Author: AIN Author

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ 2024ರ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಂಜಾಬ್ ಕಿಂಗ್ಸ್ ಅನ್ನು 21 ರನ್‌ಗಳಿಂದ ಸೋಲಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ (Mayank Yadav). ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಿರುವ ಮಾಯಾಂಕ್ ಚೊಚ್ಚಲ ಪಂದ್ಯದಲ್ಲೇ ಅತೀ ವೇಗದಲ್ಲಿ ಚೆಂಡೆಸೆದು ಐಪಿಎಲ್ 2024 ರಲ್ಲಿ ದಾಖಲೆ ಬರೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಮಯಾಂಕ್ ಯಾದವ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 149 kmph ವೇಗದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ ಯುವ ವೇಗಿಯನ್ನು ಎದುರಿಸಲು ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್​ಗಳು ತಿಣುಕಾಡಿದರು. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಅದರಲ್ಲೂ ಮಯಾಂಕ್ ಯಾದವ್ ಎಸೆದ 12ನೇ ಓವರ್​ನ ಮೊದಲ ಎಸೆತವು ಶಿಖರ್ ಧವನ್ ಕಣ್ಣು ಮಿಟುಕುವಷ್ಟರಲ್ಲಿ ವಿಕೆಟ್ ಕೀಪರ್ ಕೈ…

Read More

ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು. ಅವರಿಗೆ ಮಾತನಾಡುವ ಶಕ್ತಿ ಇಲ್ಲ’ ಎಂದು ಸಂಸದ ಸಿದ್ದೇಶ್ವರ್‌ ಪತ್ನಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಶಾಸಕ ಶಾಮನೂರು ಶಿವಶಂಕರಪ್ಪ  ಅವರ ಹೇಳಿಕೆಗೆ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ (Saina Nehwal) ಕಿಡಿ ಕಾರಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ಶಾಮನೂರು ಅವರನ್ನ ʻಸ್ತ್ರೀ ದ್ವೇಷಿʼ ಎಂದು ಅಸಮಾಧಾನ ಹೊರಹಾಕಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಸೈನಾ ನೆಹ್ವಾಲ್‌ ಹೇಳಿದ್ದೇನು? ಮಹಿಳೆಯನ್ನು ಅಡುಗೆ ಕೋಣೆಗೆ ಸೀಮಿತಗೊಳಿಸಬೇಕು ಅಂತಾ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಬಯಸಿದ್ದಾರೆ. ಆದ್ರೆ ಪ್ರತಿ ಮಹಿಳೆಯೂ ಹೋರಾಡುತ್ತಾಳೆ ಅನ್ನೋ ತತ್ವದಲ್ಲಿ ನಂಬಿಕೆಯಿಟ್ಟುರುವ ಪಕ್ಷದ ಅಭ್ಯರ್ಥಿಯಾಗಿ ಗಾಯತ್ರಿ (Gayatri Siddheshwara) ಅವರು ಕಣದಲ್ಲಿದ್ದಾರೆ. ನಾನು ಮೈದಾನದಲ್ಲಿ ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ನಾನು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಆದ್ಯತೆ ನೀಡುತ್ತಿತ್ತು? https://twitter.com/NSaina/status/1773980739916493132?ref_src=twsrc%5Etfw%7Ctwcamp%5Etweetembed%7Ctwterm%5E1773980739916493132%7Ctwgr%5E57316d0df0f49eca912364fddd442d88acd42ef7%7Ctwcon%5Es1_&ref_url=https%3A%2F%2Fpublictv.in%2Fwhat-should-i-do-badminton-star-after-congress-mlas-kitchen-remark%2F ಎಲ್ಲಾ ಹುಡುಗಿಯರು ಮತ್ತು ಮಹಿಳೆಯರು ತಮಗೆ ಇಷ್ಟವಾದ ಯಾವುದೇ ಕ್ಷೇತ್ರದಲ್ಲಿ ದೊಡ್ಡದನ್ನು ಸಾಧಿಸಬೇಕು ಎಂದು…

