Author: AIN Author

ಹುಬ್ಬಳ್ಳಿ : ಯಾವುದೇ ವಿಷಯಗಳಲ್ಲಿ ಯಾವುದೇ ರೈತರ ಶ್ರೇಯೋಭಿವೃದ್ಧಿಯದಲ್ಲಿ ರೈತ ಪರ ಆಡಳಿತವನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡತಾ ಇಲ್ಲ ಆದ್ದರಿಂದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹಸಿರು ಸೇನೆ ಬೆಂಬಲಿತ ಅಭ್ಯರ್ಥಿಯನ್ನ ಇಳಿಸುವುದಾಗಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು. https://ainlivenews.com/confusion-during-elections-is-natural-among-the-winning-parties/ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಧಾರವಾಡವಜಿಲ್ಲೆ ಸೇರಿದಂತೆ ರಾಜ್ಯಬರದಿಂದ ಮುಕ್ತವಾಗಿಲ್ಲ. ಇಲ್ಲೂ ಕೂಡ ನರೀಕ್ಷಿತ ಮಟ್ಟದಲ್ಲಿ ‌ಮಳೆಯಾಗದ ಕಾರಣ ರೈತಾಪಿ ವರ್ಗ ಕಂಗಾಲಾಗಿದೆ. ಹೀಗಾಗಿ ರೈತರು ಬರಗಾಲ ಕಾಮಗಾರಿ ಹಾಗೂ ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.ಯಾವುದೇ ಸಹಕಾರ ಸಹಾಯ ಆಗಿಲ್ಲ. ಪ್ರತಿ ಬಜೆಟ್ ನಲ್ಲಿಯೂ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಅನುದಾನ ಮೀಸಲಿಡಲಾಗುತ್ತದೆ. ಆದ್ರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ. ಆದ್ರೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುವದರ ಮೂಲಕ ‌ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಅದರ ಜೊತೆಗೆ ಬೆಣ್ಣೆ ಹಳ್ಳ ಯೋಜನೆಗೆ…

Read More

ಹುಬ್ಬಳ್ಳಿ: ಗೆಲ್ಲುವ ಪಕ್ಷಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲಗಳಿರುವುದು ಸಹಜ, ಬಿಜೆಪಿಯಲ್ಲಿ ಚಿತ್ರದುರ್ಗದ ಟಿಕೆಟ್ ವಿಚಾರದಲ್ಲಿರುವ ಗೊಂದಲವನ್ನು ನಾಯಕರು ಪರಿಹರಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಕುರಿತಂತೆ ಕೇಂದ್ರದ ನಾಯಕರೊಂದಿಗೆ ಮಾತನಾಡಿದ್ದೇನೆ. ಚುನಾವಣೆಯಲ್ಲಿ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳಬಾರದು ಎಂದರು. https://ainlivenews.com/pralada-joshi-has-no-opposition-from-us-sri-gurusiddha-rajayogindra/ ಮಂಡ್ಯ ಟಿಕೆಟ್ ವಿಚಾರದ ಕುರಿತಂತೆ ಸುಮಲತಾ ಅವರನ್ನು ಸಮಾಧಾನಗೊಳುಸುವ ಕೆಲಸ ನಡೆದಿದೆ ಎಂದು ಹೇಳಿದರು. ಮುರಾಘಮಠ ಸ್ವಾಮೀಜಿ ತಮ್ಮ ಹೇಳಿಕೆ ಬದಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಸಿದ್ದರಾಮಯ್ಯ ಅವರ ಮಗ ಯತ್ತಿಂದ್ರ ಅವರು ಬಳಸುತ್ತಿರುವ ಭಾಷೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಈಗಾಗಲೇ ಅಮಿಶ್ ಶಾ ವಿರುದ್ದದ ಪ್ರಕರಣವನ್ನು ಕೋರ್ಟ್ ವಜಾ ಮಾಡಿದ್ದು ಅವರು ಅಪರಾಧಿಯಲ್ಲ ಎನ್ನುವುದು ಸಾಭೀತಾಗಿದೆ. ಈ ವೇಳೆ ಅಮಿತ್ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರಲ್ಹಾದ್…

