Author: AIN Author

ಬೆಂಗಳೂರು : ದೊಡ್ಮನೆಯ ಕುಡಿ, ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಯುವ’ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಬೆಳಗ್ಗೆಯಿಂದಲೇ ರಾಜ್ಯದ 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಯುವ’ನ ಆರ್ಭಟ ಶುರುವಾಗಿದೆ. ಮುಂಜಾನೆ 7 ಗಂಟೆಗೆ ಬೆಂಗಳೂರಿನ ಜೆ.ಪಿ ನಗರದ ಸಿದ್ದೇಶ್ವರ ಥಿಯೇಟರ್​ನಲ್ಲಿ ಫ್ಯಾನ್ಸ್ ಶೋ ಆರಂಭವಾಗಿದೆ. ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಈ ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. https://ainlivenews.com/good-news-from-metro-for-ipl-lovers-train-service-available-till-11-30-midnight/ ಯುವ ರಾಜ್​ಕುಮಾರ್ ಜೊತೆಗೆ ಅಪ್ಪು ಕಟೌಟ್ ಕೂಡ ಸಂತೋಷ್ ಚಿತ್ರಮಂದಿರದ ಮುಂದೆ ತಲೆ ಎತ್ತಿದೆ. ಕಿರಿ ಮಗನ ಚೊಚ್ಚಲ ಚಿತ್ರ ವೀಕ್ಷಿಸಲು ಸಂತೋಷ್ ಥಿಯೇಟರ್​ಗೆ ರಾಘವೇಂದ್ರ ರಾಜ್​ಕುಮಾರ್ ಆಗಮಿಸಿದರು. ನೆರೆದಿದ್ದ ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅಪ್ಪು ಪುತ್ರಿ ವಂದಿತಾ ಕೂಡ ಆಗಮಿಸಿ ಚಿತ್ರ ವೀಕ್ಷಿಸಿದ್ದಾರೆ. ಒಬ್ಬನೇ ಶಿವ ಚಿತ್ರದ ಹಾಡಿಗೆ ಅಭಿಮಾನಿಗಳು ಹಾಗೂ ಚಿಣ್ಣರು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಹೊಡೆದು, ಆರತಿ ಬೆಳಗಿದ ಫ್ಯಾನ್ಸ್…

Read More

ಬೆಂಗಳೂರು:  ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ವಿರುದ್ಧ ಡಾ.ಸಿ.ಎನ್. ಮಂಜುನಾಥ್ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿದ್ದಾರೆ. https://ainlivenews.com/record-high-temperature-in-bengaluru-40-degrees-likely-to-rise-in-next-two-days/ ಖ್ಯಾತ ವೈದ್ಯ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಚೊಳೇನಹಳ್ಳಿ ಗ್ರಾಮದ ಡಾ.ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದೀಗ ಅವರ ತಾಲ್ಲೂಕಿನವರೇ ಅದೇ ಕ್ಷೇತ್ರಕ್ಕೆ ಅದೇ ಹೆಸರಿನ ಮತ್ತೊಬ್ಬ ಡಾ.ಸಿ.ಎನ್. ಮಂಜುನಾಥ್ ಎಂಬವವರು ಚುನಾವಣಾ‌ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಡಾ. ಸಿ.ಎನ್.ಮಂಜುನಾಥ್ ಅವರಿಗೆ ಸ್ಪರ್ಧೆ ಒಡ್ಡಲು ಅದೇ ಹೆಸರಿನ ಗೌರವ ಡಾಕ್ಟರೇಟ್ ಮೂಲಕ ಹೆಸರಿನ ಮುಂದೆ ಡಾಕ್ಟರ್ ಹೊಂದಿರುವ ಡಾ.ಸಿ.ಎನ್.ಮಂಜುನಾಥ್ ಎಂಬುವವರು ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

Read More

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ದೇಶಕ್ಕೆ ಇನ್ಯಾರೂ ನಾಯಕರಿಲ್ಲ ಎಂದು ಮೋದಿ ನಾಯಕತ್ವವನ್ನು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಹೊಗಳಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜಂಟಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲಬೇಕು ಎಂದು ಹೇಳಿದರು. https://ainlivenews.com/yatindra-has-no-maturity-no-intelligence-no-level-person-r-ashok-kidi/ ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಏನಾಗ್ತಿದೆ, ತುಂಬಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪರ ಇದೆ. ಕೇವಲ ಪ್ರಧಾನಿ ಮೋದಿ ಹೆಸರು ಸಾಕಾಗೊಲ್ಲಾ. ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಮೋದಿ ಹಾಗೂ ಅಮಿತ್ ಶಾ ಇಬ್ಬರೇ ರಾಷ್ಟ್ರದ ಸಮಸ್ಯೆಗಳನ್ನು ಪರಿಹಾರ ಮಾಡ್ತಿದ್ದಾರೆ ಎಂದು ಅಮಿತ್​ ಶಾರನ್ನೂ ಹೊಗಳಿದರು. ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನುರಿತ ಹಿರಿಯ ಮುಖಂಡರಗಿಂತ ಹೆಚ್ಚು ಎಲ್ಲಾ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಾಜಿ‌ ಸಿಎಂ ಹಾಗೂ ಮಂಡ್ಯ ಅಭ್ಯರ್ಥಿ…

