Author: AIN Author

ಬೆಂಗಳೂರು ಗ್ರಾಮಾಂತರ:- ಮರದ ಮೇಲಿಂದ ಬಿದ್ದು ಬಿಎಂಟಿಸಿ ಬಸ್ ಚಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದಲ್ಲಿ ಜರುಗಿದೆ. https://ainlivenews.com/what-is-the-difference-between-a-yellow-banana-and-a-red-banana-here-are-the-details/ 43 ವರ್ಷದ ಮಂಜುನಾಥ್ ಮೃತ ರ್ದುದೈವಿ ಎನ್ನಲಾಗಿದೆ. ಇವರು ಕಳೆದ 15 ವರ್ಷಗಳಿಂದ ಪೀಣ್ಯದ ಬಿಎಂಟಿಸಿ ಡಿಪೋ 9ರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಹಳದಿ ಬಾಳೆಹಣ್ಣಿಗೂ ಕೆಂಪು ಬಾಳೆಹಣ್ಣಿಗೂ ಏನು ವ್ಯತ್ಯಾಸ? ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ? ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಕೆಂಪು ಬಾಳೆಹಣ್ಣುಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ವ್ಯವಸ್ಥೆ, ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ. https://ainlivenews.com/lsg-vs-pbks-lucknow-win-the-toss-punjab-kings-bowl-first/ ಕೆಂಪು ಬಾಳೆಹಣ್ಣುಗಳು ಹಳದಿ ಬಾಳೆಹಣ್ಣುಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ. ಆದರೆ ಎರಡೂ ಪ್ರಭೇದಗಳು ಅವುಗಳ ಪೌಷ್ಟಿಕಾಂಶದ ಮೌಲ್ಯದ ವಿಷಯದಲ್ಲಿ ಒಂದೇ ರೀತಿ ಇರುತ್ತವೆ. ಹಳದಿ ಬಾಳೆಹಣ್ಣುಗಳಿಗೆ ಹೋಲಿಸಿದರೆ, ಕೆಂಪು ಬಾಳೆಹಣ್ಣುಗಳಲ್ಲಿ ವಿಟಮಿನ್ ಸಿ, ಕೆಲವು ಉತ್ಕರ್ಷಣ ನಿರೋಧಕಗಳು ಕೊಂಚ ಹೆಚ್ಚಾಗಿರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ ವಿಷಯದಲ್ಲಿ ಕಡಿಮೆ ಇರುತ್ತದೆ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ. ತೂಕ ಇಳಿಕೆ: ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಕ್ಯಾಲೋರಿ ಅಂಶದಿಂದಾಗಿ, ಕೆಂಪು ಬಾಳೆಹಣ್ಣುಗಳು ದೀರ್ಘಕಾಲದವರೆಗೆ ಪೂರ್ಣವಾಗಿ ಅನುಭವಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಕಡಿಮೆ ಕ್ಯಾಲೊರಿಗಳನ್ನು ನೀಡುತ್ತದೆ. ಕಣ್ಣಿನ ಆರೋಗ್ಯಕ್ಕೆ ಸಹಕಾರಿ: ಕೆಂಪು ಬಾಳೆಹಣ್ಣಿನಿಂದ ಪ್ರಿಬಯಾಟಿಕ್‌ಗಳು ಮತ್ತು ಫೈಬರ್ ಉತ್ತಮ ಕರುಳಿನ ಸಸ್ಯಗಳ…

Read More

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ನಡೆಯುತ್ತಿದ್ದು, ಮೊದಲು ಟಾಸ್ ಗೆದ್ದ ಲಕ್ನೋ ಬ್ಯಾಟಿಂಗ್ ಆಯ್ದು ಕೊಂಡಿದೆ. https://ainlivenews.com/do-you-know-the-benefits-of-eating-dates-on-an-empty-stomach-2/ ಐಪಿಎಲ್ 2024 ರ 11ನೇ ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಲಕ್ನೋ ಕಳೆದ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಗೆಲುವಿನ ಹಾದಿಗೆ ಮರಳಲು ಬಯಸಿದರೆ, ಈ ತಂಡದ ವಿರುದ್ಧ ಪ್ರತಿಯೊಂದು ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಇತ್ತ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನೊಂದಿಗೆ ಸೀಸನ್ ಪ್ರಾರಂಭಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಶಿಖರ್ ಧವನ್ ನೇತೃತ್ವದ ತಂಡ ಕೂಡ ಹಿಂದಿನ ಸೋಲನ್ನು ಮರೆತು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದೆ.…

