Author: AIN Author

ಶಿವಮೊಗ್ಗ:- ಶಿವಮೊಗ್ಗ ಬಂಡಾಯ ಅಭ್ಯರ್ಥಿ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿದೆ. ಶಿಕಾರಿಪುರದಲ್ಲಿ ಮಾ.24ರಂದು ನಿಯಮ ಮೀರಿ ಬೈಕ್‌ ರ್‍ಯಾಲಿ ನಡೆಸಿದ್ದರು. 10 ಬೈಕ್‌, ಒಂದು ಜೀಪ್‌ಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ ರ್‍ಯಾಲಿಯಲ್ಲಿ 50ಕ್ಕೂ ಹೆಚ್ಚು ಬೈಕ್‌ಗಳು, 4 ಕಾರು ಭಾಗಿ ಹಿನ್ನೆಲೆ ಚುನಾವಣಾಧಿಕಾರಿ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬೈಕ್‌ಗಳ ಮೇಲೆ ಓಂ ಬಾವುಟ ಕಟ್ಟಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ. https://ainlivenews.com/from-chitradurga-sc-lok-sabha-constituency-to-govinda-karajola-constituency/ ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಪಕ್ಷದೊಳಗೆ ಟಿಕೆಟ್ ವಂಚಿತರ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಅದ್ರಲ್ಲೂ ಪುತ್ರನಿಗೆ ಟಿಕೆಟ್ ಮಿಸ್ ಆದ್ಮೇಲೆ, ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅಕ್ಷರಶಃ ಆಕ್ರೋಶ ಹೊರಹಾಕಿದ್ದರು. ತಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಇತ್ತೀಚೆಗೆ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸಿದ ಈಶ್ವರಪ್ಪ ಮಹತ್ವದ ನಿರ್ಣಯ ಕೈಗೊಂಡಿದ್ದರು. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದರು. ಪ್ರಾಣಹೋದ್ರೂ ಮೋದಿ ವಿರುದ್ಧ…

Read More

ವಿಜಯಪುರ:- ಚಿತ್ರದುರ್ಗ ಎಸ್ ಸಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೆಸರು ಘೋಷಣೆ ಹಿನ್ನೆಲೆ, ವಿಜಯಪುರದಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. https://ainlivenews.com/loka-raid-case-on-rto-officers-house/ ಪಟಾಕಿ ಸಿಡಿಸಿ, ಸಿಹಿ ಹಂಚಿ ಕಾರಜೋಳ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಗೋವಿಂದ ಕಾರಜೋಳ ಪರವಾಗಿ ಘೋಷಣೆ ಕೂಗಿ ಸಂಭ್ರಮ ಪಟ್ಟಿದ್ದಾರೆ. ಹಲವು ಅಭಿಮಾನಿಗಳು ಜಮಾಯಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

Read More

ವಿಜಯಪುರ:- ಆರ್ ಟಿ ಓ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ರೇಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಆರ್ ಟಿ ಓ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ವಿದೇಶಿ ಕರೆನ್ಸಿ ಪತ್ತೆಯಾಗಿದೆ. https://ainlivenews.com/one-died-due-to-hookworm-attack-seven-people-were-injured/ ಜಮಖಂಡಿಯಲ್ಲಿ ಆರ್ ಟಿ ಓ ಇನ್ಸ್ಪೆಕ್ಟರ್ ಆಗಿರೋ ಷಣ್ಮುಖಪ್ಪ ನಿವಾಸದ ಮೇಲೆ ರೇಡ್ ನಡೆದಿತ್ತು. ರೇಡ್ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ. ಅಮೆರಿಕನ್ ಡಾಲರ್, ಪೌಂಡ್, ನೇಪಾಳ, ಮಲೇಶಿಯಾ ಸೇರಿ ಹಲವು ದೇಶಗಳ ಕರೆನ್ಸಿ ಪತ್ತೆಯಾಗಿದೆ. ಹಾಗೂ ಚಿನ್ನದ ನೆಕ್ಲೆಸ್, ಚಿನ್ನದ ಸರ, ಓಲೆ, ಬೆಳ್ಳಿಯ ಪಾತ್ರೆ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Read More

