳಿಕ ರಚಿನ್ (46 ರನ್ಸ್, 20ಎಸೆತ) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ (12) ಕೂಡ ಔಟಾದರು. https://ainlivenews.com/gold-and-silver-prices-have-further-decreased-here-is-todays-price-list/ ಈ ಹಂತದಲ್ಲಿ ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 23 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 51 ರನ್ ಚಚ್ಚಿದರು. ಮತ್ತೊಂದೆಡೆ ರುತುರಾಜ್ ಗಾಯಕ್ವಾಡ್ 46 ರನ್​ಗಳ ಕೊಡುಗೆ ನೀಡಿದರು. ಈ ಭರ್ಜರಿ ಬ್ಯಾಟಿಂಗ್​​ ನೆರವಿನಿಂದ ಸಿಎಸ್​ಕೆ ತಂಡವು 20 ಓವರ್​ಗಳಲ್ಲಿ 6 ವಿಕೆಟ್…

Read More

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಈ ಬಾರಿ ಭಾರತದಲ್ಲಿ ನಡೆಯಲಿದ್ದು ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಲೋಕಸಭಾ ಚುನಾವಣೆ (Lok Sabha Election) ನಡೆಯಲಿರುವ ಕಾರಣ ಈ ಹಿಂದೆ ಬಿಸಿಸಿಐ ಏಪ್ರಿಲ್‌ 7ರವರೆಗಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಕ್ವಾಲಿಫೈಯರ್‌, ಎಲಿಮಿನೇಟರ್‌, ಫೈನಲ್‌ ಸೇರಿ ಒಟ್ಟು 74 ಪಂದ್ಯಗಳು ನಡೆಯಲಿದೆ. ಮೇ 21, 22 ರಂದು ಗುಜರಾತಿನ ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌ 1 ಮತ್ತು ಎಲಿಮಿನೇಟರ್‌ ಪಂದ್ಯ ನಡೆಯಲಿದ್ದರೆ ಚೆನ್ನೈನಲ್ಲಿ ಮೇ 24 ರಂದು ಕ್ವಾಲಿಫೈಯರ್‌ 2 ನಡೆದರೆ ಮೇ 26 ರಂದು ಫೈನಲ್‌ ಪಂದ್ಯ ನಡೆಯಲಿದೆ. ಕೆಲ ಶನಿವಾರ ಮತ್ತು ಭಾನುವಾರ ಎರಡು ಪಂದ್ಯಗಳು ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತಾ ಕಾರಣದಿಂದಾಗಿ ಈ ಬಾರಿ ಐಪಿಎಲ್‌ ಟೂರ್ನಿ ವಿದೇಶದಲ್ಲಿ ನಡೆಯಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಈ ವರದಿಯನ್ನು ತಳ್ಳಿ ಹಾಕಿದ್ದ ಬಿಸಿಸಿಐ ಕಾರ್ಯದರ್ಶಿ…

Read More

ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎರಡೂ ಇಳಿದಿವೆ. ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆ ತಗ್ಗಿದೆ. ಫೆಡರಲ್ ರಿಸರ್ವ್ ನೀತಿ ಘೋಷಣೆಗೆ ಮುನ್ನ ವಿಪರೀತ ವ್ಯತ್ಯಯ ಕಂಡಿದ್ದ ಚಿನ್ನದ ಬೆಲೆ ಈಗ ಕೋರ್ಸ್ ಕರೆಕ್ಷನ್ ಹಾದಿಯಲ್ಲಿದೆ. ಆದರೂ ಕೂಡ ಬಹಳಷ್ಟು ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಪ್ರಧಾನವಾಗಿದೆ. ಹೀಗಾಗಿ, ಅದರ ಬೆಲೆ ತುಸು ಹೆಚ್ಚಿನ ಮಟ್ಟದಲ್ಲೇ ಇರಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 61,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರುಪಾಯಿಯಲ್ಲಿ ಇದೆ. https://ainlivenews.com/breaking-news-man-dies-mysteriously-on-holi-festival/ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 27ಕ್ಕೆ) 22…

Read More

ಬೆಂಗಳೂರು: ಸದ್ಯ ರಾಜ್ಯದಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಜನಸಮಾನ್ಯರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ, ಪಡಿತರ ಚೀಟಿಗಾಗಿ ಕಾಯುತ್ತಿದ್ದಾರೆ. ಇನ್ನು ಮಾರ್ಚ್ 31 ರೊಳಗಳೇ ಎಲ್ಲ ಅರ್ಜಿಯನ್ನು ಪರಿಶೀಲಿಸಿ ಏಪ್ರಿಲ್ 1 ರಿಂದ ಹೊಸ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಇಲಾಖೆ ಮಾಹಿತಿ ನೀಡಿದೆ. ಸದ್ಯ ಇದೀಗ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ದಿನಾಂಕದಿಂದ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೊಸ ಆದ್ಯತಾ ಪಡಿತರ ಚೀಟಿಗಾಗಿ ಬಂದಿರುವ 2,95,986 ಅರ್ಜಿಗಳನ್ನು ಮಾರ್ಚ್ 31 ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಇದುವರೆಗೆ 57,651 ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮಾಹಿತಿ…

