ಟೀಮ್ ಇಂಡಿಯಾ ಗೆಲುವನ್ನು ತನ್ನದಾಗಿಸಿಕೊಳ್ಳುವ ಬಯಕೆಯನ್ನು ಬಿಟ್ಟು ಬಿಡುವುದು ಉತ್ತಮ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಖಾಸಗಿ ಚಾನೆಲ್ ಚರ್ಚೆಯಲ್ಲಿ ಮಾತನಾಡಿದ ಅವರು, ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸುವುದು ಅಸಾಧ್ಯದ ಮಾತು. ಹೀಗಾಗಿ ಅಮೋಘ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರುವ ಕನಸನ್ನು ನೀವು ಬದಿಗಿಡಿ. ಬದಲಾಗಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವುದಕ್ಕೆ ಪ್ರಯತ್ನ ಮಾಡಿ ಎಂದು ಗವಾಸ್ಕರ್ ಹೇಳಿದ್ದಾರೆ. https://ainlivenews.com/use-an-old-phone-make-a-cctv-how-do-you-know-here-are-the-tix/ ಟೀಮ್ ಇಂಡಿಯಾ ಅಸಂಭವ ಗೆಲುವನ್ನು ತನ್ನದಾಗಿಸಿಕೊಳ್ಳುವ ಬಯಕೆಯನ್ನು ಬಿಟ್ಟು ಬಿಡುವುದು ಉತ್ತಮ. 4-0 ಅಂತರದ ಗೆಲುವಿನ ನಿರೀಕ್ಷೆ ಬಿಟ್ಟು, ಎರಡು ಅಥವಾ ಮೂರು ಪಂದ್ಯಗಳನ್ನು ಗೆದ್ದರೂ ಅದು ಗಮನಾರ್ಹ ಸಾಧನೆಯಾಗಲಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿ ಗೆಲುವಿನತ್ತ ಹೆಚ್ಚಿನ ಗಮನಹರಿಸಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
Author: AIN Author
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣದ ಕೆಲಸಕ್ಕೆ ನವೆಂಬರ್ 22 ರಂದು ಭೂಮಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವುದು ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವೇದಿಕೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಸಮಿತಿಗಳ ಕೆಲಸಕ್ಕಿಂತ ವೇದಿಕೆ ಸಮಿತಿಯ ಕೆಲಸ ಮುಖ್ಯವಾಗಿರುತ್ತದೆ. ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆ ಮೂರು ವೇದಿಕೆಗಳಿಗೆ ಮೂರು ಜವಾಬ್ದಾರಿಯುತ ಅಧಿಕಾರಿಗಳನ್ನು ನಿಯೋಜಿಸಿ ಎಂದರು. ವೇದಿಕೆಗಳ ನಿರ್ಮಾಣದ ಜೊತೆಗೆ ಪಾರ್ಕಿಂಗ್ ಸ್ಥಳ ನಿಗದಿಯಾಗಬೇಕು, ಮಾಧ್ಯಮ ಕೇಂದ್ರ, ವಸ್ತುಪ್ರದರ್ಶನ ಮಳಿಗೆ, ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆ, ಆಹಾರ ವಿತರಣೆಗೆ ಕೌಂಟರ್ ಗಳು ಸೇರಿದಂತೆ ವಿವಿಧ ಇಲಾಖೆಗಳು ನೀಡುವ ವಸ್ತುಪ್ರದರ್ಶನ ಮಳಿಗೆಗಳ ನಿರ್ಮಾಣ ಅಚ್ಚುಕಟ್ಟಾಗಿ ನಡೆಯಬೇಕು ಎಂದರು. ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮಾತನಾಡಿ ಮೈಸೂರು ಮಾರ್ಗವಾಗಿ ಬರುವವರಿಗೆ ಸತ್ವ ಬಳಿ ಹಾಗೂ ಬೆಂಗಳೂರು ಮಾರ್ಗವಾಗಿ ಬರುವವರಿಗೆ ಪ್ರತ್ಯೇಕವಾಗಿ ಪಾರ್ಕಿಂಗ್…