Read More

ರಾಯಚೂರು: ರಾಜ್ಯದ ವಿದ್ಯುತ್‌ ಬೇಡಿಕೆಯ ಹೆಚ್ಚಿನ ಭಾಗವನ್ನು ಪೂರೈಕೆ ಮಾಡುವ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಆರ್‌ಟಿಪಿಎಸ್‌)ದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಪರಿಣಾಮ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಇದರಿಂದಾಗಿ ರಾಜ್ಯದ ವಿದ್ಯುತ್‌ ಪೂರೈಕೆ ಏರುಪೇರಾಗುವ ಸಾಧ್ಯತೆ ಇದ್ದು, ಭಾರೀ ಆತಂಕ ತಲೆದೋರಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಲ್ಲಿರುವ ತಲಾ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಒಂದು, ಎರಡು, ಮೂರು ಮತ್ತು ಆರನೇ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಈ ಘಟಕಗಳಲ್ಲಿರುವ ಬಂಕ್ಲರ್ ಹಾಗೂ ಬಾಯ್ಲರ್ ಟ್ಯೂಬ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು, ಈ ಸಮಸ್ಯೆಯಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ರಾಜ್ಯದ ವಿದ್ಯುತ್‌ ಪೂರೈಕೆಯಲ್ಲಿ ಏಕಾಏಕಿ 840 ಮೆಗಾ ವ್ಯಾಟ್‌ನಷ್ಟು ಇಳಿಕೆಯಾಗಿದೆ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಪ್ರಸ್ತುತ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 4ನೇ ಘಟಕದಲ್ಲಿ 142 ಮೆಗಾ ವ್ಯಾಟ್, 5ನೇ ಘಟಕದಲ್ಲಿ 194 ಮೆಗಾ ವ್ಯಾಟ್, 7ನೇ ಘಟಕದಲ್ಲಿ 199 ಮೆಗಾ ವ್ಯಾಟ್ ಹಾಗೂ 8ನೇ ಘಟಕದಲ್ಲಿ 141 ಮೆಗಾ ವ್ಯಾಟ್ ಸೇರಿ ಒಟ್ಟು ಕೇವಲ 665…

Read More

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಲಘುವಾಗಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರಗೆ ಇನ್ ಮೆಚುರಿಟಿ, ಬುದ್ದಿ ಇಲ್ಲ. ಯಾರ ಬಗ್ಗೆ ಮಾತಾಡಬೇಕು ಅನ್ನೋ ಲೆವೆಲ್ ಇಲ್ಲದ ವ್ಯಕ್ತಿ. ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಬಾಲಿಷ ಹೇಳಿಕೆ ನೀಡಿದ್ದಾರೆ ಎಂದು ಕುಟುಕಿದರು. https://ainlivenews.com/one-day-congress-will-not-be-present-in-the-state-bs-yeddyurappa/ ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಹಿಂದಿನಿಂದಲೂ ನೀಡುತ್ತಾ ಬರ್ತಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಜೈಲು ಶಿಕ್ಷೆ ಅನುಭವಿಸೋ ಹಂತಕ್ಕೆ ಬಂದಿದ್ದಾರೆ. ಇವರ ಡಿಎನ್ಎನಲ್ಲೇ ಅದು ಬಂದಿದೆ. ಇವರ ವಿರುದ್ಧ ದೂರು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜಂಟಿ ಸಮನ್ವಯ ಸಭೆ ಬಗ್ಗೆ ಮಾತನಾಡಿ, ಈಗಾಗಲೇ ಹಾಲು, ಜೇನಿನಂತೆ ಒಟ್ಟಾಗಿದ್ದೇವೆ. ಈಗಾಗಲೇ ಕುಮಾರಸ್ವಾಮಿ ಅವರ ಜೊತೆ…