ಗದಗ:- ಹೆಜ್ಜೇನು ಹುಳುಗಳ ದಾಳಿಗೆ ಓರ್ವನು ಸಾವನ್ನಪ್ಪಿದ್ದು 7-ಜನರಿಗೆ ಗಾಯಗಳಾದ ಘಟನೆ ಗದಗ ಜಿಲ್ಲೆಯ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ರಾಮ ಕರುನಾನಂದ ಮಠದ ಬಳಿ ನಡೆದಿದೆ. https://ainlivenews.com/a-mother-tried-to-commit-suicide-by-poisoning-her-five-children/ ಮಲ್ಲಸಮುದ್ರ ಗ್ರಾಮದ 40 ವರ್ಷದ ನಾಗಪ್ಪ ಸೊರಟೂರ ಎಂಬ ವ್ಯಕ್ತಿ ಮೃತ ದುರ್ದೈವಿಯಾಗಿದ್ದು ಇನ್ನುಳಿದ ಮೂರು ಜನ ಮಹಿಳೆಯರು ಹಾಗೂ ನಾಲ್ಕು ಜನ ಪುರುಷರಿಗೆ ಗಾಯಗಳಾಗಿವೆ. ಹನುಮಂತಪ್ಪ ಹೊಸಳ್ಳಿ, ಧರ್ಮಣ್ಣ ಹುಬ್ಬಳ್ಳಿ, ಗಿಡ್ಡಪ್ಪ ಗುಡಿ, ರೇಣುಕಾ, ಕಮಲವ್ವ ಎಂಬುವರಿಗೆ‌ ಗಂಭೀರ ಗಾಯಗಳಾಗಿದ್ದು ಹೆಜ್ಜೆನು ದಾಳಿಗೊಳಗಾದವರ ನರಳಾಟದ ಗೋಳನ್ನು ಕೇಳತೀರದಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಹಾಗೂ ಕೆಲವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ‌ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಬಳ್ಳಾಪುರ:- ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಐವರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ. https://ainlivenews.com/if-you-have-this-symptom-dont-ignore-it-it-could-be-breast-cancer/ ತಾಯಿ ಅನಿತಾ ಹಾಗೂ ಆಕೆಯ ಐದು ಜನ ಹೆಣ್ಣು ಮಕ್ಕಳಾದ ಲಾವಣ್ಯ (11), ಧರಣಿ (9), ಕಾವ್ಯ (8), ರಕ್ಷಿತಾ (5), ಶ್ರೀವಲ್ಲಿ (2) ಅವರನ್ನು ಮೊದಲು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಗರ್ಭಿಣಿಯಾಗಿರುವ ತಾಯಿ ಅನಿತಾ ಅವರಿಗೆ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಡ ಗೋಪಾಲ ಎಂಬಾತನಿಂದ ಕಿರುಕುಳ ಆರೋಪ ಕೇಳಿಬಂದಿದೆ ಎಂದು ಹೇಳಲಾಗಿದೆ.

Read More

ಪ್ರತಿ ವರ್ಷ ಸುಮಾರು 2.1 ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಯಿಲೆಯು ಕಾಣಿಸಿಕೊಳ್ಳುತ್ತಿದೆ. ಸ್ತನದ ಹಾಲು ಉತ್ಪಾದಿಸುವ ಗ್ರಂಥಿಗಳಲ್ಲಿ ಅಥವಾ ಗ್ರಂಥಿಗಳಿಂದ ಮೊಲೆತೊಟ್ಟುಗಳಿಗೆ ಹಾಲನ್ನು ಸಾಗಿಸುವ ಮಾರ್ಗಗಳಲ್ಲಿ ಕ್ಯಾನ್ಸರ್ ರೂಪುಗೊಳ್ಳುತ್ತದೆ. https://ainlivenews.com/congress-government-is-trying-to-protect-the-interests-of-tamil-nadu-bommai/ ಸ್ತನದ ಕೊಬ್ಬಿನ ಅಥವಾ ನಾರಿನ ಸಂಯೋಜಕ ಅಂಗಾಂಶವು ಕ್ಯಾನ್ಸರ್ ಕೋಶಗಳಿಗೆ ಹಾಟ್‌ಸ್ಪಾಟ್ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೋಶಗಳು ನಿಮ್ಮ ತೋಳುಗಳ ಅಡಿಯಲ್ಲಿ ದುಗ್ಧರಸ ಗ್ರಂಥಿಗಳನ್ನು ತಲುಪಬಹುದು. ಅದಲ್ಲದೇ, ದೇಹದ ವಿವಿಧ ಭಾಗಗಳಿಗೆ ಹರಡುವ ಸಾಧ್ಯತೆಯು ಅಧಿಕವಾಗಿದೆ. ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಈ ಗಂಭೀರ ಕಾಯಿಲೆಯಿಂದ ಪಾರಾಗಬಹುದು. ಸ್ತನ ಕ್ಯಾನ್ಸರ್ ಲಕ್ಷಣಗಳು: ಸ್ತನ ಕ್ಯಾನ್ಸರ್ ಎದೆಯ ಅಂಗಾಂಶದಿಂದ ಬೆಳೆಯುವ ಕ್ಯಾನ್ಸರ್ ಆಗಿದ್ದು, ಈ ಕೆಲವು ಲಕ್ಷಣಗಳು ಕಂಡು ಬಂದರೆ ಅಂತಹವರಲ್ಲಿ ಸ್ತನ ಕ್ಯಾನ್ಸರ್ ಇದೆ ಎನ್ನುವುದನ್ನು ಸೂಚಿಸುತ್ತದೆ. ಸ್ತನ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ. ಸ್ತನದ ಮಂದಗೊಳ್ಳುವಿಕೆ. ಎದೆಯ ಸುತ್ತ ಬಟಾಣಿಯಂತಹ ಸಣ್ಣ ಗಡ್ಡೆಗಳು. ಮುಟ್ಟಿನ ಸಮಯದಲ್ಲಿ ಕಂಕುಳ ಭಾಗಗಳಲ್ಲಿ…

