Author: AIN Author

ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಜನ್ 17 ರ ಪಾಯಿಂಟ್ಸ್ ಟೇಬಲ್​ನಲ್ಲಿ ಆರ್​ಸಿಬಿ ಆರನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯದಲ್ಲಿ ಎರಡು ಸೋಲು, ಒಂದು ಜಯ ಕಂಡು 2 ಅಂಕ ಪಡೆದು ಕೊಂಡಿದೆ. ಇವರ ನೆಟ್​ ರನ್​ರೇಟ್ -0.711 ಆಗಿದೆ. ಅಂಕಪಟ್ಟಿಯಲ್ಲಿ ಮೇಲೇಳಲು ಬೆಂಗಳೂರು ಮುಂದಿನ ಮ್ಯಾಚ್ ಗೆಲ್ಲಲೇ ಬೇಕಿದೆ. ಹಾಗಾದರೆ ಆರ್​ಸಿಬಿ ಮುಂದಿನ ಟಾರ್ಗೆಟ್ ಯಾರು?, ಪಂದ್ಯ ಎಲ್ಲಿ ನಡೆಯಲಿದೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://ainlivenews.com/do-you-know-how-much-terrorists-spent-on-rameswaram-cafe-blast/ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ. ಬೆಂಗಳೂರು ಮತ್ತು ಲಕ್ನೋ ನಡುವಿನ 2024 ರ ಐಪಿಎಲ್ ಪಂದ್ಯ ಏಪ್ರಿಲ್ 2 ಮಂಗಳವಾರದಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು-ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. .

Read More

ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಳಸಲಾದ ಬಾಂಬ್​ ಅನ್ನು​ ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. https://ainlivenews.com/death-threat-to-aicc-presidents-son-this-is-a-mother-to-believe/ ಬಾಂಬ್ ತಯಾರಿಸಲು​ ಶಂಕಿತ ಉಗ್ರರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು. ಬಾಂಬ್​ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಕೆಲವನ್ನು ಆನ್ ಲೈನ್‌ ಮೂಲಕ ಮತ್ತು ಇನ್ನು ಕೆಲವುಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಡೆಟೋನೇಟರ್, ಟೈಮರ್, ಬ್ಯಾಟರಿ ಹಾಗೂ ರಂಜಕವನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದಾರೆ. ಉಳಿದಂತೆ ನಟ್, ಬೋಲ್ಟ್, ಕೆಲ ವೈಯರ್​ಗಳನ್ನು ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ. ಈ ಸಾಮಾಗ್ರಿಗಳನ್ನು ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಖರೀದಿಸಿ, ಬಾಂಬ್​ ತಯಾರಿಸುತ್ತಿದ್ದ ಶಂಕಿತ ಅಬ್ದುಲ್​ ಮತೀನ್ ತಾಹ ಮತ್ತು ಮುಸಾವೀರ್ ನೀಡುತ್ತಿದ್ದನು ಎಂಬ ಶಂಕೆ ವ್ಯಕ್ತವಾಗಿದೆ