Read More

ಬೆಂಗಳೂರು: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಸಂಧಾನಸಭೆ ವಿಫಲವಾಗಿದೆ ಎಂದು ಮೂಲಗಳು ತಿಳಿಸಿದೆ. ವೀಣಾ ಕಾಶಪ್ಪನವರ್​ ಬಂಡಾಯ ವಿಚಾರಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಸಂಧಾನ ಸಭೆ ಇಂದು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಟಿಕೆಟ್​ ನೀಡುವಂತೆ ವೀಣಾ ಕಾಶಪ್ಪನವರ್​ ಪಟ್ಟು ಹಿಡಿದ್ದಾರೆ ಎನ್ನಲಾಗಿದೆ. https://ainlivenews.com/one-day-congress-will-not-be-present-in-the-state-bs-yeddyurappa/ ಬಿಜೆಪಿಯವರು 2 ತಿಂಗಳ ಹಿಂದೆಯೇ ನನಗೆ ಫೋನ್ ಮಾಡಿದ್ರು, ಬಿಜೆಪಿಯಿಂದ ಟಿಕೆಟ್ ಕೊಡ್ತೀವಿ ಬನ್ನಿ ಎಂದ್ರು, ಆದ್ರೆ ನಾನು ಪಕ್ಷ ನಿಷ್ಠೆಯಿಂದ ಹೋಗಲ್ಲ ಎಂದೆ ಈಗಲೂ ಸಹ ಬಿಜೆಪಿಯಿಂದ ಕರೆಗಳು ಬರ್ತಿದೆ ಯಾವುದೇ ತೀರ್ಮಾನ ಮಾಡಿಲ್ಲ, ಕಾರ್ಯಕರ್ತರ ತೀರ್ಮಾನ ಏನಾಗುತ್ತೆ ನೋಡೋಣ ಎಂದರು ಹಾಗೆ ಸೊಪ್ಪು ಹಾಕದ ಸಿಎಂ ಮತ್ತ ಡಿಸಿಎಂ, ಕಾಂಗ್ರೆಸ್​ ಪಕ್ಷಕ್ಕಾಗಿ ದುಡಿದಿರುವ ನಿನ್ನ ಒಳ್ಳೆಯ ಕೆಲಸದ ಬಗ್ಗೆ ನಮಗೂ ಅರಿವಿದೆ. ಆದರೇ, ಟಿಕೆಟ್​ ಘೋಷಣೆ ನಿರ್ಧಾರ ಹೈಕಮಾಂಡ್​ ತೀರ್ಮಾನ, ಸದ್ಯಕ್ಕೆ ಟಿಕೆಟ್ ಬದಲಾವಣೆಯ ಪ್ರಶ್ನೆಯೆ ಇಲ್ಲ, ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ…

Read More

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಈ‌ ವಯಸ್ಸಲ್ಲಿ ಇಲ್ಲಿ ಬಂದು ಕೂತಿದ್ದಾರೆ, ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ ಅಂತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿಯವರು ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಸೇವೆ ಮಾಡ್ತಿದ್ದಾರೆ. ಇವರಿಬ್ಬರು ನಮ್ಮ ಆದರ್ಶಗಳು. ನಾವೂ ಕೂಡಾ ವಿಶ್ರಾಂತಿ ಇಲ್ಲದೇ ಚುನಾವಣಾ ಕೆಲಸ ಮಾಡಿದರೆ ಎಲ್ಲ ಕ್ಷೇತ್ರ ಗೆಲ್ಲಬಹುದು. https://ainlivenews.com/congress-can-flow-money-in-this-election-deve-gowda-warns-the-alliance/ ಸರ್ಕಾರದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಸ್ಥಗಿತ ಆಗಿದೆ. ಕಿಸಾನ್ ಸಮ್ಮಾನ್ ಅಡಿ ರೈತರಿಗೆ ಈ ಸರ್ಕಾರ ಹಣ ಕೊಡೋದನ್ನ ನಿಲ್ಲಿಸಿದೆ. ಬಿಜೆಪಿ ಜೆಡಿಎಸ್ ಬೇರೆ ಅಲ್ಲ, ನಾವು ಒಂದೇ ತಾಯಿ ಮಕ್ಕಳು. ನಾವು ಒಟ್ಟಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ಎಲ್ಲಿದೆ ಇವರ ಅಭಿವೃದ್ಧಿ? ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರ ಮದ ಇವರ ತಲೆಗೇರಿದೆ. ಯಾವುದೇ ಶಕ್ತಿ ಬಿಜೆಪಿ ಜೆಡಿಎಸ್ 28 ಕಡೆ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ಇದೇ ವಾತಾವರಣ ಮುಂದುವರೆದರೆ…