Read More

ಗದಗ:- ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಬಿಟ್ಟ ವಿಚಾರವಾಗಿ ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ‌ ನೀಡಿದ್ದಾರೆ. https://ainlivenews.com/pralhad-joshi-is-trampling-the-lingayat-society/ ಗದಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇಡೀ ವರ್ಷ ತಮಿಳನಾಡಿನ ಹಿತಾಸಕ್ತಿ ಕಾಪಾಡಲು ಸರ್ವ ಪ್ರಯತ್ನ‌ ಮಾಡಿದೆ. ಅವರ ರಾಜಕೀಯ ಪಾರ್ಟ್ನರ್ ಡಿಎಂಕೆ ರನ್ನ ಸಂತೈಸೋದೇ‌ ಕೆಲಸ ಆಗಿದೆ. ಕರ್ನಾಟಕ ಜನರ ಹಿತಾಸಕ್ತಿಗಿಂತ ಡಿಎಂಕೆ ಸಂತೈಸುವದೇ ಪ್ರಮುಖವಾಗಿ ಕಂಡು ಬಂದಿದೆ… ಹಲವಾರು ಬಾರಿ ನಾವು ಈ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಸರ್ವಪಕ್ಷ‌ ಸಭೆ ಸೇರಿದಂತೆ, ವಿಧಾನಸಭೆಯಲ್ಲೂ ಹೇಳಿದ್ದೇವೆ. ಕರ್ನಾಟಕದ ಜನ ಇಂದು ನೀರಿಗೆ ಪರಿತಪಿಸುತ್ತಿದ್ದಾರೆ. ಬರಗಾಲ ಇದೆ..ಬೇಸಿಗೆ ಇದೆ..ಜಲಾನಯನ ಪ್ರದೇಶದ ಜನ್ರಿಗೆ ನೀರಿಲ್ಲ. ಬೆಂಗಳೂರಿನ‌ ಜನತೆಗೆ ನೀರಿಲ್ಲ.. ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ರಾಜಕೀಯ ಮಹತ್ವದ್ದಾಗಿದೆ. ಇದು ಅತ್ಯಂತ ಖಂಡನೀಯ ಎಂದು ಗದಗನಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Read More

