Author: AIN Author

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಶಾಕ್​ ಎದುರಾಗಿದ್ದು, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತೇಜಸ್ವಿನಿ ಗೌಡ ಅವರು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಸಭಾಪತಿಗಳು ಇವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್​ ಸ್ಥಾನಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ತೇಜಸ್ವಿನಿ ತಿಳಿಸಿದ್ದಾರೆ. ಪರಿಷತ್​ ಸದಸ್ಯರಾಗಿ ಇವರ ಅವಧಿ ಇದೇ ಜೂನ್​ ವರೆಗೆ ಇತ್ತು. ಇದೀಗ ಅವಧಿಗೂ ಮುನ್ನವೇ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Read More

ಬೆಂಗಳೂರು : ಎಂಎಲ್​ಸಿಗಳು ಬಿಳಿ ಹಾಳೆ ಮೇಲೆ ರಾಜೀನಾಮೆ ಬರೆದುಕೊಂಡು ಬಂದಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ 11 ಗಂಟೆಗೆ ನಜೀರ್ ಅಹಮ್ಮದ್ ಅವರು ಕರೆ ಮಾಡಿದ್ದರು. ಅನಿಲ್ ನಾನು ಬರ್ತೀವಿ ಅಂದ್ರು. ಕಚೇರಿಗೆ ಬನ್ನಿ ಅಂತ ಹೇಳಿದ್ದೆ ಎಂದು ತಿಳಿಸಿದರು. https://ainlivenews.com/we-are-ready-to-talk-with-mandya-mp-if-necessary-nikhil-kumaraswamy/ ಅವರು ಬಿಳಿ ಹಾಳೆ ಮೇಲೆ ಬರೆದುಕೊಂಡು ಬಂದಿದ್ದರು. ಲೆಟರ್ ಹೆಡ್ ನಲ್ಲಿ ಬರೆದು ಕೊಡಿ ಅಂದೆ ಅಷ್ಟೇ. ನಂತರ ಅವರ ಪಕ್ಷದ ನಾಯಕರು ಬಂದರು. ನಾನು ಎದ್ದು ಹೋದೆ. ನಂತರ ಅವರು ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಪೀಠಕ್ಕೆ ಅಪಮಾನ ಅಂತಲ್ಲ. ರಾಜೀನಾಮೆ ಕೊಡಲು ಬಂದಾಗ ಅವರಿಗೆ ಸಮಯ ನೀಡೋದು ಸಹಜ. ಹಾಗೆಯೇ ನಾನು ಕೂಡ ಸಮಯ ನೀಡಿದೆ ಅಷ್ಟೆ. ನಾನು ಅವರು ರಾಜೀನಾಮೆ ಕೊಡ್ತಾರೆ ಅಂತ ಬಂದಿದ್ದು ಅಷ್ಟೆ. ಇವತ್ತಿನ ರಾಜಕೀಯದಲ್ಲಿ ನೈತಿಕತೆ ಉಳಿದಿಲ್ಲ ಎಂದು ಬಸವರಾಜ ಹೊರಟ್ಟಿ ಬೇಸರಿಸಿದರು.