Read More

ಬೆಂಗಳೂರು : ಹಣ ಹೊಳೆಯನ್ನೇ ಹರಿಸುವ ಕಾಂಗ್ರೆಸ್​ನವರನ್ನು ಸೋಲಿಸೋದು ಸುಲಭವಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಎಚ್ಚರಿಕೆ ನೀಡಿದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜಂಟಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಸಂಪನ್ಮೂಲ ಸಂಗ್ರಹ ಮಾಡಿದ್ದೇ ಅಕ್ರಮ ಮಾರ್ಗದಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಅವರು ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಹಣ ಸುರಿಯುತ್ತಿದ್ದಾರೆ? ಅವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದ್ರು. ಆದರೂ, ಸೋಕಾಲ್ಡ್ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸೋಲ್ತು. ಅವರು ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು. ಆದ್ರೆ, ಜನ ನಮ್ಮ ಪರ ಇದ್ದಾರೆ ಎಂದು ಹೇಳಿದರು. https://ainlivenews.com/rameswaram-cafe-blast-nia-arrests-a-conspirator-who-helped/ ಪರಸ್ಪರ ಸಹಕಾರ, ಒಗ್ಗಟ್ಟು ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಹಿಂದೆ ಆಗಿದ್ದೆಲ್ಲ ಮರೆತುಬಿಡಿ, ಕಾಲ ಕ್ಷಣಿಕ. ನಮ್ಮ ವಿರೋಧಿಗಳು ಪ್ರಬಲರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದು ಅಷ್ಟು ಸುಲಭ…

Read More

ಶಿವಮೊಗ್ಗ: ನನ್ನ ಪರವಾಗಿ ಇಷ್ಟು ಜನರು ಬಂದಿದ್ದನ್ನು ಕಂಡು ಹೃದಯ ತುಂಬಿ ಬಂದಿದೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು,  ” ನನ್ನ ಪರವಾಗಿ ಇಷ್ಟು ಜನರು ಬಂದಿದ್ದನ್ನು ಕಂಡು ಹೃದಯ ತುಂಬಿ ಬಂದಿದೆ. ನಾನು ಆಶೀರ್ವಾದ ತೆಗೆದುಕೊಂಡು ಬಂದ ಸ್ವಾಮೀಜಿಗಳಿಗೆಲ್ಲ ಕಣ್ಣೀರು ಹಾಕಿಸಿದ್ದಾರೆ. ಸ್ವಾಮೀಜಿಗಳಿಗೆ ಕಣ್ಣೀರು ಹಾಕಿಸುತ್ತಾರೆ ಎಂದು ಗೊತ್ತಿರಲಿಲ್ಲ. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ಗೊತ್ತಿದ್ದರೆ ನಾನು ಹೋಗುತ್ತಿರಲಿಲ್ಲ. ಫೋನ್​ನಲ್ಲೇ ಆಶೀರ್ವಾದ ತೆಗೆದುಕೊಳ್ಳುತ್ತಿದ್ದೆ. ಈಗ ಸ್ವಾಮೀಜಿಗಳು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ನಮಗೆ ಕಣ್ಣೀರು ಹಾಕಿಸಿದವರಿಗೆ ಒಳ್ಳೆಯದಾಗಲ್ಲ ಎನ್ನುತ್ತಿದ್ದಾರೆ. ಸ್ವಾಮೀಜಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದರೆ ಇವರ ದರ್ಪ ಎಷ್ಟಿರಬಹುದು?” ಎಂದು ಈಶ್ವರಪ್ಪ ಪ್ರಶ್ನಿಸಿದರು.

Read More

ಮೈಸೂರು: ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್  ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಮಾತಾನಾಡಿದ ಅವರು, ತಾನು ಸಂಸತ್ತಿಗೆ 6 ಬಾರಿ ಆಯ್ಕೆಯಾಗಿದ್ದು ಅರದಲ್ಲಿ 4 ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದಾಗಿ ಹೇಳಿದ ಅವರು, ವಿಧಾನ ಸಭೆಗೂ ಎರಡು ಬಾರಿ ಕಾಂಗ್ರೆಸ್ ಶಾಸಕನಾಗಿ ಆಯ್ಕೆಯಾಗಿದ್ದನ್ನು ನೆನಪು ಮಾಡಿಕೊಂಡರು. ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರ ಜೊತೆ ತಮಗೆ ಆತ್ಮೀಯ ಸಂಬಂಧವಿದೆ ಎಂದು ಪ್ರಸಾದ್ ಹೇಳಿದರು. https://ainlivenews.com/according-to-vastu-if-you-keep-bamboo-like-this-in-your-house-it-is-good-luck/ ತಾವು ರಾಜಕೀಯದಲ್ಲಿ ಅರ್ಧ ಶತಮಾನ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನಗೆ ಕರೆ ಮಾಡಿ ಅಭಿನಂದಿಸಲಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು. ಇನ್ನೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಮತದಾನದ ಮೂಲಕ ಅಯ್ಕೆ ಮಾಡಬೇಕು ಮತ್ತು ಜನರು ತಮ್ಮ ಪ್ರತಿನಿಧಿಯನ್ನು ಮುಕ್ತವಾಗಿ ಅಂದರೆ ಯಾವುದೇ ಆಸೆ-ಆಮಿಶಗಳಿಗೆ ಒಳಗಾಗದೆ ಆರಿಸುವ ವಾತಾವರಣ…

Read More