Author: AIN Author

ಸೂರ್ಯೋದಯ: 06:15, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಶಿಶಿರ ಋತು, ತಿಥಿ: ಪಂಚಮಿ, ನಕ್ಷತ್ರ: ಅನುರಾಧಾ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಬೆ.11:01 ನಿಂದ ಮ.12:43 ತನಕ ಅಭಿಜಿತ್ ಮುಹುರ್ತ: ಬೆ.11:56 ನಿಂದ ಮ.12:44 ತನಕ ಮೇಷ ರಾಶಿ: ಹೃದಯ ಬಂಧುಗಳಿಂದ ಧನಲಾಭ,ಆತ್ಮೀಯ ವ್ಯಕ್ತಿ ಏಕಾಏಕಿ ದೂರ,ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ ನಟಿಯರಿಗೆ ನಷ್ಟ, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಾಲಗಾರರಿಂದ ಅವಮಾನ, ಹೊಸ ವ್ಯಾಪಾರ ಪ್ರಾರಂಭಿಸಲು ಸೂಕ್ತ…

Read More

ಕೆಆರ್ ಪುರ,: ಕೆ.ಆರ್.ಪುರ ಕ್ಷೇತ್ರದ  ನೂತನ ಬಿಜೆಪಿ ಕಚೇರಿಯನ್ನು  ಕ್ಷೇತ್ರದ ಅಧ್ಯಕ್ಷ  ಮುನೇಗೌಡ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೇಂದ್ರದ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ತಿಳಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಪಕ್ಷನ್ನು ಬಲಪಡಿಸಬೇಕು, ಬೂತ್ ಸಭೆ, ಕ್ಷೇತ್ರ ಸಭೆಗಳಿಗಾಗಿ ಈ ಕಚೇರಿಯನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. ಶಾಸಕ ಬೈರತಿ ಬಸವರಾಜ ಅವರ ಸೂಚನೆ ಮೇರೆಗೆ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ್ದು ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು. ದೇಶದ ಭವಿಷ್ಯಕ್ಕಾಗಿ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು, ಅಭ್ಯರ್ಥಿ ಯಾರೇ ಆಗಲಿ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕೆಆರ್ ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ಅತಿ ಹೆಚ್ಚಿನ ಮತಗಳನ್ನು ಕೊಡಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಕೆಲಸ ನಾವೆಲ್ಲಾರೂ ಮಾಡಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ಪ್ರ.ಕಾರ್ಯದರ್ಶಿಗಳಾದ ಲೋಕೇಶ್,…

Read More

ಕೋಲಾರ:- ಏಕಾಏಕಿ ಟ್ರಾನ್ಸ್‌ಪಾರಂ ಹತ್ತಿ ವಿದ್ಯುತ್ ತಂತಿ ಹಿಡಿದುಕೊಂಡು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಜಗುಂಡ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ. https://ainlivenews.com/life-threat-to-social-activist-prashant-sambargi-2/ ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಹಿಂದಿ ಬಾಷೆ ಮಾತನಾಡುತ್ತಿದ್ದ ವ್ಯಕ್ತಿಯಾಗಿದ್ದು, ಮಾನಸಿಕನಂತೆ ಕಾಣುತ್ತಿದ್ದನಂತೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

Read More

ಕಲಬುರಗಿ:- ಕಿಕ್ಕಿರಿದು ತುಂಬಿದ್ದ ಜಾತ್ರೆಯಲ್ಲಿ ತೇರು ಎಳೆಯುವ ವೇಳೆ ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ. ಶರಣಬಸವೇಶ್ವರ ಜಾತ್ರೋತ್ಸವದಲ್ಲಿ ಘಟನೆ ಸಂಭವಿಸಿದ್ದು ಬೀದರ್ ಮೂಲದ ಹೋಂಗಾರ್ಡ್ ರಾಮು(28) ಮೃತ ದುದೈವಿ ಅಂತ ಗುರುತಿಸಲಾಗಿದೆ.. ಮತ್ತೋರ್ವ ಸಿಬ್ಬಂದಿ ಅಶೋಕ ರೆಡ್ಡಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೇರು ಎಳೆಯುವ ವೇಳೆ ಗದ್ದಲದಲ್ಲಿ ಅವಘಡವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.. ಇಂದಿನಿಂದ ಶುರುವಾದ ಜಾತ್ರಾ ಮಹೋತ್ಸವದಲ್ಲಿ ಇಂದು ರಥೋತ್ಸವ (ಉಚ್ಛಾಯಿ) ನಾಳೆ ಮಹಾ ರಥೋತ್ಸವ ಜರುಗಲಿದೆ..ಆರ್‌ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Read More

