Author: AIN Author

ಬೆಂಗಳೂರು: ಕೋಲಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿಪಕ್ಷದ ಟಿಕೆಟ್‌ಗಾಗಿ ರಂಪಾಟ ನಡೆಸಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಎರಡೂ ಬಣಗಳನ್ನು ಬದಿಗೆ ಸರಿಸಿದ ಎಐಸಿಸಿ ಹೈಕಮಾಂಡ್‌, ಹೊಸ ಮುಖ ಕೆ.ವಿ.ಗೌತಮ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಜಿಲ್ಲೆಯ ನಾಯಕರ ನಡುವಿನ ಕಾಲೆಳೆದಾಟದಲ್ಲಿ ಎರಡೂ ಗುಂಪಿಗೆ ಸಂಬಂಧವಿಲ್ಲದ ಯುವ ಮತ್ತು ಉತ್ಸಾಹಿ ಗೌತಮ್‌ಗೆ ಟಿಕೆಟ್‌ ಅದೃಷ್ಟ ಒಲಿದಿದೆ. ಯಾರು ಗೌತಮ್‌? 49ರ ಹರೆಯದ ಗೌತಮ್‌ ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ಪ್ರದೇಶ ಯುವ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಡಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಗೌತಮ್‌ ತಂದೆ ವಿಜಯಕುಮಾರ್‌ ಕೂಡ ಕಾಂಗ್ರೆಸ್‌ ನಾಯಕರಾಗಿದ್ದರು. ಸಚಿವ ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲೂ ಯೂತ್‌ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಗೌತಮ್‌ ಕೆಲಸ ಮಾಡಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಡಾ.ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಕೆಪಿಸಿಸಿ ಪದಾಧಿಕಾರಿಯಾಗಿದ್ದರು. ಈಗ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 49 ವರ್ಷದ ಗೌತಮ್ ಅವರು…

Read More

ಐಪಿಎಲ್ 2024 ರ ಇಂದಿನ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಒಂದೆಡೆ ಗುಜರಾತ್ ಟೈಟಾನ್ಸ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡರೆ, ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತ್ತು. ಉಭಯ ತಂಡಗಳು ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ತಲಾ ಒಂದು ಪಂದ್ಯ ಗೆದ್ದಿವೆ. ಇದೀಗ ಉಭಯ ತಂಡಗಳು ಎರಡನೇ ಗೆಲುವಿನ ನಿರೀಕ್ಷೆಯಲ್ಲಿವೆ. ಗುಜರಾತ್ ಟೈಟಾನ್ಸ್ ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್‌ಮನ್ ಗಿಲ್ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ. ಸನ್‌ರೈಸರ್ಸ್ ಹೈದರಾಬಾದ್ ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮೆಕ್‌ಕ್ರೇಮ್,…

Read More

ಬೆಂಗಳೂರು: ಅಮಿತ್ ಶಾ ಆದರೂ ಬರಲಿ ಪ್ರಧಾನಿ ಮೋದಿ ಆದರೂ ಬರಲಿ. ನಮಗೆ ಇದೆಲ್ಲಾ ಹೊಸದು ಅಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮೋರ್​ ಸ್ಟ್ರಾಂಗ್​ ಮೋರ್ ಎನಿಮಿಸ್​​, ಮೋರ್ ಸ್ಟ್ರಾಂಗ್​ ಮೋರ್ ಪವರ್​ ಎಂದು ಹೇಳಿದ್ದಾರೆ. ಅಲ್ಲದೆ, ಅಮಿತ್ ಶಾ ಆದರೂ ಬರಲಿ ಪ್ರಧಾನಿ ಮೋದಿ ಆದರೂ ಬರಲಿ. ನಮಗೆ ಇದೆಲ್ಲಾ ಹೊಸದು ಅಲ್ಲ ಎಂದಿದ್ದಾರೆ. ಹೆಚ್​ಡಿ ದೇವೇಗೌಡ ಅವರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನೂ ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನ ಎದುರಿಸುತ್ತೇವೆ ಎಂದರು. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಕೋವಿಡ್ ಸಂದರ್ಭದಲ್ಲಿ ಹೆಣ ಹೊತ್ತರು, ಮಣ್ಣ ಮಾಡಿದವರು ಯಾರು ಇಲ್ಲ. ಈಗ ಮಾತಾಡುವವರು ಕೋವಿಡ್​ನಲ್ಲಿ ಎಲ್ಲಿ ಹೋಗಿದ್ದರು? ಆಹಾರದ ಕಿಟ್, ಔಷದಿ ಕೊಡುವಾಗ ಯಾರು ಇರಲಿಲ್ಲ. ಆಗ ಕ್ಷೇತ್ರದಲ್ಲಿ ಇದ್ದದ್ದು ಕಾಂಗ್ರೆಸ್ ಮತ್ತು ಡಿಕೆ ಸುರೇಶ್ ಮಾತ್ರ ಎಂದರು.

