Author: AIN Author

ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದ್ದು ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಜಾರಕಿಹೋಳಿ ಅವರ ಪ್ರಚಾರ ಭರದಿಂದ ಸಾಗಿದೆ. ಇಡೀ‌ ಚಿಕ್ಕೋಡಿ ಲೊಕಸಭಾ ಕ್ಷೇತ್ರದಲ್ಲಿಯೇ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಿಂದ ಅತ್ಯಥಿಕ ಮತಗಳನ್ನು ನೀಡಿ,ಪ್ರಿಯಾಂಕಾ ಜಾರಕಿಹೋಳಿಯವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕರ್ನಾಟಕ ಸರ್ಕಾರದ ದೆಹಲಿಯ ಪ್ರತಿನಿಧಿ,ಹಾಗೂ ವಿಧಾನಪರಿಷತ ಸದಸ್ಯರಾದ ಪ್ರಕಾಶ ಹುಕ್ಕೇರಿ ಹೇಳಿದರು.ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಲೊಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ಅವರ ಪ್ರಚಾರಾರ್ಥವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ https://ainlivenews.com/application-submission-for-new-ration-card-starts-from-today-only-such-people-have-a-chance/ ಕಳೆದ 40 ವರ್ಷಗಳಿಂದ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಜನರ ಸೇವೆಯನ್ನು ಮಾಡಿಕೊಂಡು ಬರುತ್ತಿದೇವೆ.ನಮ್ಮ ಕ್ಷೇತದ ಜನ ಯಾವತ್ತೂ ನಮ್ಮನೂ ಕೈ ಬಿಟ್ಟಿಲ್ಲ.ಪ್ರತಿಯೊಂದು ಲೊಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರವು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ನೀಡಿಕೊಂಡು ಬರುತ್ತಿದೆ.ಈ ಬಾರಿಯು ಸಹ ಹೆಚ್ಚಿನ ಮತಗಳನ್ನು ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿಯವರನ್ನು ಬಹುಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಭರವಸೆಯನ್ನು ನೀಡಿದರು.

Read More

ಬೆಂಗಳೂರು: ರಂಜಾನ್ ಮುಸ್ಲಿಂರ ಪವಿತ್ರವಾದ ಹಬ್ಬ ಈ ಸಮಯದಲ್ಲಿ ಬೆಳ್ಳಗ್ಗೆಯಿಂದ ಸಂಜೆಯವರೆಗೂ ರೋಜಾ ಮಾಡಿ ನಂತರ ಆಹಾರ ಸೇವಿಸುತ್ತಾರೆ. ರಂಜಾನ್‌ ಮಾಸ ಉಪವಾಸ ವ್ರತ ಆರಂಭವಾದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಡ್ರೈ ಪ್ರೋಟ್ಸ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ.. ಒಂದಕ್ಕಿಂತ ಡಿಫ್ರೆಂಟ್ ಆಗಿರುವ ಡ್ರೈ ಪ್ರೋಟ್ಸ್ ಗಳು, ಡ್ರೈ ಫ್ರೋಟ್ಸ್ ಕೊಂಡುಕೊಂಡುವಲ್ಲಿ ಬ್ಯುಸಿಯಾಗಿರು ಗ್ರಾಹಕರು, ಗ್ರಾಹಕರ ಬೇಡಿಕೆಗೆ ತಕ್ಕಂತೆ ರಿಯಾಯಿತಿ ದರ ಫಿಕ್ಸ್ ಮಾಡಿರುವ ವ್ಯಾಪಾರಸ್ತರು, ಇನ್ನು ಯಾವ ಖರ್ಜೂರವನ್ನ ಖರೀ‌ಧಿ ಮಾಡ್ಲಿ ಅಂತ ಕನ್ಸೂಸ್ ಆಗಿರುವ ಹುಡುಗಿಯರು ಇವೆಲ್ಲವೂ ಕಂಡುಬಂದಿದ್ದು, ಶಿವಾಜಿ ನಗರದ ರಸೆಲ್‌ ಮಾರುಕಟ್ಟೆಯ ಡ್ರೈಫ್ರೂಟ್ ಅಂಗಡಿಗಳಲ್ಲಿ.. https://ainlivenews.com/the-mother-kept-the-child-in-the-fridge-while-talking-on-the-mobile/ ಹೌದು, ರಂಜನ್ ಹಬ್ಬ ಬಂದ್ರೆ ಸಾಕು ಶಿವಾಜಿನಗರದ ರಸಲ್ ಮಾರುಕಟ್ಟೆಯ ಖರ್ಜೂರದ ಅಂಗಡಿಯಲ್ಲಿ ವಿವಿಧ ದೇಶದ ಬಗೆ – ಬಗೆಯ ಖರ್ಜೂರ, ಒಣದ್ರಕ್ಷಿ, ಬಾದಮಿ, ಸೇರಿದಂತೆ ಹಲವು ಬಗೆಯ ಡ್ರೈ ಫ್ರೂಟ್ಸ್ ಗಳ ವ್ಯಾಪಾರ ಜೊರಗೆ ಇರುತ್ತೆ. ಹೀಗಾಗಿ ಈ ಬಾರಿಯಾ ರಂಜಾನ್ ಹಬ್ಬಕ್ಕೆ ರಸೆಲ್‌…