Read More

ಹುಬ್ಬಳ್ಳಿ: ಶ್ರೀ ಜಗದ್ಗುರು ಮೂರುಸಾವಿರ ಮಠವು ಪಕ್ಷಾತೀತವಾಗಿದ್ದು ರಾಜಕೀಯ ದಿಂದ ದೂರವಿದೆ ಎಂದು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಠಕ್ಕೆ ಎಲ್ಲ ಪಕ್ಷಗಳ ರಾಜಕಾರಣಿ ಗಳು ಬರುತ್ತಾರೆ, ಆಶೀರ್ವಾದ ಪಡೆಯುತ್ತಾರೆ. ಎಲ್ಲ ಪಕ್ಷಗಳೂ ಸಮಾನ. ಎಲ್ಲರನ್ನೂ ಸಮಭಾವದಿಂದ ಕಾಣುವ ಸದ್ಭಾವನೆ ಮಠದ್ದಾಗಿದೆ. https://ainlivenews.com/rcb-need-this-change-to-win-next-matches/#google_vignette ರಾಜಕೀಯ ಮಠದಿಂದ ಬಂದಿಲ್ಲ ಮತ್ತು ಬರುವುದೂ ಇಲ್ಲ. ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆ ಆಯಾ ಪಕ್ಷಗಳ ವರಿಷ್ಠರ ಮತ್ತು ಕಾರ್ಯಕರ್ತರ ನಿರ್ಧಾರ. ಅದೇ ರೀತಿ ಕೇಂದ್ರ ಸಚಿವ ಪ್ರಲಾದ ಜೋಶಿ ಅವರಿಗೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಅವರ ಮತ್ತು ನಮ್ಮ ಮಧ್ಯೆ ಉತ್ತಮ ಬಾಂಧವ್ಯವಿದೆ. ಜೋಶಿ ಅವರೂ ಮಠದೊಡನೆ ಸೌಹಾರ್ದ ಸಂಬಂಧ ಹೊಂದಿದ್ದಾರೆ ಎಂದಿದ್ದಾರೆ

Read More

ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ 3 ಪಂದ್ಯದಲ್ಲಿ ಒಂದರಲ್ಲಿ ಗೆಲುವು, ಎರಡರಲ್ಲಿ ಸೋಲು ಕಂಡಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಸವಾಲು ಎದುರಿಸಲಿದೆ. ಪಂದ್ಯ ಜಯಿಸಬೇಕೆಂದರೆ ಆರ್‌ಸಿಬಿಗೆ ಈ ಮೂರು ಬದಲಾವಣೆ ಅಗತ್ಯವಿದೆ. https://ainlivenews.com/a-doctor-who-took-nude-photos-of-female-patients-and-behaved-rudely-was-arrested/ ಪ್ರತಿ ವರ್ಷದಂತೆ ಈ ವರ್ಷವೂ ಆರ್‌ಸಿಬಿ ಬೌಲಿಂಗ್‌ನಲ್ಲಿ ಸಮಸ್ಯೆಯನ್ನು ಎದುರಿಸುತ್ತಿದೆ. ಕೆಕೆಆರ್‌ನ ಆರಂಭಿಕ ಆಟಗಾರರಾದ ಸುನೀಲ್ ನರೇನ್ (47 ರನ್, 22 ರನ್) ಹಾಗೂ ಫಿಲ್ ಸಾಲ್ಟ್ (30 ರನ್, 20 ಎಸೆತ) ಆರಂಭಿಕ 6 ಓವರ್‌ಗಳಲ್ಲೇ 85 ರನ್‌ಗಳಿಸಿ ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದ್ದರು. ಇನ್ನು ವೆಂಕಟೇಶ್ ಅಯ್ಯರ್ (50 ರನ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (39 ರನ್) ಅವರನ್ನು ನಿಯಂತ್ರಿಸುವಲ್ಲೂ ಆರ್‌ಸಿಬಿ ಬೌಲರ್‌ಗಳು ಎಡವಿದ್ದರು. ಇನ್ನು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ಅಜೇಯ 83…

Read More

ತೆಲಂಗಾಣ:- ಚಿಕಿತ್ಸೆಗೆಂದು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೈದ್ಯನನ್ನು ಅರೆಸ್ಟ್ ಮಾಡಲಾಗಿದೆ. https://ainlivenews.com/bs-yediyurappa-calmed-down-by-karadi-sanganna-munisu/ ಜಿಲ್ಲೆಯ ತಾಂಡೂರ್ ಪಟ್ಟಣದ ಡಾ. ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ತಾಂಡೂರಿನ ಅಹ್ಮದ್ ಆರ್‌ಎಂಪಿ ವೈದ್ಯರಾಗಿ ಸ್ಥಳೀಯ ಕ್ಲಿನಿಕ್ ನಡೆಸುತ್ತಿದ್ದು, ಅಲ್ಲಿಗೆ ಬರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಆತನ ಬಳಿಗೆ ಹೋದಾಗ ಆಕೆಯನ್ನು ಪರೀಕ್ಷೆಯ ಹೆಸರಿನಲ್ಲಿ ಬೆತ್ತಲೆಯಾಗಿಟ್ಟು ವಿಡಿಯೋ ಮಾಡಿದ್ದಾನೆ. ಇದಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಅಲ್ಲದೇ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳ ಆಧಾರ ಮೇಲೆ ದೂರು ದಾಖಲಾಗುತ್ತಿದ್ದಂತೆ ಡಾ. ಅಹ್ಮದ್ ತಲೆ ಮರೆಸಿಕೊಂಡಿದ್ದ. ಕೊನೆಗೂ ಮಹಬೂಬ್‌ನಗರ ಜಿಲ್ಲೆಯ ಉದ್ದಾನಪುರದಲ್ಲಿ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ

Read More

ಬೆಂಗಳೂರು:-ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಕರಡಿ ಸಂಗಣ್ಣ ಮುನಿಸು ಶಮನಗೊಂಡಿದ್ದು, ಕೊಪ್ಪಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲು ಒಪ್ಪಿಗೆ ನೀಡಿದ್ದಾರೆ. https://ainlivenews.com/priyank-kharge-umesh-jadhav-etu-ediretu/ ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಇಂದು ಕರಡಿ ಸಂಗಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಅವರನ್ನು ಯಡಿಯೂರಪ್ಪ ನಿವಾಸಕ್ಕೆ ಕರೆದೊಯ್ದಿದ್ದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತುಕತೆ ನಡೆಸಿ ಕರಡಿ ಸಂಗಣ್ಣ ಅವರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾದರು. ಸಂಧಾನ ಮಾತುಕತೆ ವೇಳೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಮತ್ತು ಮಾಜಿ ಶಾಸಕ ಬಸವರಾಜ ದಡೇಸೂಗೂರು ಕೂಡಾ ಉಪಸ್ಥಿತರಿದ್ದರು. ಮಾತುಕತೆ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟೂರ್ ಪರ ಪ್ರಚಾರ ನಡೆಸುವಂತೆ ಮನವಿ ಮಾಡಲಾಯಿತು. ಅದರಂತೆ, ಸೋಮವಾರ ಕುಷ್ಠಗಿಯಲ್ಲಿ ನಡೆಯುವ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಸಂಗಣ್ಣ ಕರಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ.

Read More

ಕಲಬುರ್ಗಿ:- ನನಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಬಿಜೆಪಿಯ ಮನುವಾದಿಗಳ ಕೈಚಳಕವಿದೆ ಹೀಗಂತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಸಂಸದ ಉಮೇಶ್ ಜಾಧವ್ ಕಡೆ ಬೊಟ್ಟು ಮಾಡಿದ್ರು.. https://ainlivenews.com/new-plan-from-gadag-police-to-control-house-theft/ ಈ ಮಾತಿಗೆ ತಿರುಗೇಟು ಕೊಟ್ಟಿರುವ ಸಂಸದ ಉಮೇಶ್ ಜಾಧವ್ ಪತ್ರ ಬಂದ ಎಂಟು ದಿನಗಳ ನಂತ್ರ ಹೇಳ್ತೀಯಲ್ಲ ಏಳು ದಿನಗಳ ಕಾಲ ಮಲ್ಕೊಂಡಿದ್ದಿ ಏನಪ್ಪ ಅಂತ ತಿರುಗೇಟು ನೀಡಿದ್ದಾರೆ..

