Author: AIN Author

ವಿಜಯನಗರ: 30 ರೂಪಾಯಿಗೆ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಕೊಡುತ್ತೇವೆ ಅಂದ್ರು.. ಕೊಟ್ರಾ..? 300 ರೂಪಾಯಿಗೆ ಸಿಲೆಂಡರ್ ಕೊಡ್ತಿವಿ ಅಂದ್ರು ಕೊಟ್ರಾ? ಎಲ್ಲಿದೆ ಅಚ್ಛೇ ದಿನ್ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಜನರ ಮನೆಗಳನ್ನ ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಮೋದಿ ಅವರು ಪ್ರಜೆಗಳ ಯೋಗಕ್ಷೇಮ ಸುಭಿಕ್ಷೆಯಾಗುವ ರೀತಿ ಆಡಳಿತ ಮಾಡಿಲ್ಲ. ದಶಕಗಳಿಂದ ದೇಶದ ಜನರಿಗೆ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಪೋಣಿಸುತ್ತಾ ಬಂದಿದ್ದಾರೆ ಎಂದರು. 15 ಲಕ್ಷ ಕ್ಯಾಶ್ ಕೊಡಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ, ಬಡತನ ನಿರ್ಮೂಲನೆ ಮಾಡಲಿಲ್ಲ. ಬದಲಿಗೆ ಬರೀ ಭಾವನಾತ್ಮಕ ಬೊಗಳೆ ಬಿಡುತ್ತಲೇ ಜನರ ದಿಕ್ಕನ್ನು ತಪ್ಪಿಸಿದ್ದಾರೆ ಎಂದರು. ಸಾಮಾಜಿಕ ನ್ಯಾಯದ ಮೂಲಕ ನನ್ನಂತ ಕಡುಬಡವನಿಗೆ ಮೀಸಲಾತಿ ಕಾಂಗ್ರೆಸ್ ಕೊಟ್ಟಿದೆ. ಇದರಿಂದ ನಾಲ್ಕು ಬಾರಿ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಸಂಸದ ಆಗಲಿ ಅಂತ ವರಿಷ್ಠರು ಲೋಕಸಭಾ ಟಿಕೆಟ್ ಕೊಟ್ಟಿದ್ದಾರೆ. ಜೋಡೆತ್ತುಗಳಂತೆ ಕೂಡ್ಲಿಗಿ ಕ್ಷೇತ್ರಕ್ಕೆ…

Read More

ದಾವಣಗೆರೆ: ದಾವಣಗೆರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ಬಳಿಯಿಂದ ಭಾನುವಾರ ಆಯೋಜಿಸಿದ್ದ ಮತದಾರರ ಜಾಗೃತಿ ಮೂಡಿಸುವ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ ಇಟ್ನಾಳ್ ಚಾಲನೆ ನೀಡಿದರು. ಜಾಥಾವು ಜಿಲ್ಲಾ ಪಂಚಾಯತ್‍ನಿಂದ ಹೊರಟು, ಜಯದೇವ ಸರ್ಕಲ್, ಪಿ.ಬಿ.ರಸ್ತೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅರುಣ ಸರ್ಕಲ್‍ನಲ್ಲಿ ಮುಕ್ತಾಯ ಗೊಂಡು ಮತದಾನ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಬಿಸಿಎಂ ಅಧಿಕಾರಿ ಗಾಯತ್ರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Read More

