Author: AIN Author

ಉತ್ತರ ಕನ್ನಡ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. “ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನಮ್ಮ ಚುನಾವಣಾ ಪ್ರಚಾರ ಕೂಡ ಆರಂಭಿಸುತ್ತಿದ್ದೇವೆ. ಹೀಗಾಗಿ ನಿನ್ನೆ ಧರ್ಮಸ್ಥಳ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ, ಇಡುಗುಂಜಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೆ. ಇಂದು ಗೋಕರ್ಣದಲ್ಲಿ ಪೂಜೆ ಸಲ್ಲಿಸಿ ಮೈಸೂರಿಗೆ ತೆರಳುತ್ತಿದ್ದೇನೆ” ಎಂದು ತಿಳಿಸಿದರು. ಆತ್ಮಲಿಂಗ ಕ್ಷೇತ್ರವಾದ ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ವೇಳೆ, ದೇವಾಲಯದ ಅರ್ಚಕರೇ ಡಿ.ಕೆ.ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಲೆಂದು ಅರ್ಚನೆ ನಡೆಸಿ, ಪೂಜೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಡಿಕೆಶಿ ಉತ್ತರಿಸಿದ್ದಾರೆ. https://ainlivenews.com/what-are-the-benefits-of-eating-cucumber-in-summer-here-are-the-full-details/ “ ಅರ್ಚಕರು ಕೇಳುವುದರಲ್ಲಿ ತಪ್ಪೇನಿದೆ. ಅವರ ಆಸೆ ಅವರು ಕೇಳಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಳಗೆ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ.…

Read More

ಉತ್ತರ ಕನ್ನಡ: ಮುಂಬರುವ ಲೋಕಸಭಾ ಚುನಾವಣೆಗೆ ಸಂಸದ ಅನಂತ ಕುಮಾರ ಹೆಗಡೆ ಅವರ ಅನುಭವ ಪಡೆದು ಅಣ್ಣ ತಮ್ಮನಂತೆ ಕೆಲಸ ಮಾಡಲಿದ್ದೇವೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.  ‘ವರಿಷ್ಠರಿಗೆ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಹೇಳುತ್ತೇನೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಬಲವಾಗಿದೆ. ಬಿಜೆಪಿಯಲ್ಲಿ ವರಿಷ್ಠರ ನಿರ್ಣಯ ಬಂದಾದ ಮೇಲೆ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ. ಲೋಕಸಭಾ ಚುನಾವಣೆಯ ಪ್ರಚಾರ ಕಾರ‍್ಯ ಆರಂಭವಾಗಿದೆ. ಅಭ್ಯರ್ಥಿಯಾಗಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದೇನೆ’ ಎಂದರು. ‘ನರೇಂದ್ರ ಮೋದಿ ಅವರು ಮರಳಿ ಪ್ರಧಾನಿ ಆಗಬೇಕು ಎಂದು ಒಗ್ಗಟ್ಟಾಗಿ ದೇಶ, ರಾಜ್ಯ, ಕ್ಷೇತ್ರದಲ್ಲಿ ಪ್ರತಿಯೊಬ್ಬರು ಕೆಲಸ ಮಾಡಲಿದ್ದಾರೆ. https://ainlivenews.com/what-are-the-benefits-of-eating-cucumber-in-summer-here-are-the-full-details/ 40 ವರ್ಷದಿಂದ ರಾಜಕೀಯ ಜೀವನ, ಸಾರ್ವಜನಿಕ ಜೀವನದಲ್ಲಿಇದ್ದೇನೆ. ಜನರಿಗೆ ನನ್ನ ಪರಿಚಯ ಇದೆ. ಇದು ಅಭ್ಯರ್ಥಿಗಳ ನಡುವೆ ಚುನಾವಣೆ ಅಲ್ಲ. ಪಕ್ಷಗಳ ನಡುವೆ ನಡೆಯುವ ಚುನಾವಣೆ. ಕಾಂಗ್ರೆಸ್‌ ಯಾವ ಗ್ಯಾರಂಟಿಗಳೂ ಜನರಿಗೆ ತಲುಪುತ್ತಿಲ್ಲ. ಅಭಿವೃದ್ಧಿಗೆ ಒಂದು ರೂ. ಹಣ ಬಂದಿಲ್ಲ. ಅಡಳಿತ…

