Author: AIN Author

ಚಾಮರಾಜನಗರ: ಏಪ್ರಿಲ್ 3 ರಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ  ನಾಮಪತ್ರ ಸಲ್ಲಿಸುವ ವೇಳೆ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಹೇಳಿದ್ದಾರೆ. ಚಾಮರಾಜನಗರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10:35ಕ್ಕೆ ಚಾಮರಾಜನಗರ ಜಿಲ್ಲೆಗೆ ಸಿಎಂ ಭೇಟಿ ನೀಡಲಿದ್ದು,  ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಸಂಸದ ವಿ.ಶ್ರೀನಿವಾಸಪ್ರಸಾದ್ ಬೆಂಬಲಿಗ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಸಹೋದರ ಜಿ.ಪಂ.ಮಾಜಿ ಸದಸ್ಯ ಎ.ಆರ್.ಬಾಲರಾಜು  ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಪಿ.ಮರಿಸ್ವಾಮಿ ತಿಳಿಸಿದರು.

Read More

ಬೆಂಗಳೂರು : ಲೋಕಸಭಾ ಸಮರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಬಿಜೆಪಿ ಟಿಕೆಟ್ ಸಿಗದ ಅಸಮಾಧಾನಗೊಂಡಿರುವ ರೇಬಲ್ ಲೇಡಿ ನಡೆ ಇನ್ನೂ ನಿಗೂಢವಾಗಿದೆ.  ಇದರ ಮಧ್ಯೆ  ಮಂಡ್ಯ ಲೋಕಸಭೆ ಕ್ಷೇತ್ರದ ಬಿಜೆಪಿ ಮುಖಂಡರೊಂದಿಗೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಸಮಾಲೋಚನೆ ನಡೆಸಿದರು. https://ainlivenews.com/i-told-kumaraswamy-that-i-poisoned-him-why-should-sumalatha-talk-dkshi/ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಎಸ್.ಪುಟ್ಟರಾಜು, ಡಾ.ಕೆ.ಸಿ.ನಾರಾಯಣಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ರಾಜ್ಯಸಭೆ ಸದಸ್ಯರಾದ ಜಗ್ಗೇಶ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ, ಇಂದ್ರೇಶ್ ಕುಮಾರ್, ಸಚ್ಚಿದಾನಂದ, ಅಶೋಕ್ ಜಯರಾಂ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಮಂಡ್ಯದಲ್ಲೆ ಸುಮಲತಾರ ಮುಂದಿನ ರಾಜಕೀಯ ನಡೆ ನಿರ್ಧಾರವಾಗಲಿದ್ದು, ಏಪ್ರಿಲ್ 3 ರಂದು ತನ್ನ ಅಂತಿಮ ನಿರ್ಧಾರ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ

Read More

ನವದೆಹಲಿ: ಕಾಂಗ್ರೆಸ್‌  ಪಕ್ಷಕ್ಕೆ ಸುಪ್ರೀಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಲೋಕಸಭಾ ಚುನಾವಣೆ (Lok Sabha Election) ಮುಗಿಯುವರೆಗೂ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ಭರವಸೆ ನೀಡಿದೆ. ಆದಾಯ ತೆರಿಗೆ (Income Tax) ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು.  https://ainlivenews.com/application-submission-for-new-ration-card-starts-from-today-only-such-people-have-a-chance/ ಈ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಚುನಾವಣೆ ನಡೆಯುತ್ತಿರುವುದರಿಂದ ಮತ್ತು ಚುನಾವಣೆಯ ನಂತರದ ವಿಚಾರಣೆಯವರೆಗೆ ಬಾಕಿ ಉಳಿಸಿರುವ ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ಜೂನ್ ಎರಡನೇ ವಾರದಲ್ಲಿ ಈ ವಿಚಾರವನ್ನು ಪಟ್ಟಿ ಮಾಡಿ ಎಂದು ಮನವಿ ಮಾಡಿದರು. ಸರ್ಕಾರದ ಈ ಮನವಿಯನ್ನು ಕೇಳಿ ನ್ಯಾ. ನಾಗರತ್ನ…