ಹಾವೇರಿ: ಕುಡಿಯುವ ನೀರಿನ‌ ಬವಣೆ ಎದುರಿಸುತ್ತಿರುವ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದ ಜನರಿಗೆ ಆಸರೆಯಾಗಿದ್ದಾರೆ. ಹೌದು ಕುಡಿಯುವ ನೀರಿನ ಹಾಹಾಕಾರ ನೀಗಿಸಲು ಸಂತೋಷ ಹಾಗೂ ಆದಪ್ಪ  ದುಂಡಣ್ಣನವರ ಎಂಬ ಅಣ್ಣ – ತಮ್ಮರಿಂದ ಗ್ರಾಮಸ್ಥರಿಗೆ ಉಚಿತ ನೀರು ಸರಬರಾಜು ಮಾಡಿದ್ದಾರೆ. ಕಳೆದ ಒಂದು ವಾರದಿಂದ ಸ್ವಂತ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಟ್ಯ್ರಾಕ್ಟರ್ ನಲ್ಲಿ ಎರಡು ಸಿಂಟ್ಯಾಕ್ಸ್ ಇಟ್ಟುಕೊಂಡು ಓಣಿ ಓಣಿಗೆ ನೀರು ನೀಡುತ್ತಿದ್ದಾರೆ. ಸ್ವಂತ ಜಮೀನಿನ ಬೋರ್ ವೆಲ್ ನಲ್ಲಿ ನೀರು ತುಂಬಿಕೊಂಡ ಜನರ ದಾಹ ತಣಿಸುತ್ತಿದ್ದಾರೆ. ನಿತ್ಯ ಸಾವಿರಾರು ಲೀಟರ್ ನೀರು ನೀರು ನೀಡುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಕೊಳ್ಳುತ್ತಿರುವ ಜನರು. ಇನ್ನೂ ಸಹೋದರರ ಕಾರ್ಯಕ್ಕೆ ಗ್ರಾಮಸ್ಥರ ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

Read More

ಮೈಸೂರು:  ಲೊಕಸಭಾ ಕುರುಕ್ಷೇತ್ರದ ಕಾವು ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಪಾಳಯ ರಣತಂತ್ರಗಳನ್ನ ಹಣೆಯಲು ಮುಂದಾಗಿದೆ. ಇನ್ನೂ ಬಿಜೆಪಿ ನಾಯಕರು ಅರಮನೆಗೆ ಬಿ ಫಾರಂ ತಂದು ಅಭ್ಯರ್ಥಿ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ನೀಡಿದ್ದಾರೆ. ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ರಾಮದಾಸ್, https://ainlivenews.com/application-submission-for-new-ration-card-starts-from-today-only-such-people-have-a-chance/ ಪ್ರೀತಂ ಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ ಅವರು ಯದುವೀರ್ ಒಡೆಯರ್‌ಗೆ ಬಿ ಫಾರಂ ನೀಡಿದರು. ತಾಯಿ ಪ್ರಮೋದಾ ದೇವಿ ಒಡೆಯರ್ ಮುಂದೆಯೇ ಯದುವೀರ್ ಬಿ ಫಾರಂ ಪಡೆದರು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಏ.3 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

Read More

ತುಮಕೂರು: ನಾನು ಲೋಕಸಭಾ ಚುನಾವಣೆಯಲ್ಲಿಗೆದ್ದ 100 ದಿನದೂಳಗೆ ಕೇಂದ್ರದಿಂದ ಕಲ್ಪತರು ನಾಡಿಗೆ 10 ಸಾವಿರ ಕೋಟಿ ರೂ. ಅನುಧಾನ ತರುವೆ. ರಾಯದುರ್ಗ ರೈಲ್ವೆ ಕಾಮಗಾರಿ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆಗೆ ಮರುಚಾಲನೆ ನೀಡುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭರವಸೆ ನೀಡಿದರು. https://ainlivenews.com/application-submission-for-new-ration-card-starts-from-today-only-such-people-have-a-chance/ ಮಾತನಾಡಿದ ಅವರು, ” ಕೇಂದ್ರ ಸರ್ಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ ಹೈಟೆಕ್‌ ಆಸ್ಪತ್ರೆ ತಂದೇ ತರುತ್ತೇನೆ. ಇದು ಕೇವಲ ಭರವಸೆಯಲ್ಲ, ಬಡಜನರ ನೋವಿನ ಮನವಿ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಿದ್ದು, ಸಿದ್ಧರಬೆಟ್ಟ ಮತ್ತು ಏಳು ಸುತ್ತಿನ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ” ಹೇಳಿದರು.

