Author: AIN Author

ಬೆಂಗಳೂರು :- ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಮಹಿಳೆ ಜೊತೆ ಕಿರಿಕ್ ತೆಗೆದ ಘಟನೆ ನಿನ್ನೆ ರಾತ್ರಿ ಕೋರಮಂಗಲ ಬಳಿ ಜರುಗಿದೆ. ಮೂವರು ಯುವಕರು ಮಹಿಳೆ ಜೊತೆ ಜಗಳಕ್ಕೆ ಬಂದಿದ್ದು, ಭಯದಿಂದ ಪೊಲೀಸರಿಗೆ ಮಹಿಳೆ ಕರೆ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ. ಇದೇ ವೇಳೆ ಕಾರಿನ ಡೋರ್ ತೆಗೆಯಲು ಕಿರಾತಕರು ಮುಂದಾಗಿದ್ದಾರೆ. ಇದ್ರಿಂದ ಭಯಗೊಂಡು ಅಳುತ್ತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಯದಲ್ಲಿಯೇ ತನ್ನ ಮೊಬೈಲ್ ನಲ್ಲಿ ಮಹಿಳೆ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರರಿಂದ ಜಗಳ ನಡೆದಿದ್ದು, ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ತುಮಕೂರು:- ಇಂದು ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಲಿಂಗೈಕ್ಯ ಶಿವಕುಮಾರ ಶ್ರೀಗಳ 117ನೇ ಜನ್ಮ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಮಠದಲ್ಲಿಸಕಲ ತಯಾರಿ ನಡೆಸಲಾಗುತ್ತಿದೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ರುದ್ರಾಭಿಷೇಕ ಮಹಾಮಂಗಳಾರತಿ ನೆರವೇರಿಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಶ್ರೀ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಭಾಗಿಯಾಗುತ್ತಿಲ್ಲ. https://ainlivenews.com/there-is-no-confusion-no-disagreement-in-kolar/ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಸುತ್ತೂರು ಮಠದ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು,ಗದಗಿನ ವೀರಶೈವ ಪುಣ್ಯಶ್ರಮದ ಕಲ್ಲಯ್ಯ ಅಜ್ಜರವರು ಸೇರಿದಂತೆ ಅನೇಕ ಪೂಜ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 117ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಮಾಡಲಾಗುತ್ತಿದ್ದು, ನಾಮಕರಣ ಮಾಡಲು ಪೋಷಕರು ಹೆಸರು ನೋಂದಾಯಿಸಿದ್ದಾರೆ. ಶಿವಕುಮಾರ ಶ್ರೀಗಳ ಗದ್ದಿಗೆ, ಮಠದ ಆವರಣಗಳನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಮಠಕ್ಕೆ ಆಗಮನ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಮಠದಲ್ಲಿ ಊಟದ ವ್ಯವಸ್ಥೆ‌…

Read More

ಕೋಲಾರ:- ಕೋಲಾರದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯ ಇಲ್ಲ ಎಂದು ಭೈರತಿ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಕೋಲಾರದಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲಗಳಿಲ್ಲ, ಭಿನ್ನಾಭಿಪ್ರಾಯ ಶಮನಗೊಂಡಿದೆ. ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಸೋಮವಾರ ಕುರುಡಮಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಪ್ರಾರಂಭ ಮಾಡಲಾಗುವುದು. https://ainlivenews.com/ipl-2024-rajasthan-challenge-mumbai-today/ ಗೌತಮ್ ಹೈಕಮಾಂಡ್ ಕ್ಯಾಂಡಿಡೆಟ್ . ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿ ಮುಖಂಡರ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕೋಲಾರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಸಚಿವರು ಹೇಳಿದ್ದಾರೆ.

Read More

ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ಹೊಸ ಕ್ಯಾಪ್ಟನ್ ಜೊತೆ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಮುಂಬೈ ಇಂಡಿಯನ್ಸ್ ನಿರೀಕ್ಷೆ ತಕ್ಕಂತೆ ಪ್ರದರ್ಶನ ಬರುತ್ತಿಲ್ಲ. ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿ ನಿಂತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏ.1) ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. https://ainlivenews.com/expect-rain-in-these-districts-of-north-karnataka-in-the-next-24-hours/ ಆದರೆ ಈ ಪಂದ್ಯವು ಹಾರ್ದಿಕ್ ಪಾಂಡ್ಯ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಡುವ ಸಾಧ್ಯತೆಯಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದೇ ಮೊದಲ ಬಾರಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನ ಮುಂಬೈ ಅಹಮದಾಬಾದ್ ಮತ್ತು ಹೈದರಾಬಾದ್​ನಲ್ಲಿ ಪಂದ್ಯಗಳನ್ನಾಡಿತ್ತು. ಈ ಎರಡು ಪಂದ್ಯಗಳ ವೇಳೆ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ನಿಂದನೆ ಅನುಭವಿಸಿದ್ದರು. ಅದರಲ್ಲೂ ಪಾಂಡ್ಯ ಅವರ ತವರು ಅಹಮದಾಬಾದ್​ನಲ್ಲೂ ಮೂದಲಿಸಲಾಗಿತ್ತು. ಇದೀಗ ಮುಂಬೈ ಕಾ ರಾಜ ಖ್ಯಾತಿಯ ರೋಹಿತ್ ಶರ್ಮಾ…