Read More

ಬೆಂಗಳೂರು: ಸುಮಲತಾ ನನ್ನ ವೈರಿ ಅಲ್ಲ ಎಂಬ ಹೆಚ್​​​ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನಾ ಎಂದು ಡಿಸಿಎಂ ಡಿಕೆ ಶಿವಕುಮಾರ್  ತಿರುಗೇಟು ನೀಡಿದ್ದಾರೆ. ಸುಮಲತಾ ಆರೋಪ ವಿಚಾರಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ನಾನು ಯಾರತ್ರನೂ ಸುಮಲತಾ ಸುದ್ದಿಗೆ ಹೋಗಿಲ್ಲ, ಸುಮಲತಾ ಸುದ್ದಿ ನನಗೆ ಅವಶ್ಯಕತೆ ಇಲ್ಲ ನಾನು ವಿಷ ಹಾಕಿದ್ರು ಅಂತ ಕುಮಾರಸ್ವಾಮಿ ಗೆ ಹೇಳಿದ್ದು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಸುಮಲತಾ ಏಕೆ ಮಾತಾಡಬೇಕು ಎಂದು ಹೇಳಿದರು. https://ainlivenews.com/good-news-for-electricity-users-rs-1-10-per-unit-decrease/ ಅಂಬರೀಶ್ ಗೆ ಕಾಂಗ್ರೆಸ್ ಪಾರ್ಟಿ ಏನು ಮಾಡಿದೆ ಅಂತ ದೇಶಕ್ಕೆ ಗೊತ್ತಿದೆ, ಅಂಬರೀಶ್ ಕೊನೆ ಉಸಿರು ಏನು ಹೇಳುದ್ರು ಅಂತ ಎಲ್ಲರಿಗೂ ಗೊತ್ತಿದೆ ನಾವ್ಯಾಕೆ ಅವರ ಬಗ್ಗೆ ಮಾತಾಡೋಣ, ಅವರ್ಯಾಕೆ ತಲೆಕೆಡಿಸ್ಕೊತಿದ್ದಾರೊ ಗೊತ್ತಿಲ್ಲ ಅವರ ತಂಟೆಗೆ ಇವತ್ತು ಹೋಗಲ್ಲ, ನಾಳೆಯೂ ಹೋಗಲ್ಲ, ಅದರ ಅವಶ್ಯಕತೆ ನಮಗೆ ಇಲ್ಲ ಅವರ ಪಾರ್ಟಿ ಸಿದ್ದಾಂತ ಏನು…

Read More

ಮಂಡ್ಯ: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆ ಮಧ್ಯೆ ತೆರದ ವಾಹನದಿಂದ ಇಳಿದು ಡಿಸಿ ಕಚೇರಿಗೆ ಹೊರಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರುವ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಿಇಎಸ್ ಕಾಲೇಜು ಮುಂಭಾಗ ತೆರೆದ ವಾಹನದಿಂದ ಕೈ ನಾಯಕರು ಇಳಿದು ಅಲ್ಲಿಂದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿತ್ತು.  ನಿಗದಿತ ಸಮಯದೊಳಗೆ ನಾಮಪತ್ರ  ಸಲ್ಲಿಕೆಗಾಗಿ ಮೆರವಣಿಗೆಯಿಂದ ಅರ್ಧಕ್ಕೆ ಹೊರಟು ಅಭ್ಯರ್ಥಿ ಹಾಗೂ ಕೈ ನಾಯಕರು ಚುನಾವಣಾ ಅಧಿಕಾರಿ ಡಾ.ಕುಮಾರ್‌ಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಚಿವ ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಕದಲೂರು ಉದಯ್ ಸಾಥ್, ಮುಖಂಡ ದಡದಪುರ ಶಿವಣ್ಣ ಸಾಥ್ ನೀಡಿದರು. https://ainlivenews.com/application-submission-for-new-ration-card-starts-from-today-only-such-people-have-a-chance/ ಮಂಡ್ಯದ ಗತ್ತು ಇಂಡಿಯಾಗೆ ಗೊತ್ತು ಎಂಬ ಮಾತಿದೆ. ಈ ಮಾತು ಬಂದಿರೋದೆ ಇಲ್ಲಿನ ರಾಜಕೀಯ ಚಟುವಟಿಕೆಗಳಿಂದ. ಈ ಬಾರಿಯ ಲೋಕಸಭಾ ಚುನಾವಣೆಯೂ  ಸಹ ಮಂಡ್ಯದಲ್ಲಿ ಅದೇ ರೀತಿ ಸದ್ದು…

