Author: AIN Author

ನವದೆಹಲಿ:- ಗ್ಯಾಂಗ್‌ಸ್ಟರ್‌, ಯುಪಿ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. https://ainlivenews.com/heart-attack-in-bmtc-bus-60-year-old-man-dies/ ಐದು ಬಾರಿ ಗೆದ್ದು ಶಾಸಕರಾಗಿದ್ದ ಅವರು 2005 ರಿಂದ ರಾಜ್ಯ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದರು. ಯುಪಿಯ ಬಂಡಾದಲ್ಲಿರುವ ಜೈಲಿನಲ್ಲಿದ್ದ 63 ವರ್ಷದ ಅನ್ಸಾರಿಯನ್ನು ವಾಂತಿ-ಭೇದಿ ಸಮಸ್ಯೆಯಿಂದಾಗಿ ಗುರುವಾರ ರಾತ್ರಿ 8:25 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅನ್ಸಾರಿಯನ್ನು ಜೈಲು ಅಧಿಕಾರಿಗಳು ಜಿಲ್ಲೆಯ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿ ಸೇರಿಸಿದ್ದರು. ರೋಗಿಗೆ ಒಂಬತ್ತು ವೈದ್ಯರ ತಂಡವು ತಕ್ಷಣದ ವೈದ್ಯಕೀಯ ಆರೈಕೆ ಒದಗಿಸಿತು. ಆದರೆ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರೋಗಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Read More

ಬೆಂಗಳೂರು:- ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60ರ ವೃದ್ಧರೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮೃತ ವ್ಯಕ್ತಿಯನ್ನು ಕೃಷ್ಣ (60) ಎಂದು ಗುರುತಿಸಲಾಗಿದೆ. ವ್ಯಕ್ತಿ ಬಸ್‌ನಲ್ಲಿ ಟಿಕೆಟ್ ಪಡೆದು ಕುಳಿತಿದ್ದ 15 ನಿಮಿಷಗಳಲ್ಲೇ ಹೃದಯಾಘಾತ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಇತರೇ ಪ್ರಯಾಣಿಕರು ಬಸ್ಸಿನಲ್ಲೇ ಕಿರುಚಾಡಿದ್ದಾರೆ. https://ainlivenews.com/we-will-arrange-water-dont-leave-the-city/ ಮೆಜೆಸ್ಟಿಕ್‌ನಲ್ಲಿ ಬಸ್ ಹತ್ತಿದ್ದ ಮೃತ ವ್ಯಕ್ತಿ, ರಾಜಾಜೀನಗರದ ನವರಂಗ್ ವೃತ್ತದ ಬಳಿ ಬರುತ್ತಿದ್ದ ವೇಳೆ ಸಾವು ಸಂಭವಿಸಿದೆ. ಕೂಡಲೇ ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಕೊಡಿಸುವಷ್ಟರಲ್ಲಿ ವ್ಯಕ್ತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