ಬೆಂಗಳೂರು: ನೀವು ನೌಕರಿ ( Job ) ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಬ್ರ್ಯಾಂಚ್ ಮ್ಯಾನೆಜರ್, ಮ್ಯಾನೆಜರ್, ಅಸಿಸ್ಟೆಂಟ್ ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಕ್ಯಾಶಿಯರ್ , ಸುಪರವೈಸರ್ ಸೇರಿದಂತೆ ಅನೇಕ ಹುದ್ದೆಗಳಿಗೆ ಇಲ್ಲಿ ಅವಕಾಶವಿದೆ. https://youtu.be/LGmAytUNCR4 SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. (Job alert – contact – 97406 26853 ) ದಿನಾಂಕ- 20-11-2024 ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು- 04 ಹೆಚ್ಚಿನ ಮಾಹಿತಿಗಾಗಿ…
ಬೆಂಗಳೂರು: ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ 9 ಸಾವಿರ ಹುದ್ದೆಗಳ ಜತೆಗೆ 1 ಸಾವಿರ ಹುದ್ದೆಗಳನ್ನು ಅನುಕಂಪ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಸಿಎಂ ಕೂಡ 500 ಕೋಟಿ ಅನುದಾನ ನೀಡಿದ್ದರು. ಏಳು ವರ್ಷದಿಂದ ನೇಮಕಾತಿ ಆಗಿರಲಿಲ್ಲ. ಡ್ರೈವರ್, ಕಂಡಕ್ಟರ್ ಇಲ್ಲ ಅಂದ್ರೆ ಹೇಗೆ ಬಸ್ ಓಡಿಸುವುದು. ಹೀಗಾಗಿ ಶೀಘ್ರದಲ್ಲೇ ನೇಮಕಾತಿ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿ ನಾಲ್ಕು ನಿಗಮಗಳಲ್ಲಿ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. 2 ಸಾವಿರ ಹುದ್ದೆಗಳಿಗೆ ಈಗಾಗಲೇ ನೇಮಕಾತಿಯನ್ನು ಮಾಡಿಕೊಳ್ಳಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿವೆ. 5800 ಹೊಸ ಬಸ್ ಗಳನ್ನು ಖರೀದಿ ಮಾಡಲಾಗುತ್ತಿದ್ದು, ಈಗಾಗಲೇ 2400 ಬಸ್ ಗಳ ಖರೀದಿ ಪ್ರಕ್ರಿಯೆ ಪೂರ್ಣ ಆಗಿದೆ ಎಂದು ತಿಳಿಸಿದ್ದಾರೆ. https://ainlivenews.com/do-you-know-doddapatre-has-the-ability-to-eliminate-the-biggest-health-problem/ ಇನ್ಮುಂದೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿದ…
ಬೆಂಗಳೂರು:- ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ಅತಂತ್ರವಾಗಿದೆ. ಪೋಸ್ಟರ್ ಅಂಟಿಸಿದಾಗಿನಿಂದಲೂ ಕಾರ್ಯಕರ್ತರು ಕೋರ್ಟ್ ಅಲೆಯುತ್ತಿದ್ದಾರೆ. https://ainlivenews.com/terrible-accident-the-old-man-died-on-the-spot/ ಪಕ್ಷದ ವಿರುದ್ಧವೇ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ. ಕೋರ್ಟ್ ನಲ್ಲಿರುವ ತಮ್ಮ ಪೊಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಮಂತ್ರಿಗಳ ಮಕ್ಕಳು ಸಂಸತ್ತಿನಲ್ಲಿ, ಬಡವರ ಮಕ್ಳು ಕೋರ್ಟ್ ನಲ್ಲಿ, ಹೋಡಿರಿ ಚಪ್ಪಾಳೆ ಇದೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಣ್ರೀ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಟಿ ರವಿ ಕೇಸ್ ವಾಪಸ್ ತಗೊಂಡ ಸರ್ಕಾರ,ನಮ್ಮ ಕೇಸ್ ಗಳು ಕಣ್ಣಿಗೆ ಕಾಣಲಿಲ್ಲವೆ ಎಂದು ಸಂಜಯ್ ,ವಿಶ್ವ ಮೂರ್ತಿ ಆಕ್ರೋಶ ಹೊರ ಹಾಕಿದ್ದಾರೆ.
