Author: AIN Author

ಶಿವಮೊಗ್ಗ:- ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಶಿವಮೊಗ್ಗದಲ್ಲಿ ಧಮ್ಕಿ ಹಾಕಲಾಗುತ್ತಿದೆ ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪ್ರಪಂಚದಲ್ಲೇ ದೊಡ್ಡ ರಾಜಕೀಯ ಪಕ್ಷವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಪಕ್ಷ ಹೊರಹೊಮ್ಮಲು ಪೇಜ್‌ ಪ್ರಮುಖರೇ ಕಾರಣ ಎಂದರು. https://ainlivenews.com/heavy-rains-in-guwahati-water-seeps-into-international-airport/#google_vignette ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಇಡೀ ಪ್ರಪಂಚದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಹೊರ ಹೊಮ್ಮಲು ಪೇಜ್ ಪ್ರಮುಖರು ಕಾರಣ. ಪ್ರಪಂಚದಲ್ಲಿ ನರೇಂದ್ರ ಮೋದಿ ನೋಡಲು ಜನರು ಹುಚ್ಚೆಂದು ಕಣಿಯುತ್ತಿದ್ದಾರೆ. ಮೋದಿ ಅವರ ಮಾತು ಕೇಳಬೇಕು ಅಂತಾ ಕಾತುರದಿಂದ ಇರುತ್ತಾರೆ. ಅಂತಹ ಪ್ರಧಾನಮಂತ್ರಿ ಅವರು ಶಿವಮೊಗ್ಗ ಜಿಲ್ಲೆಗೆ ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಬಂದಿದ್ದರು ಎಂದು ರಾಘವೇಂದ್ರ ಹೇಳಿದರು. ಭಾರತವನ್ನು ಆಳಿದ ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷ ಸ್ಥಾನ ಕಳೆದುಕೊಂಡಿದೆ. ಗ್ರಾಮ ಪಂಚಾಯ್ತಿಯಲ್ಲಿ ಒಂದು ಸ್ಥಾನವೂ ಇರದಿದ್ದ ಬಿಜೆಪಿ ‌ಇಂದು ದೊಡ್ಡದಾಗಿ ಬೆಳೆದಿದೆ ಎಂದರು. ಸೈನಿಕರ…

Read More

ಗುವಾಹಟಿ:- ಗುವಾಹಟಿಯಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಿಂಚು, ಗುಡುಗು ಸಹಿತ ಬಿರುಗಾಳಿ ಮತ್ತು ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ತ್ರಿಪುರದಂತಹ ಇತರ ಈಶಾನ್ಯ ರಾಜ್ಯಗಳಲ್ಲೂ ಭಾರೀ ಮಳೆಯಾಗುತ್ತಿದೆ. https://ainlivenews.com/voting-awareness-program-through-rally-of-vintage-cars-and-bikes/ ಇನ್ನೂ ಭಾರೀ ಮಳೆಯಿಂದ ಗುವಾಹಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಲವು ಭಾಗಗಳು ಹಾನಿಗೊಳಗಾಗಿದ್ದು, ವಿಮಾನ ನಿಲ್ದಾಣದೊಳಗೆ ಶೀಟ್​​ ಕುಸಿಯುತ್ತಿರುವ, ನೀರಿನಿಂದ ಮುಳುಗಿರುವ ಚಿತ್ರ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮುಂದಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ

Read More

ಬೆಂಗಳೂರು::- ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮತ್ತು ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ವಿಂಟೇಜ್ ಕಾರ್ ಹಾಗೂ ಬೈಕ್ ಗಳ ರ‍್ಯಾಲಿ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು. ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮತದಾನವು ಇದೇ ಏಪ್ರಿಲ್ 26 ರಂದು ನಡೆಯಲಿದ್ದು, ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ವಿಂಟೇಜ್ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ರ‍್ಯಾಲಿ ಮಾಡುವ ಮೂಲಕ ಲೋಕ ಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶೇಖಡಾವಾರು ಮತದಾನ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಜ್ಞಾ ವಿಧಿ ಸ್ವೀಕಾರ: ಲೋಕಸಭಾ ಚುನಾವಣೆ ಹಿನ್ನೆಲೆ ವಿಂಟೇಜ್ ಕಾರ್…

