Author: AIN Author

ಬೆಂಗಳೂರು: ಕೋಲಾರ ದಂಗಲ್ ಸದ್ಯ ನಿಲ್ಲುವ ಲಕ್ಷಣ ಕಾಣ್ತಿಲ್ಲ.ಸಚಿವ ಮುನಿಯಪ್ಪ ಕುಟುಂಬಕ್ಕೆ ಕೋಲಾರ ಟಿಕೆಟ್ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು.ಅಲ್ದೇ ಕೆ.ಎಚ್.ಮುನಿಯಪ್ಪ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಯೆಸ್,ಲೋಕಸಭೆ ಚುನಾವಣೆಯ ಅಖಾಡ ರಂಗೇರಿದೆ.ಇಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.ಆದ್ರೆ,ಕಾಂಗ್ರೆಸ್ ಪಕ್ಷದಲ್ಲಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಅದ್ರಲ್ಲೂ ಕೋಲಾರ ರಾಜಕಾರಣದಲ್ಲಿ ಸಚಿವ ಮುನಿಯಪ್ಪ ವಿರುದ್ಧ ಇಡೀ ಜಿಲ್ಲೆಯ ಸಚಿವರು,ಶಾಸಕರು ತಿರುಗಿಬಿದ್ದಿದ್ದಾರೆ.ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಕೊಡುತ್ತಿದ್ದಾರೆ ಅನ್ನೋ ವಿಚಾರ ಕೇಳುತ್ತಿದ್ದಂತೆ ನಿನ್ನೆ ಶಾಸಕರು ವಿಧಾನಸೌಧದಲ್ಲಿ ರಾಜೀನಾಮೆಯ ಹೈಡ್ರಾಮಾ ನಡೆಸಿದ್ರು.ಈ ಹಿನ್ನಲೆಯಲ್ಲಿ ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು. https://ainlivenews.com/we-will-arrange-water-dont-leave-the-city/ ಇನ್ನು ನಿನ್ನೆ ವಿಧಾನಸೌಧದಲ್ಲಿ ರಾಜೀನಾಮೆ ಹೈಡ್ರಾಮಾ ನಡೆಸಿದ್ದ ಶಾಸಕರು ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಲಾಸ್ ತೆಗದುಕೊಂಡಿದ್ದಾರೆ.ಏನೇ ಸಮಸ್ಯೆ ಇದ್ರೆ ಪಕ್ಷದ ವೇದಿಕೆಯಲ್ಲಿ ಚರ್ಚೆ…

Read More

ಉಡುಪಿ: ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ತೃಪ್ತಿ ಲೇಔಟ್‌ನಲ್ಲಿ 2023ರ ನವೆಂಬರ್ 12 ರಂದು ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕ್ಯಾಬಿನ್‌ ಕ್ರೂ ಪ್ರವೀಣ್‌ ಅರುಣ್‌ ಚೌಗುಲೆ (39) ಯನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯದ ಮುಂದೆ ಆರೋಪಿ ಪ್ರವೀಣ್‌ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಆರೋಪಿ ಮೇಲಿನ ಆಪಾದನೆ ವಾಚಿಸುವ ಪ್ರಕ್ರಿಯೆಗೆ ಮುನ್ನ ಪ್ರವೀಣ್‌ ಚೌಗುಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಆರೋಪಿ ಚೌಗುಲೆಯನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್‌ ವೃತ್ತ ನಿರೀಕ್ಷಕ ಕೃಷ್ಣ ಎಸ್‌. ಕೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರು. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಈ ಸಂದರ್ಭ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಆರೋಪಿ ಮೇಲಿನ ಅಪಾದನೆಯನ್ನು ವಾಚಿಸಿದರು. ಆಗ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ನಾನು…

