Author: AIN Author

ಹುಬ್ಬಳ್ಳಿ: ಹಿಂದು ಮುಸ್ಲಿಮ್ ಭಾವೈಕ್ಯತೆ ಉರುಸು ನವಲಗುಂದ ತಾಲ್ಲೂಕಿನ ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಗೆ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮಾರ್ಚ್ 27 ಬುಧವಾರದಿಂದ ಏಪ್ರಿಲ್ 1 ಸೋಮವಾರದವರೆಗೆ ಜಾತ್ರೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಯು ಮಾರ್ಚ್ 28 ಗುರುವಾರದಿಂದ ಏಪ್ರಿಲ್ 1 ಸೋಮವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಮಾರ್ಚ್ 29 ರಂದು ಶುಕ್ರವಾರ ಗಂಧಾಭಿಷೇಕ (ಸಂದಲ್) ಕಾರ್ಯಕ್ರಮ ಹಾಗೂ 30ರಂದು ಶನಿವಾರ ಪುಣ್ಯತಿಥಿ,ಮುಖ್ಯ ಉರುಸ್ ಕಾರ್ಯಕ್ರಮ ಇರುತ್ತದೆ. ಈ ಜಾತ್ರೆಗೆ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಕಲಘಟಗಿ,ಕುಂದಗೋಳ ಮತ್ತಿತರ ಸ್ಥಳಗಳಿಂದ ಅಲ್ಲದೆ ದೂರದ ಜಿಲ್ಲೆಗಳಾದ ಕಲಬುರಗಿ,ಯಾದಗಿರಿ, ರಾಯಚೂರು,ಕೊಪ್ಪಳ, ವಿಜಯಪುರ,ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. https://ainlivenews.com/sumalatha-and-i-have-no-enmity-hd-kumaraswamy/ ಕಲಬುರಗಿ,ಯಾದಗಿರಿ,ಸಿಂಧನೂರು,ರಾಯಚೂರು, ಕೊಪ್ಪಳ,ಗಂಗಾವತಿ ಕಡೆಗಳಿಂದ ಬರುವವರಲ್ಲಿ ಬಹಳಷ್ಟು ಜನರು…

Read More

ಬೆಂಗಳೂರು: ರಾಜಕಾರಣದಲ್ಲಿ ಶತ್ರುತ್ವ ಎನ್ನುವುದು ಶಾಶ್ವತವಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಸುಮಲತಾ ಅವರು ನನಗೆ ಶತ್ರುವಲ್ಲ. ಅವರನ್ನು ಭೇಟಿಯಾಗುವುದಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ. https://ainlivenews.com/mumbai-bowling-selection-won-the-toss-both-teams-in-search-of-first-win/ ಮೈಸೂರಿಗೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಮಾಧ್ಯಮಗಳು; ʼಸುಮಲತಾ ಅವರ ಜೊತೆ ಯಾವಾಗ ಮಾತನಾಡುತ್ತೀರಿ?ʼ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಖಂಡಿತವಾಗಿಯೂ ಅವರು ನನಗೆ ಶತ್ರು ಅಲ್ಲ. ಅಂಬರೀಶ್ ಬದುಕಿದ್ದಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ನಮಗೆ ಊಟ ಬಡಿಸಿದ್ದಾರೆ. ಹೀಗಿರುವಾಗ ಆಗಿ ಹೋಗಿದ್ದನ್ನೇ ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದರು. ರಾಜಕೀಯ ಸನ್ನಿವೇಶ, ಆಯಾ ಸಂದರ್ಭದಲ್ಲಿ ಸಂಘರ್ಷ ಆಗಿದೆ. ಆ ರಾಮಾಂಜನೇಯರ ನಡುವೆಯೇ ಯುದ್ಧ ಆಗಿದೆಯಲ್ಲವೇ? ಅವರ ಮುಂದೆ ನಾವೆಷ್ಟು? ನಾವು ಹುಲು ಮಾನವರು. ಸಮಯ ಬಂದಾಗ ನಾನು ಸುಮಲತಾ ಅವರ ಜೊತೆ ಮಾತನಾಡುತ್ತೇನೆ ಎಂದರು ಕುಮಾರಸ್ವಾಮಿ ಅವರು. ಚಲುವರಾಯಸ್ವಾಮಿಗೆ ತಿರುಗೇಟು;- ಪುಟ್ಟರಾಜ ಅವರಿಗೆ ಇನ್ನೂ ಚೆನ್ನಾಗಿರುವ ವಧುವನ್ನೇ ‌ನೋಡೋಣ.…

