Author: AIN Author

ಐಪಿಎಲ್ 2024 ರಲ್ಲಿ ಇಂದು ಆರ್‌ಸಿಬಿಯ ನಾಲ್ಕನೇ ಪಂದ್ಯ ನಡೆಯಲಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆಡಿರುವ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಲಕ್ನೋ ಎರಡು ಪಂದ್ಯದಿಂದ 2 ಅಂಕಗಳನ್ನು ಹೊಂದಿ ಆರನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇಳಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ. https://ainlivenews.com/minister-amit-shahs-entry-to-karunad-row-by-row-meeting-evening-road-show/ ಮಾರ್ಚ್ 22 ರಂದು ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್​ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ಬಳಿಕ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಓವರ್​ನಲ್ಲಿ ಗೆದ್ದು ಜಯದ ಖಾತೆ ತೆರೆದರೆ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಸೋತ ಎಲ್ಲ ಪಂದ್ಯಗಳಲ್ಲಿ ಆರ್​ಸಿಬಿ ಸೋಲಿಗೆ ಬೌಲರ್​ಗಳು ಮುಖ್ಯಕಾರಣರಾದರು. ಇಂದು ಉಭಯ ತಂಡಗಳಿಗೆ ಗೆಲುವು ಮುಖ್ಯವಾಗಿರುವ ಕಾರಣ ಬೆಂಗಳೂರಿನಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ. ಸಿಎಸ್​ಕೆ, ಪಂಜಾಬ್ ಮತ್ತು ಕೆಕೆಆರ್ ವಿರುದ್ಧ ಆರ್​ಸಿಬಿ ನೀಡಿದ ಪ್ರದರ್ಶನ…

Read More

ಬೆಂಗಳೂರು:- ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರ ಶುರುವಾಗುವುದಕ್ಕೂ ಮುನ್ನವೇ ಬಿಜೆಪಿಯ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್​ನ ಪ್ರಮುಖ ನಾಯಕರಾದ ಡಿಕೆ ಸಹೋದರರ ಕೋಟೆಯಿಂದಲೇ ರಣಕಹಳೆ ಮೊಳಗಿಸಲಿದ್ದಾರೆ. ಹಳೆ ಮೈಸೂರು ಭಾಗವನ್ನೇ ಅಮಿತ್ ಶಾ ಗುರಿಯಾಗಿಸಿಕೊಂಡಿದ್ದಾರೆ. ಇಂದು ಸಂಜೆ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ನ ಮಂಜುನಾಥ್ ಪರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚನ್ನಪಟ್ಟಣದಿಂದಲೇ ಬೃಹತ್ ರೋಡ್‌ ಶೋ ನಡೆಸಲಿದ್ದಾರೆ. https://ainlivenews.com/violation-of-code-of-conduct-fir-against-bjp-leader/ ದೆಹಲಿಯಿಂದ ಸೋಮವಾರ ರಾತ್ರಿ 11 ಗಂಟೆಗೆ ಅಮಿತ್ ಶಾ ಬೆಂಗಳೂರಿಗೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಬದಲಾದ ಸಮಯದಲ್ಲಿ ಮಧ್ಯರಾತ್ರಿ 2.30ಕ್ಕೆ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಬಂದಿಳಿದರು. ನಂತರ ನೇರವಾಗಿ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ಗೆ ತೆರಳಿ ವಾಸ್ತವ್ಯ ಹೂಡಿದರು. ಬೆಳಗ್ಗೆ 9.30ಕ್ಕೆ ತಾಜ್‌ವೆಸ್ಟ್ಎಂಡ್ ಹೋಟೆಲ್‌ನಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ಗೆಲುವಿನ ಸೂತ್ರ ಮುಂದಿಡಲಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಉಂಟಾಗಿರುವ ಬಿಜೆಪಿ ಟಿಕೆಟ್ ವಂಚಿತರ ಅಸಮಾಧಾನ ಶಮನ ಬಗ್ಗೆಯೂ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ.

Read More

ಬೆಂಗಳೂರು:  2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಹೊತ್ತಲ್ಲೇ ಬಿಪಿಎಲ್ ಕಾರ್ಡ್ ದಾರರಿಗೆ ಕೇಂದ್ರ ಗುಡ್ ನ್ಯೂಸ್ ನೀಡಿದೆ. https://ainlivenews.com/good-news-for-gas-users/ ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿತು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ ಉಚಿತವಾಗಿ ಸಿಗುತ್ತದೆ. www.pmuy.gov.in ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ಬಿಪಿಎಲ್‌ ಪಡಿತರ ಚೀಟಿ ಹೊಂದುವುದು ಕಡ್ಡಾಯವಾಗಿದೆ. ಇದರೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು. ಹೀಗಾಗಿದ್ದರೆ ನೀವು ಉಚಿತ ಸಿಲಿಂಡರ್ ಪಡೆಯಬಹುದಾಗಿದೆ.