Read More

ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಪ್ರಿಲ್ 2ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  2ರಂದು ಇಡೀದಿನ ಕರ್ನಾಟಕದಲ್ಲಿ ಬೇರೆಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶ ಒಂದು ಎಂಬ ಸಂದೇಶ ನೀಡುವ ಗಟ್ಟಿತನದ ನಿರ್ಧಾರ ಪ್ರಕಟಿಸಿದವರು ಅಮಿತ್ ಶಾ ಅವರು ಎಂದು ತಿಳಿಸಿದರು. ಅವರ ಭೇಟಿ ನಮ್ಮಲ್ಲಿ ಉತ್ಸಾಹ ಮೂಡಿಸುತ್ತಿದೆ ಎಂದು ಹೇಳಿದರು. ದೇಶ ಒಡೆಯುವ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ಕಣ್ಮುಂದೆ ಇದ್ದಾರೆ. ದೇಶ ವಿಭಜನೆಯು ಕಾಂಗ್ರೆಸ್ ಮಾನಸಿಕತೆ ಎಂದು ಆಕ್ಷೇಪಿಸಿದರು. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಆದರೆ, ನಮ್ಮ ಮಾನಸಿಕತೆ ದೇಶ ಜೋಡಿಸುವುದು ಎಂದು ತಿಳಿಸಿದರು. ಅಮಿತ್ ಶಾ ಅವರು ಚನ್ನಪಟ್ಟಣ ದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಾರೆ. ದೇಶ…

Read More

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೆಂಬಲಿಸುವಂತೆ ಇಂದು ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಸುಮಲತಾ ಅವರನ್ನು ಭೇಟಿಯಾಗಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಬದಲಾದ ರಾಜಕೀಯದಲ್ಲಿ ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಇಂದು ಕುಮಾರಸ್ವಾಮಿ ಅವರು ಸುಮಲತಾ ಅವರ ಬೆಂಗಳೂರು ನಿವಾಸಕ್ಕೆ ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಶನಿವಾರವಷ್ಟೇ ಸಂಸದೆ ಸುಮಲತಾ ಅಂಬರೀಶ್ ಬೆಂಗಳೂರಿನ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ಮಾಡಿದ್ದರು. ಸಭೆಯಲ್ಲಿ ಬೆಂಬಲಿಗರು ಪಕ್ಷೇತರವಾಗಿ ಮತ್ತು ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಸೆ ಮಾಡಿದ್ದರು. ಇದಕ್ಕೆ ಸುಮಲತಾ ಅಂಬರೀಶ್ ನಾನು ನಿಮ್ಮ ಆಸೆಗೆ ವಿರುದ್ಧ ಹೋಗಲ್ಲ. ಯೋಚನೆ ಮಾಡಿ ಏ.3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದರು.

Read More

ನವದೆಹಲಿ: ಸಮಾಜವಾದಿ ನಾಯಕ ಚೌಧರಿ ಚರಣ್ ಸಿಂಗ್, ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ (P.V Narasimha Rao), ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು (Bharat Ratna) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರದಾನ ಮಾಡಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನರಸಿಂಹರಾವ್ ಅವರ ಪುತ್ರ ಪಿ.ವಿ ಪ್ರಭಾಕರ್ ರಾವ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಸಿಂಗ್, ಸ್ವಾಮಿನಾಥನ್ ಅವರ ಪುತ್ರಿ ನಿತ್ಯಾ ರಾವ್ ಮತ್ತು ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್‍ನಾಥ್ ಠಾಕೂರ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.  https://twitter.com/rashtrapatibhvn/status/1773975653794406765?ref_src=twsrc%5Etfw%7Ctwcamp%5Etweetembed%7Ctwterm%5E1773975653794406765%7Ctwgr%5Eb94f35b8c27f0550a6053f00b4babd0924ba3827%7Ctwcon%5Es1_&ref_url=https%3A%2F%2Fpublictv.in%2Fbharat-ratna-award-president-droupadi-murmu-confers-highest-civilian-honour-on-5-luminaries%2F 5ನೇ ಪ್ರಶಸ್ತಿ ಪುರಸ್ಕೃತರಾದ ಎಲ್.ಕೆ ಅಡ್ವಾಣಿ (L.K Advani) ಅನಾರೋಗ್ಯದ ಕಾರಣ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಭಾನುವಾರ ಅವರ ನಿವಾಸದಲ್ಲೇ ಅವರಿಗೆ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ…