Read More

ರೋಗನಿರೋಧಕ ಶಕ್ತಿ ಹೆಚ್ಚಿಸುವ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದರಿಂದ ನಿಮಗೆ ಯಾವ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿಯೀಣ. ತ್ವರಿತ ಶಕ್ತಿಯನ್ನು ನೀಡುತ್ತದೆ: ಖರ್ಜೂರದಲ್ಲಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಆದ್ದರಿಂದ ತ್ವರಿತ ಶಕ್ತಿಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ಸೇವಿಸಿ. ಎರಡರಿಂದ ನಾಲ್ಕು ಖರ್ಜೂರವನ್ನು ತಿನ್ನುವುದರಿಂದ ತ್ವರಿತ ಶಕ್ತಿ ದೊರೆಯುತ್ತದೆ. https://ainlivenews.com/former-cm-kumaranna-is-sure-to-be-made-union-minister/ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್‌ಗಳು, ಬ್ಯಾಕ್ಟೀರಿಯಾ ವಿರೋಧಿ, ಆಯಂಟಿ ಆಕ್ಸಿಡೆಂಟ್‌ಗಳಂತಹ ಗುಣಲಕ್ಷಣಗಳು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ: ತಾಮ್ರ, ಸೆಲೆನಿಯಮ್ ಮತ್ತು ಮೆಗ್ನೀಸಿಯಮ್ ಖರ್ಜೂರದಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ದುರ್ಬಲ ಮೂಳೆಗಳನ್ನು ಬಲಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಕೆ ರಕ್ತ ದಪ್ಪವಾಗುವುದನ್ನು ತಡೆಯುತ್ತದೆ ಮತ್ತು ಮೂಳೆಗಳ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಪಿರಿಯಡ್ಸ್‌ನಲ್ಲಿ ಪ್ರಯೋಜನಕಾರಿ: ಪಿರಿಯಡ್ಸ್ ಸಮಯದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿರುವ ಮಹಿಳೆಯರು ತಮ್ಮ…

Read More

ಮಂಡ್ಯ:- ಮಾಜಿ ಸಿಎಂ ಕುಮಾರಣ್ಣನನ್ನು ಕೇಂದ್ರ ಸಚಿವರನ್ನಾಗಿ ಮಾಡುವುದು ಖಚಿತ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ‌ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ ಎಂದು ಹೇಳಿದ್ದಾರೆ. https://ainlivenews.com/i-am-not-upset-the-high-command-came-to-a-decision/ ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ‌ ಬಂದಿದೆ. ಬಿಎಸ್ ಯಡಿಯೂರಪ್ಪ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು. ಕೆಆರ್​ಎಸ್​ ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ. ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು. ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ. ಗುತ್ತಿಗೆದಾರನಿಗೆ ಮತ ನೀಡಿದರೆ ಕಾವೇರಿ ಉಳಿಯಲ್ಲ. ಕರುಣೆಯ ಕುಮಾರಣ್ಣನಿಗೆ ಮತ ನೀಡಿ ಎಂದಿದ್ದಾರೆ ಅಸೆಂಬ್ಲಿಯಲ್ಲಿ ಜೆಡಿಎಸ್‌ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲುತ್ತಾರೆ. ಮಂಡ್ಯದವರು ಸ್ವಾಭಿಮಾನಿಗಳು. ಮಂಡ್ಯ, ಮೈಸೂರಿಗೆ ಅವಿನಾಭಾವ ಸಂಬಂಧ ಇದೆ.…

