Author: AIN Author

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ ಮಾತನಾಡಿದ ಅವರು, ಅಂಬರೀಶ್ ಬದುಕಿದ್ದಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ.ಆಗ ಸುಮಲತ ಅವರೆ ಊಟ ಬಡಿಸಿದ್ದಾರೆ ಅದನ್ನೇ ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ. https://ainlivenews.com/leaders-of-congress-party-are-delusional-r-ashok-spark/ ಅವರು ನನ್ನ ನನಗೆ ಶತ್ರು ಅಲ್ಲ.ರಾಜಕೀಯ ಸನ್ನಿವೇಶ ಸಂಘರ್ಷ ಆಗಿದೆ.ರಾಮ ಆಂಜನೇಯ ಯುದ್ಧ ಆಗಿದೆ ಎಲ್ಲವೂ ಸರಿಯಾಗುತ್ತದೆ. ನಾವು ಹುಲುಮಾನವರು ಸಮಯ ಬಂದಾಗ ನಾನು ಸುಮಲತಾ ಅವರ ಜೊತೆ ಮಾತಾಡ್ತೀನಿ ಎಂದು ಹೇಳಿದ್ದರು. ಇಂದು ಸಂಜೆಯೊಳಗೆ ಜೆಡಿಎಸ್​ ಅಧಿಕೃತ ಪಟ್ಟಿ ಬಿಡುಗಡೆ ಮಾಡ್ತೀನಿ ಎಂದು ತಿಳಿಸಿದ್ದರು.

Read More

ಗದಗ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಕೋರಿದ್ದಾರೆ. ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದೆ, ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಆಗಿದೆ. ಬಡವರ,‌ ದೀನ ದಲಿತರ ಪರ ಕೆಲಸ ಮಾಡಲು ಸಿದ್ದನಿದ್ದೇನೆ ಎಂದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದರು. ಮುಖಂಡರಾದ ವಾಸಣ್ಣ ಕುರಡಗಿ, ಸುಜಾತ ದೊಡ್ಡಮನಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

Read More

ಬೆಂಗಳೂರು: ಪ್ರಧಾನಿ ಮೋದಿಯವರ ಬಗ್ಗೆ ಕಾಂಗ್ರೆಸ್​ ನಾಯಕರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್​ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ್  ವಾಗ್ದಾಳಿ ಮಾಡಿದರು. ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಕಾಂಗ್ರೆಸ್​ನ ಎಲ್ಲ ನಾಯಕರಿಗೆ ಕೋರ್ಟ್ ತಪರಾಕಿ ಹಾಕಿದೆ. ರಾಹುಲ್ ಗಾಂಧಿ ಸೇರಿ ಹಲವರಿಗೆ ಕೋರ್ಟ್​ ಬಿಸಿ ಮುಟ್ಟಿಸಿದೆ. ಶಿವರಾಜ್ ತಂಗಡಗಿ ಕೂಡ ನಾಲಗೆ ಹರಿಬಿಟ್ಟಿದ್ದಾರೆ. ಸೋಲಿನ ಭಯದಿಂದ ಈ ರೀತಿ ಮಾತಾಡುತ್ತಿದ್ದಾರೆ. ಸಂಸ್ಕೃತಿ ಇಲ್ಲದ ಸಚಿವರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು. https://ainlivenews.com/we-are-ready-to-talk-with-mandya-mp-if-necessary-nikhil-kumaraswamy/ ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದು, ಜನರು ಪರದಾಡುತ್ತಿದ್ದಾರೆ. ಇಷ್ಟು ದಿನ ಕೆರೆಗಳನ್ನ ತುಂಬಿಸಿಲ್ಲ, ಮಣ್ಣು ತಿಂತಿದ್ರಾ? ನೀರು ಕೋಡಲು ಆಗದವರು ನೀರಾವರಿ ಸಚಿವರು. ಬ್ರ್ಯಾಂಡ್ ಬೆಂಗಳೂರು ಬೈಬೈ ಬೆಂಗಳೂರು ಆಗಿದೆ. ಕಲುಷಿತ ನೀರು ಕುಡಿದು ಅನಾರೋಗ್ಯಕ್ಕಿಡಾಗಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿದರು. ಚಾಯ್ ವಾಲಾ, ಚೌಕಿದಾರ್…

Read More

ಬಳ್ಳಾರಿ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಈಗಾಗಲೇ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಮಾಜಿ ಸಚಿವ ಶ್ರೀರಾಮುಲು ಅಧಿಕೃತ ಪ್ರಚಾರ ಆರಂಭಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಚಾರಕ್ಕೀಳಿದ ಶ್ರೀರಾಮುಲು, ಹಲಕುಂದಿ ಸೇರಿದಂತೆ ಇತರೆ ಪ್ರದೇಶದಲ್ಲಿ ಭರ್ಜರಿ ಮತಯಾಚನೆ ಮಾಡಿದ್ದಾರೆ.

