Author: AIN Author

ಚಾಮರಾಜನಗರ:- ಲೋಕಸಭಾ ಚುನಾವಣೆ ಹೊತ್ತಲ್ಲೇ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಯತೀಂದ್ರ ಅವರು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ನೇಹಿತ ಸುನೀಲ್ ಬೊಸ್ ಗೆಲುವಿಗಾಗಿ ಹಗಲಿರುಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಟ ನಡೆಸಿದ್ದಾರೆ. ಇದರ ಮಧ್ಯೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೇಳಿಕೆಯೊಂದನ್ನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು.. ಅಮಿತ್ ಶಾ ವಿರುದ್ಧ ರೌಡಿ ಹೇಳಿಕೆ ಸಂಬಂಧ ಚುನಾವಣಾ ಆಯೋಗವು ಯತೀಂದ್ರ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದೆ. https://ainlivenews.com/delhi-cm-arvind-kejriwal-shifted-to-tihar-jail/ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ ಎಂದಿದ್ದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಚುನಾವಣಾ ಆಯೋಗ ನೋಟಿಸ್​ ನೀಡಿದೆ. ಈ ಬಗ್ಗೆ ಸ್ವತಃ ಸಚಿವ ಕೆ ವೆಂಕಟೇಶ್​ ಹೇಳಿದ್ದಾರೆ. ಟಿ ನರಸೀಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವೆಂಕಟೇಶ್, ಸಿಬಿಐ ವರದಿಯಲ್ಲಿ ಇದ್ದಿದ್ದು ಹೇಳಿದ್ದಕ್ಕೆ ಯತೀಂದ್ರ ಅವರಿಗೆ ನೋಟಿಸ್​ ಕೊಡಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ…

Read More

ದೆಹಲಿ:- ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇರಿಸಲಾಗಿದೆ. ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಸೋಮವಾರ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. https://ainlivenews.com/please-trust-me-hdk-pleads-for-help-for-mandya-people/#google_vignette ಏತನ್ಮಧ್ಯೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರನ್ನು ಜೈಲಿಗೆ ಹಾಕುವುದೇ ಬಿಜೆಪಿಯ ಉದ್ದೇಶ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಹದಿನೈದು ದಿನಗಳ ನ್ಯಾಯಾಂಗ ಬಂಧನಕ್ಕೆ ಕೇಳಿತ್ತು. ಕೇಜ್ರಿವಾಲ್ ಜೈಲಿನಿಂದ ದೆಹಲಿ ಆಡಳಿತ ನಡೆಸುತ್ತಿದ್ದು, ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಆದೇಶಗಳನ್ನು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ರವಾನಿಸಿದ್ದಾರೆ. ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿಗೆ ಕರೆತರಲಾಯಿತು. ಅವರನ್ನು ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗುತ್ತದೆ.