Read More

ಕೋಲಾರ :- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆ.ಹೆಚ್.ಮುನಿಯಪ್ಪ ಗೆ ತೀವ್ರ ನಿರಾಸೆಯಾಗಿದೆ.. ಅಳಿಯ ಚಿಕ್ಕಪೆದ್ದಣ್ಣನಿಗೆ ಸಿಗಬೇಕಿದ್ದ ಟಿಕೆಟ್ ಬೆಂಗಳೂರಿನ ಗೌತಮ್ ಪಾಲಾಗಿದೆ. ಕೆ.ಹೆಚ್.ಎಂ ಬಣಕ್ಕೆ ಹಿನ್ನಡೆ ಆಗಿದ್ದು, ರಮೇಶ್ ಕುಮಾರ್ ಬಣ ಕೈ ಮೇಲಾಗಿದೆ..ಬೂದಿಮುಚ್ಚಿದ ಕೆಂಡದಂತಹ ಕೋಲಾರದ ಕೈ ಟಿಕೆಟ್ ಅಸಮಾಧಾನ, ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರುತ್ತದೋ ಎಂಬ ಅತಂಕದಲ್ಲಿ ಕೋಲಾರದ ಜನ ತಬ್ಬಿಬ್ಬಾಗಿದ್ದಾರೆ.. https://ainlivenews.com/decision-to-join-bjp-after-meeting-with-supporters/ ಕೋಲಾರ ಲೊಕಸಭಾ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಕೆಹೆಚ್.ಮುನಿಯಪ್ಪಗೆ ಭಾರಿ ನಿರಾಸೆಯಾಗಿದೆ.. ಏಳು ಸಲ ಕೋಲಾರ ಸಂಸದನಾಗಿದ್ದ ಕೆ.ಹೆಚ್.ಎಂ ಗೆ ಇದು ರಾಜಕೀಯ ಜಿವನದ ಅತಿದೊಡ್ಡ ಹಿನ್ನಡೆ ಎನ್ನಲಾಗ್ತಿದೆ. ಕೆ.ಹೆಚ್.ಎಂ ಅಳಿಯ ಚಿಕ್ಕಪೆದ್ದಣ್ಣನ ಹೆಸರೇ ಅಂತಿಮ ಆಗಿದೆ.. ಇನ್ನೇನು ಘೋಷಣೆ ಮಾತ್ರ ಬಾಕಿ ಎನ್ನುವ ವೇಳೆ ರಮೇಶ್ ಕುಮಾರ್ ಬಣದ ಎಂ.ಸಿ.ಸುಧಾಕರ್, ನಂಜೇಗೌಡ, ನಾರಾಯಣಸ್ವಾಮಿ ಸೇರಿದಂತೆ ಕೋಲಾರದ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಒಡ್ಡಿತ್ತು.. ಇದರಿಂದ ತಬ್ಬಿಬ್ಬಾದ ಸಿದ್ದರಾಮಯ್ಯ ಮತ್ತು‌ ಡಿ.ಕೆ.ಶಿ ರವರು.ಕೆ.ಹೆಚ್.ಎಂ ಕುಟುಂಬಕ್ಕು ಮತ್ತು ರಮೇಶ್…

Read More

ಬೆಂಗಳೂರು :- ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಜೊತೆ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. https://ainlivenews.com/our-alliance-will-continue-even-after-the-mp-election-hd-deve-gowda/ ಈ ಸಂಬಂಧ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಪಕ್ಷದ ವರಿಷ್ಟರು ಹೇಳುತ್ತಿದ್ದಾರೆ ಮತ್ತು ತನಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆ. ನಿನ್ನೆ ತಮ್ಮನ್ನು ಬೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ತನಗೆ ಅದೇ ಮಾತನ್ನು ಹೇಳಿದ್ದಾರೆ. ಆದರೆ ಬೆಂಬಲಿಗರು ಮಂಡ್ಯದಿಂದ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ ಎಂದು ಸುಮಲತಾ ಹೇಳಿದರು. ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ, ಏಪ್ರಿಲ್ 3 ರಂದು ಕಾರ್ಯಕರ್ತರ ಜೊತೆ ಮತ್ತೊಂದು ಸಭೆ ನಡೆಸಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಹೇಳಿದರು.

Read More

ತುಮಕೂರು:- MP ಎಲೆಕ್ಷನ್ ನಂತರವೂ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಚುನಾವಣೆ ಮುಗಿದ ಮೇಲೇಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ. ಈ ಸಂಬಂಧ ಕಾಪಾಡುಕೊಂಡು‌ ಹೋಗುತ್ತೇವೆ. ನಮ್ಮ ಬಾಂಧವ್ಯ ತಾತ್ಕಾಲಿಕವಲ್ಲ. ಈ ಬಾಂಧವ್ಯವನ್ನ ಮುಂದುವರೆಸಿಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು. https://ainlivenews.com/former-mlc-tejaswini-gowda-left-bjp-and-joined-congress/ ಯಾಕೆ ಕಾಂಗ್ರೆಸ್ ಈ ಹೀನಾಯ ಸ್ಥಿತಿ ತಲುಪಿದೆ, ಎಲ್ಲಿದೆ ಕಾಂಗ್ರೆಸ್? ಇಡೀ ಹಿಂದೂಸ್ತಾನದಲ್ಲಿ ಕಾಂಗ್ರೆಸ್ ನಾಲ್ಕು ಕಡೆ ಇದೆ. ಇಡೀ ದೇಶದಲ್ಲಿ ರಾಜಸ್ತಾನ್, ಮಧ್ಯ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ ಎಂದರು ಈ ಕರ್ನಾಟಕ ಸಮನ್ವಯ ಸಮಿತಿಯಲ್ಲಿ ನಾನು ಒಂದು ಶಬ್ಧ ಬಳಕೆ ಮಾಡಿದೆ. ನಾನು ಯಾವತ್ತೂ ಕಟುವಾದ ಶಬ್ಧ ಬಳಕೆ ಮಾಡಲ್ಲ. ಜೆಡಿಎಸ್ ಎಲ್ಲಿದೆ ಅಂತಾ ಮೈಸೂರಿನಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಪ್ರಶ್ನೆ ಮಾಡುತ್ತಾರೆ. ಕುಮಾರಸ್ವಾಮಿಗೆ ಅವರ ಮಗನನ್ನ ಗೆಲ್ಲಿಸಲು ಆಗಲ್ಲ, ಕುಮಾರಸ್ವಾಮಿ ತಂದೆ ತುಮಕೂರಿನಲ್ಲಿ ನಿಂತಾಗ ಗೆಲ್ಲಿಸಲು ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.…