Read More

ಚಿಕ್ಕಮಗಳೂರು: “ನಮ್ಮ ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳ ವಾರಂಟಿ ಇದೆ. ಇದಕ್ಕೆ ಅಗತ್ಯವಾದ ಅನುದಾನವನ್ನು ಬಜೆಟ್ ನಲ್ಲಿ ಇಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಫ್ಯಾನ್, ಕುಕ್ಕರ್ ಗಳಿಗೆ ಒಂದು ವರ್ಷದ ವಾರಂಟಿ ಇದ್ದರೆ, ನಮಗೆ ಜನ ಐದು ವರ್ಷಗಳ ವಾರಂಟಿ ನೀಡಿದ್ದಾರೆ. ಈ ವಾರಂಟಿಯನ್ನು 10 ವರ್ಷಗಳಿಗೆ ನೀಡುವಂತೆ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದೇನೆ ” ಎಂದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ. ಪ್ರಾರ್ಥನೆಗೆ ಫಲ ಖಂಡಿತವಾಗಿ ಸಿಗುತ್ತದೆ. ಹೀಗಾಗಿ ನಾನು ಧರ್ಮ ಯುದ್ಧ ಆರಂಭವಾಗುವ ಮುನ್ನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ನಮ್ಮ ಪಕ್ಷ ಹಾಗೂ ರಾಜ್ಯದ ಜನರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಈ ನಾಡು ಸುಭಿಕ್ಷವಾಗಲಿ, ಒಳ್ಳೆಯ ಆಡಳಿತ ನೀಡುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದೇನೆ. ನಾವು ನುಡಿದಂತೆ ನಡೆದಿರುವುದು ಕೂಡ ನಮ್ಮ ಪ್ರಾರ್ಥನೆಯ ಫಲ.” ಎಂದು ಹೇಳಿದರು.

Read More

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿನ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಇಂದು ಸಂಸದರಾದ ತೇಜಸ್ವಿ ಸೂರ್ಯ ಅವರು ಜೆಡಿಎಸ್‌ ಕಚೇರಿಗೆ ತೆರಳಿ ಅಲ್ಲಿನ ಕಾರ್ಯಕರ್ತರನ್ನ ಭೇಟಿಯಾಗಿದ್ದರು ಜೆಪಿ ಭವನದಲ್ಲಿ  ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು ಈ ವೇಳೆ ಪರಿಷತ್‌ ಸದಸ್ಯರಾದ ಟಿ.ಎ.ಶರವಣ ಅವರು ತೇಜಸ್ವಿ ಸೂರ್ಯ  ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಲೋಕಸಭಾ ಚುನಾವಣೆ ಬಗ್ಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮರುಸ್ಪರ್ಧೆ ಮಾಡಲಿದ್ದು, ಜೆಡಿಎಸ್ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಿದರು. .ಎನ್‍ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಟಿ.ಎ.ಶರವಣ  ಅವರು ತಿಳಿಸಿದರು.

Read More

ಮೈಸೂರು: ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ ವಿರುದ್ಧ ಎರಡು ಪ್ರಕರಣ ದಾಖಲಿಸಿದ್ದು, ಅವರನ್ನು ಜೈಲಿಗೆ ಕಳುಹಿಸದೇ ಬಿಡುವುದಿಲ್ಲಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ. ”ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ ಲಕ್ಷ್ಮಣ್‌ ಅವರಿಗೆ ಈಗ ಒಕ್ಕಲಿಗ ಸಮುದಾಯ ನೆನಪಾಗಿದೆ. 47 ವರ್ಷಗಳ ನಂತರ ಸಮುದಾಯಕ್ಕೆ ಟಿಕೆಟ್‌ ಸಿಕ್ಕಿದ್ದು ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ,” ಎಂದು ಟೀಕಿಸಿದರು. ಮುಂದಿನ ದಿನಗಳಲ್ಲಿಕಾರ್ಯಕರ್ತರ ನಡುವೆಯೇ ಇದ್ದು ನೋವು ನಲಿವಿಗೆ ಸ್ಪಂದಿಸುತ್ತೇನೆ. ತನ್ಮೂಲಕ ನಾನು ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿಲ್ಲ ಎಂಬ ಆಪಾದನೆಯಿಂದ ಹೊರ ಬರುತ್ತೇನೆ ಎಂದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ ಅವರನ್ನು ಗೆಲ್ಲಿಸಲು ಎಂಟು ಕ್ಷೇತ್ರದಲ್ಲಿ ನರಸಿಂಹರಾಜ ಕ್ಷೇತ್ರವನ್ನು ಹೊರತುಪಡಿಸಿ ಏಳು ಕ್ಷೇತ್ರದಲ್ಲಿ ತಲಾ 50 ಸಾವಿರ ಲೀಡ್‌ ತರಬೇಕು. ಕ್ಷೇತ್ರದಲ್ಲಿ 1300ಕ್ಕೂ ಹೆಚ್ಚು ಗ್ರಾಮಗಳಿವೆ. ಎಲ್ಲ ಕಡೆಗೂ ಯದುವೀರ್‌ ಅವರು ತೆರಳಿ ಮತಯಾಚನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಪಕ್ಷದ ಕಾರ್ಯಕರ್ತರೇ ಸಂಘಟನೆ…