Read More

ಬೆಂಗಳೂರು:- ನಗರದ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. https://ainlivenews.com/mumbais-defeat-at-home-hattrick-defeat-for-pandyas-team/ ಅನುಮತಿ ಇಲ್ಲದೆ ಬಿಜೆಪಿ ಚಿಹ್ನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಅಂಟಿಸಲಾಗಿತ್ತು. ಈ ಬಗ್ಗೆ ಸ್ಥಳೀಯರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರ ಅನ್ವಯ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, FIR ದಾಖಲಾಗಿದೆ.

Read More

ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. https://ainlivenews.com/rcb-lucknow-fight-today-what-time-does-the-match-start/ ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಇದು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬಯಿ ಇಂಡಿಯನ್ಸ್ ಬಳಗಕ್ಕೆ ಹಾಲಿ ಆವೃತ್ತಿಯಲ್ಲಿ ಸತತ ಮೂರನೇ ಸೋಲಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127…

Read More

ಬೆಂಗಳೂರು: ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಹಾಗಾಗಿ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಎರಡೂ ದಿನವೂ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ಹಾಗೂ 2ನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಈ ದಿನಗಳಂದು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://ainlivenews.com/union-minister-amit-shah-will-visit-the-state-on-april-2/ ಪ್ರ ತಿಯೊಬ್ಬರು ಮತದಾನ ಮಾಡಲಿ ಎಂಬ ಉದ್ದೇಶದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ 1ನೇ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ? ಉಡುಪಿ, ಚಿಕ್ಕಮಗಳೂರು,…

Read More

ಬೇಸಿಗೆಯಲ್ಲಿ ಹೆಚ್ಚಿನವರು ಐಸ್‌ಕ್ರೀಮ್‌ ತಿನ್ನಲು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಪ್ರತಿಯೊಬ್ಬರೂ ಐಸ್‌ಕ್ರೀಮ್‌ನ್ನು ಇಷ್ಟಪಡುತ್ತಾರೆ. ಐಸ್‌ಕ್ರೀಮ್‌ ತಿನ್ನುವುದರಿಂದ ದೇಹವು ತಂಪಾಗಿರುತ್ತದೆ ಮತ್ತು ಶಾಖದಿಂದ ಪರಿಹಾರವನ್ನು ನೀಡುತ್ತದೆ ಎಂದು ಅವರು ನಂಬುತ್ತಾರೆ. ಆದರೆ ನೀವು ಗಮನಿಸಿದ್ದೀರಾ? ಐಸ್ ಕ್ರೀಂ ತಿಂದಾಗಲೆಲ್ಲ ನಮಗೇಕೆ ಬಾಯಾರಿಕೆಯಾಗುತ್ತದೆ ಯಾಕೆ ಎಂದು ಯೋಚಿಸಿದ್ದೀರಾ. ಐಸ್ ಕ್ರೀಂ ತಿಂದ ನಂತರ ಎಷ್ಟೇ ಬಾಯಾರಿಕೆಯಾದರೂ ನೀರು ಕುಡಿಯಬಾರದು ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ ಟೀ ಇತ್ಯಾದಿ.. ಅಷ್ಟೇ ಅಲ್ಲ, ಐಸ್ ಕ್ರೀಂ ತಿಂದ ನಂತರ ಕಿತ್ತಳೆ, ನಿಂಬೆ ಪಾನಕ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಅಪಾಯ. https://ainlivenews.com/pomegranate-fruit-has-the-power-to-cure-deadly-diseases/ ಐಸ್ ಕ್ರೀಂ ತಿಂದ ನಂತರ ಮದ್ಯಪಾನ ಮಾಡಬಾರದು. ಒಂದು ವೇಳೆ ಸೇವಿಸಿದರೆ ವಾಂತಿ, ಭೇದಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಶುರುವಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಮಟನ್, ಬೆಣ್ಣೆ, ತುಪ್ಪ ಆಧಾರಿತ ಖಾದ್ಯಗಳು, ಬಿರಿಯಾನಿ, ಚೈನೀಸ್ ಫುಡ್, ಜಂಕ್…

