Author: AIN Author

ದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗಿ ಪೂಜಾ ವಸ್ತ್ರಾಕರ್‌ (Pooja Vastrakar) ಯಡವಟ್ ಒಂದನ್ನ ಮಾಡ್ಕೊಂಡಿದ್ದಾರೆ. ಪೂಜಾ ವಸ್ತ್ರಾಕರ್‌ ಅವರ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ (PM Modi) ಅವರನ್ನು ಅವಹೇಳನ ಮಾಡಿರುವ ಪೋಸ್ಟರ್ ಒಂದು ಕಾಣಿಸಿಕೊಂಡಿದೆ https://ainlivenews.com/star-batsman-babar-azam-to-replace-shah-afridi-as-captain/ ಕ್ರಿಕೆಟ್ ಫ್ರಾಂಚೈಸಿ ಶೈಲಿಯಲ್ಲಿ ವಸೂಲಿ ಟೈಟಾನ್ಸ್ (Vasooli Titans) ಶೀರ್ಷೀಕೆಯ ಪೋಸ್ಟರ್ ಒಂದನ್ನು ಹಂಚಿಕೊಂಡು ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಜೈಶಂಕರ್, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್ ಸೇರಿ ಅನೇಕ ಬಿಜೆಪಿ ನಾಯಕರ ಫೋಟೋ ಬಳಸಿ ಲೇವಡಿ ಮಾಡಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ಜಾರಿ ನಿರ್ದೇಶನಾಲಯ ಎಂದು ಬರೆದುಕೊಂಡು ನಗುತ್ತಿರುವ ಎಮೋಜಿ ಹಾಕಿಕೊಂಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೂಜಾ ವಸ್ತ್ರಾಕರ್‌ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಖಾತೆಯಲ್ಲಿದ್ದ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಪೋಸ್ಟರ್ ಹರಿಬಿಟ್ಟ ಸಂದರ್ಭದಲ್ಲಿ ನನ್ನ ಖಾತೆ ನನ್ನ ಅಧೀನದಲ್ಲಿ ಇರಲಿಲ್ಲ, ನನ್ನ ಖಾತೆ ಹ್ಯಾಕ್ ಆಗಿತ್ತು. ಆಗಿರೋದಕ್ಕೆ…

Read More

ಇಸ್ಲಾಮಾಬಾದ್‌: 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಕ್‌ ಕ್ರಿಕೆಟಿಗ ಬಾಬರ್‌ ಆಜಂ (Babar Azam) ಅವರಿಗೆ ಮತ್ತೆ ವೈಟ್‌ಬಾಲ್‌ ಕ್ರಿಕೆಟ್‌ (T20 and ODI) ನಾಯಕತ್ವದ ಹೊಣೆ ನೀಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟು ವೇಗಿ ಶಾ ಅಫ್ರಿದಿ ಅವರನ್ನ ಕೆಳಗಿಳಿಸಿದೆ. ಮತ್ತೆ ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ನೀಡಿದೆ. https://ainlivenews.com/despite-losing-the-match-ms-dhoni-wrote-a-great-record-of-three/ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯಲ್ಲಿ ಎದುರಿಸಿದ ಹೀನಾಯ ಸೋಲು ಹಾಗೂ 2024ರ ಪಾಕಿಸ್ತಾನ್‌ ಸೂಪರ್‌ ಲೀಗ್‌ (PSL) ಟೂರ್ನಿಯಲ್ಲಿ ನೀಡಿರುವ ಕಳಪೆ ಪ್ರದರ್ಶನದಿಂದಾಗಿ ಪಿಸಿಬಿ, ಶಾಹೀನ್‌ ಶಾ ಅಫ್ರಿದಿ ಅವರನ್ನ ಕ್ಯಾಪ್ಟನ್‌ ಪಟ್ಟದಿಂದ ಕಿತ್ತೊಗೆದಿದೆ. ಶಾಹೀನ್‌ ಶಾ ಅಫ್ರಿದಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ಯಾಪ್ಟನ್ಸಿ ಅಭಿಯಾನ ಬಹುಬೇಗ ಅಂತ್ಯಗೊಂಡಿದ್ದು, ಕೇವಲ ಒಂದು ಸರಣಿಗೆ ಮಾತ್ರವೇ ಸೀಮಿತವಾಗಿದೆ. ಇದೇ ವರ್ಷ ಆರಂಭದಲ್ಲಿ ನ್ಯೂಜಿಲೆಂಡ್‌ ಎದುರು 5 ಪಂದ್ಯಗಳ ಟಿ20 ಕ್ರಿಕೆಟ್‌ (T20…

