Author: AIN Author

ಬಳ್ಳಾರಿ: ಜೈ ಶ್ರೀ ರಾಮ್ ಎನ್ನುವ ಇವರು ಮಾರೆಮ್ಮ, ದುರ್ಗಮ್ಮ, ಪಾಂಡುರಂಗ ದೇವರಿಗೆ ಯಾಕೆ ಜೈಕಾರ ಹಾಕುವುದಿಲ್ಲ. ಯಾಕೆ ವೋಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ.?ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಸಂಡೂರು ಸಮೀಪದ ಕೃಷ್ಣಾನಗರದ ಶಾಸಕರ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆ ಪೂರ್ವಬಾವಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.‌ ಇನ್ನೂ ಸಭೆಯಲ್ಲಿ ಚುನಾವಣೆಯಲ್ಲಿ ಅವರು ಹಣ ಕೊಡ್ತಾರೆ, ನಾವು ಕೊಡ್ತೇವೆ, ಮತದಾರರು ಮಾತ್ರ ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು ಎಂದು ಚುನಾವಣೆ ಪ್ರಚಾರದ ವೇಳೆ ಸಚಿವ ಸಂತೋಷ ಲಾಡ್ ಹಣ ಹಂಚಿಕೆ ಬಗ್ಗೆ ಬಹಿರಂಗ ಮಾತುಗಳಾನ್ನಾಡಿದರು. ಇದೇ ವೇಳೆ ಇ.ತುಕರಾಮ್ ಅವರನ್ನು ಲೋಕಸಭೆಗೆ ಆಯ್ಕೆ ಮಾಡಲು ಶ್ರಮಿಸುವಂತೆ ವಿನಂತಿಸಿದರು.

Read More

ಗದಗ: ಚಿರತೆ ಪ್ರತ್ಯಕ್ಷವಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಹಾಗೂ ಕುಂಟೋಜಿ ಗ್ರಾಮಗಳ ನಡುವಿನ ಮೋಕಾ ಗುಡ್ಡ ಪ್ರದೇಶದಲ್ಲಿ ನಡೆದಿದೆ. ರಸ್ತೆಯ ಪಕ್ಕದಲ್ಲೇ ಇರೋ ಬೆಟ್ಟವಾಗಿದ್ದು, ಬೆಟ್ಟದ ಮೇಲೆ ಚಿರತೆ ಓಡಾಡ್ತಿತ್ತು. ಈ ಹಿಂದೆ ಇದೇ ಮೋಕಾ ಪ್ರದೇಶದಲ್ಲಿ ಓಡಾಡಿದ್ದ ಚಿರತೆ, ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದನ್ನು ಕಂಡು ಜಮೀನುಗಳಿಗೆ ಹೋಗಲು ಭಯಪಡ್ತಿರೋ ಜನ್ರು. ರಸ್ತೆಯುದ್ದಕ್ಕೂ ನಿಂತು ಚಿರತೆ ವೀಕ್ಷಣೆಗೆ ಜನರು ಮುಂದಾಗಿದ್ದರು. ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡ್ತಿದ್ದಾರೆ. ಇನ್ನೂ ಚಿರತೆ ವಿಡಿಯೋ ಫುಲ್‌ ವೈರಲ್‌ ಆಗಿದೆ.

Read More

ಚಾಮರಾಜನಗರ: ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹನೂರು ಕಾಂಗ್ರೆಸ್ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ ನರಮೇಧ ಮಾಡಿದವರು ಯಾರು? ಇಂತಹವರು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಕ್ರಿಮಿನಲ್ ಚಟುವಟಿಕೆಯುಳ್ಳ ಇಂತಹವರನ್ನು ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು, ಅದು ಆಗಲಿಲ್ಲ. ಈಗ ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡೋದು ಕೇಂದ್ರ ಸರ್ಕಾರದ ಹೊಣೆ ಅಲ್ಲ ಎಂದು ಹೇಳ್ತಿದ್ದಾರೆ. ಕಪ್ಪು ಹಣ ವಾಪಸ್ ತರುತ್ತೇವೆ ಎಂದಿದ್ದರು, ತಂದ್ರಾ? ಸ್ವಿಸ್ ಬ್ಯಾಂಕ್‍ನಲ್ಲಿ ಯಾರ ಖಾತೆಯಿದೆ ಎಂದು ಪಟ್ಟಿ ಕೂಡ ರಿಲೀಸ್ ಮಾಡಲಿಲ್ಲ. ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಹೋಗಿದೆ ಎಂದಿದ್ದಾರೆ. 400ಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ, 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡುವುದು ಇವರ ಹಿಡನ್ ಅಜೆಂಡಾ ಆಗಿದೆ. ದೇಶದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಎಂದರೆ ಅದು ಮೋದಿ ಸರ್ಕಾರ ಎಂದು…