Read More

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕುಳಿದ ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಮಾ.10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶೈ ಕ್ಷಣಿಕ ಅರ್ಹತೆಯಾಗಿ ದ್ವಿತೀಯ ಪಿಯು ಅಥವಾ ತತ್ಸಮಾನ ತರಗತಿ ಪೂರ್ಣಗೊಳಿಸಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿಗೆ 38, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ ವಯೋಮಿತಿ. ಮಾಹಿತಿಗೆ cetonline.karnataka.gov.in ಗೆ ಭೇಟಿ ನೀಡಿ  ದೇಹದಾರ್ಢ್ಯತೆ: ಪುರುಷರು 160 ಸೆ.ಮೀ, ಮಹಿಳೆಯರು 150 ಸೆಂ. ಮೀ ಎತ್ತರ ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ.…

Read More

ಸೂರ್ಯೋದಯ: 06:18, ಸೂರ್ಯಾಸ್ತ : 06:24 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ದ್ವಿತೀಯ, ನಕ್ಷತ್ರ: ಚಿತ್ತ, ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: ಬೆ.10:30 ನಿಂದ ಮ.12:00 ತನಕ ಅಮೃತಕಾಲ: ಬೆ.9:08 ನಿಂದ ಬೆ.10:55 ತನಕ ಅಭಿಜಿತ್ ಮುಹುರ್ತ:ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ : ಬಹುದಿನದ ಪ್ರೇಮ ತಿರಸ್ಕೃತ ಆಗುತ್ತೆ ಎಂಬ ಭಯ, ಈ ರಾಶಿಯ ಗಂಡ ಹೆಂಡತಿ ಕೆಟ್ಟದ್ದನ್ನು ದಹಿಸಿ ರತಿ ಮನ್ಮಥರಂತೆ ಬದುಕು, ಶಿಕ್ಷಕರ ಮಕ್ಕಳಿಗೆ ಮದುವೆ ಯೋಗ ಕೂಡಿ ಬರಲಿದೆ, ವಿಚ್ಛೇದನ ಪಡೆದ ಮರು ಮದುವೆ ಚರ್ಚೆ ಸಂಭವ,ವಿದೇಶ ಪ್ರವಾಸದ ಕನಸು…

Read More

ಬೆಂಗಳೂರು ಗ್ರಾಮಾಂತರ:- ಹೋಳಿ ಆಡಲು ಹೋಗಿದ್ದ ವ್ಯಕ್ತಿ ನಿಗೂಢ ಸಾವನ್ನಪ್ಪಿದ್ದು, ಮ್ಯಾನೇಜರ್ ಸಾವಿನ ಸುತ್ತಾ ಅನುಮಾನದ ಹುತ್ತಾ ಹುಟ್ಟುಕೊಂಡಿದೆ. https://ainlivenews.com/nirmalanandanath-shri-who-visited-kumaraswamy-and-inquired-about-his-health/ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ಮ್ಯಾನೇಜರ್ ಸುನೀಲ್ ಮತ್ತು ಬಿಹಾರ ಮೂಲದ ಕಾರ್ಮಿಕರು ಹೋಳಿ ಆಡಿ ಸಂಭ್ರಮಿಸಿದ್ದರು. ಆದ್ರೆ, ಹೋಳಿ ಆಡಿದ ನಂತರ ತೋಟದ ಮ್ಯಾನೇಜರ್ ಸುನೀಲ್ ಮನೆಯತ್ತ ತೆರಳುವುದಾಗಿ ಹೇಳಿದ್ದು, ಮಧ್ಯರಾತ್ರಿ ಆದರೂ ಮನೆಗೆ ಹೋಗಿಲ್ಲ. ಹೀಗಾಗಿ ಸುನೀಲ್ ಎಷ್ಟೋತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಶಾಕ್ ಆಗಿ, ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದ್ರೆ, ಎಲ್ಲೂ ಕಾಣದಿದ್ದಾಗ ಬೆಳಗ್ಗೆ ತೋಟದ ಕೃಷಿ ಹೊಂಡದ ದಡದ ಮೇಲೆ ಯುವಕನ ಬಟ್ಟೆ ಚಪ್ಪಲಿ ಕಾಣಿಸಿದ್ದು, ಅನುಮಾನದ ಮೇಲೆ ಕೃಷಿ ಹೊಂಡದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಯುವಕನ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದ್ದು, ಕುಟುಂಬಸ್ಥರ ಜೊತೆಗೆ ಗ್ರಾಮಸ್ಥರು ಸಹ ಒಂದು ಕ್ಷಣ ಶಾಕ್ ಆಗಿದ್ದಾರೆ. ಮೃತ ಯುವಕ ಸುನೀಲ್ ಈ ಹಿಂದೆಯೇ ಈಜು ಸಹ ಕಲಿತಿದ್ದು, ಗ್ರಾಮದಲ್ಲಿ ಎಲ್ಲರ…

Read More