Author: AIN Author

ಮೈಸೂರು: ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೂರನೇ ಬಾರಿಯೂ ಬಿಜೆಪಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಖಚಿತ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ಹಿಂದುಳಿದ ವರ್ಗಗಳ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೂರನೇ ಬಾರಿಯೂ ಬಿಜೆಪಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಖಚಿತ. ಈಗಾಗಲೇ ನಾವು ಇಲ್ಲಿ ಸತತ ಎರಡು ಬಾರಿ ಗೆದ್ದಿದ್ದೇವೆ ಎಂದು ಹೇಳಿದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಇನ್ನೂ ಮೈಸೂರು ಸಂಸ್ಥಾನದ ಕೊಡುಗೆ ಸದಾ ನಮ್ಮ ಮುಂದೆ ಇದೆ. ಮೀಸಲಾತಿಯನ್ನು ಸಾಕಷ್ಟು ಕಾಲಗಳ ಹಿಂದೆಯೇ ಜಾರಿಗೆ ತಂದವರು ನಮ್ಮ ಮೈಸೂರಿನ ಮಹಾರಾಜರು. ದೇಶದ 7ನೇ ಮೆಡಿಕಲ್ ಕಾಲೇಜು ಮೈಸೂರಿನಲ್ಲಿದ್ದು 100ನೇ ವರ್ಷ ಪೂರೈಸುತ್ತಿದೆ. ಪ್ರಧಾನಿ ಮೋದಿ ಕೂಡ ಮೈಸೂರಿನ ಮಹಾರಾಜರ ಪರಂಪರೆಗೆ ಅನುಗುಣವಾಗಿ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು. ಬಳಿಕ ಕಾಂಗ್ರೆಸ್​ ಅಭ್ಯರ್ಥಿ ಪರ ವಾಗ್ದಾಳಿ ನಡೆಸಿದ ಅವರು, ಮಹಾರಾಜರಿಗೆ ಗೌರವ ಕೊಡದ ವ್ಯಕ್ತಿ ಇಂದು ಕಾಂಗ್ರೆಸ್ ಅಭ್ಯರ್ಥಿ. ಇವರ ವಿರುದ್ಧ ನಾನು ಎರಡು ಕ್ರಿಮಿನಲ್ ಕೇಸ್​ಗಳನ್ನು ಹಾಕಿದ್ದೇನೆ ಎಂದರು.  

Read More

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ‌ ಇಂದು ಬೆಲ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕೂ ಹೆಚ್ಚು ಆಸ್ತಿ ಸಂಪಾದನೆ ಆರೋಪ ಸಂಬಂಧ ಮಾಹಿತಿ ಪಡೆದ ಅಧಿಕಾರಿಗಳು 13 ಎಸ್ಪಿಗಳು, 12 ಡಿವೈಎಸ್ಪಿ, 25 ಪಿಐ ಹಾಗೂ 80 ಮಂದಿ ಸಿಬ್ಬಂದಿ ಒಳಗೊಂಡ ಒಟ್ಟು 130 ಮಂದಿ ರಾಜ್ಯದ 60 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಅಧಿಕಾರಿಗಳ ವಿವರ ರಂಗನಾಥ್ ಎಸ್.ಪಿ – ಬಿಬಿಎಂಪಿಯ ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್ ಗೆ ಸಂಬಂಧಿಸಿದ ಬೆಂಗಳೂರಿನ 5 ಸ್ಥಳಗಳು ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳು ಪ್ರಕಾಶ್ – ಜ್ಯೂನಿಯರ್ ಇಂಜಿನಿಯರ್ – ಸಂಬಂಧಿಸಿದ ಕಾರವಾರ – ಉ.ಕ ಜಿಲ್ಲೆಯ 4 ಸ್ಥಳಗಳು ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ…