Read More

ಬೆಂಗಳೂರು: ಧಾರ್ಮಿಕ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಆರೋಪದಡಿ ಬಿಜೆಪಿ (BJP) ಬಂಡಾಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಪ್ರಕರಣ ದಾಖಲಾಗಿದೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಈಶ್ವರಪ್ಪ ಶಿವಮೊಗ್ಗದ (Shivamogga) ಗೋಪಾಳದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ ವೇಳೆ ಮತಪ್ರಚಾರ ಮಾಡಿದ್ದರು. ಧಾರ್ಮಿಕ ಕೇಂದ್ರದಲ್ಲಿ ಪ್ರಚಾರ ಮಾಡಿದ್ದಕ್ಕೆ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.  ಈಶ್ವರಪ್ಪ ವಿರುದ್ಧ ತುಂಗಾನಗರ ಠಾಣೆಗೆ ಚುನಾವಣಾಧಿಕಾರಿ ದೂರು ಸಲ್ಲಿಸಿದ್ದಾರೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. 

Read More

ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ (K Sudhakar) ಹಾಗೂ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ನಡುವೆ ಮುನಿಸು ಮುಂದುವರಿದಿದೆ. ವಿಶ್ವನಾಥ್ ಅವರನ್ನು ಭೇಟಿ ಮಾಡಲೆಂದು ಅವರ ನಿವಾಸಕ್ಕೆ ಆಗಮಿಸಿದ ಸುಧಾಕರ್ ಅನ್ನು ಭೇಟಿ ಮಾಡದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಶಾಸಕ ಎಸ್‌ಆರ್ ವಿಶ್ವನಾಥ್ ರೆಬೆಲ್ ಆಗಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರವಾದರೂ ವಿಶ್ವನಾಥ್ ಮುನಿಸು ಮುಗಿದಿಲ್ಲ. ವಿಶ್ವನಾಥ್ ಪುತ್ರ ಅಲೋಕ್‌ಗೆ ಚಿಕ್ಕಬಳ್ಳಾಪುರ ಟಿಕೆಟ್ ಕೇಳಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ವಿಶ್ವನಾಥ್ ಅಸಮಧಾನಗೊಂಡಿದ್ದಾರೆ. ಅಲ್ಲದೇ ಸುಧಾಕರ್‌ಗೆ ಬೆಂಬಲ ಕೊಡದಿರಲು ಎಸ್‌ಆರ್ ವಿಶ್ವನಾಥ್ ನಿರ್ಧರಿಸಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಈ ಮಧ್ಯೆ ಖುದ್ದು ಸುಧಾಕರ್ ತಮ್ಮ ನಿವಾಸಕ್ಕೆ ಬಂದರೂ ಸಹ ವಿಶ್ವನಾಥ್ ಅವರನ್ನು ಭೇಟಿ ಮಾಡಿಲ್ಲ. ಪಕ್ಷದ ಅಭ್ಯರ್ಥಿ ಮನೆಗೆ ಬಂದರೂ ಎದುರುಗೊಳ್ಳದೇ ಯಲಹಂಕ ಶಾಸಕ ರೆಬೆಲ್ ನಡೆ ತೋರಿದ್ದಾರೆ. ಸುಧಾಕರ್ ಜೊತೆ ಒಡನಾಟವೇ ಬೇಡ…