Read More

ಕ್ಯಾರೆಟ್ ಒಂದು ಪ್ರಮುಖ ಮೂಲ ತರಕಾರಿ ಬೆಳೆ. ಕ್ಯಾರೆಟ್ ಅನ್ನು ಭಾರತದಾದ್ಯಂತ ಬೆಳೆಯಲಾಗುತ್ತದೆ, ಜನರು ಕ್ಯಾರೆಟ್ ಅನ್ನು ಹೆಚ್ಚು ಬಳಸುತ್ತಾರೆ. ಕ್ಯಾರೋಟಿನ್ ಮತ್ತು ವಿಟಮಿನ್ ಎ ಕ್ಯಾರೆಟ್‌ನಲ್ಲಿ ಕಂಡುಬರುತ್ತವೆ, ಇದು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾರೋಟಿನ್ ಪ್ರಮಾಣವು ಕಿತ್ತಳೆ ಬಣ್ಣದ ಕ್ಯಾರೆಟ್‌ನಲ್ಲಿ ಕಂಡುಬರುತ್ತದೆ, ಬಹಳಷ್ಟು ಪೋಷಕಾಂಶಗಳು ಕ್ಯಾರೆಟ್‌ನ ಹಸಿರು ಎಲೆಗಳಲ್ಲಿ ಕಂಡುಬರುತ್ತವೆ, ಉದಾಹರಣೆಗೆ ಪ್ರೋಟೀನ್‌ಗಳು, ಖನಿಜಗಳು ಮತ್ತು ವಿಟಮಿನ್‌ಗಳು ಇತ್ಯಾದಿ.  ಕ್ಯಾರೆಟ್‌ನ ಹಸಿರು ಎಲೆಗಳನ್ನು ಮೇವು ತಯಾರಿಸಲು ಬಳಸಲಾಗುತ್ತದೆ. ಕ್ಯಾರೆಟ್ ಮುಖ್ಯವಾಗಿ ಉತ್ತರ ಪ್ರದೇಶ, ಅಸ್ಸಾಂ, ಕರ್ನಾಟಕ, ಆಂಧ್ರಪ್ರದೇಶ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಉಪಯುಕ್ತವಾಗಿದೆ. ಹವಾಮಾನ ಕ್ಯಾರೆಟ್ ಮೂಲತಃ ಶೀತ ಹವಾಮಾನದ ಬೆಳೆ, ಇದರ ಬೀಜಗಳು 7.5 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಯಶಸ್ವಿಯಾಗಿ ಬೆಳೆಯುತ್ತವೆ.ಬೇರಿನ ಬೆಳವಣಿಗೆ ಮತ್ತು ಬಣ್ಣವು ತಾಪಮಾನದಿಂದ ಹೆಚ್ಚು ಪರಿಣಾಮ ಬೀರುತ್ತದೆ.15-20 ಡಿಗ್ರಿ ತಾಪಮಾನದಲ್ಲಿ ಬೇರುಗಳು ಗಾತ್ರ ಚಿಕ್ಕದಾಗಿರುತ್ತವೆ ಆದರೆ ಬಣ್ಣವು ಉತ್ತಮವಾಗಿರುತ್ತದೆ. ವಿವಿಧ ಪ್ರಭೇದಗಳ ಮೇಲೆ ತಾಪಮಾನದ ಪರಿಣಾಮ – ಬದಲಾಗುತ್ತದೆ. ಯುರೋಪಿಯನ್…

Read More

ಬೆಂಗಳೂರು :- ನೀರಿನ ಸಮಸ್ಯೆ ಎಂದು ನಗರ ತೊರೆಯಬೇಡಿ, ವ್ಯವಸ್ಥೆ ಮಾಡುತ್ತೇವೆ ಎಂದು ಐಟಿ ಕಂಪನಿಗಳಿಗೆ ಜಲ ಮಂಡಳಿ ಭರವಸೆ ಕೊಟ್ಟಿದೆ. ಮನೆಯಿಂದಲೇ ಕೆಲಸದ ಬೇಡಿಕೆ ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ ಅನೇಕ ಐಟಿ ಕಂಪನಿಗಳು ನೆಲೆಯನ್ನು ಬದಲಾಯಿಸಲು ನೆರೆಯ ರಾಜ್ಯಗಳಿಂದ ಆಹ್ವಾನ ಸ್ವೀಕರಿಸುತ್ತಿವೆ ಎಂಬ ವದಂತಿಗಳ ಬೆನ್ನಲ್ಲೇ, ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಗುರುವಾರ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದೊಂದಿಗೆ ಸಭೆ ನಡೆಸಿದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. https://ainlivenews.com/here-are-some-things-you-didnt-know-about-good-friday/ ನಗರದಲ್ಲಿರುವ ಐಟಿ ಕಂಪನಿಗಳಿಗೆ ಸಾಕಷ್ಟು ನೀರು ದೊರೆಯುವಂತೆ ಮಾಡಲಿದ್ದೇವೆ. ನಗರದಾದ್ಯಂತ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಕಂಪನಿಗಳಿಗೆ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಕಂಪನಿಗಳು ನೀರನ್ನು ಎಚ್ಚರಿಕೆಯಿಂದ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅನಗತ್ಯ ಉದ್ದೇಶಗಳಿಗಾಗಿ ನೀರಿನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು ನೀರಿನ ಮಿತ ಹಾಗೂ ಜಾಗೃತಿಯ ಬಳಕೆಯ ಬಗ್ಗೆ ನಿಮ್ಮ ಉದ್ಯೋಗಿಗಳಲ್ಲಿ ಜಾಗೃತಿ…