Read More

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗಿ ಪೂಜಾ ವಸ್ತ್ರಾಕರ್‌ (Pooja Vastrakar) ಯಡವಟ್ ಒಂದನ್ನ ಮಾಡ್ಕೊಂಡಿದ್ದಾರೆ. ಪೂಜಾ ವಸ್ತ್ರಾಕರ್‌ ಅವರ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ (PM Modi) ಅವರನ್ನು ಅವಹೇಳನ ಮಾಡಿರುವ ಪೋಸ್ಟರ್ ಒಂದು ಕಾಣಿಸಿಕೊಂಡಿದೆ. ಕ್ರಿಕೆಟ್ ಫ್ರಾಂಚೈಸಿ ಶೈಲಿಯಲ್ಲಿ ವಸೂಲಿ ಟೈಟಾನ್ಸ್ (Vasooli Titans) ಶೀರ್ಷೀಕೆಯ ಪೋಸ್ಟರ್ ಒಂದನ್ನು ಹಂಚಿಕೊಂಡು ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಜೈಶಂಕರ್, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್ ಸೇರಿ ಅನೇಕ ಬಿಜೆಪಿ ನಾಯಕರ ಫೋಟೋ ಬಳಸಿ ಲೇವಡಿ ಮಾಡಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಇಂಪ್ಯಾಕ್ಟ್ ಪ್ಲೇಯರ್ ಜಾರಿ ನಿರ್ದೇಶನಾಲಯ ಎಂದು ಬರೆದುಕೊಂಡು ನಗುತ್ತಿರುವ ಎಮೋಜಿ ಹಾಕಿಕೊಂಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೂಜಾ ವಸ್ತ್ರಾಕರ್‌ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಖಾತೆಯಲ್ಲಿದ್ದ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಪೋಸ್ಟರ್ ಹರಿಬಿಟ್ಟ ಸಂದರ್ಭದಲ್ಲಿ ನನ್ನ ಖಾತೆ ನನ್ನ ಅಧೀನದಲ್ಲಿ ಇರಲಿಲ್ಲ, ನನ್ನ ಖಾತೆ ಹ್ಯಾಕ್ ಆಗಿತ್ತು. ಆಗಿರೋದಕ್ಕೆ…

Read More

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಕೇಂದ್ರ ‌ಕಾರಾಗೃಹದ ಮೇಲೆ ಪೊಲೀಸರ ಏಕಾಏಕಿ ದಾಳಿ ನಡೆಸಿ ದ್ದಾರೆ. ಹೌದು ಜೈಲಿನಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಬೆಳಂಬೆಳಗ್ಗೆ ಜೈಲಿನ ಮೇಲೆ ದಾಳಿ ನಡೆಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಲಾಗಿದೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ನಗರದ ಐದೂ ವಿಭಾಗದ ಎಸಿಪಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಇದೇ ಜೈಲಿನಿಂದ ಜೀವ ಬೆದರಿಕೆ ಕರೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲದೇ ಕೈದಿಗಳ ಗಲಾಟೆ, ಮೊಬೈಲ್ ಬಳಕೆ ಸೇರಿ ಬಹಳಷ್ಟು ಆರೋಪಗಳೂ ಕೇಳಿ ಬಂದಿವೆ.    

Read More

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(state bank of india)ದ ಫಿಕ್ಸೆಡ್ ಡೆಪಾಸಿಟ್ (FD) ಸ್ಕೀಮ್ಗಳಲ್ಲಿ ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ (SBI Amrit Kalash FD Scheme) ಹೆಚ್ಚು ಜನರ ಗಮನ ಸೆಳೆದಿದೆ. 2023ರ ಏಪ್ರಿಲ್ 12ರಂದು ಎಸ್ಬಿಐ ಈ ಯೋಜನೆಯನ್ನು ಘೋಷಿಸಿತ್ತು. 2023ರ ಮಾರ್ಚ್ವರೆಗೂ ಈ ಸ್ಕೀಮ್ ಪಡೆಯಲು ಕೊನೆಯ ದಿನವಾಗಿತ್ತು. ಆ ಬಳಿಕ ಸತತವಾಗಿ ಇದರ ಗಡುವನ್ನು ವಿಸ್ತರಿಸುತ್ತಲೇ ಬರಲಾಗಿದೆ. ಇದೀಗ ಈ ವಿಶೇಷ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ ಮಾರ್ಚ್ 31ರವರೆಗೆ ಲಭ್ಯ ಇರುತ್ತದೆ.  ಎಸ್​ಬಿಐ ಅಮೃತ್ ಕಳಶ್ ಯೋಜನೆಯಲ್ಲಿ ನಿಶ್ಚಿತ ಠೇವಣಿ 400 ದಿನದ ಅವಧಿಯದ್ದಾಗಿರುತ್ತದೆ. ಇದರ ಮೇಲಿನ ಬಡ್ಡಿ ಹಣವನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ, ಅಥವಾ ಅರ್ಧವಾರ್ಷಿಕವಾಗಿ ಪಡೆಯಬಹುದು. ಎಸ್​ಬಿಐನ ಬೇರೆ ಠೇವಣಿಗಳಿಗೆ ಶೇ. 3.5ರಿಂದ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಬರುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.8ರಷ್ಟು ಬಡ್ಡಿ ನಿಗದಿ ಮಾಡಲಾಗಿದೆ. ಎರಡು ವರ್ಷದಿಂದ ಮೂರು ವರ್ಷದವರೆಗಿನ…