Read More

ಬೆಂಗಳೂರು: ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy stadium) ಇಂದು (ಮಾ.29) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಎದುರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸಜ್ಜಾಗಿದೆ. https://ainlivenews.com/explosive-half-century-and-the-help-of-the-bowlers-gives-rajasthan-royals-a-huge-win/ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಇದು 3ನೇ ಪಂದ್ಯವಾಗಿದ್ದು, ತವರಿನಲ್ಲಿ ನಡೆಯುತ್ತಿರುವ 2ನೇ ಪಂದ್ಯವಾಗಿದೆ. ಇನ್ನೂ ಕೆಕೆಆರ್‌ಗೆ ಆವೃತ್ತಿಯ 2ನೇ ಪಂದ್ಯವಾಗಿದೆ. ಇತ್ತಂಡಗಳು ಈವರೆಗೆ ಒಟ್ಟು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ರಲ್ಲಿ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ 18 ಪಂದ್ಯಗಳಲ್ಲಿ ಜಯಗಳಿಸಿದೆ. ಕೆಕೆಆರ್ ವಿರುದ್ಧ ಬೆಂಗಳೂರು ತಂಡ ಗರಿಷ್ಠ ರನ್‌ 213 ಆಗಿದ್ದರೆ, ಬೆಂಗಳೂರು ತಂಡದ ವಿರುದ್ಧ ಕೆಕೆಆರ್‌ ಗಳಿಸಿರುವ ಗರಿಷ್ಠ ರನ್‌ 222 ರನ್‌ ಆಗಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಕೆಕೆಆರ್‌ ಪಡೆ, ತನ್ನ ತವರು ಮೈದಾನದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಜಯ ಸಾಧಿಸಿತ್ತು. ಅತ್ತ ಆರ್‌ಸಿಬಿ ತಂಡವು ಆಡಿರುವ 2 ಪಂದ್ಯಗಳಲ್ಲಿ, ಪಂಜಾಬ್‌ ವಿರುದ್ಧದ ಕೊನೆಯ…

Read More

ದೊಡ್ಡಬಳ್ಳಾಪುರ: ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ನಸೀರ್ ಸಾಬ್ ಮತ್ತು ಕೋಲಾರ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆಸುತ್ತಿರುವರ ಶಾಸಕರ ವಿರುದ್ಧ ಮಾದಿಗ ಸಮುದಾಯ ಪ್ರತಿಭಟನೆ ನಡೆಸಿದರು. ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯ ಮುಖಂಡರು ಪ್ರತಿಭಟನೆ ನಡೆಸಿದರು.. ಕೆ.ಹೆಚ್. ಮುನಿಯಪ್ಪ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ನಸೀರ್ ಅಹಮ್ಮದ್ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ. ಮಾದಿಗ ಸಮುದಾಯ ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕೆ.ಹೆಚ್. ಮುನಿಯಪ್ಪ 7 ಬಾರಿ ಸಂಸದರಿಗೆ ಅಯ್ಕೆಯಾದವರು, 10 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ರಾಜಕೀಯ ಮುತ್ಸದಿ ಅವರು, ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಕೀಳು ಅಭಿರುಚಿಯನ್ನ ವ್ಯಕ್ತಪಡಿಸಿದ್ದಾರೆ, ಇದು ಮಾದಿಗ ಸಮುದಾಯಕ್ಕೆ ಮಾಡಿದ ಅವಮಾನ , ಅವರು ಎಂದು ದ್ವೇಷ ರಾಜಕಾರಣ ಮಾಡಿಲ್ಲ ಎಲ್ಲರ ಮನಸ್ಸು ಗೆದ್ದಿದ್ದಾರೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಕೋಲಾರದಲ್ಲಿ ಷಡ್ಯಂತ್ರ ನಡೆಸಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದವರು ಇಂದು ಅವರ ವಿರುದ್ಧ…