Read More

ಭಾರತೀಯ ರಿಸರ್ವ್‌ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ನೆಟ್ವರ್ಕ್‌ಗಳು ಹಾಗೂ ಕಾರ್ಡ್ ನೀಡುವ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೌದು 2024-25ನೇ ಹಣಕಾಸು ಸಾಲು ಏಪ್ರಿಲ್ ತಿಂಗಳಿಂದ ಪ್ರಾರಂಭವಾಗಲಿದೆ. ಈ ತಿಂಗಳಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬದಲಾವಣೆಗಳಾಗಲಿದ್ದು, ಇವು ನಿಮ್ಮ ಹಣದ ವೆಚ್ಚ ಹಾಗೂ ಹೂಡಿಕೆ ಮೇಲೆ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇಲ್ಲವಾದರೆ ಮುಂದೆ ತೊಂದರೆ ಎದುರಾಗಬಹುದು. ಈಗಾಗಲೇ ಕ್ರೆಡಿಟ್ ಕಾರ್ಡ್ ಬಳಸುತ್ತಿರುವ ಗ್ರಾಹಕರಿಗೆ ತಮ್ಮ ಕಾರ್ಡ್‌ ಅನ್ನು ಅಪ್‌ಡೇಟ್‌ ಮಾಡುವ ಸಂದರ್ಭದಲ್ಲಿ ಕಾರ್ಡ್ ನೆಟ್‌ವರ್ಕ್ ಅನ್ನು ಬದಲಾಯಿಸುವ ಆಯ್ಕೆ ಸಿಗಲಿದೆ. ಸಾಮಾನ್ಯವಾಗಿ ಕ್ರೆಡಿಟ್‌ ಕಾರ್ಡ್‌ಗಳು ಒಂದರಿಂದ ಹಲವು ವರ್ಷಗಳ ಮಾನ್ಯತೆ ಹೊಂದಿರುತ್ತವೆ. ಕಾರ್ಡ್‌ನ ಅವಧಿ ಮುಗಿದ ನಂತರ ನಿಮಗೆ ಇಷ್ಟ ಬಂದ ನೆಟ್ವರ್ಕ್‌ಗೆ ಬದಲಾಯಿ ಸಬಹುದು. ಎಸ್ ಬಿಐ ಕ್ರೆಡಿಟ್ ಕಾರ್ಡ್: ನೀವು ಎಸ್ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಈ ಸುದ್ದಿ ನಿಮಗಾಗಿ. ಏಪ್ರಿಲ್ 1, 2024…

Read More

ಬೆಂಗಳೂರು:- ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. https://ainlivenews.com/hometown-mysore-and-chamarajanagar-are-ready-to-win/ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಇನ್ನು ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಏಪ್ರಿಲ್​ 3 ರಿಂದ 5ರ ವರೆಗೆ ಉಷ್ಣ ಹವೆ ಬೀಸಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿದಿನ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತಿದೆ. ಮಾರ್ಚ್​ 31 ರಂದು ಕಲಬುರಗಿ ಜಿಲ್ಲೆಯಲ್ಲಿ​ ಅತ್ಯಧಿಕ 41.4 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ 17.08 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್​ ದಾಟಿದೆ. ಮುಂದಿನ 24 ಗಂಟೆ ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್​ ಮತ್ತು…