Read More

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಚಿಕ್ಕಬಾಣಾವರದ ಅಬ್ಬಿಗೆರೆ ಕಾಲೋನಿಯಲ್ಲಿ ನಡೆದಿದೆ. https://ainlivenews.com/sumalatha-ambharish-on-3rd-april-i-will-meet-in-mandya-and-say-there-sumalatha-ambarish/ ಶರತ್ ಕುಮಾರ್ (16) ನಾಪತ್ತೆಯಾಗಿರುವ ವಿದ್ಯಾರ್ಥಿಯಾಗಿದ್ದು  ಇದೇ ತಿಂಗಳು 26 ರಂದು ಪರೀಕ್ಷೆ ಬರೆಯಲು ಹೋದ ಶರತ್ ಕುಮಾರ್ ಮನೆಗೆ  ವಾಪಸ್‌  ಬರಲೇ ಇಲ್ಲ. ಅಂದಿನಿಂದ ಎಲ್ಲಾ ಕಡೆ ಹುಡುಕಾಟ ನೆಡೆಸುತ್ತಿರುವ ಪೋಷಕರು. ತಂದೆ ಸುರೇಶ್ ರಿಂದ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು . ಮಗನ ನಾಪತ್ತೆಯಿಂದ ನಿತ್ಯ ಆತಂಕದಲ್ಲೇ ಬದುಕುತ್ತಿರುವ ಪೋಷಕರು. ಮಗ ಎಲ್ಲೇ ಇದ್ರೂ ಮನೆಗೆ ಬಾ ಎಂದು ಮೊರೆ ಇಡುತ್ತಿರುವ ತಂದೆ ತಾಯಿ.

Read More

ಲಕ್ನೋ: ಗ್ಯಾಂಗ್‍ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಯವರ‌ (Mukhtar Ansari) ಅಂತ್ಯಸಂಸ್ಕಾರ ಗಾಜಿಪುರದ ಮೊಹಮ್ಮದಾಬಾದ್‍ನ ಕಾಳಿ ಬಾಗ್ ಸ್ಮಶಾನದಲ್ಲಿ ನಡೆಯಿತು. https://ainlivenews.com/akhilesh-yadav-gangster-ansaris-death-akhilesh-yadav-has-demanded-a-supreme-court-probe/ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಅನ್ಸಾರಿ ಬೆಂಬಲಿಗರು ಸೇರಿದ್ದರು. ಮುಖ್ತಾರ್, ತಾಯಿಯ ಸಮಾಧಿ ಪಕ್ಕದಲ್ಲಿಯೇ ಅನ್ಸಾರಿಯವರ ಮೃತ ದೇಹವನ್ನು ಸಮಾಧಿ ಮಾಡಲಾಯಿತು. ಅವರ ಮಗ ಉಮರ್ ಅನ್ಸಾರಿ ಮತ್ತು ಸಹೋದರ ಅಫ್ಜಲ್ ಅನ್ಸಾರಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಇದಕ್ಕೂ ಮೊದಲು, ಮುಖ್ತಾರ್ ಪಾರ್ಥೀವ ಶರೀರವನ್ನು ಅವರ ನಿವಾಸದಿಂದ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಬೃಹತ್ ಜನಸಾಗರವೇ ಸೇರಿತ್ತು, ಇದರಿಂದಾಗಿ ಭಾರೀ ಭದ್ರತಾ ವ್ಯವಸ್ಥೆಗಳೊಂದಿಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ? ಶುಕ್ರವಾರ ತಡರಾತ್ರಿ, ಅನ್ಸಾರಿ ಮರಣೋತ್ತರ ಪರೀಕ್ಷೆಯು ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ವರದಿಯಾಗಿದೆ. ಶವಪರೀಕ್ಷೆಯನ್ನು ಐವರು ವೈದ್ಯರ ಸಮಿತಿ ನಡೆಸಿದ್ದು, ಪರೀಕ್ಷೆಯ ನಂತರ, ಮುಖ್ತರ್ ಅವರ ಪಾರ್ಥಿವ ಶರೀರವನ್ನು ಅವರ ಮಗ ಉಮರ್ ಅನ್ಸಾರಿಗೆ ಹಸ್ತಾಂತರಿಸಲಾಗಿತ್ತು.

Read More