Author: AIN Author

ತಿರುವನಂತಪುರಂ: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ. ಶಾಸನಬದ್ಧ ಅವಶ್ಯಕತೆಗಳ ಭಾಗವಾಗಿ, ಸುರೇಂದ್ರನ್ ಅವರು ಇತ್ತೀಚೆಗೆ ತಮ್ಮ ಪ್ರಕರಣಗಳ ವಿವರಗಳನ್ನು ಮೂರು ಪುಟಗಳಲ್ಲಿ ಪ್ರಕಟಿಸಿದ್ದರು. ಸುರೇಂದ್ರನ್‌ ಬಿಜೆಪಿ ರಾಜ್ಯಾಧ್ಯಕ್ಷರೂ ಹೌದು. ಅದೇ ರೀತಿ, ಬಿಜೆಪಿ ಪಕ್ಷದ ಎರ್ನಾಕುಲಂ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ರಾಧಾಕೃಷ್ಣನ್ ವಿರುದ್ಧ ಸುಮಾರು 211 ಪ್ರಕರಣಗಳಿವೆ. https://ainlivenews.com/indian-navy-rescued-23-pakistani-nationals/ ಹೆಚ್ಚಿನ ಪ್ರಕರಣಗಳು 2018 ರಲ್ಲಿ ನಡೆದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿವೆ. ಈ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಪಕ್ಷದ ಮುಖಂಡರು ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ತಿಳಿಸಿದ್ದಾರೆ. ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಏತನ್ಮಧ್ಯೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶುಕ್ರವಾರ ಸುರೇಂದ್ರನ್, ರಾಧಾಕೃಷ್ಣನ್, ಪಕ್ಷದ ಅಲಪ್ಪುಳದ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ವಟಕರ ಅಭ್ಯರ್ಥಿ ಪ್ರಫುಲ್…

Read More

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರ ದಾಳಿಗೆ ಭಾರತೀಯ ನೌಕಾಪಡೆ (Indian Navy) ತಕ್ಕ ಪ್ರತ್ಯುತ್ತರ ನೀಡಿದೆ. ಅಲ್ಲದೇ ಇರಾನ್‌ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳನ್ನು ರಕ್ಷಿಸಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಕಡಲ್ಗಳ್ಳರ ವಿರೋಧಿ ಕಾರ್ಯಾಚರಣೆಯಲ್ಲಿ ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. https://ainlivenews.com/campaign-by-auto-drivers-for-the-release-of-rapido-autos/ ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ‘ಅಲ್-ಕಂಬಾರ್ 786’ನಲ್ಲಿ ಸಂಭಾವ್ಯ ಕಡಲ್ಗಳ್ಳತನದ ಬಗ್ಗೆ ನೌಕಾಪಡೆಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎರಡು ಭಾರತೀಯ ನೌಕಾಪಡೆಯ ಹಡಗುಗಳನ್ನು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿತ್ತು. ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ರಕ್ಷಿಸಲಾಯಿತು ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ. ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ಶುಚಿಗೊಳಿಸಿದವು. ಹಡಗನ್ನು ಸುರಕ್ಷಿತವಾಗಿ ಸಾಗಿಸಲು ಸೂಕ್ತ ಕ್ರಮಕೈಗೊಂಡಿವೆ. ಇದರಿಂದಾಗಿ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಬಹುದು ಎಂದು ನೌಕಾಪಡೆ ಹೇಳಿದೆ