Read More

ಇಂದು iPL ಸೀಸನ್ 17 ರ ತನ್ನ ನಾಲ್ಕನೇ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ವಿರುದ್ಧ ಸೆಣಸಾಡಲಿದೆ. https://ainlivenews.com/a-lover-who-stabbed-his-lover-who-did-not-listen-to-him/ ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಆರು ಮತ್ತು ಒಂಬತ್ತನೇ ಸ್ಥಾನದಲ್ಲಿವೆ. ಹೀಗಾಗಿ ಎರಡೂ ತಂಡಗಳು ಈ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿವೆ ಆರ್​ಸಿಬಿ vs ಲಕ್ನೋ ನಡುವಿನ ಐಪಿಎಲ್​ 15ನೇ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ. ಆರ್​ಸಿಬಿ vs ಲಕ್ನೋ ನಡುವಿನ ಐಪಿಎಲ್​ 15ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್​ಸಿಬಿ vs ಲಕ್ನೋ ನಡುವಿನ ಐಪಿಎಲ್​ 15ನೇ ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ.

Read More

ತಮ್ಮ 42ನೇ ವಯಸ್ಸಿನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಮಾಜಿ ನಾಯಕ ಎಂಎಸ್‌ ಧೋನಿಯನ್ನು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್‌ ಶ್ಲಾಘಿಸಿದ್ದಾರೆ ಹಾಗೂ ಇನ್ನೂ ಎರಡು ವರ್ಷಗಳ ಕಾಲ ಎಂಎಸ್‌ ಧೋನಿ ಐಪಿಎಲ್‌ ಟೂರ್ನಿಯಲ್ಲಿ ಆಡಬೇಕೆಂದು ಆಗ್ರಹಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಭಾನುವಾರ ನಡೆದಿದ್ದ 2024ರ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ನೀಡಿದ್ದ 192 ರನ್‌ಗಳನ್ನು ಗುರಿ ಹಿಂಬಾಲಿಸಿದ್ದ ಸಿಎಸ್‌ಕೆ ಪರ ಎಂಎಸ್‌ ಧೋನಿ ಕೊನೆಯಲ್ಲಿ ಕೇವಲ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 37 ರನ್‌ಗಳನ್ನು ಸಿಡಿಸಿದ್ದರು. ಇದರ ಹೊರತಾಗಿಯೂ ಸಿಎಸ್‌ಕೆ 20 ರನ್‌ಗಳಿಂದ ಡೆಲ್ಲಿ ವಿರುದ್ದ ಸೋಲು ಅನುಭವಿಸಿತ್ತು. ಮ್ಮ ಅಧಿಕೃತ ಯಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಕೃಷ್ಣಮಾಚಾರಿ, “ಎಂಎಸ್‌ ಧೋನಿಯ ಆಟವನ್ನು ಹೇಗೆ ಅಭಿವ್ಯಕ್ತಗೊಳಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಎಂಎಸ್‌…

Read More

ಕಾರವಾರ:- ಕಾರವಾರದ ಕಾಜುಭಾಗಲ್ಲಿ ತನ್ನ ಇಚ್ಛೆಯಂತೆ ನಡೆಯದ ಪ್ರೇಯಸಿಗೆ ಚಾಕುವಿನಿಂದ ಪ್ರಿಯಕರ ಇರಿದಿರುವ ಘಟನೆ ಜರುಗಿದೆ. ಪ್ರಕರಣ ಸಂಬಂಧ ಕಾರವಾರ ನಗರ ಠಾಣೆ ಪೊಲೀಸರು ಆರೋಪಿ ರವಿಶಂಕರ್ ಎಂಬಾತನನ್ನು ಬಂಧಿಸಿದ್ದಾರೆ. ರವಿಶಂಕರ್ (42) ಮತ್ತು ಕಾಜುಭಾಗ್ ನಿವಾಸಿ ಅಂದಾಜು 26-29 ವರ್ಷ ವಯಸ್ಸಿನ ಮಹಿಳೆಯ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ತಿಂಗಳಿನಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಾ, ಗುಪ್ತವಾಗಿ ಭೇಟಿಯಾಗುತ್ತಿದ್ದರು. ಆದರೆ, ಮಾರ್ಚ್ 31 ರಂದು ರಾತ್ರಿ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಇದೇ ವೇಳೆ ತನ್ನ ಮಾತಿಗೆ ಸಹಮತಿ ಸೂಚಿಸದ ಹಿನ್ನೆಲೆ ಕ್ರೋಧಗೊಂಡ ರವಿಶಂಕರ್, ಚಾಕು ತೆಗೆದು ಪ್ರೇಯಸಿಯ ಎದೆಗೆ ಇರಿದಿದ್ದನು. ಸದ್ಯ, ಆರೋಪಿ ರವಿಶಂಕರ್​ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತ, ಚಾಕು ಇರಿತಕ್ಕೊಳಗಾದ ಮಹಿಳೆಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ

Read More