Read More

ಕಲಬುರ್ಗಿ:- ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಮೇಶ್ ಜಾಧವ್ ಅವರು ಇದು ಯಾರಾದ್ರೂ ನಂಬುವ ಮಾತಾ? ಎಂದು ಜಾಧವ್ ಕಿಡಿಕಾರಿದ್ದಾರೆ. https://ainlivenews.com/kohlis-slow-batting-is-the-reason-for-rcbs-defeat/ 15 ದಿನಗಳ ಹಿಂದೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. 8 ದಿನಗಳ ಹಿಂದೆ ದೂರು ನೀಡಿದ್ದೇನೆ ಎನ್ನುತ್ತಾರೆ. ಇನ್ನೂ 8 ದಿನ ನೀವೇನು ಮಲಗಿದ್ದಿರಾ? 24 ಗಂಟೆಯಲ್ಲೇ ಫೇಕ್ ಲೆಟರ್ ಬರೆದವರನ್ನು ಬಂಧಿಸಿ ಒದ್ದು ಒಳಗೆ ಹಾಕಬೇಕು. ನಿಮಗೆ ಅಧಿಕಾರ, ಪವರ್ ಇಲ್ವಾ ಎಂದು ಕಿಡಿಕಾರಿದರು., ಉಮೇಶ್ ಜಾದವ್ ಸಮಜಾಯಿಷಿ ಹೇಳಬೇಕು ಎಂದು ಖರ್ಗೆ ಹೇಳುತ್ತಾರೆ. ನೀವು ಎಐಸಿಸಿ ಅಧ್ಯಕ್ಷರ ಪುತ್ರರಾಗಿದ್ದೀರಿ. ನಿಮ್ಮ ಅಧಿಕಾರ ಬಳಸಿ. ನಾನು ಓರ್ವ ಸ್ವಾತಂತ್ರ‍್ಯ ಹೋರಾಟಗಾರರ ಮಗನಾಗಿದ್ದೇನೆ. ನಾನು ಯಾಕೆ ಸಮಜಾಯಿಷಿ ಹೇಳಬೇಕು? ನೀವೇನು ಮಂತ್ರಿ ಅಲ್ವಾ? ನಿಮ್ಮ ಅಧಿಕಾರ ಉಪಯೋಗಿಸಿ. ಕೊಲೆ ಬೆದರಿಕೆ ಪತ್ರ ಸಚಿವರಿಗೆ ಬಂದಿದೆ ಅಂದರೆ ಯಾರಾದ್ರು ನಂಬುತ್ತೀರಾ ಎಂದು ಹರಿಹಾಯ್ದರು.

Read More

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ KKR ವಿರುದ್ಧದ ಪಂದ್ಯದಲ್ಲಿ RCB ಹೀನಾಯ ಸೋಲು ಕಂಡಿದೆ. ಇನ್ನೂ ಈ ಸೋಲಿಗೆ ವಿರಾಟ್ ಕೊಹ್ಲಿ ಯನ್ನು ಹೊಣೆ ಮಾಡಲಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ RCB ತಂಡವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್​ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 8 ರನ್​ಗಳಿಸಿ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಗ್ರೀನ್ ಜೊತೆಗೂಡಿ ಅಬ್ಬರಿಸಿದ ಕಿಂಗ್ ಕೊಹ್ಲಿ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 61 ಕ್ಕೆ ತಂದು ನಿಲ್ಲಿಸಿದರು https://ainlivenews.com/heart-attack-famous-villain-daniel-balaji-died/#google_vignette ಇನ್ನು ಪವರ್​ಪ್ಲೇ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಬಳಿಕ ಕೊಹ್ಲಿಯ ಬ್ಯಾಟ್ ಝಳಪಳಿಸಲಿಲ್ಲ ಎಂಬುದೇ ಸತ್ಯ. ಪವರ್​ಪ್ಲೇನಲ್ಲಿ 10ರ ಸರಾಸರಿಯಲ್ಲಿ ರನ್ ಕಲೆಹಾಕಿದ ಆರ್​ಸಿಬಿ 7 ರಿಂದ 11 ಓವರ್​ವರೆಗೆ ಕೇವಲ 5.2ರ ಸರಾಸರಿಯಲ್ಲಿ ರನ್​…

Read More

ಹೃದಯಾಘಾತದಿಂದ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಸಾವನ್ನಪ್ಪಿದ್ದಾರೆ. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರ ಅಗಲುವಿಕೆಯಿಂದ ಎಲ್ಲರೂ ಶಾಕ್​ಗೆ ಒಳಗಾಗುವಂತೆ ಆಗಿದೆ. https://ainlivenews.com/campaign-by-auto-drivers-for-the-release-of-rapido-autos/ ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಂಡರು. ಅವರು ಕಮಲ್ ಹಾಸನ್ ಅವರ ಹಿಸ್ಟಾರಿಕ್ ಡ್ರಾಮಾ ‘ಮರುಢನಯಗಂ’ ಸಿನಿಮಾದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಈ ಸಿನಿಮಾ ಅರ್ಧಕ್ಕೆ ನಿಂತಿತು. ಡ್ಯಾನಿಯಲ್ ಬಾಲಾಜಿ ಅವರು ‘ಚಿತ್ತಿ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು ನಂತರದ ದಿನಗಳಲ್ಲಿ ಬಾಲಾಜಿ ಅವರಿಗೆ ಕಮಲ್ ಹಾಸನ್ ಜೊತೆ ನಟಿಸೋ ಅವಕಾಶ ಸಿಕ್ಕಿತು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದು ಬಂದರು.