Read More

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ. 15 ವರ್ಷದ ಬಳಿಕ ಎಲ್ಲಾ ವರ್ಗದ ಗ್ರಾಹಕರಿಗೆ ವಿದ್ಯುತ್ ಬಿಲ್‌ (Electricity Bill) ಸ್ವಲ್ಪ ಇಳಿಯಲಿದೆ. ಗೃಹ ಬಳಕೆಯಲ್ಲಿ 100 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಪ್ರತಿ ಯೂನಿಟ್‌ ಮೇಲೆ 1.10 ರೂ. ಇಳಿಕೆಯಾಗಿದೆ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಫೆಬ್ರವರಿಯಲ್ಲಿ ಪ್ರಕಟಿಸಿದ ವಿದ್ಯುತ್‌ ದರ ಪರಿಷ್ಕರಣೆ ಆದೇಶ ಇಂದಿನಿಂದ ಜಾರಿಯಾಗಲಿದೆ. ಗೃಹ ಬಳಕೆಯವರಿಗೆ ಇಂಧನ ಬಳಕೆ ಮೇಲಿನ ದರ ಕಡಿತಗೊಂಡರೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಳಕೆದಾರ ವರ್ಗದವರಿಗೆ ನಿಗದಿತ ಶುಲ್ಕದಲ್ಲೂ ಇಳಿಕೆಯಾಗಿದೆ https://ainlivenews.com/ashwini-puneeth-rajkumar-bought-a-luxury-car-how-much-does-the-car-cost/ ಗೃಹ ಬಳಕೆಯಲ್ಲಿ ಪ್ರಸ್ತುತ ಪ್ರತಿ ಯೂನಿಟ್ ದರ 7 ರೂ. ಇತ್ತು. ಈಗ ಗೃಹ ಬಳಕೆಯ ಶುಲ್ಕದ ಸ್ಲ್ಯಾಬ್‌ ರದ್ದು ಮಾಡಲಾಗಿದೆ. ಗ್ರಾಹಕರು ಎಷ್ಟೇ ಯೂನಿಟ್‌ ಖರ್ಚು ಮಾಡಿದರೆ ಪ್ರತಿ ಯೂನಿಟ್‌ಗೆ 5.90 ರೂ. ದರ ನಿಗದಿ ಮಾಡಲಾಗಿದೆ. ಸರ್ಕಾರ 200 ಯೂನಿಟ್‌ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ…

Read More

ಬೆಂಗಳೂರು: ಯುವತಿ ಕಾರನ್ನು (Car) ಚೇಸ್ ಮಾಡಿದ ಮೂವರು ಯುವಕರು ಪುಂಡಾಟ ಮೆರೆದ ಘಟನೆ ಬೆಂಗಳೂರಿನ (Bengaluru) ಕೋರಮಂಗದಲ್ಲಿ (Koramangala) ರಾತ್ರಿ ನಡೆದಿದೆ. ಮಡಿವಾಳ ಸಿಗ್ನಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರಿಗೆ ಮತ್ತು ಕಾರಿನಲ್ಲಿದ್ದ ಯುವತಿಗೆ ಕಿರಿಕ್ ನಡೆದಿದೆ. ನಂತರ ಕಾರನ್ನು ಚೇಸ್ ಮಾಡಿದ ಮೂವರು ಕಿರುಕುಳ ನೀಡಿದ್ದಾರೆ https://ainlivenews.com/ashwini-puneeth-rajkumar-bought-a-luxury-car-how-much-does-the-car-cost/ ಮಡಿವಾಳ ಅಂಡರ್‌ಪಾಸ್‌ ಸೇತುವೆಯಿಂದ ಕೋರಮಂಗಲ 5ನೇ ಬ್ಲಾಕ್‌ವರೆಗೆ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲದೇ ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿ ಕೋರಮಂಗಲ 5ನೇ ಬ್ಲಾಕ್‌ನಲ್ಲಿ ಪರಾರಿಯಾಗಿದ್ದಾರೆ. ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ ಯುವತಿ ಆಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ (Madivala Police Station) ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ತೇಜಸ್, ಜಗನ್ನಾಥ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Read More