Read More

ಬಳ್ಳಾರಿ: ದೇಶದಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ.ಆದರೆ ಗಣಿನಾಡು ಬಳ್ಳಾರಿಯಲ್ಲಿ ಮಾತ್ರ ಪ್ರಸ್ತುತ ಇದೇ ತಿಂಗಳು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೇಸ್ ಸದಸ್ಯರ ಸಂಖ್ಯೆ ಸ್ಪಷ್ಟ ಬಹುಮತವಿದೆ.ಆದರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವುದರಿಂದ, ಕಾರ್ಪೂರೇಟರ್ಗಳ ಒಲೈಕೆಗೆ ಗಿಫ್ಟ್ ಸೇರಿದಂತೆ ಇತರೆ ಕೊಡುಗೆಗಳ ನೀಡುವಲ್ಲಿ ಆಕಾಂಕ್ಷಿಗಳು ನಿರತರಾಗಿದ್ದಾರೆ. ಈ ಕುರಿತು ಒಂದು ಸ್ಟೋರಿ ನೋಡೋಣ ಬನ್ನಿ.. ಗಣಿನಾಡು ಬಳ್ಳಾರಿಯಲ್ಲಿ ಬೇಸಿಗೆಯ ಬಿಸಿಲುಗಿಂತ ಚುನಾವಣೆ ಕಾವು ಹೆಚ್ಚಾಗಿದೆ. ಒಂದು ಕಡೆ ಲೋಕಸಭೆ ಚುನಾವಣೆಯಾದರೇ, ಮತ್ತೋಂದು ಕಡೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಕುತೂಹಲ ಕೆರಳಿಸಿದೆ. ಇದೇ ತಿಂಗಳು 28ನೇ ತಾರೀಖಿಗೆ ನಡೆಯಲಿರುವ ಚುನಾವಣೆಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಪಾಲಿಕೆಯು 39 ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ.ಈ ಬಾರಿ ಮೇಯರ್ ಜನರ್ (ಪುರುಷ) ಕ್ಯಾಟಗಿರಿ ಆದರೆ ಉಪ ಮೇಯರ್ ಒಬಿಸಿ (ಮಹಿಳೆ)ಮೀಸಲಾಗಿದೆ. ಜನರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಪೂರೇಟರ್ಗಳು ಗೆದ್ದಿರುವುದರಿಂದ…

Read More

ಬೆಂಗಳೂರು: ಅಗತ್ಯ ಬಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ. https://ainlivenews.com/another-shock-for-bjp-tejaswini-gowda-resigns-as-mlc/ ಮಾಜಿ ಸಚಿವ ನಾರಾಯಣಗೌಡರ ಮನವೊಲಿಕೆಯಂತೆ ಸುಮಲತಾ (Sumalatha Ambareesh) ಅವರ ಮನವೊಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶ್ವಥ್ ನಾರಾಯಣ್‌ ಮತ್ತು ಪುಟ್ಟರಾಜು ಅವರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ನಾರಾಯಣಗೌಡ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾರಾಯಣಗೌಡರು (Narayanagowda) ನಮ್ಮ ‌ಪಕ್ಷದಿಂದಲೇ ಶಾಸಕ ಆಗಿದ್ದರು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇರೋದು ಸಹಜ. ಈಗ ಎಲ್ಲವೂ ಸರಿ ಆಗಿದೆ. ವೈಯಕ್ತಿಕವಾಗಿ ಕುಮಾರಸ್ವಾಮಿ ಮೇಲೆ ನಾರಾಯಣಗೌಡರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಪರ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ನಾವು ಸುಮಲತಾ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೀವಿ. ಅಗತ್ಯ ಬಿದ್ದರೆ ಅವರ ಜೊತೆಗೂ ಮಾತುಕತೆ ನಡೆಸುತ್ತೇವೆ. ಒಟ್ಟಾರೆ ನಮಗೆ ಆರೋಗ್ಯರ ಚುನಾವಣೆ ಆಗಬೇಕು‌ ಎನ್ನುವ ಮೂಲಕ ಸುಮಲತಾ…

Read More

ಮೈಸೂರು: ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪ್ರವಾಸದಲ್ಲಿರುವ ಅವರು, ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 18 ಮಂದಿ ಸಚಿವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲು ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಆದರೆ, ಸೋಲಿನ ಭೀತಿಯಿಂದ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎನ್ನುವ ರೀತಿಯಾಗಿದೆ. ಕಡಿಮೆ ಅವಧಿಯಲ್ಲಿ ‘ಕೈ’ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಯಾರ ಪರವಾಗಿಯೂ ಈ ಸರ್ಕಾರವಿಲ್ಲ ಎಂದು ಜನ ಬೇಸತ್ತಿದ್ದಾರೆ. ಜನಪ್ರಿತೆ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೀಗ ನಮ್ಮ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

