Author: AIN Author

ಬೆಂಗಳೂರು/ರಾಷ್ಟ್ರೀಯ:- 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಹೊತ್ತಲ್ಲೇ ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರ ಗುಡ್ ನ್ಯೂಸ್ ನೀಡಿದೆ. https://ainlivenews.com/suffering-from-frequent-foot-pain/#google_vignette ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿತು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ ಉಚಿತವಾಗಿ ಸಿಗುತ್ತದೆ. www.pmuy.gov.in ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ಬಿಪಿಎಲ್‌ ಪಡಿತರ ಚೀಟಿ ಹೊಂದುವುದು ಕಡ್ಡಾಯವಾಗಿದೆ. ಇದರೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು. ಹೀಗಾಗಿದ್ದರೆ ನೀವು ಉಚಿತ ಸಿಲಿಂಡರ್ ಪಡೆಯಬಹುದಾಗಿದೆ.

Read More

ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು. https://ainlivenews.com/dont-throw-away-clothes-because-theyre-old-make-money-doing-it-this-way/#google_vignette ಕೆಲವು ರೋಗಗಳು ಕೆಲವು ಲಕ್ಷಣಗಳನ್ನ ಹೊಂದಿವೆ. ಆದ್ರೆ ಇವುಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಸಮಸ್ಯೆ ಜಟಿಲವಾಗುವುದಿಲ್ಲ. ಇದೀಗ ಕೆಲವರು ನಿತ್ಯ ಕಾಲು ನೋವಿನಿಂದ ಬಳಲುತ್ತಿರುತ್ತಾರೆ. ದೀರ್ಘಕಾಲದ ಕಾಲು ನೋವು ಹೆಚ್ಚಿನ ಕೊಲೆಸ್ಟ್ರಾಲ್’ನ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ. ಕಾಲುಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದಿದ್ದಾಗ ಕಾಲುಗಳಲ್ಲಿ ಜುಮ್ಮೆನ್ನುವುದು, ನೋವು ಕಾಣಿಸಿಕೊಳ್ಳುತ್ತದೆ ಎಂದೂ ಹೇಳಲಾಗುತ್ತದೆ. ದೇಹದ ಕೊಬ್ಬು ಹೆಚ್ಚುತ್ತಿದೆ ಎಂದು ಹೇಳಲು ಇದು ಮೂಲ ಮಾಹಿತಿಯಾಗಿದೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ನೋವು ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಹೇಳುತ್ತಾರೆ. ಕೆಲವು…

Read More

ಬಟ್ಟೆ ಹಳೆಯದಾಗಿದೆ, ಹೀಗಾಗಿ ನೀವು ಹಳೆಯ ಬಟ್ಟೆಗಳನ್ನು ಎಸೆಯಲು ಯೋಚಿಸುತ್ತಿದ್ದರೆ ಹಾಗೆ ಮಾಡಬೇಡಿ. ಯಾಕೆಂದರೆ ನಿಮ್ಮ ಹಳೆಯ ಬಟ್ಟೆಗಳು ನಿಮಗೆ ಹಣವನ್ನು ಗಳಿಸಲು ಸುಲಭ ಮಾಡಿಕೊಡುತ್ತದೆ. ಹೌದು ಅಚ್ಚರಿಯಾದರೂ ಇದು ಸತ್ಯ. ನಿಮ್ಮ ಹಳೆಯ ಬಟ್ಟೆಗಳನ್ನು ಎಸೆಯುವ ಬದಲು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಹಳೆಯ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಕೆಲವು ವೇದಿಕೆಗಳಿವೆ. ನೀವು ಉಪಯೋಗಿಸದ ಹಳೆಯ ಬಟ್ಟೆಗಳನ್ನು ಬಿಸಾಡುವ ಬದಲು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಬಹುದು. ಹಾಗಾದರೆ, ಹಳೆಯ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಎಲ್ಲಿ ಮಾರಾಟ ಮಾಡಬಹುದು?. https://ainlivenews.com/sudden-heart-attack-among-those-who-go-to-the-gym/ ಹಳೆಯ ಡ್ರೆಸ್ ಮಾರಾಟ ಮಾಡಲೆಂದೇ ಕೆಲವು ಆನ್‌ಲೈನ್ ಮಾರುಕಟ್ಟೆಗಳಿವೆ. ಅಲ್ಲಿ ಜನರು ಹಳೆಯ ವಸ್ತುಗಳನ್ನು ಖರೀದಿಸುತ್ತಾರೆ. ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮೊದಲನೆಯದು OLX. ಈ ಪ್ಲಾಟ್‌ಫಾರ್ಮ್‌ನಲ್ಲಿ ಫ್ಯಾಷನ್‌ನ ಒಂದು ವರ್ಗವೂ ಇದೆ. ನೀವು ಈ ವಿಭಾಗದಲ್ಲಿ ನೋಡಿದರೆ, ಅನೇಕ ಜನರು ಹಳೆಯ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಹೊರತಾಗಿ, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ನಂತಹ ಜನಪ್ರಿಯ ಅಪ್ಲಿಕೇಶನ್‌ಗಳು…