Read More

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ತಮ್ಮ ಎರಡನೇ ಪಂದ್ಯವನ್ನು ಆಡುತ್ತಿವೆ https://ainlivenews.com/suffering-from-hair-loss-problem-2/ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಎರಡೂ ತಂಡಗಳು ಈ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ. ಒಂದೆಡೆ ಮುಂಬೈ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಸೋಲನ್ನು ಎದುರಿಸಬೇಕಾಗಿ ಬಂದರೆ, ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ಎದುರು ಸೋಲು ಕಂಡಿತ್ತು. ಈಗ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ತಮ್ಮ ಗೆಲುವಿನ ಖಾತೆ ತೆರೆಯಲು ಬಯಸಿವೆ.

Read More

ಅಡುಗೆಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು. ಇವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಹಾಗೇ, ತಲೆಹೊಟ್ಟನ್ನು ನಿವಾರಿಸುತ್ತವೆ. ಅಂತಹ ಕೆಲವು ನೈಸರ್ಗಿಕ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ. ಕೂದಲು ಉದುರುವಿಕೆಗೆ ನಾನಾ ರೀತಿಯ ಕಾರಣಗಳಿರಬಹುದು. ಅವುಗಳನ್ನು ಪರಿಹರಿಸಲು ಸಮಗ್ರ ವಿಧಾನದ ಅಗತ್ಯವಿದೆ. ಕೂದಲು ಉದುರುವುದನ್ನು ತಡೆಯುವ 10 ಅಡುಗೆ ಪದಾರ್ಥಗಳು ಇಲ್ಲಿವೆ. ನಿಮ್ಮ ನೆತ್ತಿಯ ಮೇಲೆ ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಕೂದಲು ಕಿರುಚೀಲಗಳನ್ನು ಪೋಷಿಸಲು ಮತ್ತು ಕೂದಲಿನ ಕಾಂಡಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಲ್ಫರ್‌ ಅಂಶ ಸಮೃದ್ಧವಾಗಿರುವ ಈರುಳ್ಳಿ ರಸವು ಕೂದಲ ಕಿರುಚೀಲಗಳಿಗೆ ರಕ್ತ ಪರಿಚಲನೆ ಸುಧಾರಿಸಲು ಮತ್ತು ಕೂದಲಿನ ಎಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಅಂಶವಿದ್ದು, ಇದು ಕೂದಲಿನ ಆರೋಗ್ಯಕ್ಕೆ…

Read More

ನಿತ್ಯ ಒಂದು ಕಪ್ ಲವಂಗದ ಟೀ ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ! ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಸುದ್ದಿ ಪೂರ್ತಿ ಓದಿ. https://ainlivenews.com/attempt-to-snatch-an-elderly-woman-in-a-train-mans-act-caught-on-cctv/ ಲವಂಗದ ಚಹಾದ ವಾಸೋಡಿಲೇಟರಿ ಗುಣಲಕ್ಷಣಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಅಪಧಮನಿಯ ಗೋಡೆಗಳಿಂದ ಕೊಲೆಸ್ಟ್ರಾಲ್ ನಿಕ್ಷೇಪಗಳನ್ನು ತೆಗೆದುಹಾಕಲು ಅನುಕೂಲವಾಗುತ್ತದೆ. ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುವುದು ಮಾತ್ರವಲ್ಲದೆ, ಲವಂಗ ಚಹಾವು ಪರಿಣಾಮಕಾರಿ ಕೊಲೆಸ್ಟ್ರಾಲ್ ಚಯಾಪಚಯ ಮತ್ತು ನಿರ್ವಿಶೀಕರಣದಲ್ಲಿ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವು ಪರೋಕ್ಷವಾಗಿ ಸುಧಾರಿತ ಲಿಪಿಡ್ ಪ್ರೊಫೈಲ್‌ಗಳಿಗೆ ಕೊಡುಗೆ ನೀಡುತ್ತದೆ. ಲವಂಗ ಚಹಾವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. 1. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ: ಲವಂಗದ ಚಹಾವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್​ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುವ ಸಂಯುಕ್ತಗಳಾಗಿವೆ. ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳನ್ನು ಒಳಗೊಂಡಂತೆ ಈ ಉತ್ಕರ್ಷಣ ನಿರೋಧಕಗಳು ರಕ್ತನಾಳಗಳಲ್ಲಿ…