Read More

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪರಮಾಪ್ತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಹಾಗೂ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಸಾಕೇತಿಕವಾಗಿ ಕಾಂಗ್ರೆಸ್ ಸೇರ್ಪಡೆ ಆದರು.  https://ainlivenews.com/application-submission-for-new-ration-card-starts-from-today-only-such-people-have-a-chance/ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್​ಗೆ ಟಿಕೆಟ್​ ನೀಡಿದ ಹಿನ್ನಲೆ ಇದಕ್ಕೆ ವಿರೋಧಿಸಿ ಕಾಂಗ್ರೆಸ್​ಗೆ ಸೇರಿದ್ದಾರೆ. ಇವರ ಜೊತೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಸೇರಿದಂತೆ 50ಕ್ಕೂ ಹೆಚ್ಚು ಜನ ಮುಖಂಡರು ಕಾಂಗ್ರೆಸ್​ ಸೇರಿದರು. ಇನ್ನು ಏಪ್ರಿಲ್ 2 (ಮಂಗಳವಾರ)ರಂದು ಅಧಿಕೃತವಾಗಿ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ.

Read More

ತುಮಕೂರು: ಇಂದು ಲಿಂಗೈಕ್ಯ ಶಿವಕುಮಾರಸ್ವಾಮಿಗಳ 117ನೇ ಜನ್ಮದಿನೋತ್ಸವ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದ ಗದ್ದುಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದ್ದು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಡಾ.ಜಿ.ಪರಮೇಶ್ವರ್ ಗದ್ದುಗೆ ದರ್ಶನ ಪಡೆದರು. ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ  ಸಚಿವರು ಆಶಿರ್ವಾದ ಪಡೆದರು. https://ainlivenews.com/application-submission-for-new-ration-card-starts-from-today-only-such-people-have-a-chance/ ಡಾ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ನಡೀತಿದೆ. ಈ ಸಂದರ್ಭದಲ್ಲಿ ಭಕ್ತಿ ಪೂರ್ವಕವಾಗಿ ನಾನು ನಮನ ಸಲ್ಲಿಸಿದ್ದೇನೆ. ರಾಜ್ಯದ ಎಲ್ಲಾ ಭಾಗದ ಬಂದು ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಲಕ್ಷಾಂತರ ಮಕ್ಕಳು ಜೀವನ ಕಲ್ಪಿಸಿಕೊಂಡಿದ್ದಾರೆ. ಎಲ್ಲಾ ಕೊಡುಗೆಗಳನ್ನು ಗುರುತಿಸಿ ಶ್ರೀಗಳಿಗೆ ಭಾರತರತ್ನ ಕೊಡಬೇಕು. ಆದರೆ ಕೇಂದ್ರ ಸರ್ಕಾರ ಯಾಕೋ‌ ಏನೋ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.    