ಬೆಂಗಳೂರು:   ಇಂದು ನಾಮಪತ್ರ ಸಲ್ಲಿಸಲಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಹೌದು .ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ  ಸೌಮ್ಯರೆಡ್ಡಿ,  ಜಯನಗರದ 4ನೇ ಬ್ಲಾಕ್ ಗಣೇಶನ ದೇವಸ್ಥಾನಕ್ಕೆ ಸೌಮ್ಯ ಭೇಟಿ  ವಿಶೇಷ ಪೂಜೆ ಸಲ್ಲಿಸಲಿದ್ದಾರೆ https://ainlivenews.com/darshan-abhishek-will-be-with-me-on-april-3-sumalata-ambarish/ ಆ ನಂತರ ಮಧ್ಯಾಹ್ನ 12ಕ್ಕೆ ನಾಮಪತ್ರ ಸಲ್ಲಿಸುವ ಕೈ ಅಭ್ಯರ್ಥಿ ಸೌಮ್ಯರೆಡ್ಡಿ

Read More

ವಿಶಾಖಪಟ್ಟಣಂ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರ ಮಿಂಚಿನ ಬ್ಯಾಟಿಂಗ್‌ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2024ರ ಐಪಿಎಲ್‌ ಆವೃತ್ತಿಯಲ್ಲಿ ರಿಷಬ್‌ ಪಂತ್‌ ನಾಯಕತ್ವದ ಡೆಲ್ಲಿ ತಂಡ ಗೆಲುವಿನ ಖಾತೆ ತೆರೆದಿದೆ. ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿತ್ತು. 192 ರನ್‌ಗಳ ಗುರಿ ಪಡೆ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿ ಸೋಲೊಪ್ಪಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್‌, ಸಿಎಸ್‌ಕೆ ನಡುವಿನ ಪಂದ್ಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾಣ ಅದ್ಬುತ ಕ್ಯಾಚ್‌, 42ನೇ ವಯಸ್ಸಿನಲ್ಲೂ ಚಿರಯುವಕನಂತೆ ಮಹಿ ಸಿಕ್ಸರ್‌ ಬೌಂಡರಿ ಆಟ ಇವೆಲ್ಲವೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಕೊನೇ…

Read More

ಬೆಂಗಳೂರು: ನನ್ನ ಸ್ಪರ್ಧೆ ಬಗ್ಗೆ ಹೆಚ್​​ಡಿಕೆ ಬಳಿ ಏನು ಚರ್ಚೆ ಮಾಡಿಲ್ಲ ಎಂದು ಸುಮಲತಾ ಅಂಬರೀಶ್​ ಹೇಳಿದ್ದರೆ. ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಜೊತೆ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ಮಧ್ಯೆ ಆರೋಗ್ಯಕರ ಚರ್ಚೆ ನಡೆದಿದೆ. https://ainlivenews.com/ashwini-puneeth-rajkumar-bought-a-luxury-car-how-much-does-the-car-cost/ ಭಿನ್ನಾಭಿಪ್ರಾಯ ಇತ್ತು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಹಿತೈಷಿಗಳ ಒಪ್ಪಿಗೆ ಪಡೆಯದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ ಎಂದರು. ಏಪ್ರಿಲ್​​ 3ರಂದು ನನ್ನೊಂದಿಗೆ ದರ್ಶನ್​​, ಅಭಿಷೇಕ್​ ಇರಲಿದ್ದಾರೆ. ಅವರೊಂದಿಗೆ ಚರ್ಚಿಸಿ, ಮಂಡ್ಯ ಬೆಂಬಲಿಗರ ಮುಂದೆ ನಾನು ಮಂಡ್ಯದಲ್ಲಿ ನನ್ನ ತೀರ್ಮಾನ ತಿಳಿಸುತ್ತೇನೆ. ಮಂಡ್ಯದ ಜನರಿಗೆ ಒಳ್ಳೆಯದು ಆಗೋ ತೀರ್ಮಾನ ಮಾಡುತ್ತೇನೆ ಎಂದರು.

Read More