Read More

ಬೆಂಗಳೂರು:  ಸಿಲಿಕಾನ್‌ ಸಿಟಿಯಲ್ಲಿ ಮೈನಾ ಮೂವಿ ಕತೆಯಂತೆ ಬೆಳಕಿಗೆ ಒಂದು ಪ್ರಕರಣ ಬಂದಿದೆ. ಆದರೆ ಇಲ್ಲಿ ಹೀರೋ ಹಣ ಪಡೆದು ವಿಲನ್ ಆಗಿರುವ ಕಥೆಯನ್ನು ನಾವಿಲ್ಲಿ ನೋಡಬಹಹುದು https://ainlivenews.com/water-drought-in-bangalore-megastar-chiranjeevi-suggested-a-solution/ ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚಿಸಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸುರೇಂದ್ರ ಮೂರ್ತಿ ಎಂಬಾತ ವಂಚನೆ ಮಾಡಿದ ವ್ಯಕ್ತಿ. ಮೊದಲು ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತ್ತು ಇದಾದ ಬಳಿಕ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕೇಳಿದ್ದ ಸುರೇಂದ್ರ ಮೂರ್ತಿ ಸಾಲಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದ ವಿಶೇಷ ಚೇತನ ಯುವತಿ ಆದರೆ ಹಣವೆಲ್ಲ ಪಡೆದ ಬಳಿಕ ಮದುವೆಯಾಗದೆ ವಂಚನೆ ಈ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವ ಆರೋಪ ಹೀಗಾಗಿ  ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.

Read More

ಕೋಲಾರ: ಕೋಲಾರ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಬಿಕ್ಕಟ್ಟು ತಾರಕಕ್ಕೇರಿದೆ. ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವುದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದರ ಜೊತೆಗೆ ಈಗ MLC ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ನಿರ್ಧಾರ ಮಾಡಿದ್ದಾರೆ. https://ainlivenews.com/what-are-the-benefits-of-eating-cucumber-in-summer-here-are-the-full-details/ ಕೋಲಾರ ಬಣ ರಾಜಕೀಯ ತಡೆಯುವಲ್ಲಿ ಸಿಎಂ, ಡಿಸಿಎಂ ವಿಫಲರಾಗಿದ್ದಾರೆ. ಕೋಲಾರ ನಾಯಕರ ಪ್ರತಿಷ್ಠೆ ಮುಂದೆ ಸ್ವತಃ ಸಿಎಂ, ಡಿಸಿಎಂ ಫೇಲ್ ಆಗಿದ್ದಾರೆ. ಸಿಎಂ ಅತ್ಯಾಪ್ತರಾಗಿರುವ ಬಹುತೇಕ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

Read More

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಖಂಡಿಸಿ ನ್ಯಾಯಲಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಆಪ್ (AAP) ಕಾನೂನು ಘಟಕಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನ್ಯಾಯಲಯ ಆವರಣದಲ್ಲಿ ಪ್ರತಿಭಟನೆ ನಡೆಸುವುದು ಗಂಡಾಂತರ ಆಹ್ವಾನ‌ ಮಾಡಿದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕೇಜ್ರಿವಾಲ್ ಬಂಧನ ಖಂಡಿಸಿ ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಬುಧವಾರ ಪ್ರತಿಭಟನೆಗೆ ಎಎಪಿ ಕಾನೂನು ಘಟಕ ಕರೆ ನೀಡಿದ ಹಿನ್ನೆಲೆ ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಧೀಶರು ನಾಳೆ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವುದಾಗಿ ಹೇಳಿದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಪ್ರತಿಭಟನೆ ಬಗ್ಗೆ ಚಿಂತಿಸಬೇಡಿ, ನ್ಯಾಯಾಲಯವನ್ನು ಯಾರು ತಡೆಹಿಡಿಯಲಾಗುವುದಿಲ್ಲ ಅಥವಾ ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸುವ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆ ರೀತಿ ಯಾರಾದರೂ ಅದನ್ನು ಮಾಡಿದರೆ ಅವರು ಗಂಡಾಂತರ ಆಹ್ವಾನ ಮಾಡಿದಂತೆ. ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ನ್ಯಾಯಾಲಯ ಹೇಳಿತು. ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌…