Read More

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಹಾಗೂ ಜೆಡಿ ಎಸ್ ಮೈತ್ರಿ ಹಾಲಲ್ಲಿ‌ ಸಕ್ಕರೆ ಆಗಬೇಕು ಹೊರತು ಹಾಲಲ್ಲಿ ಉಪ್ಪು ರೀತಿಯಲ್ಲಿ ಆಗಬಾರದು ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಬಿಜೆಪಿ- ಜೆಡಿಎಸ್‌ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸುಳ್ಳು ಕಾಂಗ್ರೆಸ್ ನ ಹಾಗೂ ಕಳ್ಳ ಕಾಂಗ್ರೆಸ್ ರಿಗರನ್ನ ಹೊರಹಾಬೇಕಾಗಿದ್ದು, ದೇವೆಗೌಡರ ಅವರ ಛಲವನ್ನ ಮೆಚ್ಚಲೇಬೇಕಾಗಿದೆ. ಈಗಾಲೂ ಪಾರ್ಟಿ‌ ಕಟ್ಟುತ್ತೇನೆ ಎಂದು ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನ ಪಾಲಿಸುತ್ತಿಲ್ಲಕಾಂಗ್ರೆಸ್ ಪಾರ್ಟಿ ಅಂದ್ರೆ ಭ್ರಷ್ಟಾಚಾರ ,ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಪಾರ್ಟಿ 12 ಲಕ್ಷ್ ಕೋಟಿ ಭ್ರಷ್ಠಾಚಾರವನ್ನ ಹಿಂದೆ ಯುಪಿಎ ಸರ್ಕಾರ ಮಾಡಿತ್ತು ಯುಪಿಎ ಹತ್ತು ವರ್ಷದಲ್ಲಿ ಇದ್ದಾಗ ನಮ್ಮ ದೇಶ ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿತ್ತುಕಾಂಗ್ರೆಸ್ ನಲ್ಲಿ ಹಾಗೇ ಇದೆ ಯಾರಿಗೆ ಅಧಿಕಾರ ಇತ್ತು ಅವರು ಜವಾಬ್ದಾರಿ ಇರಲಿಲ್ಲಾ ಯಾರಿಗೆ ಜವಾಬ್ದಾರಿ ಇತ್ತು ಅವರಿಗೆ ಅಧಿಕಾರ ಇರಲಿಲ್ಲಾ ಇದು ಕಾಂಗ್ರೆಸ್…

Read More

ಕ್ರೈಸ್ತ ಧರ್ಮದಲ್ಲಿ ಗುಡ್ ಫ್ರೈಡೇಗೆ ವಿಶೇಷ ಮಹತ್ವವಿದೆ. ಗುಡ್ ಫ್ರೈಡೇಯನ್ನು ಈಸ್ಟರ್‌ ಭಾನುವಾರದ ಮೊದಲು ಮತ್ತು ಪವಿತ್ರ ಗುರುವಾರದ ನಂತರ ಆಚರಿಸಲಾಗುವುದು. ಕ್ರೈಸ್ತ ಧರ್ಮದಲ್ಲಿ ಗುಡ್‌ ಫ್ರೈಡೇಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಗುಡ್‌ ಫ್ರೈಡೇ 7 ದಿನಗಳ ಹಬ್ಬವಾಗಿದ್ದು, ಇದು ಪವಿತ್ರ ಭಾನುವಾರ, ಪವಿತ್ರ ಸೋಮವಾರ, ಪವಿತ್ರ ಮಂಗಳವಾರ, ಪವಿತ್ರ ಬುಧವಾರ, ಪವಿತ್ರ ಗುರುವಾರ, ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರದಂತಹ ಕೆಲವು ಪ್ರಮುಖ ದಿನಗಳನ್ನು ಒಳಗೊಂಡಿರುವುದರಿಂದ ಶುಭ ಶುಕ್ರವಾರ ವಾರವು ಅತ್ಯಂತ ಮಹತ್ವದ್ದಾಗಿದೆ. ಈ ಹಬ್ಬದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿ ಗುಡ್‌ ಫ್ರೈಡೇ ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಗುಡ್‌ ಫ್ರೈಡೇಯನ್ನು ಆಚರಿಸುವ ಮುನ್ನ ಪಾಮ್‌ ಸಂಡೇ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಈ ಪಾಮ್‌ ಸಂಡೆಯನ್ನು 2024 ರಲ್ಲಿ ಮಾರ್ಚ್‌ 24 ರಂದು ಆಚರಿಸಲಾಗಿದ್ದು, ಈ ದಿನ ಯೇಸು ಕ್ರಿಸ್ತನು ಜೆರುಸೆಲೆಮ್‌ನ್ನು ಪ್ರವೇಶಿಸಿದರು ಎನ್ನಲಾಗುತ್ತದೆ. ಗುಡ್‌ ಫ್ರೈಡೇ ನಂತರ 2024 ರ ಮಾರ್ಚ್‌…