Read More

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ 42 ಹಳ್ಳಿಗಳು ಬರಲಿದ್ದು, ಎಲ್ಲಿಯೂ ನೀರಿನ ಅಭಾವ ಎದುರಾಗದಂತೆ ನೋಡಿಕೊಳ್ಳಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಲಯ ಕಛೇರಿಯಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹದೇವಪುರ ವಲಯ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ ಮಹದೇವಪುರ ವ್ಯಾಪ್ತಿಯಲ್ಲಿ 31, ಕೆ.ಆರ್ ಪುರದಲ್ಲಿ 11 ಸೇರಿ ಒಟ್ಟು 42 ಹಳ್ಳಿಗಳು ಬರಲಿವೆ. ಈ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಅಳವಡಿಸಿ ಜಲಮಂಡಳಿಯಿಂದ ನೀರಿನ ಪೂರೈಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ 46 ಶುದ್ಧ ಕುಡಿಯುವ ನೀರಿನ ಘಕಟಗಳು ಬರಲಿದ್ದು, 42 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 4 ಘಟಕಗಳು ಸ್ಥಗಿತಗೊಂಡಿದ್ದು, ಸದರಿ ಘಟಕಗಳಿಗೆ ಕೂಡಲೆ ತಾತ್ಕಾಲಿಕ ನೀರಿನ ವ್ಯವಸ್ಥೆ…

Read More

ರಾಮನಗರ: “ನಾನು ನಿರಂತರವಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದು, ಈಗ ನನಗೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇನೆ. ಜನರಿಂದ ನನಗೆ ಉತ್ತಮ ಸ್ಪಂದನೆ ಸಿಗುತ್ತಿದೆ” ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು. ಕನಕಪುರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ; https://ainlivenews.com/what-are-the-benefits-of-eating-cucumber-in-summer-here-are-the-full-details/ “ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಬಹಳ ಉತ್ಸಾಹದಿಂದ ನನಗೆ ಬೆಂಬಲ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಹಲವು ಕಾರ್ಯಕರ್ತರು ಆ ಪಕ್ಷಗಳನ್ನು ತೊರೆದು ನಮ್ಮ ಪಕ್ಷ ಸೇರುತ್ತಿದ್ದಾರೆ. ಇದರಿಂದಾಗಿ ನಮಗೆ ಮತ್ತಷ್ಟು ಶಕ್ತಿ ಹೆಚ್ಚಾಗಿದೆ” ಎಂದರು. ನಾಳೆ 11 ಗಂಟೆಗೆ ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆ ವಿಚಾರವಾಗಿ ಕೇಳಿದಾಗ, “ನಾಳೆ ಬೆಳಗ್ಗೆ 11 ಗಂಟೆಗೆ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ…

Read More

ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಗೊಂದಲದ ಹಿನ್ನೆಲೆ ಯಾವುದೇ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು. https://ainlivenews.com/i-will-talk-to-sumalatha-when-the-time-comes-hd-kumaraswamy/ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್​ ಗೊಂದಲ ಉಂಟಾಗಿರುವ ಬಗ್ಗೆ ಮಾಹಿತಿ ಬಂದಿದೆ, ಯಾರೂ ಕೂಡ ಗಾಬರಿಯಾಗುವುದು ಬೇಡ, ಕಾಂಗ್ರೆಸ್​ ಪಕ್ಷದಲ್ಲಿ ಶಿಸ್ತು ಮುಖ್ಯ, ಲಕ್ಷ್ಮಣ ರೇಖೆಯಲ್ಲಿ ಯಾರೂ ಶಿಸ್ತು ಮುರಿಯಬಾರದು, ಪಕ್ಷ ಇದ್ರೆ ನಾವೆಲ್ಲ, ಪಕ್ಷ ಇಲ್ಲಾಂದ್ರೆ ನಾವ್ಯಾರು ಇಲ್ಲ. ಇಂದು ನಾನು ಮತ್ತು ಮುಖ್ಯಮಂತ್ರಿಗಳು ಇಬ್ಬರು ಸೇರಿ ಮುಖಂಡರೊಂದಿಗೆ ಚರ್ಚೆ ಮಾಡುತ್ತೇವೆ, ಯಾವುದೇ ಸಮಸ್ಯೆ ಇದ್ದರು ನಾವು ಬಗೆಹರಿಸುತ್ತೇವೆ, ಇದರಲ್ಲಿ ರಾಜ್ಯದ ಹಿತ ಮತ್ತು ಪಕ್ಷದ ಹಿತವನ್ನು ನೋಡಬೇಕಾಗುತ್ತದೆ. ಪಕ್ಷಕ್ಕೆ ಆತಂಕ ತರುವ ಕೆಲಸ ಯಾರು ಮಾಡಬಾರದು. ಕೋಲಾರಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಟಿಕೆಟ್ ಘೋಷಣೆಯಾಗಿಲ್ಲ ಇದು ತಪ್ಪು ಗ್ರಹಿಕೆ ಎಂದು ಅವರು ಹೇಳಿದರು.