Read More

ಮೋದಿ ಸರ್ಕಾರ ಆಡಳಿತಕ್ಕೆ ಬಂದು 10 ವರ್ಷ ಕಳೆದಿವೆ ಇಡೀ ದೇಶದ ಆರ್ಥಿಕ ಪರಿಸ್ಥಿತಿ ಹಿಂದೆ ಸರಿದಿದೆ. ಕಪ್ಪು ಹಣ ತರುತ್ತೇವೆ ಸುಖದ ಜೀವಮಾನ ನಿಮ್ಮದಾಗಬಹುದು ಎಂದ ಮೋದಿ ಕಪ್ಪು ಹಣ ತರಲೇ ಇಲ್ಲ, ದಲಿತರ ಜೀವನವನ್ನು ಸುಖಮಯವಾಗಿಸುತ್ತೇನೆ ಎಂದರು ಅದು ಆಗಲಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದರು ಸೃಷ್ಟಿಯೇ ಆಗಿಲ್ಲ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದೇಶವನ್ನುಅದೋಗತಿಯತ್ತ ಸಾಗಿಸಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯನವರು ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಟೀಕಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೊಡಗು ಮೈಸೂರು ಕ್ಷೇತ್ರದಿಂದ ಸರಳ ವ್ಯಕ್ತಿತ್ವ ಇರುವ ಜನರೊಂದಿಗೆ ಸದಾ ಬೆರೆಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಕೊಡಗು ಮೈಸೂರಿನ ಅಭಿವೃದ್ಧಿಗಾಗಿ ಈ ಬಾರಿ ಹೆಚ್ಚಿನ ಮತದೊಂದಿಗೆ ಲಕ್ಷ್ಮಣ್ ಅವರನ್ನು ಆಯ್ಕೆಗೊಳಿಸುವಂತೆ ಮನವಿ ಮಾಡಿಕೊಂಡರು. ವಿರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹಿಂದೆ ಪ್ರತಾಪ ಸಿಂಹ ಅವರ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದ…

Read More

ಚಿತ್ರದುರ್ಗ, ಮಾರ್ಚ್.31- ಭಾರತೀಯ ಜನತಾ ಪಕ್ಷ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ಜಿಲ್ಲೆಯ ಸುಕ್ಷೇತ್ರ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ದೇಶದ 140 ಕೋಟಿ ಜನ ಮತ್ತೊಮ್ಮೆ ನರೇಂದ್ರ ಮೋದಿಜಿ ಅವರು ಈ ದೇಶದ ಪ್ರಧಾನಮಂತ್ರಿಯಾಗಬೇಕೆಂಬ ಮಹತ್ವಕಾಂಕ್ಷಿ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಈ ದೇಶವನ್ನು ಆಳಿದೆ ದೇಶದ ಜನರ ಭಾವನಾತ್ಮಕ ವಿಷಯಗಳು ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ನಿರಂತರವಾಗಿ ಎಲ್ಲಾ ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿದೆ. ಈ ದೇಶವನ್ನು ಹಾವಾಡಿಗರ ದೇಶ ಎಂಬ ಹಣೆ ಪಟ್ಟಿಯಿಂದ ಅಳಿಸಿ ಮೋದಿಜಿ ಅವರು ಕಳೆದ ಹತ್ತು ವರ್ಷಗಳಿಂದ ಇಡೀ ಭಾರತ ದೇಶವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ವಿಶ್ವದ ನಾನಾ ರಾಷ್ಟ್ರಗಳು ಇಂದು ಭಾರತಕ್ಕೆ ಸ್ವಾಗತ ಕೋರುತ್ತಿವೆ. ಇದು…

Read More

ಶಿವಮೊಗ್ಗ: ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ನನಗೆ ಕರೆ ಮಾಡಿದ್ದರು. ನಾನು ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ, ಅವರ ಪಕ್ಷದಿಂದ ಸ್ಪರ್ಧಿಸುವಂತೆ ಆಹ್ವಾನಿಸಲು ಕರೆ ಮಾಡಿರಬಹುದು. ನಾನು ಹಿಂದುತ್ವವಾದಿ ಹೀಗಾಗಿ ಅವರ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಬಿಜೆಪಿ (BJP) ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಶಿಕಾರಿಪುರದಲ್ಲಿ ಸಾಕಷ್ಟು ಹಣ ಸುರಿದಿದ್ದರು: ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿಎಸ್‍ವೈ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರನ ಗೆಲುವಿಗೆ ಯಡಿಯೂರಪ್ಪ ಸಾಕಷ್ಟು ಹಣ ಸುರಿದಿದ್ದರು. ಶಿಕಾರಿಪುರದಲ್ಲಿ ಸುರಿದ ಹಣವನ್ನು ರಾಜ್ಯದ ಬೇರೆ ಎಲ್ಲಿಯೂ ಸುರಿದಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪುತ್ರನ ಗೆಲುವಿಗೆ ಹೊಂದಾಣಿಕೆ  ಶಿಕಾರಿಪುರ ಕ್ಷೇತ್ರದಲ್ಲಿ ಹೆಚ್ಚಿನ ಹಣ ಖರ್ಚು ಮಾಡಿದ್ದರೂ ವಿಜಯೇಂದ್ರ ಕಡಿಮೆ ಅಂತರದಲ್ಲಿ ತಿಣುಕಾಡಿ ಗೆದ್ದರು. ಇಷ್ಟೇ ಅಲ್ಲದೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಹೀಗಾಗಿಯೇ ಅವರು ಗೆದ್ದರು. ಈ ಲೋಕಸಭಾ ಚುನಾವಣೆಲ್ಲೂ ಯಡಿಯೂರಪ್ಪ…