Read More

ಮೈಸೂರು:- 2024 ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಕೆಲವೊಂದು ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಅದರಂತೆ ಮೈಸೂರು ಕೊಡಗು ಲೋಕಸಭೆ ಮಹಾಯುದ್ಧ ಈ ಬಾರಿ ಹೈ ವೋಲ್ಟೇಜ್‌ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್‌ ಜಾತಿ ಸಮೀಕರಣ ಪ್ಲಾನ್ ಮಾಡ್ತಿದೆ. ಜೊತೆಗೆ ತವರು ಗೆಲ್ಲಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಣತಂತ್ರ ಮಾಡಿದ್ದಾರೆ. https://ainlivenews.com/kkr-tops-csk-slumps-big-change-in-points-table/#google_vignette ತವರು ಜಿಲ್ಲೆ ಮೈಸೂರು ಹಾಗೂ ಚಾಮರಾಜನಗರ ಚುನಾವಣಾ ಪ್ರಚಾರದ ಅಖಾಡಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಇಳಿದಿದ್ದಾರೆ. ಎರಡೂ ಕ್ಷೇತ್ರಗಳನ್ನ ಮರಳಿ ಪಡೆಯಲು ಸ್ಥಳೀಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಎರಡೂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಿದ್ದಾರಂತೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ವಿರುದ್ಧ ಸ್ಪರ್ಧಿಸಿರುವ ಲಕ್ಷ್ಮಣ್ ಗೆಲ್ಲಿಸಿಕೊಳ್ಳಲು ಒಕ್ಕಲಿಗ ಮತಗಳನ್ನ ಸೆಳೆಯಲು ಭಾರೀ ರಣತಂತ್ರ ರೂಪಿಸಿದ್ದಾರೆ. ಯದುವೀರ್ ಟಾರ್ಗೆಟ್ ಬೇಡ, ಬಿಜೆಪಿ ನಮ್ಮ ಟಾರ್ಗೆಟ್, ಯದುವೀರ್ ವಿರುದ್ಧ ಸಿಕ್ಕ ಸಿಕ್ಕ ರೀತಿ ಹೇಳಿಕೆ ಕೊಡಬೇಡಿ. ಬಿಜೆಪಿ ಲೀಡ್ ಆಗಿರುವ…

Read More

ಮಹಿಳೆಯರಲ್ಲಿ ಬಿಳುಪು ಹೋಗುವುದು ಸಹಜ, ಅದರಲ್ಲೂ ಮುಟ್ಟಿನ ಸಮಯದಲ್ಲಿ ಸ್ವಲ್ಪ ಅಧಿಕ ಬಿಳುಪು ಹೋಗಬಹುದು, ಆದರೆ ಪ್ರತಿದಿನ ತುಂಬಾನೇ ಬಿಳುಪು ಹೋಗುವುದು ಅಂದರೆ ಒಳುಡುಪು ಒದ್ದೆಯಾಗುವಷ್ಟು ಬಿಳುಪು ಹೋಗುತ್ತಿದ್ದಾರೆ ನಿರ್ಲಕ್ಷ್ಯ ಮಾಡಲೇಬಾರದು, https://ainlivenews.com/men-should-consume-white-onion-in-summer-ekantira/ ಈ ಮನೆ ಮದ್ದುಗಳನ್ನು ಟ್ರೈ ಮಾಡಿ ಬಿಳುಪು ಹೋಗುವುದನ್ನು ತಡೆಯಿರಿ ಮೆಂತೆ ಒಂದು ಕಪ್‌ ನೀರಿಗೆ 1 ಚಮಚ ಮೆಂತೆ ಹಾಕಿ ಕುದಿಸಿ, ಒಂದು ಲೋಟ ನೀರು ಅರ್ಧ ಕೋಟ ಆಗುವವರೆಗೆ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ. ಬೆಂಡೆಕಾಯಿ ಅಂತೂ ತುಂಬಾ ಒಳ್ಳೆಯದು ಬಿಳುಪು ಹೋಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಕೂಡ ತುಂಬಾ ಒಳ್ಳೆಯದು. ಒಂದೆರಡು ಬೆಂಡೆಕಾಯಿ ಕತ್ತರಿಸಿ ನೀರಿಗೆ ಹಾಕಿ ಕುದಿಸಿ, ನಂತರ ಸ್ವಲ್ಪ ಬಿಸಿ ಇರುವಾಗ ಕುಡಿಯಿರಿ, ತುಂಬಾ ತಣ್ಣಗಾದರೆ ಕುಡಿಯುವುದು ಕಷ್ಟ. ಬಿಳಿ ದಾಸವಾಳದ ಹೂ ಬಿಲಿ ದಾಸವಾಳದ ಹೂ ತಿನ್ನುವುದು ಅಥವಾ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಬಿಳುಪು ಹೋಗುವುದು ಕಡಿಮೆಯಾಗುವುದು,’ ಕೊತ್ತಂಬರಿ ಬೀಜ ಕೊತ್ತಂಬರಿ…