Read More

ಜೈಪುರ: ರಿಯಾನ್‌ ಪರಾಗ್‌ (Riyan Parag) ಅವರ ಸ್ಫೋಟಕ ಅರ್ಧಶತಕ ಮತ್ತು ಬೌಲರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 12 ರನ್‌ಗಳ ಜಯ ಸಾಧಿಸಿದೆ. ಗೆಲ್ಲಲು 186 ರನ್‌ಗಳ ಗುರಿಯನ್ನು ಪಡೆದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 173 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ ಎರಡು ಪಂದ್ಯಗಳನ್ನು ಗೆದ್ದ ರಾಜಸ್ಥಾನ 4 ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ. https://ainlivenews.com/rohit-sharma-gifted-a-special-jersey-by-sachin-tendulkar/ ಕೊನೆಯ 18 ಎಸೆತಗಳಲ್ಲಿ ಡೆಲ್ಲಿ ತಂಡಕ್ಕೆ 41 ರನ್‌ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಅವೇಶ್‌ ಖಾನ್‌ (Avesh Khan) 9 ರನ್‌, 19ನೇ ಓವರ್‌ನಲ್ಲಿ ಸಂದೀಪ್‌ ಶರ್ಮಾ (Sandeep Sharma) 15 ರನ್‌ ಕೊಟ್ಟರೆ ಕೊನೆಯ ಓವರ್‌ನಲ್ಲಿ ಅವೇಶ್‌ ಖಾನ್‌ ಕೇವಲ 4 ರನ್‌ ನೀಡಿದ್ದರಿಂದ ರಾಜಸ್ಥಾನ ಗೆಲುವು ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್‌ ಆರಂಭ ಉತ್ತಮವಾಗಿತ್ತು. ಮಿಚೆಲ್ ಮಾರ್ಷ್ 23 ರನ್‌ (12 ಎಸೆತ, 5 ಬೌಂಡರಿ) ಹೊಡೆದು ಔಟಾದರು.…

Read More

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 60ರ ವೃದ್ಧರೊಬ್ಬರು ಹೃದಯಾಘಾತದಿಂದ (Heart Attack)ಸಾವನ್ನಪ್ಪಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. https://ainlivenews.com/good-friday-is-celebrated-even-though-it-is-the-day-of-jesus-christs-crucifixion-how-important/ ಮೃತ ವ್ಯಕ್ತಿಯನ್ನು ಕೃಷ್ಣ (60) ಎಂದು ಗುರುತಿಸಲಾಗಿದೆ. ವ್ಯಕ್ತಿ ಬಸ್‌ನಲ್ಲಿ (BMTC Bus) ಟಿಕೆಟ್ ಪಡೆದು ಕುಳಿತಿದ್ದ 15 ನಿಮಿಷಗಳಲ್ಲೇ ಹೃದಯಾಘಾತ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಇತರೇ ಪ್ರಯಾಣಿಕರು ಬಸ್ಸಿನಲ್ಲೇ ಕಿರುಚಾಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಬಸ್ ಹತ್ತಿದ್ದ ಮೃತ ವ್ಯಕ್ತಿ, ರಾಜಾಜೀನಗರದ ನವರಂಗ್ ವೃತ್ತದ ಬಳಿ ಬರುತ್ತಿದ್ದ ವೇಳೆ ಸಾವು ಸಂಭವಿಸಿದೆ. ಕೂಡಲೇ ಆತನನ್ನ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಕೊಡಿಸುವಷ್ಟರಲ್ಲಿ ವ್ಯಕ್ತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ

Read More

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನದ ಸುದ್ದಿ ಇನ್ನೂ ಹಸಿಯಾಗಿದೆ. ಇದರ ನಡುವೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಮಿನರಲ್‌ ಕಂಪನಿಯೊಂದು ವೀಣಾ ವಿಜಯನ್‌ ಹಾಗೂ ಅವರ ಸಂಸ್ಥೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪದಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣ 2018 – 19ರ ಅವಧಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಸಂಸ್ಥೆ ಪ್ರಕರಣ ದಾಖಲಿಸಿದ್ದು, ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಸಮನ್ಸ್‌ ನೀಡುವ ಸಾಧ್ಯತೆ ಇದೆ. ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ನೀಡಿದ ದೂರಿನ ಆಧಾರದ ಮೇಲೆ ಇಡಿ ವೀಣಾ ವಿಜಯನ್‌ ವಿರುದ್ಧ ತನಿಖೆ ಆರಂಭಿಸಿದೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಖಾಸಗಿ ಮಿನರಲ್‌ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್…

Read More

ಮೈಸೂರು:  ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರೂ ಶತ್ರಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದಂತೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಕೆ.ವೆಂಕಟೇಶ್ ನೇತೃತ್ವದ ಕಾಂಗ್ರೆಸ್ ನಾಯಕರ ತಂಡವು ಜಯಲಕ್ಷ್ಮೀಪುರಂನಲ್ಲಿರುವ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಮೂರ್ತಿ ಈ ಸಂದರ್ಭದಲ್ಲಿ ಇದ್ದರು.

Read More

ಬೆಂಗಳೂರು: ಕೋಲಾರ ದಂಗಲ್ ಸದ್ಯ ನಿಲ್ಲುವ ಲಕ್ಷಣ ಕಾಣ್ತಿಲ್ಲ.ಸಚಿವ ಮುನಿಯಪ್ಪ ಕುಟುಂಬಕ್ಕೆ ಕೋಲಾರ ಟಿಕೆಟ್ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು.ಅಲ್ದೇ ಕೆ.ಎಚ್.ಮುನಿಯಪ್ಪ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಯೆಸ್,ಲೋಕಸಭೆ ಚುನಾವಣೆಯ ಅಖಾಡ ರಂಗೇರಿದೆ.ಇಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.ಆದ್ರೆ,ಕಾಂಗ್ರೆಸ್ ಪಕ್ಷದಲ್ಲಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ದೊಡ್ಡ ಅಸಮಧಾನ ಸ್ಪೋಟವಾಗಿದೆ.ಅದ್ರಲ್ಲೂ ಕೋಲಾರ ರಾಜಕಾರಣದಲ್ಲಿ ಸಚಿವ ಮುನಿಯಪ್ಪ ವಿರುದ್ಧ ಇಡೀ ಜಿಲ್ಲೆಯ ಸಚಿವರು,ಶಾಸಕರು ತಿರುಗಿಬಿದ್ದಿದ್ದಾರೆ.ಕೆ.ಎಚ್.ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಕೊಡುತ್ತಿದ್ದಾರೆ ಅನ್ನೋ ವಿಚಾರ ಕೇಳುತ್ತಿದ್ದಂತೆ ನಿನ್ನೆ ಶಾಸಕರು ವಿಧಾನಸೌಧದಲ್ಲಿ ರಾಜೀನಾಮೆಯ ಹೈಡ್ರಾಮಾ ನಡೆಸಿದ್ರು.ಈ ಹಿನ್ನಲೆಯಲ್ಲಿ ಇಂದು ಅಸಮಧಾನಿತ ಶಾಸಕರ ಜೊತೆ ಸಿಎಂ,ಡಿಸಿಎಂ ಸಂಧಾನ ಸಭೆ ನಡೆಸಿದ್ರು. https://ainlivenews.com/we-will-arrange-water-dont-leave-the-city/ ಇನ್ನು ನಿನ್ನೆ ವಿಧಾನಸೌಧದಲ್ಲಿ ರಾಜೀನಾಮೆ ಹೈಡ್ರಾಮಾ ನಡೆಸಿದ್ದ ಶಾಸಕರು ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಲಾಸ್ ತೆಗದುಕೊಂಡಿದ್ದಾರೆ.ಏನೇ ಸಮಸ್ಯೆ ಇದ್ರೆ ಪಕ್ಷದ ವೇದಿಕೆಯಲ್ಲಿ ಚರ್ಚೆ…

Read More