Read More

ವಿಜಯಪುರ:- ಚಡಚಣ ಪಟ್ಟಣದಲ್ಲಿ ಇಂದು ಕೇಂದ್ರ ಸೇನಾಪಡೆ ಮತ್ತು ಚಡಚಣ ಜನ ಸ್ನೇಹಿ ಪೋಲಿಸ್ ಠಾಣೆಯ ಸಿಬ್ಬಂದಿಗಳಿಂದ ಬೀದಿಗಳಲ್ಲಿ ಪಥ ಸಂಚಲನವು ಸಿ.ಪಿ.ಆಯ್. ಎಚ್. ಡಿ. ಮುಲ್ಲಾ, ಪಿ.ಎಸ್.ಐ. ರಾಘವೇಂದ್ರ ಖೋತ, ಝಳಕಿ ಪಿ.ಎಸ್.ಐ. ಹೊನ್ನಪ್ಪ ತಳವಾರ ಇವರುಗಳ ನೇತ್ರತ್ವದಲ್ಲಿ ಬ್ಯಾಂಡ್ ಬಾರಿಸುವುದರ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಬಸವೇಶ್ವರ ಸರ್ಕಲ್‌ದಿಂದ ಪ್ರಾರಂಭವಾದ ಪಥ ಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣಪತಿ ಚೌಕ, ಅಗಸಿ ಮೂಲಕ ಪಲ್ಯದ ಕಟ್ಟೆ ನಂತರ ಪಂಢರಪುರ ರಸ್ತೆಯ ಮೂಲಕ ಜನಸ್ನೇಹಿ ಪೋಲಿಸ್ ಠಾಣೆಗೆ ತಲುಪಿತು. ಪಥ ಸಂಚಲನದಲ್ಲಿ ನಾಗರಿಕರು ಹೂಮಾಲೆ ಹಾಕಿ ಸತ್ಕರಿಸಿದರು. ಇನ್ನೂ ಕೆಲ ಮಹಿಳೆಯರು ಆರತಿ ಎತ್ತಿ ಹರಸಿ ಸಂತೋಷ ಪಟ್ಟರು. ನಂತರ ಜನಸ್ನೇಹಿ ಠಾಣೆಯ ಪಿ. ಎಸ್.ಐ, ರಾಘವೇಂದ್ರ ಖೋತ ಮಾತನಾಡಿ ದರು. 55 ಜನ ಸೇನಾಪಡೆ ಪಥ ಸಂಚಲನದಲ್ಲಿ ಭಾಗಿಯಾಗಿ ಪಟ್ಟಣದ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಹಿರಿಯ ಸೈನಿಕರಾದ ಜಹಾಯಿ ಪನಸಾ ಇನಸ್ಪೆಕ್ಟರ್ ಮತ್ತು ಧರಮ್ ಪಾವು…

Read More

ಮಡಿಕೇರಿ:- ಅಮಿತ್ ಶಾ ಓರ್ವ ರೌಡಿಶೀಟರ್ ಎಂದು ಸಿಬಿಐ ಕೂಡ ಹೇಳಿತ್ತು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಮ್ಮ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್‌ ಶಾ ಅವರನ್ನ ರೌಡಿ ಎಂದು ನಾನೇ ಹುಟ್ಟಿಸಿಕೊಂಡು ಹೇಳಿದಂತಹ ಮಾತಲ್ಲ, ಈ ಹಿಂದೆ ಸಿಬಿಐ ಕೂಡ ಹೇಳಿತ್ತು. ಅಮಿತ್ ಶಾ ಅವರಿಗೆ ಕ್ರಿಮಿನಲ್ ಬ್ಯಾಗ್ರೌಂಡ್‌ ಇದೆ ಅಂತ ಹೇಳಿದೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ. https://ainlivenews.com/the-forest-department-rescued-the-black-leopard-that-fell-into-the-well/ 2010ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಗುಜರಾತ್ ಕೋರ್ಟ್‌ಗೆ ಸಿಬಿಐ ಕೊಟ್ಟ ಹೇಳಿಕೆ ಅದು. ಅದೇ ಹೇಳಿಕೆಯನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೇ, ಮೊದಲು ಸಿಬಿಐ ಮೇಲೆ ಅವರು ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ. ಅದಕ್ಕೆ ನಾನು ಏನು ಉತ್ತರ ಕೊಡಬೇಕೋ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 10…