Read More

ಬೆಂಗಳೂರು: ಹೃದಯಾಘಾತದಿಂದ ತಮಿಳು ಖ್ಯಾತ ಖಳ ನಟ ಡೇನಿಯಲ್ ಬಾಲಾಜಿ ಮಾರ್ಚ್ 29ರ ಶುಕ್ರವಾರ ರಾತ್ರಿ ನಿಧನರಾದರು. ಡೇನಿಯಲ್ ಬಾಲಾಜಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ನಟ ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದರು. ಬಾಲಾಜಿ ಅವರ ನಿಧನದ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಡೇನಿಯಲ್ ಬಾಲಾಜಿ ಒಬ್ಬ ಉತ್ತಮ ನಟ. ʻವೆಟ್ಟೈಯಾಡು ವಿಲಯಾಡುʼ, ʻಪೊಲ್ಲಾಧವನ್ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. https://ainlivenews.com/kohli-wrote-the-maximum-six-for-rcb-in-the-ipl-tournament/ ರಾತ್ರಿ ಹೃದಯಾಘಾತದಿಂದ ಡೇನಿಯಲ್ ಬಾಲಾಜಿ ನಿಧನ ಎದೆ ನೋವಿನಿಂದ ಬಳಲುತ್ತಿದ್ದ ನಟ ಡೇನಿಯಲ್ ಬಾಲಾಜಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಡೇನಿಯಲ್ 2002ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ್ದ ಡೇನಿಯಲ್ ಬಾಲಾಜಿ ಖ್ಯಾತ ನಟರಾದ ಕಮಲ್‌ಹಾಸನ್, ಸೂರ್ಯ, ಧನುಷ್, ವೆಂಕಟೇಶ್ ಯಶ್ ಸೇರಿ ಹಲವು ನಾಯಕರ ಚಿತ್ರಗಳಲ್ಲಿ ಅಭಿನಯ ಡೇನಿಯಲ್ ಬಾಲಾಜಿ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ

Read More

ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದ್ದರೆ. ಈ ಅರ್ಧಶತಕ ಹೋರಾಟದಲ್ಲಿ 3 ಸಿಕ್ಸರ್ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಇದೀಗ ಆರ್‌ಸಿಬಿ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಕ್ರಿಸ್ ದಾಖಲೆ ಮುರಿದಿದ್ದಾರೆ. ಕೊಹ್ಲಿ ಆರ್‌ಸಿಬಿ ಪರ 240 ಸಿಕ್ಸರ್ ಸಿಡಿಸಿದ್ದರೆ, ಕ್ರಿಸ್ ಗೇಲ್ 239 ಸಿಕ್ಸರ್ ಮೂಲಕ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಗರಿಷ್ಠ ಸಿಕ್ಸರ್ ದಾಖಲೆ ವಿರಾಟ್ ಕೊಹ್ಲಿ : 240 ಕ್ರಿಸ್ ಗೇಲ್ : 239 ಎಬಿ ಡಿವಿಲಿಯರ್ಸ್ : 238 ಗ್ಲೆನ್ ಮ್ಯಾಕ್ಸ್‌ವೆಲ್ : 67 ಫಾಫ್ ಡುಪ್ಲೆಸಿಸ್ : 50 ಐಪಿಎಲ್ 2024ರ ಟೂರ್ನಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರೇಂಜ್ ಕ್ಯಾಪ್ ಹೋಲ್ಡರ್ ಆಗಿರುವ ಕೊಹ್ಲಿ ದಿಟ್ಟ ಹೋರಾಟದ ಮೂಲಕ ಎದುರಾಗಳಿಗೆ…