Read More

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಶಾಕ್​ ಎದುರಾಗಿದ್ದು, ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. https://ainlivenews.com/grandmother-and-granddaughter-who-boarded-the-bus-as-free-tickets-rs-444-for-4-lovebirds-en-guru-ksrtc-mahima/ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತೇಜಸ್ವಿನಿ ಗೌಡ ಅವರು ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಸಭಾಪತಿಗಳು ಇವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನ ಪರಿಷತ್​ ಸ್ಥಾನಕ್ಕೆ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ತೇಜಸ್ವಿನಿ ತಿಳಿಸಿದ್ದಾರೆ. ಪರಿಷತ್​ ಸದಸ್ಯರಾಗಿ ಇವರ ಅವಧಿ ಇದೇ ಜೂನ್​ ವರೆಗೆ ಇತ್ತು. ಇದೀಗ ಅವಧಿಗೂ ಮುನ್ನವೇ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Read More

ಬೆಂಗಳೂರು : ಇಂದು ವಿಶ್ವ ರಂಗಭೂಮಿ ದಿನ. ರಂಗಭೂಮಿ ಚಟುವಟಿಕೆಯಲ್ಲಿ ನಿರತರಾದವರಿಗೂ ಒಂದು ದಿನ ಮೀಸಲಿಡಬೇಕು ಎಂಬ ಕಾರಣಕ್ಕೆ ಪ್ರತಿವರ್ಷ ಮಾರ್ಚ್ 27ಕ್ಕೆ ವಿಶ್ವ ರಂಗಭೂಮಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1962ರಿಂದ ವಿಶ್ವ ರಂಗಭೂಮಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1962ರಲ್ಲಿ ಪ್ಯಾರಿಸ್​ನಲ್ಲಿ ಅಂತರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಮಾಡಿ ಮೊದಲ ವಿಶ್ವ ರಂಗಭೂಮಿ ದಿನವನ್ನು ಆರಚಣೆ ಮಾಡಲಾಯಿತು. ಈ ದಿನವನ್ನು ಪರಿಚಯಿಸಿದ್ದು ಅಂತರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್ಸ್ಟಿಟ್ಯೂಟ್‌. https://ainlivenews.com/more-hair-fall-in-summer-do-you-know-the-role-of-flax-seeds/ ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳಲ್ಲಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ ರಂಗಭೂಮಿ ರೂಪುಗೊಂಡಿದೆ. ಇದನ್ನು ಉಳಿಸುವುದು, ಬೆಳಸುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಸತ್ಯವನ್ನು ನೋಡಲು ಜನರು ಬರುವ ಸ್ಥಳ ಥಿಯೇಟರ್ ಎಂಬ ಪದವು ಗ್ರೀಕರಿಂದ ಬಂದಿದೆ. ನೋಡುವ ಸ್ಥಳ ಎಂದರ್ಥ. ಇದು ಜೀವನ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಸತ್ಯವನ್ನು ನೋಡಲು ಜನರು ಬರುವ ಸ್ಥಳವಾಗಿದೆ ಎಂದು ಸ್ಟೆಲ್ಲಾ ಆಡ್ಲರ್ ತಿಳಿಸಿದ್ದಾರೆ. ರಂಗಭೂಮಿ ನಿಮ್ಮನ್ನು ಉತ್ತಮಗೊಳಿಸುತ್ತದೆ ಸಿನಿಮಾಗಳು ನಿಮ್ಮನ್ನು ಪ್ರಸಿದ್ಧರನ್ನಾಗಿ ಮಾಡುತ್ತವೆ. ದೂರದರ್ಶನ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ.…

Read More