Read More

ಬೆಂಗಳೂರು:  ಮಹಿಳೆ ಮೇಲೆ BMTC ಕಂಡಕ್ಟರ್ ಹಲ್ಲೆ ಕೇಸ್ ಬೆನ್ನಲ್ಲೆ ಮತ್ತೊಂದು ಪ್ರಕರಣ‌ ಬೆಳಕಿಗೆ ಬಂದಿದ್ದು  ಟಿಕೆಟ್‌ ವಿಚಾರವಾಗಿ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿದ್ದು  ಚೆಕ್ಕಿಂಗ್ ಇನ್ಸೆಕ್ಟರ್ ವಿರುದ್ಧ ಸಿಡಿದೆದ್ದ ಸ್ಟೂಡೆಂಟ್   ಹಲ್ಲೆಗೊಳಗಾದ ವಿದ್ಯಾರ್ಥಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಘಟನೆ ಸಂಬಂಧ ಬಿಎಂಟಿಸಿಗೆ ಮೇಲ್ ಮೂಲಕ ದೂರು ನೀಡಲಾಗಿದೆ. ಅಷ್ಟಕ್ಕೂ  ಏನಾಯ್ತು? ಬೆಳ್ಳಂದೂರಿನಿಂದ ಸರ್ಜಾಪುರಕ್ಕೆ ವಿದ್ಯಾರ್ಥಿ ಪ್ರಯಾಣ ಅಸ್ಸಾಂ ಮೂಲದ ಕಮರುಲ್ BMTCಯಲ್ಲಿ ಪ್ರಯಾಣ ಕಮರುಲ್ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಸ್ಟೂಡೆಂಟ್ ಕಳೆದ ವಾರ ನಡೆದಿದ್ದ ಪ್ರಕರಣ ಈಗ ಬೆಳಕಿಗೆ ಬಸ್ ಹತ್ತಿದ ಚೆಕ್ಕಿಂಗ್ ಇನ್ಸ್ ಪೆಕ್ಟರ್, ಟಿಕೆಟ್ ಚೆಕ್ಕಿಂಗ್ ಟಿಕೆಟ್ ಎಲ್ಲಿ ಎಂದು ಪ್ರಶ್ನೆ ಇಬ್ಬರ ನಡುವೆ ವಾಗ್ವಾದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ಆರೋಪ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪ ಘಟನೆಯ ಬಳಿಕ‌ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಘಟನೆಯ ಬಗ್ಗೆ ಬಿಎಂಟಿಸಿಗೆ ದೂರು ನೀಡಿದ…

Read More

ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಹೊರಗೆ ಹೋಗಿ ತಂಪಾದ ಪಾನೀಯ ಕುಡಿಯೋಣ ಅಂದರೆ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಮನೆಯಲ್ಲಿ ತಂಪು ಪಾನೀಯ ಮಾಡಿಕೊಂಡು ಕುಡಿಯಬಹುದು. ನಿಮಗಾಗಿ ಇಲ್ಲಿದೆ ಆರೋಗ್ಯಕರವಾದ ಅಕ್ಕಿ ಗಂಜಿ ಮಾಡುವ ವಿಧಾನ.. ಬೇಕಾಗುವ ಸಾಮಾಗ್ರಿಗಳು 1. ಅಕ್ಕಿ – ಒಂದು ಕಪ್ 2. ಹಸಿ ತೆಂಗಿನಕಾಯಿ ತುರಿ – 2 ಚಮಚ 3. ಜೀರಿಗೆ – 1/2 ಚಮಚ 3. ಹಸಿ ಮೆಣಸಿನಕಾಯಿ – ಒಂದು (ಸಣ್ಣಗೆ ಕತ್ತರಿಸಬೇಕು) 4. ತುಪ್ಪ- 1 ಟೀ ಸ್ಪೂನ್ 5. ಉಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. * ಈಗ ಅಕ್ಕಿಯನ್ನು ಕುಕ್ಕರ್ ನಲ್ಲಿ ಹಾಕಿಕೊಳ್ಳಿ. ಅಕ್ಕಿ ತೆಗೆದುಕೊಂಡ ಕಪ್‍ನಿಂದಲೇ 7-8 ಕಪ್ ನೀರು ಹಾಕಿ. (ಗಂಜಿ ತೆಳುವಾಗಿದ್ರೆ ಚೆನ್ನಾಗಿರುತ್ತೆ. ಹಾಗಾಗಿ ಹೆಚ್ಚು ನೀರು ಹಾಕಿಕೊಳ್ಳಿ). * ನೀರು ಹಾಕಿದ ಬಳಿಕ ಹಸಿ ತೆಂಗಿನ ತುರಿ, ಜೀರಿಗೆ, ತುಪ್ಪ, ಕತ್ತರಿಸಿದ ಹಸಿ ಮೆಣಸಿನಕಾಯಿ…