Read More

ಬೆಂಗಳೂರು: ಬೌಲರ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ತವರಿನಲ್ಲಿ ಆರ್‌ಸಿಬಿ (RCB) ಪಂದ್ಯವನ್ನು ಸೋತಿದ್ದು ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 7 ವಿಕೆಟ್‌ಗಳ ಜಯ ಸಾಧಿಸಿದೆ. ಸತತ ಎರಡು ಜಯ ಸಾಧಿಸುವ ಮೂಲಕ ಕೋಲ್ಕತ್ತಾ ಐಪಿಎಲ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಗೆಲ್ಲಲು 183 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ  16.5 ಓವರ್‌ಗಳಲ್ಲಿ 3  ವಿಕೆಟ್‌ ನಷ್ಟಕ್ಕೆ  186 ರನ್‌ ಹೊಡೆದು ಜಯ ಸಾಧಿಸಿತು. ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲಾ 9 ಪಂದ್ಯಗಳನ್ನು ತವರಿನ ತಂಡಗಳೇ ಜಯಗಳಿಸಿದ್ದವು. ಆದರೆ ಆರ್‌ಸಿಬಿ ತವರಿನ ಎರಡನೇ ಪಂದ್ಯದಲ್ಲಿ ಎಡವಿದೆ. ಸ್ಫೋಟಕ ಆರಂಭ: ಆರಂಭಿಕ ಆಟಗಾರರಾದ ಪಿಲ್‌ ಸಾಲ್ಟ್‌ (Phil Salt) ಮತ್ತು ಸುನೀಲ್‌ ನರೈನ್‌ (Sunil Narine) ಕೇವಲ 39 ಎಸೆತಗಳಲ್ಲಿ 86 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿದರು. ನರೈನ್‌ 47 ರನ್‌ (22 ಎಸೆತ, 2 ಬೌಂಡರಿ, 5 ಸಿಕ್ಸ್‌) ಹೊಡೆದರೆ ಕೀಪರ್‌ ಪಿಲ್‌ ಸಾಲ್ಟ್‌ 30 ರನ್‌ (20 ಎಸೆತ, 2 ಬೌಂಡರಿ,…

Read More

ಬೆಳಗಾವಿ:- ಮನುಷ್ಯ ನೀರಡಿಕೆಯಾದಾಗ ಕೇಳಬಹುದು,ಆದರೆ ಮೂಕ ಜೀವಗಳ ಕೂಗು ಯಾರಿಗೂ ಕೇಳಿಸುವುದಿಲ್ಲ. ಭಯಂಕರ ಬಿಸಿಲಿನ ತಾಪಮಾನಕ್ಕೆ ಪಕ್ಷಿಗಳು ಅಕ್ಷರಶಃ ನಲುಗಿ ಹೋಗಿವೆ ಮೂಕ ಜೀವಗಳ ಸ್ಥಿತಿಯನ್ನ ಮನಗಂಡು ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ಮಾಡಿದ್ದೇನು ಅಂತಿರಾ ತೋರಿಸ್ತೀವಿ ನೋಡಿ… https://ainlivenews.com/if-the-elections-are-held-kumaraswamy-will-have-a-heart-problem/ ಈ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಬರಗಿ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ. ಪ್ರತಿಯೊಬ್ಬರ ಕೈಯಲ್ಲೊಂದು ನೀರಿನ ಬಾಟಲ್ ಅದರ ಮೇಲೊಂದು ಪ್ಲೇಟ್, ಇವೆಲ್ಲವನ್ನೂ ವಿಶೇಷವಾಗಿ ವಿನ್ಯಾಸಗೊಳಿಸುತ್ತಿರುವ ಮಕ್ಕಳು. ಇವರೆಲ್ಲಾ ಯಾರು ಇದೆನ್ ಯಾವುದಾದ್ರೂ ಕಾಂಪಿಟೇಶನ್ ಸ್ಪರ್ಧೆ ಇರಬಹುದಾ ಅಂದಕೊಂಡ್ರಾ ಖಂಡಿತ ಅಲ್ಲ ಇವರೆಲ್ಲರೂ ತಮ್ಮ ಕೈಲಾದಷ್ಟು ಪಕ್ಷಿ ಸಂಕುಲದ ಉಳುವಿಗೆ ಪಣತೊಟ್ಟು ಪ್ಲ್ಯಾಸ್ಟಿಕ್ ಹಾಗೂ ಗಿಡದ ಸಿಪ್ಪೆ,ತೆಂಗಿನಕಾಯಿ ಬಳಸಿಕೊಂಡು ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಂಬರಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸೇರಿ ಪಕ್ಷಿ ಸಂಕುಲದ ಉಳಿವಿಗಾಗಿ ಇಂಥಹ ಒಂದು…