Read More

ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದ್ದು,ಸುಬ್ರಮಣ್ಯನಗರ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. https://ainlivenews.com/total-rs-16-5-crore-including-wife-pc-mohan-who-declared-the-property/ ಕಾರ್ ಟಚ್ ಮಾಡಿ ಅವಾಚ್ಯ ಶಬ್ಧಗಳ ನಿಂದನೆ ಆರೋಪ ಮಾಡಲಾಗಿದ್ದು, ಶಾರದಾ ಬಾಯಿ ಎಂಬ ಮಹಿಳೆಗೆ ನಿಂದಿಸಿರುವ ಆರೋಪ ಕೇಳಿ ಬಂದಿದೆ. ರಾಜ್ ಕುಮಾರ್ ರಸ್ತೆಯ 10 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಕಾರ್ ಟಚ್ ಮಾಡಿದ್ದಲ್ಲದೇ ಯಾವಳೇ ನೀನು ಅಂತಾ ಅವಾಚ್ಯ ಶಬ್ದ ಬಳಸಿರೋ ಆರೋಪ ಕೇಳಿ ಬಂದಿದೆ. 30 ನೇ ತಾರೀಖು ರಾತ್ರಿ ಘಟನೆ ನಡೆದಿದೆ. ಸದ್ಯ ಶಿವರಾಜ್ ಕೆಆರ್ ಪೇಟೆ ಅವರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಎನ್ ಸಿ ಆರ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಲಿದ್ದಾರೆ.