Read More

ಬೆಂಗಳೂರು:- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ‌ ವಿಶ್ವಾವಿಡಿ ಎಂದು ಮಂಡ್ಯ ಜನಗಳಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ ಇನ್ನು ಈಗಾಗಲೇ ನನ್ನ ಮೇಲೆ ಮಂಡ್ಯ ಜನರು ವಿಶ್ವಾಸ ಇಟ್ಟಿದ್ದೀರಾ. ಯಾವ ರಾಜಕೀಯ ನಾಯಕರು ಮಂಡ್ಯ ಜಿಲ್ಲೆಯಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ. ಹಲವು ಜಿಲ್ಲೆಗಳಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಸಾಕಷ್ಟು ಕಡೆ ನಾನು‌ ಹೋಗಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ. https://ainlivenews.com/leopard-sighting-in-residential-area-tension-for-people-tension/ ಜೆಡಿಎಸ್ ಈಗ ಮುಗಿದೇ ಹೋಯ್ತು ಎಂದು ಕೆಲವರು ಹೇಳುತ್ತಾರೆ. ನಮ್ಮ ಕಾರ್ಯಕರ್ತರು ನಮಗೆ ಯಾರು ಅನ್ಯಾಯ ಮಾಡಿಲ್ಲ. ಎಲ್ಲರಿಗೂ ನಮ್ಮ ಪಕ್ಷದ ಪರ ಒಲವು‌ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ 4 ಕ್ಷೇತ್ರಗಳನ್ನಾದರೂ ಗೆಲ್ಲುತ್ತಿದ್ದೋ. ನಮ್ಮ ಸ್ವಯಂ ಕೃತ ಅಪಾರಾಧಗಳಿಂದ ಸೋತಿದ್ದೇವೆ. ನನ್ನ ಕನಕಪುರ ಸ್ನೇಹಿತ ನನಗೆ ಅಮೃತ ಹಾಕಿದ್ದೇನೆ ಎಂದು ಹೇಳಿದ್ದಾರೆ. ಅದ್ಯಾವ ಅಮೃತ ಹಾಕಿದ್ದಾನೋ ಗೊತ್ತಿಲ್ಲ. ಇಂದು ಮಂಡ್ಯಗೆ ಬಂದು ಏನ್​…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ ಮಂದಿಗೆ ಚಿರತೆ ಕಾಟದಿಂದ ಕೊನೆ ಕಾಣೋ ಲಕ್ಷಣವೇ ಇಲ್ಲ ಅನ್ನಿಸುತ್ತಿದೆ. ಒಂದಿಲ್ಲೊಂದು ಕಡೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿದೆ. ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಲೆಪರ್ಡ್ ಟಾಸ್ಕ್ ಶುರುವಾಗಿದೆ. ಅಷ್ಟಕ್ಕೂ ಯಾವ ಭಾಗದಲ್ಲಿ ಲೆಪರ್ಡ್ ಕಾಟ ಶುರು ಆಯ್ತು ಅಂತೀರಾ ನೋಡಿ. https://ainlivenews.com/good-news-for-motorists-no-increase-in-highway-toll-rates/ ಹೋದ್ಯ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅಂದಂಗ್ ಆಯ್ತು ಆನೇಕಲ್ ಜನರ ಕತೆ. ಹೌದು ಸದ್ಯ ಚಿರತೆ ಕಾಟ ಮುಗಿಯಿತು ಅಂದು ಕೊಳ್ಳುವಷ್ಟರಲ್ಲಿ ಮತ್ತೆ ಚಿರತೆಯ ಚಿಂತೆ ಜನರನ್ನ ಕಾಡ ತೊಡಗಿದೆ. ಆನೇಕಲ್- ಚಂದಾಪುರ ಮುಖರಸ್ತೆಯಲ್ಲಿನ ಎಸ್ಆರ್ ಆರ್ ಲೇಔಟ್ ನಲ್ಲಿ ಕಳೆದ ರಾತ್ರಿ ಚಿರತೆ ಚಿರತೆ ಕಾಣಿಸಿಕೊಂಡಿದೆ. ಲೇಔಟ್ನ ನಿವಾಸಿಗಳಾದ ಪಾಂಡುರಂಗ ಹಾಗೂ ಅವರ ಮಗ ಶಮಂತ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಚಿರತೆ ರಸ್ತೆ ದಾಟಿ ಹೋಗುತ್ತಿರುವುದನ್ನ ಕಂಡಿದ್ದಾರೆ. ಕೂಡಲೇ ಲೇಔಟ್ನ ಸೆಕ್ಯೂರಿಟಿ ಹಾಗೂ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಚಿರತೆ…