Read More

ಮಂಗಳೂರು:- ಬಾವಿಗೆ ಬಿದ್ದಿದ್ದ, ಬಲು ಅಪರೂಪದ ಕರಿ ಚಿರತೆಯನ್ನು ಅರಣ್ಯ ಇಲಾಖೆ ಸ್ಥಳೀಯರ ಸಹಕಾರದಲ್ಲಿ ಬಾವಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಮಂಗಳೂರು ತಾಲೂಕಿನ ಎಡಪದವು ಸಮೀಪದ ಗೊಸ್ಪೆಲ್ ಸನಿಲ ಎಂಬಲ್ಲಿ ಜರುಗಿದೆ. https://ainlivenews.com/like-every-year-the-mangalmukhi-fair-was-held-with-grandeur/ ಸನಿಲ ನಿವಾಸಿ ಶಕುಂತಲಾ ಆಚಾರ್ಯ ಎಂಬವರ ಮನೆಯ ಬಾವಿಯಲ್ಲಿ ಇಂದು ಬೆಳಿಗ್ಗೆ ಚಿರತೆ ಪತ್ತೆಯಾಗಿತ್ತು. ಶಕುಂತಲಾ ಅವರ ಪತಿ ನೀರು ತರಲು ಹೋದಾಗ ಬಾವಿಯಲ್ಲಿ ಚಿರತೆ ಕಂಡು ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ತಂಡ ಸ್ಥಳೀಯರ ಸಹಾಯದೊಂದಿಗೆ ಕರಿಚಿರತೆಯನ್ನು ಬೋನಿನ ಮೂಲಕ ಬಾವಿಯಿಂದ ಮೇಲೆತ್ತುವ ಕಾರ್ಯಾಚರಣೆ ನಡೆಸಿದ್ದರು. ಕರಿಚಿರತೆ ಬಲು ಅಪರೂಪದ ಚಿರತೆಯಾಗಿದ್ದು ಪಶು ವೈದ್ಯರಿಂದ ಆರೋಗ್ಯ ತಪಾಸಣೆ ಬಳಿಕ ಅವರ ಸಲಹೆಯಂತೆ ಮುಂದಿನ ಕೃಮ ಕೈಗೊಳ್ಳಲಾಗುವುದು. ಈ ಭಾಗದಲ್ಲಿ ಚಿರತೆ ಇರುವ ಬಗ್ಗೆ ಮೊದಲಿನಿಂದಲೂ ದೂರುಗಳು ಬಂದಿದ್ದವು ಇದೀಗ ಸ್ಥಳೀಯರ ಸಹಕಾರದಲ್ಲಿ ಚಿರತೆಯನ್ನು ರಕ್ಷಿಸಲಾಗಿದೆ