Read More

ಬೆಂಗಳೂರು: ಥೈಲ್ಯಾಂಡ್ ನಲ್ಲಿ ಆಯೋಜಿಸಿದ 6ನೇ ಅಂತಾರಾಷ್ಟ್ರೀಯ ತೈ ಮಾರ್ಷಲ್ ಆರ್ಟ್ಸ್ ಗೇಮ್ಸ್ ನಲ್ಲಿ ಬೆಂಗಳೂರಿನ ಮಾರತ್ತಹಳ್ಳಿಯ ಬಡ ಕುಟುಂಬದ 7 ವರ್ಷದ ರಿಕ್ಷಿಕ್ ಶಿವ ಎಂಬ ಬಾಲಕ ಕಿಕ್ ಬಾಕ್ಸಿಂಗ್ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಮಾರತ್ತಹಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಏಟ್ ಲಿಮ್ಸ್ ಫಿಟ್ನೆಸ್ ಸೆಂಟರ್ ಸಂಸ್ಥೆಯ‌ ಸೇರಿದಂತೆ ಒಟ್ಟು ಮೂರು ಕ್ರೀಡಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. 7 ವರ್ಷದ ಬಾಲಕ ಸುಮಾರು 4 ವರ್ಷದಿಂದ ಸತತ ಪ್ರಯತ್ನ ಹಾಗೂ ತರಬೇತಿ ಪಡೆದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಭಾರತ ದೇಶಕ್ಕೆ ಹಾಗೂ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ. ಈ‌ ಸ್ಪರ್ಧೆಯಲ್ಲಿ ಸುಮಾರು 52 ದೇಶಗಳು ಪ್ರತಿನಿಧಿಸಿದ್ದು ಇದೆ ಮೊದಲ ಬಾರಿಗೆ ಅತೀ ಸಣ್ಣ ವಯಸ್ಸಿನ ರಿಕ್ಷಕ್ ಶಿವ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿ, ಕಂಚಿನ ಪದಕವನ್ನು ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಬಡಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಅವರ…

Read More

ಬೆಂಗಳೂರು: ವಿಶ್ವ ವಿಖ್ಯಾತ ಬೆಂಗಳೂರು “ಕರಗ ಮಹೋತ್ಸವ” ಕುರಿತು ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು: * ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಬೇಕು. * ಕರಗ ಶಕ್ತ್ಯೋತ್ಸವವು ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವುದು. * ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆ ಕೈಗೊಳ್ಳುವುದು. * ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡುವುದು. * ಸ್ವಚ್ಛತಾ ನಿರ್ವಹಣೆತ ದೃಷ್ಠಿಯಿಂಧ ಘನತ್ಯಾಜ್ಯ ವಿಭಾಗದ ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸುವುದು. * ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡುವುದು. * ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ವಹಿಸುವುದು. * ಸಂಚಾರ ದಟ್ಟಣೆಯಾಗದಂತೆ ಮಾರ್ಗ…

Read More

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿದೆ. ಮಂಡ್ಯ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಮಧ್ಯೆ ಅವರು ಕಾರ್ಯಕರ್ತರ ಸಭೆ ಕರೆದಿದ್ದಾರೆ.ಬೆಂಬಲಿಗರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. Water Crisis: ಬೆಂಗಳೂರಲ್ಲಿ ತಲೆದೂರಿದ ನೀರಿನ ಬಿಕ್ಕಟ್ಟು: ವರ್ಕ್ ಫ್ರಂ ಹೋಮ್ ಗೆ ಬೇಡಿಕೆ ಇಡ್ತಿರುವ ಐಟಿ ಉದ್ಯೋಗಿಗಳು! ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಮಲತಾ ಅವು ಇಂದು ಬೆಂಗಳೂರಲ್ಲಿ ತಮ್ಮ ಆಪ್ತರ ಜೊತೆ ಹೈ ವೋಲ್ಟೇಜ್‌ ಸಭೆ ನಡೆಸಲಿದ್ದು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಒಪ್ಪಿದರೆ ಅವರು ಮಂಡ್ಯದಿಂದ ಜೆಡಿಎಸ್‌ ಕಣಕ್ಕಿಳಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರಾ, ಅಥವಾ ಅವರು ಈ ಹಿಂದೆ ಹೇಳುತ್ತಿದ್ದಂತೆ ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ ಎಂಬ ಸಂದೇಹ ಮೂಡಿದೆ.ಇದಕ್ಕೆಲ್ಲಾ ಇಂದು ಉತ್ತರ ನೀಡಲಿದ್ದಾರೆ.