Read More

ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಮ್‌ಗೆ ಸೇರುವ ಯುವಕರು ಹಠಾತ್‌ ಆಗಿ ಸಾವು ಕಾಣುತ್ತಿರುವುದು ವೈದ್ಯಲೋಕಕ್ಕೆ ಅಚ್ಚರಿ ತಂದಿದೆ. ಬೊಜ್ಜುದೇಹ, ನಿಯಮಿತ ವರ್ಕ್‌ಔಟ್‌ ಇಲ್ಲದೇ ಇದ್ದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂದು ಹೇಳುವ ಹೊತ್ತಿನಲ್ಲಿಯೇ, ಜಿಮ್‌ನಲ್ಲಿ ಫಿಟ್‌ ಇರುವ ಯುವಕರೇ ಹಾರ್ಟ್‌ ಅಟ್ಯಾಕ್‌ಗೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದಕ್ಕೆ ಕಾರಣವೇನು ಅನ್ನೋದರ ಜೊತೆಗೆ, ಸುರಕ್ಷಿತವಾಗಿರುವ ಯಾವೆಲ್ಲಾ ಸಲಹೆ ಪಾಲಿಸಬೇಕು ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ. https://ainlivenews.com/amit-shah-is-a-goon-bjp-complains-against-yatindra/ ಜಿಮ್‌ನಲ್ಲಿ ಹೃದಯಾಘಾತವಾಗಲು ಕಾರಣವೇನು? ಅತಿಯಾದ ವರ್ಕ್‌ಔಟ್‌: ಕೆಲವರು ತಮ್ಮನ್ನು ದೇಹವನ್ನು ಅಗತ್ಯಕ್ಕಿಂತ ಹೆಚ್ಚಾಗಿ ದಂಡಿಸಲು ಹೋಗುತ್ತಾರೆ. ವೇಗವಾಗಿ ತಮ್ಮ ಬಾಡಿ ಫಿಟ್‌ ಆಗಬೇಕು ಎನ್ನುವ ನಿಟ್ಟಿನಲ್ಲಿ ಬಾರ ಎತ್ತಲು ಹೋಗುತ್ಥಾರೆ. ಸರಿಯಾದ ತಯಾರಿಯೇ ಇಲ್ಲದೆ ಹೆಚ್ಚಿನ ತೀವ್ರತೆಯ ವ್ಯಾಯಮಗಳನ್ನು ಮಾಡುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ: ವ್ಯಾಯಾಮವು ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ. ಕೆಲವರಿಗೆ, ಇದು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗುವುದಿಲ್ಲ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಗುರುತಿಸದೇ ಇರುವ ಹೃದಯ ಸಮಸ್ಯೆಗಳು: ಅನೇಕ ಯುವಕ…

Read More

ಬೆಂಗಳೂರು:- ಅಮಿತ್ ಶಾ ಓರ್ವ ಗೂಂಡಾ ಎಂದು ಹೇಳಿಕೆ ನೀಡಿದ್ದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ನೀತಿ ಸಂಹಿತೆ ಇದ್ದರೂ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ರಾಜೀವ್ ಗಾಂಧಿ ಪ್ರತಿಮೆ ಮುಚ್ಚದ ಹಿನ್ನೆಲೆ ಚುನಾವಣಾ ಆಯೋಗಕ್ಕೆ ಬಿಜೆಪಿಯ ಎಂಎಲ್​ಸಿಗಳಾದ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ದೂರು ನೀಡಿದ್ದಾರೆ. https://ainlivenews.com/car-overturned-out-of-control-driver-killed-two-seriously-injured/ ದೂರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪರಿಷತ್​ನ ಬಿಜೆಪಿ ಸದಸ್ಯ ಎನ್.ರವಿಕುಮಾರ್​, ಅಮಿತ್ ಶಾ ವೈಯಕ್ತಿಕ ವಿಚಾರದ ಬಗ್ಗೆ ಯತೀಂದ್ರ ಹೇಳಿಕೆ ನೀಡಿದ್ದಾರೆ. ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಡಾ.ಯತೀಂದ್ರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Read More