Read More

ಮಂಡ್ಯ:- ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿಗೆ ಹಾರ್ಟ್​​ ಸಮಸ್ಯೆ ಬರುತ್ತೆ ಎಂದು ಹೇಳುವ ಮೂಲಕ ಶಾಸಕ ಬಂಡಿಸಿದ್ದೇಗೌಡ ವ್ಯಂಗ್ಯವಾಗಿದ್ದಾರೆ. ಮೂರೇ ದಿನದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗುತ್ತದೆ. ನಾಲ್ಕನೇ ದಿನಕ್ಕೆ ರಾಜ್ಯ ಸುತ್ತುತ್ತಾರೆ, ಅದು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು. https://ainlivenews.com/fed-up-with-his-wifes-immoral-relationship-the-husband-hanged-himself/ ಸಚಿವ ಚಲುವರಾಯಸ್ವಾಮಿ ಅವರಿಗೆ ಇರುವ ಕಾಯಿಲೆ ಹೆಚ್​ಡಿ ಕುಮಾರಸ್ವಾಮಿಯವರಿಗೂ ಇದೆ. ಆದರೆ, ಚಲುವರಾಯಸ್ವಾಮಿ ಆಸ್ಪತ್ರೆಗೆ ದಾಖಲಾದರೆ ಒಂದು ತಿಂಗಳು ಆಚೆ ಬರಲ್ಲ. ಹೆಚ್​ಡಿ ಕುಮಾರಸ್ವಾಮಿ ಹೇಗೆ ಶಸ್ತ್ರಚಿಕಿತ್ಸೆಯಾದ ಎರಡೇ ದಿನಕ್ಕೆ ಆಚೆ ಹೇಗೆ ಬರುತ್ತಾರೆ?. ಇದು ಅಭಿವೃದ್ಧಿ ವರ್ಸಸ್ ಕಣ್ಣೀರಿಡುವ ಜನರ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೇ ಕೇಳಬೇಡಿ. ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿ. ಕಾಂಗ್ರೆಸ್ ಅಭ್ಯರ್ಥಿಗೆ ಅತಿಹೆಚ್ಚು ಮತ ನೀಡಿ ಗೆಲ್ಲಿಸಿ ಎಂದರು.

Read More

ಬೀದರ್ : ಅನ್ಯ ವ್ಯಕ್ತಿಯ ಜೊತೆಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಪತಿರಾಯ ‌ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್‌ ತಾಲೂಕಿನ ಅಣದೂರ್ ಗ್ರಾಮದಲ್ಲಿ ನಡೆದಿದೆ… 27 ವರ್ಷದ ದಾಸರ್ ಎಂಬ ನತದೃಷ್ಠ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ಗ್ರಾಮದ ಜನರು ಕುಡಿಯುವ ವಾಟರ್ ಟ್ಯಾಂಕ್‌ನಲ್ಲಿ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ… https://ainlivenews.com/it-shock-for-builders-in-bellam-morning-20-places-attacked-checked/ ಎರಡು ದಿನಗಳ ಹಿಂದೆ ಟ್ಯಾಂಕ್ ಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಟ್ಯಾಂಕರ್ ನೀರನ್ನೆ ಅಣದೂರ ಗ್ರಾಮದ ಎರಡು ವಾಡಿನ ಜನ್ರು‌ ಕುಡಿದಿದ್ದಾರೆ‌… ನೀರು ವಾಸನೆ ಬರುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಇಂದು ವಾಟರ್ ಟ್ಯಾಂಕ್ ಚೆಕ್ ಮಾಡಿದಾಗ ಶವ ಪತ್ತೆಯಾಗಿದ್ದು ಶವ ಇದ್ದ ನೀರು ಕುಡಿದ ಗ್ರಾಮಸ್ಥರು ಆತಂಕಗೊಂಡಿದ್ದಾರೆ… ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ವಾಟರ್ ಟ್ಯಾಂಕ್ ನಿಂದ ಶವವನ್ನು ಮೇಲೆತ್ತುತ್ತಿದ್ದು ಸ್ಥಳದಲ್ಲಿ ಸಂಬಂಧಕರ ಆಕ್ರಂಧನ ಮುಗಿಲು ಮುಟ್ಟಿದೆ… ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಲ್ಡರ್‌ಗಳಿಗೆ ಐಟಿ ಶಾಕ್ ನೀಡಿದ್ದು, 20 ಕಡೆ ಅಧಿಕಾರಿಗಳು ದಾಳಿ ನಡೆದಿದೆ. ಬಿಲ್ಡರ್‌ಗಳ ಮನೆಗಳು ಹಾಗೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕೆ.ಆರ್. ಪುರಂ ಸಮೀಪದ ಕೊಡಿಗೇಹಳ್ಳಿಯ ನಂಜುಂಡೇಶ್ವರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ ಸೇರಿ ಹಲವು ಪ್ರಮುಖ ಬಿಲ್ಡರ್‌ಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕಡತಗಳ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇದುವರೆಗೂ ಯಾರನ್ನೂ ಬಂಧಿಸಿರುವ, ಹಣ ವಶಪಡಿಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. https://ainlivenews.com/jds-taking-revenge-for-defeat-in-mandya/ ತೆರಿಗೆ ವಂಚನೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕೀಯ ನಾಯಕರಿಗೆ ಫಂಡಿಂಗ್‌ ಮಾಡುತ್ತಿರುವ ಕುರಿತು ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಹಣದ ಸಾಗಣೆ ಕುರಿತು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಜಯನಗರ,…