Read More

ಹಾಸನ: ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರ್ಣಕ್ಕೀಡಾದ ಘಟನೆ ನಡೆದಿದೆ. ಅಶ್ವತ್ಥ್ (42), ಸಾಗರ್ (42) ಮೃತ ದುರ್ದೈವಿಗಳಾಗಿದ್ದು, ಮೃತರಿಬ್ಬರೂ ಅರಕಲಗೂಡು ತಾಲ್ಲೂಕಿನ ಚಿಕ್ಕ ಆಲದಹಳ್ಳಿ ಗ್ರಾಮದವರಾಗಿದ್ದಾರೆ. https://ainlivenews.com/application-submission-for-new-ration-card-starts-from-today-only-such-people-have-a-chance/  ಚನ್ನರಾಯಪಟ್ಟಣದ ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಬೈಕ್ ಬರುತ್ತಿದ್ದರು. ಈ ವೇಳೆ ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಬದಿ ಟ್ರಕ್ ನಿಲ್ಲಿಸಿಕೊಂಡು ಅಡುಗೆ ಮಾಡುತ್ತಿದ್ದ ಚಾಲಕ ಹಾಗೂ ನಿರ್ವಾಹಕರು. ವೇಗ ವಾಗಿ ಬಂದ ಬೈಕ್ ಸವಾರರು ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಾದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟಿದೆ. ಫಾತಿಮಾ ಮೃತಪಟ್ಟ ಪುಟ್ಟ ಕಂದಮ್ಮವಾಗಿದ್ದು, ಅಸೀಫ್ ಹಾಗೂ ಅಜುಂ ದಂಪತಿಯ ಪುತ್ರಿಯಾಗಿದ್ದಳು.  ಅಸೀಫ್ ಹಾಗೂ ಅಜುಂ ಸಾಗರದ ಜೋಸೆಫ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಂಪತಿಯ ಪುತ್ರಿ ಭಾನುವಾರ ಸಂಜೆ ಆಟವಾಡುತ್ತ, ಮನೆಯ ಬಚ್ಚಲು ಮನೆಯತ್ತ ಹೋಗಿದೆ. ಈ ವೇಳೆ ಅಲ್ಲಿ ನೀರು ತುಂಬಿದ್ದ ಬಕೆಟ್​​ನೊಳಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಆದರೆ ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ದಂಪತಿಯು ಮಗುವನ್ನು ಹುಡುಕಾಡಿದಾಗ ಬಕೆಟ್​​ನಲ್ಲಿ ಬಿದ್ದಿರುವುದು ಗೊತ್ತಾಗಿದೆ. https://ainlivenews.com/application-submission-for-new-ration-card-starts-from-today-only-such-people-have-a-chance/ ಆದರೆ, ಅದಾಗಲೇ ಮಗುವಿಗೆ ನೀರಿನಲ್ಲಿ ಬಿದ್ದು ಉಸಿರುಗಟ್ಟಿತ್ತು. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ದಂಪತಿಗೆ ತಿಳಿಸಿದ್ದಾರೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ದಂಪತಿಗೆ ಬರಸಿಡಿಲು ಬಡಿದಂತಾಗಿದೆ. ಸಾಗರ ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಳಗಾವಿ: ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಶಾಸಕರೊಬ್ಬರು ಮುನ್ಸೂಚನೆ ನೀಡಿದ್ದು, ಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್‌ ಭವಿಷ್ಯ ನುಡಿದರು. ಶ್ರೀಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದ ಅವರು, ನಂತರ ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ನಿವಾಸಕ್ಕೆ ತೆರಳಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದಿಂದ ಜನರು ಬೇಸತ್ತು ಹೋಗಿದ್ದು, ಕಾಂಗ್ರೆಸ್‌ ದಿನದಿಂದ ದಿನಕ್ಕೆ ದೇಶದಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದರು. https://ainlivenews.com/application-submission-for-new-ration-card-starts-from-today-only-such-people-have-a-chance/ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಎದುರಾಳಿ ಪಕ್ಷದ ಅಭ್ಯರ್ಥಿ ಬಗ್ಗೆ ನಾನು ಯಾವುದೇ ಚರ್ಚೆ ಮಾಡಲು ಬಯಸುವುದಿಲ್ಲ, ಸವದತ್ತಿ ಮತ ಕ್ಷೇತ್ರದಲ್ಲಿ ಮಾಮನಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಸವದತ್ತಿಯಲ್ಲಿ ಬಿಜೆಪಿ ಪಕ್ಷ ಸಂಘಟಿಸುವಲ್ಲಿ ಅವರ ಪಾತ್ರ ಹೆಚ್ಚಿದೆ. ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ…