Read More

ಬೆಂಗಳೂರು:- ಎಲೆಕ್ಟ್ರಿಕ್ ಬೈಕ್ ಆಯ್ತು, ಇದೀಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರು ಅಭಿಯಾನ ಕೈಗೊಂಡಿದ್ದಾರೆ. ಈ ಹಿಂದೆ ಬೈಕ್​​​​​ಗಳು ರ್ಯಾಪಿಡೋದಿಂದ ನಮ್ಮ ಬಾಳು ಆಳು ಮಾಡುತ್ತಿದ್ದಾರೆ ಎಂದು ಆಟೋ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಅಭಿಯಾನ ಕೈಗೊಂಡಿದ್ದು, ಕಳೆದ ಒಂದು ವಾರದಿಂದ ಅಭಿಯಾನ ಮಾಡುತ್ತಿದ್ದಾರೆ. https://ainlivenews.com/if-you-are-bitten-by-a-scorpion-in-summer-have-your-first-aid/#google_vignette ಈಗ ಮತ್ತೆ ಆಟೋ ರ್ಯಾಪಿಡೋ ವಿರುದ್ಧ ಆಕ್ರೋಶ ಮುಗಿಳೆದಿದೆ.. ಈಗ ರ್ಯಾಪಿಡೋ ಆಟೋಗಳ ಮುಕ್ತಿಗೆ ಆಟೋ ಚಾಲಕರ ಅಭಿಯಾನ ಪ್ರಾರಂಭವಾಗಿದೆ. ಚಾಲಕರು ಆಟೋ ಚಾಲಕರ ಬಳಿ ರ್ಯಾಪಿಡೋ ಆ್ಯಪ್ ಡಿಲೀಟ್ ಮಾಡಿಸುತ್ತಿದ್ದಾರೆ. ರ್ಯಾಪಿಡೋ ಆಫರ್ಸ್ ಮೂಲಕ ಚಾಲಕರು ಬೇಸತ್ತು ಹೋಗಿದ್ದಾರೆ. ಈ ಆಪ್ ಆಫರ್ ಏನು?* ಆಟೋ ಲೇಟ್ ಆದ್ರೆ ಹಣ ಕಡಿಮೆ ಕೊಡಿ ಎಂದು ಆಪ್ ನಿಂದ ಆಮಿಷ ಡ್ರೈವರ್ ಗಳಿಗೆ ಇನ್ಸೆಟಿಂವ್ ಕೊಡುವುದು… ಫ್ಲಾಟ್ ಫಂಗೆ ೫ ರೂ. ಮಾತ್ರ ನಿಗದಿ ಮಾಡಿರುವುದು… ಈ ಆಫರ್ಸ್ ನೋಡಿ ಆಟೋ ಚಾಲಕರು ಗರಂ ಆಗಿದ್ದಾರೆ.