Read More

ಬೆಂಗಳೂರು:- ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೆದ್ದಾರಿ ಟೋಲ್ ದರ ಸಧ್ಯಕ್ಕೆ ಏರಿಕೆ ಇಲ್ಲ ಎನ್ನಲಾಗಿದೆ. ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಏಪ್ರಿಲ್ 1 ರಿಂದ ಏರಿಕೆ ಆಗಬೇಕಿದ್ದ ಟೋಲ್ ದರ ಮುಂದಿನ 2 ತಿಂಗಳ ಕಾಲ ತಾತ್ಕಾಲಿಕ ಮುಂದೂಡಿಕೆ ಆಗಿದೆ. https://ainlivenews.com/star-batsman-babar-azam-to-replace-shah-afridi-as-captain/ ಟೋಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಸಂಬಂಧ ಕಳೆದ ವಾರವಷ್ಟೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೇಳಿತ್ತು. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ರಸ್ತೆ ಸಾರಿಗೆ ಸಚಿವಾಲಯವು 2 ತಿಂಗಳ ಕಾಲ ಟೋಲ್ ದರ ಏರಿಕೆಗೆ ತಡೆ ನೀಡುವ ಸಂಬಂಧ ಏಕಾಏಕಿ ನಿರ್ಧಾರ ಕೈಗೊಳ್ಳುವಂತಿಲ್ಲ. ಹೀಗಾಗಿ, ಚುನಾವಣ ಆಯೋಗದ ಅನುಮತಿ ಕೇಳಲಾಗಿತ್ತು. ಆಯೋಗ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಈ ಕುರಿತಾಗಿ ಆದೇಶ ಹೊರಡಿಸಿರುವ ರಸ್ತೆ ಸಾರಿಗೆ ಸಚಿವಾಲಯ, ಟೋಲ್ ದರ ಏರಿಕೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ

Read More

ಮೈಸೂರು: ಬಿಜೆಪಿ (BJP) ಅಭ್ಯರ್ಥಿಯಾಗಿ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯದುವೀರ್‌ ಒಡೆಯರ್‌ (Yaduveer Wadiyar ) ಒಟ್ಟು 4.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಯದುವೀರ್‌ ಅವರು ಒಟ್ಟು 4,99,59,303 ರೂ.ಮೌಲ್ಯದ ಚರಾಸ್ತಿಯನ್ನು ಮಾತ್ರ ಹೊಂದಿದ್ದು ಯಾವುದೇ ಸ್ತಿರಾಸ್ತಿಯನ್ನು ಹೊಂದಿಲ್ಲ.ಪತ್ನಿ ತ್ರಿಶಿಕಾ ಹೆಸರಿನಲ್ಲಿ 1,04,25,000 ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ. ತ್ರಿಷಿಕಾ ಅವರು ಯಾವುದೇ ಸ್ತಿರಾಸ್ತಿಯನ್ನು ಹೊಂದಿಲ್ಲ. https://ainlivenews.com/big-update-for-credit-card-holders-change-in-rule-from-april-1/ ಯದುವೀರ್‌ 1 ಲಕ್ಷ ರೂ. ನಗದು ಹೊಂದಿದ್ದರೆ ಪತ್ನಿ ಬಳಿ 75 ಸಾವಿರ ರೂ. ನಗದು ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 1.36 ಕೋಟಿ ರೂ. ಮೌಲ್ಯದ ಬಾಂಡ್ ಮತ್ತು ಶೇರ್‌ ಯದುವೀರ್ ಹೊಂದಿದ್ದಾರೆ. ಯಾವುದೇ ಕೃಷಿ ಭೂಮಿ, ಯಾವ ವಾಣಿಜ್ಯ ಕಟ್ಟಡ ಹೊಂದಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ. ತನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ಯದುವೀರ್‌ ಉಲ್ಲೇಖಿಸಿದ್ದಾರೆ.