ದಕ್ಷಿಣ ಕನ್ನಡ: ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್​​ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾದ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿಯ ಶಕ್ತಿನಗರದಲ್ಲಿ ಜರುಗಿದೆ. https://ainlivenews.com/rcb-vs-kkr-kkrs-bowling-selection-won-the-toss/ ಈ ವೇಳೆ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬೆಳ್ತಂಗಡಿ ಲಾಯಿಲ ನಿವಾಸಿ ಪ್ರೈಸ್​ ಮ್ಯಾಥ್ಯೂ(32) ಮೃತ ದುರ್ದೈವಿ. ಬೆಳ್ತಂಗಡಿ ಕಡೆಯಿಂದ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ. https://ainlivenews.com/we-do-not-need-to-send-money-to-aicc/ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಇರಾದೆಯಲ್ಲಿವೆ. ಲೀಗ್​ನಲ್ಲಿ ಆರ್​ಸಿಬಿಗೆ ಇದು ಮೂರನೇ ಪಂದ್ಯವಾಗಿದ್ದರೆ, ಕೆಕೆಆರ್​ಗೆ ಇದು ಎರಡನೇ ಪಂದ್ಯವಾಗಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಈ ಪಂದ್ಯಕ್ಕೆ ಕಾಲಿಡುತ್ತಿರುವುದರಿಂದ ಎರಡೂ ತಂಡಗಳು ತಮ್ಮ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿವೆ ಎನ್ನಲಾಗಿದೆ.

Read More

ಬೆಂಗಳೂರು:- ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ನಮಗಿಲ್ಲ ಎಂದು ದೇವೇಗೌಡರಿಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮ್ಮ ಪಕ್ಷಕ್ಕೆ ಐಟಿ ಇಲಾಖೆ 1823 ಕೋಟಿ ರೂ. ಕಟ್ಟಬೇಕೆಂದು ನೋಟಿಸ್​ ಕೊಟ್ಟಿದೆ. ನಾವು ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. https://ainlivenews.com/ipl-2024-rcb-kkr-battle-countdown/ ನಮ್ಮ ಪಕ್ಷ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬ ಮಾಹಿತಿ ಇದೆ. ಈ ಹಿನ್ನಲೆ ಅಸೂಯೆಯಿಂದ ಹೆಚ್​.ಡಿ.ದೇವೇಗೌಡರು ಮಾತನಾಡುತ್ತಿದ್ದಾರೆ. ಇವರೇ JDS ಪಕ್ಷವನ್ನು ವಿಲೀನ ಮಾಡಿಬಿಟ್ಟರೆಂಬ ನೋವು ಇದೆ. ವಿರೋಧ ಪಕ್ಷದವರು ಪ್ರಬಲವಾಗಿರಬೇಕು ಎಂದು ನಮ್ಮ ಆಸೆ. ಆದರೆ, ಇವರೇ ಬಿಜೆಪಿ ಜೊತೆಗೆ ಪಾರ್ಟಿ ವಿಲೀನ ಮಾಡುತ್ತಿದ್ದಾರಲ್ಲ. ಬಹಳ ದೊಡ್ಡ ನಾಯಕರು, ನಮ್ಮ ಪಾರ್ಟಿ ಸಂಪರ್ಕ ಮಾಡುತ್ತಿದ್ದಾರೆ. ಈಗ ಹೆಸರು ಹೇಳುವುದಕ್ಕೆ ಹೋಗುವುದಿಲ್ಲ ಎಂದರು.