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲಿಂಗಾಯತ ಮತ್ತು ಉಳಿದ ಸಮಾಜವನ್ನು ತುಳಿಯುತ್ತಿದ್ದಾರೆ. ಸ್ವಾಮೀಜಿಗಳನ್ನು ಅಪಮಾನಗೊಳಿಸಿದ್ದಾರೆ. ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಅವರಿಗೆ ನೀಡಿರುವ ಟಿಕೆಟ್’ನ್ನು ಬಿಜೆಪಿ ವರಿಷ್ಠರು ಮಾ. 31 ರೊಳಗೆ ಬದಲಾವಣೆ ಮಾಡಬೇಕೆಂದು ಶಿರಹಟ್ಟಿಮಠದ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಆಗ್ರಹಿಸಿದರು. https://ainlivenews.com/joshi-had-no-role-in-removing-me-as-cm-yeddyurappa/ ಮೂರುಸಾವಿರಮಠದ ಆವರಣದಲ್ಲಿ ವಿವಿಧ ಸ್ವಾಮೀಜಿಗಳೊಂದಿಗೆ ಚಿಂತನ ಮಂಥನ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬದಲಾವಣೆ ಆಗದಿದ್ದರೇ ಎಪ್ರಿಲ್ 2 ರಂದು ಮತ್ತೊಮ್ಮೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದರು‌. ಪ್ರಲ್ಹಾದ್ ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದ್ದು, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮೂದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೆ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ ಎಂದು ಹೇಳಿದರು. ಇಂದು ನಡೆದ ಸಭೆಯಲ್ಲಿ ಮಠಾಧಿಪತಿಗಳು ಕೆಲವು ನಿರ್ಧಾರ ಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕು ಹೊರತು ಇತರರನ್ನು ತುಳಿದು ರಾಜಕಾರಣ ಮಾಡಬಾರದು, ಧಾರವಾಡ ಮತಕ್ಷೇತ್ರಕ್ಕೆ…

Read More

ಧಾರವಾಡ:- ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾತ್ರವಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದರು. https://ainlivenews.com/anil-chilli-is-with-us-basavaraja-bommai/ ಇದೀಗ ಈ ಆರೋಪಕ್ಕೆ ಸ್ವತಃ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಜೋಶಿರವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದರಲ್ಲಿ ಜೋಶಿರವರ ಪಾತ್ರ ಇಲ್ಲ. ಪ್ರಲ್ಹಾದ್​ ಜೋಶಿ ಅವರು ಧೀಮಂತ ನಾಯಕ, ಈ ಬಾರಿ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ. ಯಾವುದೇ ಕಾರಣಕ್ಕೂ ಪ್ರಲ್ಹಾದ್​ ಜೋಶಿ ಟಿಕೆಟ್‌ ಬದಲಾವಣೆ ಆಗಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಎಲ್ಲವೂ ಸರಿ ಹೋಗಿದೆ. ದಾವಣಗೆರೆಯಲ್ಲಿ ಅಸಮಾಧಾನವಿತ್ತು, ಅಲ್ಲಿಗೆ ಹೋಗಿ ಸರಿಪಡಿಸಿದ್ದೇನೆ. ಬೆಳಗಾವಿಯಲ್ಲಿ ಶೆಟ್ಟರ್ ವಿರುದ್ಧ ಅಸಮಾಧಾನವಿತ್ತು, ಅಲ್ಲೂ ಸರಿಪಡಿಸಿದ್ದೇನೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಪ್ಪು ಗ್ರಹಿಕೆಯಿಂದ ಮಾತನಾಡಿದ್ದಾರೆ. ಅವರ ಜೊತೆ ಚರ್ಚಿಸುತ್ತಿದ್ದೀನಿ, ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ದೊಡ್ಡ…

Read More

ಗದಗ: ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ, ವಿಧಾನಸಭೆ ಪರಾಜಿತ ಅಬ್ಯರ್ಥಿ, ಮುಖಂಡ ಅನಿಲ್ ಮೆಣಸಿನಕಾಯಿ ಪ್ರಚಾರಕ್ಕೆ ಬರದಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಗದಗನಲ್ಲಿ ಮಾತನಾಡಿದ್ರು. https://ainlivenews.com/sumalatha-and-i-have-no-enmity-hd-kumaraswamy/ ನಾನು ಅನಿಲ್ ಮೆಣಸಿನಕಾಯಿ ಅವರೊಂದಿಗೆ ಮಾತನಾಡಿದ್ದೇನೆ, ಬರ್ತೆನೆ ಅಂತಾ ಹೇಳಿದ್ದಾರೆ. ಬೆಂಗಳೂರಿನ ಮನೆಗೆ ಬಂದು ಎರಡು ತಾಸು ಮಾತನಾಡಿದ್ದಾರೆ, ಅನಿಲ್ ಮೆಣಸಿನಕಾಯಿ ನಮ್ಮ ಜೊತೆಗೆ ಇದ್ದಾರೆ ಅಂದ್ರು.

Read More