ನೆಲಮಂಗಲ: ಭೀಕರ ಅಪಘಾತದಲ್ಲಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಜರುಗಿದೆ. https://ainlivenews.com/kantara-chapter-1-first-look-teaser-released-rishabh-shetty-shocked/ ರಸ್ತೆಯಲ್ಲಿ ನರಲಾಡಿ ವೃದ್ಧ ವ್ಯಕ್ತಿ ಪ್ರಾಣಬಿಟ್ಟಿದ್ದಾರೆ. ಪಾದಚಾರಿ ವೃದ್ಧನ ಮೇಲೆ ಕಂಟೇನರ್ ಲಾರಿ ಹರಿದಿದೆ. ಕಂಟೇನರ್ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ನರಲಾಡಿ ವೃದ್ಧ ಸಾವನ್ನಪ್ಪಿದ್ದಾರೆ. ತುಮಕೂರು ಕಡೆಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಲಾರಿ ಹಾಗೂ ಚಾಲಕ ಡಾಬಸ್ ಪೇಟೆ ಪೋಲಿಸರ ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತತೆ ಡಾಬಸ್ ಪೇಟೆ ಪೊಲೀಸರು ಹರಸಾಹಸಪಟ್ಟಿದ್ದಾರೆ. ಕೆಂಪರಂಗಯ್ಯ 75 ಆಗಳಕುಪ್ಪೆ ನಿವಾಸಿ ಮೃತ ಎನ್ನಲಾಗಿದೆ.
ಇಂದಿನ ದಿನಗಳಲ್ಲಿ ಮಂಡಿ ನೋವಿನ ಸಮಸ್ಯೆ ಸಣ್ಣ ವಯಸ್ಸಿನವರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಯಾಕೆ ಹೀಗೆ ಎಂದು ನೋಡುವುದಾದರೆ, ದೇಹದಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ ವಿಟಮಿನ್ ಡಿ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಅಧಿಕ ದೇಹದ ತೂಕ ಎಂದು ಮೇಲ್ನೋಟಕ್ಕೆ ತಿಳಿದುಕೊಳ್ಳಬಹುದು. ಹಿಂದಿನ ಕಾಲದಲ್ಲಿ ವಯಸ್ಸಾದ ಅಜ್ಜ-ಅಜ್ಜಿಯರು ಮಾತ್ರ ತಮ್ಮ ಮಂಡಿ ನೋವು, ಗಂಟು ನೋವು, ಕೀಲು ನೋವುಗಳ ಬಗ್ಗೆ ಹೇಳುತ್ತಿರುವುದು, ನಾವೆಲ್ಲರೂ ಕೂಡ ಕೇಳಿದ್ದೇವೆ. ಆದರೆ ಈಗ ಕಾಲ ಬದ ಲಾಗಿದೆ. https://ainlivenews.com/naxal-captain-vikram-gowda-encounter-case-what-home-minister-parameshwar-said/ ಮೊಣಕಾಲು ನೋವು ಮತ್ತು ಮೂಳೆ ದೌರ್ಬಲ್ಯವು ಈಗ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ಇದು ಯಾವುದೇ ವಯಸ್ಸಿನ ವ್ಯಕ್ತಿಗೆ ಸಂಭವಿಸಬಹುದು. ನೀವೂ ಮಂಡಿ ನೋವಿನಿಂದ ಬಳಲುತ್ತಿದ್ದರೆ ಈ ಕೆಲವು ಟಿಪ್ಸ್ ನಿಮಗಾಗಿ ಹಸಿರು ಎಲೆಗಳ ತರಕಾರಿಗಳು ಮೂಳೆಗಳನ್ನು ಬಲಪಡಿಸುವಲ್ಲಿ ಹಸಿರು ಎಲೆಗಳ ತರಕಾರಿಗಳು ವಿಶೇಷ ಕೊಡುಗೆಯನ್ನು ಹೊಂದಿವೆ. ಇದನ್ನು ಸೇವಿಸುವುದರಿಂದ ನಮ್ಮ ದೇಹವು ಕ್ಯಾಲ್ಸಿಯಂ, ವಿಟಮಿನ್ ಮತ್ತು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ. ಹಾಲು ಮತ್ತು ಡೈರಿ ಉತ್ಪನ್ನ ಹಾಲು…
ಬೆಂಗಳೂರು:- ನಕ್ಸಲ್ ಕ್ಯಾಪ್ಟನ್ ವಿಕ್ರಂ ಗೌಡ ಎನ್‌ಕೌಂಟರ್ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. https://ainlivenews.com/excessive-air-pollution-even-the-air-you-breathe-is-getting-poisoned/ ಈ ಸಂಬಂಧ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ. ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ. ವಿಕ್ರಂ ಗೌಡ ಸಕ್ರಿಯರಾಗಿದ್ದ ಎಂದು ಪೊಲೀಸರು ಆತನನ್ನು ಹುಡುಕುತ್ತಿದ್ದರು ಎಂದರು ವಿಕ್ರಂ ಗೌಡ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದು, ಆತನ ಮೇಲೆ ನಿಗಾ ಇಟ್ಟಿದ್ದರು. ಈಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದಾರೆ.…
ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವು ದಾಖಲೆಗಳನ್ನೆಲ್ಲ ಮುರಿದು ನಾಗಾಲೋಟ ಮುಂದುವರಿಸಿದೆ. ವಾಯು ಮಾಲಿನ್ಯದ ಪ್ರಭಾವದಿಂದಾಗಿ ದೆಹಲಿಯ ಇಂಡಿಯಾ ಗೇಟ್ ಕೂಡ ಕಾಣಿಸದಂತಾಗಿದೆ. ಹೌದು ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಹುಲ್ಲು ಸುಡುವಿಕೆಯಿಂದೆ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಸತತ 6ನೇ ದಿನವೂ ವಾಯುಮಾಲಿನ್ಯ ಮುಂದುವರಿದಿದ್ದು ಉಸಿರಾಡುವ ಗಾಳಿ ವಿಷವಾಗುತ್ತಿದೆ. ಸೋಮವಾರ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 1,500ರ ಗಡಿ ದಾಟಿದೆ. ಸೋಮವಾರ ಬೆಳಗ್ಗೆ ದೆಹಲಿಯ ಮುಂಡ್ಕಾದಲ್ಲಿ ಎಕ್ಯೂಐ 1591 ಎಕ್ಯೂಐ, ದ್ವಾರಕ-8ನೇ ಸೆಕ್ಟಾರ್‌ನಲ್ಲಿ ಎಕ್ಯೂಐ 1,497 ಹಾಗೂ ರೋಹಿಣಿ ಸೆಕ್ಟಾರ್‌ನಲ್ಲಿ 1,427 ಎಕ್ಯೂಐ ದಾಖಲಾಗಿದೆ. ಗೋಚರತೆ ಪ್ರಮಾಣ ಇನ್ನಿಲ್ಲದಂತೆ ಕುಸಿದಿದೆ. ರಸ್ತೆ, ರೈಲು, ವೈಮಾನಿಕ ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಹೆಚ್ಚಿದ ವಾಯು ಮಾಲಿನ್ಯದಿಂದ ದೆಹಲಿ ಜನರಲ್ಲಿ ಉಸಿರಾಟ ಸಮಸ್ಯೆ ತೀವ್ರವಾಗಿದೆ. https://ainlivenews.com/do-you-know-doddapatre-has-the-ability-to-eliminate-the-biggest-health-problem/ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದೆ. ಅಪಾಯದ ಮಟ್ಟ…
ಮೊಹಮ್ಮದ್ ಶಮಿ ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದು ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ. ಇನ್ನು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪರಿಗಣಿಸಬಹುದು. ಅದರಂತೆ ಅವರು ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. https://ainlivenews.com/crime-news-a-75-year-old-woman-was-raped-by-a-beggar/ 2023 ರ ಏಕದಿನ ವಿಶ್ವಕಪ್ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಅಲ್ಲದೆ ವಿಶ್ವಕಪ್ ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಅವರು ಒಂದು ವರ್ಷಗಳ ಕಾಲ ಯಾವುದೇ ಸ್ಪರ್ಧಾತ್ಮಕ ಪಂದ್ಯವಾಡಿರಲಿಲ್ಲ. ಇದೀಗ ರಣಜಿ ಟೂರ್ನಿಯ ಮೂಲಕ ಕಂಬ್ಯಾಕ್ ಮಾಡಿರುವ ಶಮಿ, ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ರಣಜಿ ಟೂರ್ನಿ ಪಂದ್ಯದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿರುವ ಮೊಹಮ್ಮದ್ ಶಮಿ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಮುಂಬರುವ ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಒಂದು ವರ್ಷದಿಂದ…