Read More

ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಕಳಂಕವಿಲ್ಲದ ನಾಲ್ಕು ಬಾರಿ ಶಾಸಕರಾದ ಸೌಮ್ಯ ಅಭ್ಯರ್ಥಿ ಎಂದು ಸಚಿವ ನಾಗೇಂದ್ರ ಹೇಳಿದರು. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿ ಗೋಷ್ಠಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಕಳಂಕವಿಲ್ಲದ ನಾಲ್ಕು ಬಾರಿ ಶಾಸಕರಾದ ಸೌಮ್ಯ ಅಭ್ಯರ್ಥಿ. ಪ್ರತಿಸ್ಪರ್ಧಿ ಯಾರೆಂಬುದು ನೋಡುವುದಿಲ್ಲ, ಅಭ್ಯರ್ಥಿ ಗೆಲುವಿಗೆ ನಾನು, ಸಚಿವ ಜಮೀರ್, ಸಂತೋಷ ಲಾಡ್, ನಾಸೀರ್ ಹುಸೇನ್ ಎಲ್ಲರನ್ನು ಒಳಗೊಂಡ ಶ್ರಮಿಸುತ್ತೇವೆ. ಪಕ್ಷದಲ್ಲಿ ಏನೆ ಭಿನ್ನಾಭಿಪ್ರಾಯ ಇದ್ದರೂ ಚುನಾವಣೆಯಲ್ಲಿ ಒಂದಾಗಿ ಗೆಲ್ಲಿಸುತ್ತೇವೆ. ರಾಜ್ಯದ ಬೊಕ್ಕಸಕ್ಕೆ ಭಾರವಾದರೂ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಈ ಐದು ಗ್ಯಾರಂಟಿಯೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಿವೆ ಎಂದು ತಿಳಿಸಿದರು. ಅಭ್ಯರ್ಥಿ ಘೋಷಣೆ ಪೂರ್ವದಲ್ಲಿ ಸಚಿವ ಸಂತೋಷ್ ಲಾಡ್ ಅವರು ಸಂಡೂರಲ್ಲಿ ಸಭೆ ಮಾಡಿದ್ದಾರೆ. ನನ್ನ ಗಮನಕ್ಕೆ ತಂದಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕೆಪಿಸಿಸಿ ವತಿಯಿಂದ ನನಗೂ ಹೇಳಿದ್ದರೂ ನಾನು ಸ್ಪರ್ಧಿಸುತ್ತಿದ್ದೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ಮು ತಲೆಬಾಗಿ…

Read More

ತುಮಕೂರು: ಮಾಜಿ ಶಾಸಕ ಹೆಚ್​ ನಿಂಗಪ್ಪ ಅವರನ್ನು ಭೇಟಿಯಾಗಿ ತಮ್ಮ ಪಕ್ಷಕ್ಕೆ ಬರುವಂತೆ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ, ವೈಯಕ್ತಿಕ ಕಾರಣ ನೀಡಿ ನಿಂಗಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇದರ ಪ್ರತಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಪಕ್ಷಾಂತರ ಮಾಡುವ ಹೆಚ್.ನಿಂಗಪ್ಪ ಅವರು ಈ ಹಿಂದೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರವಾಗಿದ್ದರು. ಇದೀಗ ಕಾಂಗ್ರೆಸ್​ನಿಂದ ವಾಪಸ್ ಜೆಡಿಎಸ್​ ಸೇರ್ಪಡೆಯಾಗುವ ಸಾಧ್ಯತೆ ಇದೆ.

Read More

ಮಾವನ ಗೆಲುವಿಗೆ ಅಳಿಯನ ಕಸರತ್ತು.ಇದು ಕಲಬುರಗಿ ಲೋಕಸಭಾ ಕಣದಲ್ಲಿ ಇವತ್ತು ಕಂಡುಬಂದ ದೃಶ್ಯ. ಹೌದು ಬಿಸಿಲಿನ ಕಾವು ಗರಂ ಆಗಿ ಏರುತ್ತಿರುವಂತೆ ಲೋಕ ಸಮರದ ಪ್ರಚಾರ ಕಾರ್ಯವೂ ಜೋರಾಗ್ತಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರ ಅಳಿಯ ರಾಧಾಕೃಷ್ಣ ದೊಡ್ಮನಿ ಇವತ್ತು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ್ರು.. ಮೊನ್ನೆಯಿಂದ ಶುರುವಾದ ಪ್ರಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಸರತ್ತು ಆರಂಭಿಸಿದ್ದು ಮಾವನನ್ನ ಗೆಲ್ಲಿಸಲು ಅಳಿಯ ಪ್ರಿಯಾಂಕ್ ಸಂಕಲ್ಪ ಮಾಡಿದಂತಿತ್ತು.ಇಂತಹ ಭರಪೂರ ಪ್ರಚಾರದಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಎಲ್ಲ ಕೈ ಶಾಸಕರು ಭಾಗಿಯಾಗಿದ್ರು.