Read More

ಬಳ್ಳಾರಿ: ಕೆಂಪೇಗೌಡ ಸಿನಿಮಾದ ಆರುಮುಗ ಡೈಲಾಗ್ ರೀತಿ ಸಚಿವ ಬಿ. ನಾಗೇಂದ್ರ ಅವರು ಮಾಜಿ ಸಚಿವ ಶ್ರೀರಾಮುಲುಗೆ ಸಾವಾಲ್ ಹಾಕಿದ್ದಾರೆ. ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ನಾಗೇಂದ್ರ ಮಾತನಾಡಿ, ಈ ಮೋಕಾ ನಂದು. ತಾಕತ್ ಇದ್ರೆ ಬಂದ್ ಲೀಡ್ ತಗೊಂಡ್ ತೋರ್ಸಿ ಎಂದು ರಾಮುಲುಗೆ ಬಹಿರಂಗ ಸಾವಲ್ ಹಾಕಿದ್ದಾರೆ.ಈ ಮೋಕ ನಂದು, ಈ ಮೋಕಾ ನಂದು ಎಂದು ಎದೆ ತಟ್ಟಿ ಹೇಳಿದ ಸಚಿವ ಬಿ.ನಾಗೇಂದ್ರ, ನಾವು ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಐದು ಜನ ಪಂಚ ಪಾಂಡವರಂತೆ ಗೆದ್ದಿದ್ದೇವೆ. ಈ ಬಾರಿ ನಮ್ಮ ಪಾಂಡವರ ಪರವಾಗಿ ಅರ್ಜುನನ್ನ (ತುಕಾರಾಂ) ಕಣಕ್ಕಿಳಿಸಿದ್ದೇವೆ. ಬಿಜೆಪಿಯ ರಾಮುಲು ಅಂಡ್ ಟೀಂ ಕೌರವರು, ಕೌರವರಿಗೆ ಕೊನೆಗೆ ಸೋಲು ಗ್ಯಾರಂಟಿ. ಈ ಮೋಕದಿಂದ ಒಂದೇ ಒಂದು ಮತ ಜಾಸ್ತಿ ಅವರಿಗೆ ಬೀಳಲ್ಲ.ಈ ಮೋಕ ನಂದು, ಈ ಮೋಕಾ ನಂದು ಎಂದು  ಸಚಿವ ಬಿ.ನಾಗೇಂದ್ರ ಶೆಡ್ಡು ಹೊಡೆದಿದ್ದಾರೆ‌. ಪ್ರತೀ ಬಾರಿ ನಾನೇ ಸಿಎಂ ಆಗ್ತಿನಿ. ಉಪ…

Read More

ವರುಣಾ (ಚಾಮರಾಜನಗರ) ಏ 1: ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ ಬಿಜೆಪಿಯ ಸುಳ್ಳುಗಳನ್ನು ಸೋಲಿಸಿ. ಮೈಸೂರು-ಚಾಮರಾಜನಗರ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾನು ಇನ್ನಷ್ಟು ಗಟ್ಟಿಯಾಗಿ ನನ್ನ ಶಕ್ತಿ ಹೆಚ್ಚುತ್ತದೆ. ಇದಕ್ಕೆ ನೀವು ಮುಂದಾಗಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ‌ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ ಎಂದರು. ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರಾ? ದೇಶದ ಜನರಿಗಾಗಿ ಏನೂ ಕಾರ್ಯಕ್ರಮ ರೂಪಿಸದೆ ಕೇವಲ ಅಚ್ಛೆ ದಿನ್ ಆಯೆಗಾ ಎಂದು ಡೈಲಾಗ್ ಹೊಡೆದರೆ ಸಾಕಾ? ಡೈಲಾಗ್ ನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ…