Read More

ಗದಗ: ಹಾವೇರಿ-ಗದಗ ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟೆಂಪಲ್ ರನ್ ನಡೆಸಿದರು. ಮೊದಲು ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಗದ್ದುಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.ಅಲ್ಲಿಂದ ಗಂಗಾಪೂರ ಪೇಟೆಯಲ್ಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ನಂತರ ವೀರನಾರಾಯಣ ದೇವಸ್ಥಾನಕ್ಕೇ ಭೇಟಿ ನೀಡಿ ವೀರನಾರಾಯಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ, ಪಂಚಾಕ್ಷರ ಗವಾಯಿಗಳ ಹಾಗೂ ಪುಟ್ಟರಾಜ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು. ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

Read More

ಮಂಡ್ಯ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ‌‌ ಹೊತ್ತಿರುವ ಮಂಡ್ಯ ಲೋಕೋಪಯೋಗಿ‌ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೆಚ್.ಆರ್.ಹರ್ಷ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ಈ ಕುರಿತು ಮಾ.26ರಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುರುಳೀಧರ ಎಸ್. ತಳ್ಳಿಕೇರಿ ಆದೇಶ ನೀಡಿರುವ ಆದೇಶದಲ್ಲಿ ಲೋಕಾಯುಕ್ತ ಪೊಲೀಸರು ಕಳೆದ ಜ.30ರಂದು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಾಥಮಿಕ‌ ವರದಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಸಾಬೀತಾಗಿದೆ ಎಂದಿದ್ದಾರೆ. ಅಧಿಕಾರಿ ಹೆಚ್.ಆರ್.ಹರ್ಷ ಅವರು ಪರಿಶೀಲನಾ ಅವಧಿಯಲ್ಲಿ ₹ 1.40 ಕೋಟಿ ಆದಾಯ ಹೊಂದಿ ₹ 1,25,50,336 ಖರ್ಚು ಹೊಂದಿ ₹ 14,49,664 ಉಳಿತಾಯ‌‌ ಹೊಂದಿರುತ್ತಾರೆ. ಆದರೆ ತನಿಖೆ ವೇಳೆ ₹ 3,32,87,997 ಆಸ್ತಿಯಲ್ಲಿ ₹ 3,18,38,333 ಅಂದರೆ ಆದಾಯಕ್ಕಿಂತ ಶೇ.227.416ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಆರೋಪಿಸಿದೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ತನಿಖೆ‌ ಹಿನ್ನಲೆಯಲ್ಲಿ ಅಧಿಕಾರಿ ಹೆಚ್.ಆರ್.ಹರ್ಷ ಅವರನ್ನು ವಿಚಾರಣೆ ಬಾಕಿ ಇರಿಸಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13(1)(ಬಿ) ರಡಿ…

Read More

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು (Lokayukta) ದಾಳಿ ನಡೆಸಿದ್ದಾರೆ. ಬೆಂಗಳೂರಿನ ಪಾಲಿಕೆ ಮುಖ್ಯ ಎಂಜಿನಿಯರ್‌ ರಂಗನಾಥ್‌ಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಾಜ್ಯದ 58 ಕಡೆಗಳಲ್ಲಿ 13 ಮಂದಿ ಎಸ್ಪಿಗಳು, 12 ಮಂದಿ ಡಿವೈಎಸ್ಪಿ 25 ಪಿಐ ಸೇರಿದಂತೆ 130 ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅಕ್ರಮ ಆಸ್ತಿ ಗಳಿಕೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗಡಿ ಜಿಲ್ಲೆ ಬೀದರ್‌ನಲ್ಲಿ‌‌ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಏಕಕಾಲಕ್ಕೆ ಬೀದರ್‌ನಲ್ಲಿ ಮೂರು ಕಡೆ ಹಾಗೂ ಕಲಬುರಗಿಯಲ್ಲಿ ಒಂದು ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕಾರಂಜಾ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಕುಮಾರ ಸ್ವಾಮಿಯ ನಿವಾಸಗಳು ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಬೀದರ್ ನಗರದ ವೀರಭದ್ರೇಶ್ವರ ಕಾಲೋನಿಯ ನಿವಾಸ, ಭಾಲ್ಕಿ ತಾಲೂಕಿನ ನಾಗೂರು ಗ್ರಾಮದ ನಿವಾಸ, ಬೀದರ್ ನಗರದ ಕಾರಂಜಾ ಕಚೇರಿ ಹಾಗೂ…