Read More

ಬೆಂಗಳೂರು: ಲೋಕಸಭಾ ಚುನಾವಣೆ ಸಿದ್ದತೆ ಹಿನ್ನೆಲೆ  ಇಂದು ಬಿಜೆಪಿ- ಜೆಡಿಎಸ್ ನಾಯಕರ ಮಹತ್ವದ ಸಮನ್ವಯ ಸಭೆ ನಡೆಯಲಿದ್ದು  ಸಭೆ ನಡೆಸಲಿರುವ ಕಮಲದಳ ನಾಯಕರು ಬೆಳಗ್ಗೆ 11.30 ಕ್ಕೆ ಖಾಸಗಿ ಹೋಟೆಲ್ ನಲ್ಲಿ ನಡೆಯಲಿರುವ ಸಭೆಯಾಗಿದ್ದುಈ  ಸಭೆಯಲ್ಲಿ ಭಾಗಿಯಾಗಲಿರುವ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ, ಜೆಡಿಎಸ್ ರಾಜ್ಯಾದ್ಯಕ್ಷ ಮಾಜಿ ಸಿಎಂ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿ ಹಲವರು ಭಾಗಿಯಾಗಲಿದ್ದಾರೆ ಲೋಕಸಭಾ ಚುನಾವಣೆ ಸಿದ್ದತೆ, ಪ್ರಚಾರ ಸೇರಿದಂತೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯತೆ ಸಾಧಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲಿರುವ ನಾಯಕರು.

Read More

ಮೈಸೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 6 ಮಂದಿ ಮಹಿಳೆಯರನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಈ ಬಾರಿಯ ಧರ್ಮಯುದ್ಧ ಆರಂಭವಾಗುವ ಮುನ್ನ ನಾನು ರಾಜ್ಯದ ವಿವಿಧ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 6 ಮಂದಿ ಮಹಿಳೆಯರನ್ನು ಕಣಕ್ಕಿಳಿಸುತ್ತಿದ್ದೇವೆ. ತಾಯಿ ಚಾಮುಂಡಿ ಈ ನಾಡಿನ ದೇವತೆ. ಆಕೆಯ ಆಶೀರ್ವಾದದಿಂದ ನಾವು 136 ಸೀಟುಗಳನ್ನು ಗೆದ್ದು ಜನರ ಸೇವೆ ಮಾಡುತ್ತಿದ್ದೇವೆ ” ಎಂದು ಡಿಕೆಶಿ ಹೇಳಿದ್ದಾರೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ನಾವು ಮೈಸೂರಿನಲ್ಲಿ ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರು ಯಾರು? ಪಕ್ಷದ ಧ್ವಜ ಹಿಡಿದು ಪಕ್ಷದ ಪರವಾಗಿ ತಮ್ಮ ಧ್ವನಿ ಎತ್ತಿಕೊಂಡು ಬಂದಿದ್ದಾರೆ. ಇಲ್ಲಿ ಲಕ್ಷ್ಮಣ್ ಅವರು ಮಾತ್ರವಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕೂಡ ಅಭ್ಯರ್ಥಿ, ನಿಮಗೆ ನೀವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿ. ನಾವೆಲ್ಲ ಒಗ್ಗಟ್ಟಾಗಿ ಇವರ ಕೈ ಬಲಪಡಿಸೋಣ ಎಂದು…

Read More

ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರು ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ, ಈ ಆಧಾರದಲ್ಲಿ ಹೇಳುತ್ತೇನೆ. ಡಿಕೆ ಸುರೇಶ್ ಅವರು ಗೆಲುವು ಶತಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆ ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ.‌ ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಇವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು. ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೇವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿಕೊಳ್ಳಿ ಎಂದರು. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ನಾವು ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಕನ್ನಡ ನಾಡಿನ‌ ಜನತೆಯ ಖಾತೆಗೆ ಹಣ ಜಮೆ…