Read More

ರೈಲಿನಲ್ಲಿ ಮಹಿಳೆಯ ಸರ ಕಸಿದುಕೊಳ್ಳಲು ಯತ್ನಿಸಿದ ಘಟನೆ ಜರುಗಿದ್ದು, ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. https://ainlivenews.com/you-must-be-eligible-to-get-a-new-apl-bpl-ration-card/#google_vignette ರೈಲಿನಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೊದಲ್ಲಿ,ಕಳ್ಳ ರೈಲಿನ ಬಾಗಿಲ ಬಳಿ ನಿಂತಿರುವುದನ್ನು ಕಾಣಬಹುದು. ರೈಲು ಕಂಪಾರ್ಟ್‌ಮೆಂಟ್‌ಗಳ ಮೂಲಕ ನಿಧಾನವಾಗಿ ಸಾಗುತ್ತಿದ್ದ ಇಬ್ಬರು ವಯಸ್ಸಾದ ಮಹಿಳೆಯರನ್ನು ಕಂಡ ಕಳ್ಳ ಹಿಂದಿದ್ದ ವೃದ್ದೆಯ ಕತ್ತಿನ ಸರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದಕ್ಕಿದ್ದಂತೆ ರೈಲಿನಿಂದ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. @rnsaai ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​ 26ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 2.5ಮಿಲಿಯನ್​ ವೀಕ್ಷಣೆಯನ್ನು ಪಡೆದುಕೊಂಡಿದೆ. “ಯಾವಾಗಲೂ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿರಿಸಿ ಮತ್ತು ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರದಿಂದಿರಿ. ಪ್ರಯಾಣ ಮಾಡುವಾಗ ಜಾಗರೂಕತೆ ಮುಖ್ಯವಾಗಿದೆ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ. @rnsaai ಎಂಬ ಟ್ವಿಟರ್​​ ಖಾತೆಯಲ್ಲಿ ಮಾರ್ಚ್​​​ 26ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 2.5ಮಿಲಿಯನ್​ ವೀಕ್ಷಣೆಯನ್ನು ಪಡೆದುಕೊಂಡಿದೆ. “ಯಾವಾಗಲೂ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿರಿಸಿ ಮತ್ತು ನಿಮ್ಮ…

Read More

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ ಪತ್ನಿ ರಿವಾಬ ಗುಜರಾತ್ ನ ಜಾಮ್ನಾನಗರದ ಬಿಜೆಪಿ ಶಾಸಕಿ. ಸಾಮಾನ್ಯವಾಗಿ ರಿವಾಬ ಸಾಂಪ್ರದಾಯಿಕ ಡ್ರೆಸ್ ನಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ ಅಪರೂಪಕ್ಕೆ ಟಿ-ಶರ್ಟ್ ತೊಟ್ಟುಕೊಂಡಿರುವ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಪತಿ ರವೀಂದ್ರ ಜಡೇಜಾ ಫೋಟೋ ಹಿನ್ನಲೆಯಲ್ಲಿತ್ತು. ಅವರು ಧರಿಸಿದ್ದ ಟಿ-ಶರ್ಟ್ ನಲ್ಲಿ ‘ಹುಕುಂ’ (ಆರ್ಡರ್) ಎಂದು ಬರೆದಿತ್ತು. ಇದನ್ನು ನೋಡಿದ ರವೀಂದ್ರ ಜಡೇಜಾ ‘ನನ್ನ ಆರ್ಡರ್, ಬೇಗ ರೂಂಗೆ ಬಾ’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್ ನೋಡಿ ನೆಟ್ಟಿಗರು ಗಂಡ-ಹೆಂಡತಿಯನ್ನು ಇನ್ನಿಲ್ಲದಂತೆ ಕಾಲೆಳೆದಿದ್ದಾರೆ. ಸ್ವಲ್ಪ ಸಂಯಮದಿಂದಿರಿ ಜಡ್ಡು ಎಂದು ಓರ್ವ ನೆಟ್ಟಿಗ ಕಾಮೆಂಟ್ ಮಾಡಿದ್ದರೆ ಮತ್ತೋರ್ವ ಜಡೇಜಾರ ದೊಡ್ಡ ಸಪೋರ್ಟ್ ಸಿಸ್ಟಂ ರಿವಾಬ ಎಂದಿದ್ದಾರೆ.