Read More

ಗದಗ: ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಇದ್ದಂತೆ ಎಂದು ಗದಗನಲ್ಲಿ ಸಚಿವ ಹೆಚ್.ಕೆ.ಪಾಟೀಲ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಸ್ತಿಯಲ್ಲಿ ಬೊಮ್ಮಾಯಿ ಅವರು ದಾವಣಗೆರೆ ಚಾರ್ಲಿ ಇದ್ದರು. ಆದರೆ ಇದೀಗ ಮುದುಕರಾಗಿದ್ದಾರೆ. ಆದರೆ ಹೊಸ ಕುಸ್ತಿ ಪಟು ಬಿಟ್ಟಾಗ ಯಾರು ಗೆಲ್ತಾರೆ ಅನ್ನೋದು ಗೊತ್ತಾಗುತ್ತೆ. ದಾವಣಗೆರೆ ಚಾರ್ಲಿ ಜೊತೆಗೆ ಹೊಸ ಜಾಣ ಕುಸ್ತಿಪಟು ಇಂದು ಕಣದಲ್ಲಿ ಇದ್ದಾನೆ. ಹೀಗಾಗಿ ಆನಂದ ಗಡ್ಡದ್ದೇವರಮಠ ಗೆಲುವು ನಿಶ್ಚಿತ ಎಂದು ಹೇಳಿದರು. ಇನ್ನೂ ಮಾಜಿ ಮುಖ್ಯಮಂತ್ರಿಗಳ ಹಿಂದೆ ದೊಡ್ಡದೊಂದು ಲಗೇಜ್ ಇದೆ..ದೊಡ್ಡ‌ ಭಾರ ಇದೆ. ಅವರು ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ.. ಮೋದಿ ಅಂತ ಹೇಳಿದಾಕ್ಷಣ 15 ಲಕ್ಷ ಆಪ್ ಕಿ‌ ಅಕೌಂಟ್ ಗೆ ಪಂದ್ರಾಲಾಕ್ ಡಾಲೂಂಗಾ.. ಇದು ಜನರ ಮನಸ್ಸಿಗೆ ಒಮ್ಮೆಲೆ ಥಟ್ಟನೆ ಅಂತ ಬರುತ್ತದೆ.. ರೈತರಿಗೆ ಆದಾಯ ದುಪ್ಪಟ್ಟಾಗುತ್ತೆ ಅಂತ ಹೇಳಿದ್ರು.. ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತಿವಿ ಅಂದಿದ್ರು… ಇವೆಲ್ಲ ಅವರ ಹಿಂದೆ ದೊಡ್ಡ‌ ಭಾರಗಳಿವೆ. ಬಿಜೆಪಿಯ ಸುಳ್ಳು…

Read More

ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದ ಬೆಟ್ಟದ ಮಲ್ಲೇಶ್ವರ ಬೀದಿಯ ಮಹಿಳೆಯರಿಂದ ನೀರಿಗಾಗಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಪುರಸಭೆ ಎದುರು ಖಾಲಿ ಕೊಡಗಳೊಂದಿಗೆ ಸ್ತ್ರೀಯರು ಪ್ರತಿಭಟನೆ ನಡೆಸಿದ್ದು, ನಮಗೆ ಕುಡಿಯಲು ಸಮರ್ಪಕ ನೀರು ಬರ್ತಿಲ್ಲ, 1 ವಾರದಿಂದ ಸಮರ್ಪಕ ನೀರು ಇಲ್ದೆ ನಗರವಾಸಿಗಳು ಹೈರಾಣ ಆಗಿದ್ದಾರೆ. ಕುಡಿಯುವ ನೀರು ಬಾರದ ಹಿನ್ನಲೆ ಅಲ್ಲಲ್ಲಿ ಕುಡಿಯುವ ನೀರು ಸಂಗ್ರಹಿಸಿ ಮಹಿಳೆಯರು ಕಂಗಾಲು ಆಗಿದ್ದಾರೆ. ಆದ್ದರಿಂದ ಮಹಿಳೆಯರು ಬ್ಯಾಡಗಿ ಪುರಸಭೆ ಮುಂದೆ ಖಾಲಿ ಬಿಂದಿಗೆ ಹಿಡಿದು ಧರಣಿ ನಡೆಸಿದ್ದಾರೆ. ಹೊಳೆ ನೀರು ಇಲ್ಲ ಬೋರವೇಲ್ ನೀರು ಇಲ್ಲ ನಮ್ಮ ಗತಿ ಏನು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Read More