Read More

ಮಂಡ್ಯ :- ಈ ಹಿಂದೆ ಅಂದ್ರೆ 2019 ರ ಸಕ್ಕರೆ ನಾಡು ಮಂಡ್ಯದಲ್ಲಿ ತನ್ನ ಸೋಲಿನ ಸೇಡು ತೀರಿಸಿಕೊಳ್ಳಲು ಅಪ್ಪನ ಗೆಲುವಿಗೆ ಮಗ ನಿಖಿಲ್ ಪಣತೊಟ್ಟಿದ್ದಾರೆ. https://ainlivenews.com/who-is-rcbs-next-opponent-this-match-must-be-won-fop-pade/ ತನಗೆ 2019 ರಲ್ಲಿ ಆದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನಿಖಿಲ್ ತನ್ನ ತಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಅವರ ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಸುಮಲತಾ ಪರ ತೆರೆ ಹಿಂದೆ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದ ಚಲುವರಾಯಸ್ವಾಮಿ ಕ್ಷೇತ್ರವಾದ ನಾಗಮಂಗಲದಿಂಲೇ ನಿಖಿಲ್ ಇಂದಿನಿಂದ ತಂದೆಯ ಪರ ಚುನಾವಣೆಯ ಪ್ರಚಾರ ಆರಂಭ ಮಾಡಲಿದ್ದಾರೆ ಈ ಮೂಲಕ ಚಲುವರಾಯಸ್ವಾಮಿ ಅವರಿಗೆ ನಿಖಿಲ್ ಠಕ್ಕರ್ ನೀಡಲು ಹೊರಟಿದ್ದಾರೆ. ಇಂದು ನಿಖಿಲ್ ನಾಗಮಂಗಲದಲ್ಲಿ 11 ಗಂಟೆಗೆ ಹಾಗೂ ಕೆಆರ್ ಪೇಟೆಯಲ್ಲಿ 2 ಗಂಟೆಗೆ ಬಿಜೆಪಿ-ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರ ಜೊತೆ ಚುನಾವಣಾ ಪ್ರಚಾರ ಸಭೆ ಮಾಡಲಿದ್ದಾರೆ. ಒಟ್ಟಾರೆ ಕಳೆದ ಬಾರಿಯಾದ ಸೋಲಿನ ಸೇಡು ತೀರಿಸಿಕೊಳ್ಳಲು ತಂದೆ ಕುಮಾರಸ್ವಾಮಿ ಅವರ ಗೆಲುವಿಗಾಗಿ ನಿಖಿಲ್ ಮಂಡ್ಯದಲ್ಲಿ…

Read More