Read More

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್​ನಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈವೋಲ್ಟೇಜ್ ಕದನ ನಡೆಯುತ್ತಿದೆ. https://ainlivenews.com/hdk-has-forgotten-that-it-was-the-bjp-that-toppled-their-coalition-government/#google_vignette ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಇರಾದೆಯಲ್ಲಿವೆ. ಲೀಗ್​ನಲ್ಲಿ ಆರ್​ಸಿಬಿಗೆ ಇದು ಮೂರನೇ ಪಂದ್ಯವಾಗಿದ್ದರೆ, ಕೆಕೆಆರ್​ಗೆ ಇದು ಎರಡನೇ ಪಂದ್ಯವಾಗಿದೆ. ಎರಡೂ ತಂಡಗಳು ಗೆಲುವಿನೊಂದಿಗೆ ಈ ಪಂದ್ಯಕ್ಕೆ ಕಾಲಿಡುತ್ತಿರುವುದರಿಂದ ಎರಡೂ ತಂಡಗಳು ತಮ್ಮ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿವೆ. ಮುಖಾಮುಖಿ ವರದಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲುಗೈ ಸಾಧಿಸಿದೆ. ಐಪಿಎಲ್‌ನಲ್ಲಿ ಈ ಎರಡು ತಂಡಗಳ ನಡುವೆ ಇದುವರೆಗೆ 32 ಪಂದ್ಯಗಳು ನಡೆದಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 18 ಪಂದ್ಯಗಳನ್ನು ಗೆದ್ದು 14 ಸೋಲು ಕಂಡಿದೆ. ಆರ್‌ಸಿಬಿ 14 ಪಂದ್ಯಗಳನ್ನು ಗೆದ್ದು 18 ಸೋಲು ಕಂಡಿದೆ.

Read More

ಹಾಸನ:- ಬಿಜೆಪಿ ಜತೆ ಮೈತ್ರಿ ಬೆಳೆಸಿರುವ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯನ್ನು ಶಾಸಕ ಕೆ ಎಂ ಶಿವಲಿಂಗೇಗೌಡರು ತೀವ್ರವಾಗಿ ಟೀಕಿಸಿದರು. https://ainlivenews.com/vijayendra-appeals-to-meet-mp-sumalathar/#google_vignette ದೇಹದಲ್ಲಿ ಒಂದು ಹನಿ ರಕ್ತ ಇರುವವರೆ ಬಿಜೆಪಿ ಜೊತೆ ಸ್ನೇಹ ಬೆಳೆಸಲ್ಲ ಹೇಳಿದ್ದ ಕುಮಾರಸ್ವಾಮಿಗೆ ಮರೆತುಹೋಗಿದೆ. ಯಡಿಯೂರಪ್ಪ ಸರ್ಕಾರ ಉರುಳಿಸಲ ನಡೆಸಿದ ಪ್ರಯತ್ನ ಮತ್ತು ಬಿಜೆಪಿಯವರೇ ತಮ್ಮ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದು ಸಹ ಅವರಿಗೆ ಮರೆತುಹೋಗಿದೆ ಎಂದು ಶಿವಲಿಂಗೇಗೌಡ ಹೇಳಿದರು ದೇವೇಗೌಡರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಬಲ ನೀಡೋದಾಗಿ ಹೇಳಿ ಸ್ಥಾನದಲ್ಲಿ ಮುಂದುವರಿಯುವಂತೆ ಆಗ್ರಹಿಸಿದ್ದರು. ಆದರೆ, ಪ್ರಧಾನಿ ಹುದ್ದೆಯನ್ನು ತ್ಯಜಿಸುವೆ, ಕೋಮುವಾದಿ ಬಿಜೆಪಿ ಜೊತೆ ಮಾತ್ರ ಸಖ್ಯ ಬೆಳೆಸಲ್ಲ ಅಂತ ದೇವೇಗೌಡರು ಸಹಕಾರವನ್ನು ತಿರಸ್ಕರಿಸಿದ್ದರು. ಆದರೆ ಈಗೇನಾಗುತ್ತಿದೆ? ಬಿಜೆಪಿ-ಜೆಡಿಎಸ್ ಅನೈತಿಕ ಮೈತ್ರಿಯನ್ನು ಜನ ಒಪ್ಪದೆ ತಿರಸ್ಕರಿಸುತ್ತಾರೆ, ಜೂನ್ 4 ರಂದು ಫಲಿತಾಂಶ ಹೊರಬಿದ್ದಾಗ ಅದು ಸ್ಪಷ್ಟವಾಗಲಿದೆ ಎಂದು ಶಿವಲಿಂಗೇಗೌಡ ಹೇಳಿದರು.

Read More