Read More

ಬನ್ನೇರುಘಟ್ಟ:- ಜಾತ್ರೆ ಅಂದ್ರೆ ಅದೊಂದು ರೀತಿಯ ಸಂಭ್ರಮ ಸಡಗರದ ಆಚರಣೆ. ತಮ್ಮ ಊರಿನ ದೇವತೆಗಳಿಗೆ ವರ್ಷಕ್ಕೊಂದು ರಥೋತ್ಸವ, ಕರಗ, ಪಲ್ಲಕ್ಕಿ ನಡೆಸುವ ಮೂಲಕ ಗ್ರಾಮದ ಜನ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದ್ರೆ ಇಲ್ಲೊಂದು ಕಡೆ ಮಂಗಳಮುಖಿಯರಿಗೆಂದೆ ವಿಶಿಷ್ಟ ಜಾತ್ರೆ ನಡೆಯುತ್ತಿದ್ದು ತಮ್ಮ ಆರಾಧ್ಯ ದೇವಿಗೆ ವರ್ಷಕೊಂದು ಬಾರಿ ಜಾತ್ರೆ ನಡೆಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಅಷ್ಟಕ್ಕು ಮಂಗಳ ಮುಖಿಯರ ಆ ದೇವಿ ಯಾರು, ಎಲ್ಲಿ ನಡೆಯುತ್ತೆ ಆ ಜಾತ್ರೆ ಅಂತೀರ ನೋಡಿ ಈ ಸ್ಟೋರಿ ನೋಡಿ…… https://ainlivenews.com/sumalata-ambarishs-statement-of-dcm-as-poison-enemy-is-surprising/ ಹೌದು ಹೀಗೆ ಮೈತುಂಭ ಹರಿಶಿಣ ಬಳಿದುಕೊಂಡು ತಲೆ ತುಂಬಾ ಹೂ ಮೂಡಿದು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಿರುವ ಮಂಗಳ ಮುಖಿಯರು ತಮ್ಮ ನೆಚ್ಚಿನ ಆರಾಧ್ಯ ದೇವಿ ಬೇಗಾಳಮ್ಮನಿಗೆ ಹರಕೆ ಸಲ್ಲಿಸಲು ತೆರಳುತಿರುವ ದೃಶ್ಯ ಕಂಡು ಬಂದದ್ದು ಬೆಂಗಳೂರು ಹೊರವಲಯ ಬನ್ನೇರುಘಟ್ಟದಲ್ಲಿ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಬನ್ನೇರುಘಟ್ಟದ ಚಂಪಕದಾಮ ಸ್ವಾಮಿಯ ರಥೋತ್ಸವದಂದು ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಜನ ಮಂಗಳಮುಖಿಯರು…

Read More

ಬೆಂಗಳೂರು:- ವಿಷ, ವೈರಿ ಎಂಬ ಡಿಸಿಎಂ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಷ, ವೈರಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ. ಈಗ ಈ ವಿಷಯ ಮಾತನಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್​​ನ ಯಾರ‍್ಯಾರು ಸಂಪರ್ಕ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಊಹೆಗೆ ಬಿಡುತ್ತೇನೆ ಎಂದು ಹೇಳಿದ್ದಾರೆ. https://ainlivenews.com/pomegranate-fruit-has-the-power-to-cure-deadly-diseases-2/#google_vignette 2019ಕ್ಕೂ ಮುಂಚೆ ನನಗೆ ಯಾವುದೇ ರಾಜಕೀಯ ಅನುಭವ ಇರಲಿಲ್ಲ. ರಾಜಕೀಯ ಚದುರಂಗದ ಆಟ ಅನ್ನೋದು ಅರಿವಾಗಿದೆ. ಮಂಡ್ಯದ ಜನರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಕೈಗೊಳ್ಳುವೆ. ನನ್ನ ಮಾತಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ

Read More

ದೆಹಲಿ:- ಅಧಿಕಾರ ಶಾಶ್ವತವಲ್ಲ, ದುರಹಂಕಾರ ಛಿದ್ರಗೊಳ್ಳುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ. ನಾನು ಬಾಲ್ಯದಿಂದಲೂ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೇನೆ. ಪ್ರತಿ ವರ್ಷ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ನಾನು ಚಿಕ್ಕವಳಿದ್ದಾಗ, ನಾನು ನನ್ನ ಅಜ್ಜಿ ಇಂದಿರಾ ಜೀ ಅವರೊಂದಿಗೆ ಬರುತ್ತಿದ್ದೆ. ಅವರು ನನಗೆ ರಾಮಾಯಣವನ್ನು ಹೇಳುತ್ತಿದ್ದರು” ಎಂದಿದ್ದಾರೆ. https://ainlivenews.com/dont-agree-to-caa-for-any-reason-dont-believe-the-centres-words/#google_vignette ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಇಂದು ಅಧಿಕಾರದಲ್ಲಿರುವವರು ತಮ್ಮನ್ನು ರಾಮಭಕ್ತರೆಂದು ಕರೆದುಕೊಳ್ಳುತ್ತಾರೆ. ನಾನು ಇಲ್ಲಿ ಕುಳಿತಾಗ ನಾನು ಅವರಿಗೆ ಒಂದು ವಿಷಯ ಹೇಳಬೇಕು ಎಂದು ಯೋಚಿಸಿದೆ. ನಾನು ಅವರಿಗೆ 1,000 ವರ್ಷಗಳ ಹಿಂದಿನ ಕಥೆ ಮತ್ತು ಅದರ ಕಥೆಯ ಸಂದೇಶ ನೆನಪಿಸಲು ಬಯಸುತ್ತೇನೆ. ರಾಮನು ಸತ್ಯಕ್ಕಾಗಿ ಹೋರಾಡಿದಾಗ ಅವನ ಬಳಿ ಶಕ್ತಿ, ಸಂಪನ್ಮೂಲಗಳು ಅಥವಾ ರಥವೂ ಇರಲಿಲ್ಲ. ರಾವಣನಿಗೆ ರಥಗಳು, ಸಂಪನ್ಮೂಲಗಳು, ಸೈನ್ಯ ಮತ್ತು ಚಿನ್ನವಿತ್ತು. ಆದರೆ ಭಗವಾನ್ ರಾಮನಿಗೆ ಸತ್ಯ, ಭರವಸೆ, ನಂಬಿಕೆ, ಪ್ರೀತಿ, ದಯೆ, ನಮ್ರತೆ, ತಾಳ್ಮೆ, ಧೈರ್ಯ ಮತ್ತು ಸತ್ಯ…

Read More

ಕೋಲ್ಕತಾ :- ಯಾವುದೇ ಕಾರಣಕ್ಕೂ ಸಿಎಎ ಒಪ್ಪಬೇಡಿ, ಕೇಂದ್ರದ ಮಾತು ನಂಬಬೇಡಿ ಎಂದು ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದಾರೆ. ಸಿಎಎ ಅನ್ನು ಒಪ್ಪಬಾರದು ಎಂದು ಮತುವಾ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ. ಮತುವಾ ಎಂಬುದು ಹಿಂದೂ ಧರ್ಮದ ದಲಿತರು ಸೇರಿ ಆಗಿರುವ ಒಂದು ಮತವಾಗಿದ್ದು, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮುದಾಯದವರು ಇದ್ದಾರೆ. ಭಾರತದ ವಿಭಜನೆ ಬಳಿಕ ಹಲವರು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ಹಾಗೆಯೇ, ಧಾರ್ಮಿಕ ದೌರ್ಜನ್ಯಕ್ಕೊಳಗಾಗಿಯೂ ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದವರಿದ್ದಾರೆ. ಇವರನ್ನು ಉದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ಸಿಎಎ ಹಿಂದಿರುವ ಪಿತೂರಿ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ್ದಾರೆ. https://ainlivenews.com/delhi-won-the-toss-chose-to-bat-csk-bowled/ ಮತುವನ್ನರೇ ನನ್ನ ಮೇಲೆ ನಂಬಿಕೆ ಇಡಿ. ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳಿಗೆ ಮಾರುಹೋಗಬೇಡಿ. ನೀವು ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ನಿಮ್ಮನ್ನು ಐದು ವರ್ಷ ವಿದೇಶಿಗ ಎಂದು ಪರಿಗಣಿಸುತ್ತಾರೆ. ನಿಮ್ಮಿಂದ ಎಲ್ಲವನ್ನೂ ಕಿತ್ತುಕೊಂಡು ಡಿಟೆಂಶನ್ ಕ್ಯಾಂಪ್​ನಲ್ಲಿ ಇರಿಸುತ್ತಾರೆ. ನಿಮಗೆ…

Read More