Read More

ಬೇಸಿಗೆ ಬಂತೆಂದರೆ ಚೇಳುಗಳು ಬಿಸಿಲ ಧಗೆಗೆ ಹೊರ ಬರುವ ಸಾಧ್ಯತೆ ಅಧಿಕ. ಆಗ ಅವುಗಳು ಕಚ್ಚುವ ಸಾಧ್ಯತೆಯೂ ಉಂಟು. ಪ್ರಪಂಚದಲ್ಲಿ ಸುಮಾರು 1500 ವಿಧದ ಚೇಳುಗಳಿದ್ದು, ಇವುಗಳಲ್ಲಿ ಕೇವಲ 25 ವಿಧಗಳು ಮಾತ್ರ ವಿಷಕಾರಿ. ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಾವನ್ನಂಟು ಮಾಡುವುದು ಮಾತ್ರ 17 ಪ್ರಬೇಧಗಳು. ಅಂಟಾರ್ಕ್ಟಿಕಾ ಖಂಡವನ್ನು ಹೊರತು ಪಡಿಸಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಚೇಳುಗಳಿವೆ. https://ainlivenews.com/kohli-and-gambhir-reunited-after-forgetting-to-taunt/#google_vignette ಚೇಳಿನ ವಿಷವು ವಿಶ್ವದ ಅತ್ಯಂತ ದುಬಾರಿ ವಿಷಗಳಲ್ಲಿ ಒಂದಾಗಿದೆ. ಕೆಲವೊಂದು ಔಷಧಗಳನ್ನು ಚೇಳಿನ ವಿಷದಿಂದ ತಯಾರಿಸಲಾಗುತ್ತದೆ. ಹಾಗಾಗಿಯೇ ಚೇಳಿನ ವಿಷಕ್ಕೆ ಹೆಚ್ಚಿನ ಬೇಡಿಕೆಯಿದೆ. ಸದ್ಯ ಒಂದು ಗ್ರಾಂ ಚೇಳಿನ ವಿಷ 80 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದು ವಿಶ್ವದ ಅತ್ಯಂತ ದುಬಾರಿ ವಿಷ ಎಂಬ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಟರ್ಕಿಯ ಲ್ಯಾಬ್‌ಗಳಲ್ಲಿ ಚೇಳುಗಳನ್ನು ಸಾಕಲಾಗುತ್ತಿದೆ.ಟರ್ಕಿಯ ಪ್ರಯೋಗಾಲಯವು ದಿನಕ್ಕೆ 2 ಗ್ರಾಂ ವಿಷವನ್ನು ಚೇಳುಗಳಿಂದ ಸಂಗ್ರಹಿಸುತ್ತದೆ. ಚೇಳುಗಳನ್ನು ಪೆಟ್ಟಿಗೆಗಳಿಂದ ಹೊರತೆಗೆಯಲಾಗುತ್ತದೆ ಮತ್ತು ವಿಷವನ್ನು ವಿಶೇಷ ವಿಧಾನಗಳಲ್ಲಿ ಸಂಗ್ರಹಿಸಲಾಗುತ್ತದೆ. ಚೇಳುಗಳಲ್ಲಿ ಮುಖ್ಯವಾದವು ಕಪ್ಪುಬಣ್ಣದ ಚೇಳುಗಳು, ಕಂದು…

Read More

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ನಡುವಣ ಪಂದ್ಯದಲ್ಲೂ ರೋಚಕ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಅಲ್ಲದೆ ಅಭಿಮಾನಿಗಳಿಗೆ ಕ್ರೀಡಾಸ್ಫೂರ್ತಿಯ ಸಂದೇಶ ಸಾರಿದ್ದಾರೆ. https://ainlivenews.com/bjp-invites-sumalta-to-join-the-party/ ಆರ್​ಸಿಬಿ ಇನಿಂಗ್ಸ್​ನ​ ಸ್ಟ್ರಾಟರ್ಜಿಕ್ ಟೈಮ್ ಔಟ್ ವೇಳೆ ಮೈದಾನಕ್ಕೆ ಆಗಮಿಸಿದ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಗೆ ಹಸ್ತಲಾಘವ ನೀಡಿದರು. ಅಲ್ಲದೆ ಇಬ್ಬರು ಪರಸ್ಪರ ಆಲಿಂಗನೊಂದಿಗೆ ಮಾತುಕತೆ ನಡೆಸಿದರು. ಈ ಮೂಲಕ ಈ ಹಿಂದಿನ ಎಲ್ಲಾ ಕಹಿ ಘಟನೆಗಳು ಅಲ್ಲಿಗೆ ಮುಗಿದೆ, ನಮ್ಮಿಬ್ಬರ ನಡುವೆ ಏನಿಲ್ಲಾ, ಮುನಿಸಂತು ಇಲ್ಲವೇ ಇಲ್ಲ ಎಂಬ ಸಂದೇಶ ಸಾರಿದ್ದಾರೆ. ಅಲ್ಲದೆ ಮೈದಾನದಲ್ಲಿ ಶುರುವಾದ ಜಗಳವನ್ನು ಮೈದಾನದಲ್ಲೇ ಕೊನೆಗೊಳಿಸುವ ಮೂಲಕ ಗೌತಮ್ ಗಂಭೀರ್-ವಿರಾಟ್ ಕೊಹ್ಲಿ ಕ್ರೀಡಾಸ್ಪೂರ್ತಿಯ ಸಂದೇಶ ಸಾರಿದ್ದಾರೆ. ಇದೀಗ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಣ ಅಪ್ಪುಗೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್​ ಪ್ರೇಮಿಗಳಿಂದ ಹಿರಿಯ ಕ್ರಿಕೆಟಿಗರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ

Read More

ಬೆಂಗಳೂರು:- ಬಿಜೆಪಿ ರಾಜ್ಯಾಧಕ್ಷ ವಿಜಯೇಂದ್ರ ಮತ್ತು ಪ್ರೀತಂ ಗೌಡ ಸುಮಲತಾ ನಿವಾಸಕ್ಕೆ ಆಗಮಿಸಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದರು. ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ, ವಿಜಯೇಂದ್ರ, ಪ್ರೀತಂಗೌಡ ಒಂದು ಗಂಟೆಗಳ ಕಾಲ ಬಂದು ಮಾತನಾಡಿ ಅವರ ಭಾವನೆಯನ್ನು ಹೇಳಿ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಕೇಳಿದರು. ನಾಳೆ ಬೆಂಬಲಿಗರು ಬರುತ್ತಿದ್ದಾರೆ. ಅವರ ಭಾವನೆಯನ್ನು ಕೇಳಬೇಕಾದ ಕರ್ತವ್ಯವಿದೆ. ನಾನು ಕಾರ್ಯಕರ್ತರ ಭಾವನೆ ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸುತ್ತೇನೆ ಎಂದರು. https://ainlivenews.com/attacked-the-head-cons-table-congress-leader/ ಬಿಜೆಪಿಯನ್ನು ಬೆಂಬಲಿಸಬೇಕು ಎನ್ನುವುದು ಒಂದು ಕಡೆ. ಬೆಂಬಲಿಗರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಬೇಕು. ಮಂಡ್ಯಗೆ ಹೋಗಿ ಅವರ ಮುಂದೆಯೇ ನಿಲುವನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು ಸುಲಭವಾಗಿ ಗೆಲ್ಲುವ ಕ್ಷೇತ್ರದ ಆಫರ್ ಇತ್ತು. ಬೇರೆ ಪಕ್ಷದಿಂದಲೂ ಆಫರ್ ಇತ್ತು. ಆದರೆ ನಾನು ಮಂಡ್ಯ ಬಿಟ್ಟರೇ ಮತ್ತೆಲ್ಲೂ ಹೋಗುತ್ತಿಲ್ಲ. ನನ್ನ ಅಸ್ತಿತ್ವ ಅಂದ್ರೆ ಮಂಡ್ಯ. ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

Read More

ಬೆಂಗಳೂರು : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಏಪ್ರಿಲ್ 1 ರಿಂದ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆರಾಜ್ಯದ 9 ಜಿಲ್ಲೆಗಳಲ್ಲಿ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗಲಿದ್ದು, ಮಾ. 9 ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅಂತ್ಯವಾಗಿದ್ದು9 ಜಿಲ್ಲೆಯಿಂದ 58,893 ರೈತರು ನೋಂದಣಿ ಮಾಡಿಸಿದ್ದಾರೆ. ಕೊಬ್ಬರಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. https://ainlivenews.com/good-news-for-those-with-less-than-2-hectares-of-land-rs-10000-directly-to-the-account/ ಮೈಸೂರು, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾರಾಟ ಮಂಡಳಿಯಿಂದ ಕೊಬ್ಬರಿ ಖರೀದಿ ಸಂಸ್ಥೆಯಾಗಿ ನೇಮಿಸಲಾಗಿದೆ. ಹಾಸನ ಸೇರಿ ಉಳಿದ ಜಿಲ್ಲೆಗಳಲ್ಲಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More