Read More

ಖಾಲಿ ಡಬ್ಬ ಹೀಗೊಂದು ಟೈಟಲ್ ನಡಿ ಸಿನಿಮಾ ಬರ್ತಿದೆ. ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಪ್ರಕಾಶ್ ಕೆ ಅಂಬ್ಳೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಪೂರ್ಣ ಪ್ರಮಾಣ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪ್ರಕಾಶ್ ಮೊದಲ ಕನಸಿಗೆ ಮಂಜು ಗುರಪ್ಪ ಹಣ ಹಾಕಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದು, ಆದ್ಯಾ ಪ್ರಿಯಾ ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಚಿತ್ರತಂಡ ತಂಡ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಈ ವೇಳೆ ಮಾತನಾಡಿದ ನಿರ್ದೇಶಕ ಪ್ರಕಾಶ್ ಕೆ (ಅಂಬ್ಳೆ), ಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು ಸಮಯ ಮೀರಿದೆ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ಖಾಲಿ ಡಬ್ಬ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಹತ್ತು…

Read More

ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಯುವ ಪ್ರತಿಭೆ ಸೂಚನ್ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿಯೂ ಹೊಸ ಪಯಣ ಬೆಳೆಸಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಸೂಚನ್ ಚೊಚ್ಚಲ ನಿರ್ದೇಶನದ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ನಡೆದಿದೆ. ಪೂಜೆಯಲ್ಲಿ ಸೂಚನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಮೇ ಮೊದಲ ವಾರದಿಂದ ಗಾಡ್ ಪ್ರಾಮಿಸ್ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಚಿತ್ರೀಕರಣದ ಅಖಾಡಕ್ಕೆ ಇಳಿಯುವುದಕ್ಕೂ ಮೊದ್ಲೇ ಚಿತ್ರತಂಡ, ಆಡಿಷನ್ ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಗಾಡ್ ಪ್ರಾಮಿಸ್ ತಂಡಕ್ಕೆ ತಲುಪಿದ್ದು 3800 ಅರ್ಜಿ ಗಾಡ್ ಪ್ರಾಮಿಸ್ ಚಿತ್ರತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಷನ್ ಕರೆಯಲಾಗಿದೆ. ಅದರಂತೆ ಆನ್ ಲೈನ್ ನಲ್ಲಿ ಬರೋಬ್ಬರಿ 3800 ಅರ್ಜಿಗಳು ತಲುಪಿವೆ. ಇದೇ ತಿಂಗಳ 31ರಂದು ಆಡಿಷನ್…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಉತ್ತರ ವಿಭಾಗದ 290 ರೌಡಿಶೀಟರ್​ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. https://ainlivenews.com/shock-for-bird-lovers-200-rupees-fine-for-feeding-pigeons/#google_vignette ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ. 50 ಪೊಲೀಸರ ತಂಡ ಏಕಕಾಲಕ್ಕೆ ರಾಜಗೋಪಾಲನಗರ, ಆರ್​ಎಂಸಿ ಯಾರ್ಡ್, ಪೀಣ್ಯ ಸೇರಿದಂತೆ ವಿವಿಧ ನಗರಗಳಲ್ಲಿ ವಾಸವಾಗಿರುವ ರೌಡಿಶೀಟರ್​​ ಮನೆಗಳಲ್ಲಿ ಶೋಧ ನಡೆಸಿ, ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