Read More

ರಾಯಚೂರು:- ನಗರದ ಗದ್ವಾಲ್ ರಸ್ತೆಯಲ್ಲಿ ಬಿಜೆಪಿ ಶಾಸಕ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ಜರುಗಿದೆ. ಚಾಂದಪಾಷಾ ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ. https://ainlivenews.com/on-the-one-hand-fighting-for-water-on-the-other-hand-the-cauvery-water-is-a-drain/ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ಹೋಗಿದ್ದರು. ಈ ವೇಳೆ ಮದ್ಯವ್ಯಸನಿ ಚಾಂದಪಾಷಾ ಶಾಸಕರನ್ನು ನೋಡಿ ಅವರ ಬಳಿಗೆ ಓಡೋಡಿ ಬಂದಿದ್ದಾನೆ. ನಂತರ ನಮ್ಮ ಮನೆಗೆ ನಲ್ಲಿ ಹಾಕಿಸಿಲ್ಲ ಅಂತ ಹೇಳಿದ್ದಾನೆ. ಚಾಂದ್​ಪಾಷಾ 3-4 ಕತ್ತಿಗಳನ್ನುc ಹಿಡಿದಿದ್ದು, ಶಾಸಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೆ ಅಂಗರಕ್ಷಕರು ತಡೆದಿದ್ದಾರೆ. ಬಳಿಕ ಚಾಂದ್​ಪಾಷಾನನ್ನು ಮಾರ್ಕೆಟ್ ಯಾರ್ಡ್ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಲು ಹೋಗಿರಲಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್​ಪಾಷಾ ಹೇಳಿದ್ದಾನೆ. ಮಾರ್ಕೆಟ್ ಯಾರ್ಡ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಂಗಳೂರು:- ಒಂದೆಡೆ ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ರೆ ಮತ್ತೊಂದೆಡೆ ಕಾವೇರಿ ನೀರು ಚರಂಡಿ ಪಾಲಾಗುತ್ತಿದೆ. ಹೀಗಾಗಿ ಕಂಡು ಕಾಣದಂತಿರುವ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಆಕ್ರೋಶ ವ್ಯಕ್ತವಾಗಿದೆ. https://ainlivenews.com/jesus-will-do-you-good-come-to-our-religion/#google_vignette ಹೌದು, ಕಳೆದ ಒಂದು ವಾರದಿಂದ ನೀರು ಪೌಲ್ ಆಗ್ತಿದ್ರು ಅಧಿಕಾರಿಗಳು ತಲೆಗೇಡಿಸಿಕೊಳ್ಳುತ್ತಿಲ್ಲ. ಇದು ಯಾವುದೇ ಗೊತ್ತಿಲ್ಲದ ಪ್ರದೇಶದಲ್ಲಿ ಆಗುತ್ತಿಲ್ಲ..ದಿನನಿತ್ಯ ಸಾವಿರಾರು ಜನ ಓಡಾಡು ಜಾಗದಲ್ಲೇ ಕಾವೇರಿ ನೀರಿನ ವ್ಯರ್ಥ ಆಗುತ್ತಿದೆ. ಮೈಸೂರು ರಸ್ತೆ ಬಳಿಯ ರಾಜಕಾಲುವೆಗೆ ನೀರು ಹರಿದು ಹೋಗುತ್ತಿದೆ. ಬೆಂಗಳೂರಿನಲ್ಲೇ ಪ್ರತಿಷ್ಠಿತ ಏರಿಯಾಗಳಲ್ಲೇ ವಾಟರ್ ಸಮಸ್ಯೆ ಕಾಡುತ್ತಿದ್ದು,ಆದ್ರು ಅಧಿಕಾರಿಗಳಿಗೆ ಮಾತ್ರ ಬುದ್ಧಿಬಂದಿಲ್ಲ. ವಾರಗಳಿಂದ ಪೌಲ್ ಆಗುತ್ತಿರುವ ನೀರಿಗೆ ಇನ್ನ ನಿರ್ವಹಣೆ ಕೂಡ ಮಾಡಿಲ್ಲ. ಸುಮ್ಮನೆ ಬಂದು ನೋಡುಕೊಂಡು ಹೋಗ್ತಾರೆ.. ಸರಿಯಾಗಿ ನೋಡಿ ಇದನ್ನ ಕಾಮಗಾರಿ ಮಾಡಿಕೊಟ್ರೆ ನಮಗೂ ನೀರು‌ ಸಿಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

Read More

ಚಿಕ್ಕಮಗಳೂರು:- ಜಿಲ್ಲೆಯ ಎರೇಹಳ್ಳಿ ಗ್ರಾಮದಲ್ಲಿ ಯೇಸು ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ https://ainlivenews.com/good-news-for-gas-users/ ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಹೇಳಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಸೆಳೆಯಲು ಮುಂದಾಗಿದ್ದರು. ಈ ವೇಳೆ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್‌ ಎಂಬುವವರ ಮನೆಗೂ ಹೋಗಿದ್ದರು ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ. ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ. ನಿಮ್ಮ ಕಷ್ಟಗಳಿಗೆ ಪರಿಹಾರ ಒದಗಿಸುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಎರೇಹಳ್ಳಿಯ ಹಲವು ಮನೆಗಳಿಗೆ ಹೋಗಿ ಮತಾಂತರ ಮಾಡಲು ಮುಂದಾಗಿದ್ದರು. ಸ್ಥಳೀಯರ ಮಾಹಿತಿ…

Read More