Read More

ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ಬ್ಯಾಂಕ್ ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಮಾರ್ಚ್‌ ತಿಂಗಳು ಮುಕ್ತಾಯವಾಗುತ್ತ ಬಂದಿದ್ದು, ಏಪ್ರಿಲ್ ತಿಂಗಳಬ್ಯಾಂಕ್ ಹಾಲಿಡೇ ಲಿಸ್ಟ್ ಅನ್ನು ಆರ್ ಬಿಐ ಬಿಡುಗಡೆ ಮಾಡಿದೆ.  ಈ ಏಪ್ರಿಲ್​ನಲ್ಲಿ ಯುಗಾದಿ, ಈದ್, ರಾಮನವಮಿ ಹಬ್ಬಗಳಿವೆ. ಇಂಥ ಹಬ್ಬ ಮತ್ತು ವಿಶೇಷ ದಿನಗಳ ಪ್ರಯುಕ್ತ ಒಂದು ತಿಂಗಳಲ್ಲಿ 9 ರಜೆಗಳಿವೆ. ಉಳಿದವು ಭಾನುವಾರ ಮತ್ತು ಶನಿವಾರದ ರಜೆಗಳು ಸೇರಿವೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ 2024ರ ಏಪ್ರಿಲ್​ನಲ್ಲಿ ಇರುವ ರಜೆಗಳು ಏಪ್ರಿಲ್ 1: ವಾರ್ಷಿಕ ಲೆಕ್ಕಗಳನ್ನು ಮುಗಿಸಲು ಬ್ಯಾಂಕುಗಳು ಮುಚ್ಚಿರುತ್ತವೆ. ಏಪ್ರಿಲ್ 5, ಶುಕ್ರವಾರ: ಬಾಬು ಜಗಜೀವನರಾಮ್ ಜಯಂತಿ, ಜುಮಾತ್ ಉಲ್ ವಿದಾ (ತೆಲಂಗಾಣ, ಕಾಶ್ಮೀರದಲ್ಲಿ ರಜೆ) ಏಪ್ರಿಲ್ 7: ಭಾನುವಾರ ಏಪ್ರಿಲ್ 9, ಮಂಗಳವಾರ: ಯುಗಾದಿ, ಗುದಿ ಪಡ್ವಾ, ಸಜಿಬು ನೊಂಗ್ಮಪನ್ಬ, ಮೊದಲ ನವರಾತ್ರಿ (ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಮಣಿಪುರ್, ಗೋವಾ, ಕಾಶ್ಮೀರದಲ್ಲಿ ರಜೆ). ಏಪ್ರಿಲ್…

Read More

ಹೈದರಾಬಾದ್: ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದು, ಆ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಿದ್ದರು ಎಂದು ಪೋಷಕರಿಗೆ ಸಂದೇಶ ಕಳಿಸಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ (Visakhapatnam) ನಡೆದಿದೆ. ಮೃತ ವಿದ್ಯಾರ್ಥಿನಿ ವಿಶಾಖಪಟ್ಟಣಂನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಆಕೆಯ ಕುಟುಂಬವು ನೆರೆಯ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನೆಲೆಸಿದೆ ಎಂದು ಹೇಳಲಾಗಿದೆ. ಮೃತ ಬಾಲಕಿ ಕಳುಹಿಸಿದ್ದ ಸಂದೇಶದಲ್ಲಿ, ತಾನು ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನಗೆ ಕಿರುಕುಳ ನೀಡಿದ್ದನ್ನು ಫೋಟೋ ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ಕಾಲೇಜಿನಲ್ಲಿ ಕೆಲ ಸಹ ವಿದ್ಯಾರ್ಥಿನಿ ಯರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾಳೆ. ಹಾಗಾಗಿ ತನ್ನ ಅಕ್ಕನನ್ನು ಉದ್ದೇಶಿಸಿ, ಕ್ಷಮಿಸಿ ದೀದಿ, ನಾನು ಹೋಗಬೇಕು ಎಂದು ಭಾವುಕವಾಗಿ ಬರೆದಿದ್ದಾಳೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಶುಕ್ರವಾರ ಮಧ್ಯರಾತ್ರಿ…

Read More