Read More

ಮಂಡ್ಯ :- ಮಂಡ್ಯ ಲೋಕಸಭಾ ರಣಕಣ ರಂಗೇರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ (ಸ್ವಾರ್ ಚಂದ್ರು) ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನಾ ಟೆಂಪಲ್ ರನ್​ ಮಾಡಿದ್ದ ಅವರು, ಶ್ರೀ ಆದಿ ಚುಂಚನಗಿರಿ ಮಠದಲ್ಲಿ ಶ್ರೀ ಕಾಲ ಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು. ಮಂಡ್ಯ ನಗರದ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಬೆಳಿಗ್ಗೆ 10.30 ರ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕದಲೂರು ಉದಯ್, ಪುಟ್ಟಸ್ವಾಮಿಗೌಡ, ಶರತ್ ಬಚ್ಚೇಗೌಡ, ಗಣಿಗ ರವಿಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಶ್ರೀ ಕಾಳಿಕಾಂಬ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ಮಾಡುವ ಮೂಲಕ ಕಾಂಗ್ರೇಸ್ ಅಭ್ಯರ್ಥಿ ಸ್ವಾರ್ ಚಂದ್ರು ತಮ್ಮ ಬಲ ಪ್ರದರ್ಶನ ಮಾಡಿದರು. ನಂತರ 1.15 ರ…

Read More

ಬಳ್ಳಾರಿ: ಆ್ಯಕ್ಟರ್ ಮನರಂಜನೆ ನೀಡಬಹುದು, ವರ್ಕರ್ ಮಾತ್ರ ಜನರ ಸಮಸ್ಯೆಗೆ ಸ್ಪಂಧಿಸುತ್ತಾರೆ.. ಬಿಜೆಪಿ ಆ್ಯಕ್ಟರ್, ಕಾಂಗ್ರೆಸ್ ವರ್ಕರ್ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೂರು ಸಾರಿ ಸುಳ್ಳನ್ನು ಹೇಳಿ ಸತ್ಯ ಮಾಡಲು ಹೊರಟಿದೆ. ಶಾಂತ, ರಾಮುಲು, ದೇವೇಂದ್ರಪ್ಪ ಗೆದ್ದರೂ ಜನರ ಸಮಸ್ಯೆ ವಿರುದ್ಧ ಧ್ವನಿ ಎತ್ತಿಲ್ಲ. ಮೋದಿ ಹೆಸರಿನಲ್ಲಿ ಹೊರಟಿದ್ದಾರೆ, ಸಂಸದರಾಗಿ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ಶ್ರೀರಾಮುಲು ವಿರುದ್ಧ ಶಾಸಕ ಗಣೇಶ ವಾಗ್ದಾಳಿ ನಡೆಸಿದರು. ಚುನಾವಣೆ ಬಂದಾಗ ಬಂಡಿಯಲ್ಲಿ ಹೋಗಿ ಟೀ ಕುಡಿಯುತ್ತಾರೆ..ಇದು ಆ್ಯಕ್ಟಿಂಗ್‌ ಅಂತಾ ಗೊತ್ತಾಗುತ್ತೆ.. ಅನೇಕ ಸುಳ್ಳಗಳ ಭರವಸೆ ಕೊಟ್ಟು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ದರಿಂದ ನಾವುಗಳು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಶಾಸಕರು ಒಟ್ಟಾಗಿ ಕೆಲಸ ಮಾಡ್ತೇವೆ ಎಂದು ಹೇಳಿದರು.