ಬೆಂಗಳೂರು:- ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿಗೆ ಜೀವ ಬೆದರಿಕೆ ಬಂದಿದ್ದು, ಈಗ ಈ ಸಂಬಂಧ ಠಾಣೆ ಮೆಟ್ಟಿಲೇರಿದ್ದಾರೆ. ಅಂತರಾಷ್ಟ್ರೀಯ ನಂಬರ್ ನಿಂದ ಬೆದರಿಕೆ ಕರೆ ಹಾಗು ವಾಟ್ಸಪ್ ಸಂದೇಶ ಬಂದಿದೆ ಎನ್ನಲಾಗಿದೆ. ರಾಮೇಶ್ವರಂ ಕೆಫೆಗೆ ತೆರಳಿದ ವಿಚಾರ ಪ್ರಸ್ತಾಪಿಸಿ ದುಷ್ಕರ್ಮಿಗಳು ನಟನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. https://ainlivenews.com/kohli-batting-brilliantly-rcb-gave-kkr-a-target-of-183-runs/ ಆ್ಯಸಿಡ್ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಮಕ್ಕಳ ಪೋಟೊ ಮೇಲೆ ಮಾರ್ಕ್ ಮಾಡಿ ಶೂಟ್ ಮಾಡುವ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆ ಚನ್ನಮ್ಮನ ಕೆರೆ ಪೊಲೀಸ್ ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದಾರೆ. ಸಂಬರ್ಗಿ ದೂರಿನ ಹಿನ್ನಲೆ‌ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read More

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 10ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. https://ainlivenews.com/bomb-threat-to-another-prestigious-private-school-in-bangalore/ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕೆಕೆಆರ್ ಆರ್ ಸಿಬಿಗೆ ಬ್ಯಾಟಿಂಗ್ ಗೆ ಆಹ್ವಾನ ಮಾಡಿತ್ತು. ಉತ್ತಮ ಆರಂಭ ಪಡೆದು ಕೊಂಡ ಆರ್ ಸಿಬಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಕೆಕೆಆರ್ ಗೆ 183 ರನ್ ಟಾರ್ಗೆಟ್ ನೀಡಿದೆ. ಮೊದಲು ಟಾಸ್‌ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರದಿಂದ 20 ಓವರ್‌ಗಳಲ್ಲಿ 182 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಸದ್ಯ ಈ ಗುರಿಯನ್ನು ಇದೀಗ ಕೆಕೆಆರ್ ತಲುಪಲು ಹೆಚ್ಚು ಶ್ರಮಿಸಬೇಕಿದೆ. ಎಂದಿನಂತೆ ಓಪನಿಂಗ್ ಮಾಡಿದ ನಾಯಕ ಫಾಫ್ ಡು ಪ್ಲೆಸಿಸ್ ಹೆಚ್ಚಿನ ಸಮಯ ಕ್ರೀಸ್‌ನಲ್ಲಿ ನಿಲ್ಲದೆ 08 ರನ್‌ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ಬಂದ ಕ್ಯಾಮರಾನ್ ಗ್ರೀನ್…

Read More

ಆನೇಕಲ್:- ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಬಾಂಬ್ ನಿಷ್ಕ್ರಿಯ, ಶ್ವಾನ ದಳ ದೌಡಾಯಿಸಿ ಪರಿಶೀಲಿಸಿದ್ದಾರೆ. https://ainlivenews.com/govinda-karajolas-arrival-again-opposed-in-chitradurga/ ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಸಂದೇಶ ರವಾನಿಸಿದ ಹಿನ್ನಲೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಶ್ವಾನ ದಳದವರು ಇಡೀ ಶಾಲೆಯನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಬಳಿಕ ಬಾಂಬ್ ಕರೆಗೆ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ ಇನ್ನು ಇದೇ ಮಾ.01 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು.

Read More

ಚಿತ್ರದುರ್ಗ:- ಬಿಜೆಪಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಆಗಮನಕ್ಕೆ ಚಿತ್ರದುರ್ಗದಲ್ಲಿ ಬಾರೀ ವಿರೋಧ ವ್ಯಕ್ತವಾಗಿದೆ. https://ainlivenews.com/big-shock-for-congress-during-lok-sabha-elections-kai-hero-for-jds/ ಬಿಜೆಪಿ ಚುನಾವಣಾ ಕಚೇರಿ ಬಳಿ ರಘುಚಂದನ್ ಅಭಿಮಾನಿಗಳಿಂದ ಗೋಬ್ಯಾಕ್ ಕಾರಜೋಳ ಎಂಬ ಘೋಷಣೆ ಕೂಗಲಾಗಿದೆ. ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಮಾವಣೆಗೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಮತ್ತು ಅಭಿಮಾನಿಗಳ‌ ನಡುವೆ ಮಾತಿನ ವಾಗ್ವಾದ ನಡೆದಿದ್ದು, ಸುಮಾರು 20 ಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಪೊಲೀಸರು ತಮ್ಮ ವಾಹನದಲ್ಲಿ ಗಲಾಟೆ ಸ್ಥಳದಿಂದ ಬೇರೆಡೆಗೆ ಕರೆದೋಯ್ದಿದ್ದಾರೆ.