Read More

ಗುಡ್ ಫ್ರೈಡೇ ಎಂಬುದು ಯೇಸುಕ್ರಿಸ್ತನ ಶಿಲುಬೆಗೇರಿಸಿದ ದಿನ, ಅವನ ಮರಣ ಮತ್ತು ಅವನ ಸಮಾಧಿಯನ್ನು ಸ್ಮರಿಸಲು ಪ್ರಪಂಚದಾದ್ಯಂತದ ಕ್ರಿಶ್ಚಿಯನ್​​ ಸಮುದಾಯ ಆಚರಿಸುವ ದಿನವಾಗಿದೆ. ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಇದನ್ನು ಆಚರಿಸಲಾಗುತ್ತದೆ ಮತ್ತು ಪವಿತ್ರ ವಾರದ ಅಂತ್ಯವನ್ನು ಸೂಚಿಸುತ್ತದೆ., ಪವಿತ್ರ ಶುಕ್ರವಾರದಂತಹ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಗುಡ್ ಫ್ರೈಡೇ ಮತ್ತು ಈಸ್ಟರ್ ಶುಕ್ರವಾರವನ್ನು ಮಾರ್ಚ್‌ 24ರಂದು ಆಚರಿಸಲಾಗುತ್ತದೆ, ಏಕೆಂದರೆ ಈಸ್ಟರ್ ಭಾನುವಾರ, ಮಾರ್ಚ್‌ 31 ರಂದು ಆಚರಿಸಲಾಗುತ್ತದೆ. ಗುಡ್‌ ಫ್ರೈಡೇ ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಗುಡ್‌ ಫ್ರೈಡೇಯನ್ನು ಆಚರಿಸುವ ಮುನ್ನ ಪಾಮ್‌ ಸಂಡೇ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಈ ಪಾಮ್‌ ಸಂಡೆಯನ್ನು 2024 ರಲ್ಲಿ ಮಾರ್ಚ್‌ 24 ರಂದು ಆಚರಿಸಲಾಗಿದ್ದು, ಈ ದಿನ ಯೇಸು ಕ್ರಿಸ್ತನು ಜೆರುಸೆಲೆಮ್‌ನ್ನು ಪ್ರವೇಶಿಸಿದರು ಎನ್ನಲಾಗುತ್ತದೆ. ಗುಡ್‌ ಫ್ರೈಡೇ ನಂತರ 2024 ರ ಮಾರ್ಚ್‌ 31 ರಂದು ಭಾನುವಾರ ಈಸ್ಟರ್‌ನ್ನು ಆಚರಿಸಲಾಗುವುದು. ಹಾಗೇ 2024ರ ಗುಡ್‌ ಫ್ರೈಡೇಯನ್ನು ಮಾರ್ಚ್‌ 29 ರಂದು ಶುಕ್ರವಾರ…

Read More

ಹಾಸನ: ಲೋಕಸಭಾ ಚುನಾವಣೆಗೆ (Lok Sabha Election) ಅಖಾಡ ರಂಗೇರಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಆರಂಭಿಸಿದ್ದಾರೆ. ಅದೇ ರೀತಿ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 40.94 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿರುವುದಾಗಿ ನಾಮಪತ್ರದ ಅಫಿಡವಿಟ್‌ನಲ್ಲಿ (Affidavit) ಮಾಹಿತಿ ನೀಡಿದ್ದಾರೆ. 5.44 ಕೋಟಿ ರೂ. ಮೌಲ್ಯದ ಚರ ಹಾಗೂ 40.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 40.94 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಜ್ವಲ್ ರೇವಣ್ಣ ಹೇಳಿಕೊಂಡಿದ್ದಾರೆ. ಸದ್ಯ 9.29 ಲಕ್ಷ ರೂ. ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 57 ಲಕ್ಷ ರೂ. ನಗದು ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂ. ಆದಾಯಗಳಿಸಿರುವುದಾಗಿ ಹೇಳಿಕೊಂಡಿರುವ ಪ್ರಜ್ವಲ್, ಕೃಷಿಯೇತರ ಮೂಲದಿಂದ 1.33 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದೇನೆ ಎಂದಿದ್ದಾರೆ. ಹಾಗೆಯೇ…

Read More

ಅನ್ನ- ಮನುಷ್ಯನ ದಿನನಿತ್ಯದ ಸಾಮಾನ್ಯ ಆಹಾರ. ಒಂದು ಬೊಗಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಲೆಯ ಮೇಲೆ ನೀರು ಇಟ್ಟು ಅದಕ್ಕೆ ಅಕ್ಕಿ ಸ್ವಲ್ಪ ಉಪ್ಪು ಹಾಕಿ ಇಪ್ಪತ್ತು ನಿಮಿಷ ಬೇಯಿಸಿದರೆ ಮಲ್ಲಿಗೆ ಹೂವಿನ ಹದ ಹೊಂದಿರುವ ಅನ್ನ ತಯಾರಾಗುತ್ತದೆ. ನಾವು ತಿನ್ನುವುದು ಅನ್ನ ಮಾತ್ರ ಆಗಿರುವುದರಿಂದ ಅಕ್ಕಿಯನ್ನು ಅನ್ನ ಮಾಡಲು ಸಹಾಯ ಮಾಡಿದ ನೀರನ್ನು ಅಂದರೆ ಗಂಜಿಯನ್ನು ಹೊರಗಡೆ ಚೆಲ್ಲಿ ಬಿಡುತ್ತೇವೆ. ಇದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುವ ಭಾವನೆ ನಮ್ಮ ಮನಸ್ಸಿನಲ್ಲಿ ಬೇರೂರಿರುತ್ತದೆ. ಆದರೆ ನಮ್ಮೆಲ್ಲರ ತಿಳುವಳಿಕೆ ತಪ್ಪು.ಅನ್ನದ ಗಂಜಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಕಂಡುಬರುತ್ತವೆ ಜೊತೆಗೆ ಸ್ಟಾರ್ಚ್ ಅಂಶ ಕೂಡ ಇದೆ. ಇದು ನಮ್ಮ ಆರೋಗ್ಯಕ್ಕೆ ಬಹಳ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ಅನ್ನದ ಗಂಜಿಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮಕ್ಕಳಿಗೆ ಅಕ್ಕಿ ನೀರನ್ನು ಏಕೆ ನೀಡಲಾಯಿತು? ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ, ತಮ್ಮ ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಬೆಚ್ಚಗಿನ ಅಕ್ಕಿ ನೀರು ಅಥವಾ…