Read More

ಬೆಂಗಳೂರು : ಕೇಂದ್ರ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್‌‌ ಅವರು ಪತ್ನಿ ಶೈಲಾ ಮೋಹನ್ ಆಸ್ತಿ ಸೇರಿ ಒಟ್ಟು 16.5 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪಿ.ಸಿ. ಮೋಹನ್ ಅವರು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಮಾಜಿ ಸಿಎಂ ಡಾ.ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಜನಾರ್ದನ ರೆಡ್ಡಿ, ಲಿಂಬಾವಳಿ ಈ ವೇಳೆ ಪಿ.ಸಿ. ಮೋಹನ್​ ಅವರಿಗೆ ಸಾಥ್ ನೀಡಿದರು. https://ainlivenews.com/wiping-the-tears-of-the-poor-is-the-greatest-call-bjp-candidate-who-gave-a-tong-to-dk-suresh/ ಪಿಸಿ ಮೋಹನ್‌‌ ಆಸ್ತಿ ಎಷ್ಟಿದೆ? 16.5 ಕೋಟಿ ಒಡೆಯ ಪಿಸಿ ಮೋಹನ್ ಒಟ್ಟು‌ ಚರಾಸ್ತಿ‌ – 10.46 ಕೋಟಿ ರೂ. ಒಟ್ಟು ಸ್ಥಿರಾಸ್ತಿ – 6.02 ಕೋಟಿ ರೂ. ಪತ್ನಿ ಶೈಲಾ ಮೋಹನ್ ಬಳಿ ಇರುವ ಚರಾಸ್ತಿ – 4.39 ಕೋಟಿ ರೂ. ಸ್ಥಿರಾಸ್ತಿ – 7.25 ಕೋಟಿ ರೂ. ಪಿಸಿ ಮೋಹನ್…

Read More

ಬೆಂಗಳೂರು:   ಸುಮಲತಾ ಬೆಂಬಲ ನೀಡುವ ಬಗ್ಗೆ ವಿಶ್ವಾಸ ಇದೀಯಾ ಎಂಬ ವಿಚಾರಕ್ಕೆ  ಭೇಟಿ ವೇಳೆ ಸುಮಲತಾ ಅಂಬರೀಶ್ ಏನು ಹೇಳಿದ್ದಾರೆ ಎನ್ನುವುದಕ್ಕೆ ಎಚ್​ಡಿ ಪ್ರತಿಕ್ರಿಯಿಸಿದ್ದು, ಆರೋಗ್ಯಕರ ಚರ್ಚೆ ಆಗಿದೆ  ಹಾಗೆ ಫಲಪ್ರದವಾಗಿದೆ ಎಂದು ಆ ಒಂದು  ಪದದಲ್ಲಿದೆ. ಅದನ್ನು ಅವರು ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಮಲತಾ ಬೆಂಬಲ ನೀಡುವ ಬಗ್ಗೆ ವಿಶ್ವಾಸ ಇದೆ ಸುಮಲತಾ ಜೊತೆಗಿನ ಭೇಟಿ ಫಲಪ್ರದವಾಗಿದೆಸೂಕ್ಷ್ಮವಾಗಿ ಹೇಳಿದ್ದಾರೆ ,ಫಲಪ್ರದವಾಗಿ ಆ ಪದದಲ್ಲಿದೆ ಅದಕ್ಕೆ ಕಾಂಗ್ರೆಸ್ ನವರು ಭಯ ಬಿದ್ದು ಮಾತಾಡ್ತಾ ಇದ್ದಾರೆ ಎಂದು ತಿಳಿಸಿದರು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್​ಡಿ ಕುಮಾರಸ್ವಾಮಿ ಅವರು ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ರೆ, ಅವರಿಗೆ ರಾಜಕೀಯ ಬದ್ಧ ವೈರಿಯಾಗಿರುವ ಸುಮಲತಾ ಅಂಬರೀಶ್ ಅವರ ನಡೆ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ವೈಷಮ್ಯ ಮರೆತು ಖುದ್ದು ಕುಮಾರಸ್ವಾಮಿಯೇ ಸುಮಲತಾ ಅಂಬರೀಶ್ ಅವರ ಮನೆ ಬಾಗಿಲಿಗೆ ಹೋಗಿದ್ದಾರೆ.…

Read More