Read More

ತುಮಕೂರು:- 2024 ರ ಲೋಕ ಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಕಾಂಗ್ರೆಸ್ ನಾಯಕನಿಗೆ ಜೆಡಿಎಸ್ ನಾಯಕರು ಗಾಳ‌ ಹಾಕಿದ್ದಾರೆ. https://ainlivenews.com/gemini-circus-launched-in-kr-pura-entertainment-for-children-in-summer/ ಲೋಕ ಗೆಲ್ಲಲು ಮೈತ್ರಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಯಕನಿಲ್ಲದೇ‌ ಜೆಡಿಎಸ್ ಸೊರಗುತ್ತಿದೆ. ಈ ಹಿನ್ನೆಲೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನಿಂಗಪ್ಪನನ್ನ ಕೆರೆತರಲು ಕಸರತ್ತು ನಡೆದಿದೆ. ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಕರೆತರಲು ತೆರೆಮರೆ ಕಸರತ್ತು ನಡೆದಿದ್ದು, ಮಾಜಿ ಶಾಸಕ ನಿಂಗಪ್ಪನನ್ನ ಜೆಡಿಎಸ್ ಕರೆತರಲು ಮಾತುಕತೆ ನಡೆದಿದೆ ಎನ್ನಲಾಗಿದೆ. ತುಮಕೂರು ಜಿಲ್ಲಾ ಜೆಡಿಎಸ್ ನಾಯಕರಿಂದ ಮಾತುಕತೆ ನಡೆದಿದೆ. MLC ತಿಪ್ಪೇಸ್ವಾಮಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಮಾತುಕತೆ ನಡೆದಿದ್ದು, JDSಜಿಲ್ಲಾಧ್ಯಕ್ಷ ಅಂಜಿನಪ್ಪ,ಮಾಜಿ ಶಾಸಕ ಸುಧಕಾರ್ ಲಾಲ್ ಸೇರಿದಂತೆ ಹಲವು JDSನಾಯಕರು ಭೇಟಿ ಮಾಡಿದ್ದಾರೆ. ತುಮಕೂರು‌ನಗರದ ಸರಸ್ವತಿ ಪುರಂನಲ್ಲಿರುವ ನಿಂಗಪ್ಪ‌ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದು, ಮಾಜಿ ಶಾಸಕ ಡಿಸಿ ಗೌರಿಶಂಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ…

Read More

ಕೆಆರ್ ಪುರ: ಕೆ.ಆರ್.ಪುರದ ಐಟಿಐ ಮೈದಾನದಲ್ಲಿ ಜೆಮಿನಿ ಸರ್ಕಸ್ ಏರ್ಪಡಿಸಿದ್ದು 40 ದಿನಗಳ ಕಾಲ‌ ಶೋ ನಡೆಯಲಿದೆ ಎಂದು ಜೆಮಿನಿ ಸರ್ಕಸ್ ನ ಪ್ರಮೋಟರ್ ಪ್ರೇಮನಾಥ್  ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,    ದೇಶದ   ಹೆಸರಾಂತ ಕಲಾವಿದರ ತಂಡದಿಂದ  ಜೆಮಿನಿ ಸರ್ಕಸ್ ನಡೆಯಲಿದ್ದು ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. https://ainlivenews.com/good-news-for-bpl-card-holders-free-lpg-cylinder-if-this-works/ ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್  ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಾಸ್ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು. ಶಾಲಾ ಮಕ್ಕಳಿಗೆ ರಜಾ ಕಾಲದಲ್ಲಿ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ ಬೆಂಗಳೂರಿನ ಕೆ.ಆರ್.ಪುರಂ ನ ದೂರವಾಣಿ ನಗರದ ಐಟಿಐ ಮೈದಾನದಲ್ಲಿ ಜೇಮಿನಿ ಸರ್ಕಸ್ ಪ್ರದರ್ಶನ ನಡೆಯುತ್ತಿದೆ ಕುಟುಂಬ ಸಮೇತ ಬಂದು ಮೂರು ಗಂಟೆಗಳ ಕಾಲ ಮನರಂಜನೆಯನ್ನ ಪಡೆದುಕೊಳ್ಳಬಹುದು ಎಂದು ಹೇಳಿದರು. ಜೇಮಿನಿ ಸರ್ಕಸ್ ಪ್ರದರ್ಶನದಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯ…

Read More