Read More

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 200ನೇ ಪಂದ್ಯವಾಡಿದ ಮೊದಲ ಆಟಗಾರ ಎಂಬ ದಾಖಲೆಗೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 200ನೇ ಪಂದ್ಯವನ್ನು ಸ್ಮರಣೀಯವಾಗಿಸಲು ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್, 200ನೇ ಸಂಖ್ಯೆಯ ಜೆರ್ಸಿಯನ್ನು ರೋಹಿತ್ ಶರ್ಮಾಗೆ ನೀಡಿ ಅಭಿನಂದಿಸಿದ್ದಾರೆ. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡುವ ಮೂಲಕ ಚೊಚ್ಚಲ ಟ್ರೋಫಿ ಗೆದ್ದಿದ್ದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ರೋಹಿತ್ ಶರ್ಮಾ ತಮ್ಮ 200ನೇ ಪಂದ್ಯ ಆಡಿರುವುದು ವಿಶೇಷವಾಗಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೊರೆಯನ್ನು ರೋಹಿತ್ ಶರ್ಮಾರಿಂದ ಕೆಳಗಿಳಿಸಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದಿದ್ದ ವಿಶೇಷ ಸಮಾರಂಭದ ವಿಡಿಯೋವನ್ನು ಮುಂಬೈ ಫ್ರಾಂಚೈಸಿ ಅಪ್ ಲೋಡ್ ಮಾಡಿದೆ. ವಿಡಿಯೋದಲ್ಲಿ ಕೆಲ ಸಮಯದ ಸಂವಾದದ ನಂತರ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರು…

Read More

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹದಿನೇಳನೇ ಆವೃತ್ತಿಯಲ್ಲಿ ಅತ್ಯುತ್ತಮ ಲಯದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಶಿವಂ ದುಬೆ, ಮುಂದಿನ ಕೆಲವು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ಟೂರ್ನಿಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 26) ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ (46 ರನ್), ರಚಿನ್ ರವೀಂದ್ರ (46 ರನ್) ಹಾಗೂ ಶಿವಂ ದುಬೆ (51 ರನ್) ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಿಗೆ 206 ರನ್ ಗಳಿಸಿತ್ತು. ಈ ಕಠಿಣ ಗುರಿ ಹಿಂಬಾಲಿಸಿದ್ದ ಶುಭಮನ್ ಗಿಲ್ ಪಡೆ, ಸಿಎಸ್‌ಕೆಯ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಪಂದ್ಯದ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ 63 ರನ್‌ಗಳ ಸೋಲು ಕಂಡಿತು. ಶಿವಂ ದುಬೆ ಪಂದ್ಯ ಶ್ರೇಷ್ಠ ಪ್ರಶಸ್ತಿ…