Read More

ಗದಗ:- ಗದಗ ಜಿಲ್ಲಾ ಪೊಲೀಸರು ಮನೆಕಳ್ಳತನ ನಿಯಂತ್ರಣಕ್ಕೆ ತರಲು ಬೆಸ್ಟ್ ಪ್ಲಾನ್ ಮಾಡಿದ್ದು, ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಅಳವಡಿಕೆ ಮಾಡಿದ್ದಾರೆ. https://ainlivenews.com/mp-jadhav-blessed-by-pranavananda-shri/ ಈ ಮೂಲಕ ಗದಗ- ಬೆಟಗೇರಿ ಅವಳಿ ನಗರದ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಪೊಲೀಸ್ ಇಲಾಖೆಯ ವಾಹನದಲ್ಲಿ ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಬಹಳ ದಿನಗಳ ಕಾಲ ಮನೆಯಿಂದ ಹೊರಗಡೆ ಹೋಗುವಾಗ ಮನೆಯಲ್ಲಿ ಚಿನ್ನ, ಬೆಳ್ಳಿ, ಹಣ ಇಡಬಾರದು. ಹಾಗೆಯೇ ಪೊಲೀಸ್ ಇಲಾಖೆಯ ನಂಬರ್ ಮೆಸೇಜ್ ಅಥವಾ ವಾಟ್ಸ್ ಆಪ್ ಮಾಡುವಂತೆ, ಮನೆ ಮನೆಗೆ ಹೋಗಿ ಕರಪತ್ರಗಳನ್ನು ನೀಡುತ್ತಿದ್ದಾರೆ. ಜನರು ಕೂಡ ಪೊಲೀಸ್ ಇಲಾಖೆಯೊಂದಿಗೆ ಸಾಥ್ ನೀಡಿದ್ರೆ, ಬೀಗ್ ಹಾಕಿದ ಮನೆಗಳ ಕಳ್ಳತನ ಪ್ರಕರಣಗಳನ್ನು ನಿಯಂತ್ರಣ ಮಾಡಬಹುದು ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ. ಇನ್ನು ಈ ವರ್ಷದ ಜನವರಿ ತಿಂಗಳಲ್ಲಿ 7 ಪ್ರಕರಣಗಳು ಹಾಗೂ ಫೆಬ್ರವರಿ ತಿಂಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ ತಿಂಗಳಲ್ಲಿ ಕೂಡ ಮನೆಕಳ್ಳರ ಹಾವಳಿ ಮುಂದುವರೆದಿದೆ.…

Read More

ಕಲಬುರಗಿ :- ಕರದಾಳ ಶಕ್ತಿ ಪೀಠದ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿಯವರನ್ನು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿದರು. https://ainlivenews.com/drink-these-8-drinks-to-make-your-skin-glow/ ಕಲಬುರಗಿ ಪ್ರವಾಸದಲ್ಲಿರುವ ಶ್ರೀಗಳನ್ನ ಭೇಟಿ ಮಾಡಿ ಭಾರತೀಯ ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಾಪಾಡಲು ಪೂಜ್ಯ ಶ್ರೀಗಳ ಆಶೀರ್ವಾದ ಜನಪ್ರತಿನಿಧಿಗಳ ಮೇಲಿರಬೇಕು ಎಂದು ಹೇಳಿದ ಜಾಧವ್ ನಿಮ್ಮ ದಯೆಯಿಂದ ನಮ್ಮ ಮೇಲಿರಲಿ ಅಂದ್ರು. ಇದೇವೇಳೆ ಮಾತಾಡಿದ ಪೂಜ್ಯಶ್ರೀಗಳು ಬರುವ ದಿನಮಾನಗಳಲ್ಲಿ ನಿಮಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಆಶೀರ್ವಾದಿಸಿದರು.

Read More

ಕೆಲವು ಪಾನೀಯಗಳು ಮುಖದ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿವೆ. ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಯಲ್ಲೇ ತಯಾರಿಸಬಹುದಾದ ಕೆಲವು ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿವೆ. ಈ ಪಾನೀಯಗಳು ನಮ್ಮ ದೇಹವನ್ನು ಒಳಗಿನಿಂದ ಶುದ್ಧೀಕರಿಸಿ, ಕಲ್ಮಶಗಳನ್ನು ಹೊರಹಾಕಿ, ನೈಸರ್ಗಿಕವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. https://ainlivenews.com/bmtc-bus-driver-died-after-falling-from-a-tree/ ಗ್ರೀನ್ ಟೀ: ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಚಹಾವು ಸ್ವತಂತ್ರ ರಾಡಿಕಲ್ ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ತಾರುಣ್ಯದ ಮತ್ತು ಹೊಳೆಯುವ ಚರ್ಮವನ್ನು ಉತ್ತೇಜಿಸುತ್ತದೆ. ಒಂದು ಕಪ್ ಹಸಿರು ಚಹಾವನ್ನು ಕುದಿಸಿ ಮತ್ತು ಅದನ್ನು ಬಿಸಿ ಅಥವಾ ತಣ್ಣಗೆ ಆನಂದಿಸಿ ನಿಂಬೆ ನೀರು: ತಾಜಾ ನಿಂಬೆ ರಸದೊಂದಿಗೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಸೌತೆಕಾಯಿ- ಪುದೀನಾ ಜ್ಯೂಸ್: ತಾಜಾ ಪುದೀನಾ ಎಲೆಗಳು ಮತ್ತು ನೀರಿನಿಂದ ಸೌತೆಕಾಯಿ ಚೂರುಗಳನ್ನು ಮಿಶ್ರಣ ಮಾಡಿ.…

Read More