Read More

ಬೆಂಗಳೂರು: ಸ್ಯಾಂಡಲ್​ವುಡ್ ಲೀಡರ್, ದೊಡ್ಮನೆಯ ಹಿರಿಯ ಕುಡಿ ಡಾ.ಶಿವರಾಜ್​​ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ. https://ainlivenews.com/complaint-against-shivraj-kr-pete-of-comedy-kiladi-fame/ ಇತ್ತೀಚಿಗೆ ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ಪತ್ನಿ ಗೀತಾ ಶಿವರಾಜ್​ಕುಮಾರ್​ ಪರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗುತ್ತಿದ್ದರು ಶಿವಣ್ಣ. ನಿರಂತರ ಓಡಾಟದ ಹಿನ್ನೆಲೆ ಜನರಲ್ ಚೆಕಪ್​ಗೆಂದು ವೈಟ್​ಫೀಲ್ಡ್​​ನ ಖಾಸಗಿ ಆಸ್ಪತ್ರೆಗೆ ತೆರಳಿ ಮತ್ತೆ ನಾಗವಾರದ ಶ್ರೀಮುತ್ತು ನಿವಾಸಕ್ಕೆ ತೆರಳಿದ್ದಾರೆ ಅನ್ನೋದು ಆಪ್ತರ ಮಾತು. ಆದ್ರೆ ಅಧಿಕೃತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶಿವಣ್ಣನ ಕೈ ಬೆರಳೊಂದಕ್ಕೆ ಸಣ್ಣ ಶಸ್ತ್ರ ಚಿಕಿತ್ಸೆ ಆಗಿದೆ. ಹಲವು ದಿನಗಳಿಂದ ಬೆರಳೊಂದರಿಂದ ನೋವು ಅನುಭವಿಸುತ್ತಿದ್ದ ಶಿವಣ್ಣ, ಇಂದು ವೈದ್ಯರ ಸಲಹೆಯಂತೆ ವೈದೇಹಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ ತೀರಾ ಮೈನರ್ ಸರ್ಜರಿ ಆಗಿರೋದ್ರಿಂದ ಒಂದೇ ಗಂಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ, ಮನೆಗೆ ಕಳುಹಿಸಿಕೊಟ್ಟಿದ್ದಾರೆ. ನಿನ್ನೆವರೆಗೂ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದ ಶಿವಣ್ಣ, ಏಪ್ರಿಲ್ 6ರಿಂದ ಮತ್ತೆ ಭೈರತಿ ರಣಗಲ್ ಸೆಟ್​ಗೆ ಎಂಟ್ರಿ ಕೊಡಲಿದ್ದಾರೆ.

Read More

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚಿಕ್ಕೋಡಿ ಮತಕ್ಷೇತ್ರದಲ್ಲಿ ಪುತ್ರಿ ಪರ ಸಚಿವ ಸತೀಶ ಅಬ್ಬರದ ಪ್ರಚಾರ ನಡೆಸಿದ್ದಾರೆ.ಶಾಸಕ ಗಣೇಶ ಹುಕ್ಕೇರಿ, ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತಕ್ಷೇತ್ರದ ಎಕ್ಸಂಬಾ ಪಟ್ಟಣದ ಸಭಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಜರುಗಿತು.ಸಮಾವೇಶದಲ್ಲಿ ಸಚಿವ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಭಾಗಿಯಾಗಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಮಾವೇಶದ ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಚುನಾವಣೆ ಯಲ್ಲಿ ಯಾವುದೇ ಕಾಂಗ್ರೆಸ್ ಶಾಸಕರಿಂದ ಕೈ ಅಭ್ಯರ್ಥಿ ವಿರೋಧ ಇಲ್ಲಾ.ಅವರವರ ಕ್ಷೇತ್ರ ಅವರದ್ದೆ ಜವಾಬ್ದಾರಿ ಇರುತ್ತದೆ.ವಿರೋಧ ಪಕ್ಷದ ನಾಯಕರು ಆರೋಪ ಮಾಡ್ತಾರೆ ಅಷ್ಟೇ.‌ ನಮ್ಮ ಪಕ್ಷದ ಶಾಸಕರು ನಮ್ಮ ಪರವಾಗಿಯೆ ಕೆಲಸ ಮಾಡುತ್ತಾರೆ ಎಂದರು. ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿ ಟ್ರಂಪ್ ಕಾರ್ಡ್ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ ರಾಜು ಕಾಗೆ, https://ainlivenews.com/big-update-for-credit-card-holders-change-in-rule-from-april-1/ ಪ್ರಕಾಶ್ ಹುಕ್ಕೇರಿ…

Read More