Read More

IPl 2024 ರ ಪಾಯಿಂಟ್ಸ್ ಟೇಬಲ್​ನಲ್ಲಿ ದೊಡ್ಡ ಬದಲಾವಣೆ ಕಂಡಿದೆ. ಭಾನುವಾರ ಎರಡು ಪಂದ್ಯಗಳು ನಡೆದವು. ಅಹ್ಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ವಿಶಾಖಪಟ್ಟಣಂನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 20 ರನ್​ಗಳಿಂದ ಗೆದ್ದು ಬೀಗಿತು. https://ainlivenews.com/diabetics-eat-this-without-fail-to-get-blood-sugar-control/ ಹೀಗಾಗಿ ಕೊಂಚ ಬದಲಾವಣೆ ಕಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಜಿಗಿದಿದೆ. ಇವರು ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ 4 ಪಾಯಿಂಟ್ಸ್ ಪಡೆದಿದೆ. ಇವರ ನೆಟ್​ ರನ್​ರೇಟ್ +1.047 ಆಗಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಜಯ, ಒಂದರಲ್ಲಿ ಸೋಲು ಕಂಡು ನಾಲ್ಕು ಅಂಕ ಪಡೆದು +0.976 ರನ್​ರೇಟ್ ಹೊಂದಿದೆ. ಸಂಜು ಸ್ಯಾಮ್ಸನ್ ನಾಯಕತ್ವದ…

Read More

ಟೊಮೆಟೊ ಪ್ರಪಂಚದಲ್ಲಿ ಅತಿ ಹೆಚ್ಚು ಸೇವಿಸುವ ತರಕಾರಿಯಾಗಿದೆ. ವಾಸ್ತವವಾಗಿ, ಟೊಮೆಟೊವನ್ನು ಹೆಚ್ಚಾಗಿ ತರಕಾರಿಗಳೊಂದಿಗೆ ಬಳಸಲಾಗುತ್ತದೆ ಅಥವಾ ಟೊಮೆಟೊ ಚಟ್ನಿ ತಯಾರಿಸಲಾಗುತ್ತದೆ. ಟೊಮೆಟೊದ ವೈಜ್ಞಾನಿಕ ಹೆಸರು ಸೋಲಾನಮ್ ಲೈಕೋ ಪೋರ್ಸಿಕನ್. ಜಗತ್ತಿನಲ್ಲಿ ಕೆಂಪು ಟೊಮೆಟೊಗಳು ಮಾತ್ರ ಇವೆ ಎನ್ನುವುದು ತಪ್ಪು ಕಲ್ಪನೆ. ಆದ್ದರಿಂದ ಸೇಬುಗಳಂತೆ, ಟೊಮೆಟೊಗಳು ಪ್ರಪಂಚದಲ್ಲಿ ವಿವಿಧ ಬಣ್ಣಗಳನ್ನು ಹೊಂದಿರುತ್ತವೆ. ಇದರಲ್ಲಿ ಕೆಂಪು ಟೊಮೆಟೊಗಳನ್ನು ಹೆಚ್ಚು ಬಳಸಲಾಗುತ್ತದೆ. ಹಾಗಾಗಿ ಕಪ್ಪು ಟೊಮೆಟೊವನ್ನು ಕೂಡ ಜನರು ತುಂಬಾ ಇಷ್ಟಪಡುತ್ತಾರೆ. ಇದರೊಂದಿಗೆ ಹಸಿರು ಟೊಮೆಟೊಗಳಿಗೂ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ, ಈಗ ಹಸಿರು ಟೊಮೆಟೊಗಳನ್ನು ಸಹ ವ್ಯಾಪಕವಾಗಿ ಬೆಳೆಸಲಾಗುತ್ತಿದೆ. ಹಸಿರು ಟೊಮೆಟೊಗಳ ಕೃಷಿಯಿಂದ ರೈತರು ಹೇಗೆ ಆದಾಯ ಗಳಿಸಬಹುದು ಎಂಬುದನ್ನು ಇಲ್ಲಿ ತಿಳಿಯೋಣ. https://ainlivenews.com/good-news-for-those-with-less-than-2-hectares-of-land-rs-10000-directly-to-the-account/ ಹಸಿರು ಟೊಮೆಟೊಗಳನ್ನು ಹೇಗೆ ಬೆಳೆಯುವುದು? ಹಸಿರು ಟೊಮೆಟೊಗಳ ಕೃಷಿಯ ಬಗ್ಗೆ ಮಾತನಾಡುವುದಾದರೆ. ಇವುಗಳನ್ನು ಪ್ರತ್ಯೇಕವಾಗಿ ಬಿತ್ತುವುದಿಲ್ಲ, ಅವುಗಳ ಬೀಜಗಳು ಸಾಮಾನ್ಯ ಟೊಮೆಟೊಗಳಂತೆಯೇ ಇರುತ್ತವೆ. ಹಸಿರು ಟೊಮೆಟೊಗಳು ತಿಳಿ ಹಸಿರು ಬಣ್ಣವನ್ನು ಹೊಂದಿರುತ್ತವೆ ಮತ್ತು ಅವುಗಳ ರುಚಿ…

Read More