Read More

ಕೋಲಾರ: ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇಬ್ಬರು ಮಂತ್ರಿ ಇದ್ದಾರೆ,5 ಶಾಸಕರು ಇದ್ದಾರೆ. ಅವರಲ್ಲಿರುವ ವಿರೋಧಿ ಬಣ ಇನ್ನೊಂದು ಬಣಕ್ಕಿಂತ ಸ್ಟ್ರಾಂಗ್ ಇದೆ ಅಂತ ಅವರ ಹೈಕಮಾಂಡ್ ಗೆ ಗೊತ್ತು. ಅವರು ಯಾರು ರಾಜೀನಾಮೆ ಕೊಡೋದಿಲ್ಲ. ತುಂಬಾ ಕಷ್ಟ ಪಟ್ಟು ಅವರೆಲ್ಲಾ ಶಾಸಕರು ಆಗಿದ್ದಾರೆ. ಉಪ ಚುನಾವಣೆ ಏನಾದ್ರು ಬಂದ್ರೆ ಸಾಯಬೇಕು ಇಲ್ಲ ಸಾಯಿಸಬೇಕು,ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ಸಂಸದ ಮುನಿಸ್ವಾಮಿ ಕುಮಾರಸ್ವಾಮಿ ಬಳಿ ಟಿಕೇಟ್ ಕೇಳಿರುವ ಬಗ್ಗೆ ಪ್ರತಿಕ್ರಿಯೇ ನೀಡಿರುವ ಅವರು, ನಮ್ಮಲ್ಲಿ ಯಾರು ಹೋಗಿ ಟಿಕೇಟ್ ಕೇಳಿಲ್ಲ. NDA ಪರವಾಗಿ ಕೆಲಸ ಮಾಡ್ತೀವಿ ಅಂತ ಅಷ್ಟೇ ನಿನ್ನೆ ಹೇಳಿದ್ದೇನೆ. ನಾನು ಕುಮಾರಸ್ವಾಮಿ ಬಳಿ ಟಿಕೇಟ್ ಕೇಳಿಲ್ಲ. ಸೂಕ್ತವಾದ ಅಭ್ಯರ್ಥಿ ಕೊಡಿ ಅಂತ ಅಷ್ಟೇ ಹೇಳಿದ್ದೇನೆ. ಮೋದಿ ಮತ್ತೆ ಪ್ರಧಾನಿ ಆಗಬೇಕು. ಕುಮಾರಸ್ವಾಮಿ ಆರೋಗ್ಯ ವಿಚಾರಸಿ ಬಂದಿದ್ದೇನೆ ಅಷ್ಟೇ ಎಂದು ತಿಳಿಸಿದರು.

Read More

ಬೆಂಗಳೂರು: ಪ್ರಧಾನಿ ಮೋದಿ ಗ್ಯಾರಂಟಿ ಟಿವಿಯಲ್ಲಿದೆ, ನಮ್ಮ ಗ್ಯಾರಂಟಿ ‘ಕೈ’ಯಲ್ಲಿದೆ. ಮೋದಿ ಸುನಾಮಿ ದಕ್ಷಿಣದಲ್ಲಿ ಎಲ್ಲಿಯೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು. https://ainlivenews.com/water-drought-in-bangalore-megastar-chiranjeevi-suggested-a-solution/ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಅಂತ ಹೇಳ್ತಿರಲ್ಲ.. ನಮ್ಮಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಂತ ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದರು. ವಿಜಯೇಂದ್ರ ನಾಯಕತ್ವವನ್ನು ಅವರ ಪಕ್ಷದವರೇ ಒಪ್ಪಿಕೊಳ್ಳತ್ತಿಲ್ಲ. ಕಾಂಗ್ರೆಸ್​ಗಿಂತ ಹೆಚ್ಚಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿದೆ. ಡಿಎನ್ಎ ಟೆಸ್ಟ್ ಮಾಡಿಸೋಣ, ಯಾರ್ಯಾರು ಯಾರ ಕುಟಂಬದವರು ಅಂತ ಗೊತ್ತಾಗುತ್ತೆ. ವಿತ್ ಡಿಎನ್ಎ ಕಿಟ್ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಸವಾಲ್ ಹಾಕಿದರು.

Read More

ಬೆಂಗಳೂರು : ರಾಜ್ಯದ ಬಹುತೇಕ ಕಡೆ ಬಿಸಿಲಿನ ಝಳ ಹೆಚ್ಚಾಗಿದೆ. ಈ ಮಧ್ಯೆ ಮಾರ್ಚ್​ 31ರಿಂದ ಮೂರು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಇಂದು ಸಹ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. https://ainlivenews.com/water-drought-in-bangalore-megastar-chiranjeevi-suggested-a-solution/ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿರಲಿದೆ. ನಗರದಲ್ಲಿ 35.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆಯಲ್ಲಿ 39.9 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ…

Read More