Read More

ಬೆಂಗಳೂರು : ಐಪಿಎಲ್​ನ 10ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದು ಆರ್‌ಸಿಬಿಯ ಮೂರನೇ ಪಂದ್ಯವಾಗಿದ್ದು, ಕೆಕೆಆರ್ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಗೆಲುವಿನ ಲಯಕ್ಕೆ ಮರಳಿದೆ. ಇತ್ತ, ಕೆಕೆಆರ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದೆ. RCB ಆಡಿರುವ ಎರಡು ಪಂದ್ಯಗಳಿಂದ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಒಂದು ಪಂದ್ಯ ಗೆದ್ದು 2 ಅಂಕಗಳೊಂದಿಗೆ (ರನ್​ ರೇಟ್ ಆಧಾರದಲ್ಲಿ) 4ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೇಲೇಳಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ. RCB vs KKR ಬಲಾಬಲ ಈವರೆಗೆ RCB 14 ಹಾಗೂ 18 ಪಂದ್ಯಗಳಲ್ಲಿ KKR ಗೆಲುವು ದಾಖಲಿಸಿದೆ. ನೈಟ್ ರೈಡರ್ಸ್ ಕಳೆದ ಆವೃತ್ತಿಯಲ್ಲಿ RCB ಮೇಲೆ ಎರಡೂ ಪಂದ್ಯ ಗೆದ್ದಿದೆ. ಆ ಪಂದ್ಯದಲ್ಲಿ 200ಕ್ಕೂ…

Read More

ಬೆಂಗಳೂರು:- ಅಮಾನವೀಯವಾಗಿ ವರ್ತಿಸಿ 70 ವರ್ಷದ ವೃದ್ಧನಿಗೆ ಕಿರುಕುಳ ನೀಡಿದ್ದ ಮಾರ್ಷಲ್ ನನ್ನು ವಜಾ ಮಾಡಲಾಗಿದೆ. ಕಳೆದ ಮೂರು ದಿನದ ಹಿಂದೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ನಡೆದಿದ್ದ ಘಟನೆ ಇದಾಗಿದೆ. https://ainlivenews.com/background-of-illegal-beef-sale-more-than-60-cattle-slaughtered/ ಅಜ್ಜ ಕೇಳಿಕೊಂಡ್ರು ಬಿಡದೇ ಮಾರ್ಷಲ್ ಗಳು ದೌರ್ಜನ್ಯ ನಡೆಸಿದ್ದಾರೆ. ವ್ಯಾಪಾರಿಯ ಬ್ಯಾಗ್ ಕಸಿಯಲು ಮಾರ್ಷಲ್ ಮುಂದಾಗಿದ್ದ. ಓಡಾಡಿಕೊಂಡು ವ್ಯಾಪಾರ ಮಾಡ್ತೀನಿ ಅಜ್ಜನ ಮನವಿಗೆ ಮಾರ್ಷಲ್ ಗಳು ಕೇರ್ ಮಾಡಿಲ್ಲ. ಇದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಮಾರ್ಷಲ್ ಎತ್ತಂಗಡಿ ಮಾಡಲಾಗಿದೆ. ಎಲ್ಲಾ ವಲಯದ ಮಾರ್ಷಲ್ ಗಳಿಗೂ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ.

Read More