Read More

ಬೆಂಗಳೂರು:- ರೇಷನ್‌ ಕಾರ್ಡ್‌ ಒಂದು ಪ್ರಮುಖ ದಾಖಲೆಯಾಗಿದ್ದು, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ಕಡ್ಡಾಯ ದಾಖಲೆಯಾಗಿದೆ. ಇದಲ್ಲದೆ, ನಿವಾಸ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್‌ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕರ್ನಾಟಕದಲ್ಲಿ ಪಡಿತರ ಚೀಟಿ ವಿತರಿಸುತ್ತದೆ. ಹೀಗಾಗಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಈ ಪ್ರಮುಖ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ www.ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ಪಟ್ಟಿ ಯಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, APL Ration Card ) ಹೇಗೆ ಅರ್ಜಿ ಸಲ್ಲಿಸಬಹುದು.?…

Read More

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ  ಪ್ರತಿಕ್ರಿಯಿಸಿದರು. ಈ ಮಾತಿಗೆ ನಗಬೇಕೋ, ಅಳಬೇಕೋ ಗೊತ್ತಾಗ್ತಿಲ್ಲ. ಮೋದಿ ಬಗ್ಗೆ ಹಗುರವಾಗಿ ಮಾತಾಡಿದರೆ ದೊಡ್ಡವರಾಗುತ್ತೇವೆ ಎನ್ನುವ ಭಾವನೆ ಇದ್ದರೆ ಅದು ಖಂಡಿತ ಸಾಧ್ಯವಿಲ್ಲ. ಇಂತಹ ಮಾತು ಕಡಿಮೆ ಮಾಡಿ, ನಿಮ್ಮ ಸಿಎಂ ಸ್ಥಾನಕ್ಕೆ ಗೌರವ ತರಲ್ಲ ಎಂದು ಕಿಡಿಕಾರಿದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಮೋದಿ ಹೆಸರು ಹೇಳಿ ಮತ ಕೇಳಿದ್ರೆ ಕಪಾಳಮೋಕ್ಷ ಮಾಡಿ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ, ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಇದು ಶೋಭೆ ತರಲ್ಲ. ಅತಿರೇಕದ ಪರಾಮಾವಧಿ. ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಲ್ಲರೂ ಒಮ್ಮತದಿಂದ ಜಗದೀಶ್​ ಶೆಟ್ಟರ್ ಅವರನ್ನು ಬಹು ದೊಡ್ಡ ಅಂತರದಲ್ಲಿ ಗೆಲ್ಲಿಸುವ ಭರವಸೆ ನೀಡಿದ್ದಾರೆ. ನನಗೂ ವಿಶ್ವಾಸವಿದ್ದು, ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ. ಈ ಸಲ 28 ಕ್ಷೇತ್ರ ಗೆಲ್ಲಿಸಬೇಕು…

Read More

ಮೈಸೂರು: ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಇವರು ಬಡವರ ಪರವಾಗಿ, ಶೋಷಿತರ ಪರವಾಗಿ, ರೈತ ಪರವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜನ ಬೇಸರ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಇನ್ನೂ ಲೋಕಾಸಭಾ ಚುನಾವಣೆಗೆ ಕರ್ನಾಟಕ ಸರ್ಕಾರದ 18 ಸಚಿವರನ್ನು ಕಣಕ್ಕಿಳಿಸಲು ಸಿಎಂ, ಡಿಸಿಎಂ ಪ್ಲಾನ್​​ ಮಾಡಿದ್ದರು. ಆದರೆ ಮೋದಿಯವರ ಅಲೆಗೆ ಹೆದರಿ ಸಚಿವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಯಾರೂ ಸ್ಪರ್ಧೆ ಮಾಡುತ್ತಿಲ್ಲ. ಎಲ್ಲಾ ಸಚಿವರಿಗೂ ಸೋಲಿನ ಭಯ ಎಂದು ಟೀಕಿಸಿದರು. https://ainlivenews.com/what-are-the-benefits-of-eating-cucumber-in-summer-here-are-the-full-details/ ಜೆಡಿಎಸ್-ಬಿಜೆಪಿ ಒಂದಾಗಿ ಇರುವುದು ನಮಗೆ ಪ್ಲಸ್ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಯಾವುದೇ ಪ್ಲಸ್, ಮೈನಸ್ ಇಲ್ಲ. ಜನ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್​ ಸೋಲಿನ ಭಯದಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಬರಗಾಲ ಇದೆ. ಶೀಘ್ರವೇ ದೇವಿಯ…

Read More