Read More

ಬೆಂಗಳೂರು:- ಯುಗಾದಿ ಹಬ್ಬಕ್ಕೆ ಎಂದು ಮಾಂಸ ಚೀಟಿ ಹಾಕಿದವರಿಗೆ ರಾತ್ರಿ ಶಾಕ್ ನೀಡಲಾಗಿದೆ. ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಸಾಮಗ್ರಿ, ಮಾಂಸಕ್ಕಾಗಿ ಚೀಟಿ ಹಾಕಿದ್ದ ಸಾವಿರಾರು ಜನ ಈಗ ಮೋಸ ಹೋಗಿದ್ದಾರೆ. https://ainlivenews.com/ipl-2024-rcb-kkr-fight-today-in-bengaluru/ ಹೌದು, ಯುಗಾದಿ ಹಬ್ಬದ ಚೀಟಿ ಮಾಡುತ್ತಿದ್ದ ಪುಟ್ಟಸ್ವಾಮಿ ಎಂಬಾತ ಎಲ್ಲರಿಗೂ ಮೋಸ ಮಾಡಿ ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದು, ಈ ಸಂಬಂಧ ಬ್ಯಾಟರರಾಯನಪುರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಒಬ್ಬೊಬ್ಬರ ಬಳಿ 4 ರಿಂದ 5 ಸಾವಿರ ಹಣ ಪಡೆದು ಮೋಸ ಮಾಡಿದ್ದು, ಬೆಂಗಳೂರಿನ ಗಿರಿನಗರದಲ್ಲಿ ಈ ಘಟನೆ ನಡೆದಿದೆ ಪುಟ್ಟಸ್ವಾಮಿ ಓಡಿ ಹೋಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮೋಸ ಹೋದವರೆಲ್ಲ ಆತನ ಮನೆ ಮುಂದೆ ಜಮಾಯಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪುಟ್ಟಸ್ವಾಮಿ ಯುಗಾದಿ ಚೀಟಿ ನಡೆಸುತ್ತಿದ್ದ. ಈ ಬಾರಿ ಚೀಟಿ ಸಂಖ್ಯೆನ್ನೂ ಹೆಚ್ಚಿಸಿಕೊಂಡು ಕೋಟ್ಯಾಂತರ ರೂಪಾಯಿ ಗುಳುಂ ಮಾಡಿದ್ದಾನೆ. ಯುಗಾದಿ ಹತ್ತಿರ ಬಂದಿದ್ದೆ ಪುಟ್ಟಸ್ವಾಮಿ ಎಸ್ಕೇಪ್ ಆಗಿದ್ದು, ಹಬ್ಬಕ್ಕೆ ದುಡ್ಡು ಒಂದೇ ಬಾರಿಗೆ ಹೊಂದಿಸೋಕೆ ಆಗಲ್ಲ…

Read More

ಮನೆಯಲ್ಲೇ ಕುಳಿತು ʻVOTER IDʼ ಫೋಟೋ ಬದಲಾಯಿಸುವುದು ಹೇಗೆ ಎಂಬುವ ವಿಚಾರ ತಿಳಿದುಕೊಳ್ಳಲು ಈ ಸುದ್ದಿ ಪೂರ್ತಿ ಓದಿ ನೀವು ಚುನಾವಣೆಯ ಸಮಯದಲ್ಲಿ ಮತ ಚಲಾಯಿಸಲು ಬಯಸಿದರೆ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗುತ್ತದೆ.ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ತಪ್ಪು ಫೋಟೋ ಅಥವಾ ಮಸುಕು ಇದ್ದರೆ. ಅಥವಾ ನಿಮ್ಮ ಫೋಟೋ ನಿಮಗೆ ಇಷ್ಟವಾಗದಿದ್ದರೆ ಮತ್ತು ನಿಮ್ಮ ಫೋಟೋ ಬದಲಾಗಬೇಕೆಂದು ನೀವು ಬಯಸಿದರೆ ನೀವು ಇದನ್ನು ಮಾಡಬಹುದು.ಮತದಾರರ ಗುರುತಿನ ಚೀಟಿಯ ಫೋಟೋವನ್ನು ನೀವು ಸುಲಭವಾಗಿ ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ. https://ainlivenews.com/3-thousand-rupees-will-be-added-to-farmers-account-in-old-age-this-is-a-wonderful-scheme-of-the-central-government/ ಮನೆಯಲ್ಲಿಯೇ ಮತದಾರರ ಗುರುತಿನ ಚೀಟಿ ಡೌನ್ಲೋಡ್ ಮಾಡುವುದು ಹೇಗೆ? 1. ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಲು, ಮೊದಲು ನಿಮ್ಮ ಲ್ಯಾಪ್ಟಾಪ್ ಅಥವಾ ಫೋನ್ನಲ್ಲಿ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (https://voters.eci.gov.in/) ತೆರೆಯಿರಿ. 2. ಇದರ ನಂತರ, ಈಗ ನೀವು ಈ ಪೋರ್ಟಲ್ನ ಬಲ ತುದಿಯಲ್ಲಿ ಕಾಣಿಸಿಕೊಳ್ಳುವ ಇ-ಎಪಿಕ್ ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್…

Read More