Read More

ಬೆಂಗಳೂರು: ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದು ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಯು ಅಭ್ಯರ್ಥಿಗಳನ್ನ ಘೋಷಣೆ ಮಾಡಿವೆ. ಸದ್ಯ ಇದರ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಇಂದು 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈ ಪಟ್ಟಿಯಲ್ಲಿನ ಪ್ರಮುಖ ನಾಯಕರಾಗಿದ್ದಾರೆ. ರಾಜ್ಯದಲ್ಲಿ‌ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿದ್ದಾರೆ. ಈ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜೈರಾಂ ರಮೇಶ್ ಕಾಂಗ್ರೆಸ್​ನ ಟಾಪ್ 10 ಸ್ಟಾರ್ ಪ್ರಚಾರಕರಾಗಿದ್ದಾರೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/…

Read More

ಬೆಂಗಳೂರು: ಕಾಂಗ್ರೆಸ್ ನಾಲ್ಕು ಕ್ಷೇತ್ರಗಳ ಟಿಕೆಟ್ ಕಗ್ಗಂಟಿಗೆ ಬ್ರೇಕ್ ಬಿದ್ದಿದೆ. ಗೊಂದಲಗಳ ನಡುವೆಯೂ ಹೈಕಮಾಂಡ್ ಟಿಕೆಟ್ ಘೋಷಿಸಿದೆ.ಬಳ್ಳಾರಿ,ಚಾಮರಾಜನಗರ,ಚಿಕ್ಕಬಳ್ಳಾಪುರದಲ್ಲಿ ನಿರೀಕ್ಷಿಸಿದಂತೆಯೇ ಟಿಕೆಟ್ ಅನೌನ್ಸ್ ಮಾಡಿದೆ.ಕಗ್ಗಂಟ್ಟಿದ್ದ ಕೋಲಾರಕ್ಕೂ ಟಿಕೆಟ್ ಘೋಷಿಸಿದೆ.ಯಾರು ಕೂಡ ಲಕ್ಷಣ ರೇಖೆ ದಾಟಬಾರದೆಂದು ಕೋಲಾರ ಅಸಮಧಾನಿತರಿಗೆ ಕನಕಪುರ ಬಂಡೆ ಎಚ್ಚರಿಕೆ ನೀಡಿದ್ದಾರೆ. ಯೆಸ್, ಕಳೆದೊಂದು ವಾರದಿಂದ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಹೈಕಮಾಂಡ್ ಟಿಕೆಟ್ ಘೋಷಿಸಿದೆ. https://ainlivenews.com/jobs-in-navodaya-vidyalaya-for-puc-and-sslc-passers-apply-today/ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಕ್ಕೆ ಮಣೆ ಹಾಕದೆ ತಟಸ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ.ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಗೆ ಟಿಕೆಟ್ ನೀಡಿದೆ..ಈ ಮೂಲಕ ಇಬ್ಬರು ನಾಯಕರ ತಂಡಕ್ಕೂ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.ಅಲ್ದೇ ಅಸಮಧಾನಿತರಿಗೆ ವಾರ್ನಿಂಗ್ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಯಾರೇ ಆದರೂ ಲಕ್ಷಣ ರೇಖೆ ದಾಟಬಾರದು.ಎರಡು ಬಣಗಳಿಗೂ ನಾವು ಟಿಕೆಟ್ ನೀಡಿಲ್ಲ.ಕೋಲಾರ ಸೀಟ್ ಗೆಲ್ಲೋದು ಬಿಡೋದು ನಂತರದ್ದು,ಪಕ್ಷದಲ್ಲಿ ಶಿಸ್ತು ಇರಬೇಕೆಂದು ವಾರ್ನಿಂಗ್ ನೀಡಿದ್ದಾರೆ.

Read More