Read More

ಬೆಂಗಳೂರು:- ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ಹಾಕಲಾಗುತ್ತೆ ಎಂದು ಬೋರ್ಡ್ ಹಾಕಲಾಗಿದೆ. ಈ ಬೋರ್ಡ್​ ಕಂಡ ಪಕ್ಷಿ ಪ್ರಿಯರು ಗರಂ ಆಗಿದ್ದಾರೆ. ಸಿಲಿಕಾನ್‌ ಸಿಟಿಯಲ್ಲಿ‌ ದಿನದಿಂದ‌ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.‌ ಎಲ್ಲಿಲ್ಲಿ ಪಾರಿವಾಳಗಳು ಹೆಚ್ಚಾಗಿ ಕಂಡುಬರುತ್ತೋ‌‌ ಅಲ್ಲಿ ಊಟ ಹಾಕುವವರ ಸಂಖ್ಯೆಯು ಜಾಸ್ತಿಯಾಗಿತ್ತು. ಆದರೆ ಇನ್ಮೆಲೆ ಪಾರಿವಾಳಗಳಿಗೆ ಊಟ ಹಾಕಿದ್ರೆ 200 ದಂಡಹಾಕುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹೇಳ್ತಿದ್ದಾರೆ.‌ ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್​ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಹಾಕಲಾಗಿದೆ. ಇನ್ನು ಈ 200 ರೂ ದಂಡ ಹಾಕೋದಿಕ್ಕೆ ಕಾರಣ ಸಧ್ಯ ಪರಿವಾಳ‌ಗಳ‌ ಸಂಖ್ಯೆ ಹೆಚ್ಚಾಗಿರುವುದು https://ainlivenews.com/do-you-know-what-people-are-doing-to-save-water/ ಪರಿವಾಳಗಳ ರೆಕ್ಕೆಗಳಿಂದ‌ ಅಸ್ತಮ ಕೇಸ್​ಗಳು ಹೆಚ್ಚಾಗ್ತಿವೆ.‌ ಈ ಬೇಸಿಗೆಯ ಸಮಯದಲ್ಲಿ ಪರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ‌ ಪರಿಣಾಮ ಬೀರಲಿದೆ.‌ ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ…

Read More

ಬಳ್ಳಾರಿ:- ದೇಶದಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ.ಆದರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ಪ್ರಸ್ತುತ ಇದೇ ತಿಂಗಳು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೇಸ್ ಸದಸ್ಯರ ಸಂಖ್ಯೆ ಸ್ಪಷ್ಟ ಬಹುಮತವಿದೆ.ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದರಿಂದ, ಕಾರ್ಪೂರೇಟರ್ಗಳ ಒಲೈಕೆಗೆ ಗಿಫ್ಟ್ ಸೇರಿದಂತೆ ಇತರೆ ಕೊಡುಗೆಗಳ ನೀಡುವಲ್ಲಿ ಆಕಾಂಕ್ಷಿಗಳು ನಿರತರಾಗಿದ್ದಾರೆ. ಈ ಕುರಿತು ಒಂದು ಸ್ಟೋರಿ ನೋಡೋಣ ಬನ್ನಿ, ಗಣಿನಾಡು ಬಳ್ಳಾರಿಯಲ್ಲಿ ಬೇಸಿಗೆಯ ಬಿಸಿಲುಗಿಂತ ಚುನಾವಣೆ ಕಾವು ಹೆಚ್ಚಾಗಿದೆ. ಒಂದು ಕಡೆ ಲೋಕಸಭೆ ಚುನಾವಣೆಯಾದರೇ, ಮತ್ತೋಂದು ಕಡೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕುತೂಹಲ ಕೆರಳಿಸಿದೆ. ಇದೇ ತಿಂಗಳು 28ನೇ ತಾರೀಖಿಗೆ ನಡೆಯಲಿರುವ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಪಾಲಿಕೆಯು 39 ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ.ಈ ಬಾರಿ ಮೇಯರ್ ಜನರ್ (ಪುರುಷ) ಕ್ಯಾಟಗಿರಿ ಆದರೆ ಉಪ ಮೇಯರ್ ಒಬಿಸಿ (ಮಹಿಳೆ)ಮೀಸಲಾಗಿದೆ. ಜನರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಪೂರೇಟರ್ಗಳು ಗೆದ್ದಿರುವುದರಿಂದ…

Read More