Read More

ಬೆಂಗಳೂರು: ಲೋಕಸಭಾ ಚುನಾವಣೆ ದಿನ ದಿನಕ್ಕೆ ರಂಗೇರುತ್ತಿದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರು ಇಂದು ಬಿ ಪಾರಂ ಪಡೆದಿದ್ದಾರೆ. https://ainlivenews.com/good-news-for-electricity-users-rs-1-10-per-unit-decrease/ ಹೌದು ಬಿಜೆಪಿ ಕಚೇರಿಗೆ ಬಂದು ಬಿ ಫಾರಂ ಪಡೆದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ತಮ್ಮ ಪತ್ನಿ ಯೊಂದಿಗೆ ಬಂದು ಬಿ ಫಾರಂ ಪಡೆದಿದ್ದಾರೆ. ಡಾ.ಮಂಜುನಾಥ್ ಬಿ ಫಾರಂ ಕೊಟ್ಟ ಮಾಜಿ ಸಚಿವ ಸುನೀಲ್ ಕುಮಾರ್ ಹಾಗೆ ಇನ್ನೊಂದು ವಿಶೇಷತೆ ಅಂದ್ರೆ  ಪಾದರಕ್ಷೆ ಹಾಕದೆ ಬರಿ ಕಾಲಲ್ಲಿ ಬಂದು ಬಿ ಫಾರಂ ಪಡೆದ ಡಾ.ಮಂಜುನಾಥ್ ಹಾಗೂ ಅವರ ಧರ್ಮಪತ್ನಿ

Read More

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬಹುತೇಕ ಒಣಹವೆ ಮುಂದುವರಿದಿದೆ.ಸೋಮವಾರವೂ ರಾಜ್ಯದ ಬಹುತೇಕ ಪ್ರದೇಶದಲ್ಲಿ ಒಣಹವೆ ಇರುವುದು ವರದಿಯಾಗಿತ್ತು. ಇನ್ನು ಉಳಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗಿರುವುದು ವರದಿಯಾಗಿಲ್ಲ.ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 13.4 ಡಿಗ್ರಿ ಸೆಲ್ಸಿಯಸ್‌ ವಿಜಯಪುರದಲ್ಲಿ ದಾಖಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಈಶಾನ್ಯದ ರಾಜ್ಯಗಳಲ್ಲಿ ಗುಡುಗು-ಮಿಂಚು ಸಮೇತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಜೊತೆಗೆ ವರುಣ ಆರ್ಭಟ ಮಾಡುವ ಸಾಧ್ಯತೆಯಿದೆ. ಹೀಗಾಗಿ ಜನರು ಆದಷ್ಟು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ. https://ainlivenews.com/good-news-for-electricity-users-rs-1-10-per-unit-decrease/ ಬೆಂಗಳೂರಿನಲ್ಲಿ ವಾತಾವರಣ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ನಿರ್ಮಲ ಆಕಾಶವಿರುತ್ತದೆ.ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇದೆ.ಇನ್ನು ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.ಅದೇ ರೀತಿ ಮುಂದಿನ…

Read More

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ನಾಯಕರಿಗೆ ಸ್ಥಾನ ನೀಡಲಾಗಿದೆ. ಹೌದು, ಕರ್ನಾಟಕದಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕಾಗಿ ಒಟ್ಟು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.ಪ್ರಧಾನಿ ನರೇಂದ್ರ ಮೋದಿ, 10 ಕೇಂದ್ರ ಸಚಿವರು, 3 ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ನಾಯಕರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. https://ainlivenews.com/good-news-for-electricity-users-rs-1-10-per-unit-decrease/ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಬಿಜೆಪಿ ಸ್ಟಾರ್ ನಾಯಕರ ಪಟ್ಟಿ ನರೇಂದ್ರ ಮೋದಿ ಜೆ.ಪಿ.ನಡ್ಡಾ ರಾಜನಾಥ್ ಸಿಂಗ್ ಅಮಿತ್ ಶಾ ನಿತಿನ್ ಗಡ್ಕರಿ ಬಿ.ಎಸ್. ಯಡಿಯೂರಪ್ಪ ಬಿ.ವೈ. ವಿಜಯೇಂದ್ರ ಎಸ್. ಜೈಶಂಕರ್ ನಿರ್ಮಲಾ ಸೀತಾರಾಮನ್ ಪ್ರಲ್ಹಾದ್ ಜೋಶಿ ಸ್ಮೃತಿ ಇರಾನಿ ಶೋಭಾ ಕರಂದ್ಲಾಜೆ ಎ. ನಾರಾಯಣಸ್ವಾಮಿ ಆರ್. ಅಶೋಕ್ ಕೆ. ಅಣ್ಣಾಮಲೈ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಯೋಗಿ ಆದಿತ್ಯನಾಥ್ ಹಿಮಂತ ಬಿಸ್ವಾ ಶರ್ಮಾ ಡಾ. ಪ್ರಮೋದ್ ಸಾವಂತ್ ದೇವೇಂದ್ರ ಫಡ್ನವಿಸ್ ಬಸವರಾಜ ಬೊಮ್ಮಾಯಿ ಸುಧಾಕರ್ ರೆಡ್ಡಿ ಡಿ.ವಿ.…

Read More